somaling m uppar kawalga

somaling m uppar kawalga
Somaling Sulubai uppar

ಶನಿವಾರ, ಜನವರಿ 08, 2022

*ಶಾಸನಗಳು*

⚜️ *ಶಾಸನಗಳು*👇

🔸 ಶಾಸನಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ= *ಎಪಿಗ್ರಫಿ*

🔹 ಭಾರತದಲ್ಲಿ ಮೊದಲ ಬಾರಿಗೆ ಶಾಸನಗಳನ್ನು ಹೊರಡಿಸಿದವರು= ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ *ಅಶೋಕ*( ಶಾಸನಗಳ ಪಿತಾಮಹ ಎನ್ನುವರು)

🔸 ಅಶೋಕನ ಶಾಸನಗಳನ್ನು 1837 ರಲ್ಲಿ ಮೊದಲ ಬಾರಿಗೆ ಬೆಳಕಿಗೆ ತಂದವರು *ಜೇಮ್ಸ್ ಪ್ರಿನ್ಸೆಪ್*

🔹 ಶಾಸನಗಳ ವಿಧಗಳು👇
 *ಸ್ತಂಭ ಶಾಸನ, ಬಂಡೆಗಲ್ಲು ಶಾಸನ, ತಾಮ್ರಪಟ ಶಾಸನ. ದಾನ ದತ್ತಿ ಶಾಸನ, ಪ್ರಶಸ್ತಿ ಶಾಸನ,*

🔹 ಶಾಸನಗಳ ಲಿಪಿ ಗಳು= ಬ್ರಾಹ್ಮಿ
( ಎಡದಿಂದ ಬಲಕ್ಕೆ ಬರೆಯುವುದು, 

🔸ಖರೋಷ್ಠಿ
( ಬಲದಿಂದ ಎಡಕೆ ಬರೆಯುವುದು)

