somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ನವೆಂಬರ್ 19, 2021

★ಸಾಮಾನ್ಯ ಅಧ್ಯಯನ -ಪತ್ರಿಕೆ II (General Studies Paper II)

★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ. (IAS/KAS Exams - Mains Preparation) ★ಸಾಮಾನ್ಯ ಅಧ್ಯಯನ -ಪತ್ರಿಕೆ II (General Studies Paper II) ●. 'ಸಂವಿಧಾನದ ಹೃದಯ' ವೆಂದು ಕರೆಯಲ್ಪಡುವ ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ. ☀️ ರಿಟ್ (Writs) ಎಂದರೇನು? ━━━━━━━━━━━━━━━━━━━━━━━ — ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) . ●. ಸಂವಿಧಾನದ ಅನುಚ್ಛೇದ 32(2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ. ➡️ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು. ➡️ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು. ☀ ರಿಟ್ ಗಳು (ತಡೆಯಾಜ್ಞೆಗಳು)(Writs) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• 1⃣ಹೇಬಿಯಸ್ ಕಾರ್ಪಸ್ (Habeas Corpus) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು. - ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು; 1) ಸ್ವತಃ ಬಾಧಿತ ವ್ಯಕ್ತಿ. 2) ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ 2⃣ಮ್ಯಾಂಡಮಾಸ್ (ಆಜ್ಞೆ) (Mandamus) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ. ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. 3⃣ಪ್ರೊಹಿಬಿಷನ್ (Prohibition) : •┈┈┈┈┈┈┈┈┈┈┈┈┈┈┈┈┈┈┈┈• — ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ. 4⃣ಸರ್ಶಿಯೋರರಿ (Certiorari) : •┈┈┈┈┈┈┈┈┈┈┈┈┈┈┈┈┈┈┈• — ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ. 5⃣ಕೊ ವಾರಂಟೋ (Quowarranto) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• —ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ. —ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ. ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. — ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ. ☀️ ಪರಿಸರ ಸೂಕ್ಷ್ಮ ವಲಯ (ಟಿಪ್ಪಣಿ ಬರಹ) (Eco Sensitive Zone) ━━━━━━━━━━━━━━━━━━━━━━━━━━━━━━━━━━━━━━━━ ★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ. (IAS/KAS Exams - Mains Preparation) ★ಸಾಮಾನ್ಯ ಅಧ್ಯಯನ -ಪತ್ರಿಕೆ III (General Studies Paper III) ➡️ಅತ್ಯಂತ ಮಹತ್ವದ ಜೀವ ಸಂಕುಲಗಳ ಸಂರಕ್ಷಣಾ ತಾಣಗಳಾಗಿರುವ ವಿವಿಧ ರಾಷ್ಟ್ರೀಯ ಉದ್ಯಾನವನಗಳ, ಅಭಯಾರಣ್ಯಗಳ ಸುತ್ತಲಿನ ಪ್ರದೇಶವನ್ನು ' ಪರಿಸರ ಸೂಕ್ಷ್ಮ ವಲಯ' ಎಂದು ಕರೆಯಲಾಗುತ್ತದೆ. ➡️ಜೀವ ವೈವಿಧ್ಯತೆ, ವನ್ಯ ಜೀವಿಗಳ ಆವಾಸಸ್ಥಾನಕ್ಕೆ ಇರುವ ದೂರ, ನಿಯಂತ್ರಿತ ಮಟ್ಟಕ್ಕಿಂತ ಅಧಿಕ ಪ್ರಮಾಣದಲ್ಲಿ ಕೈಗಾರಿಕೆಗಳನ್ನು, ಇತರೇ ಚಟುವಟಿಕೆಗಳನ್ನು ನಿಷೇಧಿಸುವ ಹಾಗೂ ನಿಯಂತ್ರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ 1986 ರ Environment Protection Act ನ ನೀತಿ ನಿಯಮಾವಳಿಗಳ ಸೆಕ್ಷನ್ -5(1) ನೀಡುತ್ತದೆ. ➡️ಇಲ್ಲಿ ಎಲ್ಲಾ ರೀತಿಯ ವಾಣಿಜ್ಯ ಉದ್ದೇಶದ ಕಾರ್ಯಗಳಿಗೆ ನಿಷೇಧ ವಿರುತ್ತದೆ.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar