somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಜನವರಿ 04, 2019

ಕರ್ನಾಟಕ

Jump to navigationJump to search
{{#if:ಕನ್ನಡ|
ಕರ್ನಾಟಕ
ಕರುನಾಡು
ಕರ್ನಾಟಕ ರಾಜ್ಯ ನಕಾಶೆ
ಕರ್ನಾಟಕ ರಾಜ್ಯ ನಕಾಶೆ
ಕರ್ನಾಟಕ ಲಾಂಛನ
ಲಾಂಛನ
ದೇಶ ಭಾರತ
ಪ್ರದೇಶದಕ್ಷಿಣ ಭಾರತ
ಮಾಹಿತಿ೧ ನವೆಂಬರ್ ೧೯೫೬
ರಾಜಧಾನಿಬೆಂಗಳೂರು
ಜಿಲ್ಲೆಗಳು30
ಸರ್ಕಾರ
 - ರಾಜ್ಯಪಾಲರುವಜುಭಾಯ್ ರೂಢಾಭಾಯ್ ವಾಲಾ
 - ಮುಖ್ಯಮಂತ್ರಿಹೆಚ್.ಡಿ.ಕುಮಾರಸ್ವಾಮಿ
 - ಶಾಸಕಾಂಗದ್ವಿಸಭೆ (224 + 75 seats)
 - ಉಚ್ಛ ನ್ಯಾಯಾಲಯಕರ್ನಾಟಕ ಉಚ್ಛ ನ್ಯಾಯಾಲಯ
ವಿಸ್ತೀರ್ಣ [೧]
 - ಒಟ್ಟು೧,೯೧,೭೯೧ ಚದರ ಕಿಮಿ (೭೪,೦೫೦.೯ ಚದರ ಮೈಲಿ)
ಜನಸಂಖ್ಯೆ (೨೦೧೧)[೨]
 - ಒಟ್ಟು೬,೧೧,೩೦,೭೦೪
 - ಸಾಂದ್ರತೆ೩೧೮.೭/ಚದರ ಕಿಮಿ (೮೨೫.೫/ಚದರ ಮೈಲಿ)
ಕನ್ನಡಕನ್ನಡ
ಅಂತರ್ಜಾಲ ತಾಣ:[http://www.karnataka.gov.in/Pages/kn.aspxwww.karnataka.gov.in
ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.[೩]. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.[೪]

ಪರಿವಿಡಿ

ಇತಿವೃತ್ತ[ಬದಲಾಯಿಸಿ]

ಚರಿತ್ರೆ[ಬದಲಾಯಿಸಿ]

  • ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ.
  • ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರೀಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ. ಕ್ರಿ.ಪೂ.೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯ ದ ಭಾಗವಾಗಿತ್ತು.(ಚರ್ಚೆ)
  • ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು. ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಈ ಸಾಮ್ರಾಜ್ಯಗಳ ಸ್ಥಾಪನೆಯು ಪ್ರದೇಶದ ಸ್ವತಂತ್ರ ರಾಜಕೀಯ ಅಸ್ತಿತ್ವದ ಪ್ರಾದುರ್ಭಾವಕ್ಕೆ ಕಾರಣವಾಯಿತು. ಕದಂಬ ಸಾಮ್ರಾಜ್ಯವು ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು.
  • ಅದರ ರಾಜಧಾನಿ ಬನವಾಸಿಯಾಗಿತ್ತು.ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಹಲ್ಮಿಡಿ ಶಾಸನವುಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯವು ಇದಕ್ಕೆ ಸಾಕ್ಷಿಯಾಗಿವೆ.
  • ಈ ಸಾಮ್ರಾಜ್ಯಗಳ ನಂತರ ದಖನ್ ಅನ್ನು ಬಹುಪಾಲು ಆಳುತ್ತಿರುವ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಠ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯ ದಾತರಾಗಿದ್ದರು. ಇದು ೧೨ನೆಯ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು. ಕ್ರಿ.ಶ.೯೯೦-೧೨೧೦ವರೆಗೆ ಕರ್ನಾಟಕದ ಕೆಲವು ಪ್ರದೇಶಗಳು ಚೋಳ ಸಾಮ್ರಾಜ್ಯದ ಆಧೀನವಾಗಿತ್ತು.[೮]
  • ಈ ಕಾಲದಲ್ಲಿ ಪಶ್ಚಿಮ ಚಾಲುಕ್ಯರುಚೋಳ ಹಾಗೂ ಪೂರ್ವ ಚಾಲುಕ್ಯರ ವಿರುದ್ಧ ನಿರಂತರ ಕಾಳಗದಲ್ಲಿರುತ್ತಿದ್ದರು. ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಚ್ರಾಯ ಸ್ಥಿತಿಯನ್ನು ತಲುಪಿದವು.ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು.ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು.
  • ಹೊಯ್ಸಳ ಸಾಮ್ರಾಜ್ಯವು ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆ ಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
  • ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆ ಯಾಯಿತು. ೧೫೬೫ರಲ್ಲಿ, ತಾಳಿಕೋಟೆಯ ಯುದ್ಧದಲ್ಲಿ ದಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು.ಬಹಮನಿ ಸುಲ್ತಾನರ ಪತನಾನಂತರ ವಿಜಯಪುರದ ಸುಲ್ತಾನರು ಪ್ರಾಬಲ್ಯಕ್ಕೆ ಬಂದು, ದಖನ್ ಪ್ರದೇಶವನ್ನು ಆಳುತ್ತಿದ್ದರು.
  • ೧೭ನೆಯ ಶತಮಾನದ ಕೊನೆಯಲ್ಲಿ ವಿಜಯಪುರದ ಸುಲ್ತಾನರು ಮೊಘಲ್ರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ವಿಜಯಪುರದ ಸುಲ್ತಾನರು ಉರ್ದು ಹಾಗೂ ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು. ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗೂ ಅನ್ಯ ರಾಜರು ಆಳುತ್ತಿದ್ದರು.
  • ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು.
  • ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಬ್ರಿಟಿಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗೂ ಬ್ರಿಟಿಷ್ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು.
  • ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್ " ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ತದನಂತರ ಸೂಪ, ಬಾಗಲಕೋಟೆ, ಶೋರಾಪುರ, ನರಗುಂದ ಹಾಗು ದಾಂಡೇಲಿ ಹೀಗೆ ಹಲವೆಡೆಗಳಲ್ಲಿ ದಂಗೆಗಳು ನಡೆಯಿತು.
  • ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು. ೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು. ಕಾರ್ನಾಡ ಸದಾಶಿವರಾವ್, ಆಲೂರು ವೆಂಕಟರಾಯರುಎಸ್. ನಿಜಲಿಂಗಪ್ಪಕೆಂಗಲ್ ಹನುಮಂತಯ್ಯ, ನಿಟ್ಟೂರು ಶ್ರೀನಿವಾಸರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವಾರ್ಧದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು.

ಕರ್ನಾಟಕದ ಉದಯ[ಬದಲಾಯಿಸಿ]

ಕರ್ನಾಟಕ ೧೯೫೬
ಕರ್ನಾಟಕ ರಾಜ್ಯದ ಚಿಹ್ನೆಗಳು
ಭಾಷೆಕನ್ನಡ
ಚಿಹ್ನೆಗಂಡಬೇರುಂಡ
ನಾಡಗೀತೆಜಯ ಭಾರತ ಜನನಿಯ ತನುಜಾತೆಕವಿ:ಕುವೆಂಪು
  • ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
  • ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸುಹೈದರಾಬಾದ್, ಮತ್ತು ಬಾಂಬೆರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.

ಭೌಗೋಳಿಕ[ಬದಲಾಯಿಸಿ]

ಮೂರು ಭೌಗೋಳಿಕ ಪ್ರದೇಶಗಳು[ಬದಲಾಯಿಸಿ]

  1. ಕರಾವಳಿ ಕರ್ನಾಟಕ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.
  2. ಮಲೆನಾಡು - ಪಶ್ಚಿಮ ಘಟ್ಟಗಳು, ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.
  3. ಬಯಲುಸೀಮೆ - ದಖ್ಖನ್ ಪ್ರಸ್ಥ ಭೂಮಿ(ಅಥವಾ ದಕ್ಷಿಣ ಪ್ರಸ್ಥಭೂಮಿ), ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ.