✍️ ಭಾರತದಲ್ಲಿನ ಶಾಸನಗಳ ಭಾಷೆ, 
 *ಸಂಸ್ಕೃತ. ಪ್ರಾಕೃತ, ತೆಲುಗು, ತಮಿಳು, ಕನ್ನಡ,*

1) ಅಶೋಕನ ಶಾಸನಗಳು= *ರುಮಿಂಡೈ ಶಾಸನ, ಕಳಿಂಗ ಶಾಸನ, ಮಸ್ಕಿ ಶಾಸನ,* etc  

2)ಖಾರವೇಲನ=
*ಹಾಥಿ ಗುಂಪ ಶಾಸನ*

3) ಸಮುದ್ರಗುಪ್ತ=
 *ಅಲಹಾಬಾದ್ ಸ್ತಂಭ ಶಾಸನ*

4) ರವಿಕೀರ್ತಿಯ= *ಐಹೊಳೆ ಶಾಸನ*

5) ಮಯೂರವರ್ಮ=
 *ಚಂದ್ರವಳ್ಳಿ ಶಾಸನ*

6) ರುದ್ರದಾಮನ್=
*ಗಿರ್ನಾರ್ ಶಾಸನ*

7) ಸ್ಕಂದ ಗುಪ್ತನ=
*ಜುನಾಗಡ್ ಶಾಸನ*

8) ಶಾಂತಿ ವರ್ಮನ=
*ತಾಳಗುಂದ ಶಾಸನ*

9) ಎರಡನೇ ಚಂದ್ರಗುಪ್ತನ= *ದೆಹಲಿಯ ಮೆಹರೂಲಿ ಕಬ್ಬಿಣದ ಶಾಸನ*

10) ವಂದನೆ ಪರಾಂತಕನ=
 *ಉತ್ತರ ಮೇರೂರು ಶಾಸನ*

11) ಹರ್ಷವರ್ಧನ=
 *ಮಧುಬಾನ ಶಾಸನ*

12) ಭೋಜರಾಜನ=
*ಗ್ವಾಲಿಯರ್ ಶಾಸನ*

13) ಒಂದನೇ ಮಹೇಂದ್ರ ವರ್ಮನ=
 *ಕುಡಿಮಿಯ ಮಲೈ  ಶಾಸನ*

14) ಗೌತಮಿ ಬಾಲಾಶ್ರೀಯ=
*ನಾಶಿಕ್ ಶಾಸನ,

*ವಿದೇಶಿ* ಸಾಹಿತಿಗಳು

*ವಿದೇಶಿ* ಸಾಹಿತಿಗಳು

1) ಹೆರೋಡಾಟಸ್= *ಇಷ್ಟೋರಿಕಾ 

2) ಮೆಗಾಸ್ತಾನಿಸನ= *ಇಂಡಿಕಾ*

3) ಪ್ಲೀನಿ ಯ= *ಪ್ರಕೃತಿ ಇತಿಹಾಸ*

4) ಟಾಲೆಮಿಯ= *ಜಿಯೋಗ್ರಾಫಿ*

5) ಗ್ರೀಕ್ ಅನಾಮಿಕನ= *ಪೆರಿ ಪ್ಲೇಸ್ ಆಪ್ ಎರಿತ್ರಿಯನನ*

6) ಪಾಹಿಯಾನ= *ಘೋ-ಕೋ-ಕಿ*

7) ಹ್ಯೂಯನ್ ತ್ಸ್ಯಾಂಗ= *ಸಿ-ಯು-ಕಿ*

8)ಉತ್ಬಿಯಾ= *ಕಿತಬ್-ಉಲ್ ಯಮಿನಿ*

9) ibn-e-batuta= *ಕಿತಾಬ್-ಇ-ರೆಹಲಾ*

10) ಅಲ್ ಬೇರೊನಿ= *ಕಿತಬ್ ಉಲ್ ಹಿಂದ*

11) ಹಸನ್ ನಿಜಾಮಿ= *ತಾಜ್-ಉಲ್- ಮಾಸಿರ್*

12) ಅಬುಲ್ ಫಝಲ್= *ಅಕ್ಬರ್ ನಾಮ*

13) ಜಿಯಾವುದ್ದಿನ್ ಬರೌನಿ,= *ತಾರೀಖ-ಇ- ಫಿರೋಜ್- ಷಾಹಿ*

14) ಕಿರ್ಮಾನಿ ಯ= *ಷಾ ನಾಮಾ*

ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು

📖 ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು*👇

1) ಬಾಣನ= *ಹರ್ಷಚರಿತ*

2) ತಿರುವಳ್ಳವರ್= *ತಿರುಕ್ಕುರಳ್*

3) ಹರೀಸೆನನ= *ಕಥಾಕೋಶ*

4) ವಾಲ್ಮೀಕಿಯ= *ರಾಮಾಯಣ*

5) ವ್ಯಾಸ ಮಹರ್ಷಿಯ= *ಮಹಾಭಾರತ*

6) ಅಶ್ವಘೋಷನ= *ಬುದ್ಧಚರಿತ*

7) ನಯಚಂದ್ರ ಸೂರಿಯ= *ಹಮ್ಮೀರ ಕಾವ್ಯ*

8) ಚಾಂದ್ ಬರ್ದಾಯಿ= *ಪೃಥ್ವಿರಾಜ ರಾಸೋ*

9) ಬಿಲ್ಹಣ= *ವಿಕ್ರಮಂಕದೇವಚರಿತೆ*

10) ಒಂದನೇ ಮಹೇಂದ್ರವರ್ಮ= *ಮತ್ತೆ ವಿಲಾಸ ಪ್ರಹಸನ*

11) ಪಾಣಿನಿಯ= *ಅಷ್ಟಧ್ಯಾಯಿ*

12) ಕೌಟಿಲ್ಯನ= *ಅರ್ಥಶಾಸ್ತ್ರ*

13) ಶೂದ್ರಕನ= *ಮೃಚ್ಚಕಟಿಕ*

14) ಕಾಳಿದಾಸನ= *ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,*

15) ವಿಶಾಖದತ್ತನ= *ಮುದ್ರಾರಾಕ್ಷಸ* ಮತ್ತು *ದೇವಿಚಂದ್ರಗುಪ್ತಮ್*

14) ಅಮೋಘವರ್ಷ= *ಕವಿರಾಜಮರ್ಗ*

15) ಹರ್ಷವರ್ಧನ= *ರತ್ನವಳಿ,  ಪ್ರಿಯದರ್ಶಿಕ ಮತ್ತು ನಾಗನಂದ*

16) ಚಾವುಂಡರಾಯ= *ಚಾವುಂಡರಾಯ ಪುರಾಣ*

17) ಜನ್ನ= *ಯಶೋಧರ ಚರಿತೆ*

18) ಕೃಷ್ಣದೇವರಾಯ= *ಅಮುಕ್ತಮೌಲ್ಯ*

19) ವಿಜ್ಜಿಕೀಯ= *ಕೌಮುದಿ ಮಹೋತ್ಸವ*

20) ಗುಣಾಡ್ಯ= *ಬೃಹತ್ ಕಥಾ*

21) ಶ್ರೀಪುರುಷ= *ಗಜಶಾಸ್ತ್ರ*(TET-2020)

22) ಹಾಲ= *ಗಥಾಸಪ್ತಸತಿ*(SDA-2019)

23) ಚರಕ= *ಚರಕ ಸಂಹಿತೆ*

24) ಸುಶ್ರುತ= *ಸುಶ್ರುತ ಸಂಹಿತೆ*

25) ಆರ್ಯಭಟ= *ಅರ್ಯಭಟಿಯಂ*

26) ಶ್ರೀಧರಾಚಾರ್ಯ= *ಜಾತಕತಿಲಕ*

27) ಎರಡನೇ ನಾಗಾರ್ಜುನ= *ರಸವೈದ್ಯ*

ಶುಕ್ರವಾರ, ನವೆಂಬರ್ 19, 2021

The 17 sustainable development goals (SDGs) to transform our world:

The 17 sustainable development goals (SDGs) to transform our world: GOAL 1: No Poverty GOAL 2: Zero Hunger GOAL 3: Good Health and Well-being GOAL 4: Quality Education GOAL 5: Gender Equality GOAL 6: Clean Water and Sanitation GOAL 7: Affordable and Clean Energy GOAL 8: Decent Work and Economic Growth GOAL 9: Industry, Innovation and Infrastructure GOAL 10: Reduced Inequality GOAL 11: Sustainable Cities and Communities GOAL 12: Responsible Consumption and Production GOAL 13: Climate Action GOAL 14: Life Below Water GOAL 15: Life on Land GOAL 16: Peace and Justice Strong Institutions GOAL 17: Partnerships to achieve the Goal

ವಿಶ್ವಸಂಸ್ಥೆ/united nations

ವಿಶ್ವಸಂಸ್ಥೆ/united nations ಪ್ರಸ್ತುತ ಇಂಥ 193 ಸದಸ್ಯ ರಾಷ್ಟ್ರಗಳನ್ನುನ ಹೊಂದಿದೆ. Principal organs of UN ವಿಶ್ವಸಂಸ್ಥೆಯ ಸ್ವರೂಪವು ಐದು ಮುಖ್ಯ ಅಂಗಗಳನ್ನು ಆಧರಿಸಿರುವಂಥದ್ದು. ಅವೆಂದರೆ- 1) ಸಾಮಾನ್ಯ ಸಭೆ/General Assembly: ಇದು ಪ್ರಮುಖ ಪರ್ಯಾಲೋಚಕ ಘಟಕವಾಗಿದ್ದು ಪ್ರಾತಿನಿಧಿಕ ಸ್ವರೂಪವನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಹತ್ವವಿರುವ ಚರ್ಚಾವಿಷಯಗಳ ಕುರಿತಾಗಿ ಇದು ಠರಾವುಗಳನ್ನು ರೂಪಿಸುತ್ತದೆ. 2) ಭದ್ರತಾ ಮಂಡಳಿ/Security council: ದೇಶ ದೇಶಗಳ ನಡುವೆ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ಕಾರ್ಯಭಾರವನ್ನು ಇದಕ್ಕೆ ಹೊರಿಸಲಾಗಿದೆ. 3) ಆರ್ಥಿಕ ಮತ್ತು ಸಾಮಾಜಿಕ ಮಂಡಳಿ/Economic and social council: ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಸಹಕಾರ ಹಾಗೂ ಅಭಿವೃದ್ಧಿಯ ಪ್ರವರ್ತನೆ ಇದರ ಹೊಣೆಗಾರಿಕೆ. 4) ಆಡಳಿತ ಕಚೇರಿ/UN Secretariat: ವಿಶ್ವಸಂಸ್ಥೆಯ ವಿಭಿನ್ನ ಅಂಗಗಳ ಕಾರ್ಯನಿರ್ವಹಣೆಗೆ ಅನುವುಮಾಡಿಕೊಡುವ ಘಟಕವಿದು. 5) ಅಂತಾರಾಷ್ಟ್ರೀಯ ನ್ಯಾಯಾಲಯ/International court of Justice: ಇದು ಅತ್ಯಂತ ಮಹತ್ವದ ನ್ಯಾಯಿಕ ಅಂಗವಾಗಿದೆ.

