somaling m uppar kawalga

somaling m uppar kawalga
Somaling Sulubai uppar

ಭಾನುವಾರ, ಮೇ 16, 2021

ವಿಶ್ವ ಪರಂಪರೆಯ ತಾಣಗಳು

🌻ವಿಶ್ವ ಪರಂಪರೆಯ ತಾಣಗಳು🌻
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 
☘🌺☘🌺☘🌺☘🌺☘🌺☘

1. ತಾಜ್ ಮಹಲ್ – ಉತ್ತರ ಪ್ರದೇಶ [1983]

2. ಆಗ್ರಾ ಕೋಟೆ – ಉತ್ತರ ಪ್ರದೇಶ [1983]

3.ಅಜಂತಾ ಗುಹೆಗಳು – ಮಹಾರಾಷ್ಟ್ರ [1983]

4. ಎಲ್ಲೋರಾ ಗುಹೆಗಳು – ಮಹಾರಾಷ್ಟ್ರ [1983]

5. ಕೊನಾರ್ಕ್ ಸೂರ್ಯ ದೇವಾಲಯ – ಒಡಿಶಾ [1984]

6. ಮಹಾಬಲಿಪುರಮ್-ತಮಿಳ್ ನಾಡು ಸ್ಮಾರಕ ಗುಂಪು [1984]

7. ಕಾಜಿರಂಗಾ ರಾಷ್ಟ್ರೀಯ ಉದ್ಯಾನ – ಅಸ್ಸಾಂ [1985]

8. ಮಾನಸ್ ವನ್ಯಜೀವಿ ಅಭಯಾರಣ್ಯ – ಅಸ್ಸಾಂ [1985]

9. ಕೆವಾಲಾ ದೇವ್ ರಾಷ್ಟ್ರೀಯ ಉದ್ಯಾನ – ರಾಜಸ್ಥಾನ [1985]

10. ಓಲ್ಡ್ ಗೋವಾದ ಚರ್ಚ್ ಮತ್ತು ಮಠ – ಗೋವಾ [1986]

11. ಮುಘಲ್ ನಗರ, ಫತೇಪುರ್ ಸಿಕ್ರಿ – ಉತ್ತರ ಪ್ರದೇಶ [1986]

12. ಹಂಪಿ ಸ್ಮಾರಕ ಗುಂಪು – ಕರ್ನಾಟಕ [1986]

13. ಖಜುರಾಹೊ ದೇವಸ್ಥಾನ – ಮಧ್ಯ ಪ್ರದೇಶ [1986]

14. ಎಲಿಫೆಂಟಾ ಗುಹೆಗಳು – ಮಹಾರಾಷ್ಟ್ರ [1987]

15. ಪತ್ತಕಲ್ ಸ್ಮಾರಕ ಗುಂಪು – ಕರ್ನಾಟಕ [1987]

16. ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ – ಡಬ್ಲ್ಯು. ಬಂಗಾಳ [1987]

17. ವಧೇಶ್ವರ ದೇವಾಲಯ ತಂಜಾವೂರು – ತಮಿಳುನಾಡು [1987]

18. ನಂದಾ ದೇವಿ ರಾಷ್ಟ್ರೀಯ ಉದ್ಯಾನ – ಉತ್ತರಾಖಂಡ್ [1988]

19. ಸಾಂಚಿ – ಮಧ್ಯ ಪ್ರದೇಶದ ಬೌದ್ಧ ಸ್ಮಾರಕ [1989]

21. ಹುಮಾಯೂನ್ ಸಮಾಧಿ – ದೆಹಲಿ [1993]

22. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ – ಪಶ್ಚಿಮ ಬಂಗಾಳ [1999]

23. ಮಹಾಬೋಧಿ ದೇವಾಲಯ, ಗಯಾ – ಬಿಹಾರ [2002]

24. ಭಿಂಬೆಟ್ಕಾ ಗುಹೆಗಳು – ಮಧ್ಯ ಪ್ರದೇಶ [2003]

25. ಗಂಗೈ ಕೋಡಾ ಚೋಳಪುರಂ ದೇವಾಲಯ – ತಮಿಳುನಾಡು [2004]

26. ಎರಾವತಿಶ್ವರ ದೇವಸ್ಥಾನ – ತಮಿಳುನಾಡು [2004]

27. ಛತ್ರಪತಿ ಶಿವಾಜಿ ಟರ್ಮಿನಲ್ – ಮಹಾರಾಷ್ಟ್ರ [2004]

28. ನೀಲಗಿರಿ ಪರ್ವತ ರೈಲುಮಾರ್ಗ – ತಮಿಳುನಾಡು [2005]

29. ಫ್ಲೋ ವ್ಯಾಲಿ ನ್ಯಾಷನಲ್ ಪಾರ್ಕ್ – ಉತ್ತರಾಖಂಡ್ [2005]

30. ದೆಹಲಿಯ ಕೆಂಪು ಕೋಟೆ – ದೆಹಲಿ [2007]

31. ಕಲ್ಕಾ ಶಿಮ್ಲಾ ರೈಲು – ಹಿಮಾಚಲ ಪ್ರದೇಶ [2008]

32. ಸಿಮ್ಲಿಪಾಲ್ ರಿಸರ್ವ್ – ಒಡಿಶಾ [2009]

33. ನೋಕ್ರೆಕ್ ರಿಸರ್ವ್ – ಮೇಘಾಲಯ [2009]

34. ಭಿತರ್ಕಾನಿಕ ಉದ್ಯಾನ – ಒಡಿಶಾ [2010]

35. ಜೈಪುರದ ಜಂತರ್-ಮಂತರ್ – ರಾಜಸ್ಥಾನ [2010]

36. ಪಶ್ಚಿಮ ಘಟ್ಟಗಳು [2012]

37. ಆಮೆರ್ ಕೋಟೆ – ರಾಜಸ್ಥಾನ [2013]

38. ರಣಥಂಬೋರ್ ಕೋಟೆ – ರಾಜಸ್ಥಾನ [2013]

39. ಕುಂಭಲ್ಗಡ್ ಕೋಟೆ – ರಾಜಸ್ಥಾನ [2013]

40. ಸೋನಾರ್ ಕೋಟೆ – ರಾಜಸ್ಥಾನ [2013]

41. ಚಿತ್ತೋರಗಢ ಕೋಟೆ – ರಾಜಸ್ಥಾನ [2013]

42. ಗಗರಾನ್ ಕೋಟೆ – ರಾಜಸ್ಥಾನ [2013]

43. ಕ್ವೀನ್ಸ್ ವೇವ್ – ಗುಜರಾತ್ [2014]

44. ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ – ಹಿಮಾಚಲ ಪ್ರದೇಶ [2014]

Sports

🦋 ಪ್ರಸಿದ್ಧ ವ್ಯಕ್ತಿಗಳು ಮತ್ತುಅವರ ಬಿರುದುಗಳು 🦋
🐙🦕🐙🦕🐙🦕🐙🦕🐙🦕🐙

1.ಇಂದಿರಾ ಗಾಂಧಿ
=ಪ್ರಿಯದರ್ಶಿನಿ

2. ಬಾಲಗಂಗಾಧರ ತಿಲಕ್
=ಲೋಕಮಾನ್ಯ

3. ಸುಭಾಸ್ ಚಂದ್ರ ಬೋಸ್
=ನೇತಾಜಿ

4. ಲಾಲ ಬಹದ್ದೂರ್ ಶಾಸ್ತ್ರೀ
=ಶಾಂತಿದೂತ

5. ಸರದಾರ್ ವಲ್ಲಬಾಯಿ ಪಟೇಲ್
=ಉಕ್ಕಿನ ಮನುಷ್ಯ, ಸರದಾರ್

6.  ಜವಾಹರಲಾಲ ನೆಹರು
=ಚಾಚಾ

7.  ರವೀಂದ್ರನಾಥ ಟ್ಯಾಗೋರ್
=ಗುರುದೇವ

8.  ಎಂ. ಎಸ್. ಗೋಳಲ್ಕರ್
=ಗುರೂಜಿ

9.  M.K.ಗಾಂಧಿ
=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ

10.  ಸರೋಜಿನಿ ನಾಯ್ಡು
=ಭಾರತದ ಕೋಗಿಲೆ.

11.  ಪ್ಲಾರೆನ್ಸ್ ನೈಟಿಂಗೇಲ್
=ದೀಪಧಾರಣಿ ಮಹಿಳೆ

12.ಖಾನ್ ಅಬ್ದುಲ್ ಗಫಾರ್ ಖಾನ್
=ಗಡಿನಾಡ ಗಾಂಧಿ

13.  ಜಯಪ್ರಕಾಶ ನಾರಾಯಣ
=ಲೋಕನಾಯಕ

14.  ಪಿ.ಟಿ.ಉಷಾ
=ಚಿನ್ನದ ಹುಡುಗಿ

15.  ಸುನೀಲ್ ಗವಾಸ್ಕರ್
=ಲಿಟಲ್ ಮಾಸ್ಟರ್

16.  ಲಾಲಾ ಲಜಪತರಾಯ
=ಪಂಜಾಬಿನ ಕೇಸರಿ

17.  ಷೇಕ್ ಮಹ್ಮದ್ ಅಬ್ಧುಲ್
=ಕಾಶ್ಮೀರ ಕೇಸರಿ

18.  ಸಿ. ರಾಜಗೋಪಾಲಾಚಾರಿ
=ರಾಜಾಜಿ

19.  ಸಿ. ಎಫ್. ಆಂಡ್ರೋಸ್
=ದೀನಬಂಧು

20.  ಟಿಪ್ಪು ಸುಲ್ತಾನ
=ಮೈಸೂರ ಹುಲಿ

21.  ದಾದಾಬಾಯಿ ನವರೋಜಿ
=ರಾಷ್ಟ್ರಪಿತಾಮಹ
(ಭಾರತದ ವಯೋವೃದ್ಧ)

22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.

23. ಡಾ ಶ್ರೀಕೃಷ್ಣ ಸಿಂಗ್
=ಬಿಹಾರ ಕೇಸರಿ

24. ಟಿ ಪ್ರಕಾಶಂ
=ಆಂಧ್ರ ಕೇಸರಿ

25. ಚಿತ್ತರಂಜನ್ ದಾಸ್
=ದೇಶಬಂಧು

26. ಶೇಖ್ ಮುಜಿಬತ್ ರಹಮಾನ್
=ಬಂಗಬಂಧು

27. ಕರ್ಪೂರಿ ಠಾಕೂರ್
=ಜನ ನಾಯಕ

28. ಪುರುಷೋತ್ತಮ್ ದಾಸ್ ಟಂಡನ್
=ರಾಜಶ್ರೀ

29. ಡಾ. ರಾಜೇಂದ್ರ ಪ್ರಸಾದ್
=ದೇಶ ರತ್ನ ಮತ್ತು ಅಜಾತಶತ್ರು

30. ಮದನ ಮೋಹನ ಮಾಳವೀಯ
=ಮಹಾಮಾನ

31. ಮೇಜರ್ ಜನರಲ್ ರಾಜಿಂದರ್ ಸಿಂಗ್
=ಗುಬ್ಬಚ್ಚಿ(Sparrow)

32. ಚಂದ್ರಶೇಖರ್
=ಯುವ ಟರ್ಕ್ (Young Turk)

33. ಚೌಧರಿ ದೇವಿಲಾಲ
=ತೌ(Tau)

34. ಭಗತ್ ಸಿಂಗ್
=ಶಹೀದ್ ಇ ಅಜಾಮ್

35. ಮದರ್ ತೆರೇಸಾ
=ತಾಯಿ

36. ಅಮೀರ್ ಖುಸ್ರೋ
=ಹಿಂದುಸ್ಥಾನದ ಗಿಳಿ

37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್
=ಲಾಲ್, ಬಾಲ್, ಪಾಲ್

38. ಡಾ ಅನುಗ್ರಹ ನಾರಾಯಣ ಸಿಂಗ್
=ಬಿಹಾರದ ವಿಭೂತಿ

39. ಜಗಜೀವನ್ ರಾಮ್
=ಬಾಬುಜಿ

40. ಸಮುದ್ರ ಗುಪ್ತ
=ಭಾರತದ ನೆಪೋಲಿಯನ್

41. ಮಹಾಕವಿ ಕಾಳಿದಾಸ
=ಭಾರತದ ಶೇಕ್ಸ್ಪಿಯರ್

42. ಚಾಣಕ್ಯ
=ಭಾರತದ ಮ್ಯಾಕೆವೇಲಿ

43.ಜೈನುಲ್ ಅಬ್ದಿನ್
=ಕಾಶ್ಮೀರದ ಅಕ್ಬರ್

44. ರವಿಶಂಕರ್ ಮಹಾರಾಜ್
=ಗುಜರಾತದ ಪಿತಾಮಹ

45. ದುಂಡಿರಾಜ್ ಗೋವಿಂದ ಫಾಲ್ಕೆ
=ಭಾರತೀಯ ಚಲನಚಿತ್ರದ ಪಿತಾಮಹ

46. ರಾಜಾರಾಮ್ ಮೋಹನ್ ರಾಯ್
=ಭಾರತದ ನವೋದಯದ ದೃವತಾರೆ

47. ಕಪಿಲ್ ದೇವ್
=ಹರಿಯಾಣದ ಸುಂಟರಗಾಳಿ (ಹರಿಕೇನ್)

48. ಧ್ಯಾನ್ ಚಂದ್
=ಹಾಕಿಯ ಜಾದೂಗಾರ (ಮಾಂತ್ರಿಕ)

49.ಕೆ.ವಿ. ಪುಟ್ಟಪ್ಪ
=ಕುವೆಂಪು

50. ದೇಶ ಪ್ರೀಯ
=ಯತೀಂದ್ರ ಮೋಹನ್ ಸೇನ್ ಗುಪ್ತ

Sports prize

🌀ಹಿಂದಿನ ಪರೀಕ್ಷೆಗಳಲ್ಲಿ ಕೇಳಿದ ಕ್ರೀಡೆಗಳಿಗೆ ಸಂಬಂಧಿಸಿದ ಪ್ನಶ್ನೆಗಳ ಸಂಗ್ರಹ🌀

1. ಒಲಂಪಿಕ್ ಕಿಈಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ..?
ನಾಲ್ಕು ವರ್ಷಗಳು

2. ಕ್ರಿ.ಶ 1894 ರಲ್ಲಿ ಪುನರುತ್ಥಾನಗೊಂಡ ಒಲಂಪಿಕ್ ಕ್ರೀಡೆಗಳು 1896 ರಲ್ಲಿ ಮೊದಲ ಬಾರಿಗೆ ಎಲ್ಲಿ ನಡೆದವು..?
ಅಥೆನ್ಸ್

3. ಒಲಂಪಿಕ್ ಕ್ರೀಡೆಯ ಲಾಂಛನ ಯಾವುದು..?
 ಪರಸ್ಪರ ಹೆಣೆದುಕೊಂಡಿರುವ ನೀಲಿ, ಹಳದಿ, ಕಪ್ಪು, ಹಸಿರು, ಮತ್ತು ಕೆಂಪು ಬಣ್ಣದ ಸುರುಳಿಗಳು

4. ಒಲಂಪಿಕ್ ನಂತರ ಅತೀ ದೊಡ್ಡ ಕ್ರೀಡಾಕೂಟ ಯಾವುದು..?
  ಕಾಮನ್‍ವೆಲ್ತ್ ಕ್ರೀಡಾಕೂಟ

5. ಮೊದಲ  ಕಾಮನ್‍ವೆಲ್ತ್  ಕ್ರೀಡಾಕೂಟ ಯಾವಾಗ ನಡೆಯಿತು..?
1930

6. ಮೊದಲ ಏಶಿಯನ್ ಕ್ರೀಡಾಕೂಟವು ಯಾವಾಗ ನಡೆಯಿತು..?
1951

7. ಮೊದಲ ಏಶಿಯನ್ ಕ್ರೀಡಾಕೂಟವು ಎಲ್ಲಿ ನಡೆಯಿತು..?
 ನವದೆಹಲಿ 

8. ಭಾರತವು ಯಾವಾಗ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತು..?
1983

9. 2004 ರಲ್ಲಿ ಎಸ್‍ಎಎಫ್ ಕ್ರೀಡಾಕೂಟಕ್ಕೆ ಏನೆಂದು ಮರು ನಾಮಕರಣ ಮಾಡಲಾಗಿದೆ..?
ಸೌತ್ ಏಶಿಯನ್ ಗೇಮ್ಸ್

10. ಮಹಾನ್ ಕ್ರಿಕೆಟಿಗ ಸರ್. ಡೊನಾಲ್ಡ್ ಬ್ರಾಡ್‍ಮನ್ ಯಾವ ದೇಶದವರು..?
 ಆಸ್ಟ್ರೇಲಿಯಾ

11. ಲವ್ ಮತ್ತು ಸ್ಮಾಶ್ ಎಂಬ ಪದಗಳು ಯಾವ ಆಟದಲ್ಲಿ ಬಳಸಲ್ಪಡುತ್ತವೆ..?
ಬ್ಯಾಡ್ಮಿಂಟನ್ ಮತ್ತು ಟೆನಿಸ್

12. ವಿಂಬಲ್ಡನ್ ಟ್ರೋಫಿಯು ಯಾವ ಕ್ರೀಡೆಗೆ ಸಂಬಂಧಿಸಿದೆ..?
 ಲಾನ್ ಟೆನಿಸ್

13. ಕ್ರಿಕೆಟ್ ಆಟಕ್ಕೆ ಹೆಸರಾದ ಲಾಡ್ರ್ಸ್ ಮತ್ತು ಲೀಡ್ಸ್ ಕ್ರೀಡಾಂಗಣಗಳು ಎಲ್ಲಿದೆ…?
 ಲಂಡನ್

14. ‘ ಬಟರ್ ಪ್ಲೈ ‘ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..
 ಈಜು

15. ಬುಲ್ ಫೈಟಿಂಗ್ ( ಗೂಳಿ ಕಾಳಗ) ಯಾವ ದೇಶದ ರಾಷ್ಟ್ರೀಯ ಕ್ರೀಡೆಯಾಗಿದೆ..?
ಸ್ಪೇನ್

16. 1983 ರಲ್ಲಿ ವಿಶ್ವಕಪ್ ಗೆದ್ದ ಭಾರತಿಯ ಕ್ರಿಕೆಟ್ ತಂಡದ ನಾಯಕ ಯಾರಾಗಿದ್ದರು..?
ಕಪಿಲ್ ದೇವ್

17. ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು.? 
 ಕರ್ಣಂ ಮಲ್ಲೇಶ್ವರಿ

18. ರೂಕ್ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..?
ಚೆಸ್

19. ‘ ಒನ್ ಮೋರ್ ಓವರ್’ ಎಂಬುದು ಯಾರ ಆತ್ಮಕಥೆಯಾಗಿದೆ..?
ಇ. ಪ್ರಸನ್ನ

20. ಅಮೇರಿಕಾ ಸಂಯುಕ್ತ ಸಂಸ್ಥಾನದ ಹೆಸರುವಾಸಿ ಆಟ ಯಾವುದು..?ಬೇಸ್‍ಬಾಲ್

21. ಒಲಂಪಿಕ್ ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ ಯಾರು..?
ಪಿ.ಟಿ ಉಷಾ

22. ಸ್ವಾತ್ಲಿಂಗ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ..?
 ಟೇಬಲ್ ಟೆನಿಸ್

23. ‘ ಬೀಮರ್’ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..?
ಕ್ರಿಕೆಟ್

24. ‘ಡೇವಿಸ್ ಕಪ್’ ಯಾವ ಕ್ರೀಡೆಗೆ ಸಂಬಂಧಿಸಿದೆ..?
ಟೆನಿಸ್

25. ‘ಇಂದಿರಾಗಾಂಧಿ’ ಒಳಾಂಗಣ ಕ್ರೀಡಾಂಗಣ ಎಲ್ಲಿದೆ..?
ನವದೆಹಲಿ

Science

🌀ವಿಜ್ಞಾನ ಪ್ರಶ್ನೋತ್ತರಗಳು 
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ🌀

 
1. ಲ್ಯೂಸರ್ನ್ ಎಂದರೆ ಏನು?
ಎಲೆಗಳಿಗಾಗಿ ಬೆಳಸಿದ ಬೆಳೆ

2. ವ್ಯಾಪಕ ಬಳಕೆಯಲ್ಲಿರುವ ಜೀವನಿರೋಧಕ ಪೆನ್ಸಿಲಿನ್ ಯಾವುದರಿಂದ ಉತ್ಪತ್ತಿಯಾಗುತ್ತದೆ?
ಒಂದು ಶೀಲಿಂಧ್ರ

3. ಹವಾಮಾನ ಮತ್ತು ವಾಯುಗುಣದ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಪವನಶಾಸ್ತ್ರ

4. ಒಬ್ಬ ಮನುಷ್ಯ ಹುಟ್ಟಿದ ದಿನ ಮತ್ತು ವರ್ಷವನ್ನು ಆಧರಿಸಿ ಭವಿಷ್ಯ ಹೇಳುವ ಶಾಸ್ತ್ರ ಯಾವುದು?
 ಅಂಕಿಶಾಸ್ತ್ರ

5. ಪಾರಾಸಿಟಾಮಾಲ್….
ನೋವು ನಿವಾರಿಸುತ್ತದೆ.

6. ಜಿಯೋಲೈಟ್ ಉಪಯೋಗಿಸುವುದು…..
ಕಾಗದವನ್ನು ವಿವರ್ಣಿಕರಣಗೊಳಿಸಲು

7. ಶರ್ಬತಿ ಸೊನೋರ ಎಂಬುದು?
ಗೋಧಿಯ ಒಂದು ಮಾದರಿ

8. ಸಾರಜನೀಕರಣ ಎಂದರೆ ಏನು?
ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು

9. ಅತಿ ಸೂಕ್ಷ್ಮ ಗಾತ್ರದ ಜೀವಕೋಶ
 ವೈರಸ್

10. ಬೀಜಗಳನ್ನು ಅತ್ಯುತ್ತಮ ರೀತಿಯಲ್ಲಿ ಶೇಖರಿಸಿಡಲು ಉಪಯೋಗಿಸುವ ಪದ್ಧತಿ..
ತಂಪಾದ ಶುಷ್ಕ ಪರಿಸ್ಥಿತಿ

11. ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಗೆ ಏನೆಂದು ಕರೆಯುತ್ತಾರೆ?
 ಎಂಟೆಮೋಫಿಲಿ

12.ರೋಗಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಪೆಥಾಲಜಿ

13. ಬೆಳಕಿನ ತೀವ್ರತೆಯನ್ನು ಅಳೆಯುವ ವಿಧಾನ ಯಾವುದು?
ದ್ಯುತಿ ಮಾಪನ

14. ‘ಪಾತ್ರೆಯಲ್ಲಿ ತುಂಬಿಟ್ಟ ಒಂದು ಬಿಂದುವಿನಲ್ಲಿ ಪ್ರಯೋಗಿಸಿದ ಒತ್ತಡ ಅದರ ಎಲ್ಲಾ ಬಿಂದುಗಳಿಗೂ ಸಮರೂಪದಲ್ಲಿ ಪ್ರಸರಣವಾಗುವುದು’ ಇದು ಯಾವ ನಿಯಮ?
 ಪ್ಯಾಸ್ಕಲ್ ನಿಯಮ

15. ವಸ್ತುವಿನ ಕಣಗಳ ಚಲನೆ ಇಲ್ಲದೆಯೇ ಒಂದು ಕಣದಿಂದ ಪಕ್ಕದ ಕಣಕ್ಕೆ ಶಾಖ ಪ್ರಸಾರವಾಗುವ ಕ್ರಿಯೆಗೆ…
ಉಷ್ಣವಹನ

16. ಎಲೆಕ್ಟ್ರಿಕ್ ಬಲ್ಬ್‍ನ ತಂತಿಯನ್ನು ಯಾವುದರಿಂದ ಮಾಡುತ್ತಾರೆ?
ಟಂಗ್‍ಸ್ಟನ್

17. ನೀರಿನ ಶಾಶ್ವತ ಗಡಸುತನವನ್ನು ನಿವಾರಿಸಲು…..
ವಾಷಿಂಗ್‍ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು

18. ನೀರನ್ನು ಕ್ಲೋರಿಕರಣ ಮಾಡಲು ಕಾರಣ…
ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು


19. ಟಿಂಚರು ಇದು….
ಅಲ್ಕೋಹಾಲಿನ ದ್ರವ

20. ಲೋಹಗಳನ್ನು ತಟ್ಟಿ ತಗಡುಗಳನ್ನಾಗಿ ಮಾಡಬಹುದು. ಲೋಹದ ಈ ಗುಣವೇ..
 ಪತ್ರಶೀಲತ್ವ

World award

🌷ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು🌷

🏅 ನೊಬೆಲ್ ಪ್ರಶಸ್ತಿ
ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ಡೈನಮೈಟ್ ಸಂಶೋಧಕ ‘ಸ್ವೀಡನ್’ ವಿಜ್ಞಾನಿ ‘ಆಲ್ಫ್ರೇಡ್ ನೊಬೆಲ್’ ಹೆಸರಿನಲ್ಲಿ ನೀಡಲಾಗುತ್ತದೆ.ಈ ಪ್ರಶಸ್ತಿಗಳನ್ನು ಪ್ರತಿವರ್ಷ ಔಷಧ, ವಿಶ್ವ ಶಾಂತಿ,ಭೌತಶಾಸ್ತ್ರ, ರಸಾಯನಶಾಸ್ತ್ರ, ಸಹಿತ್ಯ, ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ವ್ಯಕ್ಕಿಗಳಿಗೆ ನೀಡಲಾಗುತ್ತದೆ.

🏅 ಮ್ಯಾನ್ ಬುಕರ್ ಪ್ರಶಸ್ತಿ
ಈ ಪ್ರಶಸ್ತಿಯನ್ನು 1968 ರಲ್ಲಿ ಬುಕರ್ ಕಂಪನಿ ಮತ್ತು ಬ್ರಿಟಿಷ್ ಪ್ರಕಾಶಕರ ಸಂಘದಿಂದ ಜಂಟಿಯಾಗಿ ಸ್ಥಾಪಿಸಲಾಯಿತು. ಇದೊಂದು ಪ್ರತಿಷ್ಠಿತ ಸಾಹಿತಿಕ ಪ್ರಶಸ್ತಿಯಾಗಿದೆ.

🏅 ಕಳಿಂಗ ಪ್ರಶಸ್ತಿ
ಈ ಪ್ರಶಸ್ತಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿದೆ.ಈ ಪ್ರಶಸ್ತಿಯನ್ನು ವಿಜ್ಞಾನದ ಬರಹಗಾರರಿಗೆ ಅಥವಾ ಸಂಪಾದಕರಾಗಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ.

🏅ಆಸ್ಕರ್ ಪ್ರಶಸ್ತಿ
ಈ ಪ್ರಶಸ್ತಿಗಳನ್ನು ಸಿನಿಮಾ ಕ್ಷೇತ್ರದ ಮಹತ್ತರ ಸಾಧನೆಗಾಗಿ ಪ್ರತಿ ವರ್ಷವೂ ನೀಡಲಾಗುತ್ತದೆ.ಇದು ಸಿನಿಮಾ ಕ್ಷೇತ್ರದ ಅತ್ಯಂತ ಶ್ರೇಷ್ಠ ಮಟ್ಟದ ಪ್ರಶಸ್ತಿಯಾಗಿದೆ.

🏅ರೈಟ್ ಲೈವ್ಲಿ ಹುಡ್ ಪ್ರಶಸ್ತಿ
ಈ ಪ್ರಶಸ್ತಿಯು 1980 ರಲ್ಲಿ ಸ್ವೀಡಿಸ್ – ಜರ್ಮನ್ ಬರಹಗಾರ ಜಾಕಬ್ ವೋನ್ ವೆಸ್ಕಲ್‍ರಿಂದ ಸ್ಥಾಪಿಸಲ್ಪಟ್ಟಿತು. ಇದು ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಖ್ಯಾತವಾಗಿದ್ದು, ಇದನ್ನು ಇಂದಿನ ನೈಜ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಯೋಗಿಕವಾಗಿ ಮತ್ತು ನೇರವಾಗಿ ದುಡಿದು ಮಹತ್ತರ ಸಾಧನೆಗೈದ ವ್ಯಕ್ತಿಗಳಿಗೆ ನೀಡಲಾಗುತ್ತದೆ.

🏅ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ
ಈ ಪ್ರಶಸ್ತಿಯನ್ನು ಫಿಲಿಫೈನ್ಸ್ ಸರ್ಕಾರವು 1958 ರಲ್ಲಿ ಆ ದೇಶದ ದಿವಂಗತ ಅಧ್ಯಕ್ಷ ರೇಮನ್ ಮ್ಯಾಗ್ಸೆಸ್ಸೆಯವರ ಗೌರವಾರ್ಥ ಸ್ಥಾಪಿಸಿತು. ಈ ಪ್ರಶಸ್ತಿಯನ್ನು ಸಾರ್ವಜನಿಕ ಸೇವೆ, ಸಮುದಾಯ ನಾಯಕತ್ವ, ಪತ್ರಿಕೋದ್ಯಮ, ಸರ್ಕಾರಿಸೇವೆ, ಸಾಹಿತ್ಯ, ರಚನಾತ್ಮಕ ಕಲೆ, ಮತ್ತು ಅಂತರಾಷ್ಟ್ರೀಯ ಅರಿವು ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿರುವ ಏಷ್ಯಾ ಖಂಡದ ದೇಶದ ವ್ಯಕ್ಕಿಗಳಿಗೆ ಅಥವಾ ಸಂಸ್ಥೆಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ.

