Education learn all
Education of all subject in Kannada language
ಸೋಮವಾರ, ನವೆಂಬರ್ 24, 2025
ಚ್ಚಿನವರು ಹೂಡಿಕೆ (Investment) ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ಕೆಲವರು ಮಾಹಿತಿಯ ಸಮಸ್ಯೆಯಿಂದಲೋ, ಅವಸರದಿಂದಲೋ ಸಿಕ್ಕ ಸಿಕ್ಕ ಯೋಜನೆಗಳಲ್ಲೆಲ್ಲಾ ಹೂಡಿಕೆ ಮಾಡುತ್ತಾರೆ. ಆದರೆ ಸರ್ಕಾರಿ ಸ್ವಾಮ್ಯದ ಹಲವಾರು ಹೂಡಿಕೆ ಯೋಜನೆಗಳಿವೆ. ಭಾರತದಲ್ಲಿ (India) ದೀರ್ಘಾವಧಿಯ ಹೂಡಿಕೆಗಳಿಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಒಂದು ವಿಶ್ವಾಸಾರ್ಹ ಆಯ್ಕೆಯಾಗಿ ಗುರುತಿಸಿಕೊಂಡಿದೆ.
ಹೂಡಿಕೆ (Investment) ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ಕೆಲವರು ಮಾಹಿತಿಯ ಸಮಸ್ಯೆಯಿಂದಲೋ, ಅವಸರದಿಂದಲೋ ಸಿಕ್ಕ ಸಿಕ್ಕ ಯೋಜನೆಗಳಲ್ಲೆಲ್ಲಾ ಹೂಡಿಕೆ ಮಾಡುತ್ತಾರೆ. ಆದರೆ ಸರ್ಕಾರಿ ಸ್ವಾಮ್ಯದ ಹಲವಾರು ಹೂಡಿಕೆ ಯೋಜನೆಗಳಿವೆ. ಭಾರತದಲ್ಲಿ (India) ದೀರ್ಘಾವಧಿಯ ಹೂಡಿಕೆಗಳಿಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಒಂದು ವಿಶ್ವಾಸಾರ್ಹ ಆಯ್ಕೆಯಾಗಿ ಗುರುತಿಸಿಕೊಂಡಿದೆ.
ವಿಶೇಷವಾಗಿ ತಮ್ಮ ಭವಿಷ್ಯ ಮತ್ತು ನಿವೃತ್ತಿಗಾಗಿ ಹಣಕಾಸಿನ ಭದ್ರತೆ ಬಯಸುವ ವೇತನದಾರರಿಗೆ ಇದು ಬೆಸ್ಟ್ ಎಂದು ಗುರುತಿಸಿಕೊಂಡಿದೆ. ಹಲವು ವರ್ಷಗಳಿಂದ ಬಡ್ಡಿ ದರಗಳು ಸ್ಥಿರವಾಗಿದ್ದರೂ, PPF ಸಂಪೂರ್ಣ ಸುರಕ್ಷಿತ ಮತ್ತು ಗ್ಯಾರಂಟಿ ಆದಾಯವನ್ನು ನೀಡುತ್ತದೆ. ತೆರಿಗೆ ವಿನಾಯಿತಿ ಮತ್ತು ಸಂಯೋಜಿತ ಬಡ್ಡಿಯ ಲಾಭದಿಂದಾಗಿ ಇದು ಭಾರೀ ಬೇಡಿಕೆಯನ್ನು ಹೊಂದಿದೆ.
ಪ್ರಸ್ತುತ 7.1% ಬಡ್ಡಿ ದರದಲ್ಲಿ, ವಾರ್ಷಿಕವಾಗಿ ₹1.5 ಲಕ್ಷ ಗರಿಷ್ಠ ಮೊತ್ತವನ್ನು ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ನಿಮ್ಮ PPF ಖಾತೆಯ ಮೌಲ್ಯ ₹40.68 ಲಕ್ಷಕ್ಕೆ ಏರಿಕೆಯಾಗುತ್ತದೆ.. ಇದರಲ್ಲಿ ₹18 ಲಕ್ಷಕ್ಕೂ ಹೆಚ್ಚು ಮೊತ್ತವು ಸಂಪೂರ್ಣ ತೆರಿಗೆ-ಮುಕ್ತ ಬಡ್ಡಿಯಿಂದ ಬರಲಿದೆ ಎಂಬುದು ವಿಶೇಷ.
PPF ಯೋಜನೆಯು ಭಾರತ ಸರ್ಕಾರ ಅಡಿಯಲ್ಲಿ ಬರುತ್ತದೆ. ಇದು ದೀರ್ಘಾವಧಿ ಉಳಿತಾಯ ಮಾಡುವವರಿಗೆ ತುಂಬಾ ಉತ್ತಮ ಯೋಜನೆಯಾಗಿದೆ. ಸಂಯೋಜಿತ ಬಡ್ಡಿಯಿಂದಾಗಿ ಇದು ಗ್ಯಾರಂಟಿ ಆದಾಯವನ್ನು ನೀಡುತ್ತದೆ. ಏಪ್ರಿಲ್ 2020 ರಿಂದ ಇದರ ಬಡ್ಡಿ ದರ 7.1% ಆಗಿದ್ದು, ಇನ್ನೂ ಯಾವುದೇ ಬದಲಾವಣೆಗಳಾಗಿಲ್ಲ.
PPF ನ ಬಡ್ಡಿದರ, ಸುರಕ್ಷತೆ ಮತ್ತು EEE (Exempt-Exempt-Exempt) ತೆರಿಗೆ ಸ್ಥಿತಿ, ಇದನ್ನು ಸುರಕ್ಷಿತ ಮತ್ತು ತೆರಿಗೆ ಉಳಿತಾಯಕ್ಕಾಗಿ ಬಯಸುವ ಹೂಡಿಕೆದಾರರು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ.
PPF ಖಾತೆ ತೆರೆಯುವುದು ಹೇಗೆ?
PPF ಖಾತೆ ತೆರೆಯುವುದು ತುಂಬಾ ಸುಲಭ. ಇದನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ತೆರೆಯಬಹುದು. ಯಾವುದೇ ಭಾರತೀಯ ನಾಗರಿಕರು ತಮ್ಮ ಹೆಸರಿನಲ್ಲಿ ಅಥವಾ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಪಿಪಿಎಂ ಅಕೌಂಟ್ ಓಪನ್ ಮಾಡಬಹುದು. ಇದಕ್ಕೆ ಆಧಾರ್, ಪ್ಯಾನ್, ಅಡ್ರೆಸ್ ಪ್ರೂಫ್ ಮತ್ತು ನಾಮಿನಿ ಫಾರ್ಮ್‌ನಂತಹ ಅಗತ್ಯ ಕೆವೈಸಿ ದಾಖಲೆಗಳು ಇದ್ದರೆ ಸಾಕು.
PPF ನಿಯಮಗಳ ಪ್ರಕಾರ, ಹೂಡಿಕೆದಾರರು ವರ್ಷಕ್ಕೆ ಕನಿಷ್ಠ ₹500 ಮತ್ತು ಗರಿಷ್ಠ ₹1.5 ಲಕ್ಷ ಹಣವನ್ನು ಒಂದು ಕಂತಿನಲ್ಲಿ ಅಥವಾ ಹಲವು ಕಂತುಗಳಲ್ಲಿ ಹೂಡಿಕೆ ಮಾಡಬಹುದು.
