somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮಾರ್ಚ್ 19, 2021

PSI 1998

🦋 🌹PSI 1998 ರಲ್ಲಿ ಕೇಳಿರುವ  ಇತಿಹಾಸ ಪ್ರಶ್ನೋತ್ತರಗಳು 🦋

💥ಕುಂಭ ಮೇಳವನ್ನು 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.

💥ಪುರುಷಸೂಕ್ತವನ್ನು ಋಗ್ವೇದ ದಲ್ಲಿ ಕಾಣಬಹುದು

💥 ಹಿಟ್ಲರ್ ನನ್ನು ಫ್ಯೂರರ್ ಎಂದು ಗುರುತಿಸಲ್ಪಡುತ್ತಾನೆ.

💥ಬುದ್ಧ ತನ್ನ ಬೋಧನೆ ಮಾಡಿದ ಸ್ಥಳ - ಸಾರಾನಾಥ

💥ಬಂಗಾಳದ ವಿಂಗಡನೆಯನ್ನು  1911 ರಲ್ಲಿ ಬ್ರಿಟಿಷ  ಸರ್ಕಾರವು ಹಿಂದೆ ತೆಗೆದುಕೊಂಡಿತು.

💥ಲೋಥಲ್ ಇರುವ ಸ್ಥಳ - ಗುಜರಾತ್

💥ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು - ಕುಶಾಣರು

💥ತ್ರಿರತ್ನಗಳ ಬಗ್ಗೆ ಒತ್ತು ನೀಡಿದವರು - ಮಹಾವೀರ

💥ಕಳಿಂಗ ಯುದ್ದದಿಂದ ಅಶೋಕನ ಮೇಲೆ ಆದ ಪ್ರಭಾವವನ್ನು ಶಿಲಾಶಾಸನ ಗಳಲ್ಲಿ ಕಾಣಬಹುದು.

💥ತಮ್ಮ ಹೆಸರಿರುವ ನಾಣ್ಯಗಳನ್ನು ಮೊದಲು ಬಳಕೆಗೆ ತಂದ ರಾಜರು - ಕುಶಾಣರು

💥ವಿಜಯನಗರ ಸಾಮ್ರಾಜ್ಯದ ಪತನ ಆದ ಭೂಮಿ ಇರುವ ಸ್ಥಳ - ತಾಳಿಕೋಟಿ ( ರಕ್ಕಸ ತಂಗಡಗಿ )

💥ಪ್ರಾಚೀನ ಶಿಲಾಯುಗದ ಕಾಲದ ಜನರ ಮುಖ್ಯ ಕಸುಬು - ಪ್ರಾಣಿಗಳ ಬೇಟೆ ಮತ್ತು ಆಹಾರ ಸಂಗ್ರಹಣೆ

💥 ಕಲ್ಹಣ ವಿರಚಿತ ರಜತರಂಗಿಣಿ ತಿಳಿಸುವ ವಿಷಯ - ಕಾಶ್ಮೀರದ ಚರಿತೆ

💥 ಗಧರ್ ಪಾರ್ಟಿಯ ಕೇಂದ್ರಸ್ಥಳ ಇರುವುದು - ಸ್ಯಾನ್ಪ್ರಾನ್ಸಿಸ್ಕೋ

💥ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನವನ್ನು ಜವಾಹರಲಾಲ ನೆಹರು ರವರು 3 ಬಾರಿ ವಹಿಸಿಕೊಂಡಿದ್ದರು.

💥ಬ್ರಿಟನ್ ಆಡಳಿತ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣನಾದ ಗವರ್ನರ್ ಜನರಲ್ - ಲಾರ್ಡ್ ಬೆಂಟಿಂಕ್

💥ಸ್ವತಂತ್ರ ಸಂಗ್ರಾಮದಲ್ಲಿ ಹೆಸರು ಮಾಡಿದ ವಿದುರಾಶ್ವಥ ಇರುವ ಜಿಲ್ಲೆ - ಚಿಕ್ಕಬಳ್ಳಾಪುರ

💥 ಸ್ಟ್ಯಾಪೋರ್ಡ್ ಕ್ರಿಪ್ಸ್ ಸದಸ್ಯನಾಗಿದ್ದ ಸಂಘಟನೆ - ಲೇಬರ್ ಪಕ್ಷ

💥ಕಲ್ಕತ್ತಾದಿಂದ ದೆಹಲಿಗೆ ಬ್ರಿಟನ್ ಅಧಿಕಾರದಿ ಕೇಂದ್ರಸ್ಥಾನ ಬದಲಾವಣೆ ಪ್ರಸ್ತಾವವನ್ನು ಮುಂದಿಟ್ಟ ಗವರ್ನರ್ ಜನರಲ್ - ಲಾರ್ಡ್ ಹಾರ್ಡಿಂಜ್

