somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮಾರ್ಚ್ 19, 2021

ಸಮಾಸ

see nowಸಮಾಸ

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.

ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ ಸಂಯುಕ್ತ ಪದಗಳಾಗುವದನ್ನು 'ಸಮಾಸ' ವೆನ್ನಲಾಗುತ್ತದೆ.

ಉದಾಹರಣೆ:

'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.

ವಿಗ್ರಹವಾಕ್ಯ

ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ.

ಒಟ್ಟು ಕನ್ನಡದಲ್ಲಿ 8 ಪ್ರಕಾರಗಳಿದ್ದ್ದು ಅವುಗಳನ್ನು ಅರ್ಥದ ಮೊದಲ 4 ಈ ಕೆಳಗಿನಂತಿದೆ.

I ಉತ್ತರಪದ ಅರ್ಥ ಪ್ರಧಾನ ಪದ

1- ತತ್ಪುರುಷ ಸಮಾಸ

2 ಕರ್ಮಧಾರಯ ಸಮಾಸ

3 ದ್ವಿಗು ಸಮಾಸ

4ಕ್ರಿಯಾ ಸಮಾಸ

5ಗಮಕ ಸಮಾಸ

II. ಪೂರ್ವ ಪದ ಪ್ರಧಾನ ಸಮಾಸೆ

ಅಂಶಿಸಮಾಸ

II ಉಭಯ ಸರ್ವ ಪಧ ಪ್ರಧಾನ ಸಮಾಸ

ದ್ವಂದ್ವ ಸಮಾಸ

III ಅನ್ಯಪದ ಪ್ರಧಾನ ಸಮಾಸ

ಬಹುರ್ವೀಹಿ ಸಮಾಸ


ಉತ್ತರ ಪದ ಪ್ರಧಾನ ಸಮಾಸ : ತತ್ಪುರುಷ ಸಮಾಸ

ಉದಾಹರಣೆ:

ಗುರುವಿನ+ಮನೆ+ಗುರುಮನೆ

ಹೊಟ್ಟೆಯಲ್ಲಿ+ಕಿಚ್ಛು=ಹೊಟ್ಟೆಕಿಚ್ಚು

ವಯಸ್ಸಿನ+ವೃದ್ಧ=ವಯೋವೃದ್ಧ


ಪೂರ್ವ ಪಧಗಳ ವಿಭಕ್ತಿ ಪ್ರತ್ಯೇಯಗಳ ಹಿನ್ನೆಲೆಯಲ್ಲಿ ಇದನ್ನು 5 ಪ್ರಕಾರವಾಗಿ ವಿಂಗಡಿಸಲಾಗಿದೆ

1 ತೃತೀಯ ತತ್ಪುರುಷ (ಇಂದ)

ಉದಾಹರಣೆ:

ಬಾಯಿಯಿಂದ + ಜಗಳ = ಬಾಯಿ ಜಗಳ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಜ್ನಾನದಿಂದ+ವೃದ್ಧ=ಜ್ನಾನವೃಧ್ದ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಕವಿಗಳಿಂದ+ವಂಧಿತ=ಕವಿವಂಧಿತ (ಇಂದ ತೃತೀಯ ವಿಭಕ್ತಿ ಪ್ರತ್ಯಯ)


2 ಚತುರ್ಥಿ ತತ್ಪುರುಷ (ಗೆ)

ಉದಾಹರಣೆ:

ಕೃಷ್ಣನಿಗೆ+ಅರ್ಪಣಾ=ಕೃಷ್ಣಾರ್ಪಣಾ

ಭೂತಗಳಿಗೆ + ಬಲಿ=ಭೂತಬಲಿ

ಕೂದಲಿಗೆ+ಎಣ್ಣೆ=ಕೂದಲೆಣ್ಣೆ


3 ಪಂಚಮಿ ತತ್ಪುರುಷ (ದೆಸಿಯಿಂದ)

ಉದಾಹರಣೆ:

ರೋಗದ ದೆಸೆಯಿಂದ+ಮುಕ್ತಿ=ರೋಗಮುಕ್ತಿ

ದೇಶದ ದೆಸೆಯಿಂದ+ಅಂತರ=ದೆಶಾಂತರ


4 ಷಷ್ಠಿ ತತ್ಪುರುಷ (ಅ)

ಉದಾಹರಣೆ:

ಆನೆಯ+ಮರಿ=ಆನೆಮರಿ

ಕಲ್ಲಿನ+ಮಂಟಪ=ಕಲ್ಲುಮಂಟಪ (IMP)

ಮಲ್ಲರ+ಕಾಳಗ=ಮಲ್ಲಕಾಳಗ

ದೇವರ+ಮಂದಿರ =ದೇವಮಂದಿರ

ಗುರುವಿನ+ಮನೆ=ಗುರುಮನೆ


5 ಸಪ್ತವಿ ತತ್ಪುರುಷ: (ಅಲ್ಲಿ)

ಉದಾಹರಣೆ:

