somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಜನವರಿ 17, 2025

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಅಕ್ಬರನು ಯಾವ ವರ್ಷ ಗುಲಾಮಗಿರಿಯನ್ನು ರದ್ದು ಮಾಡಿದನು?

ಉತ್ತರ: 1562

ಪ್ರಶ್ನೆ 2: ಭಾರತೀಯ ದೇವಾಲಯಗಳ ತೊಟ್ಟಿಲು ಎಂದು ಯಾವುದನ್ನು ಕರೆಯುತ್ತಾರೆ?

ಉತ್ತರ: ಐಹೊಳೆ

ಪ್ರಶ್ನೆ 3: ʼದಕ್ಷಿಣ ಪಥೇಶ್ವರʼ ಇದು ಯಾರ ಬಿರುದು?

ಉತ್ತರ: ಇಮ್ಮಡಿ ಪುಲಕೇಶಿ

ಪ್ರಶ್ನೆ 4: ರವಿ ಕೀರ್ತಿ ಹೊರಡಿಸಿದ ಶಾಸನ ಯಾವುದು?

ಉತ್ತರ: ಐಹೊಳೆ

ಪ್ರಶ್ನೆ 5: ಬಾದಾಮಿ ಚಾಲುಕ್ಯರ ಕೊನೆಯ ಅರಸನ ಹೆಸರೇನು?

ಉತ್ತರ: 2ನೇ ಕೀರ್ತಿವರ್ಮ

ಪ್ರಶ್ನೆ 6: ಚಾಲುಕ್ಯ ಶೈಲಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ಮಂಗಳೇಶ

ಪ್ರಶ್ನೆ 7: ಮಲ್ಲಿನಾಥ ದೇವಾಲಯವು ಎಲ್ಲಿ ಕಂಡು ಬರುತ್ತದೆ?

ಉತ್ತರ: ಪಟ್ಟದಕಲ್ಲು

ಪ್ರಶ್ನೆ 8: ಚಾಲುಕ್ಯರ ನಿಜವಾದ ಸ್ಥಾಪಕನೆಂದು ಯಾರನ್ನು ಕರೆಯುತ್ತಾರೆ?

ಉತ್ತರ: 1ನೇ ಪುಲಕೇಶಿ

ಪ್ರಶ್ನೆ 9: ಸಿ.ಯು.ಕಿ. ಗ್ರಂಥ ಯಾರು ರಚಿಸಿದರು?

ಉತ್ತರ: ಹ್ಯೂಯೆನ್ ತ್ಸಾಂಗ್

ಪ್ರಶ್ನೆ 10: ವಾತಾಪಿಕೊಂಡ ದೇವ ಎಂಬ ಬಿರುದು ಯಾರು ಹೊಂದಿದ್ದರು?

ಉತ್ತರ: ಒಂದನೇ ನರಸಿಂಹವರ್ಮ

ಬಹು ಆಯ್ಕೆ ಪ್ರಶ್ನೆಗಳು




ಇತ್ತೀಚೆಗೆ ಸಾಲಮನ್ ದ್ವೀಪಗಳು ಕೆಳಗಿನ ಯಾವ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ?
ಎ. ಚೀನಾ. ಬಿ. ಜಪಾನ್.

ಸಿ. ಉತ್ತರ ಕೊರಿಯಾ. ಡಿ. ದಕ್ಷಿಣ ಕೊರಿಯಾ.

ಉತ್ತರ : ಎ

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೆಳಗಿನ ಯಾವ ಸ್ಥಾನಮಾನವನ್ನು ಕಲ್ಪಿಸಲಾಗಿದೆ?

ಎ. ಶಾಸನೀಯ ಸ್ಥಾನಮಾನ.
ಬಿ. ಸಂವಿಧಾನಾತ್ಮಕ ಸ್ಥಾನಮಾನ.
ಸಿ. ಶಾಸನೀಯೇತರ ಸ್ಥಾನಮಾನ.
ಡಿ. ನಿಗಮದ ಸ್ಥಾನಮಾನ.

ಉತ್ತರ : ಎ

ರಾಷ್ಟ್ರೀಯ ಮಹಿಳಾ ಆಯೋಗವು ಕೆಳಗಿನ ಯಾವ ಕಾರ್ಯಗಳನ್ನು ನಿರ್ವಹಿಸುತ್ತದೆ?

1. ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಅಧ್ಯಯನ ಚಟುವಟಿಕೆಗಳು.

2. ಮಹಿಳೆಯರ ಸಬಲೀಕರಣ.

3. ಮಹಿಳೆಯರಿಗೆ ಕಾನೂನಿನ ನೆರವು.

