somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮಾರ್ಚ್ 19, 2021

PSI EXAMINATION

 🚔 ವಿವಿಧ ವರ್ಷಗಳಲ್ಲಿ PSI ಪರೀಕ್ಷಯಲ್ಲಿ ಕೇಳಿರುವ ಇತಿಹಾಸ ವಿಭಾಗದ ಪ್ರಶ್ನೋತ್ತರಗಳು 👇👇


1) ನರ್ಮದಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ರಾಜ ಹರ್ಷವರ್ಧನನನ್ನು ಸೋಲಿಸಿದ ಚಾಲುಕ್ಯ ದೊರೆ ಯಾರು? 

🔹 ಇಮ್ಮಡಿ ಪುಲಿಕೇಶಿ


2) ಕರ್ನಾಟಕ ರಾಜ್ಯ( ಮೈಸೂರು) ದ ಪ್ರಥಮ ಮುಖ್ಯಮಂತ್ರಿ ಯಾರು? 

🔸 ಕೆಸಿ ರೆಡ್ಡಿ


3) ಪ್ರಥಮ ಕನ್ನಡ ಶಾಸನ? 

🔹 ಹಲ್ಮಿಡಿ ಶಾಸನ


4) "ಇಲ್ಬರ್ಟ್ ಬಿಲ್' ವಿವಾದಕ್ಕೆ ಸಂಬಂಧಿಸಿದ ವೈಸರಾಯರು? 

🔸 ಲಾರ್ಡ್ ರಿಪ್ಪನ್


5) ಯಾವ ಕ್ರಾಂತಿಕಾರಿ ಓರ್ವ ತತ್ವಜ್ಞಾನಿಯಾಗಿ ಬದಲಾದರು? 

🔹 ಅರವಿಂದ್ ಘೋಷ್


6) 1922 ಫೆಬ್ರವರಿ 5ರಂದು ನಡೆದ ಚೌರಾ ಚೌರಿ ಘಟನೆ ನಡೆದ ಸ್ಥಳ? 

🔸 ಉತ್ತರಪ್ರದೇಶದ ಗೋರ್ಖಪೂರ್


7)---ಯನ್ನು ಅನೇಕ ವೇಳೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಲಾಗಿದೆ? 

🔹 1857


8) ಗಡಿನಾಡಿನ ಗಾಂಧಿ ಎಂದು ಜನಪ್ರಿಯರಾದವರು ಯಾರು? 

🔸 ಖಾನ್ ಅಬ್ದುಲ್ ಗಫಾರ್ ಖಾನ್


9) ಚಿತ್ರಾಂಗ ಶಸ್ತ್ರಗಾರ ದಾಳಿಯ ಹಿಂದಿದ್ದ ಆಲೋಚನೆಯ ಕೂಸು ಯಾವುದಾಗಿತ್ತು? 

🔹 ಸೂರ್ಯ ಸೇನಾ


10)1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯವನ್ನು ಘೋಷಿಸಿದವರು? 

🔹 ಜವಾಹರಲಾಲ್ ನೆಹರು


11) ವಿಜಯಪುರದ ಆದಿಲ್ ಶಾಹಿ ವಂಶ ಸ್ಥಾಪಕ? 

🔸 ಯೂಸುಫ್ ಆದಿಲ್ ಶಾ


12) ಶಂಕರಾಚಾರ್ಯರು ಜನಪ್ರಿಯ ತತ್ವ? 

🔹 ಅದ್ವೈತವ


13) ಶ್ರೇಷ್ಠ ದೊರೆ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯ ಆಳಿದ ಕಾಲ? 

🔸 1509-1529


14) ಬ್ರಿಟಿಷರು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನಿರ್ಮಾಣಮಾಡಿದ  ಮೊದಲ ಕೋಟೆ ಯಾವುದು? 

🔹 ಫೋರ್ಟ್ ಸೇಂಟ್ ಜಾರ್ಜ್


15) ಭಾರತದ ನವೋದಯ ಜನಕ ಎಂದು ಯಾರನ್ನು ಕರೆಯುತ್ತಾರೆ? 

🔸 ರಾಜಾರಾಮ್ ಮೋಹನ್ ರಾಯ್


16) ಕರ್ನಾಟಕದ ಶ್ರವಣಬೆಳಗೊಳದ ಪಟ್ಟಣದಲ್ಲಿ ನಡೆದ ಮಹಾಮಸ್ತಾಭಿಷೇಕ ಕಾರ್ಯಕ್ರಮ ಸಂಬಂಧಿಸಿರುವುದು? 

🔸 ಬಾಹುಬಲಿ


17) 1954 ರಲ್ಲಿ ಪಾಂಡಿಚೇರಿಯ ಸ್ವತಂತ್ರವಾಗುವ ಮೊದಲು ಯಾವ ಯುರೋಪಿಯನರ ಅಧಿಕಾರವು ಅದನ್ನು ಆಕ್ರಮಿಸಿಕೊಂಡಿತ್ತು? 

🔹 ಫ್ರೆಂಚರು


18) ಯಾವ ವೇದಗಳಲ್ಲಿ ಮಾಂತ್ರಿಕ ಯಂತ್ರಗಳ( ಮಾಟ ಮಂತ್ರ) ಬಗ್ಗೆ ಹೇಳುತ್ತದೆ? 

🔸 ಅಥರ್ವಣ ವೇದ


19) ಔರಂಗಜೇಬನಿಂದ ಮರಣದಂಡನೆಗೆ ಒಳಗಾದ ಸಿಖರ ಗುರು ಯಾರು? 

🔹 ತೇಜ್ ಬಹದ್ದೂರ್


20) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷೆ ಯಾರು? 

 🔸 ಅನಿಬೆಸೆಂಟ್


21) ಒಬ್ಬಂಟಿಯಾಗಿ ಸತ್ಯಾಗ್ರಹ ಮಾಡುವುದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು? 

 🔹 ವಿನೋಬ ಬಾವೆ


22) 1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ? 

🔸 ಕಾನ್ಪುರ್


23) ಗೀತಗೋವಿಂದ ಪುಸ್ತಕವನ್ನು ಬರೆದವರು? 

 🔹 ಜಯದೇವ


24) ಪಟ್ಟದಕಲ್ಲು ಮತ್ತು ಐಹೊಳೆ ಸುಂದರ ದೇಗುಲಗಳು ನಿರ್ಮಿಸಿದವರು ಯಾರು 

 🔹 ಬಾದಾಮಿ ಚಾಲುಕ್ಯರು (DAR-2020)


25) ಕಲ್ಯಾಣಿ ಚಾಲುಕ್ಯರಲ್ಲಿ "ಜಗದೇಕ ಮಲ್ಲ" ಎಂಬ ಬಿರುದು ಪಡೆದವರು? 

🔸 ಜಯಸಿಂಹ=2


26) 1857 ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು? 

🔹 ಲಾರ್ಡ್ ಕ್ಯಾನಿಂಗ್


27) ಸಂಗಮ ಸಾಹಿತ್ಯವು--- ಆಗಿದೆ? 

🔸 ದಕ್ಷಿಣ ಭಾರತದ ಪ್ರಾಚೀನ ಇತಿಹಾಸದ ಗುಣ ಲಕ್ಷಗಳನ್ನು ಹೇಳುವ ಮುಂಚಿನ ತಮಿಳು ಸಾಹಿತ್ಯ


28) ಬಾರ್ಡೋಲಿ ಸತ್ಯಾಗ್ರಹದ(1928) ನಾಯಕ ಯಾರಾಗಿದ್ದರು? 

🔹 ಸರ್ದಾರ್ ವಲ್ಲಬಾಯ್ ಪಟೇಲ್


29) ಅಜಂತಾ ಗುಹೆಗಳು ಎಲ್ಲಿವೆ? 

🔸 ಮಹಾರಾಷ್ಟ್ರ


30) 1946 ರಲ್ಲಿ ಭಾರತಕ್ಕೆ ಆಗಮಿಸಿದ ಕ್ಯಾಬಿನೆಟ್ ಮಿಷನ್ ಯಾರ  ಮುಂದಾಳತ್ವದಲ್ಲಿ ಇತ್ತು? 

🔹 ಲಾರ್ಡ್ ಫೆಥಿಕ್ ಲಾರೆನ್ಸ್


31) ಗ್ರಾಂಡ್ ಟ್ರಂಕ್ ರಸ್ತೆ ಯನ್ನು ಯಾವ ಅಧಿಕಾರಿಯ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟಿತು? 

🔸 ಶೇರ್ ಷಾ ಸೂರಿ


32) ಮರಾಠ ಸಾಮ್ರಾಜ್ಯ ದಲ್ಲಿ ಮಂತ್ರಿಮಂಡಲದಲ್ಲಿ "ಪ್ರಧಾನಮಂತ್ರಿಯನ್ನು" ಎಂದು ಕರೆಯುತ್ತಿದ್ದರು? 

🔹 ಪೇಶ್ವೆಗಳು


33) ಬೀದರಿನಲ್ಲಿ ಪ್ರಸಿದ್ಧವಾದ "ಮದರಸ" ಸ್ಥಾಪಿಸಿದವರು? 

🔸 ಮಹಮ್ಮದ್ ಗವಾನ್


34) ಯಾರ ಅರಸರ ಕಾಲದಲ್ಲಿ ಚೀನಾದ ಬೌದ್ಧ ಯಾತ್ರಿಕ "ಹುಯೆನ್ ತ್ಸಾಂಗ್" ಕರ್ನಾಟಕ ಭೇಟಿ ನೀಡಿದ? 

🔹 ಚಾಲುಕ್ಯರ ಸಾಮ್ರಾಜ್ಯದ ಎರಡನೇ ಪುಲಿಕೇಶಿ


35) "ಮೃಚ್ಛಕಟಿಕ" ಅಥವಾ ಲಿಟ್ಟಲ ಕ್ಲೇ ಕಾರ್ಟ್ ಅನ್ನು ಬರೆದ ಕವಿ? 

 🔸 ಶೂದ್ರಕ


36) ಉತ್ತರ ಭಾರತದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ದೊಡನೆ ಸ್ಪರ್ಧಿಸಲು ಮತ್ತು ಪ್ರಬಲವಾಗಿದ್ದವರು? 

🔹 ಪಾಲರು ಮತ್ತು ಪ್ರತಿಹಾರರು


37) ಚಿತ್ತೋಡದ ಪ್ರಖ್ಯಾತ ವಿಜಯಸ್ಥಂಬ ಯಾರ ಕಾಲದಲ್ಲಿ ನಿರ್ಮಾಣವಾಯಿತು? 

🔹 ಗುಹಿಲರು (TET-2020)


38) "ಮಾಡು ಇಲ್ಲವೇ ಮಡಿ" ಎಂಬ ಸ್ಲೋಗನ್ ಹಿಡಿದವರು?

🔸 ಮಹಾತ್ಮ ಗಾಂಧೀಜಿ


39) ಹರಪ್ಪದ ಯಾವ ಸ್ಥಳದಲ್ಲಿ ಅಕ್ಕಿಯ ಉಳಿಮೆ ಇತ್ತು? 

🔹 ಲೋಥಾಲ್


40) ಕಾಳಿದಾಸನು ಯಾವ ರಾಜನ ಆಸ್ಥಾನದಲ್ಲಿದ್ದನು? 

🔸 ಎರಡನೇ ಚಂದ್ರಗುಪ್ತ


41) ಬ್ರಿಟಿಷರ ಭೂಕಂದಾಯ ನೀತಿಗಳಿಂದ ಭಾರತದ ರೈತರು "ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲಿ ಸತ್ತರು" ಎಂದು ಹೇಳಿದವರು? 