ಪ್ರಸ್ತುತ ಬಡ್ಡಿ ದರದ ಪ್ರಕಾರ, ಗರಿಷ್ಠ ಮಿತಿಯನ್ನು ಹೂಡಿಕೆ ಮಾಡುವ ಮೂಲಕ PPF ಖಾತೆ ಪಕ್ವವಾದಾಗ ₹18 ಲಕ್ಷಕ್ಕಿಂತ ಹೆಚ್ಚು ಬಡ್ಡಿಯಲ್ಲೇ ಆದಾಯ ಗಳಿಸಬಹುದು. ಅಂದರೆ ಒಂದು ಆರ್ಥಿಕ ವರ್ಷದಲ್ಲಿ ₹1.5 ಲಕ್ಷದವರೆಗೆ ಠೇವಣಿ ಮಾಡಬಹುದು.
PPF ಹೂಡಿಕೆಯ ಲೆಕ್ಕಾಚಾರ ಹೇಗೆ?
ಪ್ರತಿ ಆರ್ಥಿಕ ವರ್ಷಕ್ಕೆ ₹1.5 ಲಕ್ಷ ರೂ. ಠೇವಣಿ ಜೊತೆಗೆ ವಾರ್ಷಿಕ 7.1% ಬಡ್ಡಿ ದರ. ಅಂದರೆ 15 ವರ್ಷಗಳಲ್ಲಿ ಒಟ್ಟು ಹೂಡಿಕೆ ₹22.50 ಲಕ್ಷ ಆಗುತ್ತದೆ. 15 ವರ್ಷಗಳ ನಂತರ ಪಕ್ವತೆಯ ಮೊತ್ತ ₹40,68,209 ರೂ. ಆಗಲಿದ್ದು, ಗಳಿಸಿದ ಬಡ್ಡಿಹಣ ₹18,18,209 ರೂ ಆಗಿರುತ್ತದೆ.
PPF, "EEE" (Exempt-Exempt-Exempt) ತೆರಿಗೆ ವಿಭಾಗದ ಅಡಿಯಲ್ಲಿ ಬರುವುದರಿಂದ ಇದು ದೊಡ್ಡ ತೆರಿಗೆ ಪ್ರಯೋಜನಗಳನ್ನು ನೀಡಲಿದೆ. ಆರ್ಥಿಕ ವರ್ಷದಲ್ಲಿ ₹1.5 ಲಕ್ಷದವರೆಗಿನ ಠೇವಣಿ ಹಣದ ಮೇಲೆ ತೆರಿಗೆ ಕಡಿತವನ್ನು ಪಡೆಯಬಹುದು. ಗಳಿಸಿದ ಬಡ್ಡಿ ಮತ್ತು ಅವಧಿಯ ಕೊನೆಯಲ್ಲಿ ಸ್ವೀಕರಿಸುವ ಒಟ್ಟು ಮೊತ್ತಕ್ಕೂ ತೆರಿಗೆ ಅನ್ವಯವಾಗುವುದಿಲ್ಲ. ಈ ಮೂಲಕ ಪಿಪಿಎಫ್ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.
Term Insurance: GST 2.0 2025 ರಿಂದ ಟರ್ಮ್ ಇನ್ಶುರೆನ್ಸ್ ಪ್ರೀಮಿಯಂಗಳ ಮೇಲೆ 0% ತೆರಿಗೆ
Term Insurance: GST 2.0 2025 ರಿಂದ ಟರ್ಮ್ ಇನ್ಶುರೆನ್ಸ್ ಪ್ರೀಮಿಯಂಗಳ ಮೇಲೆ 0% ತೆರಿಗೆ
GST 2.0 ಆಡಳಿತದ ಅಡಿಯಲ್ಲಿ, ಸರ್ಕಾರವು ಟರ್ಮ್ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (GST) 18% ರಿಂದ 0% ಗೆ ಇಳಿಸಿದೆ. ಈ ಬದಲಾವಣೆಯು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬಂದಿದೆ. ಈ ಹಿಂದೆ, 18% ತೆರಿಗೆಯಿಂದಾಗಿ ಟರ್ಮ್ ಇನ್ಶೂರೆನ್ಸ್ ಪ್ರೀಮಿಯಂಗಳು ದುಬಾರಿಯಾಗಿದ್ದವು, ಇದು ಅನೇಕ ಭಾರತೀಯರಿಗೆ ಜೀವ ರಕ್ಷಣಾ ಯೋಜನೆಗಳನ್ನು ಖರೀದಿಸುವುದನ್ನು ನಿರುತ್ಸಾಹಗೊಳಿಸಿತ್ತು.
ಇತ್ತೀಚಿನ ಸುಧಾರಣೆಯು ಟರ್ಮ್ ಇನ್ಶೂರೆನ್ಸ್ ಅನ್ನು ಇನ್ನಷ್ಟು ಕೈಗೆಟುಕುವಂತೆ ಮಾಡಲಿದೆ.
ಟರ್ಮ್ ಇನ್ಶೂರೆನ್ಸ್ ಎಂದರೇನು? ಇದು ಜೀವ ವಿಮೆಯ ಸರಳ ಮತ್ತು ಅತ್ಯಂತ ಕೈಗೆಟುಕುವ ರೂಪವಾಗಿದೆ. ನೀವು ಆಯ್ದ ಅವಧಿಗೆ (ಪಾಲಿಸಿ ಅವಧಿ) ನಿಗದಿತ ಪ್ರೀಮಿಯಂ ಅನ್ನು ಪಾವತಿಸುತ್ತೀರಿ, ಮತ್ತು ಆ ಅವಧಿಯಲ್ಲಿ ದುರದೃಷ್ಟವಶಾತ್ ನಿಮ್ಮ ಮರಣ ಸಂಭವಿಸಿದರೆ, ನಿಮ್ಮ ಕುಟುಂಬವು ವಿಮಾ ಮೊತ್ತವನ್ನು (ಒಂದು ದೊಡ್ಡ ಮೊತ್ತದ ಪಾವತಿ) ಪಡೆಯುತ್ತದೆ. ನೀವು ಅವಧಿಯನ್ನು ಪೂರೈಸಿದರೆ, ಯಾವುದೇ ಪಾವತಿಯಿಲ್ಲದೆ ಪಾಲಿಸಿ ಕೊನೆಗೊಳ್ಳುತ್ತದೆ. ಇದು "ಶುದ್ಧ ರಕ್ಷಣೆ" ಯನ್ನು ಒದಗಿಸುವುದರಿಂದ ಮತ್ತು ಹೂಡಿಕೆಯ ಆದಾಯವನ್ನು ನೀಡದಿರುವುದರಿಂದ, ಇದರ ಪ್ರೀಮಿಯಂಗಳು ಸಾಮಾನ್ಯವಾಗಿ ಇತರ ಜೀವ ವಿಮಾ ಉತ್ಪನ್ನಗಳಿಗಿಂತ ಕಡಿಮೆ ಇರುತ್ತವೆ.
ಹಿಂದೆ, ನೀವು ಟರ್ಮ್ ಪ್ಲಾನ್ ಖರೀದಿಸಿದಾಗ, ಪ್ರೀಮಿಯಂ ಜೊತೆಗೆ 18% GST ಪಾವತಿಸಬೇಕಾಗಿತ್ತು. ಉದಾಹರಣೆಗೆ, ನಿಮ್ಮ ವಾರ್ಷಿಕ ಪ್ರೀಮಿಯಂ ₹10,000 ಆಗಿದ್ದರೆ, ತೆರಿಗೆಯ ನಂತರ ನೀವು ₹11,800 ಪಾವತಿಸುತ್ತಿದ್ದೀರಿ. ಈಗ, 0% GST ಯೊಂದಿಗೆ, ಅದೇ ಯೋಜನೆಗೆ ನಿಮಗೆ ಕೇವಲ ₹10,000 ವೆಚ್ಚವಾಗುತ್ತದೆ - ಇದು ವಾರ್ಷಿಕವಾಗಿ ₹1,800 ರ ನೇರ ಉಳಿತಾಯವನ್ನು ಸೂಚಿಸುತ್ತದೆ. ಇದು ಗಮನಾರ್ಹ ಬದಲಾವಣೆಯಾಗಿದೆ, ವಿಶೇಷವಾಗಿ ಮಧ್ಯಮ-ಆದಾಯದ ಕುಟುಂಬಗಳಿಗೆ, ಅವರು ದೀರ್ಘಾವಧಿಯ ಹಣಕಾಸು ಉತ್ಪನ್ನಗಳಿಗೆ ಬದ್ಧರಾಗುವ ಮೊದಲು ಪ್ರತಿ ರೂಪಾಯಿಯ ಬಗ್ಗೆಯೂ ಯೋಚಿಸುತ್ತಾರೆ.
