somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಜನವರಿ 04, 2019

ಟಿಪ್ಪು ಸುಲ್ತಾನ್

Jump to navigationJump to search
ಟಿಪ್ಪು ಸುಲ್ತಾನ್
Badshah
Nasib ad-Dawlah
Sultan Fateh Ali Khan Bahadur Tipu
Tipu Sultan BL.jpg
Sultan of Mysore
ಆಳ್ವಿಕೆ29 December 1782 – 4 May 1799
ಪಟ್ಟಾಭಿಷೇಕ29 December 1782
ಪೂರ್ವಾಧಿಕಾರಿಹೈದರ್ ಅಲಿ
ಉತ್ತರಾಧಿಕಾರಿKrishnaraja Wodeyar III
ಪೂರ್ಣ ಹೆಸರು
Badshah Nasibuddaulah Sultan Fateh Ali Bahadur Sahab Tipu
ತಂದೆಹೈದರ್ ಅಲಿ
ತಾಯಿFatima Fakhr-un-Nisa
ಜನನ10 ನವೆಂಬರ್ 1750 [೧]
ದೇವನಹಳ್ಳಿ, present-day Bangalore, ಕರ್ನಾಟಕ
ಮರಣ4 ಮೇ 1799 (ವಯಸ್ಸು 48)
ಶ್ರೀರಂಗಪಟ್ಟಣ, present-day ಮಂಡ್ಯ,ಕರ್ನಾಟಕ
Burialಶ್ರೀರಂಗಪಟ್ಟಣ, present-day ಮಂಡ್ಯ,Karnataka
12°24′36″N76°42′50″ECoordinates:12°24′36″N 76°42′50″E
ಧರ್ಮIslam
Tipu Sultan like his father before him, opposed the existence of the Maratha Confederacy.
ಟಿಪ್ಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್ (೧೭೫೩ - ಮೇ ೪೧೭೯೯), ೧೭೮೨ ರಿಂದ ಮೈಸೂರು ಸಂಸ್ಥಾನದ ರಾಜ ಹಾಗೂ ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟಿಪ್ಪುವಿಗೆ ಶೇರ್-ಎ-ಮೈಸೂರ್ (ಮೈಸೂರ ಹುಲಿ) ಎಂಬ ಬಿರುದು ಉಂಟು. ಮೈಸೂರಿನ ಇತಿಹಾಸದಲ್ಲಿ ಮರೆಯಲಾಗದ ಹೆಸರು ಈತನದು.

ಪರಿವಿಡಿ

ಪರಿಚಯ

  • ಇಮ್ಮಡಿ ಕೃಷ್ಣರಾಜ ಒಡೆಯರ್ ಮರಣದ ನಂತರ, ಹೈದರ್ ಅಲಿ, ಮೈಸೂರು ಸೇನೆಯ ಮಹಾದಂಡನಾಯಕ, ಪ್ರಾಂತದ ಅಧಿಕಾರವನ್ನು ವಹಿಸಿಕೊಂಡ, ಹೈದರ್ ಅಲಿಯ ಮರಣದ ನಂತರ ಆಳ್ವಿಕೆ ಅವನ ಪುತ್ರ ಟಿಪ್ಪುಸುಲ್ತಾನನಿಗೆ ಸಿಕ್ಕಿತು. ಮೈಸೂರಿನ ಹುಲಿ ಎಂದೇ ಪ್ರಖ್ಯಾತವಾದ ಟಿಪ್ಪುಸುಲ್ತಾನ್, ದಕ್ಷಿಣ ಭಾರತದಲ್ಲಿ ಯುರೋಪಿಯನ್ ವಿಸ್ತರಣೆ ತಡೆಗಟ್ಟಲು, ನಾಲ್ಕು ಯುದ್ದಗಳನ್ನು ಮಾಡಿದ ಆಂಗ್ಲೋ-ಮೈಸೂರು ಯುದ್ದಗಳು, ಕೊನೆಯದರಲ್ಲಿ ಅವನು ಮರಣವನ್ನಪ್ಪಿದ.
  • ಮೈಸೂರು ರಾಜ್ಯ ಬ್ರಿಟಿಷ್ ರಾಜ್ಯ ಏಕೀಕರಣವಾಯಿತು.[೨]ಟಿಪ್ಪು ಸೇನಾ ತಂತ್ರಗಳನ್ನು ತನ್ನ ತಂದೆ, ಹೈದರಾಲಿಯೊಂದಿಗೆ ಇದ್ದ ಫ್ರೆಂಚ್ ಅಧಿಕಾರಿಗಳಿಂದ ಪಡೆದನು. ೧೭೬೭ ರ ಕರ್ನಾಟಕ ಯುದ್ಧದಲ್ಲಿ ಒಂದು ಅಶ್ವದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದನು. ಸೇನಾನಾಯಕನಾಗಿ ಟೀಪು ಪ್ರಸಿದ್ದಿ ಪಡೆದದ್ದು ೧೭೭೫-೭೯ ರ ಆಂಗ್ಲೋ-ಮರಾಠಾ ಯುದ್ಧದಲ್ಲಿ.
  • ೧೫ನೆಯ ವಯಸ್ಸಿನಲ್ಲಿ ತನ್ನ ತಂದೆ ಹೈದರಾಲಿಯ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿ, ಒಂದು ದೊಡ್ಡ ಸೇನಾ ತುಕಡಿಯ ನಾಯಕನಾಗಿ ೧೭೮೨ರ ಫೆಬ್ರವರಿಯಲ್ಲಿ ಆಂಗ್ಲ ಸೇನಾನಾಯಕ ಬ್ರಾತ್‍ವೈಟ್‍ನನ್ನು ಸೋಲಿಸಿದನು. [೩]

ಬಾಲ್ಯ

ಟಿಪ್ಪು ಸುಲ್ತಾನ್ ಹುಟ್ಟಿದ್ದು (೨೦ ನವಂಬರ್ ೧೭೫೦), ಇಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ (ಬೆಂಗಳೂರು ನಗರದಿಂದ ಸುಮಾರು ೩೩ ಕಿ.ಮೀ. ದೂರ)ತಂದೆ ಹೈದರ್ ತಾಯಿ ಫಾತಿಮಾ. ಟಿಪ್ಪುವಿನ ಅಜ್ಜ ಆರ್ಕಾಟ್ ನವಾಬನ ಸೇನೆಯಲ್ಲಿ ರಾಕೆಟ್ ಪಡೆಯ ಮುಖ್ಯಸ್ಥನಾಗಿದ್ದ. ಕಡಪಾ ಕೋಟೆಯ ಕಾವಲಿನ ಮುಖ್ಯಸ್ಥನ ಮಗಳು ಟಿಪ್ಪುವಿನ ಅಮ್ಮ. ಇಂಥ ವಾತಾವರಣದಲ್ಲಿ ಬೆಳೆದ ಟಿಪ್ಪುವಿಗೆ ಆಡಳಿತ, ಯುದ್ಧ, ವ್ಯೂಹ, ತಂತ್ರಗಾರಿಕೆ ಎಲ್ಲವೂ ಬಹು ಸಹಜವಾಗಿ ನೀರು ಕುಡಿದಂತೆ ಸಿದ್ಧಿಸಿತ್ತು.

ವ್ಯಕ್ತಿತ್ವ

ಟಿಪ್ಪು ತನ್ನನ್ನು ನಾಗರಿಕ ಟೀಪು ಸುಲ್ತಾನ್ ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ ಯಾವುದೇ ಸಾಮ್ರಾಜ್ಯಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು. ಅನೇಕ ಹಿಂದೂ ದೇವಾಲಯಗಳಿಗೆ ದಾನ ದತ್ತಿಗಳನ್ನು ಕೊಟ್ಟಿದ್ದನು.

ಸಾಧನೆ

In his attempts to junction with Tipu Sultan, Napoleon annexed Ottoman Egypt in the year 1798.
  1. ಮೈಸೂರನ್ನು ರಕ್ಷಿಸಲು ಬ್ರಿಟಿಷರೊಂದಿಗೆ ಹೋರಾಡಿದನು.
  2. ಬ್ರಿಟಿಷರೊಂದಿಗೆ ಹೋರಾಡಲು ನೆಪೋಲಿಯನ್ನನ ನೆರವನ್ನು ಪಡೆಯಲು ಪ್ರಯತ್ನಿಸಿದನು.
  3. ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಮೊದಲ ವ್ಯಕ್ತಿ.
  4. ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದನು.
  5. ಕುಣಿಗಲ್‍‍ನಲ್ಲಿ ಕುದುರೆ ಫಾರಂ ಸ್ಥಾಪಿಸಿದನು.
  6. ಕೇರಳದ ಮಲಬಾರಿನ ಹೆಣ್ಣುಗಳು ಮಾನ ಮುಚ್ಚಲು ರೇಷ್ಮೇ ವಸ್ತ್ರಗಳನ್ನೇ ದಾನ ಮಾಡಿದನು ಮತ್ತು ಸ್ತನ ತೆರಿಗೆಯನ್ನು ರದ್ದುಗೊಳಿಸಿದನು.
  7. ದಲಿತರ ಮೇಲಿನ ಬಹಿಷ್ಕಾರವನ್ನು ತೊಡೆದು ಹಾಕಿದನು.
  8. ಭೂ ಕಂದಾಯ ನೀತಿಯನ್ನು ಜಾರಿಗೆ ತಂದನು.