🏅ಸೈಮನ್ ಬೋಲಿವರ್ ಪ್ರಶಸ್ತಿ
ಈ ಪ್ರಶಸ್ತಿಯನ್ನು ವಿಶ್ವ ಸಂಸ್ಥೆಯ ಯುನೆಸ್ಕೋ ಸ್ಥಾಪಿಸಿದ್ದು, ಇದನ್ನು ಎರಡು ವರ್ಷಕ್ಕೋಮ್ಮೆ ಸ್ವಾತಂತ್ರ್ಯ, ಪ್ರಜೆಗಳ ಘನತೆ ಮತ್ತು ಹೊಸ ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತ ನೆಮ್ಮದಿಯನ್ನು ಬಲಗೊಳಿಸುವ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.

🏅 ಟೆಂಪ್ಲಟನ್ ಫೌಂಡೇಷನ್ ಪ್ರಶಸ್ತಿ
ಈ ಪ್ರಶಸ್ತಿಯನ್ನು 1972 ರಲ್ಲಿ ಟೆಂಪ್ಲಟನ್ ಫೌಂಡೇಷನ್ ಸ್ಥಾಪಿಸಿದ್ದು, ಇದನ್ನು ಧಾರ್ಮಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದವರಿಗೆ ನೀಡಲಾಗುತ್ತದೆ

ಪ್ರಶಸ್ತಿ ಗೌರವಗಳು

🏅ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು🏅
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 

1. ಗ್ರಾಮಿ ಪ್ರಶಸ್ತಿ – ಸಂಗೀತ

2. ಟ್ಯಾನ್ಸೆನ್ ಪ್ರಶಸ್ತಿ – ಸಂಗೀತ

3. ಮ್ಯಾಗ್ಸೆಸೆ ಪ್ರಶಸ್ತಿ – ಸಾರ್ವಜನಿಕ ಸೇವೆ
4. ಮ್ಯಾನ್ ಬುಕರ್ ಪ್ರಶಸ್ತಿ – ಕಾದಂಬರಿಗಳ ಲೇಖಕರು

5. ಪುಲಿಟ್ಜರ್ – ಪತ್ರಿಕೋದ್ಯಮ ಮತ್ತು ಸಾಹಿತ್ಯ

6. ಭಾರತೀಯ ಜ್ಞಾನಪೀಠ ಪ್ರಶಸ್ತಿ – ಸಾಹಿತ್ಯ

7. ಭಾರತ್ ರತ್ನ- ಕಲೆ, ವಿಜ್ಞಾನ, ಸಾರ್ವಜನಿಕ ಸೇವೆಗಳು, ಕ್ರೀಡೆ

8. ಕಳಿಂಗ ಪ್ರಶಸ್ತಿ – ವಿಜ್ಞಾನ

9. ಧನ್ವಂತ್ರಿ ಪ್ರಶಸ್ತಿ – ವೈದ್ಯಕೀಯ ವಿಜ್ಞಾನ

10. ಭಟ್ನಾಗರ್ ಪ್ರಶಸ್ತಿ – ವಿಜ್ಞಾನ

11. ನೊಬೆಲ್ ಪ್ರಶಸ್ತಿ – ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ

12. ಶೌರ್ಯ ಚಕ್ರ – ನಾಗರಿಕ ಅಥವಾ ಮಿಲಿಟರಿ

13. ಅಶೋಕ್ ಚಕ್ರ – ನಾಗರಿಕರು

14. ಪರಮ ವೀರ ಚಕ್ರ – ಮಿಲಿಟರಿ

15. ಕಾಳಿದಾಸ ಸಮ್ಮಾನ್ – ಕ್ಲಾಸಿಕಲ್ ಮ್ಯೂಸಿಕ್

16. ವ್ಯಾಸ್ ಸಮ್ಮಾನ್ – ಸಾಹಿತ್ಯ

17. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಸಾಹಿತ್ಯ
18. ಆರ್.ಡಿ.ಬಿರ್ಲಾ ಅವಾರ್ಡ್ – ಮೆಡಿಕಲ್ ಸೈನ್ಸ್

19. ಲೆನಿನ್ ಶಾಂತಿ ಪ್ರಶಸ್ತಿ – ಶಾಂತಿ ಮತ್ತು ಸ್ನೇಹ

20. ಜೂಲಿಯೆಟ್ ಕ್ಯೂರಿ ಪ್ರಶಸ್ತಿ: ಶಾಂತಿ

21. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಭಾರತೀಯ ಭಾಷೆಗಳು ಮತ್ತು ಇಂಗ್ಲೀಷ್ ಪುಸ್ತಕಗಳು

22. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ – ವಿಜ್ಞಾನ ಮತ್ತು ತಂತ್ರಜ್ಞಾನ

23. ಲಲಿತ್ ಕಲಾ ಅಕಾಡೆಮಿ ಪ್ರಶಸ್ತಿ – ಕಲೆ

24. ರಾಜೀವ್ ಗಾಂಧಿ ಖೇಲ್ ರತ್ನ – ಕ್ರೀಡೆ (ಆಟಗಾರರು)

25. ದ್ರೋಣಾಚಾರ್ಯ ಪ್ರಶಸ್ತಿ -ಕ್ರೀಡೆ ತರಬೇತುದಾರರು

26. ಧ್ಯಾನ್ ಚಂದ್ – ಕ್ರೀಡೆ

27. ಏಕಲವ್ಯ ಪ್ರಶಸ್ತಿ – ಕ್ರೀಡೆ

28. ಕೋಲಂಕಾ ಕಪ್ – ಕ್ರೀಡೆ

29. ಏಕಲವ್ಯ ಪ್ರಶಸ್ತಿ – ಕ್ರೀಡೆ

30. ಅರ್ಜುನ ಪ್ರಶಸ್ತಿ – ಕ್ರೀಡೆ

31. ಮಹಾರಾಜ ರಂಜಿತ್ ಸಿಂಗ್ ಪ್ರಶಸ್ತಿ – ಕ್ರೀಡೆ

32. ಆಸ್ಕರ್ – ಚಲನಚಿತ್ರ

33. ದಾದಾ ಸಾಹಿಬ್ ಫಾಲ್ಕೆ – ಚಲನಚಿತ್ರ

34. ನಂದಿ ಪ್ರಶಸ್ತಿಗಳು – ಸಿನಿಮಾ

35. ಸ್ಕ್ರೀನ್ ಪ್ರಶಸ್ತಿಗಳು – ಸಿನಿಮಾ

ಭಾರತ ರತ್ನ ಪ್ರಶಸ್ತಿ ಭಾಜನರಾದ ವರ್ಷ – ಪುರಸ್ಕೃತರ ಹೆಸರು ಮತ್ತು ಅವರ ರಾಜ್ಯ/ ದೇಶ

🌺ಭಾರತ ರತ್ನ ಪ್ರಶಸ್ತಿ ಭಾಜನರಾದ ವರ್ಷ – ಪುರಸ್ಕೃತರ ಹೆಸರು ಮತ್ತು ಅವರ ರಾಜ್ಯ/ ದೇಶ🌺
👇👇👇👇👇👇👇
ಇಂಪಾರ್ಟೆಂಟ್ 

1) 1954- ಎಸ್ ರಾಧಾಕೃಷ್ಣನ್ -ಆಂಧ್ರಪ್ರದೇಶ

2) 1954- ಸಿ.ರಾಜಗೋಪಾಲಚಾರಿ – ತಮಿಳುನಾಡು

3) 1954- ಡಾ.ಸಿ.ವ್ಹಿ.ರಾಮನ್ – ತಮಿಳುನಾಡು

4) 1955- ಭಗವಾನದಾಸ – ಉತ್ತರ ಪ್ರದೇಶ

5) 1955- ಸರ್.ಎಮ್.ವಿಶ್ವೇಶ್ವರಯ್ಯ – ಕರ್ನಾಟಕ

6) 1955- ಜವಾಹರಲಾಲ್ ನೆಹರು – ಉತ್ತರ ಪ್ರದೇಶ

7) 1957- ಪಂ.ಗೋ.ವಲ್ಲಭಿ ಪಂಥ – ಉತ್ತರ ಪ್ರದೇಶ

8) 1958- ಧೊಂಡೊ ಕೇಶವ ಕರ್ವೆ – ಮಹಾರಾಷ್ಟ್ರ

9)     1961- ಬಿಧಾನ್‌ ಚಂದ್ರ ರಾಯ್‌ – ಪಶ್ಚಿಮ ಬಂಗಾಳ

10) 1961- ಪುರುಷೋತ್ತಮದಾಸ ಟಂಡನ್ – ಉತ್ತರ ಪ್ರದೇಶ

11) 1962- ಡಾ.ರಾಜೇಂದ್ರ ಪ್ರಸಾದ್ – ಬಿಹಾರ

12) 1963- ಜಾಕೀರ್ ಹುಸೇನ್ – ಉತ್ತರ ಪ್ರದೇಶ

13) 1963- ಡಾ.ಪಾಂಡುರಂಗ ವಾಮನ ಕಾಣೆ – ಮಹಾರಾಷ್ಟ್ರ

14) 1966- ಲಾಲ್ ಬಹಾದ್ದೂರ ಶಾಸ್ತ್ರೀ – ಉತ್ತರ ಪ್ರದೇಶ

15) 1971- ಇಂದಿರಾಗಾಂಧಿ – ಉತ್ತರ ಪ್ರದೇಶ

16) 1975- ವ್ಹಿ.ವ್ಹಿ.ಗಿರಿ – ಒಡಿಶಾ

17) 1976- ಕೆ.ಕಾಮರಾಜ್ – ತಮಿಳುನಾಡು

18) 1980- ಮಧರ್ ಥೆರಿಸಾ -ಪಶ್ಚಿಮ ಬಂಗಾಳ (ಉತ್ತರ ಮ್ಯಾಸಿಡೋನಿಯಾ)

19) 1983- ವಿನೋಬಾ ಭಾವೆ – ಮಹಾರಾಷ್ಟ್ರ

20) 1987- ಖಾನ್ ಅಬ್ದಲ್ ಗಫಾರಖಾನ್ – ಪಾಕಿಸ್ತಾನ

21) 1988- ಎಂ.ಜಿ.ರಾಮಚಂದ್ರನ್ – ತಮಿಳುನಾಡು

22) 1990- ಡಾ.ಅಂಬೇಡ್ಕರ್ – ಮಹಾರಾಷ್ಟ್ರ

23) 1990- ನೆಲ್ಸನ್ ಮಂಡೇಲಾ – ದಕ್ಷಿಣ ಆಫ್ರಿಕಾ

24) 1991- ಮೊರಾರ್ಜಿ ದೇಸಾಯಿಯ – ಗುಜರಾತ್

25) 1991- ರಾಜೀವ್ ಗಾಂಧೀ – ಉತ್ತರ ಪ್ರದೇಶ

26) 1991- ಸರ್ದಾರ್ ಪಟೇಲ್ – ಗುಜರಾತ್

27) 1992- ಜೆ.ಆರ್.ಡಿ.ಟಾಟಾ – ಮಹಾರಾಷ್ಟ್ರ

28) 1992- ಮೌಲಾನಾ ಅಬ್ದುಲ್ ಕಲಾಂ ಆಜಾದ್ – ಪಶ್ಚಿಮ ಬಂಗಾಳ

29) 1992- ಸತ್ಯಜಿತ್ ರೇ – ಪಶ್ಚಿಮ ಬಂಗಾಳ

30) 1997- ಗುಲ್ಜಾರಿಲಾಲ್ ನಂದಾ – ಪಂಜಾಬ್

31) 1997- ಅರುಣಾ ಅಸಫ್ ಅಲಿ – ಪಶ್ಚಿಮ ಬಂಗಾಳ

32) 1997- ಎ.ಪಿ.ಜೆ.ಅಬ್ದುಲ್ ಕಲಾಂ – ತಮಿಳುನಾಡು

33) 1998- ಎಂ.ಎಸ್.ಸುಬ್ಬುಲಕ್ಷ್ಮಿ – ತಮಿಳುನಾಡು

34) 1998- ಸಿ. ಸುಬ್ರಹ್ಮಣ್ಯಂ – ತಮಿಳುನಾಡು

35) 1999- ಜಯಪ್ರಕಾಶ ನಾರಾಯಣ – ಬಿಹಾರ

36) 1999- ಅಮರ್ತ್ಯಸೇನ್ – ಪಶ್ಚಿಮ ಬಂಗಾಳ

37) 1999- ರವಿಶಂಕರ್ – ಶ್ಚಿಮ ಬಂಗಾಳ

38) 1999- ಗೋಪಿನಾಥ್ ಬೋರ್ಡೊಲೋಯಿ – ಅಸ್ಸಾಂ

39) 2001- ಉ.ಬಿಸ್ಮಲ್ಲಾಖಾನ್ -ಉತ್ತರ ಪ್ರದೇಶ

40) 2001- ಲತಾ ಮಂಗೇಶ್ಕರ್ -ಮಹಾರಾಷ್ಟ್ರ

41) 2008- ಭೀಮಸೇನ ಜೋಶಿ – ಕರ್ನಾಟಕ

42) 2013- ಸಚಿನ್ ತೆಂಡೂಲ್ಕರ್ – ಮಹಾರಾಷ್ಟ್ರ

43) 2013- ಸಿ.ಎನ್.ಆರ್.ರಾವ್ – ಕರ್ನಾಟಕ

44) 2015- ಮದನ ಮೋಹನ ಮಾಳ್ವೀಯಾ – ಉತ್ತರ ಪ್ರದೇಶ

45) 2015- ಅಟಲ ಬಿಹಾರಿ ವಾಜಪೇಯಿ – ಮಧ್ಯಪ್ರದೇಶ

46) 2019- ಪ್ರಣಬ್ ಮುಖರ್ಜಿ – ಪಶ್ಚಿಮ ಬಂಗಾಳ

47) 2019 – ಭೂಪೇನ್ ಹಜಾರಿಕಾ – ಅಸ್ಸಾಂ

48) 2019 – ನಾನಾಜಿ ದೇಶಮುಖ್ – ಮಹಾರಾಷ್ಟ್ರ

Economic

☘ಅರ್ಥಶಾಸ್ತ್ರ ಕುರಿತು ಹಿಂದಿನ ಅನೇಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತ್ತರಗಳು ☘
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 
👇👇👇👇👇👇👇👇
➤ ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..?
 – ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್