ಸರ್ವರಲ್ಲಿ+ಉತ್ತಮ=ಸರ್ವೋತ್ತಮ

ಗೃಹದಲ್ಲಿ+ಪ್ರವೇಶ=ಗೃಹಪ್ರವೇಶ

ಹೊಟ್ಟೆಯಲ್ಲಿ+ಕಿಚ್ಚು=ಹೊಟ್ಟೆಕಿಚ್ಚು

ಗ್ರಾಮದಲ್ಲಿ+ವಾಸ=ಗ್ರಾಮವಾಸ

ತಲೆಯಲ್ಲಿ+ನೋವು=ತಲೆನೋವು


ಕರ್ಮಧಾರಯ ಸಮಾಸ: ಪೂರ್ವ ಪದದ ಗುಣವಾಚಕ ಮತ್ತು ಉತ್ತರಪದ ಪ್ರಧಾನ ಸಮಾಸ

ಉದಾಹರಣೆ:

ಹಿರಿದಾದ+ಮರ= ಹೆಮ್ಮರ

ಹಿರಿದಾದ+ಮಾರಿ+ಹೆಮ್ಮಾರಿ

ನಿಡಿದಾದ+ಉಸಿರು+ನಿಟ್ಟುಸಿರು

ಕೆಂಪಾದ+ತುಟಿ=ಕೆಂದುಟಿ

ಕೆಂಪಾದ+ತಾವರೆ=ಕೆಂದಾವರೆ

ಪೀತವಾದ+ಅಂಬರ=ಪೀತಾಂಬರ


ನಿಯಮ I : ಪೂರ್ವೋತ್ತರಗಳೆರಡು ವಿಶೇಶ ಮತ್ತು ವಿಶೇಷಣಗಳಿಂದ ಕೂಡಿ ಸಮಾಸವಾಗುವುದು

ಉದಾಹರಣೆ:

ಕೆಂಪಾದ+ತಾವರೆ=ಕೆಂದಾವರೆ

ತಂಪಾದ+ಗಾಳಿ=ತಂಗಾಳಿ

ತಂಪಾದ+ಎಲರು=ತಂಬೆಲರು

ತಂಪಾದ + ಕದಿರು=ತಂಗದಿರು


ನಿಯಮ II : ಪೂರ್ವೋತ್ತರಗಳು ಉಪಮಾನ ಉಪಮೇಯ ಅಥವಾ ಉಪಮೇಯ ಉಪಮಾನವಾಗಿರುವುದು

ಉದಾಹರಣೆ:

ಎಲೆಯಂತೆ + ಹಸಿರು=ಎಲೆಹಸಿರು

ಗಿಳಿಯಂತೆ + ಹಸಿರು= ಗಿಳಿಯಸಿರು

ಕ್ಷೀರದಂತೆ+ಸಾಗರ=ಕ್ಷೀರಸಾಗರ

ಹಾಲಿನಂತೆ + ಕಡಲು=ಹಾಲ್ಗಡಲು

ಚರಣಗಳು+ಕಮಲ=ಚರಣಕಮಲ

ಅಡಿಗಳು+ತಾವರ= ಅಡಿದಾವರೆ


ನಿಯಮ-III: ಪೂರ್ವೋತ್ತರ ಪದಗಳೆರದು ವಿಶೇಷಣಗಳಾಗಿದ್ದರೆ

ಉದಾಹರಣೆ:

ಶೀತವೂ+ಉಷ್ಣವೂ=ಶೀತೋಷ್ಣವೂ

ಹುಳಿಯ+ಮಧುರ=ಹುಳಿಮಧುರ

ಹಿರಿದು+ಕಿರಿದು=ಹಿರಿಕಿರಿದು


ನಿಯಮ-IV: ಪೂರ್ವ ಪದವೂ "ಏ" ಅಕ್ಷರದಿಂದ ಕೂಡಿರುವುದು

ಉದಾಹರಣೆ:

ಫಲವೇ+ಆಹಾರ=ಫಲಹಾರ

ಸುಃಖವೇ+ಜೀವನ=ಸುಃಖಜೀವನ

ಕೋಪವೇ+ಅನಲು=ಕಾನಲ

ವಿದ್ಯೆಯೇ+ಅರ್ಥಿ=ವಿಧ್ಯಾರ್ಥಿ

ಶಾಂತಿಯೇ+ಸಾಗರ=ಶಾಂತಿಸಾಗರ (ಫೆಸಿಫಿಕ್ ಸಾಗರ)

ಮನವೇ+ಮರ್ಕಟ=ಮನೋಮರ್ಕಟ


ದ್ವಿಗು ಸಮಾಸ: ಪೂರ್ವ ಪದ ಸಂಖ್ಯಾಸೂಚಕ ಮತ್ತು ಉತ್ತರ ಪದ ನಾಮಪದ ವಾಗಿರುವುದು

ಉದಾಹರಣೆ:

