🏅 ನೊಬೆಲ್ ಪ್ರಶಸ್ತಿ
ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ಡೈನಮೈಟ್ ಸಂಶೋಧಕ ‘ಸ್ವೀಡನ್’ ವಿಜ್ಞಾನಿ ‘ಆಲ್ಫ್ರೇಡ್ ನೊಬೆಲ್’ ಹೆಸರಿನಲ್ಲಿ ನೀಡಲಾಗುತ್ತದೆ.ಈ ಪ್ರಶಸ್ತಿಗಳನ್ನು ಪ್ರತಿವರ್ಷ ಔಷಧ, ವಿಶ್ವ ಶಾಂತಿ,ಭೌತಶಾಸ್ತ್ರ, ರಸಾಯನಶಾಸ್ತ್ರ, ಸಹಿತ್ಯ, ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ವ್ಯಕ್ಕಿಗಳಿಗೆ ನೀಡಲಾಗುತ್ತದೆ.
🏅 ಮ್ಯಾನ್ ಬುಕರ್ ಪ್ರಶಸ್ತಿ
ಈ ಪ್ರಶಸ್ತಿಯನ್ನು 1968 ರಲ್ಲಿ ಬುಕರ್ ಕಂಪನಿ ಮತ್ತು ಬ್ರಿಟಿಷ್ ಪ್ರಕಾಶಕರ ಸಂಘದಿಂದ ಜಂಟಿಯಾಗಿ ಸ್ಥಾಪಿಸಲಾಯಿತು. ಇದೊಂದು ಪ್ರತಿಷ್ಠಿತ ಸಾಹಿತಿಕ ಪ್ರಶಸ್ತಿಯಾಗಿದೆ.
🏅 ಕಳಿಂಗ ಪ್ರಶಸ್ತಿ
ಈ ಪ್ರಶಸ್ತಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿದೆ.ಈ ಪ್ರಶಸ್ತಿಯನ್ನು ವಿಜ್ಞಾನದ ಬರಹಗಾರರಿಗೆ ಅಥವಾ ಸಂಪಾದಕರಾಗಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ.
🏅ಆಸ್ಕರ್ ಪ್ರಶಸ್ತಿ
ಈ ಪ್ರಶಸ್ತಿಗಳನ್ನು ಸಿನಿಮಾ ಕ್ಷೇತ್ರದ ಮಹತ್ತರ ಸಾಧನೆಗಾಗಿ ಪ್ರತಿ ವರ್ಷವೂ ನೀಡಲಾಗುತ್ತದೆ.ಇದು ಸಿನಿಮಾ ಕ್ಷೇತ್ರದ ಅತ್ಯಂತ ಶ್ರೇಷ್ಠ ಮಟ್ಟದ ಪ್ರಶಸ್ತಿಯಾಗಿದೆ.
🏅ರೈಟ್ ಲೈವ್ಲಿ ಹುಡ್ ಪ್ರಶಸ್ತಿ
ಈ ಪ್ರಶಸ್ತಿಯು 1980 ರಲ್ಲಿ ಸ್ವೀಡಿಸ್ – ಜರ್ಮನ್ ಬರಹಗಾರ ಜಾಕಬ್ ವೋನ್ ವೆಸ್ಕಲ್‍ರಿಂದ ಸ್ಥಾಪಿಸಲ್ಪಟ್ಟಿತು. ಇದು ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಖ್ಯಾತವಾಗಿದ್ದು, ಇದನ್ನು ಇಂದಿನ ನೈಜ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಯೋಗಿಕವಾಗಿ ಮತ್ತು ನೇರವಾಗಿ ದುಡಿದು ಮಹತ್ತರ ಸಾಧನೆಗೈದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
🏅ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ
ಈ ಪ್ರಶಸ್ತಿಯನ್ನು ಫಿಲಿಫೈನ್ಸ್ ಸರ್ಕಾರವು 1958 ರಲ್ಲಿ ಆ ದೇಶದ ದಿವಂಗತ ಅಧ್ಯಕ್ಷ ರೇಮನ್ ಮ್ಯಾಗ್ಸೆಸ್ಸೆಯವರ ಗೌರವಾರ್ಥ ಸ್ಥಾಪಿಸಿತು. ಈ ಪ್ರಶಸ್ತಿಯನ್ನು ಸಾರ್ವಜನಿಕ ಸೇವೆ, ಸಮುದಾಯ ನಾಯಕತ್ವ, ಪತ್ರಿಕೋದ್ಯಮ, ಸರ್ಕಾರಿಸೇವೆ, ಸಾಹಿತ್ಯ, ರಚನಾತ್ಮಕ ಕಲೆ, ಮತ್ತು ಅಂತರಾಷ್ಟ್ರೀಯ ಅರಿವು ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿರುವ ಏಷ್ಯಾ ಖಂಡದ ದೇಶದ ವ್ಯಕ್ಕಿಗಳಿಗೆ ಅಥವಾ ಸಂಸ್ಥೆಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ.
🏅ಸೈಮನ್ ಬೋಲಿವರ್ ಪ್ರಶಸ್ತಿ
ಈ ಪ್ರಶಸ್ತಿಯನ್ನು ವಿಶ್ವ ಸಂಸ್ಥೆಯ ಯುನೆಸ್ಕೋ ಸ್ಥಾಪಿಸಿದ್ದು, ಇದನ್ನು ಎರಡು ವರ್ಷಕ್ಕೋಮ್ಮೆ ಸ್ವಾತಂತ್ರ್ಯ, ಪ್ರಜೆಗಳ ಘನತೆ ಮತ್ತು ಹೊಸ ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತ ನೆಮ್ಮದಿಯನ್ನು ಬಲಗೊಳಿಸುವ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
🏅 ಟೆಂಪ್ಲಟನ್ ಫೌಂಡೇಷನ್ ಪ್ರಶಸ್ತಿ
ಈ ಪ್ರಶಸ್ತಿಯನ್ನು 1972 ರಲ್ಲಿ ಟೆಂಪ್ಲಟನ್ ಫೌಂಡೇಷನ್ ಸ್ಥಾಪಿಸಿದ್ದು, ಇದನ್ನು ಧಾರ್ಮಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದವರಿಗೆ ನೀಡಲಾಗುತ್ತದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