Five Writs under A.32 and A.226 in Indian Constitution) : ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು)

Five Writs under A.32 and A.226 in Indian Constitution) : ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು) ━━━━━━━━━━━━━━━━━━━━ ●. 'ಸಂವಿಧಾನದ ಹೃದಯ' ವೆಂದು ಕರೆಯಲ್ಪಡುವ ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ. * ರಿಟ್ (Writs): ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) . ●. ಸಂವಿಧಾನದ ಅನುಚ್ಛೇದ 32(2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ. ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು. ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು. ☀ ರಿಟ್ ಗಳು (ತಡೆಯಾಜ್ಞೆಗಳು)(Writs) : 1. ಹೇಬಿಯಸ್ ಕಾರ್ಪಸ್ (Habeas Corpus) : ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು. - ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು; 1) ಸ್ವತಃ ಬಾಧಿತ ವ್ಯಕ್ತಿ. 2) ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ 2. ಮ್ಯಾಂಡಮಾಸ್ (ಆಜ್ಞೆ) (Mandamus) : ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ. ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. 3. ಪ್ರೊಹಿಬಿಷನ್ (Prohibition) : ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ. 4. ಸರ್ಶಿಯೋರರಿ (Certiorari) : ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ. 5. ಕೊ ವಾರಂಟೋ (Quowarranto) : ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ. ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ. ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ.

ಪೌರತ್ವ (5-11ನೇ ವಿಧಿ)

