somaling m uppar kawalga

somaling m uppar kawalga
Somaling Sulubai uppar

ಸೋಮವಾರ, ಮಾರ್ಚ್ 24, 2025

ವಿಶ್ವ ಕ್ಷಯ ದಿನ


ಇದು ಮುಂದುವರೆದಂತೆ, ಇದು ಆಯಾಸ, ಅತಿಯಾದ ಬೆವರು, ತೂಕ ನಷ್ಟ, ಜ್ವರ ಮತ್ತು ದೌರ್ಬಲ್ಯವನ್ನು ತರುತ್ತದೆ, ಇದು ಸರಳ ಕೆಲಸಗಳನ್ನು ಸಹ ಆಯಾಸಗೊಳಿಸುತ್ತದೆ.

ಕ್ಷಯರೋಗ (ಟಿಬಿ) ಗಂಭೀರ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಆದರೆ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನೀಡಬಹುದಾದರೂ, ಟಿಬಿ ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್ ಡಿಸೀಸಸ್ (NIAID) ಕ್ಷಯರೋಗವನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಹರಿಸುವ ಮಹತ್ವವನ್ನು ವಿವರಿಸುತ್ತದೆ.

ಕ್ಷಯರೋಗ (ಟಿಬಿ) ದೂರದ ಬೆದರಿಕೆಯಂತೆ ತೋರಬಹುದು, ಆದರೆ ಇದು ವಿಶ್ವಾದ್ಯಂತ ಪ್ರಮುಖ ಸಾಂಕ್ರಾಮಿಕ ರೋಗವಾಗಿ ಉಳಿದಿದೆ. ಭಾರತದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ 2023 ರ ಜಾಗತಿಕ ಟಿಬಿ ವರದಿಯ ಪ್ರಕಾರ, ಜಾಗತಿಕ ಟಿಬಿ ಪ್ರಕರಣಗಳಲ್ಲಿ ಗಮನಾರ್ಹ ಭಾಗವನ್ನು ನಾವು ಹೊಂದಿದ್ದೇವೆ.

ವಿಶ್ವ ಕ್ಷಯರೋಗ ದಿನ 2024 ರ ಸಂದರ್ಭದಲ್ಲಿ, ಸ್ಟರ್ಲಿಂಗ್ ಆಸ್ಪತ್ರೆಗಳ ಎಫ್‌ಎನ್ಬಿ (ಸಾಂಕ್ರಾಮಿಕ ರೋಗಗಳು) ಜ್ವರ ಮತ್ತು ನಿರ್ಣಾಯಕ ಸಾಂಕ್ರಾಮಿಕ ತಜ್ಞ ಡಾ.ಕೃತಾರ್ತ್ ಕಾಂಜಿಯಾ, "ಸಂಪರ್ಕದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆಯುವ ಪೀಳಿಗೆಯಾಗಿ, ಟಿಬಿ ನಿರ್ದಿಷ್ಟ ಅಪಾಯವನ್ನುಂಟುಮಾಡಬಹುದು. ಆದಾಗ್ಯೂ, ಆರೋಗ್ಯವಾಗಿರಲು ಮತ್ತು ಟಿಬಿಯನ್ನು ದೂರವಿರಿಸಲು ನೀವು ಅಳವಡಿಸಿಕೊಳ್ಳಬಹುದಾದ ಕೆಲವು ಪ್ರಾಯೋಗಿಕ ಸಲಹೆಗಳು ಮತ್ತು ಅಭ್ಯಾಸಗಳಿವೆ.

ಆರೋಗ್ಯಕರ ಮತ್ತು ಟಿಬಿ ಮುಕ್ತವಾಗಿರಲು ಜನರಲ್ ಝಡ್ ಗೆ ಪ್ರಾಯೋಗಿಕ ಸಲಹೆಗಳು ಮತ್ತು ಅಭ್ಯಾಸಗಳು

ಸಮತೋಲಿತ ಆಹಾರ : ಸಂಸ್ಕರಿಸಿದ ಆಹಾರಗಳು ಮತ್ತು ಧೂಮಪಾನದಂತಹ ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸುವುದು ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಅದ್ಭುತಗಳನ್ನು ಮಾಡುತ್ತದೆ. ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಯಾವುದೇ ಸಂಭಾವ್ಯ ಟಿಬಿ ಸೋಂಕಿನ ವಿರುದ್ಧ ಹೋರಾಡಲು ಅಗತ್ಯವಾದ ಪೌಷ್ಠಿಕಾಂಶಗಳನ್ನು ನೀಡುತ್ತದೆ. ಪ್ರೋಟೀನ್ ಅನ್ನು ಸಹ ಕಡಿಮೆ ಮಾಡಬೇಡಿ, ಏಕೆಂದರೆ ಇದು ನಿಮ್ಮ ದೇಹದಾದ್ಯಂತ ಅಂಗಾಂಶಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ.

ಸಕ್ರಿಯರಾಗಿರಿ: ಬಹಳಷ್ಟು ದುಡಿಯುವ ಜನಸಂಖ್ಯೆಯು ತುಂಬಾ ಜಡ ಜೀವನಶೈಲಿಯನ್ನು ಹೊಂದಿದೆ, ಇದು ನಿಮ್ಮ ರೋಗನಿರೋಧಕ ಶಕ್ತಿ ಮತ್ತು ನಿಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ. ನಿಯಮಿತ ವ್ಯಾಯಾಮವು ನಿಮ್ಮ ದೇಹವನ್ನು ಬಲವಾಗಿರಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಆನಂದಿಸುವ ಚಟುವಟಿಕೆಗಳನ್ನು ಹುಡುಕಿ, ಅದು ಜಿಮ್ ಗೆ ಹೋಗುವುದು, ನೃತ್ಯ ಮಾಡುವುದು ಅಥವಾ ಕ್ರೀಡಾ ತಂಡಕ್ಕೆ ಸೇರುವುದು. ವಾರದ ಹೆಚ್ಚಿನ ದಿನಗಳಲ್ಲಿ ಕನಿಷ್ಠ 30 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮವನ್ನು ಗುರಿಯಾಗಿಸಿ.

ಸ್ವಚ್ಛತೆ ಮುಖ್ಯ: ಉತ್ತಮ ನೈರ್ಮಲ್ಯವು ಟಿಬಿ ವಿರುದ್ಧ ಪ್ರಬಲ ಅಸ್ತ್ರವಾಗಿದೆ, ಇದು ಸಕ್ರಿಯ ಟಿಬಿ ಹೊಂದಿರುವ ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಹರಡುತ್ತದೆ. ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿದ್ದ ನಂತರ. ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ ಮತ್ತು ಅಂಗಾಂಶಗಳನ್ನು ಸರಿಯಾಗಿ ವಿಲೇವಾರಿ ಮಾಡಿ.

ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ತಿಳಿದುಕೊಳ್ಳಿ: ಜನದಟ್ಟಣೆಯ, ಕಳಪೆ ಗಾಳಿಯಾಡುವ ಸ್ಥಳಗಳಲ್ಲಿ ಟಿಬಿ ಬೆಳೆಯುತ್ತದೆ. ನೀವು ಇಕ್ಕಟ್ಟಾದ ಸ್ಥಳದಲ್ಲಿ ವಾಸಿಸುತ್ತಿದ್ದರೆ, ಸಾಧ್ಯವಾದಾಗಲೆಲ್ಲಾ ತಾಜಾ ಗಾಳಿಯ ಪರಿಚಲನೆಗಾಗಿ ಕಿಟಕಿಗಳನ್ನು ತೆರೆಯಲು ಪ್ರಯತ್ನಿಸಿ. ಕೆಲಸ ಅಥವಾ ಶಾಲೆಯಲ್ಲಿ ಕಳಪೆ ವಾತಾಯನವಿದೆಯೇ ಎಂದು ಯಾರಿಗಾದರೂ ತಿಳಿಸಿ ಇದರಿಂದ ನೀವು ಸುಧಾರಿತ ಗಾಳಿಯ ಗುಣಮಟ್ಟವನ್ನು ಪ್ರತಿಪಾದಿಸಬಹುದು.

ತಪಾಸಣೆ ಮಾಡಿಸಿಕೊಳ್ಳಿ: ನೀವು ನಿರಂತರ ಕೆಮ್ಮು, ತೂಕ ನಷ್ಟ, ಜ್ವರ ಅಥವಾ ರಾತ್ರಿ ಬೆವರುವಿಕೆಯನ್ನು ಅನುಭವಿಸಿದರೆ, ಟಿಬಿ ಪರೀಕ್ಷೆ ಮಾಡಿಸಿಕೊಳ್ಳಿ. ಇತರರಿಗೆ ಹರಡುವುದನ್ನು ತಡೆಯಲು ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ನಿರ್ಣಾಯಕವಾಗಿದೆ. ಹೆಚ್ಚಿನ ಚಿಕಿತ್ಸಾಲಯಗಳು ಉಚಿತ ಅಥವಾ ಕಡಿಮೆ ವೆಚ್ಚದ ಟಿಬಿ ತಪಾಸಣೆಯನ್ನು ನೀಡುತ್ತವೆ.

ಮಾಹಿತಿ ಪಡೆಯಿರಿ: ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ಕ್ಷಯರೋಗದ ಬಗ್ಗೆ ಮಾಹಿತಿ ಪಡೆಯಿರಿ, ತಡೆಗಟ್ಟುವಿಕೆಯ ಬಗ್ಗೆ ಸಲಹೆಗಳನ್ನು ಪಡೆಯಿರಿ ಮತ್ತು ಇತ್ತೀಚಿನ ಸಂಶೋಧನೆಯ ಬಗ್ಗೆ ನವೀಕೃತವಾಗಿರಿ.
ಜೆನ್ ಝಡ್, ಈ ಅಭ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ನೀವು ಆರೋಗ್ಯಕರವಾಗಿ ಉಳಿಯುವ ಮತ್ತು ಟಿಬಿಯನ್ನು ಅದರ ಹಾದಿಯಲ್ಲಿ ನಿಲ್ಲಿಸುವ ಹಾದಿಯಲ್ಲಿರುತ್ತೀರಿ. ನೆನಪಿಡಿ, ಆರೋಗ್ಯಕರವಾಗಿ ನೀವು ನಿಮ್ಮನ್ನು ಮಾತ್ರವಲ್ಲ, ನಿಮ್ಮ ಪ್ರೀತಿಪಾತ್ರರನ್ನು ಮತ್ತು ಸಮುದಾಯವನ್ನು ಸುರಕ್ಷಿತವಾಗಿರಿಸುತ್ತೀರಿ.

ಶನಿವಾರ, ಮಾರ್ಚ್ 22, 2025

MLA sakary hike 2025

ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ವಿಧೇಯಕ. ಇಲ್ಲಿ ಇನ್ನುಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956 (1957ರ ಕರ್ನಾಟಕ ಅಧಿನಿಯಮ 2) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ రాజ్య ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ

ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಅಧಿನಿಯಮ, 2025 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

2. ಪ್ರಕರಣ 3ರ ತಿದ್ದುಪಡಿ.- ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ

ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956 (1957ರ ಕರ್ನಾಟಕ ಅಧಿನಿಯಮ 2) (ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 3ನೇ ಪ್ರಕರಣದಲ್ಲಿ,

(i) ಉಪಪ್ರಕರಣ (1)ರಲ್ಲಿ, "ಎಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳನ್ನು ಮತ್ತು "ನಾಲ್ಕು ಲಕ್ಷ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಐದು ಲಕ್ಷ ರೂಪಾಯಿಗಳ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ii) ಉಪಪ್ರಕರಣ (2)ರಲ್ಲಿ, "ಎಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳನ್ನು ಮತ್ತು "ನಾಲ್ಕು ಲಕ್ಷ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಐದು ಲಕ್ಷ ರೂಪಾಯಿಗಳ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

3. ಪ್ರಕರಣ 4ರ ತಿದ್ದುಪಡಿ.- ಮೂಲ ಅಧಿನಿಯಮದ 4ನೇ ಪ್ರಕರಣದಲ್ಲಿ,

(i) ಉಪಪ್ರಕರಣ (1)ರಲ್ಲಿ, "ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಎರಡು ಲಕ್ಷ ಐವತ್ತು ಸಾವಿರ ರೂಪಾಯಿಗಳ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ii) (2)ನೇ ಉಪಪ್ರಕರಣದಲ್ಲಿ, "ಇಪ್ಪತ್ತು ಸಾವಿರ ರೂಪಾಯಿಗಳ" ಎಂಬ ಪದಗಳ ಬದಲಿಗೆ "ಇಪ್ಪತ್ತೈದು ಸಾವಿರ ರೂಪಾಯಿಗಳ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

4. ಪ್ರಕರಣ 8ರ ತಿದ್ದುಪಡಿ.- ಮೂಲ ಅಧಿನಿಯಮದ 8ನೇ ಪ್ರಕರಣದ, (2)ನೇ ಉಪಪ್ರಕರಣದ, (ಡಿ) ಖಂಡದ ಮೊದಲನೇ ಪರಂತುಕದಲ್ಲಿ, " ಮೂರು ಸಾವಿರದ ಐದುನೂರು.