➤ SAARC ನ ಪ್ರಧಾನ ಕಚೇರಿ..? – ಕಟ್ಮಂಡು

➤  ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ..?
- ಜಿನಿವಾ

➤ ಭಾರತದ ಹತ್ತು ರೂಪಾಯಿ ನೋಟಿನಲ್ಲಿ ಯಾರ ಸಹಿ ಇರುತ್ತದೆ..?
- RBI ಗವರ್ನರ್( “ಒಂದು ರೂಪಾಯಿ” ಮೇಲೆ ಹಣಕಾಸು ಕಾರ್ಯದರ್ಶಿ ಇಲಾಖೆ ಸಹಿ ಇರುತ್ತೆ,)

➤ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..? 
– ಹೆಚ್ಚುತ್ತದೆ

➤ ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..? – 11

➤ ILO ಪ್ರಧಾನ ಕಛೇರಿ ಇರುವುದು..? – ಜಿನಿವಾ

➤ “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..?
- ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ

➤ ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..? – ಜವಾಹರಲಾಲ್ ನೆಹರು

➤ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..?
- ಭಾರತೀಯ ರಿಸರ್ವ್ ಬ್ಯಾಂಕ್

➤ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?
- ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ

➤ 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..?
-ಇಂದಿರಾಗಾಂಧಿಯವರು

➤ ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..?
- ಜವಾಹರಲಾಲ್ ನೆಹರು

➤ “The Argumentative India” ಇದು ಯಾರ ಆತ್ಮಕಥನ..?
- ಅಮರ್ತ್ಯಸೇನ

➤  ಯಾರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..?
- ಎಂ ಎಸ್ ಸ್ವಾಮಿನಾಥನ್

➤  “ಆಪರೇಷನ್ ಫಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ..?
- ಹಾಲು ಉತ್ಪಾದನೆ

➤ ಹಣದ ಅಪಮೌಲ್ಯ ಎಂದರೆ..? – ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿ ಹಣದೊಂದಿಗೆ ಹೋಲಿಸಿದಾಗ ಹಣದ ಮೌಲ್ಯ ಕಡಿಮೆಯಾಗುವುದು

➤  ಯುನಿಸೆಫ್(UNICEF) ವಿಸ್ತರಣೆ..? – ಯುನೈಟೆಡ್ ನೇಷೆನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್

➤ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖ್ಯೆ ಎಷ್ಟು..? 
– 5

➤  ಭಾಗ್ಯಲಕ್ಷ್ಮಿ ಯೋಜನೆ ಎಂದರೆ..? – ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯ

➤ ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? – ಮೀನುಗಳು

➤  ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..?
 – ಒಂದನೇ ಎಪ್ರಿಲ್

➤ ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?
- ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು
➤ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ..?- 
1945 ಅಕ್ಟೋಬರ್ 24

➤ ಮಲೇಶಿಯಾ ದೇಶದ ಹಣದ ಹೆಸರು..? 
– ರಿಂಗಿಟನ್

➤ ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? –
 ಭಾರತೀಯ ಸ್ಟೇಟ್ ಬ್ಯಾಂಕ್

➤ ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..? 
– RBI

➤ ಶ್ವೇತ ಕ್ರಾಂತಿ ಹರಿಕಾರ..? – ವರ್ಗೀಸ್ ಕುರಿಯನ್

➤  “ಸಂಪತ್ತು ಬರಿದಾಗಿ ಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..? – ದಾದಾಬಾಯಿ ನವರೋಜಿ

➤ ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? – ವಿಶ್ವಬ್ಯಾಂಕ್

➤  ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? – ಅಂತರಾಷ್ಟ್ರೀಯ ಹಣಕಾಸು ನಿಧಿ

➤ ಯಾವುದು ರಾಜ್ಯಗಳ ಮುಖ್ಯ ಆದಾಯ..? – ಮಾರಾಟ ತೆರಿಗೆ

➤ ಭಾರತದ ಜನಗಳ ಮುಖ್ಯ ಉದ್ಯೋಗ..? – ಕೃಷಿ

➤ ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..? – ಅಕ್ಟೋಬರ್ 2, 2014

➤ “ಬುಲ್ ಮತ್ತು ಬೇರಸ್” ಯಾವುದಕ್ಕೆ ಸಂಬಂಧಿಸಿದೆ..? 
– ಷೆರು ಮಾರುಕಟ್ಟೆ

➤ “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..? 
ಷೇರು ಮಾರುಕಟ್ಟೆ

➤ “ಜೀವ ನಿರೀಕ್ಷಿಸುವಿಕೆ” ಎಂದರೆ..?
- ಮನುಷ್ಯನ ಸರಾಸರಿ ಬದುಕಿವಿಕೆಯ ಕಾಲ

➤ ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..? 
– ಜಿನಿವಾ

➤ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..? 
– ದಕ್ಷಿಣ ಕನ್ನಡ

➤ “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? – ಅಡಂಸ್ಮಿತ್

➤ ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? – ಮೂರು ವರ್ಷಗಳು

➤ ಹೊಸ 2000 ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..? – 15

➤ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು ಅವಲಕ್ಕಿ ಸೇರಿಸಲಾಗಿದೆ..? – ಪ್ರಾಥಮಿಕ ವಲಯ

➤ ಹಣದುಬ್ಬರ ವೆಂದರೆ..? – ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ

➤ ಯಾವ ಬ್ಯಾಂಕು “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿತು..? – HSBC ಬ್ಯಾಂಕ್

➤ PAN ನ ವಿಸ್ತರ ರೂಪ..? ಪರ್ಮೆಂಟ್ ಅಕೌಂಟ್ ನಂಬರ್

➤ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? – one state Many world

➤ ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? – ಸಿಬಿ

ಮಂಗಳ ಗ್ರಹ

🌎ಮಂಗಳ ಗ್ರಹದ ಕುರಿತು ಇಲ್ಲಿದೆ ವಿಶೇಷ ಮಾಹಿತಿ🌎

🌺 ಮಂಗಳ ಗ್ರಹವನ್ನು ಅಂಗಾರಕ, ಕುಜ, ಕೆಂಪು ಗ್ರಹ, ಕಿತ್ತಳೆ ಗ್ರಹ ಎಂದು ಕರೆಯುತ್ತಾರೆ.

🌺ಮಂಗಳ ಗ್ರಹವು ತನ್ನ ಮೇಲ್ಮೈನಲ್ಲಿ ಕಬ್ಬಿಣದ ಆಕ್ಸೈಡ್‍ನ್ನು ಹೊಂದಿರುವುದರಿಂದ ‘ ಕೆಂಪು / ಕಿತ್ತಳೆ ಬಣ್ಣವಾಗಿ ಈ ಗ್ರಹ ಗೋಚರಿಸುತ್ತದೆ.

🌺 ಮಂಗಳ ಗ್ರಹದಲ್ಲಿ ಎರಡು ಉಪಗ್ರಹಗಳಿವೆ. 1. ಪೋಬೊಸ್  2. ಡಿಮೋಸ್

🌺ಮಂಗಳ ಗ್ರಹವು ಸೌರವ್ಯೂಹದ 4 ನೇ ಗ್ರಹವಾಗಿದೆ.

🌺ಸೌರಮಂಡಲದ ಎರಡನೇಯ ಅತಿ ಚಿಕ್ಕ ಗ್ರಹವಾಗಿದೆ.

🌺ಸೌರಮಂಡಲದಲ್ಲಿ ಭೂಮಿಯ ನಂತರದ ಗ್ರಹವಾಗಿದೆ.

🌺 ಮಂಗಳ ಗ್ರಹಕ್ಕೆ ‘ ಮಾರ್ರ್ಸ್’ ಎಂಬ ಹೆಸರನ್ನು ನೀಡಲಾಗಿದ್ದು, ಈ ಹೆಸರು ರೋಮನ್ ಉಪದೇವತೆಯ ಹೆಸರಾಗಿದೆ.

🌺 ಮಂಗಳ ಮತ್ತು ಗುರು ಗ್ರಹಗಳ ನಡುವೆ ಕ್ಷುದ್ರಗ್ರಹಗಳಿವೆ.

🌺ಮಂಗಳನ ಅಕ್ಷಭ್ರಮಣ ಅವಧಿಯು 24 ಗಂಟೆ 6 ನಿಮಿಷಗಳು.

🌺 ಮಂಗಳನ ಪರಿಭ್ರಮಣ ಅವಧಿಯು 687 ದಿನಗಳು.

🌺ಈ ಗ್ರಹದ ಗರ್ಭದಲ್ಲಿ ಘನ ಸ್ಥಿತಿ ಇದ್ದು, ಪ್ರಧಾನವಾಗಿ ಕಬ್ಬಿಣ, ನಿಕಲ್ ಮತ್ತು ಗಂಧಕಗಳಿವೆ.

🌺ಅತಿ ಶೈತ್ಯ ಮತ್ತು ತುಂಬಾ ತೆಳುವಾದ ಸಾಂದ್ರತೆ ಕಡಿಮೆ ಇರುವ ವಾಯುಮಂಡಲ, ಪರಿಣಾಮವಾಗಿ ದ್ರವನೀರು ಅಲಭ್ಯ.

🌺 ಕಾಲುವೆಗಳು, ಕಣಿವೆಗಳು, ಕೊರಕಲುಗಳು, ಕಮರಿಗಳು ಹಿಂದೆ ಸಮೃದ್ಧವಾಗಿ ನೀರು ಹರಿದಿರಬೇಕೆಂಬ ಊಹೆಗೆ ಇಂಬು ನೀಡಿದೆ.

🌺 ಮಂಗಳ ಗ್ರಹವನ್ನು ಅಧಯಯನ ಮಾಡಲು ಮೊಟ್ಟ ಮೊದಲ ಭಾರಿಗೆ 1965 ರಲ್ಲಿ ಮರಿನರ್ – 4 ಎಂಬ ಉಡಾಯನವನ್ನು ಉಡಾವಣೆ ಮಾಡಿ ಮಂಗಲನಲ್ಲಿ ಹಸಿರಿಲ್ಲವೆಂದು ಪತ್ತೆ ಹಚ್ಚಲಾಯಿತು.

🌺 1997 ರ ‘ ಸೋರ್ಜನರ್’ ನೌಕೆ ಮಂಗಳನ ಅಂಗಳದಲ್ಲಿ ಸುತ್ತಾಡಿ ಸಾಕಷ್ಟು ಮಾಹಿತಿ ರವಾನಿಸಿತು.

🌺ಅಮೇರಿಕಾದ ನಾಸಾವು ನವೆಂಬರ್ 26, 2011 ರಂದು ‘ ಕ್ಯೂರಾಸಿಟಿ ರೋವರ್” ಎಂಬ ರೋಬೋಟ್ ನ್ನು ಮಂಗಳ ಗ್ರಹದ “ ಗೇಲ್‍ಕ್ರೆಟರ್’ ಎಂಬ ಸ್ಥಳಕ್ಕೆ ಕಳುಹಿಸಿ, ಆಗಸ್ಟ್ 6, 2012 ರಂದು ಯಶಸ್ವಿಯಾಗಿ ತಲುಪಿತು. ಕ್ಯೂರಾಸಿಟಿ ರೋವರ್ ಮಂಗಳ ಗ್ರಹದ ವೈಜ್ಞಾನಿಕ ಪ್ರಯೋಗಾಲಯವಾಗಿದ್ದು, ಮಂಗಳನ ವಾಯುಗುಣ, ಭೂಗರ್ಭದಲ್ಲಿರುವ ಅಂಶಗಳು, ಭೂತಕಾಲದಲ್ಲಿ ಜೀವಿಗಳು ಅಸ್ಥಿತ್ವದಲ್ಲಿದ್ದವು, ಭವಿಷ್ಯದಲ್ಲಿ ಜೀವಿಗಳು ಬದುಕಲು ಅವಶ್ಯಕವಾದ ವಾತಾವರಣದ ಕುರಿತು ಸಂಶೋಧಿಸುವ ಉದ್ದೇಶ ಹೊಂದಿತ್ತು.

🌺 ಭಾರತದ ಮಂಗಳಯಾನ : ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು ಮಂಗಳಗ್ರಹದ ಅನ್ವೇಷಣೆಗೆ ಕಳುಹಿಸಿರುವ ಉಪಗ್ರಹವಾಗಿದೆ. ಇದನ್ನು ನವೆಂಬರ್ 5 , 2013 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ( ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು. ಇಸ್ರೋ ಪ್ರಥಮ ಪ್ರಯತ್ನದಲ್ಲಿ ಉಪಗ್ರಹವನ್ನು ಸೆಪ್ಟೆಂಬರ್ 24- 9- 2014 ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸಿದೆ.

🌺ಭಾರತದ ಪ್ರಥಮ ಪ್ರಯತ್ನದಲ್ಲಿ ಮಂಗಳಯಾನ ಯಶಸ್ವಿಯಾಯಿತು. ಅಲ್ಲದೆ ಮಂಗಳಗ್ರಹಕ್ಕೆ ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿದ ಅಮೇರಿಕ, ರಷ್ಯಾ, ಐರೋಪ್ಯ ಒಕ್ಕೂಟದ ಸಾಲಿಗೆ ಸೇರ್ಪೆಡೆಯಾಯಿತು. ಮಂಗಳಯಾನಕ್ಕೆ ಭಾರತದ ಉಡ್ಡಯನ ವೆಚ್ಚ ಸುಮಾರು 450 ಕೋಟಿ.

Science

🌷ಜೀವಿಗಳ ಉಸಿರಾಟದ ಅಂಗಗಳು ಮತ್ತು ಚಲನಾಂಗಗಳು🌷

🌺ಉಸಿರಾಟದ ಅಂಗಗಳು🌺

🦟 ಕೀಟಗಳು – ಟ್ರೇಕಿಯಾ

🐠. ಮೀನುಗಳು – ಕಿವಿರು

 🐸 ಕಪ್ಪೆ – ಚರ್ಮ ಮತ್ತು ಶ್ವಾಸಕೋಶ

🧍 ಮಾನವ – ಶ್ವಾಸಕೋಶ

🪴ಸಸ್ಯಗಳು – ಪತ್ರರಂಧ್ರಗಳು

🦋  ಚಲನಾಂಗಗಳು🦋

1. ಅಮೀಬ – ಮಿಥ್ಯಾಪಾದ (ಸೂಡೋಪೋಡಿಯಾ)

2. ಯೂಗ್ಲಿನ – ಲೋಮಾಂಗ (ಸೀಲಿಯಾ)

3. ಪ್ಯಾರಾಮೀಸಿಯಂ – ಕಶಾಂಗ (ಫ್ಲಾಜಿಲ್ಲಾ)

4. ಹೈಡ್ರಾ – ಕರಬಳ್ಳಿ(ಟೆಂಟಕಲ್ಸ್)

5. ಮೀನು – ಈಜುರೆಕ್ಕೆ

6. ಪಕ್ಷಿ – ರೆಕ್ಕೆ

7. ಹಸು – ಕಾಲು

8. ನೀರಸ್ಪಾ – ಶ್ವಪಾದಗಳು(ಪ್ಯಾರಾಪೋಡಿಯಾ)

9. ಎರೆಹುಳು – ಬಿರುಗೂದಲು

10. ಕಂಟಕ ಚರ್ಮಿಗಳು – ನಳಿಕಾಪಾದ

ರಕ್ತದ

🌀ರಕ್ತದ ಬಗ್ಗೆ ಹಿಂದಿನ  ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೋತ್ತರಗಳು 🌀

1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
120 ದಿನಗಳು.