🔹 ಚಾರ್ಲ್ಸ್ ಮೇಕಾಪ್ (TET-2020)


42) ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಾಸನವನ್ನು ಪತ್ತೆ ಮಾಡಿದವರು? 

🔸 ಚಾಲ್ಸ್ ಬೇಡನ್ (TET-2020)


43) ಮೊದಲೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದ ಮೂಲಕ ಕೊನೆಗೊಂಡಿತ್ತು? 

 🔹 ಎಕ್ಸ-ಲಾ-ಚಾಪೆಲ್ (TET-2020)


44) ರೈತವಾರಿ ಪದ್ಧತಿಯನ್ನು "ಬಾರಾಮಹಲ್" ಪ್ರಾಂತ್ಯದಲ್ಲಿ ಮೊದಲಿಗೆ ಜಾರಿಗೊಳಿಸಿದವರು? 

🔸 ಅಲೆಗ್ಸಾಂಡರ್ ರೀಡ್ (TET-2020)


45)1893 ರಲ್ಲಿ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದ ನಟಾಲಿಗೆ ಹೋಗಲು ಕಾರಣ? 

🔹 ದಾದಾ ಅಬ್ದುಲ್ ಮತ್ತು ಕಂಪನಿಯ ವಕಾಲತ್ತು ವಹಿಸಲು (TET-2020)

ದೇಶದ ಗಣ್ಯಮಾನ್ಯರ ಬಿರುದುಗಳು

🏵🏵🏵🏵🏵🏵🏵🏵🏵🏵🏵

ದೇಶದ ಗಣ್ಯಮಾನ್ಯರ ಬಿರುದುಗಳು..

☛ ಇಂದಿರಾ ಗಾಂಧಿ = ಪ್ರಿಯದರ್ಶಿನಿ

☛ ಬಾಲಗಂಗಾಧರ ತಿಲಕ್ = ಲೋಕಮಾನ್ಯ

☛ ಸುಭಾಸ್ ಚಂದ್ರ ಬೋಸ್ = ನೇತಾಜಿ

☛ ಲಾಲ್ ಬಹದ್ದೂರ್ ಶಾಸ್ತ್ರೀ = ಶಾಂತಿದೂತ

☛ ಸರದಾರ್ ವಲ್ಲಭಬಾಯಿ ಪಟೇಲ್ = ಉಕ್ಕಿನ ಮನುಷ್ಯ, ಸರದಾರ್

☛ ಜವಾಹರಲಾಲ್ ನೆಹರು = ಚಾಚಾ

☛ ರವೀಂದ್ರನಾಥ ಟ್ಯಾಗೋರ್ = ಗುರುದೇವ

@KAS_Karnataka

☛ ಎಂ.ಎಸ್. ಗೋಳಲ್ಕರ್ = ಗುರೂಜಿ

☛ ಎಂ.ಕೆ. ಗಾಂಧಿ = ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ

ಭಾರತದ ರಾಜವಂಶಗಳು ಮತ್ತು ಸ್ಥಾಪಕರು

🤴🤴🤴🤴🤴🤴🤴🤴🤴🤴
ಭಾರತದ ರಾಜವಂಶಗಳು ಮತ್ತು ಸ್ಥಾಪಕರು.

🌼ಖಿಲ್ಜಿ ರಾಜವಂಶ (ಉತ್ತರ ಭಾರತ) - ಜಲಾಲ್-ಉದ್-ದಿನ್ ಖಿಲ್ಜಿ

 🌼ತುಘಲಕ್ ರಾಜವಂಶ (ಉತ್ತರ ಭಾರತ) - ಘಿಯಾಸ್-ಉದ್-ದಿನ್ ತುಘಲಕ್

🌼ಲೋಧಿ ರಾಜವಂಶ (ಉತ್ತರ ಭಾರತ) - ಬಹಲೋಲ್ ಲೋಧಿ

🌼 ಮೊಘಲ್ ರಾಜವಂಶ (ಭಾರತೀಯ ಉಪಖಂಡದ ದೊಡ್ಡ ಭಾಗ) - ಬಾಬರ್

 🌼ಹರಿಯಂಕಾ ರಾಜವಂಶ (ಮಗಧ) - ಬಿಂಬಿಸಾರ

🌼ನಂದ ರಾಜವಂಶ (ಮಗಧ) - ಮಹಾಪದ್ಮಾನಂದ

🌼ಚೋಳ ರಾಜವಂಶ, ಆದಿ (ಚೋಳಮಂಡಲಮ) - ಕರಿಕಾಲ

 🌼ಗುಪ್ತಾ ರಾಜವಂಶ (ಮಗಧ) - ಶ್ರೀಗುಪ್ತ

 🌼ಚಾಲುಕ್ಯ ಬಾದಾಮಿ ರಾಜವಂಶ (ಬಾದಾಮಿ) - ಪುಲ್ಕೇಶಿನ್ I.

 🌼ಪಲ್ಲವ ರಾಜವಂಶ (ಕಾಂಚಿ) - ಸಿಂಘ ವಿಷ್ಣು

 🌼ಬಾದಾಮಿ ಚಾಲುಕ್ಯ  ರಾಜವಂಶ (ವೆಂಗಿ) - ಜಯಸಿಂಹ

🌼 ಕಲ್ಯಾಣಿ ಚಾಲುಕ್ಯ ರಾಜವಂಶ - 2 ನೇ ತೈಲಪ

🌼ರಾಷ್ಟ್ರಕೂಟ ರಾಜವಂಶ (ಮಹಾರಾಷ್ಟ್ರ) - ದಂತಿ ದುರ್ಗಾ

🌼ಪಾಲಾ ರಾಜವಂಶ (ಬಂಗಾಳ) - ಗೋಪಾಲ

🌼ಚೋಳ ರಾಜವಂಶ (ತಮಿಳು ಪ್ರದೇಶ) - ವಿಜಯಾಲಯ

🌼 ಸ್ಲೇವ್ ರಾಜವಂಶ (ಉತ್ತರ ಭಾರತ) - ಕುತುಬುಡಿನ್ ಐಬಾಕ್

 🌼ಮೌರ್ಯ ರಾಜವಂಶ (ಮಗಧ) - ಚಂದ್ರಗುಪ್ತ ಮೌರ್ಯ

🌼 ಸುಂಗಾ ರಾಜವಂಶ (ಮಗಧ) - ಪುಶ್ಯಮಿತ್ರ ಸುಂಗ

🌼ಕನ್ವಾ ರಾಜವಂಶ (ಮಗಧ) - ವಾಸುದೇವ

 🌼ಶಾತವಾಹನ ರಾಜವಂಶ (ಮಹಾರಾಷ್ಟ್ರ) - ಸಿಮುಕ

🌼 ಕುಶನ್ ರಾಜವಂಶ (ಪಶ್ಚಿಮ-ಉತ್ತರ ಭಾರತ) - ಕ್ಯಾಡ್ಫೈಸ್.

Newspaper

📰 ಭಾರತದ ಪ್ರಮುಖ "ಪತ್ರಿಕೆಗಳು" ಮತ್ತು "ಸ್ಥಾಪಕರು" 👇✍️✍️✍️
✍ಇಂಪಾರ್ಟೆಂಟ್ 📚📚📚📚
1) "ಅಲ್-ಹಿಲಾಲ್"  – *ಅಬುಲ್ ಕಲಾಂ ಆಜಾದ್*

 2)"ಅಲ್-ಬಾಲಾಗ್"– *ಅಬುಲ್ ಕಲಾಂ ಆಜಾದ್*

3)"ನ್ಯೂ ಇಂಡಿಯಾ"  – *ಅನ್ನಿ ಬೆಸೆಂಟ್*

4)"ಕಾಮನ್ವೆಲ್" – *ಅನಿಬೆಸೆಂಟ್*

5)"ವಂದೇ ಮಾತರಂ" – *ಅರಬಿಂದೋ ಘೋಷ್*

6)"ಸಂಧ್ಯಾ"  – *ಬಿ.ಬಿ.ಉಪಾಧ್ಯಾಯ*

7)"ಮೂಕನಾಯಕ್"  – *ಬಿ.ಆರ್. ಅಂಬೇಡ್ಕರ್*

8)"ಬಹೀಷ್ಕೃತ್ ಭಾರತ"  – *ಬಿ.ಆರ್. ಅಂಬೇಡ್ಕರ್*

9)"ಕೇಸರಿ" – *ಬಾಲ ಗಂಗಾಧರ ತಿಲಕ್*

10)ಮರಾಠಾ  – *ಬಾಲ ಗಂಗಾಧರ ತಿಲಕ್*,

11)ದರ್ಪನ್ (ಮರಾಠಿ) – *ಬಾಲ್ ಶಾಸ್ತ್ರಿ ಜಂಬೇಕರ್*

12)"ಕವಿ ವಚನ್ ಸುಧ" (Kavi Vachan Sudha) – *ಭಾರ್ಟೆಂಡು ಹರಿಶ್ಚಂದ್ರ*

13)"ಯುಗಾಂತರ್" – *ಭೂಪೇಂದ್ರನಾಥ್ ಡೇಟಾ ಮತ್ತು ಬರೀಂದರ್ ಕುಮಾರ್ ಘೋಷ್*

14)"ಹೊಸ ಭಾರತ" (ಸಾಪ್ತಾಹಿಕ) – *ಬಿಪಿನ್ ಚಂದ್ರ ಪಾಲ್*

15)"ವಂದೇ ಮಾತರಂ"  – *ಬಿಪಿನ್ ಚಂದ್ರ ಪಾಲ್ ಮತ್ತು ನಂತರ ಶ್ರೀ ಅರಬಿಂದೋ ಸಂಪಾದಿಸಿದ್ದಾರೆ*

16)"ತಲ್ವಾರ್" (ಬರ್ಲಿನ್)
 – *ಬೀರೇಂದ್ರ ನಾಥ್ ಚಟ್ಟೋಪಾಧ್ಯಾಯ*

17)"ರಾಸ್ಟ್ ಗೋಫ್ತಾರ್" (ಗುಜರಾತಿ)  – *ದಾದಾಭಾಯ್ ನೌರೋಜಿ*

18)"ವಾಯ್ಸ್ ಆಫ್ ಇಂಡಿಯಾ"  – *ದಾದಾಭಾಯ್ ನೌರೋಜಿ*

19)"ಇಂಡಿಯನ್ ಮಿರರ್" – *ದೇವೇಂದ್ರ ನಾಥ ಟ್ಯಾಗೋರ್*

20)"ದಿ ಟ್ರಿಬ್ಯೂನ್"  – *ದಯಾಲ್ ಸಿಂಗ್ ಮಜಿತಿಯಾ*

21)"ಬಾಂಬೆ ಕ್ರಾನಿಕಲ್"  – *ಫಿರೋಜ್ ಷಾ ಮೆಹ್ತಾ*

22)"ಸ್ವದೇಶಮಿತ್ರನ್" (ತಮಿಳು) –  *ಜಿ ಸುಬ್ರಮಣ್ಯ ಅಯ್ಯರ್*
23)
"ಸುದಾರಕ್ " – *ಜಿ.ಕೆ.ಗೋಖಲೆ*