ಶುಕ್ರವಾರ, ಮಾರ್ಚ್ 21, 2025

2008 ರಿಂದ 2024 ರವರೆಗಿನ ಐಪಿಎಲ್ ವಿಜೇತರ ಪಟ್ಟಿ: 18ನೇ ಆವೃತ್ತಿಯಲ್ಲಿ ಗೆಲ್ಲೋರು ಯಾರು?

ಮಾರ್ಚ್ 22ರ ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ. ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಇದೀಗ ಪಂದ್ಯಕ್ಕೆ ಮಳೆ ಅಡ್ಡಿ ಎದುರಾಗಿದೆ. ಕೋಲ್ಕತ್ತಾದಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿದ ಟಿ20 ಲೀಗ್ ಆಗಿದ್ದು, ಜಗತ್ತಿನಾದ್ಯಂತದ ಅತ್ಯುತ್ತಮ ಕ್ರಿಕೆಟಿಗರನ್ನು ಒಳಗೊಂಡಿದೆ. ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲು, ಫ್ರಾಂಚೈಸಿಗಳು ಎರಡು ತಿಂಗಳ ಅವಧಿಯಲ್ಲಿ 16-17 ಪಂದ್ಯಗಳನ್ನು ಆಡುವ ಮೂಲಕ ಉತ್ತಮ ಪ್ರದರ್ಶನ ನೀಡಬೇಕು.

ಕಳೆದ 17 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಟ್ರೋಫಿ ಗೆಲ್ಲುವ ಮೂಲಕ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಹೊಂದಿವೆ. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೇವಲ ಎರಡು ತಂಡಗಳು 10 ಪ್ರಶಸ್ತಿಗಳನ್ನು ಗೆದ್ದಿರುವುದು ವಿಶೇಷ.

IPL 2025: ಭಾರಿ ಮಳೆ ಎಚ್ಚರಿಕೆ; ಹವಾಮಾನ ಇಲಾಖೆ ಮುನ್ಸೂಚನೆ; RCB vs KKR ಪಂದ್ಯ ನಡೆಯೋದು ಅನುಮಾನ!

ಐಪಿಎಲ್ ವಿಜೇತರ ಪಟ್ಟಿ

ರಾಜಸ್ಥಾನ ರಾಯಲ್ಸ್ 2008ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದುಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ 2023 ರಲ್ಲಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಮನಾಗಿ ಪ್ರಶಸ್ತಿ ಗೆದ್ದುಕೊಂಡಿತು. 2024ನೇ ಆವೃತ್ತಿಯಲ್ಲಿ ಕೆಕೆಆರ್ ಟ್ರೋಫಿಯನ್ನು ಗೆದ್ದುಕೊಂಡಿತು. ಐಪಿಎಲ್‌ನ 10 ತಂಡಗಳ ಪೈಕಿ ಈವರೆಗೂ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ರಶಸ್ತಿಯ ಬರ ಎದುರಿಸುತ್ತಿವೆ.

1. 2008 - ರಾಜಸ್ಥಾನ್ ರಾಯಲ್ಸ್

2. 2009 - ಡೆಕ್ಕನ್ ಚಾರ್ಜಸ್

3. 2010 - ಚೆನ್ನೈ ಸೂಪರ್ ಕಿಂಗ್ಸ್

4. 2011 - ಚೆನ್ನೈ ಸೂಪರ್ ಕಿಂಗ್ಸ್

5. 2012 - ಕೋಲ್ಕತ್ತಾ ನೈಟ್ ರೈಡರ್ಸ್

6. 2013 - ಮುಂಬೈ ಇಂಡಿಯನ್ಸ್

7. 2014 - ಕೋಲ್ಕತ್ತಾ ನೈಟ್ ರೈಡರ್ಸ್

8. 2015 - ಮುಂಬೈ ಇಂಡಿಯನ್ಸ್

9. 2016 - ಸನ್‌ರೈಸರ್ಸ್ ಹೈದರಾಬಾದ್

10. 2017 - ಮುಂಬೈ ಇಂಡಿಯನ್ಸ್

11. 2018 - ಚೆನ್ನೈ ಸೂಪರ್ ಕಿಂಗ್ಸ್

12. 2019 - ಮುಂಬೈ ಇಂಡಿಯನ್ಸ್

13. 2020 - ಮುಂಬೈ ಇಂಡಿಯನ್ಸ್

14. 2021 - ಚೆನ್ನೈ ಸೂಪರ್ ಕಿಂಗ್ಸ್

15. 2022 - ಗುಜರಾತ್ ಟೈಟಾನ್ಸ್

16. 2023 - ಚೆನ್ನೈ ಸೂಪರ್ ಕಿಂಗ್ಸ್

17. 2024 - ಕೋಲ್ಕತ್ತಾ ನೈಟ್ ರೈಡರ್ಸ್

🏏 ಕ್ರಿಕೆಟ್ ಹೈಲೈಟ್ಸ್, ಸ್ಕೋರ್ ವಿವರಗಳು

ಶುಕ್ರವಾರ, ಜನವರಿ 17, 2025

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಅಕ್ಬರನು ಯಾವ ವರ್ಷ ಗುಲಾಮಗಿರಿಯನ್ನು ರದ್ದು ಮಾಡಿದನು?

ಉತ್ತರ: 1562

ಪ್ರಶ್ನೆ 2: ಭಾರತೀಯ ದೇವಾಲಯಗಳ ತೊಟ್ಟಿಲು ಎಂದು ಯಾವುದನ್ನು ಕರೆಯುತ್ತಾರೆ?

ಉತ್ತರ: ಐಹೊಳೆ

ಪ್ರಶ್ನೆ 3: ʼದಕ್ಷಿಣ ಪಥೇಶ್ವರʼ ಇದು ಯಾರ ಬಿರುದು?

ಉತ್ತರ: ಇಮ್ಮಡಿ ಪುಲಕೇಶಿ

ಪ್ರಶ್ನೆ 4: ರವಿ ಕೀರ್ತಿ ಹೊರಡಿಸಿದ ಶಾಸನ ಯಾವುದು?

ಉತ್ತರ: ಐಹೊಳೆ

ಪ್ರಶ್ನೆ 5: ಬಾದಾಮಿ ಚಾಲುಕ್ಯರ ಕೊನೆಯ ಅರಸನ ಹೆಸರೇನು?

ಉತ್ತರ: 2ನೇ ಕೀರ್ತಿವರ್ಮ

ಪ್ರಶ್ನೆ 6: ಚಾಲುಕ್ಯ ಶೈಲಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ಮಂಗಳೇಶ

ಪ್ರಶ್ನೆ 7: ಮಲ್ಲಿನಾಥ ದೇವಾಲಯವು ಎಲ್ಲಿ ಕಂಡು ಬರುತ್ತದೆ?

ಉತ್ತರ: ಪಟ್ಟದಕಲ್ಲು

ಪ್ರಶ್ನೆ 8: ಚಾಲುಕ್ಯರ ನಿಜವಾದ ಸ್ಥಾಪಕನೆಂದು ಯಾರನ್ನು ಕರೆಯುತ್ತಾರೆ?

ಉತ್ತರ: 1ನೇ ಪುಲಕೇಶಿ

ಪ್ರಶ್ನೆ 9: ಸಿ.ಯು.ಕಿ. ಗ್ರಂಥ ಯಾರು ರಚಿಸಿದರು?

ಉತ್ತರ: ಹ್ಯೂಯೆನ್ ತ್ಸಾಂಗ್

ಪ್ರಶ್ನೆ 10: ವಾತಾಪಿಕೊಂಡ ದೇವ ಎಂಬ ಬಿರುದು ಯಾರು ಹೊಂದಿದ್ದರು?

ಉತ್ತರ: ಒಂದನೇ ನರಸಿಂಹವರ್ಮ

ಬಹು ಆಯ್ಕೆ ಪ್ರಶ್ನೆಗಳು




ಇತ್ತೀಚೆಗೆ ಸಾಲಮನ್ ದ್ವೀಪಗಳು ಕೆಳಗಿನ ಯಾವ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ?
ಎ. ಚೀನಾ. ಬಿ. ಜಪಾನ್.

ಸಿ. ಉತ್ತರ ಕೊರಿಯಾ. ಡಿ. ದಕ್ಷಿಣ ಕೊರಿಯಾ.

ಉತ್ತರ : ಎ

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೆಳಗಿನ ಯಾವ ಸ್ಥಾನಮಾನವನ್ನು ಕಲ್ಪಿಸಲಾಗಿದೆ?

ಎ. ಶಾಸನೀಯ ಸ್ಥಾನಮಾನ.
ಬಿ. ಸಂವಿಧಾನಾತ್ಮಕ ಸ್ಥಾನಮಾನ.
ಸಿ. ಶಾಸನೀಯೇತರ ಸ್ಥಾನಮಾನ.
ಡಿ. ನಿಗಮದ ಸ್ಥಾನಮಾನ.

ಉತ್ತರ : ಎ

ರಾಷ್ಟ್ರೀಯ ಮಹಿಳಾ ಆಯೋಗವು ಕೆಳಗಿನ ಯಾವ ಕಾರ್ಯಗಳನ್ನು ನಿರ್ವಹಿಸುತ್ತದೆ?

1. ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಅಧ್ಯಯನ ಚಟುವಟಿಕೆಗಳು.

2. ಮಹಿಳೆಯರ ಸಬಲೀಕರಣ.

3. ಮಹಿಳೆಯರಿಗೆ ಕಾನೂನಿನ ನೆರವು.

4. ಉದ್ಯೋಗಾವಕಾಶಗಳ ಸೃಷ್ಟಿ ಸಂಬಂಧಿತ ಚಟುವಟಿಕೆಗಳು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. ಒಂದು ಕಾರ್ಯ ಸರಿಯಾಗಿದೆ.
ಬಿ. ಎರಡು ಕಾರ್ಯಗಳು ಸರಿಯಾಗಿದೆ.
ಸಿ. ಮೂರು ಕಾರ್ಯಗಳು ಸರಿಯಾಗಿದೆ.
ಡಿ. ನಾಲ್ಕು ಕಾರ್ಯಗಳು ಸರಿಯಾಗಿವೆ.

ಉತ್ತರ : ಡಿ

ಇತ್ತೀಚೆಗೆ ಕೆಳಗಿನ ಯಾವ ಒಕ್ಕೂಟ ಶ್ರೀಲಂಕಾ ಅಧ್ಯಕ್ಷರ ಪ್ರಸ್ತಾಪವನ್ನು ತಿರಸ್ಕರಿಸಿದೆ?

ಎ. ತಮಿಳು ರಾಷ್ಟ್ರೀಯ ಒಕ್ಕೂಟ.

ಬಿ. ತಮಿಳು ಪ್ರಾದೇಶಿಕ ಒಕ್ಕೂಟ.

ಸಿ. ತಮಿಳು ರಾಷ್ಟ್ರೀಯ ಸ್ವಗೌರವ ಒಕ್ಕೂಟ.

ಡಿ. ತಮಿಳು ಅಂತರರಾಷ್ಟ್ರೀಯ ಒಕ್ಕೂಟ.

ಉತ್ತರ : ಎ

ಭಾರತ-ಶ್ರೀಲಂಕಾ-1987ರ ಒಪ್ಪಂದದ ನಂತರ ಕೆಳಗಿನ ಯಾವ ತಿದ್ದುಪಡಿಗಳನ್ನು ಶ್ರೀಲಂಕಾದ ಸಂವಿಧಾನಕ್ಕೆ ತರಲಾಯಿತು?

ಎ. 11ನೇ ತಿದ್ದುಪಡಿ.

ಬಿ. 13ನೇ ತಿದ್ದುಪಡಿ.

ಸಿ. 15ನೇ ತಿದ್ದುಪಡಿ.

ಡಿ.18ನೇ ತಿದ್ದುಪಡಿ.

ಉತ್ತರ : ಬಿ

ಪ್ರಸ್ತುತ ವರ್ಷದ ಆವೃತ್ತಿಯ ಡುರಾಂಡ್ ಕಪ್ ಕ್ರೀಡಾಕೂಟದಲ್ಲಿ ಕೆಳಗಿನ ಯಾವ ರಾಷ್ಟ್ರಗಳ ತಂಡಗಳು ಭಾಗವಹಿಸಲಿದೆ?

1. ಬಾಂಗ್ಲಾದೇಶ.‌

2. ಪಾಕಿಸ್ತಾನ.

