somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮಾರ್ಚ್ 19, 2021

Vijaypur

see now👉 "ವಿಜಯಪುರ" ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಚೆನ್ನಾಗಿ ನೋಟ್ಸ್ ಮಾಡಿಕೊಳ್ಳಿ.
💥💥💥💥💥💥💥💥💥💥

🌷 10 ಮತ್ತು 11 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ವಿಜಯಪುರ/ವಿಜಯದ ನಗರ ಎಂಬ ಹೆಸರು ಬಂದಿತ್ತು

🌷 ಜಿಲ್ಲೆಯನ್ನು 'ಪಂಚ ನದಿಗಳ' ಜಿಲ್ಲೆ ಎಂದು ಕರೆಯುತ್ತಾರೆ ಹಾಗೂ 'ಕರ್ನಾಟಕದ ಪಂಜಾಬ್' ಎಂಬುದಾಗಿ ಪ್ರಸಿದ್ಧಿ

🌷 ಜಿಲ್ಲೆಯ 'ಕೊಡಗಿ'ಯಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ

🌷 2003 ರಲ್ಲಿ 'ಮಹಿಳಾ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಲಾಗಿದ್ದು, 2017ರಲ್ಲಿ 'ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ'ವೆಂದು ನಾಮಕರಣ ಮಾಡಲಾಯಿತು.

🌷 ಜಿಲ್ಲೆಯ 'ಆಲಮಟ್ಟಿ ಜಲಾಶಯ' ಅಥವಾ 'ಲಾಲ್ ಬಹುದ್ದೂರ್ ಶಾಸ್ತ್ರಿ' ಜಲಾಶಯವನ್ನು 'ಕೃಷ್ಣಾನದಿ'ಗೆ ಅಡ್ಡಲಾಗಿ ಕಟ್ಟಲಾಗಿದೆ

🌷 ಈ ಜಿಲ್ಲೆಯು ಕರ್ನಾಟಕದಲ್ಲಿ ಅತ್ಯಂತ ಕಡಿಮೆ 'ಅರಣ್ಯ'ವನ್ನು ಹೊಂದಿರುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯನ್ನು ಕರ್ನಾಟಕದ 'ಸೈಕ್ಲಿಂಗ್ ಕ್ಯಾಪಿಟಲ್' / 'ಸೈಕ್ಲಿಂಗ್ ಕಾಶಿ'
ಎಂದು ಕರೆಯುತ್ತಾರೆ

🌷  ಸಂಗೀತಕ್ಕೆ ಪ್ರಸಿದ್ಧವಾದ 'ನವರಸಪುರ' ಉತ್ಸವವು ಪ್ರತಿವರ್ಷ ನಡೆಯುತ್ತದೆ
🌷 ಈ ಜಿಲ್ಲೆಯಲ್ಲಿ "ಮಲ್ಲಿಕ್ - ಈ - ಮೈದಾನ್" ತೋಪು ಇಡಲಾಗಿದೆ.

🌷 ಕೃಷ್ಣ, ಮಲಪ್ರಭಾ, ಘಟಪ್ರಭಾ, ದೋಣಿ, ಭೀಮಾ ನದಿಗಳು ಹರಿಯುವುದರಿಂದ ಈ ಜಿಲ್ಲೆಯನ್ನು "ಪಂಚನದಿಗಳ ಜಿಲ್ಲೆ" ಎನ್ನುವರು

🌷 ಆದಿ ಶಾಹಿಗಳಿಂದ ಅಸರ್ ಮಹಲ್, ಗಗನ್ ಮಹಲ್, ಗೋಲ್ ಗುಮ್ಮಟ, ಇಬ್ರಾಹಿಂ ರೋಜಾ, ಬರಕಮನ್ ಅಂತಹ ಪ್ರಸಿದ್ಧ ಕಟ್ಟಡಗಳು ನಿರ್ಮಾಣವಾಗಿವೆ

🌷 ಜಗತ್ತಿನ ಅತಿ ದೊಡ್ಡ 'ಗುಮ್ಮಟ - ಗೋಲ್ ಗುಮ್ಮಟ' ಬಿಜಾಪುರದಲ್ಲಿದೆ ಇದನ್ನು 'ಮಹಮದ್ ಆದಿಲ್ ಷಾ' ಕಟ್ಟಿಸಿದನು

🌷 'ಇಬ್ರಾಹಿಂ ರೋಜಾ' ವನ್ನು 'ದಕ್ಷಿಣ ಭಾರತದ ತಾಜ್ಮಹಲ್' ಎಂದು ಕರೆಯುತ್ತಾರೆ. ಇದನ್ನು "ಎರಡನೇ ಇಬ್ರಾಹಿಂ ಆದಿಲ್ ಷಾ" ಕಟ್ಟಿಸಿದನು

🌷 ವಿಜಯಪುರ ಜಿಲ್ಲೆಯ 'ಬಸವನ ಬಾಗೇವಾಡಿ ಬಸವಣ್ಣನ' ಜನ್ಮಸ್ಥಳವಾಗಿದೆ

🌷1565 ಜನವರಿ 26ರಂದು ತಾಳಿಕೋಟೆ/ರಕ್ಕಸತಂಗಡಿ ಎಂಬ ಯುದ್ಧ ಭೂಮಿಯಲ್ಲಿ ಕದನ ನಡೆದು ವಿಜಯನಗರ ಸಾಮ್ರಾಜ್ಯ ಪತನವಾಯಿತು . ವಿಜಯನಗರ ಸಾಮ್ರಾಜ್ಯದ ಅರಸ - 'ಸದಾಶಿವರಾಯ'

🌷 ವಿಜಯಪುರವು ಅತಿ ಹೆಚ್ಚು "ದ್ರಾಕ್ಷಿ ಮತ್ತು ಜೋಳ" ಬೆಳೆಯುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯು 1956 ಕ್ಕಿಂತ ಮುಂಚೆ 'ಮುಂಬೈ' ಪ್ರಾಂತ್ಯದಲ್ಲಿ ಇತ್ತು. 

🌷 ಜಿಲ್ಲೆಯ 'ಇಂಡಿ' ಎಂಬಲ್ಲಿ "ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ" ಯನ್ನು ಸ್ಥಾಪಿಸಲಾಗಿದೆ.

🌷 ಇಂಡಿ ತಾಲೂಕಿನ "ಸಾಲೋಟಗಿ" ರಾಷ್ಟ್ರಕೂಟರ ಶಿಕ್ಷಣ ಕೇಂದ್ರವಾಗಿತ್ತು

🌷 ವಿಜಯಪುರ ಜಿಲ್ಲೆಯ 'ಚಡಚಣ' ಎಂಬಲ್ಲಿ "ಸಿಂಪಿ ಲಿಂಗಣ್ಣ" ನವರ ಜನ್ಮ ಸ್ಥಳವಾಗಿದೆ

🌷 ನವೆಂಬರ್ 1,2014ರಲ್ಲಿ 'ಬಿಜಾಪುರ'ವನ್ನು 'ವಿಜಯಪುರ'ವೆಂದು ಮರುನಾಮಕರಣ ಮಾಡಲಾಯಿತು

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...