2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
 6-12 ದಿನಗಳು

3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
ಬಿಳಿ ರಕ್ತಕಣಗಳು


4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
12 ದಿನಗಳು

5. _____ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
 ಕಿರುತಟ್ಟೆ.

6. ___ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.
ಬಿಳಿ ರಕ್ತಕಣಗಳ.

7. ____ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
ಪಿತ್ತಜನಕಾಂಗ.

8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
9% ರಷ್ಟು.

9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
ವಿಲಿಯಂ ಹಾರ್ವೆ.

10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?ಸಿಗ್ಮಾನೋಮೀಟರ್.

11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಹೆಮಟಾಲೋಜಿ.

12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಕಾರ್ಲ್ ಲ್ಯಾಂಡ್ ಸ್ಪಿನರ್.

13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?                         ಅಪಧಮನಿ.

14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
 O ಗುಂಪು.

15. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
AB ಗುಂಪು.

Science

☘ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )☘
🍁🔹🍁🔹🍁🔹🍁🔹🍁🔹🍁

1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
  ಜಲಜನಕ.

2) ಅತಿ ಹಗುರವಾದ ಲೋಹ ಯಾವುದು?
 ಲಿಥಿಯಂ.

3) ಅತಿ ಭಾರವಾದ ಲೋಹ ಯಾವುದು?
 ಒಸ್ಮೆನೆಯಂ

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
  ಸೈನೈಡೇಶನ್.

5) ಅತಿ ಹಗುರವಾದ ಮೂಲವಸ್ತು ಯಾವುದು?
 ಜಲಜನಕ.

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
ಸಾರಜನಕ.

7) ಪ್ರೋಟಾನ್ ಕಂಡು ಹಿಡಿದವರು ಯಾರು?
    ರುದರ್ ಫರ್ಡ್.

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
   ಆಮ್ಲಜನಕ.

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?
  ಜೇಮ್ಸ್ ಚಾಡ್ ವಿಕ್

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?
ಜೆ.ಜೆ.ಥಾಮ್ಸನ್

11) ಒಂದು ಪರಮಾಣುವಿನಲ್ಲಿರುವ   ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ  ಸಂಖ್ಯೆಯೇ —–?
ಪರಮಾಣು ಸಂಖ್ಯೆ.

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ  ಮೂಲವಸ್ತು ಯಾವುದು?   ಹಿಲಿಯಂ.

13) ಮೂರ್ಖರ ಚಿನ್ನ ಎಂದು ಯಾವುದನ್ನು  ಕರೆಯುತ್ತಾರೆ?
ಕಬ್ಬಿಣದ ಪೈರೆಟ್ಸ್.

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು —–  ಬಳಸುತ್ತಾರೆ?
 ಒಸ್ಮೆನಿಯಂ.

15) ಪ್ರಾಚೀನ ಕಾಲದ ಮಾನವ ಮೊದಲ  ಬಳಸಿದ ಲೋಹ ಯಾವುದು?
  ತಾಮ್ರ.

16) ಉದು ಕುಲುಮೆಯಿಂದ ಪಡೆದ ಕಬ್ಬಿಣ  ಯಾವುದು?
   ಬೀಡು ಕಬ್ಬಿಣ.

17) ಚಾಲ್ಕೋಪೈರೇಟ್ ಎಂಬುದು ——- ದ  ಅದಿರು.
  ತಾಮ್ರದ.

18) ಟಮೋಟದಲ್ಲಿರುವ ಆಮ್ಲ ಯಾವುದು?
  ಅಕ್ಸಾಲಿಕ್.

20) “ಆಮ್ಲಗಳ ರಾಜ” ಎಂದು ಯಾವ   ಆಮ್ಲವನ್ನು ಕರೆಯುವರು?
  ಸಲ್ಫೂರಿಕ್ ಆಮ್ಲ.

21) ಕಾಸ್ಟಿಕ್ ಸೋಡದ ರಾಸಾಯನಿಕ   ಹೆಸರೇನು?
 ಸೋಡಿಯಂ ಹೈಡ್ರಾಕ್ಸೈಡ್.

22) “ಮಿಲ್ಖ್ ಆಫ್ ಮೆಗ್ನಿಷಿಯಂ” ಎಂದು  ಯಾವುದನ್ನು ಕರೆಯುವರು?
  ಮೆಗ್ನಿಷಿಯಂ ಹೈಡ್ರಾಕ್ಸೈಡ್

23) ಅಡುಗೆ ಉಪ್ಪುವಿನ ರಾಸಾಯನಿಕ   ಹೆಸರೇನು?
  ಸೋಡಿಯಂ ಕ್ಲೋರೈಡ್

24) ಗಡಸು ನೀರನ್ನು ಮೃದು ಮಾಡಲು —– ಬಳಸುತ್ತಾರೆ?
  ಸೋಡಿಯಂ ಕಾರ್ಬೋನೆಟ್.

25) ಕೆಂಪು ಇರುವೆ ಕಚ್ಚಿದಾಗ ಉರಿಯಲು   ಕಾರಣವೇನು?
ಪಾರ್ಮಿಕ್ ಆಮ್ಲ.

26) ಗೋಧಿಯಲ್ಲಿರುವ ಆಮ್ಲ ಯಾವುದು?
 ಗ್ಲುಮಟಿಕ್.

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು?
  ಪೋಲಿಕ್.

28) ಸಾರಜನಕ ಕಂಡು ಹಿಡಿದವರು ಯಾರು?
 ರುದರ್ ಪೊರ್ಡ್.

29) ಆಮ್ಲಜನಕ ಕಂಡು ಹಿಡಿದವರು ಯಾರು?
  ಪ್ರಿಸ್ಟೆ.

30) ಗಾಳಿಯ ಆರ್ದತೆ ಅಳೆಯಲು —-  ಬಳಸುತ್ತಾರೆ?
ಹೈಗ್ರೋಮೀಟರ್.

31) ಹೈಗ್ರೋಮೀಟರ್ ಅನ್ನು —– ಎಂದು  ಕರೆಯುತ್ತಾರೆ?
  ಸೈಕೋಮೀಟರ್.

32) ಯಾವುದರ ವಯಸ್ಸು ಪತ್ತೆಗೆ ಸಿ-14   ಪರೀಕ್ಷೆ ನಡೆಸುತ್ತಾರೆ?
  ಪಳೆಯುಳಿಕೆಗಳ.

33) ಕೋಬಾಲ್ಟ್ 60 ಯನ್ನು ಯಾವ  ಚಿಕಿತ್ಸೆಯಲ್ಲಿ ಬಳಸುತ್ತಾರೆ?
   ಕ್ಯಾನ್ಸರ್.

34) ಡುರಾಲು ಮಿನಿಯಂ ಲೋಹವನ್ನು  ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
 ವಿಮಾನ.

35) ನೀರಿನಲ್ಲಿ ಕರಗುವ ವಿಟಮಿನ್ ಗಳು  ಯಾವುವು?
   ಬಿ & ಸಿ.

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು  ಬರುವುದು?
  ಮಕ್ಕಳಲ್ಲಿ.

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು  ಬಾಗಿರುವ ಬಣ್ಣ ಯಾವುದು?
 ನೇರಳೆ.

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ  ಬಣ್ಣ ಯಾವುದು?
  ಕೆಂಪು.

39) ಆಲೂಗಡ್ಡೆ ಯಾವುದರ   ರೂಪಾಂತರವಾಗಿದೆ?
ಬೇರು.

4 0) ಮಾನವನ ದೇಹದ ಉದ್ದವಾದ ಮೂಳೆ  ಯಾವುದು?
ತೊಡೆಮೂಳೆ(ಫೀಮರ್).

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು   ಹುಟ್ಟುವ ಸ್ಥಳ ಯಾವುದು?
ಅಸ್ಥಿಮಜ್ಜೆ.

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ  ವಿಟಮಿನ್ ಯಾವು?
  ಎ & ಡಿ.

43) ರಿಕೆಟ್ಸ್ ರೋಗ ತಗುಲುವ ಅಂಗ   ಯಾವುದು?
 ಮೂಳೆ.

44) ವೈರಸ್ ಗಳು —– ಯಿಂದ   ರೂಪಗೊಂಡಿರುತ್ತವೆ?
  ಆರ್.ಎನ್.ಎ.

45) ತಾಮ್ರ & ತವರದ ಮಿಶ್ರಣ ಯಾವುದು?
  ಕಂಚು.

46) ತಾಮ್ರ & ಸತುಗಳ ಮಿಶ್ರಣ ಯಾವುದು?  
 ಹಿತ್ತಾಳೆ.

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
 ಬ್ಯೂಟೆನ್ & ಪ್ರೋಫೆನ್.

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
 ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ  ಬಳಸುವ ಅನಿಲ ಯಾವುದು?
 ಜಲಜನಕ.

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ   ರಾಸಾಯನಿಕ ಯಾವುದು?
ಎಥಲಿನ್.

51) ಆಳಸಾಗರದಲ್ಲಿ ಉಸಿರಾಟಕ್ಕೆ    ಆಮ್ಲಜನಕದೊಂದಿಗೆ ಬಳಸುವ ಅನಿಲ   ಯಾವುದು?
  ಸಾರಜನಕ.

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ  ಯಾವುದು?
 ಅಲ್ಯೂಮೀನಿಯಂ.

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ   ಯಾವುದು?
 ಹೀಲಿಯಂ.

54) ಪರಿಶುದ್ಧವಾದ ಕಬ್ಬಿಣ ಯಾವುದು?
ಮ್ಯಾಗ್ನಟೈಟ್.

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ  ಯಾವುದು?
  ಕಾರ್ಬನ್ ಡೈ ಆಕ್ಸೈಡ್.

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ   ಯಾವುದು?
  ಕಾರ್ಬೋನಿಕ್ ಆಮ್ಲ.

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ   ರಾಸಾಯನಿಕ ಯಾವುದು?
  ಸೋಡಿಯಂ ಬೆಂಜೋಯಿಟ್.

58) “ಆತ್ಮಹತ್ಯಾ ಚೀಲ”ಗಳೆಂದು ——  ಗಳನ್ನು ಕರೆಯುತ್ತಾರೆ?
  ಲೈಸೋಜೋಮ್

59) ವಿಟಮಿನ್ ಎ ಕೊರತೆಯಿಂದ —-  ಬರುತ್ತದೆ?
 ಇರುಳು ಕುರುಡುತನ

60) ಐಯೋಡಿನ್ ಕೊರತೆಯಿಂದ ಬರುವ ರೋಗ   ಯಾವುದು?
  ಗಳಗಂಡ (ಗಾಯಿಟರ್)

ರಸಾಯನ

🌀ರಸಾಯನ ಶಾಸ್ತ್ರ : ಹೈಡ್ರೋಕಾರ್ಬನ್‍ಗಳ ಕುರಿತ ಪ್ರಶ್ನೆಗಳು🌀
☘🌷☘🌷☘🌷☘🌷☘🌷☘

➤ ಇಂಗಾಲ ಮತ್ತು ಜಲಜನಕದ ಸಂಯುಕ್ತಗಳು-ಹೈಡ್ರೋಕಾರ್ಬನ್‍ಗಳು.

➤ ಇಂಗಾಲದ ಸಂಯುಕ್ತಗಳು – ಸಾವಯವ ಸಂಯುಕ್ತಗಳು

➤ ಆಹಾರ ವಸ್ತುಗಳೆಲ್ಲವೂ ಈ ವಿಧದ ಸಂಯುಕ್ತಗಳು-ಸಾವಯವ ಸಂಯುಕ್ತಗಳು

➤ ಇಂಗಾಲವಿಲ್ಲದ ಸಂಯುಕ್ತಗಳು-ನರವಯದ ಸಂಯುಕ್ತಗಳು

➤ ಸಸ್ಯ ಮತ್ತು ಪ್ರಾಣಿಗಳೆಲ್ಲವೂ ಈ ವಿಧದ ಸಂಯುಕ್ತಗಳಿಂದಾಗಿವೆ-ಸಾವಯವ ಸಂಯುಕ್ತಗಳು.

➤ ಕಾರ್ಬನ್ ಸಂಯುಕ್ತಗಳನ್ನು ಅಭ್ಯಾಸ ಮಾಡುವ ರಸಾಯನಶಾಸ್ತ್ರದ ಭಾಗ-ಸಾವಯವ ರಸಾಯನಶಾಸ್ತ್ರ

➤ ಕಾರ್ಬನ್‍ನ ವೇಲೆನ್ಸಿ-4 (ಟೆಟ್ರಾವೆಲೆನ್ಸಿ)

➤ ಸಾವಯವ ಸಂಯುಕ್ತಗಳಲ್ಲಿ ಉಂಟಾಗಿರುವ ಬಂಧಗಳು-ಕೊವಲೆಂಟ್ ಬಂಧಗಳು

➤ ಕಾರ್ಬನ್ ತನ್ನ ಪರಮಾಣುಗಳೊಂದಿಗೆ ಬಂದಗಳನ್ನೇರ್ಪಡಿಸಿಕೊಂಡು ಸರಪಣಿ ರಚಿಸಿಕೊಳ್ಳುವ ಸಂಗತಿ-ಕೆಟನೀಕರಣ

➤ ಕಾರ್ಬನ್‍ನ ವಿವಿಧ ಸರಪಳಿಗಳು : 1) ನೇರ ಸರಪಳಿ   2) ಕವಲು ಸರಪಣಿ  3) ಮುಚ್ಚಿದ ಸರಪಣಿ

➤ ಪ್ಲಾಸ್ಟಿಕ್‍ಗಳು, ಡಿಟರ್ಜಂಟ್‍ಗಳು, ಬಣ್ಣಗಳ ಉತ್ಪಾದನೆಯಲ್ಲಿ ಬಳಸುವ ಕಚ್ಚಾವಸ್ತುಗಳು- ಹೈಡ್ರೋಕಾರ್ಬನ್‍ಗಳು

➤ ಅತ್ಯಂತ ಸರಳ ಹೈಡ್ರೋಕಾರ್ಬನ್-ಮಿಥೇನ್ 

➤ ಎರಡು ಪರಮಾಣುಗಳ ನಡುವೆ ಹಂಚಿಕೆಯಾಗಿರುವ ಒಂದು ಜೊತೆ ಎಲೆಕ್ಟ್ರಾನ್‍ಗಳನ್ನು ಸೂಚಿಸುವುದು-ಬಂಧ (-)

➤ ಇಂಗಾಲ ಮತ್ತು ಜಲಜನಕದ ಪರಮಾಣುಗಳ ಜೊತೆ ಈ ರೀತಿಯ ಬಂಧ ಉಂಟಾಗುತ್ತದೆ- ಏಕಬಂಧ (-)

➤ ಎರಡು ಅನುಕ್ರಮ ಪರಮಾಣುಗಳ ನಡುವೆ, ಎರಡು ಜೊತೆ ಎಲೆಕ್ಟ್ರಾನ್‍ಗಳ ಹಂಚಿಕೆಯಿಂದ ಉಂಟಾದ ಬಂಧ-ದ್ವಿಬಂಧ. (=)

➤ ಎರಡು ಅನುಕ್ರಮ ಪರಮಾಣುಗಳ ನಡುವೆ, ಮೂರು ಜೊತೆ ಎಲೆಕ್ಟ್ರಾನ್‍ಗಳ ಹಂಚಿಕೆಯಿಂದ ಉಂಟಾದ ಬಂಧ-ತ್ರಿಬಂಧ (=)

➤ ಕೊಬ್ಬಿನಿಂದ ಪಡೆಯಬಹುದಾದ ಹೈಡ್ರೋಕಾರ್ಬನ್‍ಗಳು-ಆಲಿಫ್ಯಾಟಿಕ್.

