somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮಾರ್ಚ್ 19, 2021

Notes

see now✍️!!ನೋಟ್!!👇 

☘  ನಿಯಂತ್ರಣ ಮಂಡಳಿ ಸ್ಥಾಪನೆಗೆ ಕಾರಣವಾದ ಶಾಸನ 
- *ಪಿಟ್ಸ್ ಇಂಡಿಯಾ ಕಾಯ್ದೆ* 1784 

☘ ಮುಕ್ತ ವ್ಯಾಪಾರದ ಹೊಸ ಶಕೆ ಈ ಕಾಯ್ದೆಯನ್ವಯ ಆರಂಭವಾಯಿತು 
-  *1813 ರ ಚಾರ್ಟರ್ ಆಕ್ಟ್*

☘ ಬಂಗಾಳದ ಗವರ್ನರ ಈ ಕಾಯ್ದೆಯನ್ವಯ ಭಾರತದ ಗವರ್ನರ್ ಜನರಲ್‌ನಾದನು 
-  *1833 ರ ಚಾರ್ಟರ್ ಕಾಯ್ದೆ*

☘ ಖಾಯಂ ಜಮೀನ್ದಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ 
-  *ಜಮೀನ್ದಾರರು* 

☘ ಖಾಯಂ ಜಮೀನ್ದಾರಿ ಪದ್ಧತಿಯನ್ವಯ ಭೂಮಾಲೀಕರಾದವರು 
-  *ಜಮೀನ್ದಾರರು*

☘ ಭಾರತದ ರೈತರು ಸಾಲದಲ್ಲೇ ಹುಟ್ಟಿ , ಸಾಲದಲ್ಲೇ ಬದುಕಿ , ಸಾಲದಲ್ಲೇ ಸತ್ತರು ಎಂದು ಹೇಳಿದವರು 
- *ಚಾರ್ಲ್ಸ್ ಮೆಟಕಾಫ್*(TET-2020)

☘ ಮಹಲ್ ಪದದ ಅರ್ಥವೇನು ? 
-  *ತಾಲೂಕು* 

☘ ಮಹಲ್ವಾರಿ ಪದ್ದತಿಯನ್ನು ಪ್ರಯೋಗಿಸಿದವರು 
-  *ಆರ್ . ಎಂ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್* 

☘ ರೈತವಾರಿ ಪದ್ಧತಿ ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು 
-  *ಅಲೆಕ್ಸಾಂಡರ್ ರೀಡ್* ( 1782 )(TET-2020)

☘ ರೈತವಾರಿ ಪದ್ಧತಿಯನ್ನು ಮದರಾಸು , ಮೈಸೂರು ( 1801 ) ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು 
-  *ಥಾಮಸ್ ಮನ್ರೋ*

☘ ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕ ಕಲ್ಪಿಸಿದ ಭೂಕಂದಾಯ ಪದ್ಧತಿ
-   *ರೈತವಾರಿ* 

☘ ರೈತರು ಸಾಲದ ಸುಳಿಗೆ ಸಿಲುಕಿದ್ದು ಈ ಭೂ ಕಂದಾಯ ಪದ್ದತಿಯಿಂದ 
-  *ರೈತವಾರಿ* 

☘ ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಆಧಿಕಾರಿ 
-  *ವಾರನ್ ಹೇಸ್ಟಿಂಗ್ಸ್* 

☘ 1781 ರಲ್ಲಿ ಕಲ್ಕತ್ತಾದಲ್ಲಿ ಮದರಸಾ ಆರಂಭಿಸಿದವನು 
- *ವಾರನ್ ಹೇಸ್ಟಿಂಗ್*

☘ 1792 ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜ್ ಆರಂಭಿಸಿದವರು 
-  *ಜೊನಾಥನ್ ಡಂಕನ್* 

☘ ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು 
-  *ಚಾರ್ಲ್ಸ್ ಗ್ರಾಂಟ್* 

☘ ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್
- *ವಿಲಿಯಂ ಬೆಂಟಿಂಕ್*

☘  ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ ನೀಡಿದವರು 
-  *ಮೆಕಾಲೆ* 

☘ ರಕ್ತ ಮಾಂಸದಲ್ಲಿ ಭಾರತೀಯರಾಗಿಯೂ , ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಇಂಗ್ಲೀಷರಾಗುವ ಭಾರತೀಯರನ್ನು ಸೃಷ್ಟಿಸುವ ಉದ್ದೇಶ ಹೊಂದಿದ ವರದಿ 
- *ಮೆಕಾಲೆ* 

☘ 1857 ರಲ್ಲಿ ಕಲ್ಕತ್ತಾ , ಬಾಂಬೆ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದವರು 
- *ಡಾಲ್ ಹೌಸಿ*

