ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಆದೇಶದಲ್ಲಿ ಈ ಆಯವ್ಯಯ ಘೋಷಣೆಯನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ 108-ಆರೋಗ್ಯ ಕವಚ ಸೇವೆಯನ್ನು ಒಡಂಬಡಿಕೆಯ ಪಾಲುದಾರರಾದ GVK-EMRI ಸಂಸ್ಥೆ (ಪ್ರಸ್ತುತ EMRI GHS) ಸಂಸ್ಥೆಯಿಂದ ಹಿಂಪಡೆದು, ಈ ಸೇವೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲು ಸರ್ಕಾರದ ವತಿಯಿಂದ ರಾಜ್ಯ ಮಟ್ಟದಲ್ಲಿ 112 NG ERSS ತಂತ್ರಾಂಶವನ್ನು ಬಳಸಿಕೊಂಡು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮುಖಾಂತರ ಆಂಬ್ಯುಲೆನ್ಸ್ ಗಳ ವಿಕೇಂದ್ರಿಕೃತವಾಗಿ ನಿರ್ವಹಣೆ ಮಾಡಲು ಹಾಗೂ ಈ ಯೋಜನೆಯನ್ನು 2025-26 ನೇ ಸಾಲಿನ ಅನುಮೋದಿತ ಅನುದಾನದ ಮಿತಿಯೊಳಗೆ ಅನುಷ್ಠಾನ ಮಾಡಲು ಹಾಗೂ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಪಡೆಯಲು ಪ್ರತ್ಯೇಕ ಪುಸ್ತಾವನೆ ಹಾಗೂ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ (Meity)ದಡಿಯಲ್ಲಿನ C-DAC ತಿರುವಂತಪುರಂ ಸಂಸ್ಥೆಯ ಜೊತೆ ಒಡಂಬಡಿಕೆಯನ್ನು ಮಾಡಿಕೊಂಡು 112 NG-ERSS ತಂತ್ರಾಂಶ ಬಳಸಿಕೊಂಡು ರಾಜ್ಯದಲ್ಲಿ 108-ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ ಕಾರ್ಯಕ್ರಮಗಳ ಕೇಂದ್ರೀಕೃತ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ನ್ನು ಐದು ವರ್ಷಗಳ ಅವಧಿಗೆ ಸ್ಥಾಪಿಸಲು ಕೆಟಿಪಿಪಿ ಕಾಯ್ದೆ ಕಲಂ 4(g) ವಿನಾಯಿತಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಆದೇಶಿಸಲಾಗಿದೆ. ಮುಂದುವರೆದು ಯೋಜನೆಯ ಅನುಷ್ಠಾನಕ್ಕೆ ವಿವರವಾದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆಯಲು ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಆದೇಶದಲ್ಲಿ ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು 108 - ಆರೋಗ್ಯ ಕವಚ ಹಾಗೂ 104 - ಆರೋಗ್ಯ ಸಹಾಯವಾಣಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸರ್ಕಾರದ ಅಧೀನಕ್ಕೆ ಪಡೆದು ನಿರ್ವಹಿಸುವ ಉದ್ದೇಶದಿಂದ ಮಾನವ ಸಂಪನ್ಮೂಲ, ಉಪಕರಣಗಳು ಮತ್ತು ಸೇವೆಗಳನ್ನು ಖರೀದಿ / ಸಂಗ್ರಹಣೆ ಮಾಡುವ ಸಂಬಂಧವಾಗಿ ನಿರ್ದೇಶಕರು, ಕರ್ನಾಟಕ ಹೆಲ್ತ್ ಡಿಜಿಟಲ್ ಸೊಸೈಟಿ (KHDS) ಹಾಗೂ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಿ, ಆದೇಶದಲ್ಲಿ ತಿಳಿಸಿರುವ ಕ್ರಮಗಳನ್ನು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದ ನಂತರವೇ ನಿಯಮಾನುಸಾರ ಅಂತಿಮಗೊಳಿಸಲು ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (4) ರಲ್ಲಿ ಓದಲಾದ ಏಕಕಡತದಲ್ಲಿ ಹಾಗೂ ಸರ್ಕಾರದ ಕಡತ ಸಂಖ್ಯೆ ಆಕುಕ 180 ಸಿಜಿಇ 2025ರ ಕೇಂದ್ರಿಕೃತ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್, ಜಿಲ್ಲಾ ಕಂಟ್ರೋಲ್ ರೂಮ್ ಸ್ಥಾಪಿಸಲು ಹಾಗೂ ಆಂಬ್ಯುಲೆನ್ಸ್ ನಿರ್ವಹಣೆಗೆ ಬೇಕಾದ ಅಗತ್ಯ ಮಾನವ ಸಂಪನ್ಮೂಲವನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯುವುದಾಗಿ ಪ್ರಸ್ತಾಪಿಸಲಾಗಿರುತ್ತದೆ ಹಾಗೂ ಅಗತ್ಯ ಮಾನವ ಸಂಪನ್ಮೂಲವನ್ನು ಪಡೆಯಲು ಪ್ರತ್ಯೇಕ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿರುತ್ತದೆ. ಅದರಂತೆ ಮಾನವ ಸಂಪನ್ಮೂಲಗಳ, ಅವರ ವಿದ್ಯಾರ್ಹತೆ, ಅನುಭವ, ನೇಮಕಾತಿಯ ವಿಧಾನ, ಅಂದಾಜು ವೆಚ್ಚದ ವಿವರಗಳನ್ನು ಕೆಳಕಂಡ ಅನುಬಂಧ-01 ಮತ್ತು 02ರಲ್ಲಿ ಸಲ್ಲಿಸಿ, ಮಾನವ ಸಂಪನ್ಮೂಲದ ನಿರ್ವಹಣೆಗೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆ 2210-06-200-0-01 ಭರಿಸಲಾಗುವುದು. ಪ್ರಸ್ತಾಪಿಸಲಾದ ಮಾನವ ಸಂಪನ್ಮೂಲವನ್ನು ಹಾಲಿ ನಿರ್ವಹಿಸಲಾಗುತ್ತಿರುವ ಆಂಬ್ಯುಲೆನ್ಸ್ ಮತ್ತು ಕಂಟ್ರೋಲ್ ಕೇಂದ್ರಕ್ಕೆ ಅನುಗುಣವಾಗಿ ಅಂದಾಜಿಸಲಾಗಿದೆ ಎಂದು ತಿಳಿಸಿರುತ್ತಾರೆ.
ಮುಂದುವರೆದು, ರಾಜ್ಯದಲ್ಲಿ ಮೊದಲನೇ ಬಾರಿಗೆ 108-ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ ಕಾರ್ಯಕ್ರಮವನ್ನು ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗಿದ್ದು ಪ್ರಾಥಮಿಕ ಹಂತದಲ್ಲಿ ಅನುಷ್ಠಾನಗೊಳಿಸಲು ಅಂದಾಜಿಸಲಾದ ಮಾನವ ಸಂಪನ್ಮೂಲವನ್ನು ಪ್ರಸ್ತಾಪಿಸಲಾಗಿದೆ ಹಾಗೂ ತುರ್ತು ವೈದ್ಯಕೀಯ ಸೇವೆಗಳ ನಿರ್ದೇಶನಾಲಯ / ಕೇಂದ್ರ ಸ್ಥಾಪಿಸಿದ ಹಾಗೂ ಕಾರ್ಯಕ್ರಮವನ್ನು ಅನುಷ್ಠಾನಗೊಂಡ ನಂತರ ಅವಶ್ಯಕತೆಗೆ ಅನುಗುಣವಾಗಿ ಈ ಕೆಳಕಂಡ ಮಾನವ ಸಂಪನ್ಮೂಲವನ್ನು ಹಾಗೂ ಇದಕ್ಕೆ ಅವಶ್ಯಕ ಅನುದಾನ ಪುಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಕೋರಲಾಗಿದೆ.
