ಟರ್ಮ್ ಇನ್ಶೂರೆನ್ಸ್‌ನಿಂದ GST ಯನ್ನು ತೆಗೆದುಹಾಕುವುದು ಕೇವಲ ತೆರಿಗೆ ಬದಲಾವಣೆಯಲ್ಲ, ಇದು ಭಾರತೀಯರು ಜೀವ ರಕ್ಷಣೆಯನ್ನು ನೋಡುವ ವಿಧಾನವನ್ನು ಮರುರೂಪಿಸಬಲ್ಲ ನಡವಳಿಕೆಯ ಪ್ರಚೋದನೆಯಾಗಿದೆ. ಇದರಿಂದಾಗಿ ಪ್ರೀಮಿಯಂ ವೆಚ್ಚ ಕಡಿಮೆಯಾಗುತ್ತದೆ, ಟರ್ಮ್ ಯೋಜನೆಗಳು ಈಗ ತಕ್ಷಣವೇ 18% ಅಗ್ಗವಾಗಿವೆ. ಸುಧಾರಿತ ಪ್ರವೇಶದೊಂದಿಗೆ, ಹೆಚ್ಚು ವ್ಯಕ್ತಿಗಳು ಮತ್ತು ಕುಟುಂಬಗಳು ಅಗತ್ಯವಿರುವ ಜೀವ ರಕ್ಷಣೆಯನ್ನು ಪಡೆಯಬಹುದು. ಇದರಿಂದ ಆರ್ಥಿಕ ಭದ್ರತೆ ಹೆಚ್ಚಾಗುತ್ತದೆ, ವಿಮಾ ವ್ಯಾಪ್ತಿ ಹೆಚ್ಚಾಗುವ ಸಾಧ್ಯತೆಯಿದೆ, ಇದು ಹೆಚ್ಚಿನ ಕುಟುಂಬಗಳನ್ನು ಆರ್ಥಿಕ ಆಘಾತಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ನೀವು ಎಷ್ಟು ಉಳಿಸಬಹುದು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ: ನಿಮ್ಮ ವಾರ್ಷಿಕ ಪ್ರೀಮಿಯಂ ₹15,000 ಆಗಿದ್ದರೆ, ನೀವು ಹಿಂದೆ ₹2,700 GST ಪಾವತಿಸುತ್ತಿದ್ದೀರಿ. ಈಗ, ತೆರಿಗೆ ರದ್ದಾದ ಕಾರಣ, ನೀವು ಪ್ರತಿ ವರ್ಷ ₹2,700 ಉಳಿಸುತ್ತೀರಿ - ಇದು 20 ವರ್ಷಗಳಲ್ಲಿ ₹54,000 ಉಳಿತಾಯಕ್ಕೆ ಕಾರಣವಾಗುತ್ತದೆ. ನಿಮ್ಮ ವಾರ್ಷಿಕ ಪ್ರೀಮಿಯಂ ₹30,000 ಆಗಿದ್ದರೆ, ನೀವು ಹಿಂದೆ ₹5,400 GST ಪಾವತಿಸುತ್ತಿದ್ದೀರಿ. ಹೊಸ ನಿಯಮದ ಅಡಿಯಲ್ಲಿ, ನೀವು ಪ್ರತಿ ವರ್ಷ ಈ ಸಂಪೂರ್ಣ ಮೊತ್ತವನ್ನು ಉಳಿಸುತ್ತೀರಿ - ಇದು 20 ವರ್ಷಗಳಲ್ಲಿ ₹1,08,000 ಒಟ್ಟು ಉಳಿತಾಯಕ್ಕೆ ಕಾರಣವಾಗುತ್ತದೆ.
ಈ ಉಳಿತಾಯಗಳು ಕೇವಲ ಅಂಕೆಗಳಲ್ಲ - ನಿವೃತ್ತಿ ನಿಧಿಯನ್ನು ನಿರ್ಮಿಸುವುದು, ಮಕ್ಕಳ ಶಿಕ್ಷಣದಲ್ಲಿ ಹೂಡಿಕೆ ಮಾಡುವುದು ಅಥವಾ ವೈದ್ಯಕೀಯ ಅಥವಾ ತುರ್ತು ಮೀಸಲು ರಚಿಸುವಂತಹ ಇತರ ಪ್ರಮುಖ ಹಣಕಾಸು ಗುರಿಗಳತ್ತ ನೀವು ಈಗ ಹಣವನ್ನು ಮರುನಿರ್ದೇಶಿಸಬಹುದು. 0% GST ಪ್ರಯೋಜನಕ್ಕೆ ಯಾರು ಅರ್ಹರು? GST ವಿನಾಯಿತಿಯು ವೈಯಕ್ತಿಕ ಟರ್ಮ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇದರರ್ಥ ನೀವು ಹೊಸ ಟರ್ಮ್ ಪ್ಲಾನ್ ಖರೀದಿಸಿದರೆ ಅಥವಾ ಸೆಪ್ಟೆಂಬರ್ 22, 2025 ರ ನಂತರ ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ನವೀಕರಿಸಿದರೆ, ನಿಮ್ಮ ಪ್ರೀಮಿಯಂಗಳು ಸಂಪೂರ್ಣವಾಗಿ GST-ಮುಕ್ತವಾಗಿರುತ್ತವೆ.
ಆದಾಗ್ಯೂ, ಗ್ರೂಪ್ ಇನ್ಶೂರೆನ್ಸ್ ಕವರ್‌ಗಳು, ಉದ್ಯೋಗದಾತ-ಪ್ರಾಯೋಜಿತ ಟರ್ಮ್ ಯೋಜನೆಗಳು ಮತ್ತು ಕಾರ್ಪೊರೇಟ್ ಜೀವ ವಿಮಾ ಪಾಲಿಸಿಗಳು ಈ ಪ್ರಯೋಜನಕ್ಕೆ ಅರ್ಹತೆ ಪಡೆಯುವುದಿಲ್ಲ. ಈ ಸುಧಾರಣೆಯು ವೈಯಕ್ತಿಕ ಆರ್ಥಿಕ ರಕ್ಷಣೆಯನ್ನು ಪ್ರೋತ್ಸಾಹಿಸಲು ಮತ್ತು ಚಿಲ್ಲರೆ ವಿಮಾ ಅಳವಡಿಕೆಯನ್ನು ಹೆಚ್ಚಿಸಲು ನಿರ್ದಿಷ್ಟವಾಗಿ ಗುರಿಯನ್ನು ಹೊಂದಿರುವುದರಿಂದ, ಇವು GST 2.0 ವಿನಾಯಿತಿಯ ವ್ಯಾಪ್ತಿಯ ಹೊರಗೆ ಉಳಿಯುತ್ತವೆ.