➤ ಸುವಾಸನೆಯಿಂದ ಕೂಡಿರುವ ಹೈಡ್ರೋಕಾರ್ಬನ್‍ಗಳು-ಆರೋಮ್ಯಾಟಿಕ್ 

➤ ಅಸೈಕ್ಲಿಕ್ ಮತ್ತ ಸೈಕ್ಲಿಕ್ ಹೈಡ್ರೋಕಾರ್ಬನ್‍ಗಳು ಯಾವ ಹೈಡ್ರೋಕಾರ್ಬನ್‍ಗಳ 2 ವಿಧಗಳು- ಆಲಿಫ್ಯಾಟಿಕ್.

➤ ಸಾಮಾನ್ಯ ಸೂತ್ರಗಳು-
 ಅ) ಅಲ್ಕೇನ್ ––CnH2n+2 
ಆ) ಆಲ್ಕೀನ್-CnH2n
 ಇ) ಆಲ್ಕೈನ್- CnH2n-2 
ಈ) ಕಾಬೋಸೈಕ್ಲಿಕ್

➤ ಹೈಡ್ರೋಕಾರ್ಬನ್‍ಗಳು-CnH2n

➤ ಕಾರ್ಬನ್ ಪರಮಾಣುಗಳ ನಡುವೆ ಏಕ ಬಂಧಗಳನ್ನು ಹೊಂದಿರುವ ಸಂಯುಕ್ತಗಳು- ಅಲ್ಕೇನ್ 

➤ ಫ್ಯಾರಾಫಿನ್‍ಗಳೆಂದರೆ-ಆಲ್ಕೇನ್‍ಗಳು

➤ ಪರ್ಯಾಪ್ತ ಹೈಡ್ರೋಕಾರ್ಬನ್‍ಗಳೆಂದರೆ-ಅಲ್ಕೇನ್‍ಗಳು

➤ ಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ನಡುವೆ ದ್ವಿಬಂದ ಹೊಂದಿರುವ ಸಂಯುಕ್ತಗಳು- ಆಲ್ಕೀನ್‍ಗಳು.

➤ ಆಲ್ಕೈನ್‍ಗಳ ಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ನಡುವೆ ಈ ವಿಧದ ಬಂಧವಿದೆ- ತ್ರಿಬಂಧ.

➤ ಅಪರ್ಯಾಪ್ತ ರೈಡ್ರೋಕಾರ್ಬನಗಳೆಂದರೆ-ಅಲ್ಕೇನ್ ಮತ್ತು ಆಲ್ಕೈನ್‍ಗಳು 

➤ ಹೈಡ್ರೋಕಾರ್ಬನ್‍ಗಳ ಅತಿ ದೊಡ್ಡ ವರ್ಗ-ಅರೋಮ್ಯಾಟಿಕ್ ಹೈಡ್ರೋಕಾರ್ಬನ್‍ಗಳ ಮೊದಲ ಸದಸ್ಯ-ಬೆಂಜೀನ್

➤ ಬೆಂಜಿನ್‍ನಲ್ಲಿ ಕಾರ್ಬನ್ ಪರಮಾಣುಗಳ ನಡುವೆ ಅನುಕ್ರಮವಾಗಿ ಈ ರೀತಿಯ ಬಂಧಗಳಿವೆ- ಏಕಬಂಧ ಮತ್ತು ದ್ವಿಬಂಧ

➤ ಬೆಂಜೀನನ್ನು ಮೊಟ್ಟಮೊದಲ ಬಾರಿಗೆ ಯಾವುದರಿಂದ ಬೇರ್ಪಡಿಸಲಾಯಿತು-ತಿಮಿಂಗಲದ ಕೊಬ್ಬಿನ ಎಣ್ಣೆಯಿಂದ ದೊರೆತ ಅನಿಲದಿಂದ.

➤ ಬೆಂಜೀನ್ ಕಂಡು ಹಿಡಿದವರು-ಮೈಕೆಲ್ ಫ್ಯಾರಡೆ.

➤ ಬೆಂಜೀನ್‍ನ ರಚನೆಯನ್ನು ಸೂಚಿಸಿದವರು-ಕೆಕುಲೆ 1865 ರಲ್ಲಿ.

➤ ಬೆಂಜೀನ್ ಉಂಗುರಕ್ಕೆ ಒಂದು ಗುಂಪು ಸೇರಿಸಿದಾಗ ಉಂಟಾಗುವ ಸಂಯುಕ್ತ –ಟ್ಯಾಲೀನ್ 

➤ ಸಾವಯವ ದ್ರಾವಕಗಳಾಗಿ ಸಾಮಾನ್ಯವಾಗಿ ಇದನ್ನು ಬಳಸುತ್ತಾರೆ-ಬೆಂಜೀನ್ ಮತ್ತು ಟಾಲೀನ್

➤ ಟಿ.ಎನ್.ಟಿ.ಸ್ಫೋಟಕಗಳ ಉತ್ಪಾದನೆಯಲ್ಲಿ ಬಳಸಲಾಗುವ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ – ಟಾಲೀನ್

➤ ಸಂಯುಕ್ತದಲ್ಲಿನ ಅಣುಗಳ ಜೋಡಣೆಯನ್ನು ವಿವರಿಸುವುದು-ರಚನಾಶಕ

ಬುಧವಾರ, ಮೇ 05, 2021

ಬೌದ್ಧ ಧರ್ಮ

"ಬೌದ್ಧ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ"
🌸🔹🌸🔹🌸🔹🌸🔹🌸🔹🌸🔹

 🔸 ಸ್ಥಾಪಕ= ಗೌತಮ ಬುದ್ಧ

🔹 ಮೂಲ ಹೆಸರು= ಸಿದ್ದಾರ್ಥ

🔸 ಕಾಲ= ಕ್ರಿ.ಪೂ 583

🔹 ಜನನ= ನೇಪಾಳದ ಕಪಿಲವಸ್ತುವಿನ ಬಳಿ ಲುಂಬಿನಿ.

🔸 ಪಂಗಡ= ಶಾಕ್ಯ ಪಂಗಡ.

🔹 ತಂದೆ= ಶುದ್ಧೋದನ

🔸 ತಾಯಿ= ಮಾಯಾದೇವಿ

🔸 ಸಾಕುತಾಯಿ= ಪ್ರಜಾಪತಿ ಗೌತಮಿ( ಇವರಿಂದಲೇ ಬುದ್ಧನಿಗೆ ಗೌತಮ ಎಂಬ ಹೆಸರು ಬಂದಿದೆ).

🔹 ಹೆಂಡತಿ= ಯಶೋಧರಾ.

🔸 ಮಗ= ರಾಹುಲ.

🔹 ಬುದ್ಧನ ಬಿರುದುಗಳು
ಏಷ್ಯಾದ ಬೆಳಕು( ಕರೆದವರು= "ಎಡ್ವಿನ್ ಅರ್ನಾಲ್ಡ್").

 ★ಏಷ್ಯಾದ ಜ್ಞಾನ ಪ್ರದೀಪ( ಕರೆದವರು="ಡಾ//ಕನ್ನರಿ ಸೌಂಡರ್")

 ★ ಜಗತ್ತಿನ ಜ್ಞಾನ ಪ್ರದೀಪ ( ಕರೆದವರು= "ಶ್ರೀಮತಿ ಲಿಸ್ಡಿ ವಿಲ್ಸ್, ಇಂಗ್ಲೆಂಡಿನ ಸಾಹಿತಿ")

 🔸ಸೇವಕ= ಚನ್ನ.

🔹 ಗೌತಮ ಬುದ್ಧನ ಮರಣ=, ಉತ್ತರಪ್ರದೇಶದ ಗೋರಕಪುರ ಜಿಲ್ಲೆಯ ಕುಶಿನಗರ.

 🔹ಗೌತಮ ಬುದ್ಧನು ಕಂಡ 4 ದೃಶ್ಯಗಳು=1) ವೃದ್ಧ, 2) ರೋಗಿ 3) ಶವ, 4) ಸನ್ಯಾಸಿ

🔹 ಗೌತಮ ಬುದ್ಧನು 29 ನೇ ವಯಸ್ಸಿನಲ್ಲಿ ಸಂಸಾರಿಕ ಜೀವನ ತ್ಯಜಿಸಿದನು.

🔸 ಬಾಲ್ಯದಲ್ಲಿ ಗೌತಮ ಬುದ್ಧನ ಬಗ್ಗೆ ಭವಿಷ್ಯ ನುಡಿದ ಸನ್ಯಾಸಿ= ಅಶಿತ ಮುನಿ.

🔹 ಗೌತಮ ಬುದ್ಧನ ಗುರುಗಳು, 
1) ಅಪರಾ ಕಲಾಂ
2) ಮುದ್ರಕ ರಾಮಪುತ್ರ

🔸 ಬುದ್ಧನು ತಪಸ್ಸು ಮಾಡಿದ ಸ್ಥಳ/ ಜ್ಞಾನೋದಯವಾದ ಸ್ಥಳ,= 35ನೇ ವಯಸ್ಸಿನಲ್ಲಿ ಬಿಹಾರ ರಾಜ್ಯದ ಗಯಾ ಸಮೀಪ ನಿರಂಜನ ನದಿಯ ಪಕ್ಕದಲ್ಲಿರುವ ಅರಳಿಮರ ಕೆಳಗೆ.

🔹 ಬುದ್ಧನ ಪ್ರಥಮ ಪ್ರವಚನ ನೀಡಿದ್ದು= ಉತ್ತರಪ್ರದೇಶದ ಸಾರಾನಾಥದ ಜಿಂಕೆವನ ಸ್ಥಳದಲ್ಲಿ ಐದು ಜನ ಶಿಷ್ಯರಿಗೆ.

 🔸ಗೌತಮ್ ಬುದ್ಧನ ಪ್ರವಚನ ಕೇಳಿದ ಮೊದಲ ಐದು ಜನ ಶಿಷ್ಯರು= 
1) ಕೊಂಡನ 
2) ಯಪ್ಪು
3) ಅನ್ಸಜಿ
4) ಬಾವಾಜಿ, 
5) ಮಹಾನಾಮ

🔹 ಬುದ್ಧನ ಜನನ, ಬುದ್ಧನ ಜ್ಞಾನೋದಯವಾಗಿದ್ದು, ಮತ್ತು ಬುದ್ಧನ ಮರಣ ಹೊಂದಿದ್ದು, ಶುದ್ಧ ವೈಶಾಖ ಪೂರ್ಣಿಮಾ ದಿನ( ಮನೆ ತೊರೆದಿದ್ದು ಅಲ್ಲ).

🔹 ಬೌದ್ಧ ಧರ್ಮದ ಪಂಗಡಗಳು=
 ಹೀನಾಯನ( ಸಂಪೂರ್ಣ ಬುದ್ಧನ ಅನ್ವಯಗಳು, ಬುದ್ಧ ದೇವರಲ್ಲ ಒಬ್ಬ ಶ್ರೇಷ್ಠ ವ್ಯಕ್ತಿ ಮತ್ತು ಬುದ್ಧನ ಮೂರ್ತಿ ಪೂಜೆ ಬೇಡ ಎಂದು ಹೇಳಿದವರು.

🔺ಹೀನಾಯನರ ಭಾಷೆ= ಪಾಳಿ

 🔸ಹಿನಾಯಾನದ ಗ್ರಂಥ= ಮಹಾ ವಸ್ತು

2) ಮಹಾಯಾನ( ಇವರು ಬುದ್ಧನು ದೇವರು ಮೂರ್ತಿಪೂಜೆ ಬೇಕು ಎಂದು ಹೇಳಿದರು,)

★ ಮಹಾಯಾನರ ಭಾಷೆ= ಸಂಸ್ಕೃತ

🔸 ಮಹಾಯಾನದ ಗ್ರಂಥ= ಲಲಿತವಿಸ್ತರ

3) ವಜ್ರಯಾನಲ=( ಹೀನಾಯಾನ ಮತ್ತು ಮಹಾಯಾನ ದ ಎರಡು ತತ್ವಗಳನ್ನು ಅಳವಡಿಸಿಕೊಳ್ಳುವವರು)

 🔸ವಜ್ರಯಾನದ ಗ್ರಂಥ= ಮಂಜುಶ್ರೀ ಮಹಾಲಕಲ್ಪ.

 ♦️ ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಸಂಕೇತ.

1) ಜನನ= ಆನೆ ಅಥವಾ ಕಮಲ.

2) ಗೌತಮ ಬುದ್ಧ ಪ್ರಥಮ ಪ್ರವಚನ ನೀಡಿದ ಸಂಕೇತ= ಧರ್ಮಚಕ್ರ

3) ಗೌತಮ್ ಬುದ್ಧ ತಪಸ್ಸು ಆಚರಿಸಿದ್ದ ಸಂಕೇತ= ಅರಳಿಮರ

4) ಬುದ್ಧನ ಮರಣ ಹೊಂದಿದ ಸಂಕೇತ= ಸ್ತೂಪ

 🔸ಮಹಾಪರಿನಿರ್ವಾಣ= ಗೌತಮ ಬುದ್ಧ ಮರಣ ಹೊಂದಿದ್ದು

🔹 ಮಹಾಪರಿತ್ಯಾಗ ಎಂದರೆ= ಸಕಲ ಸುಖಭೋಗಗಳನ್ನು ತ್ಯೇಜಿಸುವದು.