ಕರ್ನಾಟಕದ ಜಲಾನಯನ ಪ್ರದೇಶಗಳು[ಬದಲಾಯಿಸಿ]

  • ಕರ್ನಾಟಕದ ಬಯಲು ಪ್ರದೇಶದ ಉತ್ತರ ಭಾಗವು ಭಾರತದ ಎರಡನೆಯ ಅತಿ ದೊಡ್ಡ ಶುಷ್ಕ ಪ್ರದೇಶವಾಗಿದೆ. ಕರ್ನಾಟಕದ ಎತ್ತರದ ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ (ಎತ್ತರ ೧೯೨೯ ಮೀ.(೬೩೨೯ ಅಡಿಗಳು)) ಕರ್ನಾಟಕದಲ್ಲಿ ಏಳು ಜಲಾನಯನ ಪ್ರದೇಶಗಳಿವೆ (river basin).[೯] ಅವುಗಳೆಂದರೆ:
  1. ಕೃಷ್ಣಾ ಜಲಾನಯನ ಪ್ರದೇಶ : ರಾಜ್ಯದ ಉತ್ತರ ಭಾಗದಲ್ಲಿರುವ ಕೃಷ್ಣಾನದಿಯ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ತುಂಗಭದ್ರಾಮಲಪ್ರಭಾಘಟಪ್ರಭಾಭೀಮಾ ನದಿಗಳು ಹರಿಯುತ್ತವೆ.
  2. ಕಾವೇರಿ ಜಲಾನಯನ ಪ್ರದೇಶ : ದಕ್ಷಿಣದ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ಹಾರಂಗಿಹೇಮಾವತಿಕಬಿನಿಸುವರ್ಣಾವತಿಲಕ್ಷ್ಮಣ ತೀರ್ಥಶಿಂಶಾಅರ್ಕಾವತಿ ನದಿಗಳು ಹರಿಯುತ್ತವೆ.
  3. ಗೋದಾವರಿ ಜಲಾನಯನ ಪ್ರದೇಶ: ಗೋದಾವರಿ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಯಾದ ಮಂಜೀರಾ ನದಿ ಹರಿಯುತ್ತದೆ.
  4. ಪಶ್ಚಿಮಕ್ಕೆ ಹರಿಯುವ ನದಿಗಳ ಜಲಾನಯನ ಪ್ರದೇಶ: ಈ ಪ್ರದೇಶದಲ್ಲಿ ಮಾಂಡವಿಕಾಳಿಗಂಗಾವಲ್ಲಿಅಘನಾಶಿನಿಶರಾವತಿಚಕ್ರಾವಾರಾಹಿನೇತ್ರಾವತಿ, ಬಾರಾಪೋಲ್ ನದಿಗಳು ಹರಿಯುತ್ತವೆ.
  5. ಉತ್ತರ ಪಿನಾಕಿನಿ ಜಲಾನಯನ ಪ್ರದೇಶ.
  6. ದಕ್ಷಿಣ ಪಿನಾಕಿನಿ ಜಲಾನಯನ ಪ್ರದೇಶ.
  7. ಪಾಲಾರ್ ಜಲಾನಯನ ಪ್ರದೇಶ.
Karnataka region wise

ಕರ್ನಾಟಕದಲ್ಲಿ ೫ ಪ್ರದೇಶಗಳು[ಬದಲಾಯಿಸಿ]

  1. ವಾಯುವ್ಯ ಕರ್ನಾಟಕ(ವಿಜಯಪುರಬಾಗಲಕೋಟಗದಗಧಾರವಾಡಹಾವೇರಿಬೆಳಗಾವಿಉತ್ತರ ಕನ್ನಡ)
  2. ಈಶಾನ್ಯ ಕರ್ನಾಟಕ (ಕಲಬುರಗಿಬೀದರ್ಯಾದಗಿರಿಕೊಪ್ಪಳರಾಯಚೂರುಬಳ್ಳಾರಿ)
  3. ಹಳೇ ಮೈಸೂರು (ಮೈಸೂರುರಾಮನಗರಮಂಡ್ಯಚಾಮರಾಜನಗರಕೋಲಾರಚಿಕ್ಕಬಳ್ಳಾಪುರಹಾಸನಚಿಕ್ಕಮಗಳೂರುಶಿವಮೊಗ್ಗ ತುಮಕೂರುಚಿತ್ರದುರ್ಗ,ದಾವಣಗೆರೆಬೆಂಗಳೂರುಬೆಂಗಳೂರು ಗ್ರಾಮಾಂತರ)
  4. ತುಳುನಾಡು (ಉಡುಪಿದಕ್ಷಿಣ ಕನ್ನಡ)
  5. ಕೊಡಗು (ಮಡಿಕೇರಿ)
ವಾಯುವ್ಯ ಕರ್ನಾಟಕದ ಎಲ್ಲ ಜಿಲ್ಲೆಗಳು ಬಾಂಬೆ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಈಶಾನ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳು ಹೈದರಾಬಾದ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿವೆ, ತುಳುನಾಡಿನ ಜಿಲ್ಲೆಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. 1956 ರಲ್ಲಿ ಬಾಂಬೆ, ಹೈದರಾಬಾದ್, ಮದ್ರಾಸ್ ರಾಜ್ಯಗಳಿಂದ ಬೇರ್ಪಟ್ಟ ಜಿಲ್ಲೆಗಳು ಹಾಗೂ ಕೊಡಗು, ಮೈಸೂರು ರಾಜ್ಯಕ್ಕೆ ಸೇರಿಕೊಂಡು ವಿಶಾಲ ಮೈಸೂರು ರಾಜ್ಯ ಉದಾಯವಾಯಿತು. ಹಾಗೂ ಕಾಲಾನಂತರದಲ್ಲಿ ಮೈಸೂರು ರಾಜ್ಯ ಕರ್ನಾಟಕವಾಯಿತು.

ಪ್ರದೇಶವಾರು ಜಿಲ್ಲೆಗಳ ವಿಸ್ತೀರ್ಣ[೧೦][ಬದಲಾಯಿಸಿ]

ಈಶಾನ್ಯ ಕರ್ನಾಟಕಬಳ್ಳಾರಿ ವಿಸ್ತೀರ್ಣ:೮೪೧೯ ಚ.ಕಿಮಿ, ಬೀದರ ವಿಸ್ತೀರ್ಣ:೫೪೪೮ ಚ.ಕಿಮಿ, ಕಲಬುರಗಿ ವಿಸ್ತೀರ್ಣ:೧೬೨೨೪ ಚ.ಕಿಮಿ, ಕೊಪ್ಪಳ ವಿಸ್ತೀರ್ಣ:೮೪೫೮ ಚ.ಕಿಮಿ, ರಾಯಚೂರುವಿಸ್ತೀರ್ಣ:೫೫೫೯ ಚ.ಕಿಮಿ, ಯಾದಗಿರಿ (೨೦೧೦ರಲ್ಲಿ ಹೊಸದಾಗಿ ರಚನೆಯಾಗಿದೆ)
ವಾಯುವ್ಯ ಕರ್ನಾಟಕಬಾಗಲಕೋಟ ವಿಸ್ತೀರ್ಣ:೬೫೯೪ ಚ.ಕಿಮಿ, ಬೆಳಗಾವಿ ವಿಸ್ತೀರ್ಣ:೧೩೪೧೫ ಚ.ಕಿಮಿ, ವಿಜಯಪುರ ವಿಸ್ತೀರ್ಣ:೧೦೪೭೫ ಚ.ಕಿಮಿ, ಧಾರವಾಡ ವಿಸ್ತೀರ್ಣ:೪೨೩೦ ಚ.ಕಿಮಿ, ಗದಗ ವಿಸ್ತೀರ್ಣ:೪೬೫೭ ಚ.ಕಿಮಿ, ಹಾವೇರಿ ವಿಸ್ತೀರ್ಣ:೪೮೫೧ ಚ.ಕಿಮಿ, ಉತ್ತರ ಕನ್ನಡ ವಿಸ್ತೀರ್ಣ:೧೦೨೯೧ ಚ.ಕಿಮಿ
ಹಳೇ ಮೈಸೂರು: ಬೆಂಗಳೂರು ನಗರ ವಿಸ್ತೀರ್ಣ:೨೧೯೦ ಚ.ಕಿಮಿ, ಬೆಂಗಳೂರು ಗ್ರಾಮಾಂತರ ವಿಸ್ತೀರ್ಣ:೫೦೧೫ ಚ.ಕಿಮಿ, ಚಿತ್ರದುರ್ಗ ವಿಸ್ತೀರ್ಣ:೮೩೮೮ ಚ.ಕಿಮಿ, ದಾವಣಗೆರೆ ವಿಸ್ತೀರ್ಣ:೬೦೧೮ ಚ್.ಕಿಮಿ, ಕೋಲಾರ ವಿಸ್ತೀರ್ಣ:೮೨೨೩ ಚ.ಕಿಮಿ, ಶಿವಮೊಗ್ಗ ವಿಸ್ತೀರ್ಣ:೮೪೬೫ ಚ.ಕಿಮಿ, ತುಮಕೂರು ವಿಸ್ತೀರ್ಣ:೧೦೫೯೮ ಚ.ಕಿಮಿ, ಚಿಕ್ಕಬಳ್ಳಾಪುರ (ಹೊಸದಾಗಿ ಸೇರ್ಪಡೆಯಾಗಿದೆ), ರಾಮನಗರ (ಹೊಸದಾಗಿ ಸೇರ್ಪಡೆಯಾಗಿದೆ), ಚಾಮರಾಜನಗರ ವಿಸ್ತೀರ್ಣ:೫೬೮೫ ಚ.ಕಿಮಿ,ಚಿಕ್ಕಮಗಳೂರು ವಿಸ್ತೀರ್ಣ:೭೨೦೧ ಚ.ಕಿಮಿ, ಹಾಸನ ವಿಸ್ತೀರ್ಣ:೬೮೧೪ ಚ.ಕಿಮಿ, ಮಂಡ್ಯ ವಿಸ್ತೀರ್ಣ:೪೯೬೧ ಚ.ಕಿಮಿ, ಮೈಸೂರು ವಿಸ್ತೀರ್ಣ:೬೨೬೯ ಚ.ಕಿಮಿ
ತುಳುನಾಡುದಕ್ಷಿಣ ಕನ್ನಡ ವಿಸ್ತೀರ್ಣ:೪೮೪೩ ಚ.ಕಿಮಿ, ಉಡುಪಿ ವಿಸ್ತೀರ್ಣ:೩೫೯೮ ಚ.ಕಿಮಿ
ಕೊಡಗುಕೊಡಗು ವಿಸ್ತೀರ್ಣ:೪೧೦೨ ಚ.ಕಿಮಿ

ಕರ್ನಾಟಕದ ಭೂರಚನೆಗಳು[ಬದಲಾಯಿಸಿ]

  1. ಧಾರವಾಡದ ಶೀಸ್ಟಗಳು (ಪದರು ಶಿಲೆ) ಮತ್ತು ಪೆಡಸುಕಲ್ಲಿನ(ಗ್ರಾನೈಟ್) ನಯಿಸ್(gneiss)ಗಳಿಂದ ಮಾಡಲ್ಪಟ್ಟ ಆರ್ಕಿಯನ್ ಸಂಕೀರ್ಣ
  2. ಕಲಡ್ಗಿ ಮತ್ತು ಭೀಮಾ ಸರಣಿಯ ಪ್ರೊಟೆರೋಜೋಯಿಕ್ ಅವಶೇಷ ರಹಿತ ಪದರು ರಚನೆಗಳು
  3. ದಖನ್ ಟ್ರ್ಯಾಪ್ಪಿಯನ್ ಮತ್ತು ಇಂಟರ್-ಟ್ರ್ಯಾಪ್ಪಿಯನ್ ನಿಕ್ಷೇಪಗಳು
  4. ಭೂರಚನೆಯ ತೃತೀಯ ಅವಧಿಯ ಹಾಗು ಇತ್ತೀಚಿನ ಲ್ಯಾಟರೈಟ್ ಗಳು ಮತ್ತು ಮೆಕ್ಕಲು ಮಣ್ಣಿನ ನಿಕ್ಷೇಪಗಳು
ರಾಜ್ಯದ ೬೦% ಭಾಗ ನಯಿಸ್(gneiss)ಗಳು, ಪೆಡಸುಕಲ್ಲುಗಳು(ಗ್ರಾನೈಟ್) ಹಾಗು ಚಾರ್ನೊಕೈಟ್ ಬಂಡೆಗಳಿಂದ ಕೂಡಿರುವ ಆರ್ಕಿಯನ್ ಸಂಕೀರ್ಣದಿಂದ ಆವೃತವಾಗಿದೆ. ಭೂರಚನೆಯ ತೃತೀಯ ಅವಧಿಯ ಆದಿಯಲ್ಲಿ ಜ್ವಾಲಾಮುಖಿ ಚಟುವಟಿಕೆಯ ನಿಲುಗಡೆಯ ನಂತರ ನಿರ್ಮಾಣ ವಾದ ಲ್ಯಾಟರೈಟ್ ಹೊದಿಕೆಗಳನ್ನು ದಖನ್ ಟ್ರ್ಯಾಪ್ಸಲ್ಲಿರುವ ಹಲವು ಜಿಲ್ಲೆಗಳಲ್ಲಿ ಕಾಣಬಹುದು.

ಹನ್ನೊಂದು ರೀತಿಯ ಮಣ್ಣಿನ ವ್ಯವಸ್ಥೆಗಳು[ಬದಲಾಯಿಸಿ]

  • ಕರ್ನಾಟಕದಲ್ಲಿ ಹನ್ನೊಂದು ರೀತಿಯ ಮಣ್ಣಿನ ವ್ಯವಸ್ಥೆಗಳಿವೆ:
  1. ಎಂಟಿಸೊಲ್ಸ್,
  2. ಇನ್ಸೆಪ್ಟಿಸೊಲ್ಸ್,
  3. ಮೊಲ್ಲಿಸೊಲ್ಸ್,
  4. ಸ್ಪೊಡೊಸೊಲ್ಸ್,
  5. ಅಲ್ಫಿಸೊಲ್ಸ್,
  6. ಅಲ್ಟಿಸೊಲ್ಸ್,
  7. ಆಕ್ಸಿಸೊಲ್ಸ್,
  8. ಅರಿಡಿಸೊಲ್ಸ್,
  9. ವರ್ಟಿಸೊಲ್ಸ್,
  10. ಆಂಡಿಸೊಲ್ಸ್ ಮತ್ತು
  11. ಹಿಸ್ಟೊಸೊಲ್ಸ್.

ಕರ್ನಾಟಕದ ಮಣ್ಣಿನ ಪ್ರಕಾರಗಳು[ಬದಲಾಯಿಸಿ]

ಕೃಷಿ ಸಾಮರ್ಥ್ಯದ ಆಧಾರದ ಮೇಲೆ ಕರ್ನಾಟಕದಲ್ಲಿರುವ ಮಣ್ಣನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು:
  1. ಕೆಂಪು ಮಣ್ಣು,
  2. ಜೇಡಿ ಮಣ್ಣು,
  3. ಕಪ್ಪು ಮಣ್ಣು,
  4. ಮೆಕ್ಕಲು ಮಣ್ಣು,
  5. ಅರಣ್ಯ ಮಣ್ಣು ಮತ್ತು
  6. ಕರಾವಳಿ ಮಣ್ಣು.

ಕರ್ನಾಟಕ ನಾಲ್ಕು ಋತುಗಳು[ಬದಲಾಯಿಸಿ]

  • ಕರ್ನಾಟಕ ನಾಲ್ಕು ಋತುಗಳನ್ನು ಅನುಭವಿಸುತ್ತದೆ.
  1. ಜನವರಿ ಮತ್ತು ಫೆಬ್ರವರಿಯಲ್ಲಿ ಚಳಿಗಾಲ,
  2. ಮಾರ್ಚ್ ಮತ್ತು ಮೇಯಲ್ಲಿ ಬೇಸಿಗೆ ಕಾಲ,
  3. ಜೂನ್ ನಿಂದ ಸೆಪ್ಟೆಂಬರ್ ವರೆಗೆ ವರ್ಷಾಕಾಲ ಹಾಗು
  4. ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ವರ್ಷೋತ್ತರ ಕಾಲ.

ಕರ್ನಾಟಕದ ಮೂರು ವಲಯಗಳು[ಬದಲಾಯಿಸಿ]

  • ಹವಾಮಾನದ ಆಧಾರದ ಮೇಲೆ ಕರ್ನಾಟಕವನ್ನು ಮೂರು ವಲಯಗಳಾಗಿ ವಿಂಗಡಿಸಬಹುದು:
  1. ಕರಾವಳಿ,
  2. ಉತ್ತರ ಒಳನಾಡು ಹಾಗು
  3. ದಕ್ಷಿಣ ಒಳನಾಡು. ಇವುಗಳಲ್ಲಿ ಕರಾವಳಿ ವಲಯವು ಅತಿ ಹೆಚ್ಚು ಮಳೆಯನ್ನು ಪಡೆಯುತ್ತದೆ. ಕರಾವಳಿ ವಲಯದ ವಾರ್ಷಿಕ ಸರಾಸರಿ ಮಳೆ ೩೬೩೮.೫ಮಿಲಿಮೀಟರ್ (೧೪೩ ಅಂಗುಲ) ರಾಜ್ಯದ ವಾರ್ಷಿಕ ಸರಾಸರಿ ಮಳೆ ೧೧೩೯ಮಿಲಿಮೀಟರ್ (೪೫ ಅಂಗುಲ)ಗಿಂತ ತುಂಬ ಜಾಸ್ತಿಯಿದೆ.