ಆಡಳಿತ

Tipu Sultan seated on his throne, by ಟೆಂಪ್ಲೇಟು:Interlanguage link multi
Tipu Sultan's summer palace at Srirangapatna, Karnataka
Mural of the Battle of Pollilur on the walls of Tipu's summer palace, painted to celebrate his triumph over the British.
Tipu Sultan's forces during the Siege of Srirangapatna.
  • ಟಿಪ್ಪು ಮೈಸೂರಿನ ಆಳರಸರಲ್ಲಿ ಒಬ್ಬ. ಕ್ರಿ. ಶ. ೧೭೫೦, ನವೆಂಬರ್ ೨೦ರಂದು ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಹುಟ್ಟಿದ. ಕೇವಲ ೪೯ ವರ್ಷ ಬದುಕಿದ ಅವನ ಶೌರ್ಯ, ಬಲಿದಾನ, ಸ್ವಾಭಿಮಾನ ಕುರಿತು ಕತೆಗಳೇ ಇವೆ. ಯುದ್ಧದ ನಾನಾ ಕಲೆಗಳಲ್ಲಿ ನಿಷ್ಣಾತರಾದ ಕುಟುಂಬದಿಂದ ಬಂದವ ಟಿಪ್ಪು. ಅಸಮರ್ಥ ಹಾಗೂ ಅದಕ್ಷ ಮೈಸೂರರಸನನ್ನು ಸಿಂಹಾಸನದಿಂದ ಕೆಳಗಿಳಿಸಿ, ತಾನು ಪ್ರವಾದಿ ಮಹಮದರ ಕುರೇಶಿ ಪಂಗಡದವನೆಂದು ಸಾರಿ ರಾಜನಾದ ಹೈದರಾಲಿಯ ಮಗ.
  • ಅನಕ್ಷರಸ್ಥನಾಗಿದ್ದ ಹೈದರಾಲಿ ಮಗ ಟಿಪ್ಪುವಿಗೆ ಸಣ್ಣಂದಿನಿಂದಲೇ ಸಕಲ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದ. ಉರ್ದು, ಪರ್ಷಿಯನ್, ಕನ್ನಡ, ಅರೇಬಿಕ್, ಕುರಾನ್, ಇಸ್ಲಾಮೀ ನ್ಯಾಯಶಾಸ್ತ್ರ, ಕುದುರೆ ಸವಾರಿ, ತೋಪು ಚಲಾಯಿಸುವುದು ಮುಂತಾದವುಗಳನ್ನೆಲ್ಲ ಕಲಿಸಲಾಯಿತು. ಹಲವು ಪರಿಣತಿಗಳಲ್ಲಿ ಜ್ಞಾನ ಸಂಪಾದಿಸಿದ ಟಿಪ್ಪು ಹೊಸ ಮೂಲೂದಿ ಇಸ್ಲಾಮಿ ಪಂಚಾಂಗ ದಿನಗಣನೆಯನ್ನು ಚಾಲ್ತಿಗೆ ತಂದ.
  • ಮೈಸೂರು ತನ್ನ ತಂದೆಯ ಕೈವಶವಾಗುತ್ತಿದ್ದದ್ದನ್ನು ಟಿಪ್ಪು ಹದಿವಯಸ್ಸಿನಲ್ಲಿ ಗಮನಿಸುತ್ತಿದ್ದ. ರಾಜಕಾರಣದ ಒಳಹೊರಗುಗಳ ಅರಿಯುತ್ತ ತಾನೂ ರೂಪುಗೊಂಡ. ಹದಿವಯಸ್ಸಿನಲ್ಲಿಯೇ ಮೊದಲ ಮೈಸೂರು ಯುದ್ಧ, ಆರ್ಕಾಟ್ ಮೇಲಿನ ದಾಳಿಯಲ್ಲಿ ಭಾಗವಹಿಸಿ ಹದಿನೇಳರ ಹೊತ್ತಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಿದ್ದ. ಟಿಪ್ಪುವಿಗೆ ಯುದ್ಧವಿದ್ಯೆ ಹೇಳಿಕೊಟ್ಟವರು ಫ್ರೆಂಚ್ ಕಮ್ಯಾಂಡರುಗಳು.
  • ೧೭೮೨ರಲ್ಲಿ ಎರಡನೆ ಮೈಸೂರು ಯುದ್ಧ ನಡೆಯುತ್ತಿರುವಾಗಲೇ ಕ್ಯಾನ್ಸರಿನಿಂದ ಹೈದರಾಲಿ ತೀರಿಕೊಂಡಾಗ ತಂದೆ ಅರ್ಧಕ್ಕೆ ಬಿಟ್ಟುಹೋದ ಯುದ್ಧ ಗೆದ್ದು ತನಗೆ ಅನುಕೂಲಕರವಾದ ಷರತ್ತು ವಿಧಿಸಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡ. ಹೀಗೆ ೩೨ ವರ್ಷದ ಟಿಪ್ಪು ವಿಶಾಲ ರಾಜ್ಯದ ಅಧಿಪತಿಯಾದ. ಬೆಂಗಳೂರಿನ ಲಾಲ್‌ಬಾಗನ್ನು ಪೂರ್ಣಗೊಳಿಸಿದ.
  • ರಸ್ತೆ, ಕೆರೆಕಟ್ಟೆ, ಅರಮನೆಗಳ ನಿರ್ಮಿಸಿದ. ಮೈಸೂರು ರೇಶಿಮೆ ಉದ್ದಿಮೆಯಾಗಿ ಬೆಳೆಯಲು ಅನುವಾಗುವಂತೆ ಹೊಸ ತೆರನ ಕಂದಾಯ ವ್ಯವಸ್ಥೆ ಜಾರಿಗೆ ತಂದ. ಫಾತುಲ್ ಮುಜಾಹಿದೀನ್ ಎಂಬ ಮಿಲಿಟರಿ ಕೈಪಿಡಿ ಬರೆದ. ಪಾನ ನಿಷೇಧ ಜಾರಿಗೊಳಿಸಿದ. ರಾಜ್ಯದ ಗಡಿಗಳನ್ನು ದಕ್ಷಿಣ, ಪಶ್ಚಿಮದತ್ತ ವಿಸ್ತರಿಸಲು ಸುಲಭವಾಯಿತು.ಆದರೆ ಒಂದು ಕಡೆ ರಾಜ್ಯದ ಗಡಿ ವಿಸ್ತಾರಗೊಳ್ಳತೊಡಗಿದ್ದರೆ ಮತ್ತೊಂದು ಕಡೆ ಸಂಕುಚಿತಗೊಳ್ಳತೊಡಗಿತ್ತು.
  • ೧೭೮೬ರ ಹೊತ್ತಿಗೆ ಮರಾಠರಿಗೆ ಮತ್ತು ನಿಜಾಮನ ಸೇನೆಗೆ ಉತ್ತರ ಕರ್ನಾಟಕದ ಬಹುಭಾಗ ಬಿಟ್ಟುಕೊಡಬೇಕಾಯಿತು. ಮರಾಠ ಪೇಶ್ವೆ ಮಾಧವ ರಾಯನ ದಳಪತಿ ನಾನಾ ಫಡ್ನವೀಸನ ಸೇನೆ ಬಾದಾಮಿ, ಕಿತ್ತೂರು, ಗಜೇಂದ್ರಗಡದವರೆಗೆ ತುಂಗಭದ್ರಾನದಿ ತನಕದ ಪ್ರದೇಶವನ್ನು ಮೈಸೂರಿನಿಂದ ಮರುವಶ ಪಡಿಸಿಕೊಂಡಿತು. ಅದೋನಿಯು ಹೈದರಾಬಾದ್ ನಿಜಾಮನ ಪಾಲಾಯಿತು.
  • ಮರಾಠರೊಡನೆ ಒಪ್ಪಂದವಾಗಿ ಟಿಪ್ಪುವು ಯುದ್ಧಖರ್ಚು ೪೮ ಲಕ್ಷ ರೂಪಾಯಿ, ವಾರ್ಷಿಕ ಕಪ್ಪ ೧೨ ಲಕ್ಷ ರೂಪಾಯಿ ಕೊಡಬೇಕಾಯಿತು. ಈ ಸೋಲಿನ ಸಿಟ್ಟಿನಿಂದ ಕುದಿಯುತ್ತಿದ್ದ ಟಿಪ್ಪು ಗಮನವನ್ನು ಮಲಬಾರಿನೆಡೆ ಹರಿಸಿದ. ಅತ್ತ ಮಲಬಾರಿಗೆ ದೊಡ್ಡ ಸೇನೆ ಒಯ್ದಾಗ ಇತ್ತ ಬ್ರಿಟಿಷರು ಮಿತ್ರಸೇನೆಯೊಡಗೂಡಿ ಮೂರನೇ ಮೈಸೂರು ಯುದ್ಧ ಕೆದರಿದರು. ಆ ಯುದ್ಧದಲ್ಲಿ ಸೋಲು ಖಚಿತವೆನಿಸತೊಡಗಿದಾಗ ಸೈನ್ಯಕ್ಕೆ ಅನ್ನನೀರು ಪೂರೈಕೆ ಸಿಗದಂತೆ ಮಾಡಿ ಒಪ್ಪಂದಕ್ಕೆ ಬರುವಂತೆ ಮಾಡಿದ.
  • ಮಿತ್ರಸೇನೆಯೊಂದಿಗೆ ಒಪ್ಪಂದವೇನೋ ಆಯಿತು. ಆದರೆ ತನ್ನ ಅರ್ಧ ಪ್ರಾಂತ್ಯ ಬಿಟ್ಟುಕೊಟ್ಟು ೩ ಕೋಟಿ ೩೦ ಲಕ್ಷ ರೂಪಾಯಿ ಯುದ್ಧ ಖರ್ಚನ್ನು ಕೊಡಬೇಕಾಯಿತು. ಅಷ್ಟು ಹಣ ಸಂದಾಯವಾಗುವವರೆಗೆ ತನ್ನಿಬ್ಬರು ಮಕ್ಕಳನ್ನು ಲಾರ್ಡ್ ಕಾರ್ನ್‌ವಾಲೀಸನ ಬಳಿ ಮದರಾಸಿನಲ್ಲಿ ಒತ್ತೆಯಿರಿಸಿ ಎರಡು ಕಂತಿನಲ್ಲಿ ಪೂರ್ತಿ ಹಣ ಕೊಟ್ಟು ಮಕ್ಕಳನ್ನು ಬಿಡಿಸಿ ತರಬೇಕಾಯಿತು.
  • ಯಾವ ಎರಡನೆ ಮೈಸೂರು ಯುದ್ಧದ ಗೆಲುವು ಟಿಪ್ಪುವನ್ನು ರಾಜನನ್ನಾಗಿಸಿತೊ ಅದೇ ಯುದ್ಧವು ಅವನ ಅತಿಗಳ ಕುರಿತೂ ಹೇಳುತ್ತದೆ. ಬ್ರಿಟಿಷರನ್ನೇನೋ ಸೋಲಿಸಲಾಯಿತು, ಆದರೆ ತಂಜಾವೂರನ್ನು ಟಿಪ್ಪುವಿನ ಪಡೆಗಳು ಬುಡಮಟ್ಟ ನಾಶಮಾಡಿದವು. ತಂಜಾವೂರು ಚೇತರಿಸಿಕೊಳ್ಳಲು ಒಂದು ಶತಮಾನ ಹಿಡಿಯಿತು. ದನಕರು, ಬೆಳೆ ನಾಶವಷ್ಟೆ ಅಲ್ಲ, ೧೨,೦೦೦ ಮಕ್ಕಳನ್ನು ಟಿಪ್ಪು ಅಪಹರಿಸಿದ ಎಂಬ ದಾಖಲಾತಿಯೂ ಇದೆ.
  • ವಸಾಹತುಶಾಹಿ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ ಟಿಪ್ಪು. ಆದರೆ ಅವ ಹೋರಾಡಿದ್ದು, ಖ್ಯಾತ ಮೈಸೂರು ರಾಕೆಟ್ಟುಗಳನ್ನು ಬಳಸಿದ್ದು ಕೇವಲ ಬ್ರಿಟಿಷರ ವಿರುದ್ಧ ಮಾತ್ರವಲ್ಲ; ಆಚೀಚಿನ ರಾಜರುಗಳಾದ ಮರಾಠರು, ತಂಜಾವೂರು-ಮಲಬಾರ್-ಶಿರಾ-ಬಿದನೂರು-ಕೊಡಗು-ತಿರುವಾಂಕೂರು ಆಳ್ವಿಕರು, ಅರ್ಕಾಟಿನ ನವಾಬ, ಹೈದರಾಬಾದಿನ ನಿಜಾಮ ಇವರ ವಿರುದ್ಧ.
  • ಕೊನೆಯತನಕ ಟಿಪ್ಪುವಿನ ಕಡುವೈರಿಗಳು ಮರಾಠರು ಮತ್ತು ಹೈದರಾಬಾದಿನ ನಿಜಾಮ. ಗತವೈಭವದ ಕನವರಿಕೆಯಲ್ಲಿ ಕೊನೆಯುಸಿರೆಳೆಯುತ್ತಿದ್ದ ಮುಘಲ್ ಸಾಮ್ರಾಜ್ಯದ ದೊರೆ ಶಾ ಅಲಂಗೆ ಟಿಪ್ಪು ತಾನೇತಾನಾಗಿ ಅಧೀನತೆಯನ್ನು ಪ್ರದರ್ಶಿಸುತ್ತಿದ್ದ. ಶಾ ಅಲಂನನ್ನು ಹಿಜ್ರಾ ಒಬ್ಬ ಕುರುಡನನ್ನಾಗಿಸಿ ಪದಚ್ಯುತಗೊಳಿಸಿದ ನಂತರ ಟಿಪ್ಪು ಮರಾಠರನ್ನು ಸೋಲಿಸಲು ಆಫ್ಘನಿಸ್ತಾನದ ದುರಾನಿ ರಾಜರನ್ನು ಸಂಪರ್ಕಿಸಿದ.
  • ಬ್ರಿಟಿಷರ ವಿರುದ್ಧ ಆಕ್ರಮಣಕ್ಕೆ ತುರ್ತು ಸಹಾಯ ಮಾಡುವಂತೆ ಟರ್ಕಿಯ ಒಟ್ಟೊಮನ್ ರಾಜರ ಸಹಾಯ ಕೇಳಿದ. ಆದರೆ ಇವರಿಗೆಲ್ಲ ರಷ್ಯಾದ ವಿರುದ್ಧ ಹೋರಾಡಲು ಬ್ರಿಟಿಷರ ಸಹಾಯ ಬೇಕಿದ್ದರಿಂದ ಟಿಪ್ಪುವಿಗೆ ಸಹಾಯ ಮಾಡಲಾರದೆ ಹೋದರು. ಕೊನೆಗೆ ಬ್ರಿಟಿಷರ ವಿರುದ್ಧ ಫ್ರೆಂಚ್ ಯುದ್ಧವೀರ ನೆಪೋಲಿಯನ್ ಬೋನಪಾರ್ಟೆಯ ಸಹಾಯಕ್ಕಾಗಿ ಪ್ರಯತ್ನಿಸಲಾಯಿತು.

ಒಂದನೆಯ ಮೈಸೂರು ಯುದ್ಧ (೧೭೬೬-೧೭೬೯)

  • ಮೈಸೂರು ರಾಜ್ಯಕ್ಕೂ ಬ್ರಿಟೀಷರಿಗೂ ನಡೆದ ಯುದ್ಧ. ಈ ಯುದ್ಧ ಸರಣಿಯಲ್ಲಿ ಮೊದಲನೆಯದು. ಮೈಸೂರಿನ ಆಡಳಿತಾಧಿಕಾರಿ ಹೈದರಾಲಿಯ ಚಟುವಟಿಕೆಗಳನ್ನು ಮದರಾಸು ಪ್ರಾಂತದ ಬ್ರಿಟೀಷರು ಗಂಭೀರವಾಗಿ ಪರಿಗಣಿಸಿದರು. ೧೭೬೬ರಲ್ಲಿ ಬ್ರಿಟೀಷರು ಹೈದರಾಬಾದಿನ ನಿಜಾಮನೊಂದಿನ ಒಪ್ಪಂದ ಮಾಡಿಕೊಂಡು, ಅದರ ಪ್ರಕಾರ, ತಮ್ಮಿಬ್ಬರ ಸಮಾನ ಶತ್ರುವಾಗಿದ್ದ ಹೈದರಾಲಿಯ ವಿರುದ್ಧ ಬಳಸಲಿಕ್ಕಾಗಿ ಸೈನ್ಯವನ್ನು ಪೂರೈಸಿದರು.
  • ಆದರೆ, ಈ ಒಪ್ಪಂದವಾದ ಸ್ವಲ್ಪ ಸಮಯದಲ್ಲಿಯೇ, ಹೈದರಾಲಿ ಮತ್ತು ನಿಜಾಮ ರಹಸ್ಯ ಒಪ್ಪಂದಕ್ಕೆ ಬಂದು, ಬ್ರಿಟೀಷರ ಕರ್ನಲ್ ಸ್ಮಿತ್‍ನ ಸಣ್ಣ ಸೇನೆಯ ಮೇಲೆ ತಮ್ಮ ಒಕ್ಕೂಟದ ೫೦,೦೦೦ ಸಿಪಾಯಿಗಳು ಮತ್ತು ೧೦೦ ತುಪಾಕಿಗಳ ಸೇನೆಯನ್ನು ನುಗ್ಗಿಸಿದರು. ಸಂಖ್ಯೆಯಲ್ಲಿ ಸಣ್ಣದಿದ್ದರೂ, ಬ್ರಿಟೀಷ್ ಪಡೆಗಳು,ಶಿಸ್ತು ಮತ್ತು ಉತ್ತಮ ತರಬೇತಿಯಿಂದಾಗಿ, ಒಕ್ಕೂಟದ ಸೇನೆಯನ್ನು ಮೊದಲು ಚೆಂಗಮ್ ಎಂಬಲ್ಲಿಯೂ ( ಸೆಪ್ಟೆಂರ್‍ ೩, ೧೭೬೭)ಮತ್ತೆ , ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ತಿರುವಣ್ಣಾಮಲೈಯಲ್ಲಿಯೂ ಹಿಮ್ಮೆಟ್ಟಿಸಿದರು.
  • ಪಶ್ಚಿಮ ತೀರದ ತನ್ನ ನವೀನ ನೌಕಾಪಡೆ ಮತ್ತು ಕೋಟೆಗಳನ್ನು ಕಳೆದುಕೊಂಡ ನಂತರ ಹೈದರಾಲಿಯು ಸಂಧಾನಕ್ಕೆ ಬಂದನು. ಈ ಸಂಧಾನದ ಕೋರಿಕೆ ತಿರಸ್ಕೃತವಾಗಲು, ಹೈದರಾಲಿಯು ತನ್ನೆಲ್ಲ ಅಳಿದುಳಿದ ಸೈನ್ಯವನ್ನು ಒಗ್ಗೂಡಿಸಿ ಬ್ರಿಟೀಷರ ಮೇಲೇರಿ ಹೋದನು. ಕರ್ನಲ್ ಸ್ಮಿತ್ ಬೆಂಗಳೂರಿಗೆ ಹಾಕಿದ್ದ ಮುತ್ತಿಗೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದಲ್ಲದೆ, ತನ್ನ ಸೇನೆಯೊಡನೆಮದರಾಸು ನಗರದ ಐದು ಮೈಲಿಯಷ್ಟು ಸಮೀಪದವರೆಗೂ ಬಂದು ತಲುಪಿದನು.
  • ಈ ಯುದ್ಧದ ಪರಿಣಾಮವಾಗಿ ಏಪ್ರಿಲ್ ೧೭೬೯ರಲ್ಲಿ, ಎರದೂ ಪಕ್ಷಗಳೂ ತಾವು ಆಕ್ರಮಿಸಿದ ಪ್ರದೇಶಗಳನ್ನು ವಾಪಸು ಮಾಡಬೇಕೆಂದು ಮತ್ತು ಯುದ್ಧಗಳಲ್ಲಿ ಪರಸ್ಪರರ ಸಹಾಯಕ್ಕೆ ಬರುವಂತೆಯೂ ಒಪ್ಪಂದವಾಯಿತು. ಈ ಒಪ್ಪಂದವನ್ನು "ಮದ್ರಾಸ್ ಒಪ್ಪಂದ" ಎಂದು ಕರೆಯುತ್ತಾರೆ.

ಎರಡನೆಯ ಮೈಸೂರು ಯುದ್ಧ (೧೭೮೦-೧೭೮೪)

  • ಮೈಸೂರು ಸಂಸ್ಥಾನಕ್ಕೂ ಬ್ರಿಟಷರಿಗೂ ನಡೆದ ಯುದ್ಧದ ಸರಣಿಯಲ್ಲಿ ಎರಡನೆಯದು. ಅಮೆರಿಕದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಹೋರಾಟದ ಫಲವಾಗಿ ಬ್ರಿಟಷರು ಮತ್ತು ಫ್ರೆಂಚರ ನಡುವೆ ನಡೆದ ಕದನದ ಸುಳಿಯಲ್ಲಿ ಫ್ರೆಂಚರ ಸ್ನೇಹದಲ್ಲಿದ್ದ ಮೈಸೂರು ಕೂಡಾ ಸಿಕ್ಕಿತು. ಆ ಕಾಲದಲ್ಲಿ ಮೈಸೂರನ್ನು ಆಳುತ್ತಿದ್ದವನು ( ರಾಜಾ ಎಂಬ ಗೌರವನಾಮ ಇಲ್ಲದಿದ್ದರೂ) ಹೈದರ್‍ ಆಲಿ.
  • ಹಿಂದೊಮ್ಮೆ ಮರಾಠರ ವಿರುದ್ಧದ ಯುದ್ಧದಲ್ಲಿ ಬ್ರಿಟಿಷರ ವಿಶ್ವಾಸಘಾತುಕತನವನ್ನು ಕಂಡು ಕಿಡಿಕಿಡಿಯಾಗಿದ್ದ ಹೈದರ್‍ ಆಲಿ ಬ್ರಿಟಿಷರೊಂದಿಗೆ ಸೇಡು ತೀರಿಸಿಕೊಳ್ಳಲು, ಫ್ರೆಂಚರ ಸಹಾಯಕ್ಕೆ ಒಮ್ಮನಸ್ಸಿನಿಂದ ಧುಮುಕಿದ. ೧೭೭೮ರಲ್ಲಿ ಬ್ರಿಟನ್ ಮೇಲೆ ಯುದ್ಧ ಸಾರಿದಾಗ, ಈಗಾಗಲೇ ಮದರಾಸಿನಲ್ಲಿ ಬಲವಾಗಿ ಬೇರು ಬಿಟ್ಟಿದ್ದ ಬ್ರಿಟೀಷರು, ಫ್ರೆಂಚರನ್ನು ಭಾರತದಿಂದ ಓಡಿಸುವ ಪಣ ತೊಟ್ಟರು.
  • ಮಲಬಾರ್‍ ತೀರದ ಮಾಹೆಯನ್ನು ಗೆದ್ದುಕೊಂಡ ಬ್ರಿಟೀಷರು, ಹೈದರನ ಆಶ್ರಿತನೊಬ್ಬನ ಕೆಲ ಭೂಭಾಗಗಳನ್ನೂ ಸ್ವಾಧೀನಕ್ಕೆ ತೆಗೆದುಕೊಂಡರು. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಹೈದರಾಲಿಯು, ಮರಾಠರು ತನ್ನಿಂದ ಕಿತ್ತುಕೊಂಡ ಪ್ರದೇಶಗಳನ್ನು ಮರುಪಡೆಯುವುದರಲ್ಲಿ ಯಶಸ್ವಿಯಾದನು.
  • ಕೃಷ್ಣಾ ನದಿಯವರೆಗೆ ಹರಡಿದ್ದ ತನ್ನ ರಾಜ್ಯದಿಂದ, ಬೆಂಕಿ ಹೊತ್ತಿ ಉರಿಯುತ್ತಿದ್ದ ಗ್ರಾಮಗಳ ಮಧ್ಯೆ, ಕಣಿವೆ, ಘಟ್ಟಗಳನ್ನು ಬಳಸಿಕೊಂಡು, ಮದರಾಸಿನಿಂದ ಕೇವಲ ೪೫ ಮೈಲಿ ( ೭೨ ಕಿ.ಮೀ.) ದೂರದ ಕಾಂಜೀವರವನ್ನು ಒಂದಷ್ಟೂ ಪ್ರತಿರೋಧ ವಿಲ್ಲದೆ ತಲುಪಿದನು. ಮದರಾಸಿನ ಸೈಂಟ್ ಥಾಮಸ್ ಮೌಂಟಿನಲ್ಲಿ ೫೨೦೦ ಸೈನಿಕರೊಂದಿಗೆ ಬೀಡುಬಿಟ್ಟಿದ್ದ, ಸರ್‍ ಹೆಕ್ಟರ್‍ ಮನ್ರೋಗೆ ಬೆಂಕಿಯ ಜ್ವಾಲೆಗಳು ಕಾಣಿಸಿದ ನಂತರವೇ ಬ್ರಿಟೀಷರ ಪ್ರತಿಕ್ರಿಯೆಗೆ ಚಾಲನೆ ಸಿಕ್ಕಿತು.
  • ಗುಂಟೂರಿಂದ ವಾಪಸು ಕರೆಸಿದ್ದ ಕರ್ನಲ್ ಬೈಲೀಯ ಕೈಕೆಳಗಿನ ಸಣ್ಣ ಸೈನ್ಯವನ್ನು ಹೈದರಾಲಿಯನ್ನು ಎದುರಿಸಲು ಕಳುಹಿಸಲಾಯಿತು. ಅಪ್ರತಿಮ ಧೈರ್ಯದಿಂದ ಕಾದಾಡಿದರೂ, ಬೈಲಿಯ ೨೮೦೦ ಜನರ ಸೇನೆ ಸಂಪೂರ್ಣ ಸೋಲಪ್ಪಿತು. ಆದಿನ ೧೭೮೦ರ ಸೆಪ್ಟೆಂಬರ್‍ ೧೦, 1982ರಲ್ಲಿ ಹೈದರಾಲಿ ಬೆನ್ನುಮೊಳೆ ರೋಗದಿಂದ ಮರಣ ಹೊಂದಿದನು. 1984ರಲ್ಲಿ ಮಂಗಳೂರು ಒಪ್ಪಂದದೊಂದಿಗೆ ಯುದ್ದ ಮುಕ್ತಾಯವಾಯಿತು.

ಮೂರನೆಯ ಮೈಸೂರು ಯುದ್ಧ (೧೭೮೯-೧೭೯೨)

General Lord Cornwallis, receiving two of Tipu Sultan's sons as hostages in the year 1793.
  • ಮೈಸೂರು ರಾಜ್ಯಕ್ಕೂ ಬ್ರಿಟಿಷರಿಗೂ ನಡೆದ ಯುದ್ಧ. ನಾಲ್ಕು ಬಾರಿ ನಡೆದ ಯುದ್ಧ ಸರಣಿಯಲ್ಲಿ ಇದು ಮೂರನೆಯದು. ಫ್ರೆಂಚರೊಂದಿಗೆ ಮೈತ್ರಿಯಿದ್ದ ಮೈಸೂರಿನ ರಾಜ ಟಿಪ್ಪು ಸುಲ್ತಾನನು ಬ್ರಿಟಿಷ್ ಅಧೀನದಲ್ಲಿದ್ದ ಟ್ರಾವಂಕೂರಿನ ಮೇಲೆ ೧೭೮೯ರಲ್ಲಿ ದಂಡೆತ್ತಿ ಹೋದನು. ಆಗ ಪ್ರಾರಂಭವಾದ ಯುದ್ಧ ಮುಂದಿನ ಮೂರು ವರ್ಷಗಳವರೆಗೆ ಮುಂದುವರೆದು ಟಿಪ್ಪೂ ಸುಲ್ತಾನನ ಪರಾಭವದೊಂದಿಗೆ ಪರ್ಯವಸಾನಗೊಂಡಿತು.
  • ತಮ್ಮದೇ ದೇಶದ ಫ್ರೆಂಚ್ ಕ್ರಾಂತಿಯನ್ನು ಎದುರಿಸುವುದರಲ್ಲಿ ಮಗ್ನರಾದ ಫ್ರೆಂಚರು, ಬ್ರಿಟಿಷರ ನೌಕಾದಳದಿಂದಲೂ ಹಿಮ್ಮೆಟ್ಟಿಸಲ್ಪಟ್ಟುದರಿಂದ, ಟಿಪ್ಪು ಸುಲ್ತಾನನ ನಿರೀಕ್ಷೆಯಂತೆ ಬೆಂಬಲ ನೀಡಲಿಲ್ಲ. ಟಿಪ್ಪು ಸುಲ್ತಾನ ರಾಕೆಟ್ಟುಗಳ ಪಡೆಯಿಂದ ಧಾಳಿ ಮಾಡಿದ್ದು ಈ ಯುದ್ಧದ ಹೆಗ್ಗಳಿಕೆ. ಈ ಧಾಳಿಯ ಪರಿಣಾಮ ನೋಡಿ ಮಾರುಹೋದ ಬ್ರಿಟಿಷ್ ವಿಜ್ಞಾನಿ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್ ರಾಕೆಟುಗಳನ್ನು ಸಂಶೋಧಿಸಿದನು.
  • ಈ ಯುದ್ಧದ ಪರಿಣಾಮವಾಗಿ ಟಿಪ್ಪುವು ತನ್ನ ರಾಜ್ಯದ ಕೆಲ ಭಾಗಗಳನ್ನು ಬ್ರಿಟಿಷರ ಬೆಂಬಲಿಗರೋ, ಏಜಂಟರೋ ಆಗಿದ್ದ ಮರಾಠರು, ಹೈದರಾಬಾದಿನ ನಿಜಾಮ ಮತ್ತು ಮದ್ರಾಸ್ಪ್ರೆಸಿಡೆನ್ಸಿಗಳವರಿಗೆ ಹಂಚಿಕೊಡಬೇಕಾಗಿ ಬಂದು, ಇದರಿಂದ ಮೈಸೂರು ರಾಜ್ಯದ ವಿಸ್ತೀರ್ಣ ತೀವ್ರವಾಗಿ ಕುಸಿಯಿತು.
  • ಮಲಬಾರ್‍, ಸೇಲಂ, ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಹೋದವು. ಈ ಯುದ್ಧದ ಕೊನೆಯಲ್ಲಿ ಶ್ರೀರಂಗಪಟ್ಟಣದ ಒಪ್ಪಂದವಾಗಿ, ಅದರ ಪ್ರಕಾರ ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದ್ದಷ್ಟೇ ಅಲ್ಲದೇ, ತನ್ನಿಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಬೇಕಾಗಿ ಬಂದಿತು.

ನಾಲ್ಕನೆಯ ಮೈಸೂರು ಯುದ್ಧ (೧೭೯೮ – ೧೭೯೯)

  • ಬ್ರಿಟೀಷರಿಗೂ ಮೈಸೂರು ರಾಜ್ಯಕ್ಕೂ ನಡೆದ ಯುದ್ಧ ಸರಣಿಯಲ್ಲಿ ನಾಲ್ಕನೆಯ ಹಾಗೂ ಕಡೆಯ ಯುದ್ಧ. ಆಗಿನ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಪದವಿಯು ಲಾರ್ಡ್ ಕಾರ್ನವಾಲೀಸನಿಂದ ಜನರಲ್ ಹ್ಯಾರಿಸನಿಗೆ ಹಸ್ತಾಂತರ ಗೊಂಡಿತ್ತು. ೧೭೯೮ರಲ್ಲಿ ನೆಪೋಲಿಯನ್, ಭಾರತವನ್ನು ಹೆದರಿಸುವ ಉದ್ದೇಶದಿಂದ, ಈಜಿಪ್ಟಿನಲ್ಲಿ ಬಂದಿಳಿದ. ಈ ಉದ್ದೇಶ ಸಾಧನೆಗೆ, ಫ್ರಾನ್ಸಿನ ಮಿತ್ರನಾಗಿದ್ದ, ಮೈಸೂರಿನ ದೊರೆ ಟಿಪ್ಪು ಸುಲ್ತಾನ ಮುಖ್ಯವಾಗಿದ್ದ.
  • ಹೊರಾಷಿಯೋ ನೆಲ್ಸನ್ನನು ನೆಪೋಲಿಯನ್ನನನ್ನು ನೈಲ್ ಯುದ್ಧದಲ್ಲಿ ಸೋಲಿಸಿ, ಈ ಆಸೆಯನ್ನು ಭಂಗಗೊಳಿಸಿದರೂ, ಮೂರು ಸೇನೆಗಳು ( ಒಂದು ಬಾಂಬೆ, ಎರಡು ಬ್ರಿಟೀಶ್ ) ಅಷ್ಟಕ್ಕೆ ನಿಲ್ಲದೆ ಮುನ್ನುಗ್ಗಿ ೧೭೯೯ರಲ್ಲಿ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದವು. ಮೇ ನಾಲ್ಕರಂದು ಈ ಸೇನೆಗಳು ಕೋಟೆಯ ಭಾಗವೊಂದನ್ನು ಭಗ್ನಮಾಡಿ, ಒಳನುಗ್ಗತೊಡಗಿದರು. ಅಲ್ಲಿಗೆ ಧಾವಿಸಿದ ಟಿಪ್ಪು ಸುಲ್ತಾನ ಗುಂಡೇಟಿನಿಂದ ಅಸುನೀಗಿದ.
  • ಈ ಕಾರ್ಯದಲ್ಲಿ ಟಿಪ್ಪುವಿನ ಸೇನಾಧಿಕಾರಿ ಮೀರ್ ಸಾದಕ್ ಎಂಬಾತ, ಬ್ರಿಟೀಷರೊಂದಿಗೆ ಶಾಮೀಲಾಗಿ, ಟಿಪ್ಪುವಿಗೆ ಎರಡು ಬಗೆದನು. ಯುದ್ಧದ ತೀವ್ರವಾಗಿದ್ದ ಸಮಯದಲ್ಲಿ ಮೀರ್ ಸಾದಕನು, ತನ್ನ ಸೇನಾ ತುಕಡಿಯನ್ನು ಸಂಬಳ ಪಡೆದುಕೊಳ್ಳಲು ಕಳುಹಿಸಿ, ಆ ಮೂಲಕ, ಬ್ರಿಟೀಷರು ಗೋಡೆ ಒಡೆದು ಒಳಬರಲು ಅನುವುಮಾಡಿಕೊಟ್ಟನು. ಅಷ್ಟೇ ಅಲ್ಲ, ನೆಲಮಾಳಿಗೆಯಲ್ಲಿ ಶೇಖರಿಸಿದ್ದ ಮದ್ದುಗುಂಡುಗಳ ಮೇಲೆ ನೀರು ಹೊಯ್ದು, ಅವು ನಿರುಪಯುಕ್ತವಾಗುವಂತೆ ಮಾಡಿದನು.
  • ಈ ಯುದ್ಧದಲ್ಲಿ ಟಿಪ್ಪು ಸುಲ್ತಾನನು ರಾಕೆಟ್ಟುಗಳ ಉಪಯೋಗ ಮಾಡಿದ್ದು ಗಮನಾರ್ಹವಾಗಿತ್ತು. ಮೂರನೆಯ ಮತ್ತು ನಾಲ್ಕನೆಯ ಮೈಸೂರು ಯುದ್ಧಗಳಲ್ಲಿ ಈ ರಾಕೆಟ್ಟುಗಳ ಪರಿಣಾಮದಿಂದ ಪ್ರಭಾವಿತನಾದ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್ ರಾಕೆಟ್ಟುಗಳನ್ನು ಸಂಶೋಧಿಸಿದನು. ಈ ಯುದ್ಧದ ಪರಿಣಾಮವಾಗಿ ಮೈಸೂರು ಬ್ರಿಟೀಷರ ವಶಕ್ಕೆ ಬಂದಿತು.
  • ಒಡೆಯರ್ ವಂಶಕ್ಕೆ ಮರಳಿ ಅಧಿಕಾರ ದೊರೆತು, ಅವರಿಗೆ ಸಲಹಾಕಾರರಾಗಿ ಬ್ರಿಟೀಷ್ ಕಮೀಷನರು ನೇಮಿಸಲ್ಪಟ್ಟರು. ಟಿಪ್ಪುವಿನ ಎಳೆಯ ಮಗ ಮತ್ತು ಉತ್ತರಾಧಿಕಾರಿ ಫತೇ ಆಲಿಯನ್ನು ಗಡೀಪಾರು ಮಾಡಲಾಯಿತು. ಮೈಸೂರು ರಾಜ್ಯವು ಬ್ರಿಟೀಷ್ ಅಧೀನ ಸಂಸ್ಥಾನವಾಯಿತು. ಕೊಯಮತ್ತೂರು, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಬ್ರಿಟೀಷ್ ಭಾರತದ ಭಾಗವಾದವು.

ರಾಕೆಟ್ ಬಳಕೆ

Cannon used by Tipu Sultan's forces at the battle of Srirangapatna1799
  • ಹೈದರಾಲಿ ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ‘ಮೈಸೂರು ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿದ. ಮುಂದೆ ಚೂಪಾದ ಬ್ಲೇಡು ಕಟ್ಟಿ, ಕಬ್ಬಿಣದ ಕೇಸುಗಳೊಳಗೆ ಮದ್ದಿನಪುಡಿ ತುಂಬಿದ್ದರಿಂದ ಅವುಗಳ ದೂರಗಾಮಿತ್ವ ಎರಡು ಕಿ.ಮೀ.ನಷ್ಟು ಹೆಚ್ಚಾಯಿತು. ಮೊದಲು ಈ ರಾಕೆಟ್ಟುಗಳನ್ನು ಎದುರುಗೊಂಡಾಗ ಬ್ರಿಟಿಷರ ತಂತ್ರಜ್ಞಾನ ಅದಕಿಂತ ಹಿಂದಿತ್ತು. ಎಂದೇ ಮೊದಲ ಯುದ್ಧಗಳನ್ನು ಟಿಪ್ಪು ಗೆಲ್ಲಲು ಸಾಧ್ಯವಾಯಿತು.

ಟಿಪ್ಪು ಚರಿತ್ರೆ ಕಾಲದ ನಾಣ್ಯಗಳು

  • ಆ ನಾಣ್ಯಗಳಿಗೆ ಎರಡು ಭಿನ್ನ ಮುಖಗಳಿರುತ್ತವೆ. ಎರಡು ಮುಖಗಳನ್ನು ಆ ಕಾಲದ ಅಗತ್ಯವು ರೂಪುಗೊಳಿಸಿರುತ್ತದೆ. ಚರಿತ್ರೆ ಕಾಲದ ನೀತಿಕೋಶವೇ ಬೇರೆ. ನ್ಯಾಯ, ನೀತಿ ಎಂಬ ಪದಗಳ ಅರ್ಥವೇ ಬೇರೆ. ಅವನ್ನು ಇವತ್ತು ಎಳೆತರುವುದು, ಹೋಲಿಸುವುದು ಸಾಧುವಲ್ಲ. ಕೊನೆಗೂ ಚರಿತ್ರೆಯೆಂದರೆ ಏನೆಂದು ನಿರ್ಣಯವಾಗಬೇಕಾದ್ದು ಆಕರಗಳಿಂದ ಮಾತ್ರವಲ್ಲ, ನ್ಯಾಯಸೂಕ್ಷ್ಮದ ಮನಸುಗಳಲ್ಲೇ ಎಂದು ನೆನಪಿಸಿಕೊಳ್ಳುತ್ತ ಟಿಪ್ಪು ಸುಲ್ತಾನನ ಎರಡು ಭಿನ್ನ ವ್ಯಕ್ತಿತ್ವಗಳನ್ನು ಪೂರ್ವಗ್ರಹಗಳನ್ನಿಟ್ಟುಕೊಳ್ಳದ ಚರಿತ್ರೆಯ ಆಕರಗಳಿಂದ ಇಲ್ಲಿಡಲಾಗಿದೆ.

ಟಿಪ್ಪುವಿನ ಕೊನೆಯ ದಿನಗಳು

ಕೊನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆ ಕೋಟೆ ಒಡೆದು ಒಳ ಪ್ರವೇಶಿಸಿದಾಗ ಟಿಪ್ಪುವಿನ ಮಿಲಿಟರಿ ಸಲಹಾಕಾರನಾಗಿದ್ದ ಫ್ರೆಂಚ್ ಅಧಿಕಾರಿ ಸುರಕ್ಷಿತ ಜಾಗಕ್ಕೆ ಓಡಿಹೋಗುವಂತೆ ಅಥವಾ ಶರಣಾಗುವಂತೆ ಟಿಪ್ಪುವಿಗೆ ಹೇಳಿದ. ಆದರೆ ‘ಒಂದು ದಿನ ಹುಲಿಯಂತೆ ಬದುಕುವುದು, ಸಾವಿರವರ್ಷ ಕುರಿಯಂತೆ ಬದುಕಿರುವುದಕ್ಕಿಂತ ಉತ್ತಮವೆಂದು ಟಿಪ್ಪು ಹೋರಾಟವನ್ನೇ ಆಯ್ದುಕೊಂಡ. ಹುಲಿಯಂತೆ ಬದುಕಬೇಕೆಂದು ತಮ್ಮ ರಾಜ ಬಯಸಿದ್ದಕ್ಕೆ ಮೈಸೂರಿನ ೧೧,೦೦೦ ಸೈನಿಕರು ಪ್ರಾಣ ತೆರಬೇಕಾಯಿತು. ಕಾವೇರಿ ಕೆಂಪಾಗಿ ಹರಿಯಿತು.

ಟಿಪ್ಪು ಕುರಿತ ಕೃತಿಗಳು

‘ಅಪ್ರತಿಮ ದೇಶಭಕ್ತ ಟೀಪುಸುಲ್ತಾನ್’

  • ಕನ್ನಡದ ಹಿರಿಯ ಲೇಖಕರಾದ ಕೋ. ಚೆನ್ನಬಸಪ್ಪ ಅವರು ಸಂಗ್ರಹಿಸಿ, ಸಂಪಾದನೆ ಮಾಡಿರುವ ಕೃತಿ ‘ಅಪ್ರತಿಮ ದೇಶಭಕ್ತ ಟೀಪುಸುಲ್ತಾನ್’. ಈ ಕೃತಿ ಸಂಶೋಧನೆಗೆ ಸಂಬಂಧಪಟ್ಚಿರುವುದು. ಆದುದರಿಂದಲೇ, ಇದರಲ್ಲಿ ಲೇಖಕರಾಗಿ ಗುರುತಿಸಿ ಕೊಳ್ಳದೆ, ಈ ಸಂಶೋಧನೆಯ ಹಿಂದಿರುವ ದಾಖಲೆಗಳಿಗೆ ಲೇಖಕರು ಕೃತಜ್ಞತೆ ಸಲ್ಲಿಸಿದ್ದಾರೆ. ಟೀಪು ಸುಲ್ತಾನ್‌ನ ಕುರಿತಂತೆ ರಾಜಕೀಯ ಕಾರಣಗಳಿಗೆ ಅಪಪ್ರಚಾರ ಮಾಡುತ್ತಿರುವ ಸಂಚುಗಳನ್ನು ಈ ಕೃತಿ ಬಯಲಿಗೆಳೆಯುತ್ತದೆ.
  • ಟೀಪು ಸುಲ್ತಾನ್ ತನ್ನ ಬದುಕಿನುದ್ದಕ್ಕೂ ಹೇಗೆ ‘ರಾಜಧರ್ಮ’ವನ್ನು ಪಾಲಿಸಿದ್ದ ಎನ್ನುವ ಸತ್ಯವನ್ನು ಈ ಕೃತಿ ತೆರೆದಿಡುತ್ತದೆ. ದಿ. ತೀ. ತಾ. ಶರ್ಮಾರ ಗ್ರಂಥವನ್ನು ಮುಂದಿಟ್ಟುಕೊಂಡು ಟಿಪ್ಪು ಸುಲ್ತಾನ್ ಹೇಗೆ ಮರಾಠರು ಸೇರಿದಂತೆ ಅನ್ಯರಿಂದ ಕನ್ನಡದ ಹಿಂದೂಗಳಿಗೆ ತೊಂದರೆಯಾದಾಗ ಅವರ ರಕ್ಷಣೆಗೆ ಧಾವಿಸಿದ ಎನ್ನುವುದನ್ನು ಮೊದಲ ಅಧ್ಯಾಯದಲ್ಲಿ ದಾಖಲಿಸುತ್ತಾರೆ. ಅಷ್ಟೇ ಅಲ್ಲ, ಟಿಪ್ಪು ಅಪ್ಪಟ ದೇಶಭಕ್ತ ಎನ್ನುವುದನ್ನು ದಾಖಲೆಗಳ ಸಹಿತ ಕೃತಿಯಲ್ಲಿ ನಿರೂಪಿಸುತ್ತಾರೆ.
  • ಟಿಪ್ಪು ತನ್ನ ಆಳ್ವಿಕೆಯಲ್ಲಿ ರೈತರಿಗೆ, ದಲಿತರಿಗೆ ಹೇಗೆ ನೆರವಾದ ಎನ್ನುವ ಅಂಶವೂ ಈ ಕೃತಿಯಲ್ಲಿದೆ. ಹಾಗೆಯೇ ಟೀಪುವಿನ ಕುರಿತಂತೆ ಹರಡಿರುವ ‘ಮತಾಂತರ’ದ ಹಿಂದಿರುವ ರಾಜಕೀಯ ಏನು ಎನ್ನುವುದನ್ನು ಈ ಕೃತಿ ತೆರೆದಿಡುತ್ತದೆ. ‘ಬ್ರಿಟಿಷರಿಗೆ ನೆರವಾದವರ ಕತೆ’ ಇದರ ಕೊನೆಯ ಅಧ್ಯಾಯ. ಈ ಅಧ್ಯಾಯ ನಿಜವಾದ ದೇಶದ್ರೋಹಿಗಳು ಮತ್ತು ದೇಶಪ್ರೇಮಿಗಳು ಯಾರು ಎನ್ನುವ ಬೆಚ್ಚಿ ಬೀಳು ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತದೆ.
  • ಟಿಪ್ಪುವಿನ ದುರಂತಕ್ಕೆ ಕಾರಣರಾದ ದೇಶದ್ರೋಹಿಗಳನ್ನು ಈ ಅಧ್ಯಾಯ ತೆರೆದಿಡುತ್ತದೆ. ರಾಜಕೀಯ ವಿರೋಧಿಗಳನ್ನು ಟಿಪ್ಪು ಹಿಂಸಿಸಿರಬಹುದು. ಅದು ಅಂದಿನ ರಾಜಕೀಯ ಕಾಲಘಟ್ಟದಲ್ಲಿ ಅನಿವಾರ್ಯ. ಆದರೆ ಧರ್ಮದ ಹೆಸರಿನಲ್ಲಿ ಎಂದೂ ಟಿಪ್ಪು ಸುಲ್ತಾನ್ ಯಾರನ್ನೂ ಬೆದರಿಸಿರಲಿಲ್ಲ. ಜೊತೆಗೆ ಅವನು ಜಾತ್ಯತೀತನಾಗಿ ತನ್ನ ಕರ್ತವ್ಯವನ್ನು ಪಾಲಿಸಿದ ಎನ್ನುವುದನ್ನು ಈ ಕೃತಿ ಹೇಳುತ್ತದೆ. ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಮುಖಬೆಲೆ 40 ರೂ.[೪][೫]

ಧಾರಾವಾಹಿಯಾಗಿ

ಗಿದ್ವಾನಿಯವರ - 'ದಿ ಸ್ವೋರ್ಡ್ ಆಫ್ ಟೀಪು ಸುಲ್ತಾನ್ ' ಎಂಬ ಕೃತಿಯು ಹಿಂದಿಯಲ್ಲಿ ಪ್ರಸಿದ್ದವಾಗಿದೆ. ಈ ಕೃತಿಯಲ್ಲಿ ಟೀಪ್ಪು ಒಬ್ಬ ಅಪ್ರತಿಮ ದೇಶಪ್ರೇಮಿ ಎಂಬಂತೆ ಚಿತ್ರಿಸಲಾಗಿದೆ. ಇದು ಹಿಂದಿ ಧಾರವಾಹಿಯಾಗಿಯೂ ಪ್ರಸಿದ್ದಿ ಪಡೆದಿತ್ತು. ಸಂಜಯಖಾನ್ ಎಂಬ ನಟ ಟಿಪ್ಪುವಿನ ಪಾತ್ರ ಮಾಡಿದ್ದನು. ಆ ಧಾರವಾಹಿಯ ಸಂದರ್ಭದಲ್ಲಿ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಬೆಂಕಿ ಅಪಘಾತಕ್ಕೆ ಒಳಗಾಗಿ, ಅಪಾರ ಸಾವು-ನೋವು ಸಂಭವಿಸಿತ್ತು.

ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ

  • ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯು ರಾಷ್ಟ್ರೀಯ ಹಬ್ಬವಾಗಲಿ ಮತ್ತು ಆ ದಿವಸವನ್ನು ರಾಷ್ಟ್ರೀಯ ರಜಾ ದಿನವೆಂದು ಘೋಸಿಸಬೇಕೆಂದು ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ‍್ ಇಂದಿಲ್ಲಿ ಹೇಳಿದರು. ಅವರು ಇಲ್ಲಿ ಇಂದು ತಮ್ಮ ಪಕ್ಷದ ವತಿಯಿಂದ ಆಯೋಜಿಸಿದ್ದ ಟಿಪ್ಪು ಸುಲ್ತಾನ್‍ರ ೨೬೩ನೆಯ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಅಭಿಪ್ರಾಯಪಟ್ಟರು. ಟೀಪು ಸುಲ್ತಾನ್ ಅತಿ ದೊಡ್ಡ ದೇಶ ಭಕ್ತ ಮತ್ತು ನಮ್ಮ ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ಬಿಟ್ಟರು. ಆದರೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಈ ಹುತಾತ್ಮನ ದೇಶ ಭಕ್ತಿಯನ್ನು ನಿರ್ಲಕ್ಷಿಸಿದ್ದಾರೆ. ಟೀಪು ಸುಲ್ತಾನ್ ರ ಪ್ರತಿಮೆಯನ್ನು ಸಂಸತ್ತಿನ ಮತ್ತು ವಿಧಾನ ಸಭೆಯ ಎದುರುಗಡೆ ಸ್ಥಾಪಿಸಬೇಕೆಂದು ಅವರು ಅಭಿಪ್ರಾಯ ಪಟ್ಟರು. ಟಿಪ್ಪುವಿನ ಹಲವಾರು ಐತಿಹಾಸಿಕ ಸ್ಥಳಗಳು ಇಂದು ನಿರ್ಲಕ್ಶಕ್ಕೊಳಗಾಗಿದೆ. ಅವುಗಳಿಗೆ ಯಾವುದೊಂದು ರಕ್ಷಣೆಯನ್ನು ಸರಕಾರ ಒದಗಿಸಿಲ್ಲ. ಇದಕ್ಕೆ ಎರಡು ಸರಕಾರಗಳ ನಿರ್ದಾಕ್ಷಣ್ಯವೆ ಸಾಕ್ಷಿ. ಆದುದರಿಂದ ಈ ಕೂಡಲೇ ಸರಕಾರಗಳು ಎಚ್ಚೆತ್ತು ಟಿಪ್ಪುವಿನ ಐತಿಹಾಸಿಕ ಸ್ಮಾರಕಾಗಳಿಗೆ ರಕ್ಷಣೆ ಕೊಡಬೇಕೆಂದು ಹೇಳಿದರು [೬]
  • ಇತ್ತೀಚೆಗೆ ನಡೆದ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಗಲಭೆಯಾಗಿ ಇಬ್ಬರು ಸಾವನ್ನಪ್ಪಿದರು.

ವಿವಾದ

ಟಿಪ್ಪು ಸುಲ್ತಾನನ ಜಯಂತಿ ವಿವಾದ

  • ಕರ್ನಾಟಕ ಸರಕಾರ 2015ನೇ ಇಸವಿಯ ನವೆಂಬರ್ 10ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿತು. ಈ ಸರಕಾರೀ ಕಾರ್ಯಕ್ರಮವನ್ನು ನಡೆಸಲು ಪ್ರತಿ ಜಿಲ್ಲೆಗೆ 50 ಸಾವಿರ ಮತ್ತು ಪ್ರತಿ ತಾಲೂಕಿಗೆ 25 ಸಾವಿರ ರುಪಾಯಿಗಳಂತೆ ಒಟ್ಟು 80 ಲಕ್ಷವನ್ನು ವ್ಯಯಿಸಲಾಯಿತು. ನಾಡಹಬ್ಬ ದಸರಾ ಆಚರಿಸಲು ದುಡ್ಡಿಲ್ಲದೆ ಪರದಾಡುತ್ತಿದ್ದ ಸರಕಾರಕ್ಕೆ ಟಿಪ್ಪು ಜಯಂತಿ ಎಂಬ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲು ಇಷ್ಟೊಂದು ದುಡ್ಡು ಎಲ್ಲಿಂದ ಸಿಕ್ಕಿತು ಎನ್ನುವುದು ಯಕ್ಷಪ್ರಶ್ನೆ!
  • ಇರಲಿ, ಈ ಜಯಂತಿಯಾದರೂ ಸುಸೂತ್ರವಾಗಿ ನಡೆದಿದ್ದರೆ; ಒಂದಷ್ಟು ಒಳ್ಳೆಯ ಕೆಲಸಗಳು ಆ ಮೂಲಕವಾದರೂ ಆಗಿದ್ದರೆ ರಾಜ್ಯದ ಜನ ನೆಮ್ಮದಿ ಕಾಣುತ್ತಿದ್ದರೋ ಏನೋ. ಆದರೆ, ಈ ಜಯಂತಿ ಜನರ ಕಾರ್ಯಕ್ರಮವಾಗದೆ ಕೇವಲ “ಸರಕಾರಿ ಆಚರಣೆ” ಮಾತ್ರವೇ ಆಗಿ ಉಳಿಯಿತು. ಸರಕಾರದ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತ ಒಬ್ಬ ಬುದ್ಧಿಜೀವಿ, “ಈಗಾಗಲೇ ಹಲವು ಜಾತಿ-ಕೋಮುಗಳ ಜನರಿಗೆ ಬೇಕಾದ ಜಯಂತಿಗಳಿವೆ.
  • ಆದರೆ ಮುಸ್ಲಿಮರಿಗೆ ಹೇಳಿಕೊಳ್ಳುವಂಥ ಯಾವುದೇ ಸರಕಾರೀ ಕಾರ್ಯಕ್ರಮ ಇರಲಿಲ್ಲ. ಈಗ ಶುರು ಮಾಡಿರುವ ಜಯಂತಿಯನ್ನು ಆ ನಿಟ್ಟಿನಲ್ಲಿ ಯೋಚಿಸಿ ಸ್ವಾಗತಿಸಬೇಕು” ಎಂಬ ಮಾತುಗಳನ್ನು ಆಡಿದರು. ಜಯಂತಿಗಳನ್ನು ರಾಜ್ಯದಲ್ಲಿರುವ ವಿವಿಧ ಜಾತಿ-ಪಂಗಡಗಳನ್ನು ಮೆಚ್ಚಿಸಲಿಕ್ಕಾಗಿ ಆಚರಿಸಲಾಗುತ್ತದೆ ಎಂಬ ಸತ್ಯ ಅವರ ಈ ಮಾತುಗಳ ಮೂಲಕ ಹೊರಬಿದ್ದಿದೆ.
  • ಟಿಪ್ಪು ಜಯಂತಿಯನ್ನು ಆಚರಿಸಿರುವುದು ಕೇವಲ ಮುಸ್ಲಿಮ್ ಸಮುದಾಯವನ್ನು ಮೆಚ್ಚಿಸಲಿಕ್ಕಾಗಿ ಎಂಬ ಸರಕಾರದ ಅಜೆಂಡವನ್ನು ಸರಕಾರೀ ಸಾಹಿತಿ ಬಾಯಿತಪ್ಪಿ ಹೇಳಿಬಿಟ್ಟಿದ್ದಾರೆ! ಟಿಪ್ಪು ಜಯಂತಿ ಒಂದಲ್ಲ ಹಲವು ವಿವಾದಗಳಿಗೆ ಕಾರಣವಾಯಿತು. ಯಾವುದೇ ಒಂದು ವ್ಯಕ್ತಿಯ ಹುಟ್ಟುಹಬ್ಬದ ಆಚರಣೆಯ ವಿಷಯಕ್ಕೆ ಮೂರು ಹೆಣಗಳು ಉರುಳಿದ ಚರಿತ್ರೆ ಕರ್ನಾಟಕದಲ್ಲಿ ಇರಲಿಲ್ಲ.
  • ಟಿಪ್ಪು ಜಯಂತಿಯ ಆಸುಪಾಸು ಸಂಪೂರ್ಣ ವಿರುದ್ಧ ಕ್ರಿಯೆ, ಪ್ರತಿಕ್ರಿಯೆಗಳನ್ನು ಈ ನಾಡು ಕಂಡಿತು. ಮೈಸೂರು ಆಳಿದ ಅರಸನ ಆರಾಧನೆ, ನಿಂದನೆ ಎರಡೂ ನಡೆದವು. ಒಂದು ವರ್ಗವು ಟಿಪ್ಪುವನ್ನು ಅನನ್ಯ ದೇಶಪ್ರೇಮಿ, ಸೆಕ್ಯುಲರ್ ರಾಜ, ಜಮೀನ್ದಾರಿ ಪದ್ಧತಿ ಕೊನೆಗೊಳಿಸಲೆತ್ನಿಸಿದ ಕ್ರಾಂತಿಕಾರಿ ಸುಲ್ತಾನ, ಶೃಂಗೇರಿ-ನಂಜನಗೂಡು-ಮೇಲುಕೋಟೆ ಮುಂತಾದ ದೇವಾಲಯಗಳಿಗೆ ದತ್ತಿಕಾಣಿಕೆ ನೀಡಿದ ಸಹಿಷ್ಣುವೆಂದು ಬಿಂಬಿಸಿದರೆ;
  • ಮತ್ತೊಂದು ವರ್ಗವು ಅವನು ಸೋತ ಪ್ರದೇಶಗಳಲ್ಲಿ ಮಾಡಿದ ಲೂಟಿ ಮತ್ತು ನಾಶವನ್ನು ನೆನಪಿಸಿಕೊಂಡು ಕಾಫಿರರನ್ನು ಸೋಲಿಸಿ ಹಿಂಸಿಸಿ ಇಸ್ಲಾಂ ಸಾಮ್ರಾಜ್ಯ ಕಟ್ಟಹೊರಟ ಮತಾಂಧ ಎಂದು ಜರೆಯಿತು. ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಇರುವಂಥವೇ ಎಂದಿಟ್ಟುಕೊಂಡು ವಿರುದ್ಧ ಪ್ರತಿಕ್ರಿಯೆಗಳನ್ನು ಅತ್ತ ಸರಿಸುವಂತಿಲ್ಲ. ಧಾರ್ಮಿಕ ಅಸಹನೆ ಉತ್ತುಂಗ ಮುಟ್ಟಿರುವ ೨೦೧೫ರಲ್ಲಿ ಕನ್ನಡಿಗ ಮುಸ್ಲಿಮರಿಗೆ ಟಿಪ್ಪು ಸುಲ್ತಾನ್ ಮಾದರಿ ನಾಯಕನ ಗುಣಗಳ ಹೊಂದಿದ್ದನೆ?
  • ವಸಾಹತುಶಾಹಿ ಕಾಲದ ರಾಜನಿಗೆ ಪ್ರಜಾಪ್ರಭುತ್ವ ಭಾರತಕ್ಕೆ ಮಾದರಿಯಾಗುವ ಸೆಕ್ಯುಲರ್ ಲಕ್ಷಣ ಗಳಿದ್ದವೆ? ಮುಸ್ಲಿಂ ಸಮುದಾಯದ ಬದುಕು ಸುಧಾರಿಸುವುದು ಆಳುವವರ ಇಂಥ ನಡೆಗಳಿಂದಲೇ? ಎಂದು ವಸ್ತುನಿಷ್ಠವಾಗಿ ನೋಡಬೇಕಾದ ಅವಶ್ಯಕತೆಯಿದೆ. ಏಕೆಂದರೆ ಕಾಲದ ನಡಿಗೆಯ ಯಾವುದೇ ಒಂದು ಬಿಂದುವಿನಲ್ಲಿ ಇಟ್ಟ ಹೆಜ್ಜೆ ಮತ್ತು ಆಯ್ಕೆ ತಪ್ಪಾದರೆ ಅದರ ಜವಾಬ್ದಾರಿಗಳನ್ನು ಆ ಕಾಲದ ಎಲ್ಲರೂ ಸಮವಾಗಿ ಹೊತ್ತುಕೊಳ್ಳಬೇಕಾಗುತ್ತದೆ.

ವಿವಾದದ ಅಲೆ:೧, ಫ್ರೆಂಚರನ್ನು ಕರೆದವನು

  • ಟಿಪ್ಪು ಸುಲ್ತಾನನ ಕತೆಯನ್ನು ಪ್ರಾಥಮಿಕ ಶಾಲೆಯ ಚರಿತ್ರೆ ಪುಸ್ತಕದಲ್ಲಿ ನಾವೆಲ್ಲರೂ ಓದಿದವರೇ. ಟಿಪ್ಪು ಒಬ್ಬ ಮಹಾನ್ ಹೋರಾಟಗಾರನಾಗಿದ್ದ; ಅವನಿಗೆ ಮೈಸೂರಿನ ಹುಲಿ ಎಂಬ ಬಿರುದಿತ್ತು; ಅವನ ಕಾಲದಲ್ಲಿ ನಮ್ಮ ರಾಜ್ಯ ಸರ್ವಧರ್ಮಗಳ ಶಾಂತಿ-ಸಾಮರಸ್ಯಗಳ ಬೀಡಾಗಿತ್ತು; ಆತ ಹುಲಿಯ ಜೊತೆ ಕಾದಾಡಿದ್ದ; ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಹೋರಾಡುತ್ತ ವೀರಮರಣವನ್ನಪ್ಪಿದ – ಮುಂತಾದ ಕತೆಗಳನ್ನು ನಾವು ಪಠ್ಯದಲ್ಲಿ ಓದಿದ್ದೆವು.
  • ಕನ್ನಡನಾಡಿನ ಜನರ ರಕ್ಷಣೆ ಮಾಡುತ್ತಿದ್ದ ಮೈಸೂರಿನ ಒಡೆಯರ ಒಡಕು ಆಡಳಿತದಿಂದ, ಒಳ ಜಗಳದಿಂದ ಮತ್ತು ಕುಟುಂಬ ಕಲಹದಿಂದಾಗಿ ಹೈದರ್ ಮೈಸೂರನ್ನು ಆಳುವಂತಾಯಿತು. ದಕ್ಷಿಣ ಭಾರತದಲ್ಲಿ ಪ್ರಬಲನಾದ ಹೈದರಾಲಿಯ ಮಗ ಟಿಪ್ಪು, ಬ್ರಿಟಿಷರ ವಿರುದ್ಧ ಹೋರಾಡಿದ್ದು ಅವರು ನಿಜಾಮ ಮತ್ತು ಮೈಸೂರಿನ ಒಡೆಯರ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ವಿರುದ್ಧ ತಿರುಗಿಬಿದ್ದರು ಎಂಬ ಕಾರಣಕ್ಕೆ ಮಾತ್ರ.
  • 1797ರ ಏಪ್ರಿಲ್ 21ರಂದು ಫ್ರೆಂಚರಿಗೆ ಪತ್ರ ಬರೆಯುವ ಟಿಪ್ಪು, ಅವರ ಬೆಂಬಲ ಸಿಕ್ಕರೆ ಬ್ರಿಟಿಷರನ್ನು ಓಡಿಸಿ ಇಡೀ ದೇಶವನ್ನು ಲೂಟಿ ಹೊಡೆಯಬಹುದು ಎಂಬ ಪ್ರಲೋಭನೆ ಒಡ್ಡುತ್ತಾನೆ. ಬ್ರಿಟಿಷರಿಂದ ಬಂಧನಕ್ಕೊಳಗಾಗಿ ಸೆರೆಮನೆವಾಸಿಯಾಗಿದ್ದ ಫ್ರೆಂಚ್ ನಾಯಕ ನೆಪೋಲಿಯನ್ ಬೋನಪಾರ್ಟೆಯ ಜೊತೆ ಟಿಪ್ಪುವಿಗೆ ಪತ್ರ ವ್ಯವಹಾರ ಇತ್ತು. ಫ್ರೆಂಚರು ಟಿಪ್ಪುವಿನೊಡನೆ ಸೇರಿ ದಕ್ಷಿಣ ಭಾರತದ ನಿಜಾಮ, ಮತ್ತು ಮರಾಠರನ್ನು ಸೋಲಿಸಿ ಇಲ್ಲಿ ಮೇಲುಗೈ ಸಾಧಿಸುವ ಕನಸು ಕಂಡರು.
  • ಬ್ರಿಟಿಷರ ವಿರುದ್ಧ ಹೋರಾಡಲು, ಮೈಸೂರನ್ನು ಬ್ರಿಟಿಷರಿಂದ ರಕ್ಷಿಸಲು ಫ್ರೆಂಚರ ಸಹಾಯ ಬೇಡಿದ. ಅವನ ಹೆಚ್ಚಿನೆಲ್ಲ ಶ್ರಮ ವ್ಯರ್ಥವಾದದ್ದು ತನ್ನ ಸುತ್ತಲಿನ ರಾಜ್ಯಗಳ ಮೇಲೆ ದಂಡೆತ್ತಿ ಹೋಗುವುದರಲ್ಲಿ; ಅಲ್ಲಿನ ಸಾವಿರಾರು ಪ್ರಜೆಗಳನ್ನು ಇಸ್ಲಾಂ ಮತಕ್ಕೆ ಮತಾಂತರಿಸುವುದರಲ್ಲಿ ಮತ್ತು ತನ್ನ ಮಾತು ಕೇಳದವರಿಗೆ ಬಗೆಬಗೆಯ ಶಿಕ್ಷೆಗಳನ್ನು ಕೊಟ್ಟು ಜೀವ ತೆಗೆಯುವುದರಲ್ಲಿ.
  • ಭಾರತ ಎಂಬ ಏಕರಾಷ್ಟ್ರದ ಕಲ್ಪನೆಯೇ ಇನ್ನೂ ಮೊಳೆತಿರದ ಕಾಲದಲ್ಲಿದ್ದ ಟಿಪ್ಪು, ಸ್ವಾತಂತ್ರ್ಯ ಹೋರಾಟಗಾರನೆಂದು ಕರೆಸಿಕೊಳ್ಳಲು ಹೇಗೆ ಯೋಗ್ಯನಾಗುತ್ತಾನೆ ಎಂಬ ಪ್ರಶ್ನೆಯೂ ಇದೆ. ಆತ ಕನ್ನಡದ ಕಂದನಾಗಿದ್ದ ಎಂಬುದಕ್ಕೂ ಇತಿಹಾಸದಲ್ಲಿ ಹೆಚ್ಚು ಆಧಾರಗಳು ಸಿಗುವುದಿಲ್ಲ. ಟಿಪ್ಪು ತನ್ನ ಆಡಳಿತವಿರುವ ಎಲ್ಲಾ ಪ್ರದೇಶಗಳಲ್ಲಿ ಉರ್ದು ಮತ್ತು ಫಾರಸಿ/ಪರ್ಶಿಯನ್ ಭಾಷೆಗಳನ್ನು ಖಾಯಂ ಮಾಡಿದ. ತನ್ನ ರಾಜ್ಯದ ವ್ಯವಹಾರಗಳು ಫಾರಸಿ ಭಾಷೆಯಲ್ಲೇ ಇರಬೇಕೆಂದು ಕಟ್ಟಪ್ಪಣೆ ಹೊರಡಿಸಿದ.
  • ಅತ್ಯಂತ ಕಟ್ಟಾ ಮತೀಯನಾಗಿದ್ದ ಟಿಪ್ಪು ತನ್ನ ಆಡಳಿತ ಕಾಲದಲ್ಲಿ ಹಲವು ಊರುಗಳ ಹೆಸರುಗಳನ್ನು ಬದಲಾಯಿಸಿದ. ಮಂಗಳೂರು ಜಲಲಾಬಾದ್ ಆಯಿತು. ಮೈಸೂರು – ನಝರಾಬಾದ್, ಕಣ್ಣಾನೂರು – ಕುಸನಬಾದ್, ಗುಟ್ಟಿ – ಫೈಜ್ ಹಿಸ್ಸಾರ್, ಧಾರವಾಡ – ಖುರ್ಷಿದ್ ಸವಾಡ್, ದಿಂಡಿಗಲ್ – ಕಲಿಖಾಬಾದ್, ರತ್ನಗಿರಿ – ಮುಸ್ತಫಾಬಾದ್, ಕಲ್ಲಿಕೋಟೆ – ಇಸ್ಲಮಾಬಾದ್.. ಹೀಗೆ ಮೈಸೂರಿನ ಸುತ್ತಮುತ್ತಲಿನ ಜಾಗಗಳಿಗೆಲ್ಲ ಟಿಪ್ಪು ಮುಸ್ಲಿಮ್ ಹೆಸರುಗಳನ್ನು ಇಡುತ್ತಾ ಹೋದ.
  • ಟಿಪ್ಪು ಊರುಗಳ ಹೆಸರುಗಳನ್ನು ಬದಲಿಸಿದ್ದು ಮಾತ್ರವಲ್ಲ; ದೂರವನ್ನು ಅಳೆಯುವ ಅಳತೆ ಮತ್ತು ಮಾನದಲ್ಲಿಯೂ ಇಸ್ಲಾಂ ಮತವನ್ನು ತುರುಕಿದ. ಖುರಾನಿನ ಒಂದು ಸಾಲು (ಕಲ್ಮಾ) ಇಪ್ಪತ್ತನಾಲ್ಕು ಅಕ್ಷರಗಳನ್ನು ಹೊಂದಿದೆಯೆಂಬ ಕಾರಣಕ್ಕೆ 24 ಅಂಗುಲಗಳ ಉದ್ದವನ್ನು ಮೂಲಮಾನವಾಗಿ ಇಟ್ಟುಕೊಂಡ. ಉಳಿದೆಲ್ಲ ಅಳತೆಗಳೂ ಇದಕ್ಕೆ ತಕ್ಕಂತೆ ಬದಲಾದವು.
  • ಪ್ರವಾದಿ ಮುಹಮ್ಮದರು ಹುಟ್ಟಿದ ವರ್ಷದಿಂದ ಆರಂಭಿಸಿ ಹೊಸ ಶಕೆಯೊಂದನ್ನು ಆರಂಭಿಸಿ, ಹೊಸ ಬಗೆಯ ಪಂಚಾಂಗವನ್ನು ಟಿಪ್ಪು ಜಾರಿಗೆ ತಂದ. ಸೌರಮಾನ ಪದ್ಧತಿಯನ್ನು ಕೈಬಿಟ್ಟು ಚಾಂದ್ರಮಾನ ಪದ್ಧತಿ ಅನುಸರಿಸಲು ಆದೇಶ ಹೊರಡಿಸಲಾಯಿತು. ಟಿಪ್ಪು ಪ್ರಾರಂಭಿಸಿದ ವರ್ಷದಲ್ಲಿ 354 ದಿನಗಳಿದ್ದವು. ವರ್ಷಗಳಿಗೆ ಅಹಂದ್, ಅಬ್, ಝಾ, ಬಾಬ್ ಮುಂತಾದ ಇಸ್ಲಾಮಿಕ್ ಹೆಸರುಗಳನ್ನು ಕೊಡಲಾಯಿತು.
  • ಇನ್ನು, ಹೆಚ್ಚಾಗಿ ಎಲ್ಲರೂ ಭಾವಿಸುವುದು ಹುಲಿಯೊಂದಿಗೆ ಕಾದಾಡಿ ಅದನ್ನು ಕೊಂದದ್ದರಿಂದಾಗಿ ಅವನಿಗೆ ಮೈಸೂರು ಹುಲಿ ಎಂಬ ಬಿರುದು ಬಂದಿದೆಯೆಂದು. ಆದರೆ, ಟಿಪ್ಪು ಎಂದೂ ಹುಲಿಗಳೊಂದಿಗೆ ಕಾದಾಡಿದ ಉದಾಹರಣೆ ಇಲ್ಲ! ಪರಂಗಿಯೊಬ್ಬನ ಮೇಲೆರಗಿ ಕೂತ ಹುಲಿಯ ಆಟಿಕೆ ಅವನ ಬಳಿ ಇತ್ತು ಅಷ್ಟೆ! ಅದನ್ನು ಆತ ಚಿಕ್ಕ ಮಕ್ಕಳಂತೆ ಪ್ರೀತಿಯಿಂದ ತನ್ನ ಜೊತೆಗಿಟ್ಟುಕೊಂಡಿದ್ದ.
  • ಆ ಕಾಲದಲ್ಲಿ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದುದರಿಂದ ಆತನಿಗೆ ಅದನ್ನೇ ತನ್ನ ರಾಜಚಿಹ್ನೆಯಾಗಿ ಇಟ್ಟುಕೊಳ್ಳುವ ಹಂಬಲ ಮೂಡಿರಬಹುದು. ಅವನ ಕತ್ತಿಯಲ್ಲಿ ಹುಲಿಯ ಉಲ್ಲೇಖ ಇತ್ತು. ಹುಲಿಯ ಮುಖದ ಅಚ್ಚು ಇರುವ ಸಿಂಹಾಸನವನ್ನು ಬಳಸುತ್ತಿದ್ದ. ಹುಲಿಯ ಪಟ್ಟೆಗಳ ವಿನ್ಯಾಸ ಇರುವ ಸಮವಸ್ತ್ರಗಳನ್ನು ತನ್ನ ಸೈನಿಕರಿಗೆ ಕೊಟ್ಟಿದ್ದ. ಜೊತೆಗೆ, ತನ್ನ ಅರಮನೆಯಲ್ಲಿ ಒಂದಷ್ಟು ಹುಲಿಗಳನ್ನು ಸಾಕಿಕೊಂಡಿದ್ದ.
  • ಈ ಎಲ್ಲ ಕಾರಣಗಳಿಂದ ಅವನಿಗೆ ಶೇರ್-ಇ-ಮೈಸೂರ್ ಎಂಬ ಬಿರುದನ್ನು ಅವನಿಗೆ ಕೊಟ್ಟಿರಬಹುದು. ಯಮಸದೃಶ ಮತಾಂತರಿ ಟಿಪ್ಪುವಿನ ದೌರ್ಜನ್ಯಗಳ ಮಾಹಿತಿಗಳು ನಮಗೆ ಸಿಕ್ಕುವುದು ಆ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಭೇಟಿ ಕೊಟ್ಟ ಪರದೇಶ ಗಳ ಇತಿಹಾಸ ತಜ್ಞರಿಂದ. ಜಗತ್ಪ್ರಸಿದ್ಧ ಪೋರ್ತುಗೀಸ್ ಯಾತ್ರಿಕ ಬಾರ್ತೊಲೋಮಿಯೋ ತನ್ನ “ವೊಯೇಜ್ ಟು ಈಸ್ಟ್ ಇಂಡೀಸ್” ಎಂಬ ಕೃತಿಯಲ್ಲಿ ಬರೆಯುವ ಕೆಲವು ಸಾಲುಗಳು: “ಟಿಪ್ಪು ಒಂದು ಆನೆಯ ಮೇಲೆ ಕೂತು ಸವಾರಿ ಮಾಡುತ್ತಿದ್ದ.
  • ಪ್ಪುವಿನ ಕಾಲದಲ್ಲಿ ಮಂಗಳೂರಿಗೆ ಬ್ರಿಟಿಷ್ ಅಧಿಕಾರಿಯಾಗಿ ನೇಮಕವಾಗಿದ್ದ ಕರ್ನಲ್ ಫುಲ್ಲೆರ್ಟನ್ 1783ರಲ್ಲಿ ಟಿಪ್ಪುಸೈನ್ಯ ತೋರಿದ ಹಿಂಸೆಯ ಭೀಭತ್ಸವನ್ನು ಹೀಗೆ ದಾಖಲು ಮಾಡುತ್ತಾನೆ: ಟಿಪ್ಪುವಿನ ಸೈನಿಕರು ಪ್ರತಿದಿನ ಹತ್ತಿಪ್ಪತ್ತು ಜನ ಬ್ರಾಹ್ಮಣರ ತಲೆಗಳನ್ನು ಕಡಿದು ತಂದು ಝಮೊರಿನ್ ಕೋಟೆಯ ಆಸುಪಾಸಿನಲ್ಲಿ ತೂಗು ಹಾಕುತ್ತಿದ್ದರು. ಈ ಕ್ರೌರ್ಯವನ್ನು ಕಂಡು ಸಹಿಸಲಾಗದೆ; ಇನ್ನಷ್ಟು ಬ್ರಾಹ್ಮಣರ ಜೀವ ಹೋಗಬಾರದೆಂಬ ಉದ್ಧೇಶದಿಂದ ಝಮೊರಿನ್ ರಾಜ ಆ ಪ್ರದೇಶಗಳನ್ನು ಬಿಟ್ಟುಕೊಟ್ಟು ಕೇರಳದ ದಕ್ಷಿಣಭಾಗಕ್ಕೆ ಹೋದ.

