somaling m uppar kawalga

somaling m uppar kawalga
Somaling Sulubai uppar

ಶನಿವಾರ, ಜನವರಿ 08, 2022

ಡಿಸೆಂಬರ್ 4 ಭಾರತೀಯ "ನೌಕಾ ಪಡೆ" ದಿನ ( INDIAN NAVY DAY

 ಇಂದು ಡಿಸೆಂಬರ್ 4 ಭಾರತೀಯ "ನೌಕಾ ಪಡೆ" ದಿನ ( INDIAN NAVY DAY)
  
🛥 1971 ರಲ್ಲಿ ಭಾರತ ಮತ್ತು ಪಾಕ್ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ಡಿಸೆಂಬರ್ 4 ರಂದು "ಆಪರೇಷನ್ ಟ್ರೈಡೆಂಟ್" ಎಂಬ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಸೇನೆಯನ್ನು ಸೋಲಿಸಿ ದಾಖಲೆಯನ್ನು ಬರೆಯಿತು , ಆ ದಿನದ ಸ್ಮರಣಾರ್ಥವಾಗಿ ಪ್ರತಿವರ್ಷ ಡಿಸೆಂಬರ್ 4 ನ್ನು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತದೆ .

 ✍️ ನೌಕಾಪಡೆಯ ಮುಖ್ಯಸ್ಥರನ್ನು ಅಡ್ಮಿರಲ್ ಎಂದು ಕರೆಯುತ್ತಾರೆ .

🔹ನೌಕಾಪಡೆಯ ಪ್ರಥಮ ಅಡ್ಮಿರಲ್ : ವಿಲಿಯಂ ಎಡ್ವರ್ಡ್ ಪ್ಯಾರ್

✍️ನೌಕಾಪಡೆಯ ಪ್ರಸ್ತುತ ಅಡ್ಮಿರಲ್ : R. ಹರಿಕುಮಾರ್ ,

🔹ಭಾರತೀಯ ನೌಕಾಪಡೆಯ
 ಪ್ರಮುಖ ಕಾರ್ಯಾಚರಣೆಗಳು :
01. ಆಪರೇಷನ್ ಪೈಥಾನ್ : 1971 ( ಭಾರತ- ಪಾಕ್ ಯುದ್ಧ )

 02 ಆಪರೇಷನ್ ಟ್ರೈಡೆಂಟ್ :
1971 ( ಭಾರತ- ಪಾಕ್ ಯುದ್ಧ )

 03. ಆಪರೇಷನ್ ಕಾಕ್ಟಸ್ :
 1988 ( ಮಾನ್ಸ್ ದಂಗೆ ದಮನ )

 04 ಆಪರೇಷನ್ ಪರಾಕ್ರಮ್ :
 2001 ( ಪಾಕ್ ಉಗ್ರರ ದಾಳಿ ವಿರುದ್ಧ )

 05. ಆಪರೇಶನ್ ಮದದ್ :
2018 ( ಕೇರಳ ಪ್ರವಾಹ ಸಂಧರ್ಭ )

 06. ಆಪರೇಷನ್ ನಿಸ್ತಾರ್ :
2018 ( ಯೆಮನ್ ನಿಂದ ಭಾರತೀಯರ ರಕ್ಷಣೆ .

✍️ ಭಾರತದ ನೌಕಾ ಪಡೆಯ ಪಿತಾಮಹ : ಛತ್ರಪತಿ ಶಿವಾಜಿ .
🛳🛳🛳🛳🛥🛥🛳🛥🛳🛥

ಪರಮುಖ ಸಾಹಿತಿಗಳ ನಾಟಕಗಳು

 ಪರಮುಖ ಸಾಹಿತಿಗಳ ನಾಟಕಗಳು
📖📖📖📖📖📖📖📖📖

1) "ಕುವೆಂಪು"
🔸 *ಬೊಮ್ಮನಹಳ್ಳಿ ಕಿಂದರಿಜೋಗಿ,*
🔹 *ರಕ್ತಾಕ್ಷಿ*
🔸 *ಬೆರಳ್ ಗೆ ಕೊರಳ್*
🔹 *ಜಲಗಾರ*
🔸 *ಯಮನ ಸೋಲು*

2) "ಶಿವರಾಮ್  ಕಾರಂತ್"
🔸 *ಗರ್ಭದ ಗುಡಿ,*
🔹 *ಮುಕ್ತದ್ವಾರ*
🔸 *ಗೆದ್ದವರ ಸತ್ಯ*

3) "ಮಾಸ್ತಿ ವೆಂಕಟೇಶ ಅಯ್ಯಂಗಾರ್"
🔹 *ಶಾಂತ*
🔸 *ಸಾವಿತ್ರಿ*
🔹 *ತಾಳಿಕೋಟೆ*
🔸 *ಶಿವ ಛತ್ರಪತಿ*
🔹 *ಕಾಕನಕೋಟೆ*

4) "ವಿಕೃ ಗೋಕಾಕ್"
🔹 *ಜನನಾಯಕ*
🔸 *ಯುಗಾಂತರ*
🔹 *ವಿಮರ್ಶಕ*

5) "ಗಿರೀಶ್ ಕಾರ್ನಾಡ್"
🔸 *ಯಯಾತಿ*
🔹 *ತುಘಲಕ್*
🔸 *ಹಯವದನ*
🔹 *ತಲೆದಂಡ*(KSRP-2020)
🔸 *ಅಗ್ನಿ ಮತ್ತು ಮಳೆ*
🔹 *ನಾಗಮಂಡಲ*
🔸 *ಟಿಪ್ಪುವಿನ ಕನಸುಗಳು*

6) "ದ.ರಾ ಬೇಂದ್ರೆ"
🔹 *ನಗೆ ಹೋಗೆ*
🔸 *ಸಾಯೋ ಆಟ*
🔹 *ತಿರುಕನ ಪಿಡುಗು*

7) "ಚಂದ್ರಶೇಖರ ಕಂಬಾರ"
🔸 *ಬೆಂಬತ್ತಿದ ಕಣ್ಣು*
🔹 *ಹುಲಿಯ ನೆರಳು*
🔸 *ಸಿರಿಸಂಪಿಗೆ*
🔹 *ಜೋಕುಮಾರಸ್ವಾಮಿ*
🔸 *ಕಾಡು ಕುದುರೆ*

8) "ಟಿ ಪಿ ಕೈಲಾಸಂ"
🔸 *ಅಮ್ಮಾವ್ರ ಗಂಡ*
🔹 *ಬಹಿಷ್ಕಾರ*
🔸 *ಸತ್ತವನ ಸಂತಾಪ*
🔹 *ಸೂಳೇ ತಾವರೆಕೆರೆ*

9) "ಪಿ ಲಂಕೇಶ್"
🔹 *ಸಂಕ್ರಾಂತಿ*
🔸 *ಗುಣಮುಖ*
🔹 *ಗಿಳಿಯ ಪಂಜರದೋಲಿಲ್ಲ*

10) "ಸಿದ್ದಲಿಂಗಯ್ಯ"
🔸 *ಏಕಲವ್ಯ*
🔹 *ಪಂಚಮ ಮತ್ತು ನೆಲಸಮ*

11) "ಚಂದ್ರಶೇಖರ ಪಾಟೀಲ್"
🔹 *ಜಗದಾಂಬೆ*
🔸 *ಕೊಡೆಗಳು*
🔹 *ಅಪ್ಪ*
🔸 *ಟಿಂಗರಬುಡ್ಡಣ್ಣ*

ಪಂಚಾಯತ್ ಗೆ ಸಂಬಂಧಿಸಿದ ಪ್ರಮುಖ ದಿನಗಳು

🏡🏠🏡ಪಂಚಾಯತ್ ಗೆ ಸಂಬಂಧಿಸಿದ ಪ್ರಮುಖ ದಿನಗಳು 🏠🏡
=========================
ಜನವರಿ ತಿಂಗಳು
👇👇👇👇👇
Jan:-2️⃣4️⃣=ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
Jan:-2️⃣4️⃣=ಅಂತಾರಾಷ್ಟ್ರೀಯ ಶಿಕ್ಷಣ ದಿನ
Jan:-2️⃣5️⃣=ರಾಷ್ಟ್ರೀಯ ಮತದಾನ ದಿನ
Jan:-2️⃣5️⃣=ರಾಷ್ಟ್ರೀಯ ಪ್ರವಾಸೋದ್ಯಮ ದಿನ
Jan:-3️⃣0️⃣=ರಾಷ್ಟ್ರೀಯ ಸ್ವಚ್ಛತಾ ದಿನ
=========================
ಫೆಬ್ರವರಿ ತಿಂಗಳು
👇👇👇👇👇👇
Feb:-1️⃣0️⃣=ವಿಶ್ವ ದ್ವಿದಳ ಧಾನ್ಯ ದಿನ
Feb:-2️⃣0️⃣=ವಿಶ್ವ ಸಾಮಾಜಿಕ ನ್ಯಾಯ ದಿನ
Feb:-2️⃣1️⃣=ವಿಶ್ವ ಮಾತೃಭಾಷಾ ದಿನ
=========================
ಮಾರ್ಚ್ ತಿಂಗಳು
👇👇👇👇👇👇
March:-8️⃣=ಅಂತಾರಾಷ್ಟ್ರೀಯ ಮಹಿಳಾ ದಿನ
March:-2️⃣2️⃣=ವಿಶ್ವ ನೀರಿನ ದಿನ
March:-2️⃣4️⃣=ವಿಶ್ವ ಕ್ಷಯ ದಿನ
========================
ಏಪ್ರಿಲ್ ತಿಂಗಳು
👇👇👇👇👇
April:-7️⃣=ವಿಶ್ವ ಆರೋಗ್ಯ ದಿನ
April:-2️⃣1️⃣=ನಾಗರಿಕ ಸೇವೆ ದಿನ
April:-2️⃣2️⃣=ಭೂಮಿ ದಿನ
April:-2️⃣4️⃣=ಪಂಚಾಯತ್ ರಾಜ್ ದಿವಸ್
========================
ಮೇ ತಿಂಗಳು
👇👇👇👇👇
May:-1️⃣=ವಿಶ್ವ ಕಾರ್ಮಿಕ ದಿನ
May:-1️⃣5️⃣=ಕುಟುಂಬಗಳಿಗೆ ಅಂತರಾಷ್ಟ್ರೀಯ ದಿನ
=======================
ಜೂನ್ ತಿಂಗಳು
👇👇👇👇👇👇
June:-1️⃣=ವಿಶ್ವ ಹಾಲು ದಿನ
June:-2️⃣=ಲೈಂಗಿಕ ಕಾರ್ಯಕರ್ತೆಯರ ದಿನ
June:-7️⃣=ವಿಶ್ವ ಆಹಾರ ಸುರಕ್ಷತಾ ದಿನ
June:-1️⃣2️⃣=ಬಾಲ ಕಾರ್ಮಿಕ ವಿರೋಧಿ ದಿನ
June:-1️⃣4️⃣=ರಕ್ತ ದಾನಿಗಳ ದಿನ
June:-2️⃣0️⃣=ನಿರಾಶ್ರಿತರ ದಿನ
June:-2️⃣1️⃣=ಯೋಗ ದಿನ
June:-2️⃣6️⃣=ಮಾದಕ ದ್ರವ್ಯ ವ್ಯಸನಿ ದಿನ
=========================
ಜುಲೈ ತಿಂಗಳು
👇👇👇👇👇
July:-1️⃣1️⃣=ವಿಶ್ವ ಜನಸಂಖ್ಯಾ ದಿನ
July:-1️⃣7️⃣=ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ
July:-2️⃣8️⃣=ವಿಶ್ವ ಹೆಪಟೈಟಿಸ್ ದಿನ
July:-2️⃣4️⃣= ಆದಾಯ ತೆರಿಗೆ ದಿನ
========================
ಆಗಸ್ಟ್ ತಿಂಗಳು
👇👇👇👇👇
Aug:-1️⃣=ಮುಸ್ಲಿಂ ಮಹಿಳಾ ಹಕ್ಕುಗಳ ದಿನ
Aug:-7️⃣=ರಾಷ್ಟ್ರೀಯ ಕೈಮಗ್ಗ ದಿನ
Aug:-1️⃣0️⃣=ವಿಶ್ವ ಜೈವಿಕ ಇಂಧನ ದಿನ
Aug:-2️⃣1️⃣=ವಿಶ್ವ ಹಿರಿಯ ನಾಗರಿಕ ದಿನ
Aug:-2️⃣3️⃣=ಆಶಾ ದಿವಸ್
Aug:-2️⃣6️⃣=ಟಾಯ್ಲೆಟ್ ಪೇಪರ್ ದಿನ
Aug:-3️⃣0️⃣=ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ
===============≠========
ಸೆಪ್ಟೆಂಬರ್ ತಿಂಗಳು
👇👇👇👇👇👇
Sep:-(1️⃣=7️⃣)ರಾಷ್ಟ್ರೀಯ ಪೌಷ್ಠಿಕಾಂಶ ದಿನ
Sep:-8️⃣=ಅಂತಾರಾಷ್ಟ್ರೀಯ ಸಾಕ್ಷರತಾ ದಿನ
Sep:-1️⃣5️⃣=ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
Sep:-1️⃣8️⃣=ಅಂತಾರಾಷ್ಟ್ರೀಯ ಸಮಾನ ವೇತನ ದಿನ
Sep:-4️⃣rth Sunday=ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
Sep:-2️⃣3️⃣=ಸಾವಯವ ದಿನ
Sep:-2️⃣5️⃣=ರಾಷ್ಟ್ರೀಯ ಅಂತ್ಯೋದಯ ದಿವಸ್
Sep:-2️⃣7️⃣=ವಿಶ್ವ ಪ್ರವಾಸೋದ್ಯಮ ದಿನ
Sep:-2️⃣8️⃣=ವಿಶ್ವ ರೇಬಿಸ್ ದಿನ
========================
ಅಕ್ಟೋಬರ್ ತಿಂಗಳು
👇👇👇👇👇👇👇
Oct:-1️⃣=ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ದಿನ
Oct:-1️⃣=ವಿಶ್ವ ಸಸ್ಯಾಹಾರಿ ದಿನ
Oct:-4️⃣=ವಿಶ್ವ ಪ್ರಾಣಿ ದಿನ
Oct:-5️⃣=ಅಂತಾರಾಷ್ಟ್ರೀಯ ಶಿಕ್ಷಕರ ದಿನ
Oct:-7️⃣=ವಿಶ್ವ ಹತ್ತಿ ದಿನ
Oct:-9️⃣=ವಿಶ್ವ ಮೊಟ್ಟೆ ದಿನ
Oct:-1️⃣1️⃣=ವಿಶ್ವ ಹೆಣ್ಣು ಮಗುವಿನ ದಿನ
Oct:-1️⃣4️⃣=ಅಂತಾರಾಷ್ಟ್ರೀಯ ಇ-ತ್ಯಾಜ್ಯ ದಿನ
Oct:-1️⃣5️⃣=ಜಾಗತಿಕ ಕೈ ತೊಳೆಯುವ ದಿನ
Oct:-1️⃣5️⃣=ಗ್ರಾಮೀಣ ಮಹಿಳಾ ದಿನ
Oct:-1️⃣6️⃣=ವಿಶ್ವ ಆಹಾರ ದಿನ
Oct:-1️⃣7️⃣=ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ
Oct:-2️⃣0️⃣=ಅಂತಾರಾಷ್ಟ್ರೀಯ ಬಾಣಸಿಗರ ದಿನ
Oct:-2️⃣1️⃣=ವಿಶ್ವ ಎರೆಹುಳು ದಿನ
Oct:-2️⃣4️⃣:-ವಿಶ್ವ ಪೋಲಿಯೋ ದಿನ
Oct:-3️⃣1️⃣=ವಿಶ್ವ ನಗರಗಳ ದಿನ
========================
ನವೆಂಬರ್ ತಿಂಗಳು
👇👇👇👇👇👇
Nov:-7️⃣=ರಾಷ್ಟ್ರೀಯ ಕ್ಯಾನ್ಸರ್ ದಿನ
Nov:-8️⃣=ವಿಶ್ವ ಪಟ್ಟಣ ಯೋಜನೆ ದಿನ
Nov:-9️⃣=ರಾಷ್ಟ್ರೀಯ ಕಾನೂನು ಸೇವೆಗಳ ದಿನ
Nov:-1️⃣1️⃣=ರಾಷ್ಟ್ರೀಯ ಶಿಕ್ಷಣ ದಿನ
Nov:-1️⃣4️⃣=ವಿಶ್ವ ಮಧುಮೇಹ ದಿನ
Nov:-1️⃣6️⃣=ವಿಶ್ವ ಪತ್ರಿಕೆಗಳ ದಿನ
Nov:-1️⃣7️⃣=ಮಹಿಳಾ ಉದ್ಯಮಶೀಲತೆ ದಿನ
Nov:-1️⃣5️⃣>2️⃣1️⃣=ರಾಷ್ಟ್ರೀಯ ನವಜಾತ ವಾರದ ದಿನ
Nov:-1️⃣9️⃣=ವಿಶ್ವ ಶೌಚಾಲಯ ದಿನ
Nov:-2️⃣0️⃣=ವಿಶ್ವ ಮಕ್ಕಳ ದಿನ
Nov:-2️⃣1️⃣=ಅಂಗನವಾಡಿ ದಿನ
Nov:-2️⃣2️⃣=ರಾಷ್ಟ್ರೀಯ ವಸತಿ ದಿನ
Nov:-2️⃣6️⃣=ರಾಷ್ಟ್ರೀಯ ಹಾಲು ದಿನ
=========================
ಡಿಸೆಂಬರ್ ತಿಂಗಳು
👇👇👇👇👇👇
DCE:-2️⃣:-ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
DCE:-4️⃣:-ಅಂತಾರಾಷ್ಟ್ರೀಯ ಸ್ವಯಂ ಸೇವಕ ದಿನ
DCE:-5️⃣=ವಿಶ್ವ ಮಣ್ಣಿನ ದಿನ
DCE:-🔟=ವಿಶ್ವ ಮಾನವ ಹಕ್ಕುಗಳ ದಿನ
DCE:-1️⃣8️⃣=ಅಂತಾರಾಷ್ಟ್ರೀಯ ವಲಸಿಗರ ದಿನ
DCE:-2️⃣0️⃣=ಮಾನವ ಒಗ್ಗಟ್ಟಿನ ದಿನ
DCE:-2️⃣3️⃣=ರಾಷ್ಟ್ರೀಯ ಕಿಸಾನ್ ದಿನ
DCE:-2️⃣4️⃣=ರಾಷ್ಟ್ರೀಯ ಗ್ರಾಹಕ ದಿನ
DCE:-2️⃣5️⃣=ಉತ್ತಮ ಆಡಳಿತ ದಿನ

