somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ನವೆಂಬರ್ 19, 2021

'ಪರಿಸರ ಸೂಕ್ಷ್ಮವಲಯ' (ecological Hotspots) ಎಂದರೇನು?

☀️ 'ಪರಿಸರ ಸೂಕ್ಷ್ಮವಲಯ' (ecological Hotspots) ಎಂದರೇನು? *. ರಾಷ್ಟ್ರೀಯ ಉದ್ಯಾನ, ಪಕ್ಷಿಧಾಮ ಸೇರಿದಂತೆ ಸಂರಕ್ಷಿತ ಅರಣ್ಯ ಪ್ರದೇಶವನ್ನು “ಪರಿಸರ ಸೂಕ್ಷ್ಮವಲಯ’ ಎಂದು ಘೋಷಿಸಿದರೆ ಆ ಭಾಗದ ಅರಣ್ಯ ಸಂರಕ್ಷಣೆಗೆ ಹೆಚ್ಚು ಸಹಾಯಕವಾ ಗುತ್ತದೆ. ಅಂದರೆ, ಈ ಅರಣ್ಯಕ್ಕೆ ನಿಗದಿಪಡಿಸುವ “ಬಫ‌ರ್‌ ವಲಯ’ದಲ್ಲಿ ಪರಿಸರಕ್ಕೆಹಾನಿಯಾಗುವ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಇದರಿಂದ ಅರಣ್ಯದ ಮೇಲೆ ಆಗುತ್ತಿರುವ ನೇರ ಹಾನಿಯನ್ನು ತಡೆಗಟ್ಟಲು ಸಹಾಯಕವಾಗುತ್ತದೆ. *. ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಿರುವ ಅರಣ್ಯದ ಗಡಿಯಿಂದ 100 ಮೀಟರ್‌ನಿಂದ 1 ಕಿ.ಮೀ.ವರೆಗೆ ಬಫ‌ರ್‌ ವಲಯ ಇರುತ್ತದೆ. ಈ ಭಾಗದಲ್ಲಿ ಮನೆ ನಿರ್ಮಾಣ, ಬೋರ್‌ವೆಲ್‌ ಕೊರೆಯಲು ಯಾವುದೇ ಅಡ್ಡಿ ಇಲ್ಲವಾದರೂ ಪರಿಸರಕ್ಕೆ ಹಾನಿಯಾಗುವ ಚಟುವಟಿಕೆಗಳು ನಿಷಿದ್ಧ. ಹೀಗಾಗಿ ಅರಣ್ಯ ಸಂರಕ್ಷಣೆಗೆ ಹೆಚ್ಚು ಅನುಕೂಲವಾಗುತ್ತದೆ. *. ದೇಶದಲ್ಲೇ ಮೊಟ್ಟ ಮೊದಲು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾಗಿದ್ದು ಬಂಡೀಪುರ ಅರಣ್ಯ. ಇಲ್ಲಿ 100 ಮೀಟರ್‌ನಿಂದ 7 ಕಿ.ಮೀ.ವರೆಗಿನ ಪ್ರದೇಶವನ್ನು ಬಫ‌ರ್‌ ವಲಯ ಎಂದು ಗುರುತಿಸಲಾಗಿದೆ. ಆದರೆ, ಇದೀಗ ರಾಜ್ಯ ಸರ್ಕಾರ 30 ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದ್ದರೂ ಬಫ‌ರ್‌ ವಲಯವನ್ನು 100 ಮೀಟರ್‌ನಿಂದ 1 ಕಿ.ಮೀ. ಎಂದು ನಿಗದಿಪಡಿಸಿದೆ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...