ಹವಾಮಾನ[ಬದಲಾಯಿಸಿ]

  • ಕರ್ನಾಟಕದ ಅತಿ ಹೆಚ್ಚು ತಾಪಮಾನವಾದ ೪೫.೬°C (೧೧೪ °F) ರಾಯಚೂರಿನಲ್ಲಿ ದಾಖಲಾಯಿತು.
  • ಕರ್ನಾಟಕದ ಅತಿ ಕಡಿಮೆ ತಾಪಮಾನವಾದ ೨.೮°C (೩೭ °F) ಬೀದರಿನಲ್ಲಿ ದಾಖಲಾಯಿತು.
  • ಕರ್ನಾಟಕದ ಸುಮಾರು ೩೮,೭೨೪ ಚ.ಕಿಮೀ. (೧೪,೯೫೧ ಚ.ಮೈ) ಪ್ರದೇಶವು ಅರಣ್ಯದಿಂದ ಆವೃತವಾಗಿದೆ.
  • ಕರ್ನಾಟಕದ ಅರಣ್ಯ ಪ್ರದೇಶದ ಶೇಕಡಾವಾರು ಸಮಸ್ತ ಭಾರತದ ಸರಾಸರಿಯಾದ ೨೩%ಗಿಂತ ಸ್ವಲ್ಪ ಕಡಿಮೆಯಿದೆ ಹಾಗು ರಾಷ್ಟ್ರೀಯ ಅರಣ್ಯ ನೀತಿಯಲ್ಲಿ ವಿಧಿಸಲಾದ ೩೩%ಗಿಂತ ಗಮನಾರ್ಹವಾಗಿ ಕಡಿಮೆಯಿದೆ.

ಕರ್ನಾಟಕದಲ್ಲಿ ಮಳೆ[ಬದಲಾಯಿಸಿ]

ಜಿಲ್ಲಾಜಿಲ್ಲಾ ಸರಾಸರಿ ವಾರ್ಷಿಕ ಮಳೆ (ಮಿಮೀ)
ಬೆಂಗಳೂರು ನಗರ978
ಬೆಂಗಳೂರು ಗ್ರಾಮೀಣ885
ಚಿತ್ರದುರ್ಗ573
ದಾವಣಗೆರೆ700
ಕೋಲಾರ744
ಶಿವಮೊಗ್ಗಾ1813
ತುಮಕೂರು688
ಬಾಗಲಕೋಟೆ562
ಬೆಳಗಾವಿ808
ವಿಜಾಪುರ578
ಧಾರವಾಡ772
ಗದಗ612
ಹಾವೇರಿ753
ಉತ್ತರ ಕನ್ನಡ2835
ಬಳ್ಳಾರಿ636
ಬೀದರ್847
ಗುಲ್ಬರ್ಗಾ777
ಕೊಪ್ಪಳ572
ರಾಯಚೂರು621
ಚಾಮರಾಜನಗರ751
ಚಿಕ್ಕಮಗಳೂರು1925
ದಕ್ಷಿಣ ಕನ್ನಡ3975
ಹಾಸನ1031
ಕೊಡಗು2718
ಮಂಡ್ಯ806
ಮೈಸೂರು798
ಉಡುಪಿ4119[೧೧]

ಜಿಲ್ಲೆಗಳು [೧][ಬದಲಾಯಿಸಿ]

1956 ರಲ್ಲಿ ವಿಶಾಲ ಮೈಸೂರು
ಕರ್ನಾಟಕದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಭಾರತೀಯ ರೈಲು ಮಾರ್ಗ
ಒಟ್ಟು ೩೦ ಜಿಲ್ಲೆಗಳು
  • ಪ್ರತಿಯೊಂದು ಜಿಲ್ಲೆಗೆ ಜಿಲ್ಲಾಧಿಕಾರಿ ಇರುತ್ತಾರೆ. ಸಹಾಯಕ ಕಮಿಷನರ್, ತಹಸೀಲುದಾರ, ಶಿರಸ್ತೆದಾರ/ಸಹಾಯಕ ತಹಸೀಲುದಾರ, ಕಂದಾಯ ಪರಿಶೀಲನಾಧಿಕಾರಿ, ಗ್ರಾಮ ಲೆಕ್ಕಿಗ ಮೊದಲಾದ ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗೆ ನೆರವಾಗಲು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಇರುತ್ತಾರೆ.[೧೨] ಜಿಲ್ಲೆಯನ್ನು ವಿಭಾಗಿಸಿ ತಾಲೂಕುಗಳನ್ನು ರಚಿಸಲಾಗಿದೆ. ತಾಲೂಕನ್ನು ವಿಭಾಗಿಸಿ ಗ್ರಾಮಗಳನ್ನು ರಚಿಸಲಾಗಿದೆ. ಜಿಲ್ಲಾಡಳಿತದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗಳು, ಗ್ರಾಮ ಪಂಚಾಯತ್ ಗಳು, ನಗರಪಾಲಿಕೆಗಳು ಪಾಲ್ಗೊಳ್ಳುತ್ತವೆ.

ಜನಸಂಖ್ಯೆ[ಬದಲಾಯಿಸಿ]

  • 2011ರ ಜನಗಣತಿ ಪ್ರಕಾರ, ಕರ್ನಾಟಕದ ಜನಸಂಖ್ಯೆಯು 6,11,30,704 ಆಗಿದೆ ಹಾಗು ಇದರಲ್ಲಿ ಪುರುಷರ ಸಂಖ್ಯೆ 3,10,57,742 (50.80%) ಹಾಗು ಸ್ತೀಯರ ಸಂಖ್ಯೆ 3,00,72,962 (49.19%) ಅಂದರೆ ಪ್ರತಿ 1000 ಪುರುಷರಿಗೆ 968 ಸ್ತೀಯರು. 2001/2001ರ ಜನಸಂಖ್ಯೆಕ್ಕಿಂತ 2011/2011ರ ಜನಸಂಖ್ಯೆ 15.67%ರಷ್ಟು ಹೆಚ್ಚಿದೆ. ಜನಸಂಖ್ಯಾ ಸಾಂದ್ರತೆಯು 318.8/ಚ.ಕಿಮೀ.ರಷ್ಟಿದೆ ಹಾಗು ನಗರ ಪ್ರದೇಶಗಳಲ್ಲಿ 38.57% ರಷ್ಟು ಜನ ವಾಸಿಸುತ್ತಾರೆ.
  • ಸಾಕ್ಷರತೆಯು 75.6%ರಷ್ಟಿದೆ,ಇದರಲ್ಲಿ ಪುರುಷರ ಸಾಕ್ಷರತೆಯು 82.85% ಮತ್ತು ಸ್ತೀಯರ ಸಾಕ್ಷರತೆಯು 68.13%ರಷ್ಟಿದೆ. ಜನಸಂಖ್ಯೆಯ 83% ಹಿಂದುಗಳು, 11% ಮುಸಲ್ಮಾನರು, 4% ಕ್ರೈಸ್ತರು, 0.78% ಜೈನರು, 0.73% ಬೌದ್ಧರು ಮತ್ತು ಉಳಿದವರು ಅನ್ಯ ಧರ್ಮದವರು. ಕನ್ನಡವು ಕರ್ನಾಟಕದ ಆಡಳಿತ ಭಾಷೆಯಾಗಿದೆ ಹಾಗು ಸುಮಾರು 64.75%ರಷ್ಟು ಜನರ ಮಾತೃಭಾಷೆಯಾಗಿದೆ.
  • 1991ರಲ್ಲಿ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಲ್ಲಿ 9.72% ಉರ್ದು, 8.34% ತೆಲುಗು, 5.46% ತಮಿಳು, 3.95% ಮರಾಠಿ, 3.38% ತುಳು, 1.87% ಹಿಂದಿ, 1.78% ಕೊಂಕಣಿ, 1.69% ಮಲಯಾಳಂ ಮತ್ತು 0.25% ಕೊಡವ ತಕ್ ಮಾತಾಡುವ ಜನರಿದ್ದರು.ಕರ್ನಾಟಕದ ಜನನ ದರವು 19.9 (ಪ್ರತಿ ಸಾವಿರ ಜನರಿಗೆ), ಮೃತ್ಯು ದರವು 7.3 (ಪ್ರತಿ ಸಾವಿರ ಜನರಿಗೆ), ಶಿಶು ಮೃತ್ಯು ದರವು 47 (ಪ್ರತಿ ಸಾವಿರ ಜನನಗಳಿಗೆ), ಮಾತೃ ಮೃತ್ಯು (ಜನನ ಸಮಯದಲ್ಲಿ) ದರವು 213 (ಪ್ರತಿ ಲಕ್ಷ ಜನನಗಳಿಗೆ), ಒಟ್ಟು ಸಂತಾನ ದರವು (ಪ್ರತಿ ಮಹಿಳೆಗೆ ಅವಳ ಸಂತಾನೋತ್ಪತ್ತಿ ಕಾಲದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ) 2.1 ಆಗಿದೆ.[೧೩]
  • ಕಡೆಯ ಬಾರಿಗೆ ಇಂತಹ ಗಣತಿ ನಡೆದಿದ್ದು 2011ರಲ್ಲಿ. ಭಾರತದ ಒಟ್ಟು 4,37,06,512 (4.37 ಕೋಟಿ) ಜನ ತಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳುತ್ತಾರೆ ಎಂಬುದನ್ನು ಈ ಗಣತಿ ಕಂಡುಕೊಂಡಿತು. ತನ್ನನ್ನು ಹೊರತುಪಡಿಸಿಯೂ, ತನ್ನ ಮಾತೃಭಾಷೆಯೇ ‘ನಮ್ಮದು ಕೂಡ’ ಎಂದು ಹೇಳಿಕೊಳ್ಳುವವರ ಸಂಖ್ಯೆ 4.37 ಕೋಟಿಗಿಂತ ಹೆಚ್ಚು ಎಂಬುದು ಗೊತ್ತಾದಾಗ ಹೆಮ್ಮೆಯಾಗುವುದು ಸಹಜ. 2001ರ ಅಂಕಿ-ಅಂಶಗಳಿಗೆ ಹೋಲಿಸಿದರೆ ಕನ್ನಡ ಮಾತನಾಡುವವರ ಬೆಳವಣಿಗೆ ಪ್ರಮಾಣ ಶೇಕಡ 16ರಷ್ಟು (ನಿಖರವಾಗಿ ಹೇಳಬೇಕೆಂದರೆ, ಅದು ಶೇಕಡ 15.99ರಷ್ಟು). ಇದು ಕೂಡ ಮೇಲ್ನೋಟಕ್ಕೆ ಒಳ್ಳೆಯ ಚಿತ್ರಣವನ್ನೇ ನೀಡುತ್ತದೆ.
ಕನ್ನಡ ಮಾತನಾಡುವವರು ಎಂದು ಜನಗಣತಿ ನೀಡಿರುವ ಅಂಕಿ-ಅಂಶಗಳಲ್ಲಿ ಬಡಗ ಭಾಷಿಗರು (1,33,550 ಜನ), ಕುರುಂಬ ಭಾಷಿಗರು (24,189 ಜನ), ‘ಇತರ ಭಾಷಿಗರು’ (30,244 ಜನ) ಕೂಡ ಸೇರಿದ್ದಾರೆ. ಹಾಗೆಯೇ, ಜನಗಣತಿಯು ‘ಪ್ರಾಕೃತ’ (?) ಎಂದು ಕರೆದಿರುವ 12,257 ಜನ ಕೂಡ ಸೇರಿದ್ದಾರೆ. ಇವನ್ನೆಲ್ಲ ಪರಿಗಣಿಸಿದಾಗ, ಕನ್ನಡವನ್ನೇ ಮಾತನಾಡುವವರ ಸಂಖ್ಯೆ 4,35,06,272ಕ್ಕೆ (4.35 ಕೋಟಿ) ಇಳಿಯುತ್ತದೆ. [೧೪]

ಶಿಕ್ಷಣ[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯಮೈಸೂರು
  2. ಕರ್ನಾಟಕ ವಿಶ್ವವಿದ್ಯಾಲಯಧಾರವಾಡ
  3. ಬೆಂಗಳೂರು ವಿಶ್ವವಿದ್ಯಾಲಯಬೆಂಗಳೂರು
  4. ಕೃಷಿ ವಿಶ್ವವಿದ್ಯಾಲಯ, ಧಾರವಾಡ
  5. ಕೃಷಿ ವಿಶ್ವವಿದ್ಯಾಲಯ, ರಾಯಚೂರು
  6. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
  7. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ
  8. ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ
  9. ಗುಲ್ಬರ್ಗಾ ವಿಶ್ವವಿದ್ಯಾಲಯಗುಲ್ಬರ್ಗಾ
  10. ಮಂಗಳೂರು ವಿಶ್ವವಿದ್ಯಾಲಯಮಂಗಳೂರು
  11. ಕುವೆಂಪು ವಿಶ್ವವಿದ್ಯಾನಿಲಯಶಿವಮೊಗ್ಗ
  12. ಕನ್ನಡ ವಿಶ್ವವಿದ್ಯಾಲಯಹಂಪಿ
  13. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಮೈಸೂರು
  14. ತುಮಕೂರು ವಿಶ್ವವಿದ್ಯಾಲಯತುಮಕೂರು
  15. ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು
  16. ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ
  17. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಬೆಳಗಾವಿ
  18. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿಜಯಪುರ
  19. ಕರ್ನಾಟಕ ಪಶು ವೈದ್ಯಕೀಯ,ಮೀನುಗಾರಿಕೆ ವಿಶ್ವವಿದ್ಯಾನಿಲಯ, ಬೀದರ
  20. ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು
  21. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ
  22. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೋಟಗೊಡಿ, ಹಾವೇರಿ ಜಿಲ್ಲೆ
  23. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು
  24. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
  25. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
  26. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ, ಗದಗ

ಕರ್ನಾಟಕದ ಆರ್ಥಿಕತೆ[ಬದಲಾಯಿಸಿ]