24)"ಪ್ರತಾಪ್" – *ಗಣೇಶ್ ಶಂಕರ್ ವಿದ್ಯಾಾರ್ಥಿ*

25)"ಇಂಕ್ವಿಲಾಬ್' (ಉರ್ದು)  – *ಗುಲಾಮ್ ಹುಸೇನ್*

26)"ಹಿಂದೂ ಪೇಟ್ರಿಯಾಟ್"  – *ಗಿರೀಶ್ ಚಂದ್ರ ಘೋಷ್* (ನಂತರ ಹರೀಶ್ ಚಂದ್ರ ಮುಖರ್ಜಿ)

27)"ಭಾರತ ಗೆಜೆಟ್" – *ಹೆನ್ರಿ ಲೂಯಿಸ್ ವಿವಿಯನ್ ಡೆರೋಜಿಯೊ*

28)"ಸೋಮ ಪ್ರಕಾಶ್" – *ಈಶ್ವರ್ ಚಂದ್ರ ವಿದ್ಯಾಸಾಗರ್*

29)"ಬಂಗಾಳ ಗೆಜೆಟ್" (ಬಂಗಾಳಿ) – "ಜೆ.ಕೆ.ಹಿಕ್ಕಿ"

30)"ಹಿಂದೂಸ್ತಾನ್ ಟೈಮ್ಸ್"  – *ಕೆ.ಎಂ. ಪನ್ನಿಕರ್*

31)"ವಿಚಾರ್ ಲಹಿರಿ"  – *ಕೃಷ್ಣಶಾಸ್ತ್ರಿ ಚಿಪ್ಲುಂಕರ್*

32)"ಪಂಜಾಬಿ"  – *ಲಾಲಾ ಲಜಪತ್ ರೈ*

33)"ಭಾರತೀಯ ಅರ್ಥಶಾಸ್ತ್ರದಲ್ಲಿ ಪ್ರಬಂಧಗಳು"  – *ಎಂ.ಜಿ. ರಾನಡೆ*

34)"ಹಿಂದೂಸ್ತಾನ್"  – *ಎಂ.ಎಂ. ಮಾಲ್ವಿಯಾ*

35)"ನವ ಜೀವನ್" – *ಮಹಾತ್ಮ ಗಾಂಧಿ*

36)"ಇಂಡಿಯನ್ ಒಪಿನಿಯನ್"  – *ಮಹಾತ್ಮ ಗಾಂಧಿ*

37)"ಯಂಗ್ ಇಂಡಿಯಾ"  – *ಮಹಾತ್ಮ ಗಾಂಧಿ*

38)"ಹರಿಜನ್"  – *ಮಹಾತ್ಮ ಗಾಂಧಿ*

39)"ಕ್ರಾಂತಿ"  – *ಮಿರಾಜ್ಕರ್, ಜೋಗ್ಲೆಕರ್, ಘಾಟೆ*

40)"ಕೊಮ್ಬ್ರೆಡ್" (Comrade) – *ಮೊಹಮ್ಮದ್ ಅಲಿ*

41)"ಇಂಡಿಪೆಂಡೆಂಟ್"  – *ಮೋತಿಲಾಲ್ ನೆಹರು*

42)"ದಿನ್ ಮಿತ್ರ"  – *ಮುಕುಂದರಾವ್ ಪಾಟೀಲ್*

43)"ನವಯುಗ್" (ಮ್ಯಾಗಜೀನ್)  – *ಮುಜಾಫರ್ ಅಹ್ಮದ್*

44)ಸಂವಾದ್ ಕೌಮುದಿ  – *ರಾಮ್ ಮೋಹನ್ ರಾಯ್*

45)"ಮಿರತ್-ಉಲ್-ಅಕ್ಬರ್" –  *ರಾಮ್ ಮೋಹನ್ ರಾಯ್*

46)"ಕುಡಿ ಅರಸು"– *ರಾಮಸ್ವಾಮಿ ನಾಯಕರ್*

47)"ಸ್ಟೇಟ್ಸ್‌ಮನ್" – *ರಾಬರ್ಟ್ ನೈಟ್*

48)"ದಿ ಸ್ಟೇಟ್ಸ್‌ಮನ್"  – *ರಾಬರ್ಟ್ ನೈಟ್*

49)"ಬಾಂಬೆ ಟೈಮ್ಸ್"  – *ರಾಬರ್ಟ್ ನೈಟ್ ಮತ್ತು ಥಾಮಸ್ ಬೆನೆಟ್*

50)
"ಭಾರತೀಯ ಸೋಷಿಯಲಿಸ್ಟ್"  – *ಶ್ಯಾಮ್ಜಿ ಕೃಷ್ಣ ವರ್ಮಾ*

51)"ತಹ್ಜಿಬ್-ಉಲ್-ಅಖ್ಲಾಕ್"  – *ಸರ್ ಸೈಯದ್ ಅಹ್ಮದ್ ಖಾನ್*

52)"ಅಮೃತ್ ಬಜಾರ್ ಪತ್ರಿಕಾ" – *ಸಿಸಿರ್ ಕುಮಾರ್ ಘೋಷ್ ಮತ್ತು ಮೋತಿಲಾಲ್ ಘೋಷ್*

53)"ಪ್ರಭುದ್ ಭಾರತ್" – *ಸ್ವಾಮಿ ವಿವೇಕಾನಂದ*

54)"ಉದ್ಬೋಧನ" – *ಸ್ವಾಮಿ ವಿವೇಕಾನಂದ*

55)"ಫ್ರೀ ಹಿಂದೂಸ್ತಾನ್"  – *ತಾರಕ್ ನಾಥ್ ದಾಸ್*

56)"ನೇಟಿವ್ ಒಪಿನಿಯನ್"– *ವಿ.ಎನ್. ಮಂಡಲಿಕ್*

57)"ಹಿಂದೂ"  – *ವೀರ್ ರಾಘವಾಚಾರ್ಯ ಮತ್ತು ಜಿ.ಎಸ್. ಅಯ್ಯರ್*

Food park of karnataka

🌺 ಕರ್ನಾಟಕದ ಪ್ರಮುಖ ಆಹಾರ ಪಾರ್ಕುಗಳು 🍀

🌺 ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ :- ರಾಣೆಬೆನ್ನೂರು

🌺 ತೆಂಗು ಟೆಕ್ನಾಲಜಿ ಪಾರ್ಕ್:- ತಿಪಟೂರು

🌺 ತೊಗರಿ ಟೆಕ್ನಾಲಜಿ ಪಾರ್ಕ್:- ಕಲ್ಬುರ್ಗಿ

🌺 ರೈಸ್ ಟೆಕ್ನಾಲಜಿ ಪಾರ್ಕ್ :-ಕಾರಟಗಿ

🌺 ಗ್ರೀನ್ ಫುಡ್ ಪಾರ್ಕ್:- ಬಾಗಲಕೋಟೆ

🌺 ಅಕ್ಷಯ ಆಹಾರ ಪಾರ್ಕ್ :-ಹಿರಿಯೂರು

🌺 ಸ್ಪೈಸ್ ಪಾರ್ಕ್ :-ಬ್ಯಾಡಗಿ

🌺 ಜೇವರ್ಗಿ ಆಹಾರ ಪಾರ್ಕ್:- ಜೇವರ್ಗಿ

🌺 ಮೆಗಾ ಪುಡ್  ಆಹಾರ ಪಾರ್ಕ್ :-ತುಮಕೂರು

🌺 ಶಿವಮೊಗ್ಗ ಆಹಾರ ಪಾರ್ಕ್ :- ಶಿವಮೊಗ್ಗ

🌺 ಬೆಳಗಾವಿ ಆಹಾರ ಪಾರ್ಕ್:- ಬೆಳಗಾವಿ 

🌺 ದಾವಣಗೆರೆ ಆಹಾರ ಪಾರ್ಕ್ :-ದಾವಣಗೆರೆ

🌺 ಇನ್ನೋವ ಅಗ್ರಿ ಬಯೋ ಪಾರ್ಕ್ :-ಮಾಲೂರು

ಪ್ರಮುಖ ವಿಶೇಷತೆಗಳು

ಪ್ರಮುಖ ವಿಶೇಷತೆಗಳು ---

* ಉದ್ಯಾನವನಗಳ ರಾಜ - ಬಾಬರ್

* ಎರಡನೇ ವಾಲ್ಮೀಕಿ - ತುಳಸಿದಾಸ್

* ಭಾರತದ ಜೋನ್ ಆಫ್ ಆರ್ಕ - ಝಾನ್ಸಿ ರಾಣಿ ಲಕ್ಷ್ಮೀಬಾಯಿ

* ಭಾರತದ ಜಾನ್ ಮಿಲ್ಟನ್ - ಸೂರದಾಸ್

* ಸ್ಯಾಂಡ್ ಕೊಟ್ಟಸ್ - ಚಂದ್ರ ಗುಪ್ತ್ ಮೌರ್ಯ

* ಅಮಿತ್ರ ಘಾತ - ಬಿಂದು ಸಾರ

* ಸೌಧಗಳ ನಿರ್ಮಾಪಕ - ಶಹ ಜಹಾನ್

* ಭಾರತದ ಸಾಕ್ರೆಟಿಸ್ - ಇ. ವೀ.ರಾಮಸ್ವಾಮಿ

* ಭಾರತದ ಮೈಕೆಲ್ಯಾಂಜೆಲೊ - ರಾಜಾ ರವಿವರ್ಮ

* ಭಾರತದ ಪಿಕಾಸೋ - ಎಂ. ಎಫ. ಹುಸೇನ್

* ಭಾರತದ ಐನ್ಸ್ಟೀನ್ - ನಾಗಾರ್ಜುನ

* ಕರ್ನಾಟಕದ ಮೀರಾಬಾಯಿ - ಅಕ್ಕಮಹಾದೇವಿ

ಕನ್ನಡದ ಕವಿಗಳ ಆತ್ಮಚರಿತ್ರೆಗಳು

✍️ *FDA*, *SDA* ಪರೀಕ್ಷೆಗಳಿಗೆ  ಉಪಯುಕ್ತವಾದ *ಕನ್ನಡದ ಕವಿಗಳ ಆತ್ಮಚರಿತ್ರೆಗಳು*👇👇👇

1) ಕುವೆಂಪು- *ನೆನಪಿನ ದೋಣಿಯಲ್ಲಿ*

2) ಮಾಸ್ತಿ ವೆಂಕಟೇಶ ಅಯ್ಯಂಗಾರ್- *ಭಾವ*

3) ಶಿವರಾಮಕಾರಂತ- *ಹುಚ್ಚು ಮನಸ್ಸಿನ ಹತ್ತು ಮುಖಗಳು*,

4) ಡಾಕ್ಟರ್ ಸಿದ್ದಲಿಂಗಯ್ಯ- *ಊರುಕೇರಿ*

5) ದರಾ ಬೇಂದ್ರೆ- *ನಡೆದು ಬಂದ ದಾರಿ*

6) ಆಲೂರು ವೆಂಕಟರಾಯರು- *ಜೀವನ ಸ್ಮರಣೆ.*

7)ದೇ ಜವರೇಗೌಡ - *ಹೋರಾಟದ ಬದಕು*

8)ಅ,ನ,ಕೃಷ್ಣರಾಯರು- *ಬರಹಗಾರನ ಬದಕು ಮತ್ತು ನನ್ನನ್ನು ನಾನೆ ಕಂಡೆ*

9)ಬೀಚಿ- *ನನ್ನ ಭಯಾಗ್ರಾಪಿ*

10)ಡಾ/ಎಚ್ ನರಸಿಂಹಯ್ಯ- *ಹೋರಾಟದ ಹಾದಿ*

11)ನಿರಂಜನ್- *ದಿನಚರಿಯಿಂದ, ರಾಜಧಾನಿಯಿಂದ*   

12)ಅರವಿಂದ ಮಾಲಗತ್ತಿ- *ಗೌರ್ಮೆಂಟ್ ಬ್ರಾಹ್ಮಣ* 

13) ಬಸವರಾಜ ಕಟ್ಟಿಮನಿ- *ಕುಂದರನಾಡಿನ ಕಂದ, ಕಾದಂಬರಿಕಾರನ ಕಥೆ*

14) ಎ ಎನ್ ಮೂರ್ತಿರಾಯರು- *ಸಂಜೆಗಣ್ಣಿನ ಹಿನ್ನೋಟ*(FDA 2019)

15) ಶ್ರೀರಂಗ- *ನಾಟ್ಯ ನೆನಪುಗಳು*, 

16) ರಂ ಶಿ ಮುಗಳಿ- *ಜೀವನರಸಿಕ*

17) ಕೈಯಾರ ಕಿಞ್ಞಣ್ಣರೈ- *ದುಡಿತವೇ ನನ್ನ ದೇವರು*

18) ಅನುಪಮ ನಿರಂಜನ್- *ನೆನಪು ಸಿಹಿ-ಕಹಿ*

19) ಕಡಿದಾಳ ಮಂಜಪ್ಪ- *ನನಸಾಗದ ಕನಸು*

20) ತಾ ಸು ಶಾಮರಾಯ- *ಮೂರು ತಲೆಮಾರು*

21) ಪುತಿನ- *ಹಿಂತಿರುಗಿ ನೋಡಿದಾಗ*. 

