somaling m uppar kawalga

somaling m uppar kawalga
Somaling Sulubai uppar

ಮಂಗಳವಾರ, ಜೂನ್ 08, 2021

ಕರ್ನಾಟಕದ ಪ್ರಮುಖ 50 ವಿಶೇಷತೆಗಳು

ಕರ್ನಾಟಕದ ಪ್ರಮುಖ 50 ವಿಶೇಷತೆಗಳು
👇👇👇👇👇👇👇👇👇

1. ಭಾರತದ ಅತಿ ಎತ್ತರದ ಜಲಪಾತ ಕರ್ನಾಟಕದ 
➤ ಜೋಗ ಜಲಪಾತ

2. ಭಾರತದ ಅತ್ಯಂತ ದೊಡ್ಡ ಗುಮ್ಮಟ ಕರ್ನಾಟಕದ  
➤  ಬಿಜಾಪುರದ ಗೋಲಗೊಮ್ಮಟ

3. ಭಾರತದ ಅತಿ ಎತ್ತರದ ವಿಗ್ರಹ  
 ➤  ಕರ್ನಾಟಕದ ಶ್ರವಣಬೆಳಗೊಳದಲ್ಲಿನ 57 ಅಡಿ ಎತ್ತರದ ಗೋಮಟೇಶ್ವರ ವಿಗ್ರಹ

4. ಕರ್ನಾಟಕದ ದೊಡ್ಡ ನಗರ 
 ➤  ಬೆಂಗಳೂರು

5. ಕರ್ನಾಟಕದ ದೊಡ್ಡ ದೇವಾಲಯ 
 ➤  ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ

6. ಕರ್ನಾಟಕದ ದೊಡ್ಡ ಮೃಗಾಲಯ  
➤  ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು

7. ಕರ್ನಾಟಕದ ಪ್ರಸಿದ್ಧ ಅರಮನೆ  
➤  ಮೈಸೂರು ಅರಮನೆ, ಮೈಸೂರು

8. ಕರ್ನಾಟಕದ ಪ್ರಸಿದ್ಧ ಉದ್ಯಾನವನ 
 ➤  ಬೃಂದಾವನ ಉದ್ಯಾನವನ (ಕೆ. ಆರ್. ಸಾಗರ), ಲಾಲ್‍ಬಾಗ್, ಬೆಂಗಳೂರು

9. ಕರ್ನಾಟಕದ ಅತ್ಯಂತ ವಿಶಾಲವಾದ ಕಟ್ಟಡ  ➤  ವಿಧಾನಸೌಧ, ಬೆಂಗಳೂರು

10. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ  ➤  ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಜಿಲ್ಲೆ

11. ಕರ್ನಾಟಕದ ದೊಡ್ಡ ಬಂದರು  
➤  ನವಮಂಗಳೂರು ಬಂದರು, ಮಂಗಳೂರು

12. ಕರ್ನಾಟಕದ ದೊಡ್ಡ ಪಕ್ಷಿಧಾಮ  
➤  ರಂಗನತಿಟ್ಟು ಪಕ್ಷಿಧಾಮ

13. ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳ 
 ➤  ಮೈಸೂರು

14. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ  
➤  ಆಗುಂಬೆ

15. ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳು 
 ➤  ನಂದಿಬೆಟ್ಟ ಮತ್ತು ಕೆಮ್ಮಣ್ಣುಗುಂಡಿ

16. ಕರ್ನಾಟಕದ ಪ್ರಥಮ ಸಾಕ್ಷರ ಜಿಲ್ಲೆ
  ➤  ದಕ್ಷಿಣ ಕನ್ನಡ

17. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ  
➤  ಶರಾವತಿ

18. ಕರ್ನಾಟಕದ ಉದ್ದವಾದ ನದಿ 
 ➤  ಕಾವೇರಿ

19. ಕರ್ನಾಟಕದಲ್ಲಿ ಹೆಚ್ಚು ನಿರಾವರಿ ಯೋಜನೆಗಳನ್ನು ಹೊಂದಿರುವ ನದಿ ಕಣಿವೆ  ➤  ಕಾವೇರಿ

20. ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ  ➤  ಮೈಸೂರು( ರಿಸರ್ವ್ ಬ್ಯಾಂಕ್ ನೋಟುಮುದ್ರಣ)

21. ಕರ್ನಾಟಕದ ದೊಡ್ಡ ಕ್ರೀಡಾಂಗಣ  
➤  ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

22. ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ  ➤  ಪಂಪ ಪ್ರಶಸ್ತಿ

23. ಕನಾಟಕದ ಆದಿ ಕವಿ  
➤  ಪಂಪ

24. ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ  ➤  ಕರ್ನಾಟಕ ರತ್ನ

25. ಭಾರತದ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಕನ್ನಡಿಗ  
➤  ಹೆಚ್.ಡಿ. ದೇವೆಗೌಡ

