ಶುಕ್ರವಾರ, ನವೆಂಬರ್ 19, 2021
Five Writs under A.32 and A.226 in Indian Constitution) : ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು)
Five Writs under A.32 and A.226 in Indian Constitution) :
ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು)
━━━━━━━━━━━━━━━━━━━━
●. 'ಸಂವಿಧಾನದ ಹೃದಯ' ವೆಂದು ಕರೆಯಲ್ಪಡುವ ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ.
* ರಿಟ್ (Writs): ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) .
●. ಸಂವಿಧಾನದ ಅನುಚ್ಛೇದ 32(2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ. ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು. ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು.
ರಿಟ್ ಗಳು (ತಡೆಯಾಜ್ಞೆಗಳು)(Writs) :
1. ಹೇಬಿಯಸ್ ಕಾರ್ಪಸ್ (Habeas Corpus) :
ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು.
- ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು;
1) ಸ್ವತಃ ಬಾಧಿತ ವ್ಯಕ್ತಿ.
2) ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ
2. ಮ್ಯಾಂಡಮಾಸ್ (ಆಜ್ಞೆ) (Mandamus) :
ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ. ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ.
3. ಪ್ರೊಹಿಬಿಷನ್ (Prohibition) :
ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ.
4. ಸರ್ಶಿಯೋರರಿ (Certiorari) :
ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ.
5. ಕೊ ವಾರಂಟೋ (Quowarranto) :
ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ.
ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ. ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಎತ್ತಿತೋರಿಸಲಾದ ಪೋಸ್ಟ್
ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ
ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...
-
ಕರ್ನಾಟಕ ಭಾರತದ ಒಂದು ರಾಜ್ಯ ಇನ್ನೊಂದು ಭಾಷೆಯಲ್ಲಿ ಓದು Download PDF ವೀಕ್ಷಿಸಿ ಸಂಪಾದಿಸಿ {{#if:ಕನ್ನಡ| ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