  • ಕರ್ನಾಟಕ ಭಾರತ ದೇಶದ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ರಾಜ್ಯ. ೨೦೦೮-೦೯ರ ಆರ್ಥಿಕ ಬೆಳವಣಿಗೆ ದರದ ಪ್ರಕಾರವಾಗಿ ರಾಜ್ಯದ ಅಭಿವೃದ್ದಿ ದರವು $೫೮.೨೩ರಷ್ಟಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ತಲಾದಾಯದಲ್ಲಿಯೂ ಅತ್ಯಂತ ವೇಗದ ಬೆಳವಣಿಗೆ ಯನ್ನು ಕಳೆದೊಂದು ದಶಕದಲ್ಲಿ ಕರ್ನಾಟಕ ರಾಜ್ಯ ದಾಖಲಿಸಿದೆ. ತಲಾದಾಯದ ಜಿಡಿಪಿ ಅಂಕಿ ಅಂಶಗಳ ಅನುಸಾರ ರಾಜ್ಯವು ದೇಶದ ರಾಜ್ಯಗಳಲ್ಲಿ ೬ ನೇ ಸ್ಥಾನದಲ್ಲಿದೆ.
  • ೨೦೦೬ರ ಸೆಪ್ಟೆಂಬರ್ ತಿಂಗಳವರೆಗೆ ಒಟ್ತು ೭೮,೦೯೭ ರುಪಾಯಿಗಳ ವಿದೇಶಿ ಬಂಡವಾಳ ಹರಿದು ಬಂದಿರುತ್ತದೆ. ೨೦೦೪ರ ಅಂತ್ಯದ ವೇಳೆಗೆ ರಾಜ್ಯದ ನಿರುದ್ಯೋಗ ಪ್ರಮಾಣ ೪.೯೪%ರಷ್ಟಿದ್ದು ಇದೇ ವೇಳೆ ದೇಶದಲ್ಲಿನ ನಿರುದ್ಯೋಗದ ಪ್ರಮಾಣವು ೫.೯೯% ಇದ್ದುದು ಗಮನಾರ್ಹ ಅಂಶ. ಅದೇ ಸಮಯದಲ್ಲಿ ಕರ್ನಾಟಕದ ಹಣದುಬ್ಬರ ದರವೂ ಕೂಡ ರಾಷ್ತ್ರೀಯ ಹಣದುಬ್ಬರ ದರಕ್ಕಿಂತಲೂ ಕಡಿಮೆ ಯಾಗಿತ್ತು. ರಾಷ್ತ್ರದ ಹಣದುಬ್ಬರ ಪ್ರಮಾಣ ೪.೭% ಇದ್ದರೆ, ರಾಜ್ಯದ ಹಣದುಬ್ಬರ ದರ ೪.೪% ಇತ್ತು.
  • ದೇಶದಲ್ಲಿನ ಬಡತನದ ಅಂದಾಜು ೨೭% ಆಗಿದ್ದರೆ ಕರ್ನಾಟಕದಲ್ಲಿ ಅದು ೧೭% ಆಗಿರುತ್ತದೆ. ರಾಜ್ಯದಲ್ಲಿ ಒಟ್ಟು ೫೬% ದಷ್ಟು ಮಂದಿ ಕೃಷಿಯಾಧಾರಿತ ಉದ್ಯೋಗಸ್ಥರಾಗಿದ್ದು ಒಟ್ತು ೧೨.೩೧ ಮಿಲಿಯನ್ ಹೆಕ್ಟೇರ್ ನಶ್ಟು ಭೂಮಿಯನ್ನು ಕೃಷಿಗಾಗಿ ಬಳಸಲಾಗುತ್ತಿದೆ, ಇದು ರಾಜ್ಯದ ಒಟ್ಟು ಭೂಪ್ರದೇಶದ ೬೪%ರಷ್ಟಾಗುತ್ತದೆ. ಇದರಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ಮಾನ್ಸೂನ್ ಮಾರುತ ತರುವ ಮಳೆಯನ್ನವಲಂಬಿಸಿದ್ದರೆ, ೨೬.೫೫ ದಷ್ಟು ಭೂಮಿಯು ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿದೆ.
  • ಕರ್ನಾಟಕದಲ್ಲಿ ಸಾಕಷ್ಟು ಸಾರ್ವಜನಿಕ ಹಾಗೂ ಖಾಸಗಿ ವಲಯದ ಕೈಗಾರಿಕೆಗಳಿದ್ದು ಅವುಗಳಲ್ಲಿ ಕೆಲ ಪ್ರಮುಖವಾದವುಗಳನ್ನು ಹೀಗೆ ಹೆಸರಿಸಬಹುದು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಹೆವ್ವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಇನ್ಫೋಸಿಸ್ ಮೊದಲಾದವು. ಅಲ್ಲದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ, ಭಾರತೀಯ ಶಕಿ ಸಂಪನ್ಮೂಲ ಸಂಶೋಧನಾ ಕೇಂದ್ರ, ಕೇಂದ್ರ ಆಹಾರ ತಂತ್ರಜ್ತ್ಜಾನ ಸಂಶೋಧನಾ ಕೇಂದ್ರದ ಪ್ರಧಾನ ಕಛೇರಿಗಳಿರುವುದು ಕರ್ನಾಟಕದ ಬೆಂಗಳೂರಿನಲ್ಲಿ.
  • ಇದಲ್ಲದೆ ಮಂಗಳೂರಿನಲ್ಲಿ ಮಂಗಳೂರು ರಿಫೈನರಿ ಪೆತ್ರೋಕೆಮಿಕಲ್ಸ್ ಲಿಮಿಟೆಡ್[೧೫] ಎನ್ನುವ ತೈಲೋತ್ಪನ್ನ ಕೈಗಾರಿಕ ಘಟಕವೂ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ೧೯೮೦ರಿಂದ ಆರಂಭವಾದ ಮಹಿತಿ ತಂತ್ರಜ್ಞಾನ ಉದ್ಯಮ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ೨೦೦೭ ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಸುಮಾರು ೨೦೦೦ ಮಾಹಿತಿ ತಂತ್ರಜ್ಞಾನ ಘಟಕಗಳಿವೆ.
  • ದೇಶದ ಐಟಿ ದಿಗ್ಗಜ ಸಂಸ್ಥೆಗಳೆನಿಸಿದ ಇನ್ಫೋಸಿಸ್, ವಿಪ್ರೋ ಕೂಡ ಕರ್ನಾಟಾಕದಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿವೆ. ೨೦೦೬-೦೭ರ ಅಂಕಿ ಅಂಶಗಳ ಅಂದಾಜಿನ ಪ್ರಕಾರ ದೇಶದ ೩೮% ದಷ್ಟು ಮಾಹಿತಿ ತಂತ್ರಜ್ಞಾನ ರಪ್ತು ವಹಿವಾಟು ಕರ್ನಾಟಕದಿಂದ ಆಗಿರುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಬೆಂಗಳೂರು "ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ" ಎಂದು ಪ್ರಸಿದ್ಧವಾಗಿದೆ.
  • ಕರ್ನಾಟಕವು ರೇಷ್ಮೆ ಉದ್ಯಮಕ್ಕೂ ಹೆಸರಾಗಿದ್ದು ರಾಜ್ಯದ ಮೈಸೂರ್ ಸಿಲ್ಕ್ ವಿಶ್ವವ್ಯಾಪಿ ಮನ್ನಣೆ ಹೊಂದಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಮುದ್ದೇನಹಳ್ಳಿ ಸಮೀಪ "ಸಿಲ್ಕ್ ಸಿಟಿ" ನಿರ್ಮಾಣಕ್ಕಾಗಿ ಸುಮಾರು ೭೦ ಕೋಟಿ ರುಪಾಯಿಗಳನ್ನ ವಿನಿಯೋಗಿಸಲು ಮುಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿಯು ಸಹ ರಾಜ್ಯವು ನುಂಚೂಣಿಯಲ್ಲಿದ್ದು ದೇಶದ ೭ ಪ್ರಧಾನ ರಾಶ್ಟ್ರೀಕೃತ ಬ್ಯಾಂಕುಗಳ ಮೂಲ ನೆಲೆ ಇರುವುದು ಕರ್ನಾಟಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿವೆ.
  • ಕರ್ನಾಟಕದ ಹಟ್ಟಿ ಚಿನ್ನದ ಗಣಿಯು ದೇಶದಲ್ಲೇ ಅತಿ ಹೆಚ್ಚು ಮತ್ತು ಪ್ರಾಥಮಿಕ ಚಿನ್ನ ಉತ್ಪಾದಿಸುವ ಏಕೈಕ ಚಿನ್ನದ ಗಣಿಯಾಗಿದೆ.

ಕರ್ನಾಟಕದಲ್ಲಿ ಜನಿಸಿದ ಬ್ಯಾಂಕುಗಳು[ಬದಲಾಯಿಸಿ]

  1. ಕೆನರಾ ಬ್ಯಾಂಕ್
  2. ಸಿಂಡಿಕೇಟ್ ಬ್ಯಾಂಕ್
  3. ಕಾರ್ಪೊರೇಷನ್ ಬ್ಯಾಂಕ್
  4. ವಿಜಯ ಬ್ಯಾಂಕ್
  5. ವೈಶ್ಯಾ ಬ್ಯಾಂಕ್
  6. ಕರ್ನಾಟಕ ಬ್ಯಾಂಕ್
  7. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು.

ರಾಜಕೀಯ ವ್ಯವಸ್ಥೆ[ಬದಲಾಯಿಸಿ]

  1. ಕರ್ನಾಟಕದ ಶಾಸಕಾಂಗದ ವ್ಯವಸ್ಥೆ ಭಾರತದ ಸಂಸತ್ತಿನ ವ್ಯವಸ್ಥೆಯನ್ನು ಅನುಕರಿಸುತ್ತದೆ.
  2. ಕರ್ನಾಟಕ ವಿಧಾನ ಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಕರ್ನಾಟಕ ಸರ್ಕಾರದ ಎರಡು ಮುಖ್ಯ ಮನೆಗಳು.
  3. ವಿಧಾನ ಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ, ವಿಧಾನ ಪರಿಷತ್ತಿಗೆ ಪರೋಕ್ಷ ಚುನಾವಣೆಗಳು ನಡೆಯುತ್ತವೆ.
  4. ವಿಧಾನ ಸಭೆಯ ಸದಸ್ಯರ ಸಂಖ್ಯೆ ೨೨೪.
  5. ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ೭೫.
  6. ವಿಧಾನ ಸಭೆಯ ಸದಸ್ಯತ್ವದ ಗರಿಷ್ಠ ಅವಧಿ ೫ ವರ್ಷಗಳಾಗಿವೆ.
  7. ವಿಧಾನ ಪರಿಷತ್ತಿನ ಸದಸ್ಯತ್ವದ ಗರಿಷ್ಠ ಅವಧಿ ೬ ವರ್ಷಗಳಾಗಿವೆ.
  8. ಮೊದಲ ವಿಧಾನ ಸಭೆ ೧೯೫೨ ರಿಂದ ೧೯೫೭ರ ವರೆಗೆ ಸೇರಿತ್ತು.
  9. ವಿಧಾನ ಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದ ಅಥವಾ ರಾಜಕೀಯ ಪಕ್ಷಗಳ ಒಕ್ಕೂಟದ ನಾಯಕರು ಮುಖ್ಯಮಂತ್ರಿಗಳಾಗಿ ಆರಿಸಲ್ಪಡುತ್ತಾರೆ. ಇದುವರೆಗೆ ಒಟ್ಟು ೨೨ ಮುಖ್ಯಮಂತ್ರಿಗಳನ್ನು ಕರ್ನಾಟಕ ಕಂಡಿದೆ.
  10. ಕರ್ನಾಟಕದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳಲ್ಲಿ ಕೆಲವೆಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಕಾಂ) ,| ಭಾರತೀಯ ಜನತಾ ಪಕ್ಷ | ಕ್ರಾ೦ತಿರ೦ಗ ಕೆಸಿಪಿ,| ಜನತಾ ದಳ(ಜಾತ್ಯತೀತ) ಇತ್ಯಾದಿ.
  11. ಕರ್ನಾಟಕದಿಂದ ಲೋಕ ಸಭೆಗೆ ಆಯ್ಕೆ ಆಗುವವರ ಸಂಖ್ಯೆ ೨೮ ಹಾಗು ರಾಜ್ಯ ಸಭೆಗೆ ಆಯ್ಕೆ ಆಗುವವರ ಸಂಖ್ಯೆ ೧೨.

