ಶುಕ್ರವಾರ, ನವೆಂಬರ್ 19, 2021
ಪೌರತ್ವ (5-11ನೇ ವಿಧಿ)
ಪೌರತ್ವ (5-11ನೇ ವಿಧಿ)
5 ರಿಂದ 10ನೇ ವಿಧಿಯವರೆಗೆ ಸಂವಿಧಾನ ಜಾರಿಗೊಂಡ ಸಂದರ್ಭದಲ್ಲಿ ಭಾರತದ ಪೌರತ್ವ ಹೊಂದಿದ ಜನರನ್ನು ಮಾತ್ರ ಗುರುತಿಸುತ್ತದೆ.
• 11ನೇ ವಿಧಿ – ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಿದೆ.
• 11ನೇ ವಿಧಿ ವಿಧಿಯನ್ವಯ ಪೌರತ್ವ ಕಾಯ್ದೆ 1955ನ್ನು ಜಾರಿಗೆ ತರಲಾಯಿತು.
ಪೌರತ್ವ ಕಾಯ್ದೆ 1955
ಪೌರತ್ವ ಪಡೆದುಕೊಳ್ಳುವ ವಿಧಾನಗಳು
1. ಜನನದಿಂದ
• 26 ಜನವರಿ 1950ರಿಂದ 1ನೇ ಜುಲೈ 1987ರ ನಡುವೆ ಭಾರತದಲ್ಲಿ ಜನಿಸಿದ ಯಾವುದೇ ವ್ಯಕ್ತಿ ಭಾರತೀಯ ಪೌರತ್ವವನ್ನು ಪಡೆದುಕೊಳ್ಳಬಹುದು.
• 1ನೇ ಜುಲೈ 1987ರಿಂದ 3ನೇ ಡಿಸೆಂಬರ 2004ರ ನಡುವೆ ಜನಿಸಿದ ಯಾವುದೇ ಮಗುವಿನ/ವ್ಯಕ್ತಿಯ ತಂದೆ-ತಾಯಿಯಲ್ಲಿ ಯಾರಾದರೊಬ್ಬರು ಭಾರತೀಯ ಪೌರತ್ವವನ್ನು ಹೊಂದಿದ್ದರೆ, ಆ ವ್ಯಕ್ತಿ ಭಾರತದ ಪೌರತ್ವವನ್ನು ಪಡೆದುಕೊಳ್ಳಬಹುದು.
• 3ನೇ ಡಿಸೆಂಬರ 2004ರಿಂದೀಚೆಗೆ (3ನೇ ಡಿಸೆಂಬರನ್ನು ಒಳಗೊಂಡಂತೆ) ಜನಿಸಿದ ವ್ಯಕ್ತಿಯ ತಂದೆ – ತಾಯಿ ಇಬ್ಬರು ಭಾರತೀಯರಾಗಿದ್ದರೆ ಅಥವಾ ಒಬ್ಬರೇ ಭಾರತಿರಾಗಿದ್ದು ಇನ್ನೊಬ್ಬರು ಕಾನೂನುಬಾಹಿರ ವಲಸೆಗಾರರಾಗಿದ್ದರೆ ಅಂತಹ ವ್ಯಕ್ತಿ ಭಾರತದ ಪೌರತ್ವ ಪಡೆದುಕೊಳ್ಳಬಹುದು.
2. ವಂಶಾನುಪ್ರಾಪ್ರಿಯಿಂದ
• ಜನವರಿ 26, 1950ರಂದು ಅಥವಾ ನಂತರ ಭಾರತದ ಹೊರಗೆ ಜನಿಸಿದ ವ್ಯಕ್ತಿಯ ತಂದೆ-ತಾಯಿಯರಲ್ಲಿ ಯಾರಾದರೊಬ್ಬರು ಭಾರತದ ಪೌರತ್ವವನ್ನು ಹೊಂದಿದ್ದರೆ ಈ ನಿಯಮದನ್ವಯ ಅಂತಹ ವ್ಯಕ್ತಿಯು ಭಾರತದ ಪೌರರಾಗುತ್ತಾರೆ.