ವಿವಾದದ ಅಲೆ:೨, ಟಿಪ್ಪುವಿನ ಕೃತ್ಯಗಳ ವಿವರಗಳು ಸಿಗುವ ಇನ್ನೊಂದು ಮೂಲ

  • “ಮಲಬಾರ್ ಮ್ಯಾನುಯೆಲ್” ಎಂಬ ಗ್ರಂಥ. ಇದನ್ನು ಬರೆದ ವಿಲಿಯಂ ಲೋಗನ್, ಬ್ರಿಟಿಷ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬ ಸ್ಕಾಟಿಷ್ ಅಧಿಕಾರಿ. ಈತ ಕೇರಳ ಮತ್ತು ತಮಿಳುನಾಡುಗಳಲ್ಲಿ ಸುಮಾರು ಇಪ್ಪತ್ತು ವರ್ಷ ಮ್ಯಾಜಿಸ್ಟ್ರೇಟ್ ಮತ್ತು ನ್ಯಾಯಾಧೀಶನಾಗಿ ಕೆಲಸ ಮಾಡಿದ. ನಂತರ ಇವನನ್ನು ಮಲಬಾರ್ ಪ್ರಾಂತ್ಯದ ಕಲೆಕ್ಟರ್ ಆಗಿ ನೇಮಿಸಿ ಕಳಿಸಲಾಯಿತು.
  • ಭಾರತದಲ್ಲಿ ತನ್ನ ಬಹುವರ್ಷಗಳನ್ನು ಕಳೆದದ್ದರಿಂದ ಲೋಗನ್ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲನಾಗಿದ್ದ. ತನ್ನ ಪುಸ್ತಕದಲ್ಲಿ ಆತ, ಟಿಪ್ಪು ಮಲಬಾರಿನಲ್ಲಿ ಮಾಡಿದ ಮತಾಂತರದ ಅತ್ಯಾಚಾರಗಳನ್ನು ತಣ್ಣಗಿನ ಭಾಷೆಯಲ್ಲಿ ನಿರ್ವಿಕಾರ ಸಂತನಂತೆ ಹೇಳುತ್ತಾ ಹೋಗುತ್ತಾನೆ. ಅವನು ಹೇಳುವ ವರ್ಣನೆಗಳನ್ನು ಕೇಳಿದರೆ ಹೊಟ್ಟೆಯಲ್ಲಿ ಛಳುಕು ಮೂಡುತ್ತದೆ.
  • “ಕಲ್ಲಿಕೋಟೆಯಿಂದ ಇಪ್ಪತ್ತನೇ ಪತ್ರ ಬಂತು. ಎಂದಿನಂತೆ – ಇಷ್ಟಿಷ್ಟು ಜನ ಬ್ರಾಹ್ಮಣರನ್ನು ಹಿಡಿದುಹಾಕಲಾಯಿತು. ಅವರನ್ನು ಬಲಾತ್ಕಾರವಾಗಿ ಮುಂಜಿ ಮಾಡಿಸಿ ದನದ ಮಾಂಸ ತಿನ್ನಿಸಿ ಮುಸಲ್ಮಾನರಾಗಿ ಮಾಡಲಾಯಿತು – ಎಂಬ ಒಕ್ಕಣೆ ಇತ್ತು ಅದರಲ್ಲಿ. ಈ ಇಪ್ಪತ್ತನೇ ಪತ್ರದಲ್ಲಿ 200 ಮಂದಿ ಬ್ರಾಹ್ಮಣರನ್ನು ಹಿಡಿಯಲಾಯಿತು ಎಂಬ ಮಾಹಿತಿ ಇತ್ತು.”
  • ಈ ಪತ್ರಗಳು ನಿರಂತರವಾಗಿ ಕೇರಳದ ಸೈನಿಕರಿಂದ ಟಿಪ್ಪುವಿಗೆ ರವಾನೆಯಾಗುತ್ತಿದ್ದವು. ನೂರಿನ್ನೂರು ಜನರನ್ನು ಹಿಡಿಯುವುದು; ಅವರನ್ನು ಸಾಮೂಹಿಕವಾಗಿ ಮುಂಜಿ ಮಾಡಿಸಿ, ಮಾಂಸ ತಿನ್ನಿಸುವುದು ಅವ್ಯಾಹತವಾಗಿ ನಡೆಯುತ್ತಿತ್ತು. ತಾವು ಎಷ್ಟೆಷ್ಟು ಜನರನ್ನು ಹೀಗೆ ಮುಸಲ್ಮಾನರಾಗಿ ಮಾಡಿದೆವು ಎನ್ನುವ ವಿವರಗಳನ್ನು ಅವರು ಟಿಪ್ಪುವಿಗೆ ತಲುಪಿಸಬೇಕಾಗಿತ್ತು.
  • ಅದೇ ಪುಸ್ತಕದಲ್ಲಿ ಬರುವ ಇನ್ನೊಂದು ಭಾಗ ನೋಡಿ: “ಕುಟ್ಟಿಪುರಂ ಎನ್ನುವುದು ಕಡತ್ತನಾಡ್ ರಾಜವಂಶದ ರಾಜಧಾನಿ. ಇಲ್ಲಿಗೆ ಟಿಪ್ಪು ದಾಳಿ ಮಾಡುವ ಸೂಚನೆ ಸಿಕ್ಕಿತು. ಹಲವು ವರ್ಷಗಳಿಂದ ಆತ ಈ ಊರನ್ನು ವಶಪಡಿಸಿಕೊಳ್ಳಲು ಹಂಚಿಕೆ ಹಾಕುವುದೂ ಇಲ್ಲಿನ ಜನ ಪ್ರಬಲವಾದ ಪ್ರತಿರೋಧ ಒಡ್ಡುವುದೂ ನಡೆದೇ ಇತ್ತು. ಆದರೆ ಟಿಪ್ಪು ಹಲವು ಅಕ್ರಮ ಮಾರ್ಗಗಳನ್ನು ಬಳಸಿ, ಇಲ್ಲಿನ ಯೋಧರ ಸಂಖ್ಯೆ ಕಡಿಮೆಯಾಗುವಂತೆ ನೋಡಿಕೊಂಡಿದ್ದ.
  • ಕೊನೆಗೆ ಅಲ್ಲಿ 2000 ನಾಯರ್ ಸೈನಿಕರು ಮಾತ್ರ ಉಳಿದುಕೊಂಡಿದ್ದರು. ಆದರೂ ಅವರು ವೀರಾವೇಶದಿಂದ ಹೋರಾಡುತ್ತಿದ್ದರು. ಎಷ್ಟು ಧೈರ್ಯದಿಂದ ಕಾದಿದರೂ ಟಿಪ್ಪುವಿನ ಮಹಾಸೈನ್ಯದೆದುರು ಈ ಎರಡು ಸಾವಿರ ಮಂದಿ ಏನೂ ಮಾಡುವಂತಿರಲಿಲ್ಲ. ಟಿಪ್ಪುವಿನ ಸೈನ್ಯ ಕೋಟೆಯನ್ನು ವಶಪಡಿಸಿಕೊಂಡೇಬಿಟ್ಟಿತು. ನಾಯರ್‍ಗಳು ಶರಣಾಗಬೇಕಾಯಿತು. ಯುದ್ಧದ ಮರುದಿನ ಟಿಪ್ಪುವಿನ ಸೇನೆಯ ವಿಜಯೋತ್ಸವ ನಡೆಯಿತು. ಎಲ್ಲಾ ನಾಯರ್ ಯುವಕರನ್ನೂ ನಿಲ್ಲಿಸಿ ಬಲವಂತವಾಗಿ ಮುಂಜಿ ಮಾಡಿಸಲಾಯಿತು. * ಹೆಣ್ಣುಗಂಡೆಂಬ ಭೇದವಿಲ್ಲದೆ ಎಲ್ಲರಿಗೂ ದನದ ಮಾಂಸ ತಿನ್ನಿಸಲಾಯಿತು. ತಮ್ಮ ಧರ್ಮಕ್ಕೆ ವಿರುದ್ಧವಾಗಿ ನಡೆಯುವುದು ಸಾವಿಗಿಂತ ದೊಡ್ಡ ದುರಂತ ಎಂದು ಭಾವಿಸಿದ್ದ ನಾಯರ್‍ಗಳಿಗೆ ಅಂದು ಆದ ಅವಮಾನ ಎಂದೆಂದೂ ಮಾಯದ ಗಾಯದಂತೆ ಉಳಿದುಕೊಂಡಿತು”. ಜನರನ್ನು ಮತಾಂತರ ಮಾಡಲು ಯಾವ ಮಾರ್ಗಗಳನ್ನೆಲ್ಲ ಬಳಸಿಕೊಳ್ಳಬಹುದೋ ಅವೆಲ್ಲವನ್ನೂ ಸಮರ್ಥವಾಗಿ ದುಡಿಸಿಕೊಳ್ಳುತ್ತಿದ್ದ ಟಿಪ್ಪು.
  • ಮೈಸೂರಿನಲ್ಲಿ ಟಿಪ್ಪುವಿನ ಮಕ್ಕಳು ಬರೆದಿಟ್ಟ ಪತ್ರ, ಕಾಗದ, ಡೈರಿಗಳು – ಮುಂತಾದ ಲಿಖಿತ ದಾಖಲೆಗಳನ್ನು ಆಳವಾಗಿ ಅಭ್ಯಸಿಸಿ; ಕೀರ್ಮಾನಿಯಂಥ ಟಿಪ್ಪು ಆಸ್ಥಾನಪಂಡಿತರ ಮಾತುಗಳನ್ನು ಆಧರಿಸಿ ಎಮ್.ಎ. ಗೋಪಾಲ ರಾವ್ ಎಂಬವರು ಟಿಪ್ಪುವಿನ ಚರಿತ್ರೆಯನ್ನು ಬರೆದಿದ್ದಾರೆ. ಅದರಲ್ಲಿ ಈ ಮುಂದಿನ ಮಾತುಗಳನ್ನು ಅವರು ಬರೆದಿದ್ದಾರೆ: “ಟಿಪ್ಪುವಿನ ಮೂಲೋದ್ಧೇಶ ಮತಾಂತರವೇ ಆಗಿತ್ತು ಎನ್ನುವುದನ್ನು ಅವನ ಆಡಳಿತದ ನೀತಿ-ವಿಧಾನಗಳೇ ಸ್ಪಷ್ಟಪಡಿಸುತ್ತವೆ.
  • ಟಿಪ್ಪುವಿನ ಆಡಳಿತದಲ್ಲಿ ಮುಸ್ಲಿಮರಿಗೆ ಮನೆ ತೆರಿಗೆ; ಕೊಳ್ಳುವ ವಸ್ತುಗಳ ಮೇಲೆ ಮಾರಾಟ ತೆರಿಗೆ ಮುಂತಾದವು ಇರಲಿಲ್ಲ. ಹಾಗೆಯೇ ಮುಸಲ್ಮಾನ ಮತಕ್ಕೆ ಮತಾಂತರಗೊಂಡವರಿಗೂ ಈ ಎಲ್ಲ ವಿನಾಯತಿಗಳನ್ನು ನೀಡಲಾಗುತ್ತಿತ್ತು. ಮತಾಂತರಗೊಂಡವರ ಮಕ್ಕಳನ್ನು ಉಚಿತವಾಗಿ ಓದಿಸುವುದಕ್ಕೂ ಟಿಪ್ಪು ವ್ಯವಸ್ಥೆ ಮಾಡಿದ್ದ. ಆದರೆ, ಅವನ ರಾಜ್ಯದ ಹಿಂದೂಗಳು ಮಾತ್ರ ಒಂದಕ್ಕೆರಡು ಪಟ್ಟು ತೆರಿಗೆ ಕಟ್ಟುತ್ತ ಹೈರಾಣಾಗಿದ್ದರು.
  • ಸರಕಾರದ ಆಡಳಿತ ಮತ್ತು ಮಿಲಿಟರಿ ವ್ಯವಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಹಿಂದೂಗಳನ್ನು ಆರಿಸುವ ಪದ್ಧತಿ ಹೈದರಾಲಿಯ ಕಾಲದಲ್ಲಿತ್ತು. ಅದನ್ನು ಟಿಪ್ಪು ಸಂಪೂರ್ಣವಾಗಿ ನಿಲ್ಲಿಸಿದ. ಅವನ ಹದಿನಾರು ವರ್ಷಗಳ ಆಡಳಿತದಲ್ಲಿ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಏಕೈಕ ಹಿಂದೂ ಎಂದರೆ ದಿವಾನನ ಹುದ್ದೆಯಲ್ಲಿದ್ದ ಪೂರ್ಣಯ್ಯ ಮಾತ್ರ. 1797ರ ಹೊತ್ತಿಗೆ ಸರಕಾರದ ಒಟ್ಟು 65 ಉನ್ನತ ಹುದ್ದೆಗಳಲ್ಲಿ ಒಂದೇ ಒಂದರಲ್ಲೂ ಮುಸ್ಲಿಮರನ್ನು ಬಿಟ್ಟರೆ ಬೇರೆ ಜಾತಿ-ಮತ-ಧರ್ಮದವರು ಇರಲಿಲ್ಲ.
  • 1792ರಲ್ಲಿ ಬ್ರಿಟಿಷರು ಹಿಡಿದು ಹಾಕಿದ್ದ ಒಟ್ಟು 26 ಅಧಿಕಾರಿಗಳಲ್ಲಿ ಕೇವಲ ಆರು ಜನ ಮಾತ್ರ ಬೇರೆ ಮತದವರಾಗಿದ್ದರು. 1789ರಲ್ಲಿ ಹೈದರಾಬಾದಿನ ನಿಜಾಮ, ಸರಕಾರದ ನೌಕರಶಾಹಿಯಲ್ಲಿ ಮುಸ್ಲಿಮರನ್ನು ಬಿಟ್ಟರೆ ಬೇರಾವ ಮತ-ಧರ್ಮಗಳವರೂ ಇರಬಾರದು ಎಂಬ ಕಾನೂನು ತಂದಿದ್ದ. ಅದನ್ನು ಕೆಲವೇ ವರ್ಷಗಳಲ್ಲಿ ಟಿಪ್ಪು ಅಳವಡಿಸಿಕೊಂಡ.
  • ನೌಕರಿ ಎಂಬುದು ಅರ್ಹತೆಗಿಂತ ಜಾತಿಯಾಧಾರಿತವಾದ ಮೇಲೆ, ಅನಕ್ಷರಸ್ಥರು, ಅನನುಭವಿಗಳು, ಸರಿಯಾದ ಕೌಶಲ ಇಲ್ಲದವರೆಲ್ಲ ವಿವಿಧ ಹುದ್ದೆಗಳನ್ನು ಅಲಂಕರಿಸತೊಡಗಿದರು. ಮೇಲ್‍ಸ್ತರದಲ್ಲಿ ಕೆಲಸ ಮಾಡುವವರೆಲ್ಲ ಮುಸ್ಲಿಮರೇ ಆದ್ದರಿಂದ ಕನ್ನಡ ಮತ್ತು ಮರಾಠಿಯ ಬದಲು ಪರ್ಶಿಯನ್ ಭಾಷೆಯನ್ನೇ ಬರಹದಲ್ಲಿ ಉಪಯೋಗಿಸತೊಡಗಿದರು. ಬರಬರುತ್ತ ಆಡಳಿತವೆನ್ನುವುದು ಭ್ರಷ್ಟಾಚಾರದ ಕೂಪವಾಗಿ ಪತಿವರ್ತನೆಯಾಯಿತು.
  • ಆಲಸಿಗಳು, ಅದಕ್ಷರು ಎಲ್ಲೆಲ್ಲೂ ತುಂಬಿಕೊಂಡರು. ಇಂಥವರ ಬಗ್ಗೆ ಸಾರ್ವಜನಿಕರು ಎಷ್ಟೇ ದೂರು ಒಯ್ದರೂ ಟಿಪ್ಪು, ಅವುಗಳ ಮೇಲೆ ವಿಚಾರಣೆ ಕರೆಯಲಿಕ್ಕೂ ಮನಸ್ಸು ಮಾಡಲಿಲ್ಲ”. – ಇಲ್ಲಿ ಮುಖ್ಯವಾಗಿ, ಟಿಪ್ಪುವಿನ ಮತಾಂಧತೆ ಹೇಗೆ ಕೊನೆಗೆ ಇಡೀ ರಾಜ್ಯಾಡಳಿತವನ್ನೇ ಹಳ್ಳಹಿಡಿಸಿತು ಎನ್ನುವುದನ್ನು ಗೋಪಾಲ ರಾಯರು ವಿವರಿಸಿದ್ದಾರೆ. ಅಲ್ಲದೆ, ಅದರಿಂದ ಕನ್ನಡಭಾಷೆಯೂ ಬಹುದೊಡ್ಡ ಹೊಡೆತ ತಿನ್ನಬೇಕಾಯಿತು.
  • ಟಿಪ್ಪು ತನ್ನ ಮತದ ಬಗ್ಗೆ ಅದೆಷ್ಟು ಅಂಧಾಭಿಮಾನ ಇಟ್ಟುಕೊಂಡಿದ್ದನೆಂದರೆ, ಪರ್ಶಿಯನ್‍ಅನ್ನು ರಾಜ್ಯಭಾಷೆಯಾಗಿ ತರುವ ಬಗ್ಗೆಯೂ ಯೋಚನೆ ಮಾಡಿದ್ದ. ಕೊನೆಗೆ, ತನ್ನ ಭಾಷೆಯನ್ನು ಇಡೀ ರಾಜ್ಯದ ಜನತೆಯ ಮೇಲೆ ಹೇರಿದರೆ ದೊಡ್ಡಮಟ್ಟದ ವಿರೋಧ ಎದುರಿಸಬೇಕಾದೀತೆಂಬ ಭಯದಿಂದ ಆ ಕೆಲಸಕ್ಕೆ ಕೈಹಾಕಲಿಲ್ಲ ಅಷ್ಟೆ. ಆಡಳಿತದಲ್ಲಿ ಮಾತ್ರ ಬಹುತೇಕ ಎಲ್ಲ ವಿಭಾಗಗಳಲ್ಲೂ ಪರ್ಶಿಯನ್ ಪದಗಳು ನಿಂತುಹೋಗಿವೆ.