4. ಉದ್ಯೋಗಾವಕಾಶಗಳ ಸೃಷ್ಟಿ ಸಂಬಂಧಿತ ಚಟುವಟಿಕೆಗಳು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. ಒಂದು ಕಾರ್ಯ ಸರಿಯಾಗಿದೆ.
ಬಿ. ಎರಡು ಕಾರ್ಯಗಳು ಸರಿಯಾಗಿದೆ.
ಸಿ. ಮೂರು ಕಾರ್ಯಗಳು ಸರಿಯಾಗಿದೆ.
ಡಿ. ನಾಲ್ಕು ಕಾರ್ಯಗಳು ಸರಿಯಾಗಿವೆ.

ಉತ್ತರ : ಡಿ

ಇತ್ತೀಚೆಗೆ ಕೆಳಗಿನ ಯಾವ ಒಕ್ಕೂಟ ಶ್ರೀಲಂಕಾ ಅಧ್ಯಕ್ಷರ ಪ್ರಸ್ತಾಪವನ್ನು ತಿರಸ್ಕರಿಸಿದೆ?

ಎ. ತಮಿಳು ರಾಷ್ಟ್ರೀಯ ಒಕ್ಕೂಟ.

ಬಿ. ತಮಿಳು ಪ್ರಾದೇಶಿಕ ಒಕ್ಕೂಟ.

ಸಿ. ತಮಿಳು ರಾಷ್ಟ್ರೀಯ ಸ್ವಗೌರವ ಒಕ್ಕೂಟ.

ಡಿ. ತಮಿಳು ಅಂತರರಾಷ್ಟ್ರೀಯ ಒಕ್ಕೂಟ.

ಉತ್ತರ : ಎ

ಭಾರತ-ಶ್ರೀಲಂಕಾ-1987ರ ಒಪ್ಪಂದದ ನಂತರ ಕೆಳಗಿನ ಯಾವ ತಿದ್ದುಪಡಿಗಳನ್ನು ಶ್ರೀಲಂಕಾದ ಸಂವಿಧಾನಕ್ಕೆ ತರಲಾಯಿತು?

ಎ. 11ನೇ ತಿದ್ದುಪಡಿ.

ಬಿ. 13ನೇ ತಿದ್ದುಪಡಿ.

ಸಿ. 15ನೇ ತಿದ್ದುಪಡಿ.

ಡಿ.18ನೇ ತಿದ್ದುಪಡಿ.

ಉತ್ತರ : ಬಿ

ಪ್ರಸ್ತುತ ವರ್ಷದ ಆವೃತ್ತಿಯ ಡುರಾಂಡ್ ಕಪ್ ಕ್ರೀಡಾಕೂಟದಲ್ಲಿ ಕೆಳಗಿನ ಯಾವ ರಾಷ್ಟ್ರಗಳ ತಂಡಗಳು ಭಾಗವಹಿಸಲಿದೆ?

1. ಬಾಂಗ್ಲಾದೇಶ.‌

2. ಪಾಕಿಸ್ತಾನ.

3. ಭೂತಾನ್.‌

4. ನೇಪಾಳ.‌

5. ಶ್ರೀಲಂಕಾ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 3 ಮತ್ತು 4 →ಬಿ. 1, 2, 3 ಮತ್ತು 4

ಸಿ. 2 ಮತ್ತು 5 →ಡಿ. 3 ಮತ್ತು 5

ಉತ್ತರ : ಎ

ಜಂಜತಿಯ ಖೇಲ್ ಮಹೋತ್ಸವದಲ್ಲಿ ಕೆಳಗಿನ ಯಾವ ರಾಜ್ಯಗಳು ಸಮಗ್ರ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿವೆ?

1. ಒಡಿಸ್ಸಾ.

2. ತಮಿಳುನಾಡು.

3. ಕರ್ನಾಟಕ.

4. ಗುಜರಾತ್.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 →ಬಿ. 1 ಮತ್ತು 3

ಸಿ. 2 ಮತ್ತು 3 →ಡಿ. 3 ಮತ್ತು 4

ಉತ್ತರ : ಬಿ

ಎತ್ತಿತೋರಿಸಲಾದ ಪೋಸ್ಟ್

ರಾಜ್ಯದಲ್ಲಿ `ಆರೋಗ್ಯ ಕವಚ' ಬಲಪಡಿಸಲು ಮಹತ್ವದ ಕ್ರಮ : `3691' ಹುದ್ದೆಗಳನ್ನು ಸೃಜಿಸಿ ಸರ್ಕಾರ ಆದೇಶ

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಆದೇಶದಲ್ಲಿ ಈ ಆಯವ್ಯಯ ಘೋಷಣೆಯನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ 108-ಆರೋಗ್ಯ ಕವಚ ಸೇವೆಯನ್ನು ಒಡಂಬಡಿಕೆಯ ಪಾಲುದಾರರಾದ GVK-...