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು

🌳ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು 🌳
🌾🎍🌾🎍🌾🎍🌾🎍🌾🎍

🐠 ಬೂಡೋ - ಅಸ್ಸಾಂ 

🐠 ಸಂತಾಲ - ಪಶ್ಚಿಮ ಬಂಗಾಳ, ಬಿಹಾರ 

🐠 ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ 

🐠ಜಂತಿಯಾ - ಮೇಘಾಲಯ 

🐠 ಗಯಾಲಂಗೋ - ಹಿಮಾಲಯ 

🐠ಬೖಗಾ - ಛತ್ತೀಸ್ ಗಡ್, ಮಧ್ಯಪ್ರದೇಶ 

🐠ಕುಕಿ - ಮಣಿಪುರಿ 

🐠 ಚಂಚು - ಒರಿಸ್ಸಾ 

🐠 ಸೂೕಲಿಗ - ಕರ್ನಾಟಕ 

🐠 ಅಪಟಮಿಸ್ - ಅರುಣಾಚಲ ಪ್ರದೇಶ 

🐠 ಗಾರೋ - ಮೇಘಾಲಯ 

🐠 ಫರ್'ವಾಲ್ - ಉತ್ತರ ಪ್ರದೇಶ 

🐠 ಲಪ್ಚಾ - ಸಿಕ್ಕಿಂ 

🐠 ಗೂಂಡ - ಮಧ್ಯಪ್ರದೇಶ, ಜಾರ್ಖಂಡ್ 

🐠ಭಲ್ಲರು - ಮಧ್ಯಪ್ರದೇಶ, ರಾಜಸ್ಥಾನ 

🐠 ಕೂೕಟಾ - ತಮಿಳುನಾಡು 

🐠 ಜಾಟರು - ಅಂಡಮಾನ್ ನಿಕೋಬಾರ್ 

🐠 ಬಡಗಾಸ್ - ತಮಿಳುನಾಡು 

🐠ಉರಾಲಿ - ಕೇರಳ 

🐠 ಮುಂಡಾ - ಜಾರ್ಖಂಡ್ 

🐠 ಮೕನಾ - ರಾಜಸ್ಥಾನ 

🐠 ಕಾರ್ಬಿ - ಅಸ್ಸಾಂ 

🐠 ಕುಮುವೋನ್ - ಉತ್ತರಪ್ರದೇಶ 

🐠 ಅಂಗಾಮಿ - ನಾಗಾಲ್ಯಾಂಡ್ 

🐠 ಬರವೋರ್ - ಬಿಹಾರ 

🐠 ವರಲಿ - ಮಹಾರಾಷ್ಟ್ರ 

🐠 ಗಡ್ಡಿ - ಹಿಮಾಚಲ ಪ್ರದೇಶ 

🐠ಕನ್ನರ್ - ಹಿಮಾಚಲ ಪ್ರದೇಶ 

 🐠ಬೂೕಟಿಯಾನ್ - ಉತ್ತರಾಖಂಡ್ 

 🐠 ಸವರಾಸ್ - ಆಂಧ್ರಪ್ರದೇಶ 


🦋 ಪರಸಿದ್ಧ ವ್ಯಕ್ತಿಗಳು ಮತ್ತುಅವರ ಬಿರುದುಗಳು 🦋
🐙🦕🐙🦕🐙🦕🐙🦕🐙🦕🐙

1.ಇಂದಿರಾ ಗಾಂಧಿ
=ಪ್ರಿಯದರ್ಶಿನಿ

2. ಬಾಲಗಂಗಾಧರ ತಿಲಕ್
=ಲೋಕಮಾನ್ಯ

3. ಸುಭಾಸ್ ಚಂದ್ರ ಬೋಸ್
=ನೇತಾಜಿ

4. ಲಾಲ ಬಹದ್ದೂರ್ ಶಾಸ್ತ್ರೀ
=ಶಾಂತಿದೂತ

5. ಸರದಾರ್ ವಲ್ಲಬಾಯಿ ಪಟೇಲ್
=ಉಕ್ಕಿನ ಮನುಷ್ಯ, ಸರದಾರ್

6.  ಜವಾಹರಲಾಲ ನೆಹರು
=ಚಾಚಾ

7.  ರವೀಂದ್ರನಾಥ ಟ್ಯಾಗೋರ್
=ಗುರುದೇವ

8.  ಎಂ. ಎಸ್. ಗೋಳಲ್ಕರ್
=ಗುರೂಜಿ

9.  M.K.ಗಾಂಧಿ
=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ

10.  ಸರೋಜಿನಿ ನಾಯ್ಡು
=ಭಾರತದ ಕೋಗಿಲೆ.

11.  ಪ್ಲಾರೆನ್ಸ್ ನೈಟಿಂಗೇಲ್
=ದೀಪಧಾರಣಿ ಮಹಿಳೆ

12.ಖಾನ್ ಅಬ್ದುಲ್ ಗಫಾರ್ ಖಾನ್
=ಗಡಿನಾಡ ಗಾಂಧಿ

13.  ಜಯಪ್ರಕಾಶ ನಾರಾಯಣ
=ಲೋಕನಾಯಕ

14.  ಪಿ.ಟಿ.ಉಷಾ
=ಚಿನ್ನದ ಹುಡುಗಿ

15.  ಸುನೀಲ್ ಗವಾಸ್ಕರ್
=ಲಿಟಲ್ ಮಾಸ್ಟರ್

16.  ಲಾಲಾ ಲಜಪತರಾಯ
=ಪಂಜಾಬಿನ ಕೇಸರಿ

17.  ಷೇಕ್ ಮಹ್ಮದ್ ಅಬ್ಧುಲ್
=ಕಾಶ್ಮೀರ ಕೇಸರಿ

18.  ಸಿ. ರಾಜಗೋಪಾಲಾಚಾರಿ
=ರಾಜಾಜಿ

19.  ಸಿ. ಎಫ್. ಆಂಡ್ರೋಸ್
=ದೀನಬಂಧು

20.  ಟಿಪ್ಪು ಸುಲ್ತಾನ
=ಮೈಸೂರ ಹುಲಿ

21.  ದಾದಾಬಾಯಿ ನವರೋಜಿ
=ರಾಷ್ಟ್ರಪಿತಾಮಹ
(ಭಾರತದ ವಯೋವೃದ್ಧ)

22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.

23. ಡಾ ಶ್ರೀಕೃಷ್ಣ ಸಿಂಗ್
=ಬಿಹಾರ ಕೇಸರಿ

24. ಟಿ ಪ್ರಕಾಶಂ
=ಆಂಧ್ರ ಕೇಸರಿ

25. ಚಿತ್ತರಂಜನ್ ದಾಸ್
=ದೇಶಬಂಧು

26. ಶೇಖ್ ಮುಜಿಬತ್ ರಹಮಾನ್
=ಬಂಗಬಂಧು

27. ಕರ್ಪೂರಿ ಠಾಕೂರ್
=ಜನ ನಾಯಕ

28. ಪುರುಷೋತ್ತಮ್ ದಾಸ್ ಟಂಡನ್
=ರಾಜಶ್ರೀ

29. ಡಾ. ರಾಜೇಂದ್ರ ಪ್ರಸಾದ್
=ದೇಶ ರತ್ನ ಮತ್ತು ಅಜಾತಶತ್ರು

30. ಮದನ ಮೋಹನ ಮಾಳವೀಯ
=ಮಹಾಮಾನ

31. ಮೇಜರ್ ಜನರಲ್ ರಾಜಿಂದರ್ ಸಿಂಗ್
=ಗುಬ್ಬಚ್ಚಿ(Sparrow)

32. ಚಂದ್ರಶೇಖರ್
=ಯುವ ಟರ್ಕ್ (Young Turk)

33. ಚೌಧರಿ ದೇವಿಲಾಲ
=ತೌ(Tau)

34. ಭಗತ್ ಸಿಂಗ್
=ಶಹೀದ್ ಇ ಅಜಾಮ್

35. ಮದರ್ ತೆರೇಸಾ
=ತಾಯಿ

36. ಅಮೀರ್ ಖುಸ್ರೋ
=ಹಿಂದುಸ್ಥಾನದ ಗಿಳಿ

37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್
=ಲಾಲ್, ಬಾಲ್, ಪಾಲ್

38. ಡಾ ಅನುಗ್ರಹ ನಾರಾಯಣ ಸಿಂಗ್
=ಬಿಹಾರದ ವಿಭೂತಿ

39. ಜಗಜೀವನ್ ರಾಮ್
=ಬಾಬುಜಿ

40. ಸಮುದ್ರ ಗುಪ್ತ
=ಭಾರತದ ನೆಪೋಲಿಯನ್

41. ಮಹಾಕವಿ ಕಾಳಿದಾಸ
=ಭಾರತದ ಶೇಕ್ಸ್ಪಿಯರ್

42. ಚಾಣಕ್ಯ
=ಭಾರತದ ಮ್ಯಾಕೆವೇಲಿ

43.ಜೈನುಲ್ ಅಬ್ದಿನ್
=ಕಾಶ್ಮೀರದ ಅಕ್ಬರ್

44. ರವಿಶಂಕರ್ ಮಹಾರಾಜ್
=ಗುಜರಾತದ ಪಿತಾಮಹ

45. ದುಂಡಿರಾಜ್ ಗೋವಿಂದ ಫಾಲ್ಕೆ
=ಭಾರತೀಯ ಚಲನಚಿತ್ರದ ಪಿತಾಮಹ

46. ರಾಜಾರಾಮ್ ಮೋಹನ್ ರಾಯ್
=ಭಾರತದ ನವೋದಯದ ದೃವತಾರೆ

47. ಕಪಿಲ್ ದೇವ್
=ಹರಿಯಾಣದ ಸುಂಟರಗಾಳಿ (ಹರಿಕೇನ್)

48. ಧ್ಯಾನ್ ಚಂದ್
=ಹಾಕಿಯ ಜಾದೂಗಾರ (ಮಾಂತ್ರಿಕ)

49.ಕೆ.ವಿ. ಪುಟ್ಟಪ್ಪ
=ಕುವೆಂಪು

50. ದೇಶ ಪ್ರೀಯ
=ಯತೀಂದ್ರ ಮೋಹನ್ ಸೇನ್ ಗುಪ್ತ

🌊💦 ಭಾರತದ 6️⃣ ರಾಷ್ಟ್ರೀಯ ಜಲಮಾರ್ಗಗಳು

🌊💦 ಭಾರತದ 6️⃣ ರಾಷ್ಟ್ರೀಯ ಜಲಮಾರ್ಗಗಳು🌊💦 National waterways in india 🇮🇳
========================

🌊🌊🌊🌊🌊🌊🌊🌊🌊🌊🌊🌊NW-1️⃣=ಅಲಹಾಬಾದ್( ಪ್ರಯಾಗ್ ರಾಜ್)
🌊ಉತ್ತರಪ್ರದೇಶ
🌊ವರ್ಷ =1986
🌊ಒಟ್ಟು ಉದ್ದ =1620 ಕಿ, ಮೀ
🌊ಇದು'ಗಂಗಾ ನದಿ'ಯ ಮೇಲೆ ಇದೆ
🌊ಇದು ಭಾರತದ ಅತಿದೊಡ್ಡ ಜಲಮಾರ್ಗವಾಗಿದೆ.
💦💦💦💦💦💦💦💦💦💦💦💦
🌊NW-2️⃣=ದೂಬ್ರಿ -ಸಾದಿಯಾ
🌊ಅಸ್ಸಾಂ 
🌊ವರ್ಷ = 1988
🌊ಒಟ್ಟು ಉದ್ದ =891ಕಿ,ಮೀ
🌊ಇದು 'ಬ್ರಹ್ಮಪುತ್ರ' ನದಿ ಮೇಲೆ ಇದೆ
💦💦💦💦💦💦💦💦💦💦💦💦
🌊NW-3️⃣=ಕೊಲ್ಲಂ -ಕೊಟ್ಟಾಪುರ
🌊ಕೇರಳ
🌊205 ಕಿ,ಮೀ
🌊ಇ ಜಲಮಾರ್ಗದ ಮೇಲೆ ಕಂಡು ಬರುವ ಪ್ರಮುಖ ಸ್ಥಳಗಳು
 🌊ಪಶ್ಚಿಮ ಕರಾವಳಿ--ಉದ್ಯೋಗ ಮಂಡಲ--ಚಂಪಕರೆ.
💦💦💦💦💦💦💦💦💦💦💦💦
🌊NW4️⃣=ಕಾಕಿನಾಡ -ಪುದುಚೇರಿ
🌊ಒಟ್ಟು ಉದ್ದ=1095 ಕಿ,ಮೀ
🌊ನದಿಗಳು=ಕೃಷ್ಣ-ಗೋದಾವರಿ
🌊ಆಂಧ್ರ ಪ್ರದೇಶ, ತಮಿಳುನಾಡು, ಪುದುಚೇರಿ
🌊ಇಲ್ಲಿ ಬರುವ ಪ್ರಮುಖ ಸ್ಥಳಗಳು------ಕಾಕಿನಾಡ, ಎಲ್ಲೂರು, ಕೋಮನೂರು, ಬಕಿಂಗ್ ಹ್ಯಾಮ್.
💦💦💦💦💦💦💦💦💦💦💦💦
🌊NW-5️⃣=ತಲ್ಚರ್(ಗೋಯಂಕಾಲಿ)-ಧರ್ಮ
🌊ನದಿಗಳು = ಪೂರ್ವ ಕರಾವಳಿ ಕಾಲುವೆ- ಮಾತೈ ನದಿ
🌊ಒಟ್ಟು ಉದ್ದ = 623 ಕಿ,ಮೀ
🌊ಒಡಿಸ್ಸಾ-ಪಶ್ಚಿಮ ಬಂಗಾಳ
💦💦💦💦💦💦💦💦💦💦💦💦
🌊NW-6️⃣=ಬಂಗಾ- ಲಕಿಂಪುರ್
🌊ಮಣಿಪುರ
🌊ಒಟ್ಟು ಉದ್ದ = 121 ಕಿ,ಮೀ
🌊ನದಿ- ಬರಾಕ್ ನದಿ
💦💦💦💦💦💦💦💦💦💦💦💦

📜ಶಾಸ್ತ್ರೀಯ ಸ್ಥಾನಮಾನ ಪಡೆದ 6 ಭಾಷೆಗಳು📜

📜ಶಾಸ್ತ್ರೀಯ ಸ್ಥಾನಮಾನ  ಪಡೆದ   6 ಭಾಷೆಗಳು📜

🛑ತಮಿಳು = 2004

🛑ಸಂಸ್ಕೃತ = 2005

🛑ತಲುಗು ಮತ್ತು ಕನ್ನಡ = 2008

🛑ಮಲೆಯಾಳಂ = 2013

🛑ಒರಿಯಾ = 2014

~ಪ್ರಮುಖ ಸಾಹಿತಿಗಳ ಆತ್ಮಚರಿತ್ರೆ ~

~~ಪ್ರಮುಖ ಸಾಹಿತಿಗಳ ಆತ್ಮಚರಿತ್ರೆ ~

🔷ದೇ ಜವರೇಗೌಡ =ಹೊರಾಟದ ಬದುಕು

🔷ದ ರಾ ಬೇಂದ್ರೆ=ನಡೆದು ಬಂದ ದಾರಿ

🔷ತ ಸು ಶಾಮರಾಯ=ಮೂರು ತಲೆಮಾರು

🔷ಜ ಪಿ ರಾಜರತ್ನಂ =ಹತ್ತು ವರ್ಷಗಳು

🔷ಎಚ್ ನರಶಿಂಹ =ಹೊರಾಟದ ಹಾದಿ

🔷ಅ. ನ .ಕೃ=ಬರಹಗಾರನ ಬದುಕು

🔷ಬಸವರಾಜ ಕಟ್ಟೀಮನಿ = ಕಾದಂಬರಿಕಾರನ ಬದುಕು

🔷ಕುವೆಂಪು = ನೆನಪಿನ ದೋಣಿಯಲಿ

🔷ಯು ಆರ್ ಅನಂತಮೂರ್ತಿ =ಸುರಗಿ

🔷ಗುಬ್ಬಿ ವೀರಣ್ಣ= ಕಲಿಯೋ ನಾಯಕ

🔷ಮಾಸ್ತಿ ವೆಂಕಟೇಶ ಅಯ್ಯಂಗಾರ್ = ಭಾವ

🔷ಕಡಿದಾಳ್ ಮಂಜಪ್ಪ =ನನಸಾಗದ ಕನಸು

🔷ಪ ಲಂಕೇಶ್ = ಹುಳಿ ಮಾವಿನ ಮರ

🔷ಗರೀಶ್  ಕಾರ್ನಾಡ್=ಆಡಾಡುತ್ತ ಆಯುಷ್ಯ

🔷ಎ ಎನ್ ಮೂರ್ತಿರಾವ್=ಸಂಜೆಗನ್ನಿನ ಹಿನ್ನೋಟ

🔷ಶರೀರಂಗ= ನಾಟ್ಯ ನೆನಪುಗಳು

📚ಅಧ್ಯಯನ =ಅಧ್ಯಯನ ವಸ್ತು📚

📚ಅಧ್ಯಯನ =ಅಧ್ಯಯನ ವಸ್ತು📚
========================
🔵 ವಟಿಕಲ್ಚರ್=ದ್ರಾಕ್ಷಿ 🍇🍇

🔵ಪಸಿ ಕಲ್ಚರ್=ಮೀನುಗಳು🐟🐟

🔵ಹಾರ್ಟಿಕಲ್ಟರ್=ಹಣ್ಣುಗಳು🍑🍓

🔵ಅಬೋರಿ ಕಲ್ಚರ್=ಮರಗಳು🌴🌳

🔵 ಅಪಿ ಕಲ್ಚರ್=ಜೇನು 🐝🐝

🔵ಫಲೋರಿಕಲ್ಟರ್=ಹೂವುಗಳು 🌺💐

🔵ಸಲ್ವಿಕಲ್ಚರ್ = ಅರಣ್ಯಗಳು 🌳🌵🌴

🔵ವಜಿಕಲ್ಚರ್= ತರಕಾರಿಗಳು 🥒🥕🍆

🔵ಮರಿಕಲ್ಚರ್= ಸಮುದ್ರ ಜೀವಿಗಳು 🐡🐠🐟🐳🐋🐬

🔵ಸರಿಕಲ್ಚರ್ = ರೇಷ್ಮೆ

🔵ಜಯೋಪೋನಿಕ್ = ಕೃಷಿ ಅಧ್ಯಯನ

ಭಾರತದ 13 ಪ್ರಮುಖ ಬಂದರುಗಳು

🚢🛥️ಭಾರತದ 13 ಪ್ರಮುಖ ಬಂದರುಗಳು🚢🛥️
⛴️🛳️🚤⛴️🛥️🚢🛥️🛳️🚤⛴️🚢🛳️
1️⃣=ಕಾಂಡ್ಲಾ ಬಂದರು
2️⃣=ಮುಂಬೈ ಬಂದರು
3️⃣= ನವಶೇವಾ ಅಥವಾ ಜವಾಹರಲಾಲ್ ನೆಹರು ಬಂದರು
4️⃣=ಮರ್ಮಗೋವಾ ಬಂದರು
5️⃣=ನವ ಮಂಗಳೂರು ಬಂದರು
6️⃣=ಕೊಚ್ಚಿ ಬಂದರು
7️⃣=ತುತಕುಡಿ ಬಂದರು
8️⃣=ಚೆನ್ನೈ ಬಂದರು
9️⃣=ಎನ್ನೋರ್ ಬಂದರು
🔟=ವಿಶಾಖಪಟ್ಟಣ ಬಂದರು
1️⃣1️⃣=ಪಾರಾದೀಪ ಬಂದರು
1️⃣2️⃣=ಹಾಲ್ಡಿಯಾ ಬಂದರು
1️⃣3️⃣=ಕೋಲ್ಕತ್ತಾ  
🛳️🛳️🛳️🛳️🛳️🛳️🛳️🛳️🛳️🛳️🛳️🛳️