  • ಜೆಹಾದ್ ಉಗ್ರ ಟಿಪ್ಪು ಮೂಲತಃ ಒಬ್ಬ ಮತಾಂಧ ಅರಸನಾಗಿದ್ದ ಎನ್ನುವುದಕ್ಕೆ ಅವನೇ ಬರೆದ ಹಲವು ಪತ್ರಗಳು ಸಾಕ್ಷಿ ಹೇಳುತ್ತವೆ. ಅಬ್ದುಲ್ ಖಾದಿರ್‍ನಿಗೆ 1788ರ ಮಾರ್ಚ್ 22ರಂದು ಬರೆಯುವ ಪತ್ರದಲ್ಲಿ “ಒಟ್ಟು 12,000 ಜನ ಹಿಂದೂಗಳನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಿಸಲಾಯಿತು. ಅವರಲ್ಲಿ ಹೆಚ್ಚಿನವರು ನಂಬೂದಿರಿ ಬ್ರಾಹ್ಮಣರು. ಈ ಮತಾಂತರ ಕಾರ್ಯವನ್ನು ದೊಡ್ಡಮಟ್ಟದಲ್ಲಿ ಪ್ರಚಾರಗೊಳಿಸಬೇಕು.
  • ಸ್ಥಳೀಯ ಊರುಗಳ ಎಲ್ಲಾ ಹಿಂದೂ ಧರ್ಮೀಯರನ್ನೂ ನಿನ್ನೆದುರು ನಿಲ್ಲಿಸಿ ಇಸ್ಲಾಂಗೆ ಮತಾಂತರಿಸುವ ಕೆಲಸ ನಡೆಯಲಿ. ನೆನಪಿಡು – ಒಬ್ಬನೇ ಒಬ್ಬ ಬ್ರಾಹ್ಮಣನೂ ತಪ್ಪಿಸಿಕೊಳ್ಳಬಾರದು” ಎಂದು ಬರೆಯುತ್ತಾನೆ ಟಿಪ್ಪು. 1790ರ ಜನವರಿ 18ರಂದು ಸಯ್ಯದ್ ಅಬ್ದುಲ್ ದುಲಾಯಿಗೆ ಪತ್ರ ಬರೆದು “ಪ್ರವಾದಿ ಮುಹಮ್ಮದ ಮತ್ತು ಅಲ್ಲಾಹನ ದಯೆಯಿಂದ, ಕಲ್ಲಿಕೋಟೆಯ ಎಲ್ಲಾ ಹಿಂದೂಗಳೂ ಇಸ್ಲಾಂ ಮತೀಯರಾದರು.
  • ಕೊಚ್ಚಿ ರಾಜ್ಯದ ಗಡಿಭಾಗದಲ್ಲಿರುವ ಕೆಲವರು ಮಾತ್ರ ಇನ್ನೂ ಮತ ಬದಲಾಯಿಸದೆ ಉಳಿದುಕೊಂಡಿದ್ದಾರೆ. ಅವರನ್ನೂ ಬಿಡದೆ ಮತಾಂತರ ಮಾಡುವ ಕೆಲಸವನ್ನು ಶೀಘ್ರದಲ್ಲೇ ಕೈಗೆತ್ತಿಕೊಂಡು ಮುಗಿಸುತ್ತೇನೆ. ಇದನ್ನು ನಾನು ಜೆಹಾದ್ ಎಂದೇ ಪರಿಗಣಿಸಿದ್ದೇನೆ” ಎಂದಿದ್ದಾನೆ. ಅದರ ಮರುದಿನ ಬುದ್ರುಜ್ ಜುಮನ್ ಖಾನ್‍ಗೆ ಬರೆಯುವ ಪತ್ರದಲ್ಲಿ “ನಾನು ಇತ್ತೀಚೆಗೆ ಮಲಬಾರ್ ಪ್ರಾಂತ್ಯದಲ್ಲಿ ನಾಲ್ಕು ಲಕ್ಷ ಜನರನ್ನು ಇಸ್ಲಾಂಗೆ ಮತಾಂತರಿಸಿದ್ದು ನಿನಗೆ ಗೊತ್ತಿದೆಯೆ?
  • ಅಂಥ ಸಾಧನೆ ಮಾಡಿದ ಮೇಲೆ ಅದೆಷ್ಟು ಉತ್ಸಾಹ ಬಂದಿದೆಯೆಂದರೆ ರಾಮನ್ ನಾಯರ್‍ನ (ತಿರುವಾಂಕೂರಿನ ರಾಜ ರಾಮ ವರ್ಮ) ರಾಜ್ಯದ ಮೇಲೆ ದಂಡೆತ್ತಿಹೋಗುವುದಕ್ಕೆ ಕಾತರದಿಂದ ಕಾಯುತ್ತಿದ್ದೇನೆ. ಆತನನ್ನೂ ಆತನ ಜನರನ್ನೂ ಇಸ್ಲಾಂಗೆ ಮತಾಂತರಿಸುವ ಯೋಚನೆಯೇ ಚೇತೋಹಾರಿಯಾಗಿದೆ. ಶ್ರೀರಂಗಪಟ್ಟಣಕ್ಕೆ ವಾಪಸು ಹೋಗುವುದನ್ನು ಕೂಡ ನಾನು ಮರೆತಂತಿದೆ” ಎಂದು ಬರೆಯುತ್ತಾನೆ.
  • ಲಾಹೋರಿನ ಪಾಕಿಸ್ತಾನ್ ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜು 1964ರಲ್ಲಿ ಪ್ರಕಟಿಸಿದ “ಲೈಫ್ ಆಫ್ ಟಿಪ್ಪು ಸುಲ್ತಾನ್” ಎಂಬ ಕೃತಿಯಲ್ಲಿ ಈ ಸಾಲುಗಳನ್ನು ಬರೆಯಲಾಗಿದೆ: ಟಿಪ್ಪು ಮಲಬಾರ್ ಪ್ರಾಂತ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಹಿಂದೂಗಳನ್ನೂ 70,000 ಕ್ರಿಶ್ಚಿಯನ್ನರನ್ನೂ ಬಲಾತ್ಕಾರವಾಗಿ ಮತಾಂತರ ಮಾಡಿದ. ಅವರಿಗೆ ಮುಂಜಿ ಮಾಡಿ ದನದ ಮಾಂಸ ತಿನ್ನಿಸಿ ಧರ್ಮಭ್ರಷ್ಟಗೊಳಿಸಲಾಯಿತು.
  • ಈ ಎಲ್ಲ ಕೆಲಸಗಳು ಅತ್ಯಂತ ಹೀನಾಯ ಮತ್ತು ಅನೈತಿಕವಾಗಿದ್ದರೂ ಅವು ಟಿಪ್ಪುವಿನ ಉದ್ಧೇಶ ನೆರವೇರಿಸಿದವು ಎಂದು ಹೇಳಬಹುದು. ತಮ್ಮ ಧರ್ಮದಿಂದ ಭ್ರಷ್ಟಗೊಂಡ ಮೇಲೆ ಆ ಜನರಿಗೆ ತಮ್ಮ ವೈರಿಯ ಮತವನ್ನು ಒಪ್ಪಿಕೊಂಡು ಜೀವ ಉಳಿಸಿಕೊಳ್ಳುವುದಕ್ಕಿಂತ ಬೇರೆ ಆಯ್ಕೆಗಳೇ ಇರಲಿಲ್ಲ. ಹೀಗೆ ಮತಾಂತರಗೊಂಡವರ ಮಕ್ಕಳು ಮುಸ್ಲಿಮರೇ ಆದರು.
  • ಮತಾಂತರಗೊಂಡವರಿಗೆ ತೆರಿಗೆ ವಿನಾಯಿತಿ, ಸೇನೆಯಲ್ಲಿ ಕೆಲಸ ಇತ್ಯಾದಿ ಸೌಲಭ್ಯ ದೊರೆತದ್ದರಿಂದ, ಅವರು ತಮ್ಮ ಇಚ್ಛೆಗೆ ವಿರುದ್ಧವಾಗಿದ್ದರೂ ಇಸ್ಲಾಂ ಮತದಲ್ಲಿ ಉಳಿದುಕೊಳ್ಳುವಂತಾಯಿತು. ಟಿಪ್ಪುವಿನ ಮತಾಂತರ ಕಾರ್ಯ ಕೇವಲ ಮಲಬಾರ್ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅದು ಪೂರ್ವದಲ್ಲಿ ಕೊಯಮತ್ತೂರಿನವರೆಗೂ ಹರಡಿತ್ತು”.
  • ದೇಗುಲಭಂಜಕ ಕೇರಳದ ಮಲಬಾರ್ ಪ್ರಾಂತ್ಯದಲ್ಲಿದ್ದ ಕ್ರಿಶ್ಚಿಯನ್ನರು ಮತ್ತು ಹಿಂದೂಗಳನ್ನು ಬಲಾತ್ಕಾರವಾಗಿ ಮತಾಂತರ ಮಾಡಿಸಬೇಕು ಎನ್ನುವುದು ಟಿಪ್ಪುವಿನ ಉದ್ಧೇಶವಾಗಿತ್ತು. ಲೆವಿಸ್ ಬಿ. ಬೌರಿ ಎಂಬ ಬ್ರಿಟಿಷ್ ಇತಿಹಾಸಜ್ಞನ ಪ್ರಕಾರ, ಟಿಪ್ಪು ಮಲಬಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಡಿದ ಅತ್ಯಾಚಾರ, ದೌರ್ಜನ್ಯಗಳನ್ನು ಭಾರತದ ಮೇಲೆ ದಾಳಿ ಮಾಡಿದ ಮುಹಮ್ಮದ್ ಘಜನಿ, ಅಲ್ಲಾದೀನ್ ಖಿಲ್ಜಿ, ನಾದಿರ್ ಷಾ ಮುಂತಾದವರಿಗೂ ಸರಿಗಟ್ಟುವುದು ಸಾಧ್ಯವಿಲ್ಲ.
  • ವಿಲಿಯಂ ಲೋಗನ್ ತನ್ನ “ಮಲಬಾರ್ ಮ್ಯಾನುಯೆಲ್” ಹೊತ್ತಗೆಯಲ್ಲಿ, ಟಿಪ್ಪು ನಾಶಗೊಳಿಸಿದ ಹಿಂದೂ ದೇವಾಲಯಗಳ ಪಟ್ಟಿ ಮಾಡುತ್ತಾನೆ. ಚಿರಕ್ಕಲ್ ತಾಲೂಕಿನ ತ್ರಿಚಂಬರಂ ಮತ್ತು ತಲಿಪ್ಪರಂಪು ದೇವಸ್ಥಾನಗಳು, ತೆಲಿಶ್ಶೇರಿಯ ತಿರುವೆಂಕಟ ದೇವಸ್ಥಾನ, ಬಡಕ್ಕರ ಸಮೀಪದ ಪೊನ್ಮೆರಿ ದೇವಸ್ಥಾನ – ಇವೆಲ್ಲ ಟಿಪ್ಪು ದಾಳಿಗೆ ಒಳಗಾದ ಹಿಂದೂ ಶ್ರದ್ಧಾಕೇಂದ್ರಗಳು. ಕೇರಳದ ಮಣಿಯೂರು ಮಸೀದಿ ಒಂದು ಕಾಲದಲ್ಲಿ ದೇವಸ್ಥಾನವಾಗಿತ್ತು ಎಂಬ ಅಂಶವನ್ನೂ ವಿಲಿಯಂ ಮುಂದಿಡುತ್ತಾರೆ.
  • ಟಿಪ್ಪು ಮೈಸೂರು, ಕೊಡಗು, ಮಂಗಳೂರು ಮತ್ತು ಕೇರಳಗಳಲ್ಲಿ ಹಿಂದೂ ದೇವಸ್ಥಾನಗಳಲ್ಲಿ ತೋರಿಸಿದ ಕ್ರೌರ್ಯಕ್ಕೆ ಸಮಾನವಾದ ಬೇರಾವ ಉದಾಹರಣೆಗಳೂ ನಮಗೆ ಸಿಗುವುದಿಲ್ಲ. ಬೆಂಕಿ ಹಚ್ಚಿ ನೂರಾರು ದೇವಾಲಯಗಳನ್ನು ಬೂದಿ ಮಾಡಲಾಯಿತು. ಕಲ್ಲಿನ ಕೆತ್ತನೆಗಳನ್ನು ವಿರೂಪಗೊಳಿಸಲಾಯಿತು.
  • ತಾಳಿಪ್ಪರಂಪು, ತ್ರಿಶಂಬರಂ ಮುಂತಾದ ಅತಿಪ್ರಮುಖ ದೇವಸ್ಥಾನಗಳಲ್ಲಿ ಟಿಪ್ಪು ಮತ್ತವನ ಸೈನಿಕರು ಮಾಡಿದ ಅನಾಚಾರಗಳನ್ನು ಎಂದಿಗೂ ಕ್ಷಮಿಸುವುದು ಸಾಧ್ಯವಿಲ್ಲ ಎಂದು ವಟಕ್ಕಂಕೂರು ರಾಜರಾಜ ವರ್ಮ ತನ್ನ “ಕೇರಳದ ಸಂಸ್ಕøತ ಸಾಹಿತ್ಯದ ಚರಿತ್ರೆ” ಎಂಬ ಪ್ರಸಿದ್ಧ ಕೃತಿಯಲ್ಲಿ ದಾಖಲಿಸಿದ್ದಾರೆ. ಟಿಪ್ಪುವಿನ ಕೈಯಿಂದ ದಕ್ಷಿಣ ಭಾರತದಲ್ಲಿ ನಾಶಗೊಂಡ ಒಟ್ಟು ದೇವಾಲಯಗಳ ಸಂಖ್ಯೆ 8000ಕ್ಕೂ ಹೆಚ್ಚು ಎನ್ನುವ ಮಾತನ್ನು ಮೈಸೂರು ಗಝೆಟಿಯರ್ ದಾಖಲಿಸಿದೆ.
  • ತಳಿ, ತಿರುವಣ್ಣೂರು, ವಾರಕ್ಕಲ್, ಪುತ್ತೂರು, ಗೋವಿಂದಪುರ ಮುಂತಾದ ಸ್ಥಳಗಳಲ್ಲಿದ್ದ ನೂರಾರು ದೇವಸ್ಥಾನಗಳು ಟಿಪ್ಪು ದಾಳಿಗೊಳದಾವು ಎನ್ನುವುದನ್ನು ಮಲಬಾರ್ ಗಝೆಟಿಯರ್ ಹೇಳುತ್ತದೆ. ಮಧೂರಿನ ಖ್ಯಾತ ಅನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಟಿಪ್ಪು ಮಾಡಿದ ಕತ್ತಿಯ ಗುರುತು ಇಂದಿಗೂ ಉಳಿದುಕೊಂಡಿದೆ.
  • ಬ್ರಿಟಿಷ್ ಇತಿಹಾಸಕಾರ ಲೆವಿಸ್ ರೈಸ್ ತನ್ನ “ಹಿಸ್ಟರಿ ಆಫ್ ಮೈಸೂರ್ ಆಂಡ್ ಕೂರ್ಗ್” ಕೃತಿಯಲ್ಲಿ “ಟಿಪ್ಪು ಸುಲ್ತಾನ ಸಾಯುವ ಕಾಲಕ್ಕೆ ಆತನ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ದಿನವೂ ಪೂಜೆ ನಡೆಯುತ್ತಿದ್ದ ದೇಗುಲಗಳು ಎರಡೇ. ಜಾತಕ, ಜ್ಯೋತಿಷ್ಯ ಮುಂತಾದವುಗಳಲ್ಲಿ ನಂಬಿಕೆ ಇಟ್ಟಿದ್ದ ಟಿಪ್ಪು, ಶ್ರೀರಂಗಪಟ್ಟಣದ ಕೆಲವು ಬ್ರಾಹ್ಮಣರಲ್ಲಿ ತನ್ನ ಭವಿಷ್ಯ ಕೇಳಲು ಹೋಗುತ್ತಿದ್ದ.
  • ಕೆಲವೊಂದು ದೇವಸ್ಥಾನಗಳಲ್ಲಿ ಶಾಂತಿಹೋಮಗಳನ್ನು ನಡೆಸಿದರೆ ಎಲ್ಲ ವಿಘ್ನಗಳೂ ನಿವಾರಣೆಯಾಗುತ್ತವೆ ಎಂದು ಆ ಬ್ರಾಹ್ಮಣರು ಹೇಳಿದ್ದರಿಂದ, ಚಕ್ರವರ್ತಿಯಾಗುವ ಕನಸು ಕಾಣುತ್ತಿದ್ದ ಟಿಪ್ಪು, ಒಂದೆರಡು ದೇವಸ್ಥಾನಗಳಲ್ಲಿ ಪೂಜೆ ನಡೆಸುವುದಕ್ಕೆ ಏರ್ಪಾಡು ಮಾಡಿದ. ಉಳಿದೆಲ್ಲಾ ದೇವಾಲಯಗಳ ಸಂಪತ್ತನ್ನೂ 1790ಕ್ಕಿಂತ ಮೊದಲೇ ಆತ ಮುಟ್ಟುಗೋಲು ಹಾಕಿಕೊಂಡಾಗಿತ್ತು. ತನ್ನ ರಾಜ್ಯದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಟಿಪ್ಪು ಮುಖ್ಯವಾಗಿ ದೇವಸ್ಥಾನಗಳ ಸಂಪತ್ತನ್ನೇ ಅವಲಂಭಿಸಿದ್ದ” ಎಂದು ದಾಖಲಿಸಿದ್ದಾನೆ.