☘ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ 
-  *1935 ರ ಭಾರತ ಸರರ್ಕಾದ ಕಾಯ್ದೆ*

☘ ಕೇಂದ್ರದಲ್ಲಿ ದ್ವಿಸರಕಾರ ಸ್ಥಾಪನೆಗೆ ಅವಕಾಶ ನೀಡಿದ ಶಾಸನ 
- *1935 ರ ಭಾರತ ಸರ್ಕಾರ ಕಾಯ್ದೆ* 

☘ ಬ್ರಿಟಿಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು , ಏಕೆ.? 
- *ಹೈದರಾಲಿ ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು , ಬ್ರಿಟಷರಲ್ಲಿ ನಡುಕ ಹುಟ್ಟಿಸಿತು , ಇದರಿಂದ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು*

☘ ಮೊದಲನೆ ಆಂಗ್ಲೋ - ಮೈಸೂರು ಯುದ್ದ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
-  *ಮದ್ರಾಸ್ ಒಪ್ಪಂದ*
 
☘ ಪೊರ್ಟೋನೋವೆ ಕದನದಲ್ಲಿ ( 1781 ) ಸೋತವರು
-  *ಹೈದರಾಲಿ*

☘  2ನೇ ಆಂಗ್ಲೋ - ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ 
- *ಮಂಗಳೂರು* 

☘ ಮೂರನೇ ಆಂಗ್ಲೋ - ಮೈಸೂರು ಯುದ್ದಕೆ ಕಾರಣ 
-  *ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ* 

☘ ಮೂರನೇ ಆಂಗ್ಲೋ - ಮೈಸೂರು ಯುದ್ಧದ ಗತಿ ಬದಲಾಗಲು ಕಾರಣ 
-  *ಲಾರ್ಡ್ ಕಾರನ್‌ವಾಲೀಸ್ ಬ್ರಿಟಿಷ್ ಸೈನ್ಯದ ನಾಯಕತ್ವ ವಹಿಸಿಕೊಂಡಿದ್ದು* 

☘ ಮೂರನೇ ಆಂಗ್ಲೋ- ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ 
 - *ಶ್ರೀರಂಗಪಟ್ಟಣ ಒಪ್ಪಂದ*(civil PC-2020)

☘ ಮರಾಠಿಯಲ್ಲಿ ವಾಘ ಎಂದರೆ
- *ಹುಲಿ*

☘ ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣ 
-  *ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು*

☘ ದೋಂಡಿಯಾನಿಗೆ ಸಹಾಯ ಮಾಡಿದವರು 
-  *ಫ್ರೆಂಚ್‌ರು* 

☘ ದೋಂಡಿಯಾನು ಹತ್ಯೆಯಾದ ಸ್ಥಳ 
- *ಕೋನ್ ಗಲ್*

☘ ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣ
-  *ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು* 

 ☘ ಚೆನ್ನಮ್ಮ ಮರಣ ಹೊಂದಿದ ಸ್ಥಳ
 - *ಬೈಲಹೊಂಗಲ* 

☘ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ
- *ನಂದಗಡ* ( 1831 ) 

☘ ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ 
-  *ರೈತ ಬಂಡಾಯ*

☘  1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು 
-  *ವೆಂಕಟಪ್ಪನಾಯಕ* 

☘ ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ 
- *ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು* 

☘ 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣ 
-  *ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು* 

☘ ಆತ್ಮೀಯ ಸಭಾ ( ಕಲ್ಕತ್ತಾ)ದ ಸ್ಥಾಪಕರು
 - *ರಾಜಾ ರಾಮ್ ಮೋಹನ್ ರಾಯ್*

☘  ಭಾರತದ ಪುನರುಜ್ಜಿವನದ ಜನಕ , ಭಾರತೀಯ ರಾಷ್ಟ್ರೀಯತತೆಯ ಪ್ರವಾದಿ ಎಂದು ಕರೆಯಲ್ಪಡುವವರು
-  *ರಾಜಾ ರಾಮ್ ಮೋಹನ್ ರಾಯ್*

☘ ಯುವಬಂಗಾಳ ಚಳವಳಿ ಆರಂಭಿಸಿದವರು 
- *ಹೆನ್ರಿ ವಿವಿಯನ್ ಡಿರೇಜಿಯೊ*(TET-2020) 

☘ ಅಕಾಡಮಿಕ್ ಅಸೋಸಿಯೇಷನ್ ಚರ್ಚಾ ವೇದಿಕೆ ಸ್ಥಾಪಕರು 

*ಹೆನ್ರಿ ವಿವಿಯನ್ ಡಿರೇಜಿಯೊ
✍💥✍💥✍💥✍💥✍💥✍💥

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...