ನೀವು ಈಗ ಏನು ಮಾಡಬೇಕು? ಒಂದು ವೇಳೆ ನೀವು ಇನ್ನೂ ಟರ್ಮ್ ಪ್ಲಾನ್ ಹೊಂದಿಲ್ಲದಿದ್ದರೆ, ಈಗ ಒಂದನ್ನು ಖರೀದಿಸಲು ಇದು ಉತ್ತಮ ಸಮಯ. 0% GST ಯೊಂದಿಗೆ, ಪ್ರವೇಶ ವೆಚ್ಚ ಕಡಿಮೆಯಾಗಿದೆ, ಮತ್ತು ಕಿರಿಯ ವಯಸ್ಸಿನಲ್ಲಿ ಮೂಲ ಪ್ರೀಮಿಯಂಗಳು ಕಡಿಮೆಯಾಗಿರುತ್ತವೆ. ನೀವು ಈಗಾಗಲೇ ಯೋಜನೆಯನ್ನು ಹೊಂದಿದ್ದರೆ, ಕಡಿಮೆಯಾದ ನವೀಕರಣ ವೆಚ್ಚಗಳಿಂದ ನೀವು ಪ್ರಯೋಜನ ಪಡೆಯುತ್ತೀರಿ. ಹೊಸ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಕವರ್ ಅನ್ನು ಹೆಚ್ಚಿಸುವುದನ್ನು ಸಹ ಪರಿಗಣಿಸಬಹುದು.
Account check number
ಬ್ಯಾಂಕ್ ಗಳು ಹಾಗೂ ನಂಬರ್ ಗಳು
ಭಾರತೀಯ ಸ್ಟೇಟ್ ಬ್ಯಾಂಕ್ (SBI) +91 90226 90226
ಎಚ್ ಡಿ ಎಫ್ ಸಿ +91 70700 22222
ಐಸಿಐಸಿಐ +91 86400 86400
ಆಕ್ಸಿಸ್ +91 70361 65000
ಬ್ಯಾಂಕ್ ಆಫ್ ಬರೋಡಾ +91 84338 88777
ಪಂಜಾಬ್ ನ್ಯಾಷನಲ್ ಬ್ಯಾಂಕ್ +91 92640 92640
ಕೆನರಾ ಬ್ಯಾಂಕ್ +91 90760 30001
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ +91 96666 06060
ಬ್ಯಾಂಕ್ ಆಫ್ ಇಂಡಿಯಾ +91 83760 06006
ಇಂಡಿಯನ್ ಬ್ಯಾಂಕ್ +91 87544 24242
ಕೋಟಕ್ ಮಹೀಂದ್ರಾ ಬ್ಯಾಂಕ್ +91 22 6600 6022
ಯೆಸ್ ಬ್ಯಾಂಕ್ +91 82912 01200
ಐಡಿಎಫ್ ಸಿ ಫಸ್ಟ್ ಬ್ಯಾಂಕ್ +91 95555 55555
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ +91 99809 71256
ಭಾನುವಾರ, ನವೆಂಬರ್ 23, 2025
ರಾಜ್ಯ ಸರ್ಕಾರಿ ನೌಕರರೇ' ಗಮನಿಸಿ : `ಕಡ್ಡಾಯ, ಸ್ವ-ಇಚ್ಛೆ ನಿವೃತ್ತಿ' ನಿಯಮಗಳ ಕುರಿತು ಇಲ್ಲಿದೆ ಮಾಹಿತಿ.
ರಾಜ್ಯ ಸರ್ಕಾರಿ ನೌಕರರೇ' ಗಮನಿಸಿ : `ಕಡ್ಡಾಯ, ಸ್ವ-ಇಚ್ಛೆ ನಿವೃತ್ತಿ' ನಿಯಮಗಳ ಕುರಿತು ಇಲ್ಲಿದೆ ಮಾಹಿತಿ.
ಕನಿಷ್ಠ 15 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿದ ನೌಕರನು, ಸ್ವ-ಇಚ್ಛೆ ನಿವೃತ್ತಿ ಹೊದಲು ಇಚ್ಛಿಸಿದಲ್ಲಿ, 3 ತಿಂಗಳು ಮುಂಚಿತವಾಗಿ ನೇಮಕಾತಿ ಅಧಿಕಾರಿಗೆ ಅನುಮತಿ ಕೋರಿ ಮನವಿ ಸಲ್ಲಿಸಬಹುದು.
ಷರತ್ತುಗಳು:
ನೇಮಕಾತಿ ಅಧಿಕಾರಿಯಿಂದ ನಿವೃತ್ತಿ ಅನುಮತಿ ನೀಡಿ ಆದೇಶ ಹೊರಡಿಸಿದ ದಿನಾಂಕದಿಂದ ನಿವೃತ್ತಿ ಜಾರಿಗೊಳಿಸಲಾಗುವುದು.
ನಿವೃತ್ತಿಗೆ ಅನುಮತಿ ಆದೇಶ ಹೊರಡಿಸುವ ಮುಂಚಿತವಾಗಿ ನೌಕರನು ಸಮರ್ಥವಾದ ಕಾರಣ ನೀಡಿ, ಮನವಿಯನ್ನು ಹಿಂಪಡೆಯಹಬುದು.
ಇಲಾಖಾ ಅಥವಾ ನ್ಯಾಯಾಂಗ ವಿಚಾರಣೆಗಳಲ್ಲಿ ಭಾಗಿಯಾಗಿರುವ ನೌಕರರಿಗೆ ಸ್ವ-ಇಚ್ಚಾ ನಿವೃತ್ತಿಗೆ ಅನುಮತಿ ನಿರಾಕರಣೆ.
ವಯೋಮಿತಿ ನವೃತ್ತಿ ದಿನಾಂಕ ಮತ್ತು ಸ್ವ-ಇಚ್ಚಾ ನಿವೃತ್ತಿ ದಿನಾಂಕಕ್ಕೆ ನಡುವಿನ ವ್ಯತ್ಯಾಸದ ಅವಧಿ ಗರಿಷ್ಠ ವರ್ಷಗಳ ಮಿತಿಗೊಳಿಸಿ ವೈಟೇಜ್ ಸೌಲಭ್ಯ,ಅರ್ಃತಾ ಸೇವೆಗೆಸೇರ್ಪಡೆ.
2. ಕನಿಷ್ಠ 50 ವರ್ಷಗಳ ವಯೋಮಿತಿ ಮೀರಿದ ನೌಕರನು, ಸ್ವ-ಇಚ್ಚಾ ನಿವೃತ್ತಿಗೆ, ನೇಮಕಾತಿ ಅಧಿಕಾರಿಯಿಂದ ಅನುಮತಿ ಕೋರಿ ನಿವೃತ್ತಿ ಹೊಂದಹಬುದು.(ನಿಯಮ285(1)(ಬಿ).
ಷರತ್ತುಗಳು
ನಿಯಮ285(1)ಎ ರನ್ವಯ ಎಲ್ಲಾ ಷರತ್ತುಗಳೂ, ಈ ಸಂದರ್ಭದಲ್ಲಿ ಅನ್ವಯಿಸಲಾಗುವುದು. ಆದರೇ ವೈಟೇಜ್ ಸೌಲಭ್ಯವು ಲಭಿಸುವುದಿಲ್ಲ.
5.ಕಡ್ಡಾಯ ನಿವೃತ್ತಿ (ನಿಯಮ 285(1)ಸಿ):
20 ವರ್ಷಗಳ ಅರ್ಹತಾ ಸೇವೆ ಅಥವಾ 50 ವರ್ಷ ವಯೋಮಿತಿ ತಲುಪಿದ, ಸರ್ಕಾರಿ ನೌಕರನನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಬಹುದು.
ಷರತ್ತುಗಳು;
ಕಡ್ಡಾಯ ನಿವೃತ್ತಿಗೆ 3 ತಿಂಗಳು ಪೂರ್ವಭಾವಿಯಾಗಿ ಸರ್ಕಾರದಿಂದಲೇ ನೋಟೀಸು ನೀಡಿಕೆ.