3. ಭೂತಾನ್.‌

4. ನೇಪಾಳ.‌

5. ಶ್ರೀಲಂಕಾ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 3 ಮತ್ತು 4 →ಬಿ. 1, 2, 3 ಮತ್ತು 4

ಸಿ. 2 ಮತ್ತು 5 →ಡಿ. 3 ಮತ್ತು 5

ಉತ್ತರ : ಎ

ಜಂಜತಿಯ ಖೇಲ್ ಮಹೋತ್ಸವದಲ್ಲಿ ಕೆಳಗಿನ ಯಾವ ರಾಜ್ಯಗಳು ಸಮಗ್ರ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿವೆ?

1. ಒಡಿಸ್ಸಾ.

2. ತಮಿಳುನಾಡು.

3. ಕರ್ನಾಟಕ.

4. ಗುಜರಾತ್.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 →ಬಿ. 1 ಮತ್ತು 3

ಸಿ. 2 ಮತ್ತು 3 →ಡಿ. 3 ಮತ್ತು 4

ಉತ್ತರ : ಬಿ

ಭಾನುವಾರ, ಸೆಪ್ಟೆಂಬರ್ 29, 2024

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ......

🔍 ಭಾರತದ ಶಾಸನಗಳ ಪಿತಾಮಹ - ಅಶೋಕ..

🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ...

🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾಸನ ಯಾವುದು - ತಾಳಗುಂದ ಶಾಸನ..

🔍 ಕರ್ನಾಟಕದ ಪ್ರಪ್ರಥಮ ತಾಮ್ರಪಟ ಶಾಸನ - ಚಂದ್ರವಳ್ಳಿ ಶಾಸನ..

🔍 ಶಾಸನಗಳ ಕಾವ್ಯ ಎಂದು ಕರೆಯಲ್ಪಡುವ ಶಾಸನ - ಅಲಹಾಬಾದ್ ಶಾಸನ..

🔍 ಬ್ರಾಹ್ಮಿ ಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ..

🔍 ಸಂಸ್ಕೃತದಲ್ಲಿ ಅಧಿಕೃತವಾಗಿ ದಾಖಲೆಯಾಗಿರುವ ಅತ್ಯಂತ ಹಳೆಯ ಶಾಸನ - ಜುನಾಗಡ್ ಕಲ್ಲಿನ ಶಾಸನ..

🔍 ಮಯೂರವರ್ಮನ ಸೈನಿಕ ಸಾಧನೆಗಳನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ..

🔍 ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಬೋಧಿಸಿದ ಶಾಸನ - ಅಲಹಾಬಾದ್ ಸ್ತಂಭ ಶಾಸನ..

🔍 ಮೊಟ್ಟಮೊದಲ ಬಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ - ರುದ್ರದಾಮನ್..

🔍 ಶಕ ವರ್ಷವನ್ನು ಒಳಗೊಂಡ ದಕ್ಷಿಣ ಭಾರತದ ಮೊದಲ ಶಾಸನ - ಬಾದಾಮಿ ಬಂಡೆ ಶಾಸನ..

🔍 ಅಶೋಕನ ಹೆಸರು ಕಂಡ ಬಂದ ಶಾಸನ - ಮಸ್ಕಿ ಶಾಸನ..

🔍 6 ನೇ ವಿಕ್ರಮಾದಿತ್ಯನ ಬಗ್ಗೆ ತಿಳಿಸುವ ಶಾಸನ - ಗದಗ ಹಾಸನ..

🔍 ಸಂಸ್ಕೃತ ಭಾಷೆಯಲ್ಲಿ ನ ಮೊದಲ ಶಾಸನ - ಅಶೋಕನ ಮಸ್ಕಿ ಶಾಸನ..

🔍 ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟ ಭಾಷೆ - ಹೀಬ್ರೂ..

🔍 ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ - 13ನೇ ಬಂಡೆಗಲ್ಲು ಶಾಸನ..

ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು

*ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು


🔰 ಮಣ್ಣು ಸಂಶೋಧನಾ ಸಂಸ್ಥೆ
👉🏻 ಭೊಪಾಲ್.

🔰ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ
👉🏻 ಕಾನ್ಪುರ.

🔰 ತರಕಾರಿ ಸಂಶೋಧನಾ ಸಂಸ್ಥೆ
👉🏻ವಾರಣಾಸಿ.

🔰 ಶುಷ್ಕ ತೋಟಗಾರಿಕಾ ಸಂಶೋಧನಾ  ಸಂಸ್ಥೆ 
👉🏻 ಬಿಕನೆರ್

🔰 ಸೆಣಬು  ಸಂಶೋಧನಾ ಸಂಸ್ಥೆ 
👉🏻ಬ್ಯಾರಕ್ ಪುರ.

🔰 ಜೇನು ಸಂಶೋಧನಾ ಸಂಸ್ಥೆ
👉🏻ಪುಣೆ

🔰 ಮೆಕ್ಕೆಜೋಳ ಸಂಶೋಧನಾ ಸಂಸ್ಥೆ
👉🏻 ಮಂಡ್ಯ.

🔰 ನೆಲಗಡಲೆ ಸಂಶೋಧನಾ ಸಂಸ್ಥೆ
👉🏻ಜುನಾಗಡ್

🔰 ಖನಿಜ ಸಂಶೋಧನಾ ಸಂಸ್ಥೆ 
👉🏻 ಧನಾಬಾದ್

🔰 ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ 
👉🏻 ಕಲ್ಲಿಕೋಟೆ .

🔰 ಆಲೂಗಡ್ಡೆ ಸಂಶೋಧನಾ ಸಂಸ್ಥೆ 
👉🏻 ಶಿಮ್ಲಾ .

gk

📮ಮಾಹಿತಿ...

....ಹೆದ್ದಾರಿಗಳು ಮತ್ತು ಬಣ್ಣಗಳು....

🚖 ರಾಷ್ಟ್ರೀಯ ಹೆದ್ದಾರಿ - ಹಳದಿ ಮತ್ತು ಬಿಳಿ....

🛻 ರಾಜ್ಯ ಹೆದ್ದಾರಿ - ಹಸಿರು ಮತ್ತು ಬಿಳಿ....

🚓 ಜಿಲ್ಲಾ ರಸ್ತೆಗಳು - ಕಪ್ಪು ಮತ್ತು ಬಿಳಿ....

🛵 ಗ್ರಾಮೀಣ ರಸ್ತೆಗಳು - ಆರೆಂಜ್ ಮತ್ತು ಬಿಳಿ....

...........🚲  🚜  🚲............

🚒 ದೇಶದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ - NH 07 ( NH 44 )....

🚖 ಪ್ರಸ್ತುತ ಕರ್ನಾಟಕ ರಾಜ್ಯದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ - NH 13 ( ನೂತನ ಹೆಸರು - NH 50 ).....

🛺 ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ - ಉತ್ತರ ಕನ್ನಡ. ( ಕಡಿಮೆ -  ಕೊಡಗು )....

🛺 ಅತಿ ಹೆಚ್ಚು ರಾಜ್ಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ - ಬೆಳಗಾವಿ ( ಕಡಿಮೆ - ಬೆಂಗಳೂರು ನಗರ )....

🛵 ಅತಿ ಹೆಚ್ಚು ಜಿಲ್ಲಾ ರಸ್ತೆಗಳ ಹೊಂದಿರುವ ಜಿಲ್ಲೆ - ತುಮಕೂರು ( ಕಡಿಮೆ - ರಾಯಚೂರು )...


...........🚲  🚜  🚲............

      .............NHAI...........

🚑 National Highway authority of India....

🛵 ಸ್ಥಾಪನೆ - 1989....

🛵 ಕೇಂದ್ರ ಕಚೇರಿ - ನವದೆಹಲಿ..

🛵 ಕಾರ್ಯಾರಂಭ - 1989 ಏಪ್ರಿಲ್ 1...

🛵 ಉದ್ದೇಶ - ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆ....

ಕಾರ್ಮಿಕರ ಕಾಯ್ದೆಗಳು

ಕಾರ್ಮಿಕರ ಕಾಯ್ದೆಗಳು

☘ 1926:- ಟ್ರೇಡ್ ಯೂನಿಯನ್ ಕಾಯ್ದೆ

☘ 1947:- ಕೈಗಾರಿಕಾ ವಿವಾದಗಳ ಕಾಯ್ದೆ

☘1948:- ಕಾರ್ಖಾನೆ ಕಾಯ್ದೆ

☘ 1948:- ಕನಿಷ್ಠ ಕೂಲಿ ಕಾಯ್ದೆ

☘ 1952:- ಗಣಿ ಕಾಯ್ದೆ

☘ 1956:- ಕಂಪನಿ ಅಧಿನಿಯಮಗಳ ಕಾಯ್ದೆ

☘ 1961:- ಭೂ ಸುಧಾರಣಾ ಕಾಯ್ದೆ
             :- ಆದಾಯ ತೆರಿಗೆ ಕಾಯ್ದೆ
             :- ವರದಕ್ಷಣೆ ಕಾಯ್ದೆ

☘ 1976:- ಜೀತಗಾರಿಕೆ ನಿರ್ಮೂಲನಾ ಕಾಯ್ದೆ

☘ 1976:- ಸಮಾನ ವೇತನ ಕಾಯ್ದೆ

☘ 1986:- ಬಾಲಕಾರ್ಮಿಕ ನಿಷೇಧ ಕಾಯ್ದೆ

☘ 2005:- ಕೌಟುಂಬಿಕ ದೌರ್ಜನ್ಯ ಕಾಯ್ದೆ

☘ 2005:- ಮಾಹಿತಿ ಹಕ್ಕು ಅಧಿನಿಯಮ

☘ 2008:- ಅಸಂಘಟಿತ ಕಾರ್ಮಿಕರ ಭದ್ರತಾ ಕಾಯ್ದೆ

☘ 2010:- ಪ್ಲಾಂಟೇಶನ್ ಲೇಬರ್ ಕಾಯ್ದೆ
  

ಬುಧವಾರ, ಸೆಪ್ಟೆಂಬರ್ 25, 2024

ದೇಶದ ಮಹಿಳಾ ಮುಖ್ಯಮಂತ್ರಿಗಳ ಕಾರ್ಯಾವಧಿ ಮತ್ತು ಸಾಧನೆಗಳು


ಆತಿಶಿ ತಮ್ಮ 43ನೇ ವಯಸ್ಸಿನಲ್ಲಿ ಈ ಉನ್ನತ ಹುದ್ದೆಗೆ ಏರಿದ್ದಾರೆ. ಅಷ್ಟೇನೂ ಪ್ರಸಿದ್ಧರಲ್ಲದ ಮಹಿಳಾ ಲೀಡರ್ ಶಶಿಕಲಾ ಕಾಕೋಡ್ಕರ್ ಗೋವಾದ ಮೊದಲ ಸಿಎಂ ಆದದ್ದು 38ನೇ ವಯಸ್ಸಿನಲ್ಲಿ.

ಈವರೆಗಿನವರಲ್ಲಿ ಅವರೇ ಅತ್ಯಂತ ಕಿರಿಯ ಮಹಿಳಾ ಸಿಎಂ. ಬಿಎಸ್‌ಪಿ ನಾಯಕಿ ಮಾಯಾವತಿ 39ನೇ ವಯಸ್ಸಿನಲ್ಲಿ ಉತ್ತರ ಪ್ರದೇಶ ಸಿಎಂ ಹುದ್ದೆಗೆ ಏರಿದ್ದರು. 41 ನೇ ವಯಸ್ಸಿನಲ್ಲಿ ಒಡಿಶಾದ ಸಿಎಂ ಹುದ್ದೆಗೇರಿದ್ದವರು ಕಾಂಗ್ರೆಸ್‌ನ ನಂದಿನಿ ಸತ್ಪತಿ. 42ನೇ ವಯಸ್ಸಿನಲ್ಲಿ ಬಿಹಾರ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ. ಎಐಎಡಿಎಂಕೆಯ ಜಯಲಲಿತಾ 43ನೇ ವಯಸ್ಸಿನಲ್ಲಿ ತಮಿಳುನಾಡಿನ ಅತಿ ಕಿರಿಯ ಮತ್ತು ಮೊದಲ ಮಹಿಳಾ ಸಿಎಂ ಆದರು. ಬಿಜೆಪಿ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಉಮಾಭಾರತಿ 44ನೇ ವಯಸ್ಸಿನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾದರು. ಅಸ್ಸಾಮಿನ ಏಕೈಕ ಮಹಿಳಾ ಮತ್ತು ಮುಸ್ಲಿಮ್ ಸಿಎಂ ಎಂಬ ಹೆಗ್ಗಳಿಕೆಯಿರುವ ಅನ್ವರಾ ತೈಮೂರ್ ಆ ಹುದ್ದೆಗೇರಿದ್ದು 44ನೇ ವಯಸ್ಸಿನಲ್ಲಿ.

ದಿಲ್ಲಿಯ ನೂತನ ಸಿಎಂ ಆಗಿ ಆತಿಶಿ ಸಿಂಗ್ ಸೆಪ್ಟಂಬರ್ 21 ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ದಿಲ್ಲಿಯ ಮೂರನೇ ಮಹಿಳಾ ಸಿಎಂ ಆಗಿದ್ದಾರೆ. ಅಲ್ಲದೆ ಭಾರತದ ರಾಜಕೀಯದಲ್ಲಿ ಸಿಎಂ ಹುದ್ದೆಗೆ ಏರಿರುವ 17ನೇ ಮಹಿಳೆ ಅವರಾಗಿದ್ದಾರೆ. 

ಅರವಿಂದ ಕೇಜ್ರಿವಾಲ್ ಸಂಪುಟದಲ್ಲಿನ ಏಕೈಕ ಮಹಿಳಾ ಮಂತ್ರಿಯಾಗಿದ್ದ ಆತಿಶಿ, ಸಂಪುಟ ಸೇರ್ಪಡೆಯಾದದ್ದೇ ಒಂದು ಬಿಕ್ಕಟ್ಟಿನ ಹೊತ್ತಲ್ಲಿ. ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ ದಿಲ್ಲಿ ಅಬಕಾರಿ ಹಗರಣದಲ್ಲಿ ಜೈಲುಪಾಲಾದಾಗ ಆತಿಶಿ ಅವರನ್ನು 2023ರ ಮಾರ್ಚ್‌ನಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಹಣಕಾಸು, ಶಿಕ್ಷಣ, ಲೋಕೋಪಯೋಗಿ, ನೀರಾವರಿ, ಇಂಧನ ಸೇರಿದಂತೆ 14 ಖಾತೆಗಳ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಮಿಂಚಿದ್ದವರು ಆತಿಶಿ. 

2024ರ ಮಾರ್ಚ್‌ನಲ್ಲಿ ಕೇಜ್ರಿವಾಲ್ ಬಂಧನದಿಂದ ಸರಕಾರ ಮತ್ತು ಪಕ್ಷದಲ್ಲಿ ತಲೆದೋರಿದ ನಿರ್ವಾತವನ್ನು ತುಂಬಿದ್ದರು. 

ದಿಲ್ಲಿಯಲ್ಲಿ ನೀರಿನ ಸಮಸ್ಯೆ ವೇಳೆ, ನೀರು ಬಿಡಲು ತಗಾದೆ ತೆಗೆದಿದ್ದ ಹರ್ಯಾಣ ಸರಕಾರದ ವಿರುದ್ಧ 10 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಡಳಿತಾತ್ಮಕ ವಿಚಾರದಲ್ಲಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸರಕಾರದ ವಿರುದ್ಧವೇ ಸಂಘರ್ಷಕ್ಕಿಳಿಯುವುದಕ್ಕೂ ಹಿಂಜರಿದಿರಲಿಲ್ಲ. ದಿಲ್ಲಿ ಸಿಎಂ ಹುದ್ದೆಯಲ್ಲಿ ಕೇಜ್ರಿವಾಲ್ ಅವರ ರಬ್ಬರ್ ಸ್ಟಾಂಪ್ ಆಗಲಿದ್ದಾರೆ ಎಂಬ ಬಿಜೆಪಿ ಆರೋಪವೇನೇ ಇದ್ದರೂ, ಅವರ ಈವರೆಗಿನ ಸಾಧನೆಗಳೇ ಅವರೇನು ಎಂಬುದನ್ನು ಹೇಳುತ್ತವೆ. ಮುಂದಿನ ವರ್ಷ ದಿಲ್ಲಿ ಚುನಾವಣೆ ನಡೆಯಲಿದ್ದು, ಐದು ತಿಂಗಳ ಕಾಲ ಆತಿಶಿ ದಿಲ್ಲಿ ಸರಕಾರದ ಸಾರಥ್ಯ ವಹಿಸುತ್ತಾರೆ. 

ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ವಿಜಯ್ ಸಿಂಗ್ ಮತ್ತು ತ್ರಿಪ್ತಾ ವಾಹಿ ಅವರ ಪುತ್ರಿ ಆತಿಶಿ ಜನಿಸಿದ್ದು 1981ರ ಜೂನ್ 8ರಂದು. ಪಂಜಾಬಿ ಹಿನ್ನೆಲೆಯ ಕುಟುಂಬ. ದಿಲ್ಲಿ ವಿವಿ ಪದವೀಧರೆಯಾಗಿರುವ ಅವರು, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. 2013ರಲ್ಲಿ ಎಎಪಿ ಭಾಗವಾದ ಅವರು, ಆ ಸಲದ ವಿಧಾನಸಭೆ ಚುನಾವಣೆಯ ಹೊತ್ತಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಕರಡು ತಂಡದಲ್ಲಿ ಕೆಲಸ ಮಾಡಿದ್ದರು. 2015ರಲ್ಲಿ ಡಿಸಿಎಂ ಸಿಸೋಡಿಯಾ ಸಲಹೆಗಾರರ ತಂಡದಲ್ಲಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ವಿರುದ್ಧ ಸೋತರು. ಬಳಿಕ 2020ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ದಿಲ್ಲಿಯ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ಧರಂಬೀರ್ ಸಿಂಗ್ ಅವರನ್ನು ಆತಿಶಿ ಸೋಲಿಸಿದರು. 

ಆತಿಶಿ, ಈ ದೇಶ ಕಂಡ ಮಹಿಳಾ ಸಿಎಂಗಳ ಸಾಲಿನಲ್ಲಿ 17ನೆಯವರು. ಇತರ ಮಹಿಳಾ ಸಿಎಂಗಳು ಯಾರೆಂಬುದನ್ನು ಗಮನಿಸೋಣ. 

1. ಸುಚೇತಾ ಕೃಪಲಾನಿ: ಕಾಂಗ್ರೆಸ್ ನಾಯಕಿ. ಉತ್ತರ ಪ್ರದೇಶದ ಸಿಎಂ ಆಗಿ 1963ರ ಅಕ್ಟೋಬರ್ 2ರಂದು ತಮ್ಮ 55ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡರು. 3 ವರ್ಷ 162 ದಿನಗಳವರೆಗೆ ಹುದ್ದೆಯಲ್ಲಿದ್ದು, 1967ರ ಮಾರ್ಚ್ 13ರಂದು ಅಧಿಕಾರ ತೊರೆದರು. 

ನಂದಿನಿ ಸತ್ಪತಿ: ಕಾಂಗ್ರೆಸ್ ನಾಯಕಿ. ಒಡಿಶಾ ಸಿಎಂ ಆಗಿ 1972ರ ಜೂನ್ 14ರಂದು ಅಧಿಕಾರಕ್ಕೇರಿ, 1976ರ ಡಿಸೆಂಬರ್ 16ರಂದು 45ನೇ ವಯಸ್ಸಿನಲ್ಲಿ ಅಧಿಕಾರ ತೊರೆದರು. ಅಧಿಕಾರದಲ್ಲಿದ್ದದ್ದು 4 ವರ್ಷ 185 ದಿನಗಳವರೆಗೆ. 

3. ಶಶಿಕಲಾ ಕಾಕೋಧರ್: ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ನಾಯಕಿ. 1973ರ ಆಗಸ್ಟ್ 12ರಿಂದ 1979ರ ಎಪ್ರಿಲ್ 27ರವರೆಗೆ 5 ವರ್ಷ 258 ದಿನಗಳ ಕಾಲ ಗೋವಾ ಮುಖ್ಯಮಂತ್ರಿಯಾಗಿದ್ದರು. 

4. ಅನ್ವರಾ ತೈಮೂರ್: ಕಾಂಗ್ರೆಸ್ ನಾಯಕಿ. 1980ರ ಡಿಸೆಂಬರ್ 6ರಂದು 46ನೇ ವಯಸ್ಸಿನಲ್ಲಿ ಅಸ್ಸಾಂ ಸಿಎಂ ಆಗಿ ಅಧಿಕಾರ ವಹಿಸಿಕೊಂಡು, 1981ರ ಜೂನ್ 30ರವರೆಗೆ 206 ದಿನಗಳ ಕಾಲ ಅಧಿಕಾರದಲ್ಲಿದ್ದರು. ಇವತ್ತು ಮುಸ್ಲಿಮ್ ದ್ವೇಷವನ್ನು ಬಿತ್ತುತ್ತಿರುವ ಬಿಜೆಪಿ ರಾಜಕಾರಣದಿಂದ ನಲುಗಿದಂತಿರುವ ಅಸ್ಸಾಂ, ದಶಕಗಳಷ್ಟು ಹಿಂದೆಯೇ ಮೊದಲ ಮುಸ್ಲಿಮ್ ಮಹಿಳಾ ಮುಖ್ಯಮಂತ್ರಿಯನ್ನು ಈ ದೇಶಕ್ಕೆ ಕೊಟ್ಟಿತ್ತು ಎಂಬುದು ವಿಶೇಷವಾಗಿ ಉಲ್ಲೇಖಿಸಬೇಕಿರುವ ಸಂಗತಿ. 

5. ವಿ.ಎನ್.ಜಾನಕಿ: ಎಐಎಡಿಎಂಕೆ ನಾಯಕಿ. 1988ರ ಜನವರಿ 7ರಿಂದ 1988ರ ಜನವರಿ 30ರ ವರೆಗೆ 23 ದಿನಗಳಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. 

6. ಜೆ. ಜಯಲಲಿತಾ: ಎಐಎಡಿಎಂಕೆ ನಾಯಕಿ. ತಮಿಳಿಗರ ಪಾಲಿಗೆ ಅಮ್ಮನಾದ ಕನ್ನಡತಿ. ಜಯಲಲಿತಾ ಅವರ ಸಿನೆಮಾ ಬದುಕು, ಎಂಜಿಆರ್ ಜೊತೆಗಿನ ಅವರ ಬಾಂಧವ್ಯ, ಆಮೇಲೆ ಆಕೆಯನ್ನು ತುಳಿದು ಹಾಕಲು ನಡೆದ ಪ್ರಯತ್ನಗಳು, ಅದನ್ನು ಆಕೆ ಮೆಟ್ಟಿ ನಿಂತು ತಮಿಳುನಾಡು ರಾಜಕೀಯವನ್ನು ದಶಕಗಳ ಕಾಲ ನಿಯಂತ್ರಿಸಿದ್ದು ಎಲ್ಲವೂ ಒಂದು ರೋಮಾಂಚಕಾರಿ ಕತೆ. ಸಿನೆಮಾ ಮಾಡಬಹುದಾದ್ದು, ಸಿನೆಮಾ ಆಗಿವೆ ಕೂಡ. ಅಷ್ಟೇ ಭ್ರಷ್ಟಾಚಾರ ಆರೋಪಗಳನ್ನೂ ಎದುರಿಸಿ ಜೈಲಿಗೂ ಹೋಗಿ ಬಂದು ಕೊನೆಗೆ ನಿಗೂಢವಾಗಿ ನಿಧನರಾದರು ಜಯಲಲಿತಾ. 

ತಮಿಳುನಾಡು ಸಿಎಂ ಆಗಿ ಅಧಿಕಾರದಲ್ಲಿದ್ದ ಅವಧಿಗಳು: 1991ರ ಜೂನ್ 24ರಿಂದ 1996ರ ಮೇ 12; 2001ರ ಮೇ 14ರಿಂದ 2001ರ ಸೆಪ್ಟಂಬರ್ 21; 2002ರ ಮಾರ್ಚ್ 2ರಿಂದ 2006ರ ಮೇ 12; 2011ರ ಮೇ 16ರಿಂದ 2014ರ ಸೆಪ್ಟಂಬರ್ 27; 2015ರ ಮೇ 23ರಿಂದ 2016ರ ಡಿಸೆಂಬರ್ 5. ಅವರಒಟ್ಟು ಅಧಿಕಾರಾವಧಿ 14 ವರ್ಷ 124 ದಿನಗಳು. 