🔸 ಗೌತಮ ಬುದ್ಧನು ಬೋಧಿಸಿದ ನಾಲ್ಕು ಆರ್ಯ ತತ್ವಗಳು👇

1) ಜಗತ್ತು ದುಃಖದಿಂದ ಕೂಡಿದೆ
2) ದುಃಖಕ್ಕೆ ಮೂಲ ಕಾರಣ ಆಸೆ
3) ಆಸೆಯನ್ನು ತೊರೆದಾಗ ಮೋಕ್ಷ ದೊರಕುತ್ತದೆ
4) ಅಷ್ಟಾಂಗ ಮಾರ್ಗ ಅನುಸರಿಸಬೇಕು

 🌀 ಬೌದ್ಧ ಧರ್ಮದ ಗ್ರಂಥಗಳು( ಪಾಳಿ ಭಾಷೆಯಲ್ಲಿವೆ)

1) ವಿನಯ ಪೀಠಿಕಾ= "ಬೌದ್ಧಧರ್ಮದ ನಿಯಮಗಳನ್ನು ಬೆಳೆಸುವುದು"

2) ಸುತ್ತ ಪೀಠಿಕಾ="ಬುದ್ದನ ಜೀವನ ಮತ್ತು ಬೋಧನೆ ತಿಳಿಸುವುದು"

3) ಅಭಿಧಮ್ಮಪಿಠಿಕಾ= ಬೌದ್ಧ ಸನ್ಯಾಸಿಗಳ ಸಾಮಾನ್ಯ ಮಂತ್ರ ಹೇಳುವುದು.

 🙏 ಬೌದ್ಧ ಸನ್ಯಾಸಿಗಳ ಮಂತ್ರ👇 

🔸 ಬುದ್ಧಂ ಶರಣಂ ಗಚ್ಛಾಮಿ,
🔹 ಧರ್ಮಂ ಶರಣಂ ಗಚ್ಛಾಮಿ 
🔸 ಸಂಗಮ್ ಶರಣಂ ಗಚ್ಛಾಮಿ.

 ✍️ಜಾತಕಗಳು ಎಂದರೆ= 
ಬುದ್ಧನ ಪೂರ್ವ ಜನ್ಮದ ಕಥೆ ( "ಮಹಾರಾಷ್ಟ್ರ ಅಜಂತಾ ಗುಹೆಗಳಲ್ಲಿ ಬುದ್ಧನ 526 ವರ್ಣ ಚಿತ್ರಕಲೆಗಳು ಕಂಡುಬಂದಿವೆ", 

 🏵️ ಬೌದ್ಧ ಧರ್ಮದ ಸಮ್ಮೇಳನಗಳು

1) 1ನೇ ಬೌದ್ಧ ಸಮ್ಮೇಳನ

 🔸ವರ್ಷ= ಕ್ರಿ.ಪೂ. 483
🔹 ಸ್ಥಳ= ರಾಜ ಗೃಹ
🔸 ಅಧ್ಯಕ್ಷರು= ಮಹಾಕಶ್ಯಪ್ಪ
🔹 ಅರಸ= ಅಜಾತಶತ್ರು

🔹 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ವಿನಯ ಪೀಠಿಕ ಸುತ್ತ ಪೀಠಿಕ ರಚನೆ.

2) 2ನೇ ಬೌದ್ಧ ಸಮ್ಮೇಳನ

 🔸ವರ್ಷ= ಕ್ರಿ. ಪೂ.383
🔹 ಸ್ಥಳ= *ವೈಶಾಲಿ*
🔸 ಅಧ್ಯಕ್ಷ= *ಸಭಾ ಕಾಮಿ*
🔹 ಅರಸು= *ಕಾಲಾಶೋಕ*
🔸 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ಹೀನಾಯಾನ ಮತ್ತು ಮಹಾಯಾನ ದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.

3) 3ನೇ ಬೌದ್ಧ ಸಮ್ಮೇಳನ

🔸 ವರ್ಷ= *ಕ್ರಿ.ಪೂ. 250
🔹 ಸ್ಥಳ= *ಪಾಟಲಿಪುತ್ರ*
🔸 ಅಧ್ಯಕ್ಷ= *ಮೊಗ್ಗಲಿ ಪುತ್ರ ತಿಸ್ತ*
🔹 ಅರಸ= *ಅಶೋಕ*
🔸 ಈ ಸಮ್ಮೇಳನದಲ್ಲಿ ನಿರ್ಣಯ= ಅಭಿಧಮ್ಮ ಪೀಠಿಕ ರಚನೆ.

4) 4ನೇ ಬೌದ್ಧ ಸಮ್ಮೇಳನ. 

🔹 ವರ್ಷ= *ಒಂದನೇ ಶತಮಾನ*. (100/102)
🔸 ಸ್ಥಳ= *ಕಾಶ್ಮೀರದ ಕುಂಡಲಿವನ*
🔹 ಅಧ್ಯಕ್ಷ= *ವಸುಮಿತ್ರ*
🔸 ಉಪಾಧ್ಯಕ್ಷ= *ಅಶ್ವಘೋಷ*
🔹 ಅರಸ= *ಕನಿಷ್ಕ*
🔸 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ಹೀನಾಯನ, ಮತ್ತು ಮಹಾಯಾನ ಎರಡು ಪಂಗಡಗಳಾಗಿ ಒಡೆದು ಹೋದವು.

 "ವಿಶೇಷ ಅಂಶಗಳು"

🔸 ಬುದ್ಧನ ಮೊದಲ ಶಿಷ್ಯ= ಆನಂದ.

🔹 ಬುದ್ಧನ ಕುದುರೆಯ ಹೆಸರು= ಕಂತಕ.

🔸 ಬುದ್ಧನಿಗೆ ಭಿಕ್ಷೆ ನೀಡಿದ ಮಹಿಳೆ= ಸುಜಾತ.

🔹 ಬುದ್ಧನಿಗೆ ಕೊನೆಯ ಕಾಲದಲ್ಲಿ ಚಿಕಿತ್ಸೆ ನೀಡಿದ ವೈದ್ಯ= ಜೀವಕ.

🔸 ಬುದ್ಧನ ಶ್ರೇಷ್ಠ ಶಿಷ್ಯ= ಅಂಗುಲಿಮಾಲ.

🔹 ಬುದ್ಧನಿಂದ ಪರಿವರ್ತನೆಯಾದ ವೇಶೆ= ಅಮ್ರಪಾಲಿಕೆ.

🔸 ಬೌದ್ಧ ಧರ್ಮದ ಚಿಹ್ನೆ= ಧರ್ಮಚಕ್ರ

🔸 ಬೌದ್ಧರ ಪೂಜಾಸ್ಥಳ= ಚೈತ್ಯಾಲಯ( ಭಾರತದ ಅತಿ ದೊಡ್ಡ ಚೈತ್ಯಾಲಯ "ಮಹಾರಾಷ್ಟ್ರದ ಕಾರ್ಲೆ ಚೈತ್ಯಾಲಯ").

🔹 ಬೌದ್ಧರ ಸಮಾಧಿ ಸ್ಥಳ= ಸ್ತೂಪ( ಭಾರತದ ದೊಡ್ಡ ಸ್ತೂಪ ಮಧ್ಯಪ್ರದೇಶ).

ಪ್ರಮುಖ ಕಾರ್ಯಾಚರಣೆಗಳು

🌹 *ಭಾರತ ಸೈನ್ಯ ಮತ್ತು ಇತರರು ಕೈಗೊಂಡ ಕಾರ್ಯಚರಣೆಗಳು*, 🌹

👉 *ಆಪರೇಷನ್ ಪೋಲೋ*(1948)

🌹 ಸರದಾರ್ ವಲ್ಲಬಾಯ್ ಪಟೇಲ್ ಅವರ ನೇತೃತ್ವದಲ್ಲಿ ಹೈದರಾಬಾದ್ ಸಂಸ್ಥಾನವು ಈ ಕಾರ್ಯಚರಣೆ ಮೂಲಕ ವಶಪಡಿಸಿಕೊಳ್ಳಲಾಯಿತು,

👉 *ಆಪರೇಷನ್ ವಿಜಯ್*(1961)

 🌹ಗೋವಾವನ್ನು ಪೋರ್ಚುಗೀಸರಿಂದ ವಶಪಡಿಸಿಕೊಳ್ಳಲು *ನೌಕಾಪಡೆ* ಕೈಗೊಂಡ ಕಾರ್ಯಾಚರಣೆ, 

👉 *ಆಪರೇಷನ್ ಬ್ಲೂ ಸ್ಟಾರ್*(1984)

 🌹ಅಮೃತಸರದ ಸ್ವರ್ಣ ಮಂದಿರದಲ್ಲಿ ಪ್ರತ್ಯೇಕ *ಖಲಿಸ್ತಾನ್* ರಾಜ್ಯಕ್ಕಾಗಿ ಹೋರಾಡುತ್ತಿದ್ದ *ಸಿಖ್ಖರನ್ನು* ದಮನ ಮಾಡಲು ಜನರಲ್ ಸಿಂಗ್ *ಬಿಂದ್ರನ್ ವಾಲ* ನೇತೃತ್ವದಲ್ಲಿ ಕೈಗೊಂಡ ಕಾರ್ಯಾಚರಣೆ, 

👉 *ಆಪರೇಷನ್ ವಿಜಯ್*(1999)

 🌹ಭಾರತ ಸೇನೆಯು ಕಾಶ್ಮೀರದ ಕಾರ್ಗಿಲ್ *ಪಾಕಿಸ್ತಾನ* ವಿರುದ್ಧ ಕೈಗೊಂಡ ಕಾರ್ಯಾಚರಣೆ. 

👉 *ಆಪರೇಶನ್ ಮದದ್*(2004)

🌹 ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ *ಸುನಾಮಿಯ ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ* ಸಂಬಂಧಿಸಿದ ಕಾರ್ಯಚರಣೆ, 

👉 *ಆಪರೇಷನ್ ಕಕೋನ್*(2006)

🌹 ಕಾಡುಗಳ್ಳ *ವೀರಪ್ಪನ್ ಹತ್ಯೆಗೈದ* ಕಾರ್ಯಚರಣೆ,  

👉 *ಆಪರೇಷನ್ ಬ್ಲಾಕ್ ಟಾರ್ನಾಡೊ*(2008)

🌹 *ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ದಾಳಿ* ನಡೆಸಿದಾಗ NSG ಕಮಾಂಡೋಗಳು ಕೈಗೊಂಡ ಕಾರ್ಯಾಚರಣೆ, 

👉 *ಆಪರೇಷನ್ ಎಕ್ಸ್*(2012)

🌹 *ಅಜ್ಮಲ್ ಕಸಬ್* ನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. 

👉 *ಆಪರೇಷನ್ ಕೋಬ್ರಾ ಪೋಸ್ಟ್*(2013)

 🌹 ಭಾರತದ *RBI* ತನ್ನ ಅಧೀನ ಬ್ಯಾಂಕುಗಳಲ್ಲಿರುವ *ಕಪ್ಪುಹಣವನ್ನು* ಹೊರ ತೆಗೆಯುವ ಕಾರ್ಯಾಚರಣೆ, 

👉 *ಆಪರೇಶನ್ ಗ್ರೀನ್ ಹುಂಟ್*(2010)

🌹 *ನಕ್ಸಲ್ ಪಡೆಯ ಪ್ರತಿ ದಾಳಿಯಾಗಿ ಭಾರತದ ನಕ್ಸಲ್ ಪಡೆ* ಕೈಗೊಂಡ ಕಾರ್ಯಾಚರಣೆ ಆಗಿದೆ, 

👉 *ಆಪರೇಷನ್ ರಾಹತ್*

 🌹 *ಉತ್ತರ ಖಂಡದಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು* ಕೈಗೊಂಡ ಕಾರ್ಯಾಚರಣೆ, 

👉 *ಆಪರೇಷನ್ ತ್ರಿ ಸ್ಟಾರ್*

🌹2001ರಲ್ಲಿ *ದೆಹಲಿ ಸಂಸತ್ ಭವನದ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವನ್ನು ಸೆರೆಹಿಡಿಯಲು ಕೈಗೊಂಡ ಕಾರ್ಯಾಚರಣ

ಪ್ರಮುಖ ದಿನಗಳು

🌹ಪ್ರಮುಖ ವೈಜ್ಞಾನಿಕ ದಿನಾಚರಣೆಗಳು.

🌹 ಜನವರಿ
# 10- ವಿಶ್ವ ನಗುವವರ ದಿನ. 
# 25 ಭಾರತ ಪ್ರವಾಸೋದ್ಯಮ ದಿನ 

🌹 ಫೆಬ್ರವರಿ
# 4-ವಿಶ್ವ ಕ್ಯಾನ್ಸರ್ ದಿನ 
# 21-ಅಂತಾರರಾಷ್ಟ್ರೀಯ ಮಾತೃಭಾಷಾ ದಿನ 
#28-ರಾಷ್ಟೀಯ ವಿಜ್ಞಾನ ದಿನ 

🌹ಮಾರ್ಚ್
#4-ರಾಷ್ಟ್ರೀಯ ಸುರಕ್ಷತಾ ದಿನ 
#15-ವಿಶ್ವ ಗ್ರಾಹಕರ ದಿನ 
#16-ವಿಶ್ವ ಅಂಗವಿಕಲರ ದಿನ 
#22-ವಿಶ್ವ ಜಲ ದಿನ 
#24- ವಿಶ್ವ ಕ್ಷಿಯರೋಗ ನಿವಾರಣಾ ದಿನ 

🌹ಏಪ್ರಿಲ್
#5-ವಿಶ್ವ ಸಾಗರಯಾನ ದಿನಾಚರಣೆ
#7-ವಿಶ್ವ ಅರೋಗ್ಯ ದಿನ 
#12-ವಿಶ್ವ ಬಾಹ್ಯಕಾಶ ದಿನಾಚರಣೆ 
#17-ವಿಶ್ವ ಹಿಮೋಪೋಲಿಯ ದಿನ 
#22-ವಿಶ್ವ ವೃದ್ಧಿ ದಿನ 

🌹ಮೇ
#1-ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ
#5-ವಿಶ್ವ ಓಟಗಾರರ ದಿನ 
#8-ವಿಶ್ವ ರೆಡ್ ಕ್ರಾಸ್ ದಿನ 
#11-ರಾಷ್ಟೀಯ ತಂತ್ರಜ್ಞಾನ ದಿನ 
#12-ವಿಶ್ವ ದಾದಿಯರ ದಿನ 
#15-ವಿಶ್ವ ಕುಟುಂಬ ದಿನ 
#17-ವಿಶ್ವ ದೂರ ಸಂಪರ್ಕ ದಿನ 
 
🌹ಜೂನ್
#5-ವಿಶ್ವ ಪರಿಸರ ದಿನ 
#17-ವಿಶ್ವ ಸಾಗರ ದಿನ 
#17-ವಿಶ್ವ ಬಂಜರು ಭೂಮಿ ಹಾಗೂ ಬರ ಹೋರಾಟ ದಿನ 
#21-ವಿಶ್ವ ಸಂಗೀತ ದಿನ 
#27-ವಿಶ್ವ ಮಧುಮೆಹ ದಿನ 
     