ನೋಟೀಸು ನೀಡಿಕೆ 3 ತಿಂಗಳ ಅವಧಿಗೆ ಕಡಿಮೆಯಾದ ಅವಧಿಗೆ ವೇತನ ಮತ್ತು ಭತ್ಯೆ ನೀಡಿಕೆ.
ಕಡ್ಡಾಯ ನಿವೃತ್ತಿ ಮುಂಚಿತವಾಗಿ ಯಾವುದೇ ವಿಚಾರಣೆ ಅಗತ್ಯವಿರುವುದಿಲ್ಲ.
ಸ್ವ-ಇಚ್ಛೆ ನಿವೃತ್ತಿ ನಿಯಮ :
1. ಕನಿಷ್ಠ 15 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿದ ನೌಕರನು, ಸ್ವ-ಇಚ್ಛೆ ನಿವೃತ್ತಿ 3 ತಿಂಗಳು ಮುಂಚಿತವಾಗಿ ನೇಮಕಾತಿ ಅಧಿಕಾರಿಗೆ ಅನುಮತಿ ಕೋರಿ ಹೊದಲು ಇಚ್ಛಿಸಿದಲ್ಲಿ, 3 ತಿಂಗಳು ಮನವಿ ಸಲ್ಲಿಸಬಹುದು (ನಿಯಮ285(1)(ಎ)
ಷರತ್ತುಗಳು
ಅಧಿಕಾರಿಯಿಂದ ನಿವೃತಿ ಅನುಮತಿ ನೀಡಿ ಆದೇಶ ಹೊರಡಿಸಿದ ದಿನಾಂಕದಿಂದ ಪ್ರತಿ ಜಾರಿಗೊಳಿಸಲಾಗುವುದು.
ವಯೋಮಿತಿ ನವೃತ್ತಿ ದಿನಾಂಕ ಮತ್ತು ಸ್ವ-ಇಚ್ಚಾ ನಿವೃತ್ತಿ ದಿನಾಂಕಕ್ಕೆ ನಡುವಿನ ವ್ಯತ್ಯಾಸದ ಅವಧಿ ಗರಿಷ್ಠ ವರ್ಷಗಳ ಮಿತಿಗೊಳಿಸಿ ವೈಟೇಜ್ ಸೌಲಭ್ಯ,ಅರ್ಃತಾ ಸೇವೆಗೆ ಸೇರ್ಪಡೆ.
2. ಕನಿಷ್ಠ 50 ವರ್ಷಗಳ ವಯೋಮಿತಿ ಮೀರಿದ ನೌಕರನು, ಸ್ವ-ಇಚ್ಛಾ ನಿವೃತ್ತಿಗೆ, ನೇಮಕಾತಿ ಅಧಿಕಾರಿಯಿಂದ ಅನುಮತಿ ಕೋರಿ ನಿವೃತ್ತಿ ಹೊಂದಹಬುದು.(ನಿಯಮ285(1)(ಬಿ).
ಷರತ್ತುಗಳು
ಶುಕ್ರವಾರ, ಅಕ್ಟೋಬರ್ 10, 2025
ರಾಜ್ಯದಲ್ಲಿ `ಆರೋಗ್ಯ ಕವಚ' ಬಲಪಡಿಸಲು ಮಹತ್ವದ ಕ್ರಮ : `3691' ಹುದ್ದೆಗಳನ್ನು ಸೃಜಿಸಿ ಸರ್ಕಾರ ಆದೇಶ
ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಆದೇಶದಲ್ಲಿ ಈ ಆಯವ್ಯಯ ಘೋಷಣೆಯನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ 108-ಆರೋಗ್ಯ ಕವಚ ಸೇವೆಯನ್ನು ಒಡಂಬಡಿಕೆಯ ಪಾಲುದಾರರಾದ GVK-EMRI ಸಂಸ್ಥೆ (ಪ್ರಸ್ತುತ EMRI GHS) ಸಂಸ್ಥೆಯಿಂದ ಹಿಂಪಡೆದು, ಈ ಸೇವೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲು ಸರ್ಕಾರದ ವತಿಯಿಂದ ರಾಜ್ಯ ಮಟ್ಟದಲ್ಲಿ 112 NG ERSS ತಂತ್ರಾಂಶವನ್ನು ಬಳಸಿಕೊಂಡು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮುಖಾಂತರ ಆಂಬ್ಯುಲೆನ್ಸ್ ಗಳ ವಿಕೇಂದ್ರಿಕೃತವಾಗಿ ನಿರ್ವಹಣೆ ಮಾಡಲು ಹಾಗೂ ಈ ಯೋಜನೆಯನ್ನು 2025-26 ನೇ ಸಾಲಿನ ಅನುಮೋದಿತ ಅನುದಾನದ ಮಿತಿಯೊಳಗೆ ಅನುಷ್ಠಾನ ಮಾಡಲು ಹಾಗೂ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಪಡೆಯಲು ಪ್ರತ್ಯೇಕ ಪುಸ್ತಾವನೆ ಹಾಗೂ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ (Meity)ದಡಿಯಲ್ಲಿನ C-DAC ತಿರುವಂತಪುರಂ ಸಂಸ್ಥೆಯ ಜೊತೆ ಒಡಂಬಡಿಕೆಯನ್ನು ಮಾಡಿಕೊಂಡು 112 NG-ERSS ತಂತ್ರಾಂಶ ಬಳಸಿಕೊಂಡು ರಾಜ್ಯದಲ್ಲಿ 108-ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ ಕಾರ್ಯಕ್ರಮಗಳ ಕೇಂದ್ರೀಕೃತ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ನ್ನು ಐದು ವರ್ಷಗಳ ಅವಧಿಗೆ ಸ್ಥಾಪಿಸಲು ಕೆಟಿಪಿಪಿ ಕಾಯ್ದೆ ಕಲಂ 4(g) ವಿನಾಯಿತಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಆದೇಶಿಸಲಾಗಿದೆ. ಮುಂದುವರೆದು ಯೋಜನೆಯ ಅನುಷ್ಠಾನಕ್ಕೆ ವಿವರವಾದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆಯಲು ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಆದೇಶದಲ್ಲಿ ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು 108 - ಆರೋಗ್ಯ ಕವಚ ಹಾಗೂ 104 - ಆರೋಗ್ಯ ಸಹಾಯವಾಣಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸರ್ಕಾರದ ಅಧೀನಕ್ಕೆ ಪಡೆದು ನಿರ್ವಹಿಸುವ ಉದ್ದೇಶದಿಂದ ಮಾನವ ಸಂಪನ್ಮೂಲ, ಉಪಕರಣಗಳು ಮತ್ತು ಸೇವೆಗಳನ್ನು ಖರೀದಿ / ಸಂಗ್ರಹಣೆ ಮಾಡುವ ಸಂಬಂಧವಾಗಿ ನಿರ್ದೇಶಕರು, ಕರ್ನಾಟಕ ಹೆಲ್ತ್ ಡಿಜಿಟಲ್ ಸೊಸೈಟಿ (KHDS) ಹಾಗೂ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಿ, ಆದೇಶದಲ್ಲಿ ತಿಳಿಸಿರುವ ಕ್ರಮಗಳನ್ನು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದ ನಂತರವೇ ನಿಯಮಾನುಸಾರ ಅಂತಿಮಗೊಳಿಸಲು ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (4) ರಲ್ಲಿ ಓದಲಾದ ಏಕಕಡತದಲ್ಲಿ ಹಾಗೂ ಸರ್ಕಾರದ ಕಡತ ಸಂಖ್ಯೆ ಆಕುಕ 180 ಸಿಜಿಇ 2025ರ ಕೇಂದ್ರಿಕೃತ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್, ಜಿಲ್ಲಾ ಕಂಟ್ರೋಲ್ ರೂಮ್ ಸ್ಥಾಪಿಸಲು ಹಾಗೂ ಆಂಬ್ಯುಲೆನ್ಸ್ ನಿರ್ವಹಣೆಗೆ ಬೇಕಾದ ಅಗತ್ಯ ಮಾನವ ಸಂಪನ್ಮೂಲವನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯುವುದಾಗಿ ಪ್ರಸ್ತಾಪಿಸಲಾಗಿರುತ್ತದೆ ಹಾಗೂ ಅಗತ್ಯ ಮಾನವ ಸಂಪನ್ಮೂಲವನ್ನು ಪಡೆಯಲು ಪ್ರತ್ಯೇಕ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿರುತ್ತದೆ. ಅದರಂತೆ ಮಾನವ ಸಂಪನ್ಮೂಲಗಳ, ಅವರ ವಿದ್ಯಾರ್ಹತೆ, ಅನುಭವ, ನೇಮಕಾತಿಯ ವಿಧಾನ, ಅಂದಾಜು ವೆಚ್ಚದ ವಿವರಗಳನ್ನು ಕೆಳಕಂಡ ಅನುಬಂಧ-01 ಮತ್ತು 02ರಲ್ಲಿ ಸಲ್ಲಿಸಿ, ಮಾನವ ಸಂಪನ್ಮೂಲದ ನಿರ್ವಹಣೆಗೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆ 2210-06-200-0-01 ಭರಿಸಲಾಗುವುದು. ಪ್ರಸ್ತಾಪಿಸಲಾದ ಮಾನವ ಸಂಪನ್ಮೂಲವನ್ನು ಹಾಲಿ ನಿರ್ವಹಿಸಲಾಗುತ್ತಿರುವ ಆಂಬ್ಯುಲೆನ್ಸ್ ಮತ್ತು ಕಂಟ್ರೋಲ್ ಕೇಂದ್ರಕ್ಕೆ ಅನುಗುಣವಾಗಿ ಅಂದಾಜಿಸಲಾಗಿದೆ ಎಂದು ತಿಳಿಸಿರುತ್ತಾರೆ.
ಮುಂದುವರೆದು, ರಾಜ್ಯದಲ್ಲಿ ಮೊದಲನೇ ಬಾರಿಗೆ 108-ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ ಕಾರ್ಯಕ್ರಮವನ್ನು ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗಿದ್ದು ಪ್ರಾಥಮಿಕ ಹಂತದಲ್ಲಿ ಅನುಷ್ಠಾನಗೊಳಿಸಲು ಅಂದಾಜಿಸಲಾದ ಮಾನವ ಸಂಪನ್ಮೂಲವನ್ನು ಪ್ರಸ್ತಾಪಿಸಲಾಗಿದೆ ಹಾಗೂ ತುರ್ತು ವೈದ್ಯಕೀಯ ಸೇವೆಗಳ ನಿರ್ದೇಶನಾಲಯ / ಕೇಂದ್ರ ಸ್ಥಾಪಿಸಿದ ಹಾಗೂ ಕಾರ್ಯಕ್ರಮವನ್ನು ಅನುಷ್ಠಾನಗೊಂಡ ನಂತರ ಅವಶ್ಯಕತೆಗೆ ಅನುಗುಣವಾಗಿ ಈ ಕೆಳಕಂಡ ಮಾನವ ಸಂಪನ್ಮೂಲವನ್ನು ಹಾಗೂ ಇದಕ್ಕೆ ಅವಶ್ಯಕ ಅನುದಾನ ಪುಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಕೋರಲಾಗಿದೆ.









ಸೋಮವಾರ, ಮಾರ್ಚ್ 24, 2025
ವಿಶ್ವ ಕ್ಷಯ ದಿನ
ಇದು ಮುಂದುವರೆದಂತೆ, ಇದು ಆಯಾಸ, ಅತಿಯಾದ ಬೆವರು, ತೂಕ ನಷ್ಟ, ಜ್ವರ ಮತ್ತು ದೌರ್ಬಲ್ಯವನ್ನು ತರುತ್ತದೆ, ಇದು ಸರಳ ಕೆಲಸಗಳನ್ನು ಸಹ ಆಯಾಸಗೊಳಿಸುತ್ತದೆ.
ಕ್ಷಯರೋಗ (ಟಿಬಿ) ಗಂಭೀರ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಆದರೆ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನೀಡಬಹುದಾದರೂ, ಟಿಬಿ ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್ ಡಿಸೀಸಸ್ (NIAID) ಕ್ಷಯರೋಗವನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಹರಿಸುವ ಮಹತ್ವವನ್ನು ವಿವರಿಸುತ್ತದೆ.
ಕ್ಷಯರೋಗ (ಟಿಬಿ) ದೂರದ ಬೆದರಿಕೆಯಂತೆ ತೋರಬಹುದು, ಆದರೆ ಇದು ವಿಶ್ವಾದ್ಯಂತ ಪ್ರಮುಖ ಸಾಂಕ್ರಾಮಿಕ ರೋಗವಾಗಿ ಉಳಿದಿದೆ. ಭಾರತದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ 2023 ರ ಜಾಗತಿಕ ಟಿಬಿ ವರದಿಯ ಪ್ರಕಾರ, ಜಾಗತಿಕ ಟಿಬಿ ಪ್ರಕರಣಗಳಲ್ಲಿ ಗಮನಾರ್ಹ ಭಾಗವನ್ನು ನಾವು ಹೊಂದಿದ್ದೇವೆ.
ವಿಶ್ವ ಕ್ಷಯರೋಗ ದಿನ 2024 ರ ಸಂದರ್ಭದಲ್ಲಿ, ಸ್ಟರ್ಲಿಂಗ್ ಆಸ್ಪತ್ರೆಗಳ ಎಫ್‌ಎನ್ಬಿ (ಸಾಂಕ್ರಾಮಿಕ ರೋಗಗಳು) ಜ್ವರ ಮತ್ತು ನಿರ್ಣಾಯಕ ಸಾಂಕ್ರಾಮಿಕ ತಜ್ಞ ಡಾ.ಕೃತಾರ್ತ್ ಕಾಂಜಿಯಾ, "ಸಂಪರ್ಕದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆಯುವ ಪೀಳಿಗೆಯಾಗಿ, ಟಿಬಿ ನಿರ್ದಿಷ್ಟ ಅಪಾಯವನ್ನುಂಟುಮಾಡಬಹುದು. ಆದಾಗ್ಯೂ, ಆರೋಗ್ಯವಾಗಿರಲು ಮತ್ತು ಟಿಬಿಯನ್ನು ದೂರವಿರಿಸಲು ನೀವು ಅಳವಡಿಸಿಕೊಳ್ಳಬಹುದಾದ ಕೆಲವು ಪ್ರಾಯೋಗಿಕ ಸಲಹೆಗಳು ಮತ್ತು ಅಭ್ಯಾಸಗಳಿವೆ.