ಕ್ರೈಸ್ತರ ವೈರಿ

  • ಟಿಪ್ಪುವಿನ ತಂದೆ ಹೈದರಾಲಿಯ ಕಾಲದಲ್ಲಿ ಬಿದನೂರು ಪ್ರಮುಖ ನಗರವಾಗಿತ್ತು. ಆಗ ಅದಕ್ಕೆ ಹೈದರ್‍ನಗರ ಎಂದೇ ಹೆಸರು. ಚಿರಕ್ಕಲ್ ರಾಜ್ಯದ ಕಮ್ಮಾರನ್ ನಂಬಿಯಾರ್ ಎಂಬಾತನನ್ನು ಇಸ್ಲಾಂಗೆ ಮತಾಂತರಿಸಿ ಅಯಾಜ್ ಖಾನ್ ಎಂದು ನಾಮಕರಣ ಮಾಡಿ, ಆತನ ಧೈರ್ಯ-ಸಾಹಸಗಳನ್ನು ಮೆಚ್ಚಿ ಹೈದರಾಲಿ ಅವನನ್ನು ಬಿದನೂರಿನ ಮಾಂಡಲಿಕನಾಕನಾಗಿ ನೇಮಿಸಿದ್ದ.
  • ಆದರೆ, ಟಿಪ್ಪುವಿಗೂ ಅಯಾಜ್ ಖಾನನಿಗೂ ಸಂಬಂಧ ಚೆನ್ನಾಗಿರಲಿಲ್ಲ. ಕೊನೆಗೊಮ್ಮೆ ಟಿಪ್ಪು ತನ್ನನ್ನು ಮುಗಿಸಿಹಾಕಲು ಯೋಜನೆ ರೂಪಿಸಿದ್ದಾನೆ ಎಂಬುದನ್ನು ತಿಳಿದು ಅಯಾಜ್ ಖಾನ್ ತನ್ನಲ್ಲಿದ್ದ ಚಿನ್ನ ದುಡ್ಡು ತೆಗೆದುಕೊಂಡು ಬಾಂಬೆ ರಾಜ್ಯಕ್ಕೆ ಓಡಿಹೋದ. ಬಿದನೂರಿಗೆ ದಾಳಿ ಮಾಡಿದ ಟಿಪ್ಪು ಅಲ್ಲಿದ್ದ ಎಲ್ಲಾ ಹಿಂದೂಗಳನ್ನು, ಒಬ್ಬರನ್ನೂ ಬಿಡದೆ, ಇಸ್ಲಾಂಗೆ ಮತಾಂತರಿಸಿದ.
  • ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದವರನ್ನು ಒಂದೋ ಕೊಲ್ಲಲಾಯಿತು, ಇಲ್ಲವೇ ಜೈಲುಗಳಲ್ಲಿ ಜೀವಮಾನಪೂರ್ತಿ ಕಳೆಯುವಂತೆ ಕೂಡಿಹಾಕಲಾಯಿತು. ಬಿದನೂರಲ್ಲಿ ಆತ ನಡೆಸಿದ ಹಿಂಸಾವಿನೋದಗಳ ಸಾಕ್ಷಿಗಳು ಈಗಲೂ ದೊರೆಯುತ್ತವೆ.
ಜನರನ್ನು ಇಸ್ಲಾಂಗೆ ಮತಾಂತರಿಸುವುದೇ ತನ್ನ ಜೀವನದ ಪರಮೋದ್ದೇಶವೆಂದು ಭಾವಿಸಿದ್ದ ಟಿಪ್ಪು ಮಂಗಳೂರಲ್ಲಿ ಅತ್ಯಂತ ಕ್ರೂರವಾಗಿ ಕ್ರಿಶ್ಚಿಯನ್ನರನ್ನು ನಡೆಸಿಕೊಂಡ.
  • ಹಲವು ಬಗೆಯ ಶಿಕ್ಷೆ, ಬೆದರಿಕೆಗಳ ಮೂಲಕ ಅವರನ್ನು ಮುಸ್ಲಿಮರಾಗಿಸಲಾಯಿತು. ಪೋರ್ತುಗೀಸರು ಅಲ್ಲಿ ಕ್ರಿಶ್ಚಿಯನ್ ಮತಾಂತರ ಕೆಲಸ ಮಾಡಿದ್ದಾರೆ. ಹಾಗಾಗಿ ತಾನು ಮಾಡುತ್ತಿರುವ ಕೆಲಸಕ್ಕೆ ಯಾವ ಪಾಪಲೇಪವೂ ಇಲ್ಲ ಎಂದು ಟಿಪ್ಪು ಹೇಳಿಕೊಳ್ಳುತ್ತಿದ್ದ. ಮಂಗಳೂರಲ್ಲಿ ಆತ ನಡೆಸಿದ ಅತ್ಯಾಚಾರಕ್ಕೆ ವಿಟ್ಲದ ಬಳಿಯ ನೆತ್ತರಕೆರೆ ಈಗಲೂ ಸಾಕ್ಷಿಯಾಗಿ ನಿಂತಿದೆ. ಮಂಗಳೂರಲ್ಲಿ ಹಿಡಿದುಹಾಕಿದ ಕ್ರಿಶ್ಚಿಯನ್ನರ ಕೈಕಾಲುಗಳಿಗೆ ಕೋಳ ತೊಡಿಸಿ ಶ್ರೀರಂಗಪಟ್ಟಣದವರೆಗೆ ನಡೆಸಲಾಯಿತು.
  • ದಾರಿಯಲ್ಲಿ ಸುಮಾರು ನಾಲ್ಕುಸಾವಿರ ಜನ ಅಸುನೀಗಿದರು. ಉಳಿದವರನ್ನು ಶ್ರೀರಂಗಪಟ್ಟಣದಲ್ಲಿ ಸಾಮೂಹಿಕವಾಗಿ ಮುಂಜಿ ಮಾಡಿಸಿ, ಜೈಲಿಗೆ ತಳ್ಳಲಾಯಿತು. ಬ್ರಿಟಿಷರ ಗೂಢಚಾರರು ಎಂಬ ಸಂಶಯದಿಂದ ಟಿಪ್ಪು ಸುಮಾರು 60,000 ಮಂಗಳೂರಿನ ಕ್ರಿಶ್ಚಿಯನ್ನರನ್ನು ಸೆರೆಗೆ ಹಾಕಿದ! ಅಲ್ಲದೆ, ಅಲ್ಲಿದ್ದ ಹಲವು ಚರ್ಚುಗಳನ್ನು ನೆಲಸಮ ಮಾಡಿಹಾಕಿದ.
  • 1680ರಲ್ಲಿ ಕಟ್ಟಲ್ಪಟ್ಟಿದ್ದ ಮಿಲಾಗ್ರಿಸ್ ಚರ್ಚು 1784ರಲ್ಲಿ ಟಿಪ್ಪುವಿನ ಕೈಯಲ್ಲಿ ನಾಮಾವಶೇಷವಾಯಿತು.ಔತಣಕೂಟದಲ್ಲಿ ನೆತ್ತರೋಕುಳಿ ಟಿಪ್ಪುವಿನ ಪಾತಕಗಳಿಗೆ ಪ್ರಬಲ ಪ್ರತಿರೋಧ ಒಡ್ಡುತ್ತಿದ್ದವರೆಂದರೆ ಕೊಡವರು. ಫ್ರೆಂಚ್ ಸೇನೆಯ ನೆರವು ಪಡೆದರೂ ಕೊಡವ ಸೇನೆಯನ್ನು ಬಗ್ಗುಬಡಿಯಲು ಸಾಧ್ಯವಾಗದ ಮೇಲೆ ಟಿಪ್ಪು ಅವರನ್ನು ಉಪಾಯದಿಂದ ಸೋಲಿಸುವ ಕುತಂತ್ರ ಹೆಣೆದ.

ವಿವಾದಾತ್ಮಕ ಹೇಳಿಕೆಗಳು

  • ಕರ್ನಾಟಕದ ಸಚಿವ ಡಿ.ಎಚ್.ಶಂಕರಮೂರ್ತಿ ಅವರು ನೀಡಿದ 'ಟೀಪ್ಪು ಕನ್ನಡ ವಿರೋಧಿ' ಎಂಬ ಹೇಳಿಕೆ ಟೀಪ್ಪು ಕುರಿತ ವಿವಾದಗಳನ್ನು ಕೆಣಕಿತು. ಗಿರೀಶ್ ಕಾರ್ನಾಡ್ ಅವರು ಟಿಪ್ಪು ದಿನಾಚರಣೆ ಸಂದರ್ಭದಲ್ಲಿ ಮಾತನಾಡುತ್ತಾ "ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬಹುದಿತ್ತು" ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಯಿತು.
  • ಬಡತನ, ನಿರುದ್ಯೋಗ, ಅನಕ್ಷರತೆ ಮುಂತಾದ ಸಕಲೆಂಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಜೊತೆಗೆ ಅಭದ್ರತೆ, ತಳಮಳ ಎದುರಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಸರ್ಕಾರ ಮಾಡಬೇಕಾದ್ದು ಬೇಕಾದಷ್ಟಿತ್ತು. ಮುಸ್ಲಿಂ ಸಮುದಾಯದ ಸಮಗ್ರ ಅಧ್ಯಯನ ನಡೆಸಿ ಸಾಚಾರ್ ಸಮಿತಿ ನೀಡಿದ ವರದಿಯನ್ನು ದಕ್ಷವಾಗಿ ಅನುಷ್ಠಾನಗೊಳಿಸಿದ್ದರೂ ಆ ಸಮುದಾಯದ ಸ್ಥಿತಿ ಉತ್ತಮಗೊಳ್ಳಬಹುದಿತ್ತು.
  • ಆದರೆ ಜಾತಿಗೊಂದು ಜಯಂತಿ ನಿಗದಿಪಡಿಸಿ ಆ ಸಮುದಾಯವನ್ನೇ ಉದ್ಧಾರ ಮಾಡಿದೆವೆಂದು ಬೀಗುವ ಆಳುವವರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವಂತಿರಲಿಲ್ಲ. ಇದುವರೆಗೆ ಕೆಲ ಸಂಘಸಂಸ್ಥೆಗಳು ಆಚರಿಸಿಕೊಂಡು ಬರುತ್ತಿದ್ದ ಟಿಪ್ಪು ಜಯಂತಿಯನ್ನು ಈ ಸಲದಿಂದ ಸರ್ಕಾರವೇ ಆಚರಿಸಲು ತೀರ್ಮಾನಿಸಿತು. ಮತ್ತಿನ್ನಾವ ಜಯಂತಿ, ಪುಣ್ಯತಿಥಿಗಳಲ್ಲೂ ಹೀಗಾಗಿರಲಿಲ್ಲ.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...