ಪೌರತ್ವ (5-11ನೇ ವಿಧಿ)  5 ರಿಂದ 10ನೇ ವಿಧಿಯವರೆಗೆ ಸಂವಿಧಾನ ಜಾರಿಗೊಂಡ ಸಂದರ್ಭದಲ್ಲಿ ಭಾರತದ ಪೌರತ್ವ ಹೊಂದಿದ ಜನರನ್ನು ಮಾತ್ರ ಗುರುತಿಸುತ್ತದೆ. • 11ನೇ ವಿಧಿ – ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಿದೆ. • 11ನೇ ವಿಧಿ ವಿಧಿಯನ್ವಯ ಪೌರತ್ವ ಕಾಯ್ದೆ 1955ನ್ನು ಜಾರಿಗೆ ತರಲಾಯಿತು. ಪೌರತ್ವ ಕಾಯ್ದೆ 1955 ಪೌರತ್ವ ಪಡೆದುಕೊಳ್ಳುವ ವಿಧಾನಗಳು 1. ಜನನದಿಂದ • 26 ಜನವರಿ 1950ರಿಂದ 1ನೇ ಜುಲೈ 1987ರ ನಡುವೆ ಭಾರತದಲ್ಲಿ ಜನಿಸಿದ ಯಾವುದೇ ವ್ಯಕ್ತಿ ಭಾರತೀಯ ಪೌರತ್ವವನ್ನು ಪಡೆದುಕೊಳ್ಳಬಹುದು. • 1ನೇ ಜುಲೈ 1987ರಿಂದ 3ನೇ ಡಿಸೆಂಬರ 2004ರ ನಡುವೆ ಜನಿಸಿದ ಯಾವುದೇ ಮಗುವಿನ/ವ್ಯಕ್ತಿಯ ತಂದೆ-ತಾಯಿಯಲ್ಲಿ ಯಾರಾದರೊಬ್ಬರು ಭಾರತೀಯ ಪೌರತ್ವವನ್ನು ಹೊಂದಿದ್ದರೆ, ಆ ವ್ಯಕ್ತಿ ಭಾರತದ ಪೌರತ್ವವನ್ನು ಪಡೆದುಕೊಳ್ಳಬಹುದು. • 3ನೇ ಡಿಸೆಂಬರ 2004ರಿಂದೀಚೆಗೆ (3ನೇ ಡಿಸೆಂಬರನ್ನು ಒಳಗೊಂಡಂತೆ) ಜನಿಸಿದ ವ್ಯಕ್ತಿಯ ತಂದೆ – ತಾಯಿ ಇಬ್ಬರು ಭಾರತೀಯರಾಗಿದ್ದರೆ ಅಥವಾ ಒಬ್ಬರೇ ಭಾರತಿರಾಗಿದ್ದು ಇನ್ನೊಬ್ಬರು ಕಾನೂನುಬಾಹಿರ ವಲಸೆಗಾರರಾಗಿದ್ದರೆ ಅಂತಹ ವ್ಯಕ್ತಿ ಭಾರತದ ಪೌರತ್ವ ಪಡೆದುಕೊಳ್ಳಬಹುದು. 2. ವಂಶಾನುಪ್ರಾಪ್ರಿಯಿಂದ • ಜನವರಿ 26, 1950ರಂದು ಅಥವಾ ನಂತರ ಭಾರತದ ಹೊರಗೆ ಜನಿಸಿದ ವ್ಯಕ್ತಿಯ ತಂದೆ-ತಾಯಿಯರಲ್ಲಿ ಯಾರಾದರೊಬ್ಬರು ಭಾರತದ ಪೌರತ್ವವನ್ನು ಹೊಂದಿದ್ದರೆ ಈ ನಿಯಮದನ್ವಯ ಅಂತಹ ವ್ಯಕ್ತಿಯು ಭಾರತದ ಪೌರರಾಗುತ್ತಾರೆ. • 3ನೇ ಡಿಸೆಂಬರ 2004ರಂದು ಅಥವಾ ನಂತರ ಭಾರತದ ಹೊರಗೆ ಜನಿಸಿದ ವ್ಯಕ್ತಿಯ ತಂದೆ ತಾಯಿಯಂದಿರು ಆ ಮಗು ಮತ್ತೊಂದು ದೇಶದ ಪಾಸಪೋರ್ಟ್ ಹೊಂದಿಲ್ಲವೆಂದು ಘೋಷಣೆ ಮಾಡಬೇಕು ಮತ್ತು ಭಾರತೀಯ ರಾಯಭಾರಿ ಕಛೇರಿಯಲ್ಲಿ ಆ ಮಗುವಿನ ಜನನವನ್ನು ಒಂದು ವರ್ಷದೊಳಗಡೆ ನೋಂದಣಿ ಮಾಡಿಸಿದಾಗ ಮಾತ್ರ ಅಥವಾ ಒಂದು ವರ್ಷದ ನಂತರ ಕೇಂದ್ರ ಸರ್ಕಾರದ ಪರವಾನಗಿ ಪಡೆದು ಜನನವನ್ನು ನೊಂದಣಿ ಮಾಡಿಸಿದಾಗ ಮಾತ್ರ ಅಂತಹ ಮಗು ಭಾರತದ ಪೌರತ್ವ ಪಡೆದುಕೊಳ್ಳುತ್ತದೆ. 3. ನೊಂದಾಯಿಸುವುದರ ಮೂಲಕ  ಈ ಕೆಳಗಿನ ವ್ಯಕ್ತಿಗಳು ಸೂಕ್ತ ಪ್ರಾಧಿಕಾರದ ಮುಂದೆ ನೊಂದಾಯಿಸುವುದರ ಮೂಲಕ ಪೌರತ್ವ ಪಡೆಯಬಹುದು: • ನೋಂದಣಿಗಾಗಿ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ 7 ವರ್ಷಗಳ ಕಾಲ ಭಾರತದ ನಿವಾಸಿಗಳಾಗಿರುವ ಭಾರತೀಯ ಮೂಲದ ವ್ಯಕ್ತಿಗಳು. • ಭಾರತೀಯ ವ್ಯಕ್ತಿಯೊಂದಿಗೆ ಮದುವೆಯಾಗಿರುವ ವ್ಯಕ್ತಿ ನೋಂದಣಿಯ ಮೂಲಕ ಪೌರತ್ವ ಪಡೆಯಬೇಕಾದಲ್ಲಿ ಮದುವೆಯ ನಂತರ 7 ವರ್ಷಗಳ ಕಾಲ ಭಾರತದ ವಾಸಿಯಾಗಿರಬೇಕು. • ಭಾರತದ ಪೌರತ್ವ ಪಡೆದ ವ್ಯಕ್ತಿಯ ಮಕ್ಕಳು. • ಒಂದು ವರ್ಷ ಭಾರತದಲ್ಲಿ ವಾಸವಾಗಿರುವ 5 ವರ್ಷಗಳ ಕಾಲ ಸಾಗರೋತ್ತರ ಭಾರತೀಯ ನಾಗರಿಕರೆಂದು ನೊಂದಾಯಿಸಿಕೊಂಡಿರು