ಆರೋಗ್ಯಕರ ಮತ್ತು ಟಿಬಿ ಮುಕ್ತವಾಗಿರಲು ಜನರಲ್ ಝಡ್ ಗೆ ಪ್ರಾಯೋಗಿಕ ಸಲಹೆಗಳು ಮತ್ತು ಅಭ್ಯಾಸಗಳು
ಸಮತೋಲಿತ ಆಹಾರ : ಸಂಸ್ಕರಿಸಿದ ಆಹಾರಗಳು ಮತ್ತು ಧೂಮಪಾನದಂತಹ ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸುವುದು ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಅದ್ಭುತಗಳನ್ನು ಮಾಡುತ್ತದೆ. ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಯಾವುದೇ ಸಂಭಾವ್ಯ ಟಿಬಿ ಸೋಂಕಿನ ವಿರುದ್ಧ ಹೋರಾಡಲು ಅಗತ್ಯವಾದ ಪೌಷ್ಠಿಕಾಂಶಗಳನ್ನು ನೀಡುತ್ತದೆ. ಪ್ರೋಟೀನ್ ಅನ್ನು ಸಹ ಕಡಿಮೆ ಮಾಡಬೇಡಿ, ಏಕೆಂದರೆ ಇದು ನಿಮ್ಮ ದೇಹದಾದ್ಯಂತ ಅಂಗಾಂಶಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ.
ಸಕ್ರಿಯರಾಗಿರಿ: ಬಹಳಷ್ಟು ದುಡಿಯುವ ಜನಸಂಖ್ಯೆಯು ತುಂಬಾ ಜಡ ಜೀವನಶೈಲಿಯನ್ನು ಹೊಂದಿದೆ, ಇದು ನಿಮ್ಮ ರೋಗನಿರೋಧಕ ಶಕ್ತಿ ಮತ್ತು ನಿಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ. ನಿಯಮಿತ ವ್ಯಾಯಾಮವು ನಿಮ್ಮ ದೇಹವನ್ನು ಬಲವಾಗಿರಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಆನಂದಿಸುವ ಚಟುವಟಿಕೆಗಳನ್ನು ಹುಡುಕಿ, ಅದು ಜಿಮ್ ಗೆ ಹೋಗುವುದು, ನೃತ್ಯ ಮಾಡುವುದು ಅಥವಾ ಕ್ರೀಡಾ ತಂಡಕ್ಕೆ ಸೇರುವುದು. ವಾರದ ಹೆಚ್ಚಿನ ದಿನಗಳಲ್ಲಿ ಕನಿಷ್ಠ 30 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮವನ್ನು ಗುರಿಯಾಗಿಸಿ.
ಸ್ವಚ್ಛತೆ ಮುಖ್ಯ: ಉತ್ತಮ ನೈರ್ಮಲ್ಯವು ಟಿಬಿ ವಿರುದ್ಧ ಪ್ರಬಲ ಅಸ್ತ್ರವಾಗಿದೆ, ಇದು ಸಕ್ರಿಯ ಟಿಬಿ ಹೊಂದಿರುವ ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಹರಡುತ್ತದೆ. ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿದ್ದ ನಂತರ. ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ ಮತ್ತು ಅಂಗಾಂಶಗಳನ್ನು ಸರಿಯಾಗಿ ವಿಲೇವಾರಿ ಮಾಡಿ.
ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ತಿಳಿದುಕೊಳ್ಳಿ: ಜನದಟ್ಟಣೆಯ, ಕಳಪೆ ಗಾಳಿಯಾಡುವ ಸ್ಥಳಗಳಲ್ಲಿ ಟಿಬಿ ಬೆಳೆಯುತ್ತದೆ. ನೀವು ಇಕ್ಕಟ್ಟಾದ ಸ್ಥಳದಲ್ಲಿ ವಾಸಿಸುತ್ತಿದ್ದರೆ, ಸಾಧ್ಯವಾದಾಗಲೆಲ್ಲಾ ತಾಜಾ ಗಾಳಿಯ ಪರಿಚಲನೆಗಾಗಿ ಕಿಟಕಿಗಳನ್ನು ತೆರೆಯಲು ಪ್ರಯತ್ನಿಸಿ. ಕೆಲಸ ಅಥವಾ ಶಾಲೆಯಲ್ಲಿ ಕಳಪೆ ವಾತಾಯನವಿದೆಯೇ ಎಂದು ಯಾರಿಗಾದರೂ ತಿಳಿಸಿ ಇದರಿಂದ ನೀವು ಸುಧಾರಿತ ಗಾಳಿಯ ಗುಣಮಟ್ಟವನ್ನು ಪ್ರತಿಪಾದಿಸಬಹುದು.
ತಪಾಸಣೆ ಮಾಡಿಸಿಕೊಳ್ಳಿ: ನೀವು ನಿರಂತರ ಕೆಮ್ಮು, ತೂಕ ನಷ್ಟ, ಜ್ವರ ಅಥವಾ ರಾತ್ರಿ ಬೆವರುವಿಕೆಯನ್ನು ಅನುಭವಿಸಿದರೆ, ಟಿಬಿ ಪರೀಕ್ಷೆ ಮಾಡಿಸಿಕೊಳ್ಳಿ. ಇತರರಿಗೆ ಹರಡುವುದನ್ನು ತಡೆಯಲು ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ನಿರ್ಣಾಯಕವಾಗಿದೆ. ಹೆಚ್ಚಿನ ಚಿಕಿತ್ಸಾಲಯಗಳು ಉಚಿತ ಅಥವಾ ಕಡಿಮೆ ವೆಚ್ಚದ ಟಿಬಿ ತಪಾಸಣೆಯನ್ನು ನೀಡುತ್ತವೆ.
ಮಾಹಿತಿ ಪಡೆಯಿರಿ: ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ಕ್ಷಯರೋಗದ ಬಗ್ಗೆ ಮಾಹಿತಿ ಪಡೆಯಿರಿ, ತಡೆಗಟ್ಟುವಿಕೆಯ ಬಗ್ಗೆ ಸಲಹೆಗಳನ್ನು ಪಡೆಯಿರಿ ಮತ್ತು ಇತ್ತೀಚಿನ ಸಂಶೋಧನೆಯ ಬಗ್ಗೆ ನವೀಕೃತವಾಗಿರಿ.
ಜೆನ್ ಝಡ್, ಈ ಅಭ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ನೀವು ಆರೋಗ್ಯಕರವಾಗಿ ಉಳಿಯುವ ಮತ್ತು ಟಿಬಿಯನ್ನು ಅದರ ಹಾದಿಯಲ್ಲಿ ನಿಲ್ಲಿಸುವ ಹಾದಿಯಲ್ಲಿರುತ್ತೀರಿ. ನೆನಪಿಡಿ, ಆರೋಗ್ಯಕರವಾಗಿ ನೀವು ನಿಮ್ಮನ್ನು ಮಾತ್ರವಲ್ಲ, ನಿಮ್ಮ ಪ್ರೀತಿಪಾತ್ರರನ್ನು ಮತ್ತು ಸಮುದಾಯವನ್ನು ಸುರಕ್ಷಿತವಾಗಿರಿಸುತ್ತೀರಿ.
ಶನಿವಾರ, ಮಾರ್ಚ್ 22, 2025
MLA sakary hike 2025
ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ವಿಧೇಯಕ. ಇಲ್ಲಿ ಇನ್ನುಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956 (1957ರ ಕರ್ನಾಟಕ ಅಧಿನಿಯಮ 2) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;
ಇದು ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ రాజ్య ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ
ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಅಧಿನಿಯಮ, 2025 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
2. ಪ್ರಕರಣ 3ರ ತಿದ್ದುಪಡಿ.- ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ
ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956 (1957ರ ಕರ್ನಾಟಕ ಅಧಿನಿಯಮ 2) (ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 3ನೇ ಪ್ರಕರಣದಲ್ಲಿ,
(i) ಉಪಪ್ರಕರಣ (1)ರಲ್ಲಿ, "ಎಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳನ್ನು ಮತ್ತು "ನಾಲ್ಕು ಲಕ್ಷ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಐದು ಲಕ್ಷ ರೂಪಾಯಿಗಳ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ii) ಉಪಪ್ರಕರಣ (2)ರಲ್ಲಿ, "ಎಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳನ್ನು ಮತ್ತು "ನಾಲ್ಕು ಲಕ್ಷ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಐದು ಲಕ್ಷ ರೂಪಾಯಿಗಳ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
3. ಪ್ರಕರಣ 4ರ ತಿದ್ದುಪಡಿ.- ಮೂಲ ಅಧಿನಿಯಮದ 4ನೇ ಪ್ರಕರಣದಲ್ಲಿ,
(i) ಉಪಪ್ರಕರಣ (1)ರಲ್ಲಿ, "ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಎರಡು ಲಕ್ಷ ಐವತ್ತು ಸಾವಿರ ರೂಪಾಯಿಗಳ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ii) (2)ನೇ ಉಪಪ್ರಕರಣದಲ್ಲಿ, "ಇಪ್ಪತ್ತು ಸಾವಿರ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಇಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
4. ಪ್ರಕರಣ 8ರ ತಿದ್ದುಪಡಿ.- ಮೂಲ ಅಧಿನಿಯಮದ 8ನೇ ಪ್ರಕರಣದ, (2)ನೇ ಉಪಪ್ರಕರಣದ, (ಡಿ) ಖಂಡದ ಮೊದಲನೇ ಪರಂತುಕದಲ್ಲಿ, " ಮೂರು ಸಾವಿರದ ಐದುನೂರು.








ಶುಕ್ರವಾರ, ಮಾರ್ಚ್ 21, 2025
2008 ರಿಂದ 2024 ರವರೆಗಿನ ಐಪಿಎಲ್ ವಿಜೇತರ ಪಟ್ಟಿ: 18ನೇ ಆವೃತ್ತಿಯಲ್ಲಿ ಗೆಲ್ಲೋರು ಯಾರು?
ಮಾರ್ಚ್ 22ರ ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ. ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಇದೀಗ ಪಂದ್ಯಕ್ಕೆ ಮಳೆ ಅಡ್ಡಿ ಎದುರಾಗಿದೆ. ಕೋಲ್ಕತ್ತಾದಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿದ ಟಿ20 ಲೀಗ್ ಆಗಿದ್ದು, ಜಗತ್ತಿನಾದ್ಯಂತದ ಅತ್ಯುತ್ತಮ ಕ್ರಿಕೆಟಿಗರನ್ನು ಒಳಗೊಂಡಿದೆ. ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲು, ಫ್ರಾಂಚೈಸಿಗಳು ಎರಡು ತಿಂಗಳ ಅವಧಿಯಲ್ಲಿ 16-17 ಪಂದ್ಯಗಳನ್ನು ಆಡುವ ಮೂಲಕ ಉತ್ತಮ ಪ್ರದರ್ಶನ ನೀಡಬೇಕು.
ಕಳೆದ 17 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಟ್ರೋಫಿ ಗೆಲ್ಲುವ ಮೂಲಕ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಹೊಂದಿವೆ. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೇವಲ ಎರಡು ತಂಡಗಳು 10 ಪ್ರಶಸ್ತಿಗಳನ್ನು ಗೆದ್ದಿರುವುದು ವಿಶೇಷ.
IPL 2025: ಭಾರಿ ಮಳೆ ಎಚ್ಚರಿಕೆ; ಹವಾಮಾನ ಇಲಾಖೆ ಮುನ್ಸೂಚನೆ; RCB vs KKR ಪಂದ್ಯ ನಡೆಯೋದು ಅನುಮಾನ!ಐಪಿಎಲ್ ವಿಜೇತರ ಪಟ್ಟಿ
ರಾಜಸ್ಥಾನ ರಾಯಲ್ಸ್ 2008ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದುಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ 2023 ರಲ್ಲಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಮನಾಗಿ ಪ್ರಶಸ್ತಿ ಗೆದ್ದುಕೊಂಡಿತು. 2024ನೇ ಆವೃತ್ತಿಯಲ್ಲಿ ಕೆಕೆಆರ್ ಟ್ರೋಫಿಯನ್ನು ಗೆದ್ದುಕೊಂಡಿತು. ಐಪಿಎಲ್‌ನ 10 ತಂಡಗಳ ಪೈಕಿ ಈವರೆಗೂ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ರಶಸ್ತಿಯ ಬರ ಎದುರಿಸುತ್ತಿವೆ.
1. 2008 - ರಾಜಸ್ಥಾನ್ ರಾಯಲ್ಸ್
2. 2009 - ಡೆಕ್ಕನ್ ಚಾರ್ಜಸ್
3. 2010 - ಚೆನ್ನೈ ಸೂಪರ್ ಕಿಂಗ್ಸ್
4. 2011 - ಚೆನ್ನೈ ಸೂಪರ್ ಕಿಂಗ್ಸ್
5. 2012 - ಕೋಲ್ಕತ್ತಾ ನೈಟ್ ರೈಡರ್ಸ್
6. 2013 - ಮುಂಬೈ ಇಂಡಿಯನ್ಸ್
7. 2014 - ಕೋಲ್ಕತ್ತಾ ನೈಟ್ ರೈಡರ್ಸ್
8. 2015 - ಮುಂಬೈ ಇಂಡಿಯನ್ಸ್
9. 2016 - ಸನ್‌ರೈಸರ್ಸ್ ಹೈದರಾಬಾದ್
10. 2017 - ಮುಂಬೈ ಇಂಡಿಯನ್ಸ್
11. 2018 - ಚೆನ್ನೈ ಸೂಪರ್ ಕಿಂಗ್ಸ್
12. 2019 - ಮುಂಬೈ ಇಂಡಿಯನ್ಸ್
13. 2020 - ಮುಂಬೈ ಇಂಡಿಯನ್ಸ್
14. 2021 - ಚೆನ್ನೈ ಸೂಪರ್ ಕಿಂಗ್ಸ್
15. 2022 - ಗುಜರಾತ್ ಟೈಟಾನ್ಸ್
16. 2023 - ಚೆನ್ನೈ ಸೂಪರ್ ಕಿಂಗ್ಸ್
17. 2024 - ಕೋಲ್ಕತ್ತಾ ನೈಟ್ ರೈಡರ್ಸ್
ಶುಕ್ರವಾರ, ಜನವರಿ 17, 2025
ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ
ಬಹು ಆಯ್ಕೆ ಪ್ರಶ್ನೆಗಳು
ಎತ್ತಿತೋರಿಸಲಾದ ಪೋಸ್ಟ್
ಅಸಂಘಟಿತ ಕಾರ್ಮಿಕರಿಗಾಗಿ
eshrama
-
ಇತ್ತೀಚೆಗೆ ಸಾಲಮನ್ ದ್ವೀಪಗಳು ಕೆಳಗಿನ ಯಾವ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ? ಎ. ಚೀನಾ. ಬಿ. ಜಪಾನ್. ಸಿ. ಉತ್ತರ ಕೊರಿಯಾ. ಡಿ. ದಕ್ಷಿಣ ಕೊರಿಯ...
-
The 17 sustainable development goals (SDGs) to transform our world: GOAL 1: No Poverty GOAL 2: Zero Hunger GOAL 3: Good Health and Well-b...
-
356ನೇ ವಿಧಿ ದುರುಪಯೋಗ - ನಿಯಂತ್ರಣ ಶಾಸಕಾಂಗ, ಕಾರ್ಯಂಗ ತಮ್ಮ ಹೊಣೆಗಾರಿಕೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ನಿಭಾಯಿಸುವಲ್ಲಿ ವಿಫಲವಾದಾಗ ಅದನ್ನು ಸರಿದಾರಿಗೆ ತರುವ ಜ...