🌹ಜುಲೈ
#6-ವಾಯು ಪರೀಕ್ಷಾ ದಿನ 
#11-ವಿಶ್ವ ಜನಸಂಖ್ಯಾ ದಿನಾಚರಣೆ 

 🌹ಆಗಸ್ಟ್
#1-ವಿಶ್ವ ಸ್ತನ್ಯಪಾನ ದಿನಾಚರಣೆ
#3-ವಿಶ್ವ ಸ್ನೇಹ ದಿನ 
#6-ಹಿರೋಷಿಮಾ ದಿನಾಚರಣೆ
#29-ರಾಷ್ಟ್ರೀಯ ಕ್ರೀಡಾ ದಿನ 

🌹ಸೆಪ್ಟೆಂಬರ್
#8-ವಿಶ್ವ ಸಾಕ್ಷರತಾ ದಿನ 
#16-ವಿಶ್ವ ಓಜೋನ್ ದಿನ 
#18-ಅಂತಾರಾಷ್ಟ್ರೀಯ ಶಾಂತಿ ದಿನ 
#24-ಹೃದಯ ವಿಕಾರ ಜಾಗೃತಿ ದಿನ 
#27-ವಿಶ್ವ ಪ್ರವಾಸೋದ್ಯಮ ದಿನ 

🌹ಅಕ್ಟೋಬರ್
#1-ವಿಶ್ವ ಹಿರಿಯರ ದಿನ 
#2-ಪ್ರಾಣಿ ಕ್ಷೇಮಾಭೀವೃದ್ಧಿ ದಿನ 
#4- ವಿಶ್ವ ಪ್ರಾಣಿ ಸಂರಕ್ಷಣಾ ದಿನ 
#15-ವಿಶ್ವ ಕೈ ತೊಳೆಯುವ ದಿನ 
#16-ವಿಶ್ವ ಆಹಾರ ದಿನ 

 🌹ನವೆಂಬರ್
#14-ವಿಶ್ವ ಮಧುಮೆಹ ದಿನ 
#16-ವಿಶ್ವ ತಾಳ್ಮೆ ದಿನ 
#21-ವಿಶ್ವ ದೂರದರ್ಶನ ದಿನ 

🌹ಡಿಸೆಂಬರ್
 #1-ವಿಶ್ವ ಏಡ್ಸ್ ದಿನ 
#23-ರಾಷ್ಟೀಯ ಕೃಷಿಕ ದಿನ

ಕನ್ನಡ ಸಾಹಿತ್ಯ

🌍 ಕನ್ನಡ ಸಾಹಿತ್ಯ ಚರಿತ್ರೆ🌍

★ ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

★ ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ

★ ಛಂದೋನುಶಾಸನದ ಕರ್ತೃ -ಜಯಕಿರ್ತ

★ ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ

★ ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ

★ ಬೃಹತ್ಕಥೆಯ ಕರ್ತೃ -ಗುಣಾಢ್ಯ

★ ಬೃಹತ್ಕಥೆಯ ಭಾಷೆ -ಪೈಶಾಚಿ

★ ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ

★ ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ

★ ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ

★ನಜುಂಡಕವಿಯ ಕೃತಿ -ಕುಮಾರರಾಮನ ಕಥೆ

★ ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು

★ ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ

★ ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ

★ ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)

★ ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )

★ ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ

★ ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ

★ ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ

★ ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ

★ ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ

★ ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )

★ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ

★ ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ

★ ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ

★ ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ

★ ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )

★ ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ

★ ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ

★ ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ

★ ರನ್ನನ ಕೃತಿಗಳು
—-ರನ್ನಕಂದ (ನಿಘಂಟು)
— ಪರುಶುರಾಮಚರಿತ
ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )

★ ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು ಅರುಪಿದವನು -ರನ್ನ

★ ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ

★ ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ

★ ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)

★ ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ

★ ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ

★ ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ

★ ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ

★ ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )

★ ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ

★ ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ

★ ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ

★ ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ

★ ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ

★ ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ

★.ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ

★ ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)

 ★.ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ

★ ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ

★ ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ

★.ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ: -ಶಬ್ದಮಣಿದರ್ಪಣ (ಕೇಶಿರಾಜ).

ಭಾರತ ಸಂವಿಧಾನದಲ್ಲಿ ಅಳವಡಿಸಿದ 5 ರಿಟ್ ಅರ್ಜಿಗಳು

📚 ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು)
(Writs embodied in Constitution) :

🔸'ಸಂವಿಧಾನದ ಹೃದಯ' 
ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ.

🔹ರಿಟ್ (Writs): ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) .

 ಸಂವಿಧಾನದ ಅನುಚ್ಛೇದ 32 (2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ.

🔹ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು.

 🔹ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು.

ರಿಟ್ ಗಳು (ತಡೆಯಾಜ್ಞೆಗಳು)(Writs) :

📘 ಹೇಬಿಯಸ್ ಕಾರ್ಪಸ್
 (Habeas Corpus) :

"ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು."

- ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು;👇

1) "ಸ್ವತಃ ಬಾಧಿತ ವ್ಯಕ್ತಿ."
2) "ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ"

📘 ಮ್ಯಾಂಡಮಾಸ್ (ಆಜ್ಞೆ) (Mandamus) :

"ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ." ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ.

📘 ಪ್ರೊಹಿಬಿಷನ್ (Prohibition) :

"ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ." ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ.

📘 ಸರ್ಶಿಯೋರರಿ (Certiorari) :

"ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ."

📘 ಕೊ ವಾರಂಟೋ (Quowarranto) :

"ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ".

ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ.

ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ.

🌳 ಭಾರತೀಯ ಅರಣ್ಯದ ಬಗ್ಗೆ ಮಾಹಿತಿ 🌴

🌳 ಭಾರತೀಯ ಅರಣ್ಯದ ಬಗ್ಗೆ ಮಾಹಿತಿ 🌴

👇👇👇👇👇👇

🌳ಭಾರತೀಯ ಅರಣ್ಯ ಕಾಯ್ದೆ 1927

🌴ಅರಣ್ಯ ಕಾಯ್ದೆ 1952

🌳ವನ್ಯಜೀವಿ ಸಂರಕ್ಷಣಾ ಕಾಯ್ದೆ 1972

🌱ಅರಣ್ಯ ಸಂರಕ್ಷಣಾ ಕಾಯ್ದೆ 1980

🌳ಪರಿಸರ ಸಂರಕ್ಷಣಾ ಕಾಯ್ದೆ  1986,

🌴ರಾಷ್ಟ್ರೀಯ ಅರಣ್ಯ ನೀತಿ 1988


🌳ಅರಣ್ಯವು  " ಸಮವತಿ೯ ಪಟ್ಟಿಗೆ ಸೇರಿದೆ "   ಇದನ್ನು  "1976ರಲ್ಲಿ 42 ನೇ ತಿದ್ದು ಪಡಿ "  ಮೂಲಕ  ಸಮವತಿ೯ ಪಟ್ಟಿಗೆ ಸೇರಿಸಲಾಗಿದೆ..

🌳ಸಮುದಾಯ ಭಾಗಿತ್ವ ಅರಣ್ಯ ವನ್ನು  1976 ರಲ್ಲಿ  ಜಾರಿಗೆ ಕರಲಾಯಿತು.

🌳ಯಾವುದೇ ದೇಶದಲ್ಲಿ  ಅರಣ್ಯವು ಆದೇಶದ "ಭೂಭಾಗದ ಶೇ 33%  " ರಷ್ಟು ಇರವುದರಿಂದ ಸಮತೋಲನ ಕಾಯ್ದುಕೊಳ್ಳಬಹುದು.

🌴ಭಾರತದಲ್ಲಿ  ಶೇ 21.67%  (2019 ಅರಣ್ಯ ವರದಿ ಪ್ರಕಾರ)  ಅರಣ್ಯ ಪ್ರದೇಶವಿದೆ .

🌳ಕನಾ೯ಟಕದಲ್ಲಿ ಶೇ 20.11% (2019 ಅರಣ್ಯ ವರದಿ ಪ್ರಕಾರ )  ಅರಣ್ಯ ಪ್ರದೇಶವಿದೆ.


🌳2019 ರ ಅರಣ್ಯ ವರದಿ ಪ್ರಕಾರ " ಕನಾ೯ಟಕ , ಕೇರಳ  ಹಾಗೂ ಆಂಧ್ರಪ್ರದೇಶ" ರಾಜ್ಯಗಳಲ್ಲಿ  ಅರಣ್ಯ ಸ್ವಲ್ಪ ಹೆಚ್ಚಾಗಿದೆ

🌳ಭಾರತದಲ್ಲಿ  ಅತಿ ಹೆಚ್ಚು ಅರಣ್ಯ ಹೊಂದಿದ ರಾಜ್ಯ - ಮಧ್ಯಪ್ರದೇಶ

🌳ಕಡಿಮೆ ಅರಣ್ಯ ಹೊಂದಿದ ರಾಜ್ಯ - ಹರಿಯಾಣ 

🌳ಭೂ ಪ್ರದೇಶದಲ್ಲಿ ಗರೀಷ್ಟ ಅರಣ್ಯ ಹೊಂದಿದ ರಾಜ್ಯಗಳು -  ಮೀಜೋರಾಂ 

🌳ಅತಿ ಹೆಚ್ಚು  ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶ - "ಅಂಡಮಾನ್ ನಿಕೋಬಾರ್ "

🌳ಅತಿ  ಕಡಿಮೆ ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶಗಳು  - "  ದಿಯು ದಮನ್ ಮತ್ತು ದಾದ್ರನಗರಹವೇಲಿ " 

🌳ಕನಾ೯ಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ - ಉತ್ತರಕನ್ನಡ ' ಹಾಗೂ ಕಡಿಮೆ ಅರಣ್ಯ ಹೊಂದಿದ ಜಿಲ್ಲೆ - "ವಿಜಯಪೂರ "

ಆಧಾರಗಳು

📝 ಪ್ರಮುಖ ಸಾಹಿತಿಕ ಆಧಾರಗಳು

👇👇👇👇👇👇👇👇

1) ಅರ್ಥಶಾಸ್ತ್ರ= ಚಾಣಕ್ಯ
( ಮೌರ್ಯರ ಆಡಳಿತ, ಬಗ್ಗೆ ತಿಳಿಸುವ ಕೃತಿ. )

2) ಮುದ್ರಾರಾಕ್ಷಸ= ವಿಶಾಖದತ್ತ ( ಚಂದ್ರಗುಪ್ತ ಮೌರ್ಯನ ಬಗ್ಗೆ ವಿವರ. )

3) ಹರ್ಷಚರಿತೆ= ಬಾಣಭಟ್ಟ ( ಹರ್ಷವರ್ಧನನ ಜೀವನ ಸಾಧನೆಗಳು)

4) ರಾಮಚರಿತ= ಸಂಧ್ಯಾ ಕರನಂದಿ ( ಬಂಗಾಳದ ಅರಸ ರಾಮಪಾಲನ ಆಳ್ವಿಕೆ ಬಗ್ಗೆ,)

5) ರಾಜತರಂಗಿಣಿ= ಕಲ್ಹಣ ( ಕಾಶ್ಮೀರದ ಇತಿಹಾಸದ ಬಗ್ಗೆ)

6) ಕವಿರಾಜಮಾರ್ಗ= ಶ್ರೀವಿಜಯ ( ರಾಷ್ಟ್ರಕೂಟರ ಬಗ್ಗೆ)

7) ಚಾವುಂಡರಾಯ ಪುರಾಣ= ಚಾವುಂಡರಾಯ ( ಗಂಗರ ಆಳ್ವಿಕೆ ಬಗ್ಗೆ.)

8) ಆದಿಪುರಾಣ= ಪಂಪ ( ಅರಿಕೇಸರಿ ಮತ್ತು ಅವನ ಉತ್ತರಾಧಿಕಾರಿಗಳ ಆಳ್ವಿಕೆ ಬಗ್ಗೆ,)

9) ಅಜಿತನಾಥ ಪುರಾಣ= ರನ್ನ ( ಎರಡನೇ ತೈಲಪನ ಬಗ್ಗೆ.)

10) ಗದಾಯುದ್ಧ= ರನ್ನ ( ಇರುವ ಬೆಡಂಗ ಸತ್ಯಾಶ್ರಯನನ್ನು ಭೀಮನಿಗೆ ಹೋಲಿಕೆ.)

11) ವಿಕ್ರಮಂಕದೇವಚರಿತ= ಬಿಲ್ಹಣ ( 6ನೇ ವಿಕ್ರಮಾದಿತ್ಯನ ಆಳ್ವಿಕೆ ಬಗ್ಗೆ.)

13) ಕುಮಾರರಾಮನ ಸಾಂಗತ್ಯ= ನಂಜುಂಡ ಕವಿ ( ಕುಮಾರರಾಮನ ಬಗ್ಗೆ.)

14) ಪೃಥ್ವಿರಾಜ ರಾಸೋ= ಚಾಂದ್ ಬರ್ದಾಯ್ ( ಪೃಥ್ವಿರಾಜನ ಸಂಯುಕ್ತೇ ವಿವಾಹ ಬಗ್ಗೆ.)

15) ಮಧುರಾವಿಜಯಂ= ಗಂಗಾದೇವಿ ( ಕಂಪನ ಸಾಧನೆ, ಮಧುರೆಯ ದಿಗ್ವಿಜಯ ಬಗ್ಗೆ,)

16) ಪಾರಿಜಾತಾಪಹರಮ್= ನಂದಿ ತಿಮ್ಮಣ್ಣ ( ಕೃಷ್ಣದೇವರಾಯ ಮತ್ತು ಪ್ರತಾಪ ರುದ್ರನ ಯುದ್ಧದ ವಿವರ,)

17) ಅಮುಕ್ತಮೌಲ್ಯ= ಕೃಷ್ಣದೇವರಾಯ ( ಆಡಳಿತಾತ್ಮಕ ವಿವರಗಳ ಮಾರ್ಗದರ್ಶಿ,)

18) ತಾಜಿಕ-ರಾತ್- ಮುಲ್ಕಿ= ಸಿರಾಜಿ ( ಬಹುಮನಿ ಗಳ ಬಗ್ಗೆ,)

19) ತಾಜ್-ಉಲ್-ಮಾಸಿತ್= ನಿಜಾಮೀ ( ದೆಹಲಿ ಸುಲ್ತಾನರ ಬಗ್ಗೆ)

20) ತಾರೀಕ್-ಇ-ಯಾಮಿನಿ= ಉತ್ಬ್ ( ಸಬಕ್ತಗಿನ್, ಮತ್ತು ಗೋರಿಯ ಮಹಮ್ಮದನ ಬಗ್ಗೆ,)

21) ಜೈನ್-ಉಲ್- -ಅಕ್ಬರ್= ಅಬುಸೈದ್ ( ಗಜನಿ ಮೊಹಮ್ಮದ್ ಬಗ್ಗೆ ವಿವರ,)

ಎತ್ತಿತೋರಿಸಲಾದ ಪೋಸ್ಟ್

Horticulture Bidar