26. ಕರ್ನಾಟಕದ ಮೊದಲ ವಿಶ್ವ ವಿದ್ಯಾನಿಲಯ 
➤  ಮೈಸೂರು ವಿಶ್ವವಿದ್ಯಾನಿಲಯ

27. ಕರ್ನಾಟಕದ ಪ್ರಥಮ ವೈದ್ಯಕೀಯ ಕಾಲೇಜು  
➤ ಮೈಸೂರು ವೈದ್ಯಕೀಯ ಕಾಲೆಜು, ಮೈಸೂರು

28. ಕನ್ನಡದ ಮೊದಲ ಮಹಾಕಾವ್ಯ  
➤  ಆದಿಪುರಾಣ

29. ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯವಿರುವ ಸ್ಥಳ 
 ➤  ಬೆಂಗಳೂರು

30. ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ
  ➤  ಕುವೆಂಪು

31. ಕರ್ನಾಟಕದ ಪ್ರಥಮ ಭೂಗರ್ಭ ವಿದ್ಯುದಾಗಾರ 
 ➤  ವರಾಹಿ

32. ಕರ್ನಾಟಕದಲ್ಲಿ ರೈಲು ಸಂಪರ್ಕ ಇಲ್ಲದ ಜಿಲ್ಲೆ 
 ➤ ಕೊಡಗು

33. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ನಿರ್ಮಾಪಕ 
➤  ಕೇಂಪೇಗೌಡ

34. ಕರ್ನಾಟಕದಲ್ಲಿ ಹತ್ತಿ ಗಿರಣಿಗಳಿಗೆ ಹೆಸರಾದ ಊರು 
 ➤  ದಾವಣಗೆರೆ

35. ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದ ವ್ಯಕ್ತಿ  
➤  ಹರ್ಡೇಕರ್ ಮಂಜಪ್ಪ

36. ಕರ್ನಾಟಕದಲ್ಲಿ ಆರಂಭವಾದ ಪ್ರಥಮ ಕಾಲೇಜು
  ➤ ಸೆಂಟ್ರಲ್ ಕಾಲೇಜು,(1864)ಬೆಂಗಳೂರು

37. ಕರ್ನಾಟಕದಲ್ಲಿ ಪ್ರಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ 
 ➤  ಬೆಂಗಳೂರು (1905)

38. ಭಾರತದ ಪ್ರಥಮ ದಂಡನಾಯಕರಾಗಿದ್ದ ಕರ್ನಾಟಕದ ವ್ಯಕ್ತಿ
  ➤  ಜನರಲ್ ಕಾರಿಯಪ್ಪ

39. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಊರು 
➤  ಅಂಕೋಲ

40. ಕರ್ನಾಟಕದ ಹೈಕೋರ್ಟ್‍ನ ಪ್ರಥಮ ಮಹಿಳಾ ನ್ಯಾಯಾದೀಶರು  
➤  ಮಂಜುಳಾ ಚೆಲ್ಲೂರು

41. ಕರ್ನಾಟಕದಲ್ಲಿ ಜೈನರಕಾಶಿ ಎಂದು ಹೆಸರಾದ ಊರು 
 ➤  ಮೂಡಬಿದರೆ

42. ಕರ್ನಾಟಕದ ಅತಿ ದೊಡ್ಡ ವಿಗ್ರಹ
  ➤  ನಂದಿ ವಿಗ್ರಹ (ಮೈಸೂರು)

43. ಕರ್ನಾಟಕದಲ್ಲಿ ಅತೀ ದೊಡ್ಡ ಆಲದಮರವಿರುವ ಊರು 
 ➤  ರಾಮೋಹಳ್ಳಿ (ಬೆಂಗಳೂರು)

44. ಕರ್ನಾಟಕದ ವಿಧಾನಸೌಧದ ನಿರ್ಮಾಣಕ್ಕೆ ಕಾರಣಕರ್ತ
 ➤  ಕೆಂಗಲ್ ಹನುಮಂತಯ್ಯ

45. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಸ್ಥಳ 
 ➤  ಕುದುರೆಮುಖ

46. ಕರ್ನಾಟಕದ ಸಂಗೀತ ಪಿತಾಮಹನೆಂದು ಹೆಸರು ಪಡೆದ ವ್ಯಕ್ತಿ  
➤  ಪುರಂದರದಾಸರು

47. ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಪುಸ್ತಕ ಮಳಿಗೆ 
 ➤ ಸಪ್ನ ಬುಕ್ ಹೌಸ್, ಬೆಂಗಳೂರು

48. ಕರ್ನಾಟಕದ ಮೊದಲ ಪ್ರಮುಖ ಜಲಾಶಯ 
 ➤  ಕೃಷ್ಣರಾಜಸಾಗರ

49. ಕರ್ನಾಟಕದ ಅತ್ಯಂತ ಎತ್ತರದ ಅಣೆಕಟ್ಟು  ➤ ಸೂಪ, (ಉತ್ತರಕನ್ನಡ)

50. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವ ದಾಖಲೆ ಮಾಡಿದ್ದ ಕರ್ನಾಟಕದ ವೈದ್ಯ 
 ➤  ಡಾ. ಎಂ.ಸಿ. ಮೋದಿ
💥✍💥✍💥✍💥✍💥

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...