somaling m uppar kawalga

somaling m uppar kawalga
Somaling Sulubai uppar

ಭಾನುವಾರ, ಮೇ 16, 2021

ಮಂಗಳ ಗ್ರಹ

🌎ಮಂಗಳ ಗ್ರಹದ ಕುರಿತು ಇಲ್ಲಿದೆ ವಿಶೇಷ ಮಾಹಿತಿ🌎

🌺 ಮಂಗಳ ಗ್ರಹವನ್ನು ಅಂಗಾರಕ, ಕುಜ, ಕೆಂಪು ಗ್ರಹ, ಕಿತ್ತಳೆ ಗ್ರಹ ಎಂದು ಕರೆಯುತ್ತಾರೆ.

🌺ಮಂಗಳ ಗ್ರಹವು ತನ್ನ ಮೇಲ್ಮೈನಲ್ಲಿ ಕಬ್ಬಿಣದ ಆಕ್ಸೈಡ್‍ನ್ನು ಹೊಂದಿರುವುದರಿಂದ ‘ ಕೆಂಪು / ಕಿತ್ತಳೆ ಬಣ್ಣವಾಗಿ ಈ ಗ್ರಹ ಗೋಚರಿಸುತ್ತದೆ.

🌺 ಮಂಗಳ ಗ್ರಹದಲ್ಲಿ ಎರಡು ಉಪಗ್ರಹಗಳಿವೆ. 1. ಪೋಬೊಸ್  2. ಡಿಮೋಸ್

🌺ಮಂಗಳ ಗ್ರಹವು ಸೌರವ್ಯೂಹದ 4 ನೇ ಗ್ರಹವಾಗಿದೆ.

🌺ಸೌರಮಂಡಲದ ಎರಡನೇಯ ಅತಿ ಚಿಕ್ಕ ಗ್ರಹವಾಗಿದೆ.

🌺ಸೌರಮಂಡಲದಲ್ಲಿ ಭೂಮಿಯ ನಂತರದ ಗ್ರಹವಾಗಿದೆ.

🌺 ಮಂಗಳ ಗ್ರಹಕ್ಕೆ ‘ ಮಾರ್ರ್ಸ್’ ಎಂಬ ಹೆಸರನ್ನು ನೀಡಲಾಗಿದ್ದು, ಈ ಹೆಸರು ರೋಮನ್ ಉಪದೇವತೆಯ ಹೆಸರಾಗಿದೆ.

🌺 ಮಂಗಳ ಮತ್ತು ಗುರು ಗ್ರಹಗಳ ನಡುವೆ ಕ್ಷುದ್ರಗ್ರಹಗಳಿವೆ.

🌺ಮಂಗಳನ ಅಕ್ಷಭ್ರಮಣ ಅವಧಿಯು 24 ಗಂಟೆ 6 ನಿಮಿಷಗಳು.

🌺 ಮಂಗಳನ ಪರಿಭ್ರಮಣ ಅವಧಿಯು 687 ದಿನಗಳು.

🌺ಈ ಗ್ರಹದ ಗರ್ಭದಲ್ಲಿ ಘನ ಸ್ಥಿತಿ ಇದ್ದು, ಪ್ರಧಾನವಾಗಿ ಕಬ್ಬಿಣ, ನಿಕಲ್ ಮತ್ತು ಗಂಧಕಗಳಿವೆ.

🌺ಅತಿ ಶೈತ್ಯ ಮತ್ತು ತುಂಬಾ ತೆಳುವಾದ ಸಾಂದ್ರತೆ ಕಡಿಮೆ ಇರುವ ವಾಯುಮಂಡಲ, ಪರಿಣಾಮವಾಗಿ ದ್ರವನೀರು ಅಲಭ್ಯ.

🌺 ಕಾಲುವೆಗಳು, ಕಣಿವೆಗಳು, ಕೊರಕಲುಗಳು, ಕಮರಿಗಳು ಹಿಂದೆ ಸಮೃದ್ಧವಾಗಿ ನೀರು ಹರಿದಿರಬೇಕೆಂಬ ಊಹೆಗೆ ಇಂಬು ನೀಡಿದೆ.