22) ಜಿಪಿ ರಾಜರತ್ನಂ, - *ಹತ್ತು ವರ್ಷಗಳು, ನೆನಪಿನ ಬೀರುವಿನಿಂದ ನೂರು ವರ್ಷದ ಅಚ್ಚುಮೆಚ್ಚು*, 

23) ಸಿ ಜಿ ಕೃಷ್ಣಸ್ವಾಮಿ- *ಕತ್ತಲು ಬೆಳದಿಂಗಳು,*

24) ಲಕ್ಷ್ಮಣರಾವ್ ಗಾಯಕ್ವಾಡ- *ಎಪಾಲ್ಸ*

25) ಸಿದ್ದಯ್ಯ ಪುರಾಣಿಕ- *ನನ್ನ ನಿನ್ನೆಗಳೋಡನೆ  ಕಣ್ಣುಮುಚ್ಚಾಲಳೆ*

26) ಪಿ ಲಂಕೇಶ್- *ಹುಳಿಮಾವಿನ ಮರ,*

27) ರಾವ್ ಬಹುದ್ದೂರ್- *ಮರೆಯದ ನೆನಪುಗಳು*

28) ಎಂ ಗೋಪಾಲಕೃಷ್ಣ ಅಡಿಗ- *ನೆನಪಿನ ಗಣಿಯಿಂದ* 

29) ಆರ್ ಸಿ ಹಿರೇಮಠ- *ಉರಿ ಬರಲಿ ಸಿರಿ ಬರಲಿ*

30) ಮಲ್ಲಿಕಾರ್ಜುನ ಮನಸೂರ- *ನನ್ನ ರಸಯಾತ್ರೆ*

31) ಗುಬ್ಬಿ ವೀರಣ್ಣ- *ಕಲೆಯೇ ನಾಯಕ,*

31) ಸಾರಾ ಅಬೂಬಕರ್- *ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು*

32) ಪಿ ಆರ್ ತಿಪ್ಪೇಸ್ವಾಮಿ - *ಕಲಾವಿದನ ನೆನಪುಗಳು,*

ಪ್ರಸಿದ್ಧ ವಚನಕಾರರ ಅಂಕಿತ ನಾಮಗಳು

ಪ್ರಸಿದ್ಧ ವಚನಕಾರರ ಅಂಕಿತ ನಾಮಗಳು
=============================
>ಜೇಡರದಾಸಿಮಯ್ಯ: ರಾಮನಾಥ
 
>ಅಲ್ಲಮಪ್ರಭು: ಗುಹೇಶ್ವರ
 
>ಅಕ್ಕಮಹಾದೇವಿ: ಚನ್ನಮಲ್ಲಿಕಾರ್ಜುನ
 
>ಬಸವಣ್ಣ: ಕೂಡಲ ಸಂಗಮದೇವ₹₹
 
>ಮುಕ್ತಾಯಕ್ಕ- ಅಜಗಣ್ಣ
 
>ಅಂಬಿಗರ ಚೌಡಯ್ಯ: ಅಂಬಿಗರ ಚೌಡಯ್ಯ
 
>ಮಡಿವಾಳ ಮಾಚಯ್ಯ: ಕಲಿದೇವರದೇವ
 
>ಗಂಗಾಂಬಿಕೆ: ಗಂಗಾಪ್ರಿಯ ಕೂಡಲ ಸಂಗಮದೇವ
 
>ನೀಲಾಂಬಿಕೆ: ನೀಲಲೋಚನೆ ಸಂಗಯ್ಯ

ಕರ್ನಾಟಕದ ಪ್ರಥಮಗಳು...

ಕರ್ನಾಟಕದ ಪ್ರಥಮಗಳು...
======================
>ಕನ್ನಡದ ಮೊದಲ ವಿಶ್ವಕೋಶ: ವಿವೇಕ ಚಿಂತಾಮಣಿ.
 
>ಕನ್ನಡದ ಮೊದಲ ವೈದ್ಯಗ್ರಂಥ: ಗೋವೈದ್ಯ. 
 
>ಕನ್ನಡದ ಮೊದಲ ಪ್ರಾಧ್ಯಾಪಕರು: ಟಿ.ಎಸ್.ವೆಂಕಣ್ಣಯ್ಯ.
 
>ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ: ಮಂದಾನಿಲ ರಗಳೆ
 
>ಕನ್ನಡದ ಮೊದಲ ಹಾಸ್ಯ ಪತ್ರಿಕೆ: ವಿಕಟ ಪ್ರತಾಪ.  

>ಕನ್ನಡದ ಮೊದಲ ವೀರಗಲ್ಲು: ತಮ್ಮಟಗಲ್ಲು ಶಾಸನ.
 
>ಕನ್ನಡದ ಮೊದಲ ಹಾಸ್ಯ ಲೇಖಕಿ: ಟಿ.ಸುನಂದಮ್ಮ.

ಭಾರತದಲ್ಲಿ ನೇಮಕವಾಗಿದ್ದ ಪ್ರಮುಖ ಆಯೋಗಗಳು

🔮🔮🔮🔮🔮🔮🔮🔮🔮🔮🔮🔮
ಭಾರತದಲ್ಲಿ ನೇಮಕವಾಗಿದ್ದ ಪ್ರಮುಖ ಆಯೋಗಗಳು 


* ಸ್ಟೇಟ್ ಮಿನಿಸ್ಟ್ರಿ ಸಮಿತಿ - ದೇಶೀಯ ಸಂಸ್ಥಾನಗಳ ವಿಲೀನಕ್ಕೆ.

* ಕೆ.ಸಂತಾನಂ ಆಯೋಗ - ಭ್ರಷ್ಟಚಾರ ನಿರ್ಮೂಲನೆಗೆ.

* ಷಾ ನವಾಜ್, ಕೋಸ್ಲ, ಮುಖರ್ಜಿ ಆಯೋಗ - ಸುಭಾಷ್ ಚಂದ್ರ ಭೋಸ್ ಸಾವಿನ ತನಿಖೆಗೆ.

* ಭಗವಾನ್ ಸಮಿತಿ - ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆಗೆ.

* ಯಶಪಾಲ್ ಆಯೋಗ - ಉನ್ನತ ಶಿಕ್ಷಣ ಪುನಶ್ಚೇತನ ಮತ್ತು ಸುಧಾರಣೆಗೆ.

* Y.K. ಅಲಘ ಸಮಿತಿ - ಯುಪಿಎಸ್ ಸಿ ಪರೀಕ್ಷೆ ಸುಧಾರಣೆಗೆ.

* ರಂಗನಾಥ್ ಮಿಶ್ರಾ ಆಯೋಗ - ಕೇಂದ್ರ ಮತ್ತು ರಾಜ್ಯ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ.

* ಎನ್.ಎನ್. ವಾಂಚು ಸಮಿತಿ - ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ.

KANNADA

🌍 ಕನ್ನಡ ಸಾಹಿತ್ಯ ಚರಿತ್ರೆ🌍

★ ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

★ ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ

★ ಛಂದೋನುಶಾಸನದ ಕರ್ತೃ -ಜಯಕಿರ್ತ

★ ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ

★ ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ

★ ಬೃಹತ್ಕಥೆಯ ಕರ್ತೃ -ಗುಣಾಢ್ಯ

★ ಬೃಹತ್ಕಥೆಯ ಭಾಷೆ -ಪೈಶಾಚಿ

★ ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ

★ ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ

★ ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ

★ನಜುಂಡಕವಿಯ ಕೃತಿ -ಕುಮಾರರಾಮನ ಕಥೆ

★ ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು

★ ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ

★ ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ

★ ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)

★ ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )

★ ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ

★ ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ

★ ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ

★ ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ

★ ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ

★ ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )

★ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ

★ ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ

★ ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ

★ ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ

★ ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )

★ ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ

★ ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ

★ ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ

★ ರನ್ನನ ಕೃತಿಗಳು
—-ರನ್ನಕಂದ (ನಿಘಂಟು)
— ಪರುಶುರಾಮಚರಿತ
ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )

★ ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು  ಅರುಪಿದವನು -ರನ್ನ

★ ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ

★ ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ

★ ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)

★ ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ

★ ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ

★ ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ

★ ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ

★ ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )

★ ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ

★ ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ

★ ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ

★ ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ

★ ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ

★ ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ

★.ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ

★ ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)

 ★.ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ

★ ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ

★ ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ

★.ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ:  -ಶಬ್ದಮಣಿದರ್ಪಣ (ಕೇಶಿರಾಜ).

ಕರ್ನಾಟಕದಲ್ಲಿನ ಪ್ರಮುಖ ಘಟನೆಗಳು ಮತ್ತು ನಡೆದ ವರ್ಷಗಳು -----

ಕರ್ನಾಟಕದಲ್ಲಿನ  ಪ್ರಮುಖ ಘಟನೆಗಳು ಮತ್ತು ನಡೆದ ವರ್ಷಗಳು -----


* ದೊಂಡಿಯಾ ವಾಘ ದಂಗೆ - 1800

* ಕಿತ್ತೂರು ದಂಗೆ - 1824

* ನಗರ ದಂಗೆ - 1831

* ಕೊಡಗು ಬಂಡಾಯ - 1834

* ಹಲಗಲಿಯ ಬೇಡರ ದಂಗೆ - 1857

* ಸುರಪುರ ದಂಗೆ - 1857

* ನರಗುಂದ ಬಂಡಾಯ - 1858

* ಮುಂಡರಗಿ ಬಂಡಾಯ - 1858

* ಅಂಕೋಲಾ ಸತ್ಯಾಗ್ರಹ - 1930

* ಮೈಸೂರು ಕಾಂಗ್ರೆಸ್ಸ್ ಜನನ - 1938

* ಶಿವಪುರ ಧ್ವಜ ಸತ್ಯಾಗ್ರಹ - 1938

* ವಿದುರಾಶ್ವತ್ಥ ದುರಂತ - 1938

* ಈಸೂರು ದುರಂತ - 1942

* ಮೈಸೂರು ಅರಮನೆ ಸತ್ಯಾಗ್ರಹ - 1947

* ಭಾರತ ಸ್ವಾತಂತ್ರ್ಯ - 1947

2020: ಜಾಗತಿಕ ಮಟ್ಟದ ಸೂಚ್ಯಂಕಗಳಲ್ಲಿ ಭಾರತ

2020: ಜಾಗತಿಕ ಮಟ್ಟದ ಸೂಚ್ಯಂಕಗಳಲ್ಲಿ ಭಾರತ
================
>ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ಸೂಚ್ಯಂಕ-40 
>2019ರ ಪ್ರಜಾಪ್ರಭುತ್ವ ಸೂಚ್ಯಂಕ-51 
>ವ್ಯವಹಾರ ಸುಲಭಗೊಳಿಸುವಿಕೆ ಸೂಚ್ಯಂಕ-63 
>ಸುಸ್ಥಿರತೆ ಸೂಚ್ಯಂಕ-77 
>ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ-80 
>ಜಾಗತಿಕ ಹಸಿವು ಸೂಚ್ಯಂಕ-94 
>ಮಾನವ ಬಂಡವಾಳ ಸೂಚ್ಯಂಕ-116 
>ಮಾನವ ಅಭಿವೃದ್ಧಿ ಸೂಚ್ಯಂಕ-129 
>ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ-142

ಅಂತಾರಾಷ್ಟ್ರೀಯ ಯೋಗ ದಿನ - ಜೂನ್ 21

see nowಅಂತಾರಾಷ್ಟ್ರೀಯ ಯೋಗ ದಿನ - ಜೂನ್ 21

# ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

★ ಹಿನ್ನೆಲೆ :-

# ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ - ಅಶೋಕ್ ಕುಮಾರ್ ಮಂಡಿಸಿದ್ದರು. 
* ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು.
* ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು.
* 2015 ಜೂನ್ 21 ನೇ ತಾರೀಖಿನಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.
* 2015ರ ಜೂನ್‌ 21ರಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.

★ 2020ರ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ (theme) - "Yoga for Health - Yoga at Home" (ಆರೋಗ್ಯಕ್ಕಾಗಿ ಯೋಗ - ಮನೆಯಲ್ಲೇ ಯೋಗ)

★ ಜೂನ್ 21 ರಂದು ಯಾಕೆ ಆಚರಣೆ ?

# ಜೂನ್ 21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. 
* ಈ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು ( ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ ) ಕರೆಯಲಾಗುತ್ತದೆ. 
* ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ.

# 2020ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದ ಆತಿಥ್ಯ ವಹಿಸಲಿರುವ ಸ್ಥಳ - ಲಡಾಖ್‌ನ ರಾಜಧಾನಿ ಲೇಹ

★ ಅಂತರಾಷ್ಟ್ರೀಯ ಯೋಗ ದಿನ ನಡೆದ ಸ್ಥಳಗಳು

* 2015ರಲ್ಲಿ ನವದೆಹಲಿ, 
* 2016ರಲ್ಲಿ ಚಂಡೀಗಢ, 
* 2017ರಲ್ಲಿ ಲಕ್ನೋ, 
* 2018ರಲ್ಲಿ ಡೆಹ್ರಾಡೂನ್ ಮತ್ತು
* 2019ರಲ್ಲಿ ರಾಂಚಿಯಲ್ಲಿ

ವಿಶ್ವ ಪರಿಸರ ದಿನ - ಜೂನ್ 5

see now★ ವಿಶ್ವ ಪರಿಸರ ದಿನ - ಜೂನ್ 5

# ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಜೂನ್ 5 ರಂದು ಆಚರಿಸಲಾಗುತ್ತದೆ. ಈ ವರ್ಷವನ್ನು ಒಂದು ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ.

 ✓✓ ಧ್ಯೇಯ ವಾಕ್ಯ ( theme) : ಜೀವವೈವಿಧ್ಯತೆಯನ್ನು ಆಚರಿಸಿ (Celebrate Biodiversity )

★ ಮುಖ್ಯಾಂಶಗಳು

# 2020 ರ ವಿಶ್ವ ಪರಿಸರ ದಿನವನ್ನು ಜರ್ಮನಿಯ ಸಹಭಾಗಿತ್ವದಲ್ಲಿ ಕೊಲಂಬಿಯಾದಲ್ಲಿ ಆಯೋಜಿಸಲಾಗಿದೆ. 
* ಈ ದಿನವನ್ನು ಭಾರತವು 2018 ರಲ್ಲಿ ಆಯೋಜಿಸಿತ್ತು, ಆಗ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವಿಕೆಗೆ ಭಾರತ ಒತ್ತು ನೀಡಿತು. 
* 2019 ರಲ್ಲಿ ಚೀನಾವು "ವಾಯು ಮಾಲಿನ್ಯ" ಎಂಬ ವಿಷಯದ ಅಡಿಯಲ್ಲಿ ದಿನವನ್ನು ಆಯೋಜಿಸಿತ್ತು.

★ ಹಿನ್ನೆಲೆ

# 1972 ರಲ್ಲಿ ವಿಶ್ವಸಂಸ್ಥೆಯು ಮಾನವ ಪರಿಸರ ಕುರಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಈ ದಿನವನ್ನು ಆಚರಿಸಲು ಘೋಷಿಸಲಾಯಿತು.
* ಈ ದಿನವನ್ನು ಮೊದಲ ಬಾರಿಗೆ 1974 ರಲ್ಲಿ ಆಚರಿಸಲಾಯಿತು.

★ ಥೀಮ್‌ನ ಮಹತ್ವ

# ಎಲ್ಲಾ ಜೀವಿಗಳ ಉಳಿವಿಗಾಗಿ ಜೀವವೈವಿಧ್ಯ ಮುಖ್ಯವಾಗಿದೆ. 
* ಮಾನವರು ಪರಿಸರ ವ್ಯವಸ್ಥೆಯ ಭಾಗವಾಗಿರುವ ಕಾರಣ ಮತ್ತು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲದ ಕಾರಣ ಈ ವಿಷಯವು ಮಹತ್ವದ್ದಾಗಿದೆ.
* ಇತ್ತೀಚಿನ ಮಿಡತೆ ದಾಳಿಗಳು, COVID-19 ಸಾಂಕ್ರಾಮಿಕ ಮತ್ತು ಕಾಡ್ಗಿಚ್ಚಿನಿಂದ ಮಾನವರು ಮತ್ತು ಜೀವನದ ಜಾಲಗಳ ಪರಸ್ಪರ ಅವಲಂಬನೆಯನ್ನು ಚೆನ್ನಾಗಿ ಕಲಿಯಬಹುದು

★ 2020 ರ ಟೈಲರ್ ಪ್ರಶಸ್ತಿ :-

# 2020 ರ ಟೈಲರ್ ಪ್ರಶಸ್ತಿಯನ್ನು ಪವನ್ ಸುಖದೇವ್ ಅವರು ಪಡೆದುಕೊಂಡಿದ್ದಾರೆ. 
* ಪವನ್ ಸುಖದೇವ್ ಅವರು ಪರಿಸರ ಸಂರಕ್ಷಣೆಗಾಗಿ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ದೊರಕಿದೆ.
* ಟೈಲರ್ ಪ್ರಶಸ್ತಿಯನ್ನು ಪರಿಸರ ನೊಬೆಲ್ ಪ್ರಶಸ್ತಿ ಎಂದೆ ಗುರುತಿಸಲಾಗುತ್ತದೆ.

# ಪರಿಸರ ಕಾರ್ಯಕ್ಷಮತೆ ಸೂಚ್ಯಂಕ 2020 ರಲ್ಲಿ - ಭಾರತ 177ನೇ ಸ್ಥಾನದಲ್ಲಿದೆ. 
* ಈ ಸೂಚ್ಯಂಕದಲ್ಲಿ ಸ್ವಿಜರ್ಲ್ಯಾಂಡ್ ಮೊದಲ ಸ್ಥಾನದಲ್ಲಿದೆ.

★ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ)

* ಸ್ಥಾಪನೆ : 5 ಜೂನ್ 1972
* ಕೇಂದ್ರ ಕಚೇರಿ : ನೈರೋಬಿ (ಕೀನ್ಯಾ)
* ಮುಖ್ಯಸ್ಥರು : ಇಂಗರ್ ಆಂಡರ್ಸನ್

ಸಾಮಾನ್ಯ ವಿಜ್ಞಾನ

see now

ಸಾಮಾನ್ಯ ವಿಜ್ಞಾನ: -

1. ಭವಿಷ್ಯದ ಲೋಹ - ಟೈಟಾನಿಯಂ
2. ಆಶಾ ಮೆಟಲ್ - ಯುರೇನಿಯಂ
3. ಹೆವಿ ಮೆಟಲ್ - ಓಸ್ಮಿಯಮ್
4. ಹೆಚ್ಚಿನ ಹೆವಿ ನೈಸರ್ಗಿಕ ಲೋಹಗಳು - ಯುರೇನಿಯಂ
5. ಹಗುರವಾದ ಲೋಹ - ಲಿಥಿಯಂ
6. ಹೆಚ್ಚು ಗಟ್ಟಿಯಾದ ಲೋಹ - ಪ್ಲಾಟಿನಂ
7. ಕಠಿಣ ವಸ್ತು - ವಜ್ರ
8. ಆಡಮ್ ವೇಗವರ್ಧಕ - ಪ್ಲಾಟಿನಂ
9. ತ್ವರಿತ ಬೆಳ್ಳಿ - ಬುಧ
10. ದ್ರವ ಲೋಹದ ಅಂಶಗಳು - ಬುಧ
11. ದ್ರವ ನಾನ್ಮೆಟಲ್ ಪದಾರ್ಥಗಳು - ಬ್ರೋಮಿನ್
@KAS_Karnataka
12. ಮಳೆಬಿಲ್ಲಿನ ನಡುವಿನ ಬಣ್ಣ - ಹಸಿರು
13. ಹೆಚ್ಚಿನ ಚದುರುವಿಕೆ - ನೇರಳೆ ಬಣ್ಣ
14. ಕಡಿಮೆ ಸ್ಕ್ಯಾಟರ್ - ಕೆಂಪು ಬಣ್ಣ
15. ಸಮೀಪದೃಷ್ಟಿ ದೋಷದ ಚಿಕಿತ್ಸೆಯಲ್ಲಿ - ಕಾನ್ಕೇವ್ ಲೆನ್ಸ್
16. ದೂರದೃಷ್ಟಿಯ ಚಿಕಿತ್ಸೆಯಲ್ಲಿ - ಪೀನ ಮಸೂರ
17. ಮಯೋಕಾರ್ಡಿಯಲ್ ದೋಷದ ಚಿಕಿತ್ಸೆಯಲ್ಲಿ - ಬೈಫೋಕಲ್ ಲೆನ್ಸ್
18. ಪಟಾಕಿಗಳಲ್ಲಿ ಕೆಂಪು ಬಣ್ಣಕ್ಕೆ ಕಾರಣ - ಸ್ಟ್ರಾಂಷಿಯಂ
@KAS_Karnataka
19. ಪಟಾಕಿಗಳಲ್ಲಿ ಹಸಿರು ಬಣ್ಣಕ್ಕೆ ಕಾರಣ - ಬೇರಿಯಮ್
20. ಪಟಾಕಿಗಳಲ್ಲಿ ಹಳದಿ ಬಣ್ಣ - ಸೋಡಿಯಂ
@KAS_Karnataka
21. ಪಟಾಕಿಗಳಲ್ಲಿ ನೀಲಿ ಬಣ್ಣ - ತಾಮ್ರ
22. ಪಟಾಕಿಗಳಲ್ಲಿ ಬೆಳ್ಳಿಯ ಬಣ್ಣಕ್ಕೆ ಕಾರಣ - ಅಲ್ಯೂಮಿನಿಯಂ
23. ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ # ರೋಹಿತ್_ಸೆಲ್ವಾಲ್
24. ಸಸ್ಯಶಾಸ್ತ್ರದ ತಂದೆ - ಥಿಯೋಫ್ರೆಸ್ಟಸ್
25. ವೈದ್ಯಕೀಯ ವಿಜ್ಞಾನದ ತಂದೆ - ಹಿಪೊಕ್ರೆಟಿಸ್
26. ಗ್ಯಾಸ್ ಎಂಜಿನ್ ಆವಿಷ್ಕಾರಕ - ಡೈಮ್ಲರ್
27. ಡೀಸೆಲ್ ಎಂಜಿನ್ ಆವಿಷ್ಕಾರಕ - ರುಡಾಲ್ಫ್ ಡೀಸೆಲ್
28. ಸ್ಟೀಮ್ ಎಂಜಿನ್ ಆವಿಷ್ಕಾರಕ - ಜೇಮ್ಸ್ ವ್ಯಾಟ್
29. ರೇಡಿಯೊದ ಸಂಶೋಧಕ - ಮಾರ್ಕೊನಿ
30. ಸುರಕ್ಷತಾ ರೇಜರ್‌ನ ಆವಿಷ್ಕಾರಕ - ಜಿಲೆಟ್
31. ಬದನೆಕಾಯಿಯ ನೀಲಿ ಬಣ್ಣ - ಬೆಟಾನಿನ್ ಕಾರಣ
32. ಟರ್ನಿಪ್ನ ನೀಲಿ ಬಣ್ಣ - ಬೀಟೈನ್ ಕಾರಣ
@KAS_Karnataka
33. ಟೊಮೆಟೊ ಕೆಂಪು ಬಣ್ಣ - ಲೈಕೋಪೀನ್ ಕಾರಣ
34. ಮೂಲಂಗಿಯ ವಿಕಿರಣ - ಐಸೊಸೈನೇಟ್ ಕಾರಣ
35. ಅರಿಶಿನ ಹಳದಿ ಬಣ್ಣ - ಕ್ರಿಸ್ಪಿಮಿನ್ ಕಾರಣ
36. ಟೊಮೆಟೊದಲ್ಲಿ ಆಮ್ಲ - ಆಕ್ಸಲಿಕ್
37. ನಿಂಬೆಯಲ್ಲಿ ಆಮ್ಲ - ಸಿಟ್ರಿಕ್
38. ಆಲಮ್ನಲ್ಲಿ ಆಮ್ಲ - ನೈಟ್ರಿಕ್
39. ಸೇಬಿನಲ್ಲಿ ಆಮ್ಲ - ಮಲಿಕ್
40. ವಿನೆಗರ್ನಲ್ಲಿ ಆಮ್ಲ - ಅಸಿಟಿಕ್
ಸಮುದ್ರದ ನೀರಿನ 41. ಪಿಹೆಚ್ - 8.4
42. ರಕ್ತದ ಪಿಹೆಚ್ - 7.4
@KAS_Karnataka
43. ಶುದ್ಧ ನೀರಿನ ಪಿಹೆಚ್ - 7
44. ಸಿಂಹದ ವೈಜ್ಞಾನಿಕ ಹೆಸರು - ಪ್ಯಾಂಥೆರಾ ಲಿಯೋ
45. ಚಿರತೆಯ ವೈಜ್ಞಾನಿಕ ಹೆಸರು - ಪ್ಯಾಂಥೆರಾ ಟೈಗ್ರಿಸ್
46. ​​ಪಪ್ಪಾಯಿಯ ವೈಜ್ಞಾನಿಕ ಹೆಸರು - ಕ್ಯಾರಿಕಾ ಪಪ್ಪಾಯಿ
47. ಸಾರಜನಕ ಅನ್ವೇಷಣೆ - ರುದರ್ಫೋರ್ಡ್
@KAS_Karnataka
48. ಆಮ್ಲಜನಕದ ಆವಿಷ್ಕಾರ - ಪ್ರೀಸ್ಟ್ಲಿ
49. ನೈಟ್ರಸ್ ಆಕ್ಸೈಡ್ನ ಅನ್ವೇಷಣೆ - ಪ್ರೀಸ್ಟ್ಲಿ
50. ನಗುವ ಅನಿಲ - ನೈಟ್ರಸ್ ಆಕ್ಸೈಡ್ ....

ಎವರೆಸ್ಟ್ ಗೆಲುವಿನ ನೆನಪು

see now⛷🏂⛷🏂⛷🏂⛷🏂⛷🏂⛷🏂
★★ ಎವರೆಸ್ಟ್ ಗೆಲುವಿನ ನೆನಪು

# ಜಗತ್ತಿನ ಮಹೋನ್ನತ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ದಿನ ಇಂದು. 
* ಅರವತ್ತಆರು ವರ್ಷಗಳ ಹಿಂದೆ 1953ರ ಮೇ 29ರಂದು ನ್ಯೂಜಿಲೆಂಡಿನ ಎಡ್ಮಂಡ್ ಹಿಲರಿ ಹಾಗೂ ನೇಪಾಳ-ಭಾರತ ಎರಡೂ ದೇಶಕ್ಕೆ ಸೇರಿದ ಶೆರ್ಪಾ ತೇನ್‌ಸಿಂಗ್ ನೋರ್ಗೆ 29 ಸಾವಿರ ಅಡಿಗೂ ಹೆಚ್ಚು ಎತ್ತರವಿದ್ದ ಈ ಮಂಜಿನ ಪರ್ವತವನ್ನು ವಶಪಡಿಸಿಕೊಂಡರು. 
* ಮನುಷ್ಯನ ಇಚ್ಛಾಶಕ್ತಿಯೆದುರು ಅಂದು ಮಣಿದ ಎವರೆಸ್ಟ್‌ನ ಕತೆ ಕ್ರೀಡಾ ಜಗತ್ತಿನ ಒಂದು ಮಹೋನ್ನತ ಸಾಹಸದ ಕಥನವೂ ಹೌದು.

★ ಮೌಂಟ್ ಎವರೆಸ್ಟ್

# ಮೌಂಟ್ ಎವರೆಸ್ಟ್  ಹಿಮಾಲಯದಲ್ಲಿರುವ ಮಹಾಲಂಗೂರ (Mahalangur) ಎನ್ನುವ ವಿಭಾಗದಲ್ಲಿದೆ. 
* ಇದು ಚೀನಾ ಮತ್ತು ನೇಪಾಳ ಗಡಿಯಲ್ಲಿದ್ದು, ದಕ್ಷಿಣ ಚೀನಾ, ಮದ್ಯ ಟಿಬೇಟ್ ಮತ್ತು ಈಶಾನ್ಯ ನೇಪಾಳವನ್ನು ಪ್ರತ್ಯೇಕಿಸುತ್ತದೆ.

# ಮೌಂಟ್ ಎವರೆಸ್ಟ್ 60 ಮಿಲಿಯನ್ ವರ್ಷಗಳ ಹಿಂದೆಯೆ ಸೃಷ್ಠಿಯಾಗಿರಬಹುದೆಂದು ಅಂದಾಜಿಸಲಾಗಿದೆ.

# 1865 ಕ್ಕೂ ಮೊದಲು ಮೌಂಟ್ ಎವರೆಸ್ಟ್ ನ್ನು ಫೀಕ್ 15 (Peak 15) ಎಂದು ಕರೆಯಲಾಗುತ್ತಿತ್ತು. 
# 1865 ರಲ್ಲಿ  ಬ್ರಿಟೀಷ ಸರಕಾರ,  ಭಾರತದ ಸರ್ವೇಯರ್ ಜನರಲ್ ಆಗಿದ್ದ ಜಾರ್ಜ್ ಎವರೆಸ್ಟ್ ಅವರ ಹೆಸರಿನಿಂದ ಈ ಪರ್ವತಕ್ಕೆ - ಮೌಂಟ್ ಎವರೆಸ್ಟ್ ಎಂದು ಮರುನಾಮಕರಣ ಮಾಡಲಾಯಿತು.
# ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ - “ ಸಾಗರ ಮಾಥಾ” ಎಂದು ಕರೆದರೆ ಟಿಬೇಟ್ ಭಾಗದಲ್ಲಿ ಜನರು  ಇದನ್ನು - "ಚೋಮೋಲುಂಗ್ಮಾ" ಎಂದು ಕರೆಯುತ್ತಾರೆ.

# ಮೌಂಟ್ ಎವರೆಸ್ಟ್  ಭೂಮಿಯ ಮೇಲೆ ಸಮುದ್ರ ಮಟ್ಟದಿಂದ ಇರುವ ಅತ್ಯಂತ ಎತ್ತರದ ಪರ್ವತ  ಶಿಖರ 
ಇದರ ಎತ್ತರ - 8848 ಮೀಟರ್ (29,029 ಅಡಿ)

# 1855 ರಲ್ಲಿ ಎವರೆಸ್ಟ್‌ನ ಎತ್ತರವನ್ನು ಅಳೆಯಲಾಗಿತ್ತು. 
* ಭಾರತೀಯ ಸರ್ವೇಕ್ಷಣಾ ಇಲಾಖೆ ಮಾತ್ರವಲ್ಲದೆ, ಇತರರು ಕೂಡಾ ಇದರ ಎತ್ತರ ಅಳೆದಿದ್ದರು. 
* ಆದರೆ ಇಲಾಖೆಯ ಬಳಿಯಲ್ಲಿರುವ ಮಾಹಿತಿಯೇ ನಿಖರವಾಗಿದೆ. 
* ಅದರ ಪ್ರಕಾರ ಎವರೆಸ್ಟ್‌ ಪರ್ವತ 8848 ಮೀಟರ್ (29,028 ಅಡಿ) ಎತ್ತರವಿದೆ ಎಂದು ತಿಳಿಸಿದ್ದಾರೆ.

# ಮೌಂಟ್​ ಎವರೆಸ್ಟ್ ಎತ್ತರವನ್ನು ಮತ್ತೊಮ್ಮೆ ಅಳತೆ ಮಾಡಲು ನೇಪಾಳ ನಿರ್ಧರಿಸಿದೆ.
* 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದರಿಂದ ​ ಎತ್ತರ ಕೊಂಚ ಕಡಿಮೆಯಾಗಿದೆ ಅಂತಾ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ ನೇಪಾಳ ಸರ್ಕಾರ ಎತ್ತರ ಅಳತೆ ಮಾಡಲು ನುರಿತ ಪರ್ವತಾರೋಹಿಗಳ ತಂಡವನ್ನು ನೇಮಿಸಿದೆ.