💥ಸೈಮನ್ ಆಯೋಗವನ್ನು ರಚಿಸಿದ್ದಾಗ ಇರ್ವಿನ್ ಇಂಡಿಯಾದ ವೈಸರಾಯ್ ಆಗಿದ್ದ

💥ಗಾಂಧಿ - ಇರ್ವಿನ್ ಒಪ್ಪಂದ ( 1931)
ಹಿಂಸೆಯ ಆರೋಪ ಹೊತ್ತವರನ್ನು ಹೊರತುಪಡಿಸಿ ಇತರರ ಬಿಡುಗಡೆಗೆ ನಿರ್ಣಹಿಸಿತು

💥ಬ್ರಿಟಿಷ್ ಸರ್ಕಾರವು ಸಮಾನ ವೇದಿಕೆಯಲ್ಲಿ ರಾಜದ್ರೋಹ ಮಾಡುವ ಸನ್ಯಾಸಿ ಅಂದರೆ ಮಹಾತ್ಮಾ ಗಾಂಧಿಯವರೊಡನೆ ಫೆಬ್ರುವರಿ ಮಾರ್ಚ್ 1931 ರಲ್ಲಿ ಚರ್ಚೆ ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ ವ್ಯಕ್ತಿ - ವಿನ್ ಸ್ಟನ್ ಚರ್ಚಿಲ್

💥ವಲ್ಲಭ ಭಾಯಿ ಪಟೇಲ್ ರವರಿಗೆ ಸರ್ದಾರ್ ಎಂಬ ಬಿರುದು ಸೂಚಿಸಿದವರು - ಎಂ ಕೆ ಗಾಂಧಿ

💥ಆತ ತೀವ್ರವಾದಿಗಳ ವಿಚಾರಧಾರೆಯನ್ನು ಮತ್ತು ಕಾರ್ಯ ಯೋಜನೆಗಳನ್ನು ಅತ್ಯಂತ ಆಸ್ಥೆಯಿಂದ ಸಾದರಪಡಿಸಿದ. ಆತನ ಚಿಂತನೆಯನ್ನು ಹಲವು ಸಮಯದ ನಂತರ ಗಾಂಧೀಜಿಯವರು ಅಳವಡಿಸಿಕೊಂಡರು. ಈ ಸಂದರ್ಭದಲ್ಲಿ ಉಲ್ಲೇಖದ ವ್ಯಕ್ತಿ
- ಅರಬಿಂದ್ ಘೋಷ್

💥ಗಾಂಧಾರದ ಪ್ರಮುಖ ಪೋಷಕರು - ಶಕರು ಮತ್ತು ಕುಶಾಣರು

💥ಭಾರತದಲ್ಲಿ ಮೊದಲ ಬಾರಿಗೆ ಪೂಜಿಸಲ್ಪಟ್ಟ ಮಾನವ ರೂಪಿ ವಿಗ್ರಹ - ಬುದ್ಧ

💥ಸಂಸ್ಕೃತದಲ್ಲಿ ಅಧಿಕೃತ ದಾಖಲೆಯಾಗಿರುವ ಅತ್ಯಂತ ಹಳೆಯ ಶಾಸನ - ಜುನಾಗಢದ ಕಲ್ಲಿನ ಶಾಸನ

💥ಇಂಡಿಯಾ ದೇಶದ ಜನರನ್ನು ಸಚಿರಿತ್ರರು ಆದರೆ ಶೀಘ್ರ ಕೋಪಿಗಳು ಎಂದು ವಿವರಿಸಿದಾತ - ಫಾ ಹಿಯಾನ

💥ಯಾಕೂತ್ ಜನರ ಮೂಲ ಸ್ಥಳ - ಇರಾನ್

💥ಇಂಡಸ್ ಕಣಿವೆಯಲ್ಲಿನ ನಾಗರಿಕತೆಯ ಅಂಶಗಳನ್ನು ಯಾವ ಪ್ರದೇಶದಲ್ಲಿ ಕಾಣಬಹುದು - ಸುಮೇರ್

💥ಯಾರು ಎಲ್ಲಾ ದುಂಡು ಮೇಜಿನ ಸಭೆಗಳಲ್ಲಿ ಭಾಗವಹಿಸಿದ್ದರು - ಡಾ. ಬಿ. ಆರ್. ಅಂಬೇಡ್ಕರ್.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...