🌺 ಮಂಗಳ ಗ್ರಹವನ್ನು ಅಧಯಯನ ಮಾಡಲು ಮೊಟ್ಟ ಮೊದಲ ಭಾರಿಗೆ 1965 ರಲ್ಲಿ ಮರಿನರ್ – 4 ಎಂಬ ಉಡಾಯನವನ್ನು ಉಡಾವಣೆ ಮಾಡಿ ಮಂಗಲನಲ್ಲಿ ಹಸಿರಿಲ್ಲವೆಂದು ಪತ್ತೆ ಹಚ್ಚಲಾಯಿತು.

🌺 1997 ರ ‘ ಸೋರ್ಜನರ್’ ನೌಕೆ ಮಂಗಳನ ಅಂಗಳದಲ್ಲಿ ಸುತ್ತಾಡಿ ಸಾಕಷ್ಟು ಮಾಹಿತಿ ರವಾನಿಸಿತು.

🌺ಅಮೇರಿಕಾದ ನಾಸಾವು ನವೆಂಬರ್ 26, 2011 ರಂದು ‘ ಕ್ಯೂರಾಸಿಟಿ ರೋವರ್” ಎಂಬ ರೋಬೋಟ್ ನ್ನು ಮಂಗಳ ಗ್ರಹದ “ ಗೇಲ್‍ಕ್ರೆಟರ್’ ಎಂಬ ಸ್ಥಳಕ್ಕೆ ಕಳುಹಿಸಿ, ಆಗಸ್ಟ್ 6, 2012 ರಂದು ಯಶಸ್ವಿಯಾಗಿ ತಲುಪಿತು. ಕ್ಯೂರಾಸಿಟಿ ರೋವರ್ ಮಂಗಳ ಗ್ರಹದ ವೈಜ್ಞಾನಿಕ ಪ್ರಯೋಗಾಲಯವಾಗಿದ್ದು, ಮಂಗಳನ ವಾಯುಗುಣ, ಭೂಗರ್ಭದಲ್ಲಿರುವ ಅಂಶಗಳು, ಭೂತಕಾಲದಲ್ಲಿ ಜೀವಿಗಳು ಅಸ್ಥಿತ್ವದಲ್ಲಿದ್ದವು, ಭವಿಷ್ಯದಲ್ಲಿ ಜೀವಿಗಳು ಬದುಕಲು ಅವಶ್ಯಕವಾದ ವಾತಾವರಣದ ಕುರಿತು ಸಂಶೋಧಿಸುವ ಉದ್ದೇಶ ಹೊಂದಿತ್ತು.

🌺 ಭಾರತದ ಮಂಗಳಯಾನ : ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು ಮಂಗಳಗ್ರಹದ ಅನ್ವೇಷಣೆಗೆ ಕಳುಹಿಸಿರುವ ಉಪಗ್ರಹವಾಗಿದೆ. ಇದನ್ನು ನವೆಂಬರ್ 5 , 2013 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ( ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು. ಇಸ್ರೋ ಪ್ರಥಮ ಪ್ರಯತ್ನದಲ್ಲಿ ಉಪಗ್ರಹವನ್ನು ಸೆಪ್ಟೆಂಬರ್ 24- 9- 2014 ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸಿದೆ.

🌺ಭಾರತದ ಪ್ರಥಮ ಪ್ರಯತ್ನದಲ್ಲಿ ಮಂಗಳಯಾನ ಯಶಸ್ವಿಯಾಯಿತು. ಅಲ್ಲದೆ ಮಂಗಳಗ್ರಹಕ್ಕೆ ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿದ ಅಮೇರಿಕ, ರಷ್ಯಾ, ಐರೋಪ್ಯ ಒಕ್ಕೂಟದ ಸಾಲಿಗೆ ಸೇರ್ಪೆಡೆಯಾಯಿತು. ಮಂಗಳಯಾನಕ್ಕೆ ಭಾರತದ ಉಡ್ಡಯನ ವೆಚ್ಚ ಸುಮಾರು 450 ಕೋಟಿ.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar