somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮಾರ್ಚ್ 19, 2021

ಎವರೆಸ್ಟ್ ಗೆಲುವಿನ ನೆನಪು

see now⛷🏂⛷🏂⛷🏂⛷🏂⛷🏂⛷🏂
★★ ಎವರೆಸ್ಟ್ ಗೆಲುವಿನ ನೆನಪು

# ಜಗತ್ತಿನ ಮಹೋನ್ನತ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ದಿನ ಇಂದು. 
* ಅರವತ್ತಆರು ವರ್ಷಗಳ ಹಿಂದೆ 1953ರ ಮೇ 29ರಂದು ನ್ಯೂಜಿಲೆಂಡಿನ ಎಡ್ಮಂಡ್ ಹಿಲರಿ ಹಾಗೂ ನೇಪಾಳ-ಭಾರತ ಎರಡೂ ದೇಶಕ್ಕೆ ಸೇರಿದ ಶೆರ್ಪಾ ತೇನ್‌ಸಿಂಗ್ ನೋರ್ಗೆ 29 ಸಾವಿರ ಅಡಿಗೂ ಹೆಚ್ಚು ಎತ್ತರವಿದ್ದ ಈ ಮಂಜಿನ ಪರ್ವತವನ್ನು ವಶಪಡಿಸಿಕೊಂಡರು. 
* ಮನುಷ್ಯನ ಇಚ್ಛಾಶಕ್ತಿಯೆದುರು ಅಂದು ಮಣಿದ ಎವರೆಸ್ಟ್‌ನ ಕತೆ ಕ್ರೀಡಾ ಜಗತ್ತಿನ ಒಂದು ಮಹೋನ್ನತ ಸಾಹಸದ ಕಥನವೂ ಹೌದು.

★ ಮೌಂಟ್ ಎವರೆಸ್ಟ್

# ಮೌಂಟ್ ಎವರೆಸ್ಟ್  ಹಿಮಾಲಯದಲ್ಲಿರುವ ಮಹಾಲಂಗೂರ (Mahalangur) ಎನ್ನುವ ವಿಭಾಗದಲ್ಲಿದೆ. 
* ಇದು ಚೀನಾ ಮತ್ತು ನೇಪಾಳ ಗಡಿಯಲ್ಲಿದ್ದು, ದಕ್ಷಿಣ ಚೀನಾ, ಮದ್ಯ ಟಿಬೇಟ್ ಮತ್ತು ಈಶಾನ್ಯ ನೇಪಾಳವನ್ನು ಪ್ರತ್ಯೇಕಿಸುತ್ತದೆ.

# ಮೌಂಟ್ ಎವರೆಸ್ಟ್ 60 ಮಿಲಿಯನ್ ವರ್ಷಗಳ ಹಿಂದೆಯೆ ಸೃಷ್ಠಿಯಾಗಿರಬಹುದೆಂದು ಅಂದಾಜಿಸಲಾಗಿದೆ.

# 1865 ಕ್ಕೂ ಮೊದಲು ಮೌಂಟ್ ಎವರೆಸ್ಟ್ ನ್ನು ಫೀಕ್ 15 (Peak 15) ಎಂದು ಕರೆಯಲಾಗುತ್ತಿತ್ತು. 
# 1865 ರಲ್ಲಿ  ಬ್ರಿಟೀಷ ಸರಕಾರ,  ಭಾರತದ ಸರ್ವೇಯರ್ ಜನರಲ್ ಆಗಿದ್ದ ಜಾರ್ಜ್ ಎವರೆಸ್ಟ್ ಅವರ ಹೆಸರಿನಿಂದ ಈ ಪರ್ವತಕ್ಕೆ - ಮೌಂಟ್ ಎವರೆಸ್ಟ್ ಎಂದು ಮರುನಾಮಕರಣ ಮಾಡಲಾಯಿತು.
# ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ - “ ಸಾಗರ ಮಾಥಾ” ಎಂದು ಕರೆದರೆ ಟಿಬೇಟ್ ಭಾಗದಲ್ಲಿ ಜನರು  ಇದನ್ನು - "ಚೋಮೋಲುಂಗ್ಮಾ" ಎಂದು ಕರೆಯುತ್ತಾರೆ.

# ಮೌಂಟ್ ಎವರೆಸ್ಟ್  ಭೂಮಿಯ ಮೇಲೆ ಸಮುದ್ರ ಮಟ್ಟದಿಂದ ಇರುವ ಅತ್ಯಂತ ಎತ್ತರದ ಪರ್ವತ  ಶಿಖರ 
ಇದರ ಎತ್ತರ - 8848 ಮೀಟರ್ (29,029 ಅಡಿ)

# 1855 ರಲ್ಲಿ ಎವರೆಸ್ಟ್‌ನ ಎತ್ತರವನ್ನು ಅಳೆಯಲಾಗಿತ್ತು. 
* ಭಾರತೀಯ ಸರ್ವೇಕ್ಷಣಾ ಇಲಾಖೆ ಮಾತ್ರವಲ್ಲದೆ, ಇತರರು ಕೂಡಾ ಇದರ ಎತ್ತರ ಅಳೆದಿದ್ದರು. 
* ಆದರೆ ಇಲಾಖೆಯ ಬಳಿಯಲ್ಲಿರುವ ಮಾಹಿತಿಯೇ ನಿಖರವಾಗಿದೆ. 
* ಅದರ ಪ್ರಕಾರ ಎವರೆಸ್ಟ್‌ ಪರ್ವತ 8848 ಮೀಟರ್ (29,028 ಅಡಿ) ಎತ್ತರವಿದೆ ಎಂದು ತಿಳಿಸಿದ್ದಾರೆ.

# ಮೌಂಟ್​ ಎವರೆಸ್ಟ್ ಎತ್ತರವನ್ನು ಮತ್ತೊಮ್ಮೆ ಅಳತೆ ಮಾಡಲು ನೇಪಾಳ ನಿರ್ಧರಿಸಿದೆ.
* 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದರಿಂದ ​ ಎತ್ತರ ಕೊಂಚ ಕಡಿಮೆಯಾಗಿದೆ ಅಂತಾ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ ನೇಪಾಳ ಸರ್ಕಾರ ಎತ್ತರ ಅಳತೆ ಮಾಡಲು ನುರಿತ ಪರ್ವತಾರೋಹಿಗಳ ತಂಡವನ್ನು ನೇಮಿಸಿದೆ.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...