356ನೇ ವಿಧಿ ದುರುಪಯೋಗ - ನಿಯಂತ್ರಣ

356ನೇ ವಿಧಿ ದುರುಪಯೋಗ - ನಿಯಂತ್ರಣ ಶಾಸಕಾಂಗ, ಕಾರ್ಯಂಗ ತಮ್ಮ ಹೊಣೆಗಾರಿಕೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ನಿಭಾಯಿಸುವಲ್ಲಿ ವಿಫಲವಾದಾಗ ಅದನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ನ್ಯಾಯಾಲಗಳು ಕಾಲದಿಂದ ಕಾಲಕ್ಕೆ ನಿಭಾಯಿಸಿಕೊಂಡು ಬಂದಿವೆ. ಈ ಕಾರಣದಿಂದಲೇ ಶಾಸಕಾಂಗ ಮತ್ತು ಕಾರ್ಯಂಗ ಕೆಲವು ಸಂದರ್ಭದಲ್ಲಿ ಪ್ರದರ್ಶಿಸುವ ಸ್ವೇಚ್ಛಾಚಾರಕ್ಕೆ ಕಡಿವಾಣ ಬಿದ್ದಿದೆ. ಇದಕ್ಕೆ ಪೂರಕವಾಗಿ ಅನೇಕ ನಿದರ್ಶನಗಳು ನಮ್ಮ ಮುಂದಿದೆ. ಸಂವಿಧಾನ ರಚನೆಗೊಂಡ ನಂತರ ಅಧಿಕಾರಸೂತ್ರ ಹಿಡಿದ ಕೇಂದ್ರ ಸರಕಾರಗಳು ಒಂದಲ್ಲ ಒಂದು ಕಾರಣದಿಂದ ಸಂವಿಧಾನದ 356ನೇ ವಿಧಿಯನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷ ದ ಸರಕಾರಗಳನ್ನು ವಜಾ ಮಾಡುತ್ತಿದ್ದವು. ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಕಾಲದಿಂದ ಕಾಲಕ್ಕೆ ಅಧಿಕಾರಸೂತ್ರ ಹಿಡಿದ ಕೇಂದ್ರ ಸರಕಾರಗಳು ನೂರಕ್ಕೂ ಹೆಚ್ಚು ಬಾರಿ ಸಂವಿಧಾನದ 356ನೇ ಕಲಂ ಪ್ರಯೋಗಿಸಿ ಜನತಾಂತ್ರಿಕವಾಗಿ ಆಯ್ಕೆಗೊಂಡ ಸರಕಾರಗಳನ್ನು ವಜಾ ಮಾಡಿವೆ. ಪ್ರಸಕ್ತ ಹಿನ್ನೆಲೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿಯವರು ಸಂವಿಧಾನದ 356ನೇ ವಿಧಿ ದುರುಪಯೋಗದ ವಿರುದ್ಧ ನಡೆಸಿದ ಕಾನೂನು ಹೋರಾಟ ನ್ಯಾಯಾಂಗ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲಿನ ತೀರ್ಪಿಗೆ ಕಾರಣವಾಯಿತು. ಸುಪ್ರೀಂಕೋರ್ಟ್‌ನ ಒಂಭತ್ತು ಸದಸ್ಯರ ನ್ಯಾಯಪೀಠ ನೀಡಿದ ತೀರ್ಪಿನ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರಕಾರಗಳನ್ನು ಮನಸ್ಸಿಗೆ ಬಂದ ಹಾಗೆ ವಜಾ ಮಾಡುವ ಕೇಂದ್ರ ಸರಕಾರದ ಸ್ವೇಚ್ಛಾಚಾರಕ್ಕೆ ಕಡಿವಾಣ ಬಿದ್ದಿದೆ. ☀️ ಸಾರ್ವಜನಿಕ ಹಿತಾಸಕ್ತಿಯ ಮನವಿ - ಇತಿಹಾಸ ಇನ್ನು ನ್ಯಾಯಾಂಗ ಇತಿಹಾಸದಲ್ಲಿಯೇ ಸಾರ್ವಜನಿಕ ಹಿತಾಸಕ್ತಿಯ ಮನವಿ ಪರಿಗಣಿಸುವ ಜನಪರ ನಿಲುವಿಗೆ ನಾಂದಿ ಹಾಡಿದವರು ನ್ಯಾಯಾಂಗ ವ್ಯವಸ್ಥೆಯ ದಂತಕಥೆ ವಿ.ಆರ್‌. ಕೃಷ್ಣ ಅಯ್ಯರ್‌. ಬಿಹಾರದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳು ಅನುಭವಿಸುತ್ತಿದ್ದ ನರಕಯಾತನೆ, ಅವರಲ್ಲಿ ಎಷ್ಟೋ ಮಂದಿ ವಿಚಾರಣಾಧೀನ ಕೈದಿಗಳು ಶಿಕ್ಷೆಗೊಳಪಟ್ಟಿದ್ದರೆ ಎಷ್ಟು ದಿನ ಜೈಲಿನಲ್ಲಿರಬೇಕಾಗಿತ್ತೋ ಅದಕ್ಕಿಂತ ಹೆಚ್ಚು ದಿನ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಕೊಳೆಯುತ್ತಿದ್ದ ಪರಿಸ್ಥಿತಿಯ ಮೇಲೆ ದಿನಪತ್ರಿಕೆಯೊಂದರ ವರದಿ ಬೆಳಕು ಚೆಲ್ಲಿತ್ತು. ಈ ಕುರಿತು ಸುಪ್ರೀಂಕೋರ್ಟ್‌ ವಕೀಲ ಕಪಿಲ್‌ ಹಿಂಗರೋಣಿ ನ್ಯಾಯಾಲಯದ ಗಮನ ಸೆಳೆದಿದ್ದರು. ಇದರ ಜೊತೆಗೆ ಸುನೀಲ್‌ ಬಾಟ್ರಾ ಎನ್ನುವ ವಿಚಾರಣಾಧೀನ ಕೈದಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್‌ ಅವರಿಗೆ ಪತ್ರವೊಂದನ್ನು ಬರೆದು ಜೈಲಿನ ನರಕ ಸದೃಶ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದ. ಇದನ್ನೇ ರಿಟ್‌ ಅರ್ಜಿಯಾಗಿ ಪರಿಗಣಿಸಿದ ಕೃಷ್ಣ ಅಯ್ಯರ್‌ ಜೈಲುಗಳು ಕೈದಿಗಳ ಪಾಲಿಗೆ ನರಕ ಆಗಬಾರದು, ಅವರ ಮನಪರಿವರ್ತಿಸುವ ಮಾನವೀಯತೆಯ ನೆಲೆಗಳಾಗಬೇಕು ಎಂದು ತೀರ್ಪು ನೀಡಿದ್ದರು. ಈ ತೀರ್ಪಿನ ನಂತರ ಜೈಲು ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳು ಘಟಿಸಿದವು. ನಂತರದ ದಿನಗಳಲ್ಲಿ ಈ ತರೆನಾದ ರಿಟ್‌ ಅರ್ಜಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎನ್ನುವ ಹೆಸರಿನಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನದ ನವಮನ್ವಂತರಕ್ಕೆ ನಾಂದಿ ಹಾಡಿದವು.

