ಹೂಡಿಕೆ (Investment) ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ಕೆಲವರು ಮಾಹಿತಿಯ ಸಮಸ್ಯೆಯಿಂದಲೋ, ಅವಸರದಿಂದಲೋ ಸಿಕ್ಕ ಸಿಕ್ಕ ಯೋಜನೆಗಳಲ್ಲೆಲ್ಲಾ ಹೂಡಿಕೆ ಮಾಡುತ್ತಾರೆ. ಆದರೆ ಸರ್ಕಾರಿ ಸ್ವಾಮ್ಯದ ಹಲವಾರು ಹೂಡಿಕೆ ಯೋಜನೆಗಳಿವೆ. ಭಾರತದಲ್ಲಿ (India) ದೀರ್ಘಾವಧಿಯ ಹೂಡಿಕೆಗಳಿಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಒಂದು ವಿಶ್ವಾಸಾರ್ಹ ಆಯ್ಕೆಯಾಗಿ ಗುರುತಿಸಿಕೊಂಡಿದೆ.
ವಿಶೇಷವಾಗಿ ತಮ್ಮ ಭವಿಷ್ಯ ಮತ್ತು ನಿವೃತ್ತಿಗಾಗಿ ಹಣಕಾಸಿನ ಭದ್ರತೆ ಬಯಸುವ ವೇತನದಾರರಿಗೆ ಇದು ಬೆಸ್ಟ್ ಎಂದು ಗುರುತಿಸಿಕೊಂಡಿದೆ. ಹಲವು ವರ್ಷಗಳಿಂದ ಬಡ್ಡಿ ದರಗಳು ಸ್ಥಿರವಾಗಿದ್ದರೂ, PPF ಸಂಪೂರ್ಣ ಸುರಕ್ಷಿತ ಮತ್ತು ಗ್ಯಾರಂಟಿ ಆದಾಯವನ್ನು ನೀಡುತ್ತದೆ. ತೆರಿಗೆ ವಿನಾಯಿತಿ ಮತ್ತು ಸಂಯೋಜಿತ ಬಡ್ಡಿಯ ಲಾಭದಿಂದಾಗಿ ಇದು ಭಾರೀ ಬೇಡಿಕೆಯನ್ನು ಹೊಂದಿದೆ.
ಪ್ರಸ್ತುತ 7.1% ಬಡ್ಡಿ ದರದಲ್ಲಿ, ವಾರ್ಷಿಕವಾಗಿ ₹1.5 ಲಕ್ಷ ಗರಿಷ್ಠ ಮೊತ್ತವನ್ನು ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ನಿಮ್ಮ PPF ಖಾತೆಯ ಮೌಲ್ಯ ₹40.68 ಲಕ್ಷಕ್ಕೆ ಏರಿಕೆಯಾಗುತ್ತದೆ.. ಇದರಲ್ಲಿ ₹18 ಲಕ್ಷಕ್ಕೂ ಹೆಚ್ಚು ಮೊತ್ತವು ಸಂಪೂರ್ಣ ತೆರಿಗೆ-ಮುಕ್ತ ಬಡ್ಡಿಯಿಂದ ಬರಲಿದೆ ಎಂಬುದು ವಿಶೇಷ.
PPF ಯೋಜನೆಯು ಭಾರತ ಸರ್ಕಾರ ಅಡಿಯಲ್ಲಿ ಬರುತ್ತದೆ. ಇದು ದೀರ್ಘಾವಧಿ ಉಳಿತಾಯ ಮಾಡುವವರಿಗೆ ತುಂಬಾ ಉತ್ತಮ ಯೋಜನೆಯಾಗಿದೆ. ಸಂಯೋಜಿತ ಬಡ್ಡಿಯಿಂದಾಗಿ ಇದು ಗ್ಯಾರಂಟಿ ಆದಾಯವನ್ನು ನೀಡುತ್ತದೆ. ಏಪ್ರಿಲ್ 2020 ರಿಂದ ಇದರ ಬಡ್ಡಿ ದರ 7.1% ಆಗಿದ್ದು, ಇನ್ನೂ ಯಾವುದೇ ಬದಲಾವಣೆಗಳಾಗಿಲ್ಲ.
PPF ನ ಬಡ್ಡಿದರ, ಸುರಕ್ಷತೆ ಮತ್ತು EEE (Exempt-Exempt-Exempt) ತೆರಿಗೆ ಸ್ಥಿತಿ, ಇದನ್ನು ಸುರಕ್ಷಿತ ಮತ್ತು ತೆರಿಗೆ ಉಳಿತಾಯಕ್ಕಾಗಿ ಬಯಸುವ ಹೂಡಿಕೆದಾರರು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ.