ಸ್ವಾಭಾವಿಕ ಪ್ರದೇಶಗಳು[ಬದಲಾಯಿಸಿ]

ಕರ್ನಾಟಕ ಅನೇಕ ಅಭಯಾರಣ್ಯಗಳ ತವರು. ಇವು ಚಾಮರಾಜನಗರ ಜಿಲ್ಲೆಯಬಂಡೀಪುರ ಅಭಯಾರಣ್ಯಬೆಂಗಳೂರು ಜಿಲ್ಲೆಯ ಬನ್ನೇರುಘಟ್ಟ ಅಭಯಾರಣ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಾಗರಹೊಳೆ ಅಭಯಾರಣ್ಯ, ದಕ್ಷಿಣ ಕನ್ನಡಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುದುರೆಮುಖ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಶಿ ಅಭಯಾರಣ್ಯ. ಅನೇಕ ವನ್ಯ ಮೃಗಧಾಮಗಳು ಸಹ ಕರ್ನಾಟಕದಲ್ಲಿ ಇವೆ.

ಅಭಿವೃದ್ಧಿ[ಬದಲಾಯಿಸಿ]

ಪಶು ಸಾಂಗೋಪನೆ
ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದೆ. .ರಾಜ್ಯ ದಲ್ಲಿ ಒಟ್ಟು ೧.೨೫ ಕೋಟಿ ಜಾನುವಾರುಗಳಿವೆ. ಇತ್ತೀಚೆಗೆ ಜಾನುವಾರುಗಳಿಗೆ ಕಾಲುಬಾಯಿ ಜ್ವರದಿಂದಾಗಿ ೧೪,೪೪೧ (೧೯-೨-೨೦೧೪ ಕ್ಕೆ)ಜಾನುವಾರುಗಳು ಸತ್ತಿವೆ; ಲಸಿಕೆ ಹಾಕುವ ಕಾರ್ಯಕ್ರಮ ನಡೆದಿದೆ . ಹಾಲಿನ ಉತ್ಪಾದನೆ ವರ್ಷಕ್ಕೆ ೪೯ ಲಕ್ಷ ಲೀಟರ್ ನಿಂದ ೫೨-೫೩ ಉತ್ಪಾದನೆ ಆಗುತ್ತದೆ . ಸುಮಾರು ೧೫ ಲಕ್ಷ ಲೀಟರ್ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ ಆಗುತ್ತಿದ್ದು , ಸಿಂಗಪುರ, ರಷ್ಯಾ, ಶ್ರೀಲಂಕಾ, ಮ್ಯನ್ಮಾರ್ ಮೊದಲಾದ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ (19-2-2014 ಹಾಲು ಮಹಾ ಮಂಡಳಿಯ ನಿರ್ದೇಶಕ - ಎಂ. ಎಸ್. ಪ್ರೇಮನಾಥ್ ಬೆಂಗಳೂರು ಸುದ್ದಿಗೋಷ್ಠಿ- ಸುದ್ದಿಮಾಧ್ಯಮ- ಪ್ರಜಾವಾಣಿ)

ಐತಿಹಾಸಿಕ ಸ್ಥಳಗಳು[ಬದಲಾಯಿಸಿ]

ಸಂಸ್ಕೃತಿ[ಬದಲಾಯಿಸಿ]

ಕರ್ನಾಟಕದ ಕೆಲವು ಜನಪ್ರಿಯ ಸಾಂಸ್ಕೃತಿಕ ಕಲೆಗಳು:
  1. ಸಂಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಕರ್ನಾಟಕ ಸಂಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸಂಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸಂಗೀತ, ಚಿತ್ರಗೀತೆಗಳು ಸೇರಿವೆ.
  2. ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಯಕ್ಷಗಾನಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒಂದು.
  3. ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರುಹಳೇಬೀಡುಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ.

ಕಲೆ[ಬದಲಾಯಿಸಿ]

ಬಿದರಿ ಕಲೆ ಸುಮಾರು ೧೪ನೆ ಶತಮಾನ್ ದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಪ್ರಾಚಿನ ಕಲೆ ಯಲ್ಲಿ ಒಂದು. ಇವತ್ತಿಗೂ ಈ ಕಲೆಯ ಬೇಡಿಕೆ ದೇಶ-ವಿದೇಶದಲ್ಲಿ ತುಂಬಾ ಇದೆ. ಇತ್ತೀಚಿನ ಕಾಮ್ಮೊನ್ ವೆಅಲ್ಥ್ ಗೇಮ್ಸ್ ನ ಅತಿ ಪ್ರಮುಖ ಗಣ್ಯರಿಗೆ ಭಾರತ ದೇಶದಿಂದ ಬಿದರಿ ಕಲೆ ಉಡುಗೊರೆ ಕೊಡಲಾಗಿತ್ತು. ಮತ್ತೆ ಬಿದರಿ ಕಲೆಯ ಊಡುಗೋರೆ USUS ಊ ಎಸ್ ನ ವೈಟ್ ಹೌಸ್ನಲ್ಲಿ ಕೂಡ ಇಡಲಾಗಿದೆ . ಇವು ಬಿದರಿ ಕಲೆಯ ಕೆಲವು ಉಪಾದಿಗಳು .

ಧಾರ್ಮಿಕ ಕ್ಷೇತ್ರಗಳು[ಬದಲಾಯಿಸಿ]

ಕರ್ನಾಟಕ : ಸಾಗರಗಾಣಗಾಪುರಧರ್ಮಸ್ಥಳಶೃಂಗೇರಿಉಡುಪಿಮೇಲುಕೋಟೆಬಸವಕಲ್ಯಾಣಆದಿಚುಂಚನಗಿರಿಬಾಳೆ ಹೊನ್ನೂರುಹೊರನಾಡುಕಟೀಲುಗೋಕರ್ಣಸಿದ್ಧಗಂಗಾ ಮಠದ್ಯಾವನುರುಕೊಲ್ಲೂರುಮುರುಡೇಶ್ವರಶಿರ್ಸಿಕುಕ್ಕೆ ಸುಬ್ರಹ್ಮಣ್ಯಕೂಡಲ ಸಂಗಮಬನವಾಸಿಸವದತ್ತಿಗೋಲಗುಮ್ಮಟಬಾದಾಮಿಗುರಗುಂಜಿಚಾಮುಂಡಿ ಬೆಟ್ಟನಂಜನಗೂಡು,ನ೦ಬಿನಾಯಕನಹಳ್ಳಿ,ವೈದ್ಯನಾಥೇಶ್ವರ-ವೈದ್ಯನಾಥಪುರಶ್ರೀ ವೈದ್ಯನಾಥೇಶ್ವರ ಸ್ವಾಮಿಅರೆಯೂರು,ತುಮಕೂರು ಉಗ್ರ ನರಸಿಂಹ ಸ್ವಾಮಿ, ಮದ್ದೂರಮ್ಮ-ಮದ್ದೂರು.mannama devi sanidi manne mari kaval gubbi ಬನಶಂಕರಿ ದೇವಿ - ಬನಶಂಕರಿ,ಝರಣಿ ನೃಸಿಂಹಸ್ವಾಮಿ - ಬೀದರ್, ಗುರುದ್ವಾರ ನಾನಕ್ ಝೀರಾ ಸಾಹಿಬ್ - ಬೀದರ್, ಖಿಳೆಗಾಂವ ಬಸವಣ್ಣ, ಮೂಡಬೂಳ ವೇಣುಗೋಪಾಲ ಸ್ವಾಮಿ ದೇವಾಲಯ, ಗುಲ್ಬರ್ಗಾದ ಕೋಟೆ, ಶರಣಬಸವೇಶ್ವರ ದೇವಾಲಯ, ಬಂದೇನವಾಜ್ ದರ್ಗ, ಬುದ್ಧವಿಹಾರ, ದೇವರಗುಡ್ಡ ,ಮೈಲಾರ, ಮಲೆಮಹದೇಶ್ವರ, ನಂಜವದೂತ ಮಠ ಸಿರಾ ಯಲಗೂರು , ಹುಲಿಗಿಯ ಹುಲಿಗೆಮ್ಮ ದೇವಿ. ಇಟಗಿಯ ಭಿಮಕ್ಕನ ಗುಡಿ ಮುಂತಾದ ಹಲವು ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.