ರಾಜಮನೆತನ=ರಾಜಧಾನಿ =ಸ್ಥಾಪಕ

✳️❇️ರಾಜಮನೆತನ=ರಾಜಧಾನಿ =ಸ್ಥಾಪಕ✳️❇️
👇👇👇👇👇👇👇👇👇👇👇👇
❇️ಮರ್ಯರು = ಪಾಟಲಿಪುತ್ರ = ಚಂದ್ರಗುಪ್ತ

❇️ಶಾತವಾಹನರು=ಪ್ಯೆಟಣ= ಸಿಮುಖ

❇️ಕದಂಬರು = ಬನವಾಸಿ = ಮಯೂರವರ್ಮ

❇️ಗಂಗರು= ತಲಕಾಡು= ದಡಿಗ ಮತ್ತು ಮಾಧವ

❇️ಬಾದಾಮಿ ಚಾಲುಕ್ಯರು = ಬದಾಮಿ = ಜಯಶಿಂಹ

❇️ಕಲ್ಯಾಣಿ ಚಾಲುಕ್ಯರು = ಕಲ್ಯಾಣಿ = 2 ನೇ ತೈಲಪ

❇️ರಾಷ್ಟ್ರಕೂಟರು = ಮಾನ್ಯಕೇಟ= ದಂತಿದುರ್ಗ

❇️ಹೊಯ್ಸಳರು = ದ್ವಾರಸಮುದ್ರ = ಸಳ

❇️ವಜಯನಗರ ಸಾಮ್ರಾಜ್ಯ = ಹಂಪಿ = ಹಕ್ಕಬುಕ್ಕರು

❇️ಬಹುಮನಿ ಸುಲ್ತಾನರು = ಗುಲ್ಬರ್ಗ/ಬೀದರ್ = ಹಸನ್ ಗಂಗು ಬಹುಮನ್ ಶಾ

❇️ಮೈಸೂರು ಒಡೆಯರು = ಮೈಸೂರು = ಯದುರಾಯ ಮತ್ತು ಕೃಷ್ಣರಾಯ

*ಪ್ರಮುಖ ಸಿದ್ಧಾಂತಗಳು

 *ಪ್ರಮುಖ ಸಿದ್ಧಾಂತಗಳು*👇

1) ಮದ್ವಾಚಾರ್ಯರು=
*ದ್ವೈತ ಸಿದ್ಧಾಂತ*

2) ಶಂಕರಾಚಾರ್ಯರು=
*ಅದ್ವೈತ ಸಿದ್ಧಾಂತ*

3) ರಾಮಾನುಜಾಚಾರ್ಯರು=
 *ವಿಶಿಷ್ಟಾದ್ವೈತ ಸಿದ್ಧಾಂತ*

4) ಬಸವಣ್ಣನವರು=
*ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ*

5) ವಲ್ಲಭಾಚಾರ್ಯ=
*ಶುದ್ಧ ಅದ್ವೈತ ಸಿದ್ಧಾಂತ*

6) ನಿಂಬಾರಕಚರ್ಯ=
*ದ್ವೈತ ದ್ವೈತ ಸಿದ್ಧಾಂತ*✍️

 ⭕️ *ಸಮಾಜ ಸುಧಾರಕರು*

1) ಬ್ರಹ್ಮ ಸಮಾಜ=
*ರಾಜಾರಾಮ್ ಮೋಹನ್ ರಾಯ್*(1828)

2) ಆರ್ಯ ಸಮಾಜ=
*ದಯಾನಂದ್ ಸರಸ್ವತಿ*(1875)

3) ಪ್ರಾರ್ಥನಾ ಸಮಾಜ=
*ಆತ್ಮರಾಮ್ ಪಾಂಡುರಂಗ*(1867)
   (TET-2021)

4) ಸತ್ಯಶೋಧಕ ಸಮಾಜ=
*ಜ್ಯೋತಿ ಬಾಪುಲೆ*(1873)

5) ಥಿಯಾಸಫಿಕಲ್ ಸೋಸೈಟಿ=
 *ಅನಿಬೆಸೆಂಟ್*(1875)

6) ರಾಮಕೃಷ್ಣ ಮಿಷನ್=
 *ಸ್ವಾಮಿ ವಿವೇಕಾನಂದ*(1897)

7) ಅಲಿಘರ್ ಚಳವಳಿ=
ಸರ್ *ಸಯ್ಯದ್ ಅಹಮದ್ ಖಾನ್*

8) ಯುವ ಬಂಗಾಳ ಚಳುವಳಿ=
 *ಹೆನ್ರಿ ಲೋಯಿಸ್ ವಿವಿಯನ್ ಡಿರೊಜಿಯೊ,*(TET-2020)*👇

1) ಮದ್ವಾಚಾರ್ಯರು=
*ದ್ವೈತ ಸಿದ್ಧಾಂತ*

2) ಶಂಕರಾಚಾರ್ಯರು=
*ಅದ್ವೈತ ಸಿದ್ಧಾಂತ*

3) ರಾಮಾನುಜಾಚಾರ್ಯರು=
 *ವಿಶಿಷ್ಟಾದ್ವೈತ ಸಿದ್ಧಾಂತ*

4) ಬಸವಣ್ಣನವರು=
*ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ*

5) ವಲ್ಲಭಾಚಾರ್ಯ=
*ಶುದ್ಧ ಅದ್ವೈತ ಸಿದ್ಧಾಂತ*

6) ನಿಂಬಾರಕಚರ್ಯ=
*ದ್ವೈತ ದ್ವೈತ ಸಿದ್ಧಾಂತ*✍️

 ⭕️ *ಸಮಾಜ ಸುಧಾರಕರು*

1) ಬ್ರಹ್ಮ ಸಮಾಜ=
*ರಾಜಾರಾಮ್ ಮೋಹನ್ ರಾಯ್*(1828)

2) ಆರ್ಯ ಸಮಾಜ=
*ದಯಾನಂದ್ ಸರಸ್ವತಿ*(1875)

3) ಪ್ರಾರ್ಥನಾ ಸಮಾಜ=
*ಆತ್ಮರಾಮ್ ಪಾಂಡುರಂಗ*(1867)
   (TET-2021)

4) ಸತ್ಯಶೋಧಕ ಸಮಾಜ=
*ಜ್ಯೋತಿ ಬಾಪುಲೆ*(1873)

5) ಥಿಯಾಸಫಿಕಲ್ ಸೋಸೈಟಿ=
 *ಅನಿಬೆಸೆಂಟ್*(1875)

6) ರಾಮಕೃಷ್ಣ ಮಿಷನ್=
 *ಸ್ವಾಮಿ ವಿವೇಕಾನಂದ*(1897)

7) ಅಲಿಘರ್ ಚಳವಳಿ=
ಸರ್ *ಸಯ್ಯದ್ ಅಹಮದ್ ಖಾನ್*

8) ಯುವ ಬಂಗಾಳ ಚಳುವಳಿ=
 *ಹೆನ್ರಿ ಲೋಯಿಸ್ ವಿವಿಯನ್ ಡಿರೊಜಿಯೊ,*(TET-2020)

*ಶಾಸನಗಳು*

⚜️ *ಶಾಸನಗಳು*👇

🔸 ಶಾಸನಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ= *ಎಪಿಗ್ರಫಿ*

🔹 ಭಾರತದಲ್ಲಿ ಮೊದಲ ಬಾರಿಗೆ ಶಾಸನಗಳನ್ನು ಹೊರಡಿಸಿದವರು= ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ *ಅಶೋಕ*( ಶಾಸನಗಳ ಪಿತಾಮಹ ಎನ್ನುವರು)

🔸 ಅಶೋಕನ ಶಾಸನಗಳನ್ನು 1837 ರಲ್ಲಿ ಮೊದಲ ಬಾರಿಗೆ ಬೆಳಕಿಗೆ ತಂದವರು *ಜೇಮ್ಸ್ ಪ್ರಿನ್ಸೆಪ್*

🔹 ಶಾಸನಗಳ ವಿಧಗಳು👇
 *ಸ್ತಂಭ ಶಾಸನ, ಬಂಡೆಗಲ್ಲು ಶಾಸನ, ತಾಮ್ರಪಟ ಶಾಸನ. ದಾನ ದತ್ತಿ ಶಾಸನ, ಪ್ರಶಸ್ತಿ ಶಾಸನ,*

🔹 ಶಾಸನಗಳ ಲಿಪಿ ಗಳು= ಬ್ರಾಹ್ಮಿ
( ಎಡದಿಂದ ಬಲಕ್ಕೆ ಬರೆಯುವುದು, 

🔸ಖರೋಷ್ಠಿ
( ಬಲದಿಂದ ಎಡಕೆ ಬರೆಯುವುದು)

✍️ ಭಾರತದಲ್ಲಿನ ಶಾಸನಗಳ ಭಾಷೆ, 
 *ಸಂಸ್ಕೃತ. ಪ್ರಾಕೃತ, ತೆಲುಗು, ತಮಿಳು, ಕನ್ನಡ,*

1) ಅಶೋಕನ ಶಾಸನಗಳು= *ರುಮಿಂಡೈ ಶಾಸನ, ಕಳಿಂಗ ಶಾಸನ, ಮಸ್ಕಿ ಶಾಸನ,* etc  

2)ಖಾರವೇಲನ=
*ಹಾಥಿ ಗುಂಪ ಶಾಸನ*

3) ಸಮುದ್ರಗುಪ್ತ=
 *ಅಲಹಾಬಾದ್ ಸ್ತಂಭ ಶಾಸನ*

4) ರವಿಕೀರ್ತಿಯ= *ಐಹೊಳೆ ಶಾಸನ*

5) ಮಯೂರವರ್ಮ=
 *ಚಂದ್ರವಳ್ಳಿ ಶಾಸನ*

6) ರುದ್ರದಾಮನ್=
*ಗಿರ್ನಾರ್ ಶಾಸನ*

7) ಸ್ಕಂದ ಗುಪ್ತನ=
*ಜುನಾಗಡ್ ಶಾಸನ*

8) ಶಾಂತಿ ವರ್ಮನ=
*ತಾಳಗುಂದ ಶಾಸನ*

9) ಎರಡನೇ ಚಂದ್ರಗುಪ್ತನ= *ದೆಹಲಿಯ ಮೆಹರೂಲಿ ಕಬ್ಬಿಣದ ಶಾಸನ*

10) ವಂದನೆ ಪರಾಂತಕನ=
 *ಉತ್ತರ ಮೇರೂರು ಶಾಸನ*

11) ಹರ್ಷವರ್ಧನ=
 *ಮಧುಬಾನ ಶಾಸನ*

12) ಭೋಜರಾಜನ=
*ಗ್ವಾಲಿಯರ್ ಶಾಸನ*

13) ಒಂದನೇ ಮಹೇಂದ್ರ ವರ್ಮನ=
 *ಕುಡಿಮಿಯ ಮಲೈ  ಶಾಸನ*

14) ಗೌತಮಿ ಬಾಲಾಶ್ರೀಯ=
*ನಾಶಿಕ್ ಶಾಸನ,

*ವಿದೇಶಿ* ಸಾಹಿತಿಗಳು

*ವಿದೇಶಿ* ಸಾಹಿತಿಗಳು

1) ಹೆರೋಡಾಟಸ್= *ಇಷ್ಟೋರಿಕಾ 

2) ಮೆಗಾಸ್ತಾನಿಸನ= *ಇಂಡಿಕಾ*

3) ಪ್ಲೀನಿ ಯ= *ಪ್ರಕೃತಿ ಇತಿಹಾಸ*

4) ಟಾಲೆಮಿಯ= *ಜಿಯೋಗ್ರಾಫಿ*

5) ಗ್ರೀಕ್ ಅನಾಮಿಕನ= *ಪೆರಿ ಪ್ಲೇಸ್ ಆಪ್ ಎರಿತ್ರಿಯನನ*

6) ಪಾಹಿಯಾನ= *ಘೋ-ಕೋ-ಕಿ*

7) ಹ್ಯೂಯನ್ ತ್ಸ್ಯಾಂಗ= *ಸಿ-ಯು-ಕಿ*

8)ಉತ್ಬಿಯಾ= *ಕಿತಬ್-ಉಲ್ ಯಮಿನಿ*

9) ibn-e-batuta= *ಕಿತಾಬ್-ಇ-ರೆಹಲಾ*

10) ಅಲ್ ಬೇರೊನಿ= *ಕಿತಬ್ ಉಲ್ ಹಿಂದ*

11) ಹಸನ್ ನಿಜಾಮಿ= *ತಾಜ್-ಉಲ್- ಮಾಸಿರ್*

12) ಅಬುಲ್ ಫಝಲ್= *ಅಕ್ಬರ್ ನಾಮ*

13) ಜಿಯಾವುದ್ದಿನ್ ಬರೌನಿ,= *ತಾರೀಖ-ಇ- ಫಿರೋಜ್- ಷಾಹಿ*

14) ಕಿರ್ಮಾನಿ ಯ= *ಷಾ ನಾಮಾ*

ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು

📖 ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು*👇

1) ಬಾಣನ= *ಹರ್ಷಚರಿತ*

2) ತಿರುವಳ್ಳವರ್= *ತಿರುಕ್ಕುರಳ್*

3) ಹರೀಸೆನನ= *ಕಥಾಕೋಶ*

4) ವಾಲ್ಮೀಕಿಯ= *ರಾಮಾಯಣ*

5) ವ್ಯಾಸ ಮಹರ್ಷಿಯ= *ಮಹಾಭಾರತ*

6) ಅಶ್ವಘೋಷನ= *ಬುದ್ಧಚರಿತ*

7) ನಯಚಂದ್ರ ಸೂರಿಯ= *ಹಮ್ಮೀರ ಕಾವ್ಯ*

8) ಚಾಂದ್ ಬರ್ದಾಯಿ= *ಪೃಥ್ವಿರಾಜ ರಾಸೋ*

9) ಬಿಲ್ಹಣ= *ವಿಕ್ರಮಂಕದೇವಚರಿತೆ*

10) ಒಂದನೇ ಮಹೇಂದ್ರವರ್ಮ= *ಮತ್ತೆ ವಿಲಾಸ ಪ್ರಹಸನ*

11) ಪಾಣಿನಿಯ= *ಅಷ್ಟಧ್ಯಾಯಿ*

12) ಕೌಟಿಲ್ಯನ= *ಅರ್ಥಶಾಸ್ತ್ರ*

13) ಶೂದ್ರಕನ= *ಮೃಚ್ಚಕಟಿಕ*

14) ಕಾಳಿದಾಸನ= *ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,*

15) ವಿಶಾಖದತ್ತನ= *ಮುದ್ರಾರಾಕ್ಷಸ* ಮತ್ತು *ದೇವಿಚಂದ್ರಗುಪ್ತಮ್*

14) ಅಮೋಘವರ್ಷ= *ಕವಿರಾಜಮರ್ಗ*

15) ಹರ್ಷವರ್ಧನ= *ರತ್ನವಳಿ,  ಪ್ರಿಯದರ್ಶಿಕ ಮತ್ತು ನಾಗನಂದ*

16) ಚಾವುಂಡರಾಯ= *ಚಾವುಂಡರಾಯ ಪುರಾಣ*

17) ಜನ್ನ= *ಯಶೋಧರ ಚರಿತೆ*

18) ಕೃಷ್ಣದೇವರಾಯ= *ಅಮುಕ್ತಮೌಲ್ಯ*

19) ವಿಜ್ಜಿಕೀಯ= *ಕೌಮುದಿ ಮಹೋತ್ಸವ*

20) ಗುಣಾಡ್ಯ= *ಬೃಹತ್ ಕಥಾ*

21) ಶ್ರೀಪುರುಷ= *ಗಜಶಾಸ್ತ್ರ*(TET-2020)

22) ಹಾಲ= *ಗಥಾಸಪ್ತಸತಿ*(SDA-2019)

23) ಚರಕ= *ಚರಕ ಸಂಹಿತೆ*

24) ಸುಶ್ರುತ= *ಸುಶ್ರುತ ಸಂಹಿತೆ*

25) ಆರ್ಯಭಟ= *ಅರ್ಯಭಟಿಯಂ*

26) ಶ್ರೀಧರಾಚಾರ್ಯ= *ಜಾತಕತಿಲಕ*

27) ಎರಡನೇ ನಾಗಾರ್ಜುನ= *ರಸವೈದ್ಯ*

ಶುಕ್ರವಾರ, ನವೆಂಬರ್ 19, 2021

The 17 sustainable development goals (SDGs) to transform our world:

The 17 sustainable development goals (SDGs) to transform our world: GOAL 1: No Poverty GOAL 2: Zero Hunger GOAL 3: Good Health and Well-being GOAL 4: Quality Education GOAL 5: Gender Equality GOAL 6: Clean Water and Sanitation GOAL 7: Affordable and Clean Energy GOAL 8: Decent Work and Economic Growth GOAL 9: Industry, Innovation and Infrastructure GOAL 10: Reduced Inequality GOAL 11: Sustainable Cities and Communities GOAL 12: Responsible Consumption and Production GOAL 13: Climate Action GOAL 14: Life Below Water GOAL 15: Life on Land GOAL 16: Peace and Justice Strong Institutions GOAL 17: Partnerships to achieve the Goal

ವಿಶ್ವಸಂಸ್ಥೆ/united nations

ವಿಶ್ವಸಂಸ್ಥೆ/united nations ಪ್ರಸ್ತುತ ಇಂಥ 193 ಸದಸ್ಯ ರಾಷ್ಟ್ರಗಳನ್ನುನ ಹೊಂದಿದೆ. Principal organs of UN ವಿಶ್ವಸಂಸ್ಥೆಯ ಸ್ವರೂಪವು ಐದು ಮುಖ್ಯ ಅಂಗಗಳನ್ನು ಆಧರಿಸಿರುವಂಥದ್ದು. ಅವೆಂದರೆ- 1) ಸಾಮಾನ್ಯ ಸಭೆ/General Assembly: ಇದು ಪ್ರಮುಖ ಪರ್ಯಾಲೋಚಕ ಘಟಕವಾಗಿದ್ದು ಪ್ರಾತಿನಿಧಿಕ ಸ್ವರೂಪವನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಹತ್ವವಿರುವ ಚರ್ಚಾವಿಷಯಗಳ ಕುರಿತಾಗಿ ಇದು ಠರಾವುಗಳನ್ನು ರೂಪಿಸುತ್ತದೆ. 2) ಭದ್ರತಾ ಮಂಡಳಿ/Security council: ದೇಶ ದೇಶಗಳ ನಡುವೆ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ಕಾರ್ಯಭಾರವನ್ನು ಇದಕ್ಕೆ ಹೊರಿಸಲಾಗಿದೆ. 3) ಆರ್ಥಿಕ ಮತ್ತು ಸಾಮಾಜಿಕ ಮಂಡಳಿ/Economic and social council: ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಸಹಕಾರ ಹಾಗೂ ಅಭಿವೃದ್ಧಿಯ ಪ್ರವರ್ತನೆ ಇದರ ಹೊಣೆಗಾರಿಕೆ. 4) ಆಡಳಿತ ಕಚೇರಿ/UN Secretariat: ವಿಶ್ವಸಂಸ್ಥೆಯ ವಿಭಿನ್ನ ಅಂಗಗಳ ಕಾರ್ಯನಿರ್ವಹಣೆಗೆ ಅನುವುಮಾಡಿಕೊಡುವ ಘಟಕವಿದು. 5) ಅಂತಾರಾಷ್ಟ್ರೀಯ ನ್ಯಾಯಾಲಯ/International court of Justice: ಇದು ಅತ್ಯಂತ ಮಹತ್ವದ ನ್ಯಾಯಿಕ ಅಂಗವಾಗಿದೆ.

Five Writs under A.32 and A.226 in Indian Constitution) : ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು)

Five Writs under A.32 and A.226 in Indian Constitution) : ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು) ━━━━━━━━━━━━━━━━━━━━ ●. 'ಸಂವಿಧಾನದ ಹೃದಯ' ವೆಂದು ಕರೆಯಲ್ಪಡುವ ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ. * ರಿಟ್ (Writs): ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) . ●. ಸಂವಿಧಾನದ ಅನುಚ್ಛೇದ 32(2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ. ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು. ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು. ☀ ರಿಟ್ ಗಳು (ತಡೆಯಾಜ್ಞೆಗಳು)(Writs) : 1. ಹೇಬಿಯಸ್ ಕಾರ್ಪಸ್ (Habeas Corpus) : ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು. - ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು; 1) ಸ್ವತಃ ಬಾಧಿತ ವ್ಯಕ್ತಿ. 2) ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ 2. ಮ್ಯಾಂಡಮಾಸ್ (ಆಜ್ಞೆ) (Mandamus) : ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ. ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. 3. ಪ್ರೊಹಿಬಿಷನ್ (Prohibition) : ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ. 4. ಸರ್ಶಿಯೋರರಿ (Certiorari) : ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ. 5. ಕೊ ವಾರಂಟೋ (Quowarranto) : ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ. ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ. ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ.

ಪೌರತ್ವ (5-11ನೇ ವಿಧಿ)

ಪೌರತ್ವ (5-11ನೇ ವಿಧಿ)  5 ರಿಂದ 10ನೇ ವಿಧಿಯವರೆಗೆ ಸಂವಿಧಾನ ಜಾರಿಗೊಂಡ ಸಂದರ್ಭದಲ್ಲಿ ಭಾರತದ ಪೌರತ್ವ ಹೊಂದಿದ ಜನರನ್ನು ಮಾತ್ರ ಗುರುತಿಸುತ್ತದೆ. • 11ನೇ ವಿಧಿ – ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಿದೆ. • 11ನೇ ವಿಧಿ ವಿಧಿಯನ್ವಯ ಪೌರತ್ವ ಕಾಯ್ದೆ 1955ನ್ನು ಜಾರಿಗೆ ತರಲಾಯಿತು. ಪೌರತ್ವ ಕಾಯ್ದೆ 1955 ಪೌರತ್ವ ಪಡೆದುಕೊಳ್ಳುವ ವಿಧಾನಗಳು 1. ಜನನದಿಂದ • 26 ಜನವರಿ 1950ರಿಂದ 1ನೇ ಜುಲೈ 1987ರ ನಡುವೆ ಭಾರತದಲ್ಲಿ ಜನಿಸಿದ ಯಾವುದೇ ವ್ಯಕ್ತಿ ಭಾರತೀಯ ಪೌರತ್ವವನ್ನು ಪಡೆದುಕೊಳ್ಳಬಹುದು. • 1ನೇ ಜುಲೈ 1987ರಿಂದ 3ನೇ ಡಿಸೆಂಬರ 2004ರ ನಡುವೆ ಜನಿಸಿದ ಯಾವುದೇ ಮಗುವಿನ/ವ್ಯಕ್ತಿಯ ತಂದೆ-ತಾಯಿಯಲ್ಲಿ ಯಾರಾದರೊಬ್ಬರು ಭಾರತೀಯ ಪೌರತ್ವವನ್ನು ಹೊಂದಿದ್ದರೆ, ಆ ವ್ಯಕ್ತಿ ಭಾರತದ ಪೌರತ್ವವನ್ನು ಪಡೆದುಕೊಳ್ಳಬಹುದು. • 3ನೇ ಡಿಸೆಂಬರ 2004ರಿಂದೀಚೆಗೆ (3ನೇ ಡಿಸೆಂಬರನ್ನು ಒಳಗೊಂಡಂತೆ) ಜನಿಸಿದ ವ್ಯಕ್ತಿಯ ತಂದೆ – ತಾಯಿ ಇಬ್ಬರು ಭಾರತೀಯರಾಗಿದ್ದರೆ ಅಥವಾ ಒಬ್ಬರೇ ಭಾರತಿರಾಗಿದ್ದು ಇನ್ನೊಬ್ಬರು ಕಾನೂನುಬಾಹಿರ ವಲಸೆಗಾರರಾಗಿದ್ದರೆ ಅಂತಹ ವ್ಯಕ್ತಿ ಭಾರತದ ಪೌರತ್ವ ಪಡೆದುಕೊಳ್ಳಬಹುದು. 2. ವಂಶಾನುಪ್ರಾಪ್ರಿಯಿಂದ • ಜನವರಿ 26, 1950ರಂದು ಅಥವಾ ನಂತರ ಭಾರತದ ಹೊರಗೆ ಜನಿಸಿದ ವ್ಯಕ್ತಿಯ ತಂದೆ-ತಾಯಿಯರಲ್ಲಿ ಯಾರಾದರೊಬ್ಬರು ಭಾರತದ ಪೌರತ್ವವನ್ನು ಹೊಂದಿದ್ದರೆ ಈ ನಿಯಮದನ್ವಯ ಅಂತಹ ವ್ಯಕ್ತಿಯು ಭಾರತದ ಪೌರರಾಗುತ್ತಾರೆ. • 3ನೇ ಡಿಸೆಂಬರ 2004ರಂದು ಅಥವಾ ನಂತರ ಭಾರತದ ಹೊರಗೆ ಜನಿಸಿದ ವ್ಯಕ್ತಿಯ ತಂದೆ ತಾಯಿಯಂದಿರು ಆ ಮಗು ಮತ್ತೊಂದು ದೇಶದ ಪಾಸಪೋರ್ಟ್ ಹೊಂದಿಲ್ಲವೆಂದು ಘೋಷಣೆ ಮಾಡಬೇಕು ಮತ್ತು ಭಾರತೀಯ ರಾಯಭಾರಿ ಕಛೇರಿಯಲ್ಲಿ ಆ ಮಗುವಿನ ಜನನವನ್ನು ಒಂದು ವರ್ಷದೊಳಗಡೆ ನೋಂದಣಿ ಮಾಡಿಸಿದಾಗ ಮಾತ್ರ ಅಥವಾ ಒಂದು ವರ್ಷದ ನಂತರ ಕೇಂದ್ರ ಸರ್ಕಾರದ ಪರವಾನಗಿ ಪಡೆದು ಜನನವನ್ನು ನೊಂದಣಿ ಮಾಡಿಸಿದಾಗ ಮಾತ್ರ ಅಂತಹ ಮಗು ಭಾರತದ ಪೌರತ್ವ ಪಡೆದುಕೊಳ್ಳುತ್ತದೆ. 3. ನೊಂದಾಯಿಸುವುದರ ಮೂಲಕ  ಈ ಕೆಳಗಿನ ವ್ಯಕ್ತಿಗಳು ಸೂಕ್ತ ಪ್ರಾಧಿಕಾರದ ಮುಂದೆ ನೊಂದಾಯಿಸುವುದರ ಮೂಲಕ ಪೌರತ್ವ ಪಡೆಯಬಹುದು: • ನೋಂದಣಿಗಾಗಿ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ 7 ವರ್ಷಗಳ ಕಾಲ ಭಾರತದ ನಿವಾಸಿಗಳಾಗಿರುವ ಭಾರತೀಯ ಮೂಲದ ವ್ಯಕ್ತಿಗಳು. • ಭಾರತೀಯ ವ್ಯಕ್ತಿಯೊಂದಿಗೆ ಮದುವೆಯಾಗಿರುವ ವ್ಯಕ್ತಿ ನೋಂದಣಿಯ ಮೂಲಕ ಪೌರತ್ವ ಪಡೆಯಬೇಕಾದಲ್ಲಿ ಮದುವೆಯ ನಂತರ 7 ವರ್ಷಗಳ ಕಾಲ ಭಾರತದ ವಾಸಿಯಾಗಿರಬೇಕು. • ಭಾರತದ ಪೌರತ್ವ ಪಡೆದ ವ್ಯಕ್ತಿಯ ಮಕ್ಕಳು. • ಒಂದು ವರ್ಷ ಭಾರತದಲ್ಲಿ ವಾಸವಾಗಿರುವ 5 ವರ್ಷಗಳ ಕಾಲ ಸಾಗರೋತ್ತರ ಭಾರತೀಯ ನಾಗರಿಕರೆಂದು ನೊಂದಾಯಿಸಿಕೊಂಡಿರು

