somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಆಗಸ್ಟ್ 09, 2024

ಗಾದೆ ಮಾತುಗಳು





ಗಾದೆಗಳ ವಿಸ್ತರಣೆ

ʼಗಾದೆʼ ಎನ್ನುವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು. ಅದು ಹಲವರ ಅನುಭವಗಳ ಮಾತು, ಲೋಕೋಕ್ತಿ, ಜಾಣ ನುಡಿ ಎಂದು ಹೇಳಬಹುದು. ಗಾದೆಯ ಮಾತಿನಲ್ಲಿ ತಿಳಿವಳಿಕೆಯಿದೆ, ನೀತಿ ಇದೆ, ನಗೆಚಾಟಿಕೆಯಿದೆ, ಒಳಿತು ಕೆಡುಕುಗಳ ಸೂಕ್ಷ್ಮತೆಗಳಿವೆ. ಹೀಗಾಗಿಯೇ ವೇದ ಸುಳ್ಳಾದರೆ ಗಾದೆ ಸುಳ್ಳಾಗದು ಎಂಬ ಮಾತಿದೆ. 

ಗಾದೆಗಳು ಜೀವನದ ಸತ್ಯವನ್ನು  ಎತ್ತಿ ಹಿಡಿಯುತ್ತವೆ . ಜ್ಞಾನ ಭಂಡಾರದಲ್ಲಿ ಅವೂಗಳ  ಪಾತ್ರ ಬಹು ದೊಡ್ಡದು. ಗಾದೆಗಳಿಗೆ ಕಾಲ ದೇಶಗಳ ಮಿತಿಯಿಲ್ಲಿ. ಅವು ಎಲ್ಲಾ ಕಾಲ ದೇಶಗಳಿಗೂ ಅನ್ವಯವಾಗುವ ಸತ್ಯಗಳು. ನಾವು ಮಾತನಾಡುವಾಗ ಇಲ್ಲಿವೆ ಬರೆಯುವಾಗ ಗಾದೆಗಳನ್ನು ಸಂದರ್ಭಾನುಸಾರ ಬಳಸುವುದನ್ನುಕಲಿಯಬೇಕು. ಏಕೆಂದರೆ ಸಾವಿರ ಪದಗಳಲ್ಲಿ ಹೇಳಬಹುದಾದ ವಿಚಾರಗಳನ್ನು ಒಂದು ಗಾದೆ ಹೇಳುತ್ತದೆ. ಹೀಗಾಗಿ ಗಾದೆಗಳು ಕನ್ನಡ ಸಾಹಿತ್ಯದ ಅತ್ಯಮೂಲ್ಯ ಆಸ್ತಿ ಎನ್ನಬಹುದು. ಈ ಸಂಪತ್ತನ್ನು ಉಳಿಸಿಕೊಂಡು ಬೆಳೆಸಿಕೊಂಡು ನಾವು ಹೋಗಬೇಕಾಗಿದೆ. 

ಗಾದೆಮಾತುಗಳಲ್ಲಿ ಅಂತರ್ಗತವಾಗಿರುವ ವಿಚಾರಗಳನ್ನು ಸರಳ ಶೈಲಿಯಲ್ಲಿ ಬಿಡಿಸಿ ಹೇಳುವುದು ಒಂದು ಕಲಿ. ಇದನ್ನು ಗಾದೆಗಳ ವಿಸ್ತರಣೆ ಎಂದು ಕರೆಯಲಾಗುತ್ತದೆ. ಗಾದೆಗಳನ್ನು ವಿಸ್ತರಣೆ ಮಾಡುವುದರಿಂದ ನಮ್ಮ ಭಾಷೆ, ಚಿಂತನೆ ಹಾಗೂ ಅನುಭವಗಳು ಶ್ರೀಮಂತವಾಗುತ್ತದೆ. 
ಗಾದೆಗಳ ವಿಸ್ತರಣೆಯಲ್ಲಿ ಗಮನಿಸಬೇಕಅದ ಅಂಶಗಳು :
1. ಗಾದೆಯ ಹೊರ ಅರ್ಥವನ್ನು ಮೊದಲು ವಿವರಿಸಬೇಕು.
2. ಗಾದೆಯ ಅಂತರಾರ್ಥ ಯಾವ ವಿಚಾರಗಳಿಗರ ಸಂಬಂಧಿಸಿದೆ ಎಂಬುದನು ವಿವರಿಸಬೇಕು.
3. ಗಾದೆಯು ಒಳಗೊಂಡಿರುವ ಸತ್ಯ ಹಾಗೂ  ಮೌಲ್ಯಗಳನ್ನು ಸ್ಪಷ್ಟಪಡಿಸಬೇಕು.
4. ಗಾದೆಯ ವಿಚಾರಗಳಿಗೆ ಪೂರಕವಾಗುವ ಕಥೆ ಇಲ್ಲವೆ ಘಟನಗಳನ್ನು ಉದಾಹರಿಸಬೇಕು.
5. ಗಾದೆಗಳನ್ನು ವಿಸ್ತರಿಸುವಾಗ ಅದೇ ಅರ್ಥ ನೀಡುವ ಇನ್ನಿತರ ಗಾದೆಗಳನ್ನು ಹೆಸರಿಸಬೇಕು. 
6. ಗಾದೆಯ ಮೂಲಕ ನಾವು  ಕಲಿಯಬೇಕಾದ ಅಥವಾ ತಿಳಿದುಕೊಳ್ಳಬೇಕಾದ ನೀತಿಯನ್ನು ಕೊನೆಯಲ್ಲಿ ಸ್ಪಷ್ಟಪಡಿಸಬೇಕು. 

ಈ ಕೆಳಗಿನ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ 
1. ಮಾತು ಬೆಳ್ಳಿ: ಮೌನ ಬಂಗಾರ.🙊
2. ಕೈ ಕೆಸರಾದರೆ ಬಾಯಿ ಮೊಸರು.
3. ಕುಂಬಾರನಿಗೆ ವರುಷ: ದೊಣ್ಣೇಗೆ ನಿಮಿಷ.
4. ಗಿಡವಾಗಿ ಬಗ್ಗದಗದು: ಮರವಾಗಿ ಬಗ್ಗಿತೆ.
5. ಹಾಸಿಗೆ ಇದ್ದಷ್ಟು ಕಾಲು ಚಾಚು.
6. ಅತಿ ಆಸೆ ಗತಿಗೇಡು.
7. ಬೆಕ್ಕಿಗೆ ಚಲ್ಲಾಟ: ಇಲಿಗೆ ಪ್ರಾಣ ಸಂಕಟ.
8. ಊಟಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳ ಇಲ್ಲ.
9. ದೇಶ ಸುತ್ತಿ ನೋಡು: ಕೋಶ ಈದಿನೋಡು.📕
10. ಉಪ್ಪಿಗಿಂತ ರುಚ್ಚಿಯಿಲ್ಲ: ತಾಯಿಗಿಂತ ಬಂಧುವಿಲ್ಲ.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...