7. ಮಾಯಾವತಿ: ಬಿಎಸ್‌ಪಿ ನಾಯಕಿ. ಉತ್ತರ ಪ್ರದೇಶದ ಸಿಎಂ ಆಗಿ ಅವರು ಅಧಿಕಾರದಲ್ಲಿದ್ದ ಅವಧಿಗಳು: 1995ರ ಜೂನ್ 13ರಿಂದ 1995ರ ಅಕ್ಟೋಬರ್ 18; 1997ರ ಮಾರ್ಚ್ 21ರಿಂದ 1997ರ ಸೆಪ್ಟಂಬರ್ 21; 2002ರ ಮೇ 3ರಿಂದ 2003ರ ಆಗಸ್ಟ್ 29; 2007ರ ಮೇ 13ರಿಂದ 2012ರ ಮಾರ್ಚ್ 15. ಅವರ ಒಟ್ಟು ಅಧಿಕಾರಾವಧಿ 7 ವರ್ಷ 6 ದಿನಗಳು. 8. ರಾಜಿಂದರ್ ಕೌರ್ ಬಟ್ಟಲ್: ಕಾಂಗ್ರೆಸ್ ನಾಯಕಿ. ಪಂಜಾಬ್ ಸಿಎಂ ಆಗಿ 1996ರ ನವೆಂಬರ್ 21ರಂದು 51ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡು, 1997ರ ಫೆಬ್ರವರಿ 12ರವರೆಗೆ 83 ದಿನಗಳ ಕಾಲ ಮುಂದುವರಿದಿದ್ದರು. 

9. ರಾಬ್ರಿ ದೇವಿ: ಆರ್‌ಜೆಡಿ ನಾಯಕಿ. ಬಿಹಾರ ಸಿಎಂ ಆಗಿ ಅವರು ಅಧಿಕಾರದಲ್ಲಿದ್ದ ಅವಧಿಗಳು:1997ರ ಜುಲೈ 25ರಿಂದ 1999ರ ಫೆಬ್ರವರಿ 11; 1999ರ ಮಾರ್ಚ್ 9ರಿಂದ 2000 ಮಾರ್ಚ್ 2; 2000 ಮಾರ್ಚ್ 11ರಿಂದ 2005ರ ಮಾರ್ಚ್ 6ರವರೆಗೆ. ಅವರ ಒಟ್ಟು ಅಧಿಕಾರಾವಧಿ 7 ವರ್ಷ 190 ದಿನಗಳು. 

10. ಸುಷ್ಮಾ ಸ್ವರಾಜ್: ಬಿಜೆಪಿ ನಾಯಕಿ. 1998ರ ಅಕ್ಟೋಬರ್ 12ರಂದು ದಿಲ್ಲಿ ಸಿಎಂ ಆದ ಅವರು, 1998ರ ಡಿಸೆಂಬರ್ 3ರವರೆಗೆ 52 ದಿನಗಳ ಕಾಲ ಹುದ್ದೆಯಲ್ಲಿದ್ದರು. 

11. ಶೀಲಾ ದೀಕ್ಷಿತ್: ಕಾಂಗ್ರೆಸ್ ನಾಯಕಿ. 1998ರ ಡಿಸೆಂಬರ್ 3ರಂದು ದಿಲ್ಲಿ ಸಿಎಂ ಹುದ್ದೆಗೇರಿದ ಅವರು, 2013ರ ಡಿಸೆಂಬರ್ 28ರಂದು 75ನೇ ವಯಸ್ಸಿನಲ್ಲಿ ಅಧಿಕಾರ ತ್ಯಜಿಸಿದರು. ಅವರ ಅಧಿಕಾರಾವಧಿ 15 ವರ್ಷ 25 ದಿನಗಳು. 

12. ಉಮಾಭಾರತಿ: ಬಿಜೆಪಿ ನಾಯಕಿ. 2003ರ ಡಿಸೆಂಬರ್ 8ರಿಂದ 2004ರ ಆಗಸ್ಟ್ 23ರವರೆಗೆ 259 ದಿನಗಳ ಕಾಲ ಮಧ್ಯಪ್ರದೇಶ ಸಿಎಂ ಆಗಿದ್ದರು. 


16. ಮೆಹಬೂಬ ಮುಫ್ತಿ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ. 2016ರ ಎಪ್ರಿಲ್ 4ರಿಂದ 2018ರ ಜೂನ್ 19ರವರೆಗೆ 2 ವರ್ಷ 76 ದಿನಗಳ ಕಾಲ ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಸಿಎಂ ಆಗಿದ್ದರು. ಮೆಹಬೂಬ ಅವರ ತಂದೆ ಮುಫ್ತಿ ಮುಹಮ್ಮದ್ ಸಯೀದ್ ಕೂಡ ಜಮ್ಮು ಕಾಶ್ಮೀರ ಸಿಎಂ ಆಗಿದ್ದವರು. ಅವರು ದೇಶದ ಗೃಹ ಸಚಿವರಾಗಿದ್ದ ವೇಳೆ ಅವರ ಇನ್ನೋರ್ವ ಪುತ್ರಿ, ಮೆಹಬೂಬ ಸಹೋದರಿ ರುಬೈಯಾ ಸಯೀದ್ ಅವರನ್ನು 1989ರ ಡಿಸೆಂಬರ್ 8ರಂದು ಜೆಕೆಎಲ್‌ಎಫ್ ನಾಯಕ ಮುಹಮ್ಮದ್ ಯಾಸೀನ್ ಮಲಿಕ್ ಸೇರಿ ನಾಲ್ವರು ಉಗ್ರರು ಶ್ರೀನಗರದಲ್ಲಿ ಅಪಹರಿಸಿದ್ದರು. ಐದು ದಿನಗಳ ಬಳಿಕ ಬಂಧಿತ ಐವರು ಉಗ್ರರನ್ನು ಭಾರತ ಸರಕಾರ ಬಿಡುಗಡೆ ಮಾಡಿದ ಮೇಲೆ ರುಬೈಯಾ ಅವರನ್ನು ಉಗ್ರರು ಬಿಟ್ಟು ಕಳಿಸಿದ್ದರು. 

ಇಷ್ಟೂ ಸಿಎಂಗಳ ಪೈಕಿ ಮಮತಾ ಬ್ಯಾನರ್ಜಿ ತಮ್ಮದೇ ಬಲದ ಮೇಲೆ ರಾಜಕೀಯವಾಗಿ ಬೆಳೆದವರಾದರೆ, ಮಾಯಾವತಿ ದಲಿತ ಚಳವಳಿಯನ್ನು ಮುನ್ನಡೆಸಿದ ನಾಯಕಿ. 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಶೀಲಾ ದೀಕ್ಷಿತ್ ದಿಲ್ಲಿಗೆ ನೀಡಿದ್ದ ಕೊಡುಗೆಗಳಿಗಾಗಿ ನೆನಪಾಗುವಂಥವರು. ವಸುಂಧರಾ ರಾಜೇ ಈಚಿನವರೆಗೂ ರಾಜಸ್ಥಾನ ರಾಜಕಾರಣದ ಮೇಲೆ ಗಮನಾರ್ಹ ಹಿಡಿತ ಹೊಂದಿದ್ದವರು. ಸುಷ್ಮಾ ಸ್ವರಾಜ್ ಕೆಲವೇ ಸಮಯ ಅಧಿಕಾರದಲ್ಲಿದ್ದರೂ ಗಮನ ಸೆಳೆದವರು. ಉಮಾಭಾರತಿ ಅವರಂತೂ ಬಿಜೆಪಿಯ ಫೈರ್‌ಬ್ರಾಂಡ್ ನಾಯಕಿಯಾಗಿ ವಿವಾದಗಳಿಂದಲೇ ಸುದ್ದಿಯಾಗುವವರು.

ದಿಟ್ಟ ಹೋರಾಟಗಾರ್ತಿ ಮಮತಾ: 

ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಮಾತ್ರವಲ್ಲ, ದೇಶದಲ್ಲೇ 'ದೀದಿ' ಎಂದೇ ಖ್ಯಾತಿಯಿರುವ ಮಮತಾ ಬ್ಯಾನರ್ಜಿ ಸ್ವಯಂ ನಿರ್ಮಿತ ನಾಯಕಿ. ಎಷ್ಟು ಸರಳವೋ ಅಷ್ಟೇ ಮಹತ್ವಾಕಾಂಕ್ಷಿ. ಅವರೊಬ್ಬ ದಿಟ್ಟ ಹೋರಾಟಗಾರ್ತಿ ಎಂಬುದನ್ನು ಯಾರೂ ಅಲ್ಲಗಳೆಯುವುದು ಸಾಧ್ಯವಿಲ್ಲ. 

ಅವರು 1984ರ ಲೋಕಸಭೆ ಚುನಾವಣೆಯಲ್ಲಿ ಸೋಮನಾಥ್ ಚಟರ್ಜಿ ಅವರನ್ನು ಸೋಲಿಸಿದ ನಂತರ ರಾಷ್ಟ್ರ ರಾಜಕಾರಣದಲ್ಲಿ ದೈತ್ಯ ಸಂಹಾರಿ ಆಗಿ ಮಿಂಚಿದರು. ಆದರೆ ಅಷ್ಟಕ್ಕೇ ನಿಂತುಬಿಡಲಿಲ್ಲ. ಬೀದಿಗಿಳಿದರು, ಏಟು ತಿಂದರು. ವಿಶ್ರಾಂತಿಯಿಲ್ಲದಷ್ಟು ಪ್ರಯಾಣಿಸಿದರು. ತಮ್ಮದೇ ಆದ ಸಹವರ್ತಿಗಳು ಮತ್ತು ಕಾರ್ಯಕರ್ತರ ಪಡೆಯನ್ನು ಕಟ್ಟಿದರು. ಕಡೆಗೂ ತಮ್ಮ ಗುರಿಯನ್ನು ತಲುಪಿಯೇಬಿಟ್ಟಿದ್ದರು. ಅವರು ಕೊಟ್ಟ ಹೊಡೆತ ಎಂಥದಿತ್ತೆಂದರೆ ದಶಕಗಳಿಂದ ಬೇರೂರಿದ್ದ ಎಡರಂಗ ಬುಡ ಮೇಲಾಗಿತ್ತು. 

ಹೀಗೆ 2011ರಲ್ಲಿ ಎಡ ಪಕ್ಷವನ್ನು ಸೋಲಿಸುವುದಕ್ಕೂ ಮೊದಲು ಅವರು ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ ಮತ್ತು ತನ್ನನ್ನು ಬದಿಗೆ ಸರಿಸುವ ಪ್ರಯತ್ನಗಳಿಂದ ಸಿಟ್ಟಾಗಿದ್ದರು. ಕಾಂಗ್ರೆಸ್ ಎಂದಿಗೂ ಎಡಪಕ್ಷಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಮನವರಿಕೆಯಾಗಿತ್ತು. ಕಾಂಗ್ರೆಸ್‌ನಿಂದ ಹೊರನಡೆದು ಅವರು ಕಟ್ಟಿದ ತೃಣಮೂಲ ಕಾಂಗ್ರೆಸ್, ಬಂಗಾಳದ ರಾಜಕೀಯ ವ್ಯಾಕರಣವನ್ನೇ ಮರುರೂಪಿಸಿತು. 

ಆ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಸರಕಾರದಿಂದ ನಿರ್ಮಿಸಲಾದ ಬಾವಿಗಳು ಮೇಲ್ಜಾತಿಯವರು ವಾಸಿಸುವ ಅನೇಕ ಹಳ್ಳಿಗಳ ಪಾಲಾಗಿದ್ದವು. ಸರಕಾರದ ಯೋಜನೆಗಳು ಅನುಸೂಚಿತ ಜಾತಿಗಳ ಜನರು ವಾಸಿಸುತ್ತಿದ್ದ ಹಳ್ಳಿಗಳನ್ನು ತಲುಪುವುದೇ ವಿರಳವಾಗಿತ್ತು. ಮಾಯಾವತಿ ಅಧಿಕಾರದಲ್ಲಿದ್ದಾಗ ಮಾತ್ರವಲ್ಲ, ತಮ್ಮ ರಾಜಕೀಯದ ಭಾಗವಾಗಿಯೇ ಬದಲಾವಣೆಗೆ ಆದ್ಯತೆ ಕೊಟ್ಟರು. ಸಾಮಾಜಿಕ ನ್ಯಾಯ ಮತ್ತು ದಲಿತ ಪರ ಪ್ರತಿಪಾದನೆ ಮುನ್ನೆಲೆಗೆ ಬಂತು. 

ಇದೆಲ್ಲ ಹಿನ್ನೆಲೆಯಲ್ಲಿ ಅವರ ಇವತ್ತಿನ ನಿಷ್ಕ್ರಿಯತೆ ಒಂದು ದುರಂತದಂತೆ ಕಾಣಿಸುತ್ತದೆ. ಬಿಜೆಪಿಯನ್ನು ವಿರೋಧಿಸಲಾರದ ಸಂದಿಗ್ಧದಲ್ಲಿ ಸಿಲುಕಿದಂತಿರುವ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನೆಲ ಕಚ್ಚುವುದರೊಂದಿಗೆ ಪೂರ್ತಿ ಅಪ್ರಸ್ತುತರಾಗಿದ್ದಾರೆ. ಅವರ ಏಕಾಂಗಿ ಸ್ಪರ್ಧೆಯಿಂದ ವಿಪಕ್ಷಗಳ ಮತಗಳ ವಿಭಜನೆಯಾಗುತ್ತಿದೆ ಮತ್ತು ಅವರೂ ಗೆಲ್ಲುತ್ತಿಲ್ಲ. ಒಂದು ಕಾಲದಲ್ಲಿ ಬೆಂಕಿಯಂತಿದ್ದ ಬಿಎಸ್‌ಪಿ ಇಂದು ಶಕ್ತಿಹೀನವಾದಂತೆ ತೋರುತ್ತಿದೆ. 

ದಿಲ್ಲಿಯನ್ನು ಪರಿವರ್ತಿಸಿದ ಶೀಲಾ ದೀಕ್ಷಿತ್: 

15 ವರ್ಷ ದಿಲ್ಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ದೇಶದ ರಾಜಧಾನಿಯಲ್ಲೊಂದು ರೂಪಾಂತರವನ್ನೇ ತಂದವರು ಎನ್ನಲಾಗುತ್ತದೆ. ಸ್ವಚ್ಛವಾದ ಸಾರ್ವಜನಿಕ ಸಾರಿಗೆ, ದಿಲ್ಲಿ ಮೆಟ್ರೊ ಯೋಜನೆಯ ವಿಸ್ತರಣೆ ಮತ್ತು ಮೇಲ್ಸೇತುವೆಗಳ ನಿರ್ಮಾಣ ಈಎಲ್ಲದರಲ್ಲೂ ಅವರ ಪ್ರಯತ್ನಗಳು ವ್ಯಾಪಕ ಮೆಚ್ಚುಗೆ ಗಳಿಸಿದವು. ದಿಲ್ಲಿಗಾಗಿ ಮತ್ತದರ ನಿವಾಸಿಗಳ ಆಕಾಂಕ್ಷೆಗಳಿಗಾಗಿ ಹೃದಯದಿಂದ ಸೇವೆ ಸಲ್ಲಿಸಿದವರು ಎಂದೇ ಶಿಲಾ ದೀಕ್ಷಿತ್ ಅವರನ್ನು ಕೊಂಡಾಡಲಾಗುತ್ತದೆ. 

ರಾಜಕೀಯವಾಗಿ ಬೆಲೆ ತೆತ್ತ ಫೈರ್ ಬ್ರಾಂಡ್ ಉಮಾಭಾರತಿ:

ಸನ್ಯಾಸಿನಿಯಂತೆ ಕಾಣಿಸಿಕೊಳ್ಳುವುದರಲ್ಲೂ ರಾಜಕೀಯ ಲಾಭ ಪಡೆದವರು ಬಿಜೆಪಿಯ ಉಮಾ ಭಾರತಿ. ಬಿಜೆಪಿಯ ಫೈರ್ ಬ್ರಾಂಡ್ ನಾಯಕಿಯಾಗಿದ್ದಕ್ಕೆ ರಾಜಕೀಯವಾಗಿ ಬೆಲೆಯನ್ನೂ ತೆತ್ತವರು. 2005ರಲ್ಲಿ ಅಶಿಸ್ತಿನ ಕಾರಣಕ್ಕಾಗಿ ಬಿಜೆಪಿಯಿಂದ ಹೊರಹಾಕಲ್ಪಟ್ಟ ಅವರು ಮತ್ತೆ ಬಿಜೆಪಿಗೆ ಬಂದದ್ದು 2011ರಲ್ಲಿ. ರಾಜಮನೆತನದ ಊಳಿಗಮಾನ್ಯ ನೆಲ ಮಧ್ಯಪ್ರದೇಶದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಮಿಂಚಿದ್ದ ಅವರಿಗೆ ತಾನೂ ರಾಜಕೀಯ ವನವಾಸ ಅನುಭವಿಸಬೇಕಾಗಿ ಬಂದೀತೆಂಬ ಊಹೆ ಕೂಡ ಇರಲಿಲ್ಲ. ಕರ್ನಾಟಕದ ಹುಬ್ಬಳ್ಳಿಯಲ್ಲಿ 1994ರ ಕೋಮು ಗಲಭೆಯಲ್ಲಿನ ಪಾತ್ರಕ್ಕಾಗಿ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದಾಗ ರಾಜೀನಾಮೆ ನೀಡಬೇಕಾಯಿತು. ಕಷ್ಟಪಟ್ಟು ಸಂಪಾದಿಸಿದ್ದನ್ನು ಬಿಡಬೇಕಾಗಿ ಬಂದಿತ್ತು. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪ್ರತಿಷ್ಠಾಪಿಸುವ ತನ್ನ ಪಕ್ಷದ ನಿರ್ಧಾರದ ವಿರುದ್ಧ ಬಂಡಾಯವೆದ್ದರು. ಆರೆಸ್ಸೆಸ್ ಕೃಪಾಕಟಾಕ್ಷವಿದ್ದ ಅವರು ವಿವಾದಗಳಲ್ಲಿ ಸಿಲುಕಿದ ಬಳಿಕ ಮಾತೃ ಸಂಘ ಅವರ ಬೆಂಬಲಕ್ಕೆ ಸಾಕಷ್ಟು ನಿಲ್ಲಲಿಲ್ಲ. 

ವಸುಂಧರಾ ರಾಜೇ ಒಂಟಿತನ: 

ಒಂದು ಕಾಲದಲ್ಲಿ ರಾಜಸ್ಥಾನದ ಅಗ್ರ ಮಹಿಳೆಯಂತಿದ್ದ, ಬಿಜೆಪಿಯಲ್ಲೂ ಅಷ್ಟೇ ಪ್ರಬಲರಾಗಿದ್ದ ನಾಯಕಿ ಇಂದು ಮೂಲೆಗುಂಪಾದ ಹಿರಿಯ ಬಿಜೆಪಿಗರಲ್ಲಿ ಒಬ್ಬರು. ರಾಜಸ್ಥಾನ ರಾಜಕಾರಣದಲ್ಲಿ ಅವರಿಲ್ಲದೆ ಏನೂ ಇಲ್ಲ ಎನ್ನುವ ಕಾಲ ಮುಗಿದುಹೋಗಿದೆ. ಮಗನ ರಾಜಕೀಯ ಭವಿಷ್ಯ ರೂಪಿಸುವುದಕ್ಕಾಗಿಯೇ ಅವರ ಶಕ್ತಿಯೆಲ್ಲ ವ್ಯಯವಾಗುತ್ತಿದೆ ಎಂಬ ಟೀಕೆಗಳೂ ಕೇಳಿಬಂದಿತ್ತು. ಒಂದು ದಶಕಕ್ಕೂ ಹೆಚ್ಚು ಕಾಲ ರಾಜಸ್ಥಾನದಲ್ಲಿ ಪಂಚಾಯತ್‌ನಿಂದ ಸಂಸತ್ತಿನವರೆಗಿನ ಎಲ್ಲಾ ಚುನಾವಣೆಗಳಿಗೆ ಪಕ್ಷದ ಟಿಕೆಟ್‌ಗಳನ್ನು ನಿರ್ಧರಿಸಿದವರಾಗಿದ್ದ ವಸುಂಧರಾ ಮಾತಿಗೆ ಈಗ ಯಾವ ಬೆಲೆಯೂ ಇಲ್ಲ. ಕಡೇ ಪಕ್ಷ ಅವರ ಅಭಿಪ್ರಾಯಗಳನ್ನು ಸೌಜನ್ಯಕ್ಕಾದರೂ ಪರಿಗಣಿಸುವವರಿಲ್ಲ. ಮೋದಿ-ಶಾ ಜೊತೆಗಿನ ವಸುಂಧರಾ ವೈಮನಸ್ಸು ಅವರ ರಾಜಕೀಯವನ್ನು ಹೆಚ್ಚು ಕಡಿಮೆ ಮುಗಿಸಿಬಿಟ್ಟಿದೆ. 

ಬಿಕ್ಕಟ್ಟಿನ ಕಾಲದ ನಾಯಕಿ ಸುಷ್ಮಾ: 

ಸುಷ್ಮಾ ಸ್ವರಾಜ್ ಅವರು 1998ರ ಅಕ್ಟೋಬರ್‌ನಲ್ಲಿ ದಿಲ್ಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ಅಧಿಕಾರದಲ್ಲಿ ಇದ್ದದ್ದು ಕೇವಲ 52 ದಿನಗಳಾದರೂ, ಅದು ಅವರ ವಿಶಿಷ್ಟ ರಾಜಕೀಯ ಜೀವನದಲ್ಲಿ ಮಹತ್ವದ ಮೈಲಿಗಲ್ಲು. ಬಿಜೆಪಿಯ ಆಂತರಿಕ ಅಸ್ಥಿರತೆ, ಗಗನಕ್ಕೇರಿದ್ದ ಈರುಳ್ಳಿ ಬೆಲೆ, ಜನರ ಅಸಮಾಧಾನದ ನಡುವೆಉಂಟಾದ ಬಿಕ್ಕಟ್ಟಿನ ಹೊತ್ತಲ್ಲಿ ಅವರು ನಾಯಕತ್ವವನ್ನು ಕೈಗೆ ತೆಗೆದುಕೊಳ್ಳಬೇಕಾಗಿ ಬಂದಿತ್ತು. 1998ರ ಅಸೆಂಬ್ಲಿ ಚುನಾವಣೆಗೆ ಸ್ವಲ್ಪ ಮೊದಲು ತಲೆದೋರಿದ್ದ ಆ ಪ್ರಕ್ಷುಬ್ಧತೆ ಹಿಂದಿನ ಇಬ್ಬರು ಬಿಜೆಪಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಕಾರಣವಾಗಿತ್ತು. ಸವಾಲಿನ ಕಾಲದಲ್ಲಿ ಸುಷ್ಮಾ ಸಾರಥ್ಯ ವಹಿಸಬೇಕಾಗಿತ್ತು. ಅವರ ಅಧಿಕಾರದ ಅಲ್ಪಾವಧಿ ಭಾರತದ ರಾಜಕೀಯದಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರಕ್ಕೆ ಸಾಕ್ಷಿಯಂತೆ ದಾಖಲಾಗಿದೆ. 

ಈಗ, ಅದಾಗಿ 26 ವರ್ಷಗಳ ನಂತರ ಅದೇ ದಿಲ್ಲಿಗೆ ಮತ್ತೊಮ್ಮೆ ಮಹಿಳಾ ಲೀಡರ್ ಸಿಎಂ ಆಗಿದ್ದಾರೆ. ಆತಿಶಿ ಕೂಡ ಸಿಎಂ ಹುದ್ದೆ ವಹಿಸಿಕೊಂಡಿರುವುದು ಬಿಕ್ಕಟ್ಟಿನ ಹೊತ್ತಿನಲ್ಲಿಯೇ ಎಂಬುದು ಗಮನೀಯ. ಸುಷ್ಮಾ ಅವರಂತೆಯೇ ಅತಿಶಿ ಕೂಡ ಪಕ್ಷದೊಳಗಿನ ಬಿಕ್ಕಟ್ಟಿನ ಸಮಯದಲ್ಲಿ ನಿರ್ಣಾಯಕ ಅಸೆಂಬ್ಲಿ ಚುನಾವಣೆಗಳಿಗೆ ಕೆಲವೇ ತಿಂಗಳುಗಳ ಮೊದಲು ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು.