356ನೇ ವಿಧಿ ದುರುಪಯೋಗ - ನಿಯಂತ್ರಣ

356ನೇ ವಿಧಿ ದುರುಪಯೋಗ - ನಿಯಂತ್ರಣ ಶಾಸಕಾಂಗ, ಕಾರ್ಯಂಗ ತಮ್ಮ ಹೊಣೆಗಾರಿಕೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ನಿಭಾಯಿಸುವಲ್ಲಿ ವಿಫಲವಾದಾಗ ಅದನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ನ್ಯಾಯಾಲಗಳು ಕಾಲದಿಂದ ಕಾಲಕ್ಕೆ ನಿಭಾಯಿಸಿಕೊಂಡು ಬಂದಿವೆ. ಈ ಕಾರಣದಿಂದಲೇ ಶಾಸಕಾಂಗ ಮತ್ತು ಕಾರ್ಯಂಗ ಕೆಲವು ಸಂದರ್ಭದಲ್ಲಿ ಪ್ರದರ್ಶಿಸುವ ಸ್ವೇಚ್ಛಾಚಾರಕ್ಕೆ ಕಡಿವಾಣ ಬಿದ್ದಿದೆ. ಇದಕ್ಕೆ ಪೂರಕವಾಗಿ ಅನೇಕ ನಿದರ್ಶನಗಳು ನಮ್ಮ ಮುಂದಿದೆ. ಸಂವಿಧಾನ ರಚನೆಗೊಂಡ ನಂತರ ಅಧಿಕಾರಸೂತ್ರ ಹಿಡಿದ ಕೇಂದ್ರ ಸರಕಾರಗಳು ಒಂದಲ್ಲ ಒಂದು ಕಾರಣದಿಂದ ಸಂವಿಧಾನದ 356ನೇ ವಿಧಿಯನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷ ದ ಸರಕಾರಗಳನ್ನು ವಜಾ ಮಾಡುತ್ತಿದ್ದವು. ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಕಾಲದಿಂದ ಕಾಲಕ್ಕೆ ಅಧಿಕಾರಸೂತ್ರ ಹಿಡಿದ ಕೇಂದ್ರ ಸರಕಾರಗಳು ನೂರಕ್ಕೂ ಹೆಚ್ಚು ಬಾರಿ ಸಂವಿಧಾನದ 356ನೇ ಕಲಂ ಪ್ರಯೋಗಿಸಿ ಜನತಾಂತ್ರಿಕವಾಗಿ ಆಯ್ಕೆಗೊಂಡ ಸರಕಾರಗಳನ್ನು ವಜಾ ಮಾಡಿವೆ. ಪ್ರಸಕ್ತ ಹಿನ್ನೆಲೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿಯವರು ಸಂವಿಧಾನದ 356ನೇ ವಿಧಿ ದುರುಪಯೋಗದ ವಿರುದ್ಧ ನಡೆಸಿದ ಕಾನೂನು ಹೋರಾಟ ನ್ಯಾಯಾಂಗ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲಿನ ತೀರ್ಪಿಗೆ ಕಾರಣವಾಯಿತು. ಸುಪ್ರೀಂಕೋರ್ಟ್‌ನ ಒಂಭತ್ತು ಸದಸ್ಯರ ನ್ಯಾಯಪೀಠ ನೀಡಿದ ತೀರ್ಪಿನ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರಕಾರಗಳನ್ನು ಮನಸ್ಸಿಗೆ ಬಂದ ಹಾಗೆ ವಜಾ ಮಾಡುವ ಕೇಂದ್ರ ಸರಕಾರದ ಸ್ವೇಚ್ಛಾಚಾರಕ್ಕೆ ಕಡಿವಾಣ ಬಿದ್ದಿದೆ. ☀️ ಸಾರ್ವಜನಿಕ ಹಿತಾಸಕ್ತಿಯ ಮನವಿ - ಇತಿಹಾಸ ಇನ್ನು ನ್ಯಾಯಾಂಗ ಇತಿಹಾಸದಲ್ಲಿಯೇ ಸಾರ್ವಜನಿಕ ಹಿತಾಸಕ್ತಿಯ ಮನವಿ ಪರಿಗಣಿಸುವ ಜನಪರ ನಿಲುವಿಗೆ ನಾಂದಿ ಹಾಡಿದವರು ನ್ಯಾಯಾಂಗ ವ್ಯವಸ್ಥೆಯ ದಂತಕಥೆ ವಿ.ಆರ್‌. ಕೃಷ್ಣ ಅಯ್ಯರ್‌. ಬಿಹಾರದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳು ಅನುಭವಿಸುತ್ತಿದ್ದ ನರಕಯಾತನೆ, ಅವರಲ್ಲಿ ಎಷ್ಟೋ ಮಂದಿ ವಿಚಾರಣಾಧೀನ ಕೈದಿಗಳು ಶಿಕ್ಷೆಗೊಳಪಟ್ಟಿದ್ದರೆ ಎಷ್ಟು ದಿನ ಜೈಲಿನಲ್ಲಿರಬೇಕಾಗಿತ್ತೋ ಅದಕ್ಕಿಂತ ಹೆಚ್ಚು ದಿನ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಕೊಳೆಯುತ್ತಿದ್ದ ಪರಿಸ್ಥಿತಿಯ ಮೇಲೆ ದಿನಪತ್ರಿಕೆಯೊಂದರ ವರದಿ ಬೆಳಕು ಚೆಲ್ಲಿತ್ತು. ಈ ಕುರಿತು ಸುಪ್ರೀಂಕೋರ್ಟ್‌ ವಕೀಲ ಕಪಿಲ್‌ ಹಿಂಗರೋಣಿ ನ್ಯಾಯಾಲಯದ ಗಮನ ಸೆಳೆದಿದ್ದರು. ಇದರ ಜೊತೆಗೆ ಸುನೀಲ್‌ ಬಾಟ್ರಾ ಎನ್ನುವ ವಿಚಾರಣಾಧೀನ ಕೈದಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್‌ ಅವರಿಗೆ ಪತ್ರವೊಂದನ್ನು ಬರೆದು ಜೈಲಿನ ನರಕ ಸದೃಶ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದ. ಇದನ್ನೇ ರಿಟ್‌ ಅರ್ಜಿಯಾಗಿ ಪರಿಗಣಿಸಿದ ಕೃಷ್ಣ ಅಯ್ಯರ್‌ ಜೈಲುಗಳು ಕೈದಿಗಳ ಪಾಲಿಗೆ ನರಕ ಆಗಬಾರದು, ಅವರ ಮನಪರಿವರ್ತಿಸುವ ಮಾನವೀಯತೆಯ ನೆಲೆಗಳಾಗಬೇಕು ಎಂದು ತೀರ್ಪು ನೀಡಿದ್ದರು. ಈ ತೀರ್ಪಿನ ನಂತರ ಜೈಲು ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳು ಘಟಿಸಿದವು. ನಂತರದ ದಿನಗಳಲ್ಲಿ ಈ ತರೆನಾದ ರಿಟ್‌ ಅರ್ಜಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎನ್ನುವ ಹೆಸರಿನಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನದ ನವಮನ್ವಂತರಕ್ಕೆ ನಾಂದಿ ಹಾಡಿದವು.

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದ ಪ್ರಮುಖ ಅಂಶಗಳು

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದ ಪ್ರಮುಖ ಅಂಶಗಳು 🐧 1. ಅಮೇರಿಕಾ. a. ಮೂಲಭೂತ ಹಕ್ಕುಗಳು. b. ಉಪರಾಷ್ಟ್ರಪತಿ. c. ನ್ಯಾಯಾಂಗ ವ್ಯವಸ್ಥೆ. 🐧2. ರಷ್ಯಾ. a. ಮೂಲಭೂತ ಕರ್ತವ್ಯಗಳು. 🐧3. ಬ್ರಿಟನ್. a. ಏಕ ನಾಗರಿಕತ್ವ. b. ಸಂಸದೀಯ ಸರ್ಕಾರ. 🐧4. ಐರ್ಲೆಂಡ್(ಐರಿಷ್). a. ರಾಜ್ಯ ನಿರ್ದೇಶಕ ತತ್ವಗಳು. 🐧5. ಜರ್ಮನಿ. a. ತುರ್ತು ಪರಿಸ್ಥಿತಿಗಳು. 🐧6. ಕೆನಡಾ. a. ಒಕ್ಕೂಟ ಸರ್ಕಾರ. b. ಸಂಯುಕ್ತ ಸರ್ಕಾರ. 🐧7. ಆಸ್ಟ್ರೇಲಿಯಾ. a. ಸಮವರ್ತಿ ಪಟ್ಟಿಗಳು. 🐧8. ದಕ್ಷಿಣ ಆಫ್ರಿಕಾ. a. ಸಂವಿಧಾನದ ತಿದ್ದುಪಡಿಗಳು. ತತ್ವಗಳು. 🐧5. ಜರ್ಮನಿ. a. ತುರ್ತು ಪರಿಸ್ಥಿತಿಗಳು. 🐧6. ಕೆನಡಾ. a. ಒಕ್ಕೂಟ ಸರ್ಕಾರ. b. ಸಂಯುಕ್ತ ಸರ್ಕಾರ. 🐧7. ಆಸ್ಟ್ರೇಲಿಯಾ. a. ಸಮವರ್ತಿ ಪಟ್ಟಿಗಳು. 🐧8. ದಕ್ಷಿಣ ಆಫ್ರಿಕಾ. a. ಸಂವಿಧಾನದ ತಿದ್ದುಪಡಿಗಳು.

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...