Police information

see now🚔 ಪೊಲೀಸ್  ಪರೀಕ್ಷೆಗೆ ಉಪಯುಕ್ತವಾಗುವ ಪ್ರಮುಖ *ಪೋಲಿಸಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು*👇

🔸 ಕರ್ನಾಟಕದ ಪೊಲೀಸ್ ಅಕಾಡೆಮಿ= *ಮೈಸೂರು*

🔹 ಪೊಲೀಸ್ ತರಬೇತಿ ಕಾಲೇಜು= *ಕಲಬುರ್ಗಿ*

🔸 ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ= *ಚನ್ನಪಟ್ಟಣ*( ರಾಮನಗರ)

🔹 ನ್ಯಾಷನಲ್ ಪೊಲೀಸ್ ಅಕಾಡೆಮಿ= *ಹೈದರಾಬಾದ್*

🔸 ರಾಷ್ಟ್ರೀಯ ಪೊಲೀಸ್ ಸಂಸ್ಥೆ= *ನವದೆಹಲಿ*

🔹 ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ= *ನೋಯಿಡಾ*

🔸 ಭಾರತದ ಮೊದಲ ಮಹಿಳಾ ಪೊಲೀಸ್ ಠಾಣೆ= *ಕೋಜಿಕೋಡೈ*( ಕೇರಳ)

🔹 ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಠಾಣೆ=
 *ಹಲಸೂರು ಗೇಟ್*

🔸 ಭಾರತದ ಮೊದಲ "ಸೈಬರ್ ಕ್ರೈಮ್" ಪೋಲಿಸ್ ಠಾಣೆ= *ಬೆಂಗಳೂರು*

🔹 ಭಾರತದ ಮೊದಲ ಪೊಲೀಸ್ ಮ್ಯೂಸಿಯಂ ಇರುವುದು= *ನವದೆಹಲಿ*

🔸 ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವುದು= *ಡೆಹರಾಡೂನ್*

🔹 ಮಿಲಿಟರಿ ಸಿಬ್ಬಂದಿಗಳ ತರಬೇತಿ ಕಾಲೇಜ್ ಇರುವುದು= *ವೆಲ್ಲಿಂಗ್ಟನ್*

🔸 ಕರ್ನಾಟಕದಲ್ಲಿ ಒಟ್ಟು ಪೊಲೀಸ್ ಠಾಣೆಗಳ ಸಂಖ್ಯೆ= *923*

🔹 ಭಾರತದ ಮೊದಲ ಮಹಿಳಾ ಡಿ.ಜೆ ಮತ್ತು ಐ.ಜಿ.ಪಿ=
 *ಕಾಂಚನ ಚೌಧರಿ ಭಟ್ಟಾಚಾರ್ಯ*

🔸 ಕರ್ನಾಟಕದ ಮೊದಲ ಮಹಿಳಾ ಡಿ.ಜಿ ಮತ್ತು ಐ,.ಜಿ.ಪಿ
 *ನೀಲಮಣಿ ಎನ್ ರಾಜು*

🔹 ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ=
*ಕಿರಣ್ ಬೇಡಿ*

🔸 ಕರ್ನಾಟಕದಲ್ಲಿ ಮೊಟ್ಟಮೊದಲ ನೇರನೇಮಕಾತಿ ಹೊಂದಿದ ಮಹಿಳಾ ಐಪಿಎಸ್= *ಇಂದಿರಾ*

🔹 ಬೆಂಗಳೂರಿನ ಮೊದಲ ಕಮಿಷನರ್= *ಸಿ ಚಾಂಡಿ*

🔸 ಕರ್ನಾಟಕದ ಮೊದಲ ಐ.ಜಿ.ಪಿ= *ಎಲ್ ರಿಕೆಟ್ಸ್*

🔹 ಕರ್ನಾಟಕದ ಪ್ರಸ್ತುತ ಗೃಹ ಮಂತ್ರಿ= *ಬಸವರಾಜ್ ಬೊಮ್ಮಾಯಿ*

🔸 ಪೊಲೀಸ್ ಸುಧಾರಣೆಗೆ ಅತಿ ಹೆಚ್ಚು ಒತ್ತು ಕೊಟ್ಟ ಬ್ರಿಟಿಷ್ ಗೌರ್ನರ್= *ಲಾರ್ಡ್ ಕಾರ್ನವಾಲಿಸ್*

🔹 ಪೊಲೀಸ್ ಧ್ವಜ ದಿನ= *ಏಪ್ರಿಲ್-2*
( ಆಚರಿಸಲು ಕಾರಣ= *1965 ಎಪ್ರಿಲ್ 2* ರಂದು ಕರ್ನಾಟಕದ ಪೊಲೀಸ್ ಕಾಯ್ದೆ ಜಾರಿಗೆ ಬಂದ ಪ್ರಯುಕ್ತ ಆಚರಿಸಲಾಗುತ್ತದೆ.)


 🔸ಪೊಲೀಸ್ ಹುತಾತ್ಮರ ದಿನ= *ಅಕ್ಟೋಬರ್ -21*
( ಆಚರಿಸಲು ಕಾರಣ= *1959 ಅಕ್ಟೋಬರ್ 21ರಂದು ಸಿ.ಆರ.ಪಿ.ಎಫ್ ನ ಸಿಬ್ಬಂದಿಯವರು ಚೀನಾ ಸೈನಿಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಪ್ರಯುಕ್ತ* ಆಚರಿಸಲಾಗುತ್ತದೆ,)

🔹 "ಡಿ.ವೈ.ಎಸ್ಪಿ" ಮತ್ತು "ಸಿ.ಪಿ.ಐ" ಗೆ *3 ನಕ್ಷತ್ರಗಳು* ( star)ಇರುತ್ತವೆ, 

🔸 ಪಿ.ಎಸ್.ಐ ಗೆ 
*2 ನಕ್ಷತ್ರಗಳು*( star) ಇರುತ್ತವೆ, 

🔹 ಪಿ.ಎಸ್.ಐ ಯನ್ನು *ವಾಕಿ* ಎಂದು ಕರೆಯುತ್ತಾರೆ, 

🔸 ಸಿ.ಪಿ.ಐ ಯನ್ನು *ಚಾರ್ಲಿ* ಎಂದು ಕರೆಯುತ್ತಾರೆ, 

🔹 ಡಿ.ವೈ.ಎಸ್ಪಿ ಯನ್ನು *ಎಬಲ್* ಎಂದು ಕರೆಯುತ್ತಾರೆ, 

🔸 ಪೊಲೀಸ್ *ರಾಜ್ಯ ಪಟ್ಟಿಯಲ್ಲಿ*  ಬರುತ್ತದೆ, 

🔹 ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ=
 *1965 ಏಪ್ರಿಲ್ 2* 

🔸 ಕರ್ನಾಟಕ ಪೊಲೀಸ್ ಇಲಾಖೆಗೆ *ಗಂಡಬೇರುಂಡ* ಎಂಬ ಲಾಂಛನವನ್ನು ಸೇರಿಸಿದ ವರ್ಷ= *1935*

🔹 ಪೊಲೀಸ್ ಇಲಾಖೆಗೆ *ಶ್ವಾನದಳವನ್ನು* ಸೇರಿಸಿದ ವರ್ಷ= *1968*

🔸 ಸಿ.ಆರ್.ಪಿ.ಸಿ ಜಾರಿಯಾದ ವರ್ಷ= *1974* 

🔹 ಐ.ಪಿ.ಸಿ ಜಾರಿಯಾದ ವರ್ಷ= *1860*

🔸 ಎನ್.ಸಿ.ಸಿ ಸ್ಥಾಪನೆಯಾದ ವರ್ಷ= *1948*

🔹 ಎನ್.ಎಸ್.ಎಸ್ ಸ್ಥಾಪನೆಯಾದ ವರ್ಷ= *1948*

🔸 ಹೋಂಗಾರ್ಡ್ ಸ್ಥಾಪನೆಯಾದ ವರ್ಷ= *1946*

🔹BSF ಸ್ಥಾಪನೆಯಾದ ವರ್ಷ= *1965*

🔸CRPF ಸ್ಥಾಪನೆಯಾದ ವರ್ಷ= *1939*

🔹CISF ಸ್ಥಾಪನೆಯಾದ ವರ್ಷ= *1969*

🔸 ಭೂಸೇನೆ ಸ್ಥಾಪನೆಯಾದ ವರ್ಷ= *1948*

🔹 ವಾಯುಸೇನೆ ಸ್ಥಾಪನೆ ಯಾದ ವರ್ಷ= *1932*

🔸 ನೌಕಾಪಡೆ ಸ್ಥಾಪನೆ ಯಾದ ವರ್ಷ= *1971*

🔹 ಪೊಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರು= *ಐ.ಜಿ.ಪಿ ದರ್ಜಿ*

 🚔ಕರ್ನಾಟಕದಲ್ಲಿರುವ ಒಟ್ಟು ಪೊಲೀಸ್ ವಲಯಗಳು- *7*

1) ಉತ್ತರ ವಲಯ= *ಬೆಳಗಾವಿ*

2) ದಕ್ಷಿಣ ವಲಯ= *ಮೈಸೂರು*

3) ಪೂರ್ವ ವಲಯ= *ದಾವಣಗೆರೆ*

4) ಪಶ್ಚಿಮ ವಲಯ= *ಮಂಗಳೂರು*

5) ಈಶಾನ್ಯ ವಲಯ= *ಕಲಬುರಗಿ*

6) ಕೇಂದ್ರೀಯ ವಲಯ= *ಬೆಂಗಳೂರು*

7) ಬಳ್ಳಾರಿ ವಲಯ= *ಬಳ್ಳಾರಿ*

 🚔ಕರ್ನಾಟಕದಲ್ಲಿ ಒಟ್ಟು *12 KSRP ಬೆಟಾಲಿಯನ್* ಗಳು ಇವೆ,

1) ಬೆಂಗಳೂರು= *4* ಬೆಟಾಲಿಯನ್ ಗಳು, 

2) ಮಂಗಳೂರು= *1* 

3) ಮೈಸೂರು= *1*

4) ಕಲಬುರಗಿ= *1*

5) ಶಿವಮೊಗ್ಗ= *1*

6) ಹಾಸನ= *1*

7) ತುಮಕೂರು= *1*

8) ಬೆಳಗಾವಿ= *1*

9) ಶಿಗ್ಗಾವಿ= *1*

Notes

see nowಇವರ ಕಾಲದ ಚಿನ್ನದ ಗಣಿ= *ರಾಯಚೂರಿನ ಹಟ್ಟಿಚಿನ್ನದಗಣಿ*

🔸 ಕಾಗದ ಕೈಗಾರಿಕೆ= *ವಿಜಯಪುರ*

🔹  ಇವರ ಪ್ರಮುಖ ರಫ್ತು ಪದಾರ್ಥ= *ಮೆಣಸು*

🔸 ಇವರ ಕಾಲದ ಕಲಿಕಾ ಕೇಂದ್ರಗಳು= *ಮಕ್ತಬ್ ಮತ್ತು ಮದರಸಾ*

☀️ *ಫಿಕಾರ್ ನಾಮಾ ಕೃತಿಯ ಕರ್ತೃ* - ಬಂದೇ ನವಾಜ್

☀️ 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - *ರಫಿ ಕ್ಷಾಜಿನ್*

✍️ *ವಿಶೇಷ ಅಂಶಗಳು* 👇👇👇

🔹ಇವರ ಕಾಲದ ಶೈಲಿಯನ್ನು *ಇಂಡೊ ಸಾರ್ಸನಿಕ್ ಶೈಲಿ”* ಎಂದು ಕರೆಯಲಾಗಿದೆ.