• 3ನೇ ಡಿಸೆಂಬರ 2004ರಂದು ಅಥವಾ ನಂತರ ಭಾರತದ ಹೊರಗೆ ಜನಿಸಿದ ವ್ಯಕ್ತಿಯ ತಂದೆ ತಾಯಿಯಂದಿರು ಆ ಮಗು ಮತ್ತೊಂದು ದೇಶದ ಪಾಸಪೋರ್ಟ್ ಹೊಂದಿಲ್ಲವೆಂದು ಘೋಷಣೆ ಮಾಡಬೇಕು ಮತ್ತು ಭಾರತೀಯ ರಾಯಭಾರಿ ಕಛೇರಿಯಲ್ಲಿ ಆ ಮಗುವಿನ ಜನನವನ್ನು ಒಂದು ವರ್ಷದೊಳಗಡೆ ನೋಂದಣಿ ಮಾಡಿಸಿದಾಗ ಮಾತ್ರ ಅಥವಾ ಒಂದು ವರ್ಷದ ನಂತರ ಕೇಂದ್ರ ಸರ್ಕಾರದ ಪರವಾನಗಿ ಪಡೆದು ಜನನವನ್ನು ನೊಂದಣಿ ಮಾಡಿಸಿದಾಗ ಮಾತ್ರ ಅಂತಹ ಮಗು ಭಾರತದ ಪೌರತ್ವ ಪಡೆದುಕೊಳ್ಳುತ್ತದೆ.
3. ನೊಂದಾಯಿಸುವುದರ ಮೂಲಕ
ಈ ಕೆಳಗಿನ ವ್ಯಕ್ತಿಗಳು ಸೂಕ್ತ ಪ್ರಾಧಿಕಾರದ ಮುಂದೆ ನೊಂದಾಯಿಸುವುದರ ಮೂಲಕ ಪೌರತ್ವ ಪಡೆಯಬಹುದು:
• ನೋಂದಣಿಗಾಗಿ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ 7 ವರ್ಷಗಳ ಕಾಲ ಭಾರತದ ನಿವಾಸಿಗಳಾಗಿರುವ ಭಾರತೀಯ ಮೂಲದ ವ್ಯಕ್ತಿಗಳು.
• ಭಾರತೀಯ ವ್ಯಕ್ತಿಯೊಂದಿಗೆ ಮದುವೆಯಾಗಿರುವ ವ್ಯಕ್ತಿ ನೋಂದಣಿಯ ಮೂಲಕ ಪೌರತ್ವ ಪಡೆಯಬೇಕಾದಲ್ಲಿ ಮದುವೆಯ ನಂತರ 7 ವರ್ಷಗಳ ಕಾಲ ಭಾರತದ ವಾಸಿಯಾಗಿರಬೇಕು.
• ಭಾರತದ ಪೌರತ್ವ ಪಡೆದ ವ್ಯಕ್ತಿಯ ಮಕ್ಕಳು.
• ಒಂದು ವರ್ಷ ಭಾರತದಲ್ಲಿ ವಾಸವಾಗಿರುವ 5 ವರ್ಷಗಳ ಕಾಲ ಸಾಗರೋತ್ತರ ಭಾರತೀಯ ನಾಗರಿಕರೆಂದು ನೊಂದಾಯಿಸಿಕೊಂಡಿರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಎತ್ತಿತೋರಿಸಲಾದ ಪೋಸ್ಟ್
ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ
ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...
-
ಕರ್ನಾಟಕ ಭಾರತದ ಒಂದು ರಾಜ್ಯ ಇನ್ನೊಂದು ಭಾಷೆಯಲ್ಲಿ ಓದು Download PDF ವೀಕ್ಷಿಸಿ ಸಂಪಾದಿಸಿ {{#if:ಕನ್ನಡ| ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