ಮಂಗಳವಾರ, ಸೆಪ್ಟೆಂಬರ್ 24, 2024

me

🪀 ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಲು ಲಿಂಕನ್ನು ಒತ್ತಿ. 
👇👇👇👇👇👇👇👇


✍️ Blogger Follow me
👇👇👇👇👇👇👇👇👉https://somalinggovernmentemployees76.blogspot.com/Blogger


🎞️ YouTube Channel Follow me 
👇👇👇👇👇👇👇👇👇👉https://youtube.com/@somalingupparkawalga76?si=LJapmR94csrqMRjuYouTube


📲 Face Book 📚 
👇👇👇👇👇👇👇👇👉https://m.facebook.com/somalingm.uppar.9/?profile_tab_item_selected=aboutFace Book

✍️ Instagram 👇👇👇👇👇👇👇👇👇👇👉👉https://www.instagram.com/somalingmuppar76/Instagram


✍️ Telegram Follower 👉👇👇👇👇👇👇👇👉https://t.me/GrampanchayatkawalgaTelegram

✍️🎞️ Sharechat Follower 👇👇👇👇👇👉https://youtube.com/@somalingupparkawalga76?si=qRoR37nsyLPf0XsrSharechat

ಶುಕ್ರವಾರ, ಸೆಪ್ಟೆಂಬರ್ 06, 2024

Horticulture Bidar



Share Market



see now

Credit Scrore



NTSE



Hostel pre matrice boys hostel chincholi



ಭಾನುವಾರ, ಆಗಸ್ಟ್ 11, 2024

ಮಾರ್ಚ 2023 ಪ್ರಥಮ ಭಾಷೆ ಕನ್ನಡ

2023
1. ದಿಗಂತʼ ಪದವು ಈ ಸಂಧಿಗೆ ಉದಾಹರಣೆಯಾಗಿದೆ = ಜಶ್ತ್ವ ಸಂಧಿ
2. ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಬಳಸುವ ಲೇಖನ ಚಿಹ್ನೆ = ಉದ್ಧರಣ ಚಿಹ್ನೆ 
3. ಬೆಟ್ಟದಾವರೆ ʼ ಪದವು ಈ ಸಮಾಸಕ್ಕೆ ಉದಾಹೃಣೆಯಾಗಿದೆ. = ತತ್ಪುರುಷʼ ಸಮಾಸ
4. ಮಾಡುʼ ಧಾತುವಿನ ವಿದ್ಯರ್ಥಕ ರೂಪ = ಮಾಡಲಿ
5. ಸಾವಿತ್ರಿಗೆʼ ಈ ಪದವದಲ್ಲಿರುವ ವಿಭಕ್ತಿ = ಚತುರ್ಥಿ 
6. ಧಗಧಗʼ ಪದವು ಈ ಅವ್ಯಯಕ್ಕೆ ಸೇರಿದೆ = ಅನುಕರಣಾವ್ಯಯ
7. ವರ್ಗೀಯ ವ್ಯಂಜನಾಕ್ಷರಗಳು : 25 :: ಅವರ್ಗೀಯ ವ್ಯಂಜನಾಕ್ಷರಗಳು :: 9
8. ಹಾಲ್ಜೇನು : ಜೋಡಿನುಡಿ :: ಬೇಡಬೇಡ : ದ್ವಿರಕ್ತಿ 
9 ಪರ್ವತ : ರೂಢನಾಮ :: ಧರ್ಮರಾಯ : ಅಂಕಿತನಾಮ 
10 ಮ್ಯಾಗ : ಮೇಲೆ :: ಸಕ್ಕಾರಿ : ಸಕ್ಕರೆ

ಶನಿವಾರ, ಆಗಸ್ಟ್ 10, 2024

ಆತ್ಮೀಯರೇ ಇದನ್ನು ಉಳಿಸಿ ಮತ್ತು ಸುರಕ್ಷಿತವಾಗಿ ಇರಿಸಿ

ಆತ್ಮೀಯರೇ ಇದನ್ನು ಉಳಿಸಿ ಮತ್ತು ಸುರಕ್ಷಿತವಾಗಿ ಇರಿಸಿ. ವಾಟ್ಸಾಪ್ ನಲ್ಲಿ ಇಂತಹ ಪೋಸ್ಟ್ ಗಳು ಬರುವುದು ಅಪರೂಪ*
...
7 ದಿನಗಳು = 1 ವಾರ
4 ವಾರಗಳು = 1 ತಿಂಗಳು,
2 ತಿಂಗಳು = 1 ಋತು
6 ಋತುಗಳು = 1 ವರ್ಷ,
100 ವರ್ಷಗಳು = 1 ಶತಮಾನ
10 ಶತಮಾನ = 1 ಸಹಸ್ರಮಾನ,
432 ಸಹಸ್ರಮಾನ = 1 ಯುಗ
2 ಯುಗಗಳು = 1 ದ್ವಾಪರ ಯುಗ,
3 ಯುಗಗಳು = 1 ತ್ರೇತಾ ಯುಗ,
4 ಯುಗಗಳು = ಸತ್ಯಯುಗ
ಸತ್ಯಯುಗ + ತ್ರೇತಾಯುಗ + ದ್ವಾಪರಯುಗ + ಕಲಿಯುಗ = 1 ಮಹಾಯುಗ
72 ಮಹಾಯುಗ = ಮನ್ವಂತರ,
1000 ಮಹಾಯುಗ = 1 ಕಲ್ಪ
1 ನಿತ್ಯ ಪ್ರಳಯ = 1 ಮಹಾಯುಗ (ಭೂಮಿಯ ಮೇಲಿನ ಜೀವನ ಕೊನೆಗೊಳ್ಳುತ್ತದೆ ಮತ್ತು ನಂತರ ಪ್ರಾರಂಭವಾಗುತ್ತದೆ)
1 ನೈಮಿತಿಕ ಪ್ರಳಯ = 1 ಕಲ್ಪ (ದೇವರ ಅಂತ್ಯ ಮತ್ತು ಜನನ)
ಮಹಾಲಯ = 730 ಕಲ್ಪಗಳು (ಬ್ರಹ್ಮನ ಅಂತ್ಯ ಮತ್ತು ಜನನ)
ಇದು ಇಡೀ ಪ್ರಪಂಚದಲ್ಲಿಯೇ ಅತಿ ದೊಡ್ಡ ಮತ್ತು ವೈಜ್ಞಾನಿಕ ಸಮಯದ ಲೆಕ್ಕಾಚಾರದ ವ್ಯವಸ್ಥೆಯಾಗಿದೆ. ಇದು ನಮ್ಮ ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಇದು ನಾವು ಹೆಮ್ಮೆಪಡುವ ನಮ್ಮ ಭಾರತ.
ಎರಡು ಲಿಂಗಗಳು: ಗಂಡು ಮತ್ತು ಹೆಣ್ಣು.
ಎರಡು ಪಕ್ಷಗಳು: ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ.
ಎರಡು ಪೂಜೆಗಳು: ವೈದಿಕಿ ಮತ್ತು ತಂತ್ರಿಕಿ (ಪುರಾಣೋಕ್ತ).
ಎರಡು ಆಯನಗಳು: ಉತ್ತರಾಯಣ ಮತ್ತು ದಕ್ಷಿಣಾಯಣ.
ಮೂರು ದೇವರುಗಳು: ಬ್ರಹ್ಮ, ವಿಷ್ಣು, ಶಂಕರ.
ಮೂರು ದೇವತೆಗಳು: ಮಹಾ ಸರಸ್ವತಿ, ಮಹಾಲಕ್ಷ್ಮಿ, ಮಹಾ ಗೌರಿ.
ಮೂರು ಲೋಕಗಳು: ಭೂಮಿ, ಆಕಾಶ, ಹೇಡಸ್.
ಮೂರು ಗುಣಗಳು: ಸತ್ವಗುಣ, ರಜೋಗುಣ, ತಮೋಗುಣ.
ಮೂರು ಸ್ಥಿತಿಗಳು: ಘನ, ದ್ರವ, ಗಾಳಿ.
ಮೂರು ಹಂತಗಳು: ಪ್ರಾರಂಭ, ಮಧ್ಯ, ಅಂತ್ಯ.
ಮೂರು ಹಂತಗಳು: ಬಾಲ್ಯ, ಯೌವನ, ವೃದ್ಧಾಪ್ಯ.
ಮೂರು ಸೃಷ್ಟಿಗಳು: ದೇವ್, ಡೆಮನ್, ಮಾನವ್.
ಮೂರು ಸ್ಥಿತಿಗಳು: ಎಚ್ಚರ, ಸತ್ತ, ಪ್ರಜ್ಞಾಹೀನ.
ಮೂರು ಕಾಲಗಳು: ಭೂತ, ಭವಿಷ್ಯ, ವರ್ತಮಾನ.
ಮೂರು ನಾಡಿಗಳು: ಇಡಾ, ಪಿಂಗಲಾ, ಸುಷುಮ್ನಾ.
ಮೂರು ಸಂಜೆ: ಬೆಳಿಗ್ಗೆ, ಮಧ್ಯಾಹ್ನ, ಸಂಜೆ.
ಮೂರು ಶಕ್ತಿಗಳು: ಇಚ್ಛಾಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ.
ಚಾರ್ ಧಾಮ್: ಬದರಿನಾಥ್, ಜಗನ್ನಾಥ ಪುರಿ, ರಾಮೇಶ್ವರಂ, ದ್ವಾರಕಾ.
ನಾಲ್ಕು ಋಷಿಗಳು: ಸನತ್, ಸನಾತನ, ಸನಂದ್, ಸನತ್ ಕುಮಾರ್.
ನಾಲ್ಕು ವರ್ಣಗಳು: ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು.
ನಾಲ್ಕು ನಿಯಮಗಳು: ಸಾಮ, ಬೆಲೆ, ಶಿಕ್ಷೆ, ವ್ಯತ್ಯಾಸ.
ನಾಲ್ಕು ವೇದಗಳು: ಸಾಮವೇದ, ಅಂಗವೇದ, ಯಜುರ್ವೇದ, ಅಥರ್ವವೇದ.
ನಾಲ್ಕು ಮಹಿಳೆಯರು: ತಾಯಿ, ಹೆಂಡತಿ, ಸಹೋದರಿ, ಮಗಳು.
ನಾಲ್ಕು ಯುಗಗಳು: ಸತ್ಯ ಯುಗ, ತ್ರೇತಾ ಯುಗ, ದ್ವಾಪರ ಯುಗ, ಕಲಿಯುಗ.
ನಾಲ್ಕು ಬಾರಿ: ಬೆಳಿಗ್ಗೆ, ಸಂಜೆ, ಹಗಲು, ರಾತ್ರಿ.
ನಾಲ್ಕು ಅಪ್ಸರೆಯರು: ಊರ್ವಶಿ, ರಂಭಾ, ಮೇನಕಾ, ತಿಲೋತ್ತಮ.
ನಾಲ್ಕು ಗುರುಗಳು: ತಾಯಿ, ತಂದೆ, ಶಿಕ್ಷಕ, ಆಧ್ಯಾತ್ಮಿಕ ಗುರು.
ನಾಲ್ಕು ಪ್ರಾಣಿಗಳು: ಜಲಚರ, ಭೂಮಿ, ಉಭಯಚರ, ಉಭಯಚರ.
ನಾಲ್ಕು ಜೀವಿಗಳು: ಅಂದಾಜ್, ಪಿಂಡಾಜ್, ಸ್ವೇದಜ್, ಉದ್ಭಿಜ.
ನಾಲ್ಕು ಪದಗಳು: ಓಂಕಾರ, ಅಕಾರ, ಉಕಾರ, ಮಕರ.
ನಾಲ್ಕು ಆಶ್ರಮಗಳು: ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ, ಸನ್ಯಾಸ.
ನಾಲ್ಕು ಆಹಾರಗಳು: ಆಹಾರ, ಪಾನೀಯ, ಲೇಹ್ಯ, ಚೋಷ್ಯ.
ನಾಲ್ಕು ಪುರುಷಾರ್ಥಗಳು: ಧರ್ಮ, ಅರ್ಥ, ಕಾಮ, ಮೋಕ್ಷ.
ನಾಲ್ಕು ವಾದ್ಯಗಳು: ತತ್, ಸುಶೀರ್, ಅವನದ್ವ, ಘನ್.
ಐದು ಅಂಶಗಳು: ಭೂಮಿ, ಆಕಾಶ, ಬೆಂಕಿ, ನೀರು, ಗಾಳಿ.
ಐದು ದೇವರುಗಳು: ಗಣೇಶ, ದುರ್ಗ, ವಿಷ್ಣು, ಶಂಕರ್, ಸೂರ್ಯ.
ಐದು ಇಂದ್ರಿಯಗಳು: ಕಣ್ಣು, ಮೂಗು, ಕಿವಿ, ನಾಲಿಗೆ, ಚರ್ಮ.
ಐದು ಕ್ರಿಯೆಗಳು: ರುಚಿ, ರೂಪ, ವಾಸನೆ, ಸ್ಪರ್ಶ, ಶಬ್ದ.
ಐದು ಬೆರಳುಗಳು: ಹೆಬ್ಬೆರಳು, ತೋರುಬೆರಳು, ಮಧ್ಯದ ಬೆರಳು, ಉಂಗುರ ಬೆರಳು, ಕಿರುಬೆರಳು.
ಐದು ಪೂಜಾ ಪರಿಹಾರಗಳು: ಪರಿಮಳ, ಹೂವು, ಧೂಪ, ದೀಪ, ನೈವೇದ್ಯ.
ಐದು ಅಮೃತಗಳು: ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ.
ಐದು ಭೂತಗಳು: ಭೂತ, ಪಿಶಾಚಿ, ವೈಟಲ್, ಕೂಷ್ಮಾಂಡ, ಬ್ರಹ್ಮರಾಕ್ಷಸ.
ಐದು ರುಚಿಗಳು: ಸಿಹಿ, ಹುಳಿ, ಹುಳಿ, ಉಪ್ಪು, ಕಹಿ.
ಐದು ವಾಯುಗಳು: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ.
ಪಂಚೇಂದ್ರಿಯಗಳು: ಕಣ್ಣು, ಮೂಗು, ಕಿವಿ, ನಾಲಿಗೆ, ಚರ್ಮ, ಮನಸ್ಸು.
ಐದು ಆಲದ ಮರಗಳು: ಸಿದ್ಧವತ್ (ಉಜ್ಜಯಿನಿ), ಅಕ್ಷಯವತ್ (ಪ್ರಯಾಗ್ರಾಜ್), ಬೋಧಿವತ್ (ಬೋಧಗಯಾ), ವಂಶವತ್ (ವೃಂದಾವನ), ಸಾಕ್ಷಿವತ್ (ಗಯಾ).
ಐದು ಎಲೆಗಳು: ಮಾವು, ಪೀಪಲ್, ಆಲದ, ಗುಲಾರ್, ಅಶೋಕ.
ಐವರು ಹುಡುಗಿಯರು: ಅಹಲ್ಯಾ, ತಾರಾ, ಮಂಡೋದರಿ, ಕುಂತಿ, ದ್ರೌಪದಿ.
ಆರು ತು: ಚಳಿಗಾಲ, ಬೇಸಿಗೆ, ಮಳೆ, ಶರತ್ಕಾಲ, ವಸಂತ, ಚಳಿಗಾಲ.
ಜ್ಞಾನದ ಆರು ಭಾಗಗಳು: ಶಿಕ್ಷಣ, ಕಲ್ಪ, ವ್ಯಾಕರಣ, ನಿರುಕ್ತ, ಶ್ಲೋಕಗಳು, ಜ್ಯೋತಿಷ್ಯ.
ಆರು ಕಾರ್ಯಗಳು: ದೇವರ ಪೂಜೆ, ಗುರುವಿನ ಆರಾಧನೆ, ಸ್ವಯಂ ಅಧ್ಯಯನ, ಸಂಯಮ, ತಪಸ್ಸು, ದಾನ.
ಆರು ದೋಷಗಳು: ಕಾಮ, ಕ್ರೋಧ, ವಸ್ತು (ಅಹಂಕಾರ), ಲೋಭ (ದುರಾಸೆ), ಬಾಂಧವ್ಯ, ಸೋಮಾರಿತನ.
ಏಳು ಶ್ಲೋಕಗಳು: ಗಾಯತ್ರಿ, ಉಷ್ನಿಕ್, ಅನುಷ್ಟುಪ್, ವೃಹತಿ, ರೇಖೆ, ತ್ರಿಷ್ಟುಪ್, ಜಗತಿ.
ಏಳು ಸ್ವರಗಳು: ಸ, ರೇ, ಗ, ಮ, ಪ, ಧ, ನಿ.
ಏಳು ಟಿಪ್ಪಣಿಗಳು: ಷಡಜ್, ಶಭ್, ಗಾಂಧಾರ, ಮಧ್ಯಮ, ಪಂಚಮ, ಧೈವತ್, ನಿಷಾದ.
ಏಳು ಚಕ್ರಗಳು: ಸಹಸ್ರಾರ, ಆಜ್ಞಾ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಷ್ಠಾನ, ಮೂಲಾಧಾರ.
ಏಳು ದಿನಗಳು: ಸೂರ್ಯ, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ.
ಏಳು ಮಣ್ಣು: ಗೌಶಾಲ, ಕುದುರೆ, ಹತಿಸಲ್, ರಾಜದ್ವಾರ, ಬಾಂಬಿಯ ಮಣ್ಣು, ನದಿ ಸಂಗಮ, ಕೊಳ.
ಏಳು ಖಂಡಗಳು: ಜಂಬೂದ್ವೀಪ (ಏಷ್ಯಾ), ಪ್ಲಾಕ್ಷದ್ವೀಪ, ಶಾಲ್ಮಲಿದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಾಕದ್ವೀಪ, ಪುಷ್ಕರದ್ವೀಪ.
ಏಳು ಋಷಿಗಳು: ವಶಿಷ್ಠ, ವಿಶ್ವಾಮಿತ್ರ, ಕಣ್ವ, ಭಾರದ್ವಾಜ, ಅತ್ರಿ, ವಾಮದೇವ, ಸೌನಕ.
ಏಳು ಋಷಿಗಳು: ವಶಿಷ್ಠ, ಕಶ್ಯಪ, ಅತ್ರಿ, ಜಮದಗ್ನಿ, ಗೌತಮ, ವಿಶ್ವಾಮಿತ್ರ, ಭಾರದ್ವಾಜ.
ಏಳು ಧಾತು (ಭೌತಿಕ): ರಸ, ರಕ್ತ, ಮಾಂಸ, ಕೊಬ್ಬು, ಮೂಳೆ, ಮಜ್ಜೆ, ವೀರ್ಯ.
ಏಳು ಬಣ್ಣಗಳು: ನೇರಳೆ, ನೇರಳೆ, ನೀಲಿ, ಹಸಿರು, ಹಳದಿ, ಕಿತ್ತಳೆ, ಕೆಂಪು.
ಏಳು ಹೇಡೀಸ್: ಅಟಲ್, ವೈಟಲ್, ಸುತಲ, ತಾಲತಾಲ್, ಮಹತಾಲ್, ರಸಾತಲ್, ಪಾತಾಳ.
ಏಳು ಪುರಿಗಳು: ಮಥುರಾ, ಹರಿದ್ವಾರ, ಕಾಶಿ, ಅಯೋಧ್ಯೆ, ಉಜ್ಜಯಿನಿ, ದ್ವಾರಕಾ, ಕಂಚಿ.
ಏಳು ಧಾನ್ಯಗಳು: ಉರಾದ್, ಗೋಧಿ, ಗ್ರಾಂ, ಅಕ್ಕಿ, ಬಾರ್ಲಿ, ಮೂಂಗ್, ರಾಗಿ.
ಎಂಟು ತಾಯಂದಿರು: ಬ್ರಾಹ್ಮಿ, ವೈಷ್ಣವಿ, ಮಾಹೇಶ್ವರಿ, ಕೌಮಾರಿ, ಐಂದ್ರಿ, ವಾರಾಹಿ, ನರಸಿಂಹಿ, ಚಾಮುಂಡಾ.
ಎಂಟು ಲಕ್ಷ್ಮಿಗಳು: ಆದಿಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ವೀರಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ.
ಎಂಟು ವಸುಗಳು: ಅಪ್ (Ah:/Ayj), ಧ್ರುವ, ಸೋಮ, ಧರ್, ಅನಿಲ್, ಅನಲ್, ಪ್ರತ್ಯೂಷ್, ಪ್ರಭಾಸ್.
ಎಂಟು ಸಿದ್ಧಿಗಳು: ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಇಶಿತ್ವ, ವಶಿತ್ವ.
ಎಂಟು ಲೋಹಗಳು: ಚಿನ್ನ, ಬೆಳ್ಳಿ, ತಾಮ್ರ, ಸೀಸದ ಸತು, ತವರ, ಕಬ್ಬಿಣ, ಪಾದರಸ.
ನವದುರ್ಗೆ: ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ.
ನವಗ್ರಹಗಳು: ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು.
ನವರತ್ನ: ವಜ್ರ, ಪಚ್ಚೆ, ಮುತ್ತು, ಮಾಣಿಕ್ಯ, ಹವಳ, ನೀಲಮಣಿ, ಓನಿಕ್ಸ್, ಬೆಳ್ಳುಳ್ಳಿ.
ನವನಿಧಿ: ಪದ್ಮನಿಧಿ, ಮಹಾಪದ್ಮನಿಧಿ, ನೀಲನಿಧಿ, ಮುಕುಂದನಿಧಿ, ನಂದನಿಧಿ, ಮಕರನಿಧಿ, ಕಚ್ಚಪಾನಿಧಿ, ಶಂಖನಿಧಿ, ಖರ್ವ/ಮಿಶ್ರ ನಿಧಿ.
ಹತ್ತು ಮಹಾವಿದ್ಯೆಗಳು: ಕಾಳಿ, ತಾರಾ, ಷೋಡಶಿ, ಭುವನೇಶ್ವರಿ, ಭೈರವಿ, ಚಿನ್ನಮಾಸ್ತಿಕಾ, ಧೂಮಾವತಿ, ಬಗಳಾಮುಖಿ, ಮಾತಂಗಿ, ಕಮಲಾ.
ಹತ್ತು ದಿಕ್ಕುಗಳು: ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ನಿತ್ಯ, ವಾಯವ್ಯ, ಈಶಾನ್ಯ, ಮೇಲಕ್ಕೆ, ಕೆಳಗೆ.
ಹತ್ತು ದಿಕ್ಪಾಲರು: ಇಂದ್ರ, ಅಗ್ನಿ, ಯಮರಾಜ, ನೈಲಿತಿ, ವರುಣ, ವಾಯುದೇವ, ಕುಬೇರ, ಈಶಾನ, ಬ್ರಹ್ಮ, ಅನಂತ.
ಹತ್ತು ಅವತಾರಗಳು (ವಿಷ್ಣುಜಿ): ಮತ್ಸ್ಯ, ಕಚಪ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ
ಹೌದು, ಕಲ್ಕಿ.
ಹತ್ತು ಸತಿ: ಸಾವಿತ್ರಿ, ಅನುಸೂಯ್ಯಾ, ಮಂಡೋದರಿ, ತುಳಸಿ, ದ್ರೌಪದಿ, ಗಾಂಧಾರಿ, ಸೀತಾ, ದಮಯಂತಿ, ಸುಲಕ್ಷಣ, ಅರುಂಧತಿ.
             ಮೇಲಿನ ಮಾಹಿತಿಯು ಧರ್ಮಗ್ರಂಥಗಳ ಆಧಾರದ ಮೇಲೆ ಸಂಗ್ರಹವಾಗಿದೆ. ನೀವು ಇದನ್ನು ಇಷ್ಟಪಟ್ಟರೆ, ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಇದು ಆಚರಣೆಗಳ ಒಂದು ಭಾಗವಾಗಿದೆ

ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಹಳೆಯ ಮತ್ತು ಹೊಸ ತೆರಿಗೆ ಸ್ಲ್ಯಾಬ್‌ಗಳ ಹೋಲಿಕೆ ಇಲ್ಲಿದೆ:

ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಹಳೆಯ ಮತ್ತು ಹೊಸ ತೆರಿಗೆ ಸ್ಲ್ಯಾಬ್‌ಗಳ ಹೋಲಿಕೆ ಇಲ್ಲಿದೆ:

ಹಳೆಯ ತೆರಿಗೆ ಸ್ಲ್ಯಾಬ್‌ಗಳು (FY 2023-24)

- ₹0-₹2,50,000: ತೆರಿಗೆ ಇಲ್ಲ
- ₹2,50,001-₹3,00,000: 5%
- ₹3,00,001-₹5,00,000: 5%
- ₹5,00,001-₹6,00,000: 10%
- ₹6,00,001-₹7,50,000: 10%
- ₹7,50,001-₹9,00,000: 15%
- ₹9,00,001-₹10,00,000: 15%
- ₹10,00,001-₹12,00,000: 20%
- ₹12,00,001-₹12,50,000: 20%
- ₹12,50,001 ಮತ್ತು ಹೆಚ್ಚಿನದು: 30%

ಹೊಸ ತೆರಿಗೆ ಸ್ಲ್ಯಾಬ್‌ಗಳು (FY 2024-25)

- ₹0-₹3,00,000: ತೆರಿಗೆ ಇಲ್ಲ
- ₹3,00,001-₹7,00,000: 5%
- ₹7,00,001-₹10,00,000: 10%
- ₹10,00,001-₹12,00,000: 15%
- ₹12,00,001-₹15,00,000: 20%
- ₹15,00,000 ಮೇಲೆ: 30%

ಪ್ರಮುಖ ಬದಲಾವಣೆಗಳು

- ಸ್ಟ್ಯಾಂಡರ್ಡ್ ಡಿಡಕ್ಷನ್ ₹50,000ದಿಂದ ₹75,000ಕ್ಕೆ ಏರಿಕೆಯಾಗಿದೆ
- ಕಡಿಮೆ ತೆರಿಗೆ ದರಗಳೊಂದಿಗೆ ಹೊಸ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಚಯಿಸಲಾಗಿದೆ
- ₹3,00,000 ವರೆಗೆ ತೆರಿಗೆ ಇಲ್ಲ (ಹಿಂದೆ ₹2

ಎತ್ತಿತೋರಿಸಲಾದ ಪೋಸ್ಟ್

ವಿಶ್ವ ಕ್ಷಯ ದಿನ

ಇದು ಮುಂದುವರೆದಂತೆ, ಇದು ಆಯಾಸ, ಅತಿಯಾದ ಬೆವರು, ತೂಕ ನಷ್ಟ, ಜ್ವರ ಮತ್ತು ದೌರ್ಬಲ್ಯವನ್ನು ತರುತ್ತದೆ, ಇದು ಸರಳ ಕೆಲಸಗಳನ್ನು ಸಹ ಆಯಾಸಗೊಳಿಸುತ್ತದೆ. ಕ್...