ಎರಡು+ಮುಡಿ=ಇರ್ಮುಡಿ

ಮೂರು+ಕಣ್ಣ=ಮುಕ್ಕಣ್ಣ

ನಾಲ್ಕು+ಮಡಿ=ನಾಲ್ವಡಿ

ಎರಡು + ಕೆಲ =ಇಕ್ಕೆಲ

ಎರಡು+ಬದಿ=ಇಬ್ಬದಿ

ಮೂರು+ಬಟ್ಟೆ=ಮೂವಟ್ಟೆ

ಎರಡು + ತಂಡ=ಇತ್ತಂಡ

ನೂರೊ+ಮಡಿ=ನೂರ್ಮಡಿ

ದಶ+ಅವತಾರ=ದಶಾವತಾರ

ದಶ+ಆನನ= ದಶಾನನಾ

ಪಂಚ+ಇಂದ್ರೀಯ=ಪಂಚೇಂದ್ರಿಯಾ

ಮೂರು+ಗಾವುರ=ಮುರಾವುರ

ಐದು+ಮುಡಿ=ಐವಡಿ


ಅಂಶೀ ಸಮಾಸ: ಅಥವಾ ಅವ್ಯಯ ಸಮಾಸ. ಪೂರ್ವ ಪದವೂ ಸಮಸ್ತ(ಪೂರ್ಣ)ವಸ್ತುವನ್ನು ಮತ್ತು ಉತ್ತರ ಪದ ಅದರ ಭಾಗವನ್ನು ಸೂಚಿಸಿವುದು

ಉದಾಹರಣೆ:

ತಲೆಯ+ಮುಂದೆ=ಮುಂದಲೆ

ಮೆದುಳು+ಮುಂದೆ=ಮುಮೆದುಳು

ಕಾಲು+ಮುಂದೆ=ಮುಂಗಾಲು

ಬೆಟ್ಟದ+ತುದಿ=ತುದಿಬೆಟ್ಟ


ಪೂರ್ವೋತ್ತರ ಪದಗಲ ಸ್ಥಾನಪಲ್ಲಟಗೊಳ್ಳವುದು

ಉದಾಹರಣೆ:

ಮೂಗಿನ+ತುದಿ=ತುದಿಮೂಗು

ಕೈ+ಅಡಿ+ಅಂಗೈ

ಕಾಲಿನ+ಅಡಿ=ಅಡಿಗಾಲು

ರಾತ್ರಿಯ+ಮದ್ಯೆ=ಮದ್ಯರಾತ್ರಿ

ಕಣ್ಣಿನ+ಕಡೆಗೆ=ಕಡೆಗಣ್ಣು


ದ್ವಂದ್ವ ಸಮಾಸ : ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವುದು

ಉದಾಹರಣೆ:

ರಾಮ+ಲಕ್ಷ್ಮಣ +ಸೀತೆ=ರಾಮಲಕ್ಷ್ಮಣಸೀತೆಯರು

ಕೆರೆಯೂ+ಬಾವಿಯೂ+ಕಟ್ಟೆಯೂ=ಕೆರೆಬಾವಿಕಟ್ಟೆಗಳು

ಕೃಷ್ಣನು+ಅರ್ಜುನನು=ಕೃಷ್ಣಾರ್ಜುನರು

ತಂದೆಯೂ+ತಾಯಿಯರು= ತಂದೆ ತಾಯಿಯರು

ಧನವೂ+ಧಾನ್ಯವೂ=ಧನಧಾನ್ಯವೂ

ನಕುಲರು+ಸಹದೇವರು=ನಕುಲಸಹದೇವರು


ಬಹುರ್ವೀಹಿ ಸಮಾಸ: ಅನ್ಯಪ್ರಧಾನಾರ್ಥ ಕೊಡುವ ಸಮಾಸ

ಉದಾಹರಣೆ:

ಮೂರು+ಕಣ್ಣುಳ್ಳವನೂ ಯಾವನೋ=ಮುಕ್ಕಣ್ಣ (ಶಿವ)

ಹಣೆಯಲ್ಲಿ+ಕಣ್ಣುಳ್ಳವನೂ ಯಾವನೋ=ಹಣೆಗಣ್ಣ(ಶಿವ)

ನಿಡಿದಾದ+ಮೂಗುಳ್ಳವಳು=ನಿಡಿಮೂಗು

ಕಡಿದು+ಚಾಗವುಳ್ಳವುನು=ಕಡುಚಾಗಿ(ಕರ್ಣ)

ಛಲವೂ+ಅಧಿಯಲ್ಲಿ=ಛಲವಾಧಿಯಲ್ಲಿ(ದುರ್ಯೋಧನ)

ಅರ್ಧ+ಅಂಗವುಳ್ಳವಳು=ಅರ್ದಾಂಗಿ

ನಾಲ್ಕು+ಮುಖವುಳ್ಳವನು=ನಾಲ್ಮುಗ(ಬ್ರಹ್ಮ)


ಕ್ರಿಯಾ ಸಮಾಸ : ಪೂರ್ವ ಪದವೂ ದಾತುವನ್ನು (ಯಾವುದೆ ವಿಭಕ್ತಿ ಪ್ರತೇಯವನ್ನು) ಉತ್ತರ ಪದ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...