PPF ಖಾತೆ ತೆರೆಯುವುದು ಹೇಗೆ?
PPF ಖಾತೆ ತೆರೆಯುವುದು ತುಂಬಾ ಸುಲಭ. ಇದನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ತೆರೆಯಬಹುದು. ಯಾವುದೇ ಭಾರತೀಯ ನಾಗರಿಕರು ತಮ್ಮ ಹೆಸರಿನಲ್ಲಿ ಅಥವಾ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಪಿಪಿಎಂ ಅಕೌಂಟ್ ಓಪನ್ ಮಾಡಬಹುದು. ಇದಕ್ಕೆ ಆಧಾರ್, ಪ್ಯಾನ್, ಅಡ್ರೆಸ್ ಪ್ರೂಫ್ ಮತ್ತು ನಾಮಿನಿ ಫಾರ್ಮ್‌ನಂತಹ ಅಗತ್ಯ ಕೆವೈಸಿ ದಾಖಲೆಗಳು ಇದ್ದರೆ ಸಾಕು.
PPF ನಿಯಮಗಳ ಪ್ರಕಾರ, ಹೂಡಿಕೆದಾರರು ವರ್ಷಕ್ಕೆ ಕನಿಷ್ಠ ₹500 ಮತ್ತು ಗರಿಷ್ಠ ₹1.5 ಲಕ್ಷ ಹಣವನ್ನು ಒಂದು ಕಂತಿನಲ್ಲಿ ಅಥವಾ ಹಲವು ಕಂತುಗಳಲ್ಲಿ ಹೂಡಿಕೆ ಮಾಡಬಹುದು.
ಪ್ರಸ್ತುತ ಬಡ್ಡಿ ದರದ ಪ್ರಕಾರ, ಗರಿಷ್ಠ ಮಿತಿಯನ್ನು ಹೂಡಿಕೆ ಮಾಡುವ ಮೂಲಕ PPF ಖಾತೆ ಪಕ್ವವಾದಾಗ ₹18 ಲಕ್ಷಕ್ಕಿಂತ ಹೆಚ್ಚು ಬಡ್ಡಿಯಲ್ಲೇ ಆದಾಯ ಗಳಿಸಬಹುದು. ಅಂದರೆ ಒಂದು ಆರ್ಥಿಕ ವರ್ಷದಲ್ಲಿ ₹1.5 ಲಕ್ಷದವರೆಗೆ ಠೇವಣಿ ಮಾಡಬಹುದು.
PPF ಹೂಡಿಕೆಯ ಲೆಕ್ಕಾಚಾರ ಹೇಗೆ?
ಪ್ರತಿ ಆರ್ಥಿಕ ವರ್ಷಕ್ಕೆ ₹1.5 ಲಕ್ಷ ರೂ. ಠೇವಣಿ ಜೊತೆಗೆ ವಾರ್ಷಿಕ 7.1% ಬಡ್ಡಿ ದರ. ಅಂದರೆ 15 ವರ್ಷಗಳಲ್ಲಿ ಒಟ್ಟು ಹೂಡಿಕೆ ₹22.50 ಲಕ್ಷ ಆಗುತ್ತದೆ. 15 ವರ್ಷಗಳ ನಂತರ ಪಕ್ವತೆಯ ಮೊತ್ತ ₹40,68,209 ರೂ. ಆಗಲಿದ್ದು, ಗಳಿಸಿದ ಬಡ್ಡಿಹಣ ₹18,18,209 ರೂ ಆಗಿರುತ್ತದೆ.
PPF, "EEE" (Exempt-Exempt-Exempt) ತೆರಿಗೆ ವಿಭಾಗದ ಅಡಿಯಲ್ಲಿ ಬರುವುದರಿಂದ ಇದು ದೊಡ್ಡ ತೆರಿಗೆ ಪ್ರಯೋಜನಗಳನ್ನು ನೀಡಲಿದೆ. ಆರ್ಥಿಕ ವರ್ಷದಲ್ಲಿ ₹1.5 ಲಕ್ಷದವರೆಗಿನ ಠೇವಣಿ ಹಣದ ಮೇಲೆ ತೆರಿಗೆ ಕಡಿತವನ್ನು ಪಡೆಯಬಹುದು. ಗಳಿಸಿದ ಬಡ್ಡಿ ಮತ್ತು ಅವಧಿಯ ಕೊನೆಯಲ್ಲಿ ಸ್ವೀಕರಿಸುವ ಒಟ್ಟು ಮೊತ್ತಕ್ಕೂ ತೆರಿಗೆ ಅನ್ವಯವಾಗುವುದಿಲ್ಲ. ಈ ಮೂಲಕ ಪಿಪಿಎಫ್ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