 ⚜️ಇವರ ವಾಸ್ತುಶಿಲ್ಪದ ಲಕ್ಷಣಗಳು👇

1) *ಎತ್ತರವಾದ ಮಿನಾರುಗಳು*

2) *ಬಲಿಷ್ಠ ಕಮಾನುಗಳು*

3) *ಬ್ರಹದಾಕಾರದ ಗುಮ್ಮಟಗಳು*

4) *ವಿಶಾಲವಾದ ಹಜಾರಗಳು*

5) *ಕಟ್ಟಡಗಳ ಮೇಲ್ಭಾಗದ ಬಾಲಚಂದ್ರ ಕೃತಿ*

6) ಗೋಡೆಗಳ ಮೇಲೆ ಅಲಂಕಾರಾಕ್ಷರ= *ಕ್ಯಾಲಿಗ್ರಫಿ*
🔹 ವಾಸ್ತುಶಿಲ್ಪ ಕೇಂದ್ರಗಳು= *ಕಲ್ಬುರ್ಗಿ,  ಬೀದರ್*

🔸 *ಗುಲ್ಬರ್ಗದ ಕೋಟೆಯನ್ನು* ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು.

🔹ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - *ಬಂದೇ ನವಾಜ್ ದರ್ಗಾ*

🔸ಮಹಮ್ಮದ್ ಗವಾನ್ ನು 1461 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

🔹ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - *ಬೀದರಿ ಕಲೆ*✍️

🔸ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - *ಟೆಹ್ನಿಷಾನ್* ಎಂದು ಕರೆಯುವರು

🔹ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - *ಜರ್ನಿಪಾನ್* ಎಂದು ಕರೆಯುವರು



🔹 *ಲಷ್ಕರ್* ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

🔸 *ತೋಶಕ್ ಖಾನ್* - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ

🔹 *ಫಿಕಾರ್ ಘರ್* - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ

🔸ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - *ಅರಬ್ಬಿ ಭಾಷೆಯ ಪಂಡಿತರು*

✍️ *ಜಾಮಿ ಮಸೀದಿ* ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔹 ಇದು "ದಕ್ಷಿಣ ಭಾರತದಲ್ಲಿಯೇ  ಅತಿ ದೊಡ್ಡ ಮಸೀದಿ"

🔸 ನಿರ್ಮಿಸಿದವರು= *ಒಂದನೇ ಮಹಮ್ಮದ್ ಷಾ*

🔹 ಶಿಲ್ಪಿ= *ರಫೀ ಖ್ವಾಜಿನ್*

✍️ ಇವರ ಆಡಳಿತ ಭಾಷೆ= *ಪರ್ಷಿಯನ್*
🌷🌷🌷🌷🌷🌷🌷🌷🌷🌷

Notes

see now✍️!!ನೋಟ್!!👇 

☘  ನಿಯಂತ್ರಣ ಮಂಡಳಿ ಸ್ಥಾಪನೆಗೆ ಕಾರಣವಾದ ಶಾಸನ 
- *ಪಿಟ್ಸ್ ಇಂಡಿಯಾ ಕಾಯ್ದೆ* 1784 

☘ ಮುಕ್ತ ವ್ಯಾಪಾರದ ಹೊಸ ಶಕೆ ಈ ಕಾಯ್ದೆಯನ್ವಯ ಆರಂಭವಾಯಿತು 
-  *1813 ರ ಚಾರ್ಟರ್ ಆಕ್ಟ್*

☘ ಬಂಗಾಳದ ಗವರ್ನರ ಈ ಕಾಯ್ದೆಯನ್ವಯ ಭಾರತದ ಗವರ್ನರ್ ಜನರಲ್‌ನಾದನು 
-  *1833 ರ ಚಾರ್ಟರ್ ಕಾಯ್ದೆ*

☘ ಖಾಯಂ ಜಮೀನ್ದಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ 
-  *ಜಮೀನ್ದಾರರು* 

☘ ಖಾಯಂ ಜಮೀನ್ದಾರಿ ಪದ್ಧತಿಯನ್ವಯ ಭೂಮಾಲೀಕರಾದವರು 
-  *ಜಮೀನ್ದಾರರು*

☘ ಭಾರತದ ರೈತರು ಸಾಲದಲ್ಲೇ ಹುಟ್ಟಿ , ಸಾಲದಲ್ಲೇ ಬದುಕಿ , ಸಾಲದಲ್ಲೇ ಸತ್ತರು ಎಂದು ಹೇಳಿದವರು 
- *ಚಾರ್ಲ್ಸ್ ಮೆಟಕಾಫ್*(TET-2020)

☘ ಮಹಲ್ ಪದದ ಅರ್ಥವೇನು ? 
-  *ತಾಲೂಕು* 

☘ ಮಹಲ್ವಾರಿ ಪದ್ದತಿಯನ್ನು ಪ್ರಯೋಗಿಸಿದವರು 
-  *ಆರ್ . ಎಂ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್* 

☘ ರೈತವಾರಿ ಪದ್ಧತಿ ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು 
-  *ಅಲೆಕ್ಸಾಂಡರ್ ರೀಡ್* ( 1782 )(TET-2020)

☘ ರೈತವಾರಿ ಪದ್ಧತಿಯನ್ನು ಮದರಾಸು , ಮೈಸೂರು ( 1801 ) ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು 
-  *ಥಾಮಸ್ ಮನ್ರೋ*

☘ ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕ ಕಲ್ಪಿಸಿದ ಭೂಕಂದಾಯ ಪದ್ಧತಿ
-   *ರೈತವಾರಿ* 

☘ ರೈತರು ಸಾಲದ ಸುಳಿಗೆ ಸಿಲುಕಿದ್ದು ಈ ಭೂ ಕಂದಾಯ ಪದ್ದತಿಯಿಂದ 
-  *ರೈತವಾರಿ* 

☘ ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಆಧಿಕಾರಿ 
-  *ವಾರನ್ ಹೇಸ್ಟಿಂಗ್ಸ್* 

☘ 1781 ರಲ್ಲಿ ಕಲ್ಕತ್ತಾದಲ್ಲಿ ಮದರಸಾ ಆರಂಭಿಸಿದವನು 
- *ವಾರನ್ ಹೇಸ್ಟಿಂಗ್*

☘ 1792 ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜ್ ಆರಂಭಿಸಿದವರು 
-  *ಜೊನಾಥನ್ ಡಂಕನ್* 

☘ ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು 
-  *ಚಾರ್ಲ್ಸ್ ಗ್ರಾಂಟ್* 

☘ ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್
- *ವಿಲಿಯಂ ಬೆಂಟಿಂಕ್*

☘  ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ ನೀಡಿದವರು 
-  *ಮೆಕಾಲೆ* 

☘ ರಕ್ತ ಮಾಂಸದಲ್ಲಿ ಭಾರತೀಯರಾಗಿಯೂ , ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಇಂಗ್ಲೀಷರಾಗುವ ಭಾರತೀಯರನ್ನು ಸೃಷ್ಟಿಸುವ ಉದ್ದೇಶ ಹೊಂದಿದ ವರದಿ 
- *ಮೆಕಾಲೆ* 

☘ 1857 ರಲ್ಲಿ ಕಲ್ಕತ್ತಾ , ಬಾಂಬೆ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದವರು 
- *ಡಾಲ್ ಹೌಸಿ*

☘ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ 
-  *1935 ರ ಭಾರತ ಸರರ್ಕಾದ ಕಾಯ್ದೆ*

☘ ಕೇಂದ್ರದಲ್ಲಿ ದ್ವಿಸರಕಾರ ಸ್ಥಾಪನೆಗೆ ಅವಕಾಶ ನೀಡಿದ ಶಾಸನ 
- *1935 ರ ಭಾರತ ಸರ್ಕಾರ ಕಾಯ್ದೆ* 

☘ ಬ್ರಿಟಿಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು , ಏಕೆ.? 
- *ಹೈದರಾಲಿ ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು , ಬ್ರಿಟಷರಲ್ಲಿ ನಡುಕ ಹುಟ್ಟಿಸಿತು , ಇದರಿಂದ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು*

☘ ಮೊದಲನೆ ಆಂಗ್ಲೋ - ಮೈಸೂರು ಯುದ್ದ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
-  *ಮದ್ರಾಸ್ ಒಪ್ಪಂದ*
 
☘ ಪೊರ್ಟೋನೋವೆ ಕದನದಲ್ಲಿ ( 1781 ) ಸೋತವರು
-  *ಹೈದರಾಲಿ*

☘  2ನೇ ಆಂಗ್ಲೋ - ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ 
- *ಮಂಗಳೂರು* 

☘ ಮೂರನೇ ಆಂಗ್ಲೋ - ಮೈಸೂರು ಯುದ್ದಕೆ ಕಾರಣ 
-  *ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ* 

☘ ಮೂರನೇ ಆಂಗ್ಲೋ - ಮೈಸೂರು ಯುದ್ಧದ ಗತಿ ಬದಲಾಗಲು ಕಾರಣ 
-  *ಲಾರ್ಡ್ ಕಾರನ್‌ವಾಲೀಸ್ ಬ್ರಿಟಿಷ್ ಸೈನ್ಯದ ನಾಯಕತ್ವ ವಹಿಸಿಕೊಂಡಿದ್ದು* 

☘ ಮೂರನೇ ಆಂಗ್ಲೋ- ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ 
 - *ಶ್ರೀರಂಗಪಟ್ಟಣ ಒಪ್ಪಂದ*(civil PC-2020)

☘ ಮರಾಠಿಯಲ್ಲಿ ವಾಘ ಎಂದರೆ
- *ಹುಲಿ*

☘ ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣ 
-  *ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು*

☘ ದೋಂಡಿಯಾನಿಗೆ ಸಹಾಯ ಮಾಡಿದವರು 
-  *ಫ್ರೆಂಚ್‌ರು* 

☘ ದೋಂಡಿಯಾನು ಹತ್ಯೆಯಾದ ಸ್ಥಳ 
- *ಕೋನ್ ಗಲ್*

☘ ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣ
-  *ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು* 

 ☘ ಚೆನ್ನಮ್ಮ ಮರಣ ಹೊಂದಿದ ಸ್ಥಳ
 - *ಬೈಲಹೊಂಗಲ* 

☘ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ
- *ನಂದಗಡ* ( 1831 ) 

☘ ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ 
-  *ರೈತ ಬಂಡಾಯ*

☘  1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು 
-  *ವೆಂಕಟಪ್ಪನಾಯಕ* 

☘ ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ 
- *ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು* 

☘ 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣ 
-  *ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು* 

☘ ಆತ್ಮೀಯ ಸಭಾ ( ಕಲ್ಕತ್ತಾ)ದ ಸ್ಥಾಪಕರು
 - *ರಾಜಾ ರಾಮ್ ಮೋಹನ್ ರಾಯ್*

☘  ಭಾರತದ ಪುನರುಜ್ಜಿವನದ ಜನಕ , ಭಾರತೀಯ ರಾಷ್ಟ್ರೀಯತತೆಯ ಪ್ರವಾದಿ ಎಂದು ಕರೆಯಲ್ಪಡುವವರು
-  *ರಾಜಾ ರಾಮ್ ಮೋಹನ್ ರಾಯ್*

☘ ಯುವಬಂಗಾಳ ಚಳವಳಿ ಆರಂಭಿಸಿದವರು 
- *ಹೆನ್ರಿ ವಿವಿಯನ್ ಡಿರೇಜಿಯೊ*(TET-2020) 

☘ ಅಕಾಡಮಿಕ್ ಅಸೋಸಿಯೇಷನ್ ಚರ್ಚಾ ವೇದಿಕೆ ಸ್ಥಾಪಕರು 

*ಹೆನ್ರಿ ವಿವಿಯನ್ ಡಿರೇಜಿಯೊ
✍💥✍💥✍💥✍💥✍💥✍💥

ಎತ್ತಿತೋರಿಸಲಾದ ಪೋಸ್ಟ್

Horticulture Bidar