ಭಾಷೆಗಳು[ಬದಲಾಯಿಸಿ]

ಕರ್ನಾಟಕದಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ.
ಮುಖ್ಯ ಭಾಷೆಗಳೆ೦ದರೆ
ಇತರೆ ಕಡಿಮೆ ಜನ ಬಳಸುವ ಭಾಷೆಗಳು.

ಪ್ರಮುಖರು[ಬದಲಾಯಿಸಿ]

  1. ಬಸವಣ್ಣ,
  2. ಹಕ್ಕ ಬುಕ್ಕ
  3. ಪುರಂದರದಾಸರು,
  4. ಕನಕದಾಸ,
  5. ಮಧ್ವಾಚಾರ್ಯ,
  6. ಬೆಂಗಳೂರು ನಿರ್ಮಾತೃ ಕೆಂಪೇಗೌಡ,
  7. ಕೃಷ್ಣದೇವರಾಯ,
  8. ಜಯಚಾಮರಾಜೇಂದ್ರ ಒಡೆಯರ್,
  9. ಮೋಕ್ಷಗುಂಡಂ ವಿಶ್ವೇಶ್ವರಯ್ಯ,
  10. ಎಸ್.ನಿಜಲಿಂಗಪ್ಪ ,
  11. ಬಿ.ಡಿ.ಜತ್ತಿ,
  12. ಎಸ್.ಆರ್.ಕಂಠಿ,
  13. ಅ.ನ.ಕೃಷ್ಣರಾಯರು,
  14. ಕುವೆಂಪು,
  15. ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು,
  16. ಆಲೂರು ವೆಂಕಟರಾಯರು,
  17. ಶಿವರಾಮ ಕಾರಂತ,
  18. ವಿನಾಯಕ ಕೃಷ್ಣ ಗೋಕಾಕ,
  19. ಡಾ.ದೇಜಗೌ,
  20. ಡಾ.ಚಂದ್ರಶೇಖರ ಕಂಬಾರ,
  21. ಯು.ಆರ್.ಅನಂತಮೂರ್ತಿ,
  22. ಪೂರ್ಣಚಂದ್ರತೇಜಸ್ವಿ,
  23. ಡಾ.ಎಸ್.ಎಲ್.ಭೈರಪ್ಪ,
  24. ದ.ರಾ.ಬೇಂದ್ರೆ,
  25. ಗೊರೂರು ರಾಮಸ್ವಾಮಿ ಅಯ್ಯಂಗಾರ್,
  26. ಜಿ.ಎಸ್. ಶಿವರುದ್ರಪ್ಪ,
  27. ಪಂಜೆ ಮಂಗೇಶ ರಾಯರು,
  28. ಡಾ.ಡಿ ವಿ ಗುಂಡಪ್ಪ,
  29. ಡಾ. ಚಿದಾನಂದಮೂರ್ತಿ,
  30. ಡಾ. ಸೂರ್ಯನಾಥ ಕಾಮತ್,
  31. ದೇವರಾಜ ಅರಸು,
  32. ಅಕ್ಕಮಹಾದೇವಿ,
  33. ಕಿತ್ತೂರು ರಾಣಿ ಚೆನ್ನಮ್ಮ,
  34. ಒನಕೆ ಓಬವ್ವ,
  35. ಸಂಗೊಳ್ಳಿ ರಾಯಣ್ಣ,
  36. ಕಾರ್ನಾಡ್ ಸದಾಶಿವರಾಯರು,
  37. ಡಾ.ರಾಜ್ ಕುಮಾರ್,
  38. ಡಾ.ವಿಷ್ಣುವರ್ಧನ್,
  39. ಡಾ.ರಾಜಾರಾಮಣ್ಣ,
  40. ಪ್ರೊ. ಯು. ಆರ್. ರಾವ್,
  41. ಪ್ರೊ. ಸಿ ಎನ್ ಆರ್ ರಾವ್,
  42. ಎನ್ ಆರ್ ನಾರಾಯಣ ಮೂರ್ತಿ,
  43. ರಾಮಚಂದ್ರ ಕುಂದಗೋಳಕರ ಸೌಶಿ,
  44. ಪಂ.ಭೀಮಸೇನ್ ಜೋಶಿ,
  45. ಗಂಗೂಬಾಯಿ ಹಾನಗಲ್,
  46. ಪ್ರೊ.ಜಿ.ವೆಂಕಟಸುಬ್ಬಯ್ಯ,
  47. ಕೆ.ಎಸ್.ನರಸಿಂಹಸ್ವಾಮಿ,
  48. ಕೆ.ಎಸ್.ನಿಸಾರ್ ಅಹಮದ್
  49. ಸಂತೋಷ್ ಹೆಗ್ಡೆ,
  50. ಕಾಗೋಡು ತಿಮ್ಮಪ್ಪ,
  51. ನಾಡೋಜ ಚನ್ನವೀರ ಕಣವಿ,
  52. ನಾಡೋಜ ಪಾಟೀಲ ಪುಟ್ಟಪ್ಪ,
  53. ಅರೆಯೂರು ಚಿ.ಸುರೇಶ್

ರಾಜಕಾರಣದಲ್ಲಿ ಪ್ರಮುಖರು[ಬದಲಾಯಿಸಿ]

  1. ಕೆಂಗಲ್ ಹನುಮಂತಯ್ಯ
  2. ದೇವರಾಜ್ ಅರಸ್
  3. ರಾಮಕೃಷ್ಣ ಹೆಗಡೆ
  4. ಎಸ್. ಬಂಗಾರಪ್ಪ
  5. ಸಿದ್ಧರಾಮಯ್ಯ
  1. ಡಿ. ವಿ. ಸದಾನಂದ ಗೌಡ
  2. ಅನಂತಕುಮಾರ್
  3. ಎಸ್.ಎಂ.ಕೃಷ್ಣ
  4. ಹೆಚ್.ಡಿ.ದೇವೇಗೌಡ
 {colend}

ಪ್ರವಾಸೋದ್ಯಮ[ಬದಲಾಯಿಸಿ]

ಕರ್ನಾಟಕದಲ್ಲಿ ನೈಸರ್ಗಿಕ ಸೌಂದರ್ಯಯುಕ್ತ ಪ್ರದೇಶಗಳು, ಹಾಗು ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮವನ್ನು ಒದಗಿಸುತ್ತವೆ.

ಚಿತ್ರಾವಳಿ[ಬದಲಾಯಿಸಿ]

ಈ ಲೇಖನಗಳನ್ನೂ ನೋಡಿ[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1.  "State-wise break up of National Parks"Wildlife Institute of India. Government of India. Archived from the original on 22-June-2008. Check date values in: |archive-date= (help)
  2.  "Figures at a glance" (PDF)2011 Provisional census data. Ministry of Home Affairs, Government of India.Retrieved on 17 September 2011
  3.  https://www.google.co.in/search?client=ms-android-lenovo&ei=BPiDW8mCCYSKvQSi-K-ACw&q=mysure+state&oq=mysure+state&gs_l=mobile-gws-wiz-serp.3..0i13j0i2i203j0i13l3.7492.24352..25557...6.0..0.423.2961.0j2j8j1j1......0....1.......5..0j35i39j0i19j0i10i19j0i10i203j0i13i30.MJmCj5mTUx0
  4.  https://www.karnataka.com/
  5.  https://www.google.co.in/search?q=karnataka+capital&oq=karnataka+capital&aqs=chrome..69i57j0l3.7317j0j7&client=ms-android-lenovo&sourceid=chrome-mobile&ie=UTF-8
  6.  https://www.google.co.in/search?q=popular+cities+of+Karnataka&oq=popular+cities+of+Karnataka&aqs=chrome..69i57j0l3.10099j0j7&client=ms-android-lenovo&sourceid=chrome-mobile&ie=UTF-8
  7.  https://wikitravel.org/en/Karnataka
  8.  https://en.m.wikivoyage.org/wiki/Karnataka
  9.  http://waterresources.kar.nic.in/river_systems.htm
  10.  "Kannada Wikipedia". Wikipedia. Retrieved 25 ಡಿಸೆಂಬರ್ 2017. Check date values in: |access-date=(help)
  11.  http://raitamitra.kar.nic.in/Statistics/Rainfall.html
  12.  http://dharwad.nic.in/dco.htm
  13. http://www.mohfw.nic.in/NRHM/State%20Files/karnataka.htm
  14.  ಕನ್ನಡವೆಂಬ ಜ್ಞಾನದ ಭಾಷೆ;ಜಿ.ಎನ್. ದೇವಿ;೨೮-೧೦-೨೦೧೮
  15.  http://www.mrpl.co.in/
ದಕ್ಷಿಣ ಭಾರತದ ರಾಜ್ಯಗಳು
ಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ | ತೆಲಂಗಾಣ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...