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದ ಪ್ರಮುಖ ಅಂಶಗಳು

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದ ಪ್ರಮುಖ ಅಂಶಗಳು 🐧 1. ಅಮೇರಿಕಾ. a. ಮೂಲಭೂತ ಹಕ್ಕುಗಳು. b. ಉಪರಾಷ್ಟ್ರಪತಿ. c. ನ್ಯಾಯಾಂಗ ವ್ಯವಸ್ಥೆ. 🐧2. ರಷ್ಯಾ. a. ಮೂಲಭೂತ ಕರ್ತವ್ಯಗಳು. 🐧3. ಬ್ರಿಟನ್. a. ಏಕ ನಾಗರಿಕತ್ವ. b. ಸಂಸದೀಯ ಸರ್ಕಾರ. 🐧4. ಐರ್ಲೆಂಡ್(ಐರಿಷ್). a. ರಾಜ್ಯ ನಿರ್ದೇಶಕ ತತ್ವಗಳು. 🐧5. ಜರ್ಮನಿ. a. ತುರ್ತು ಪರಿಸ್ಥಿತಿಗಳು. 🐧6. ಕೆನಡಾ. a. ಒಕ್ಕೂಟ ಸರ್ಕಾರ. b. ಸಂಯುಕ್ತ ಸರ್ಕಾರ. 🐧7. ಆಸ್ಟ್ರೇಲಿಯಾ. a. ಸಮವರ್ತಿ ಪಟ್ಟಿಗಳು. 🐧8. ದಕ್ಷಿಣ ಆಫ್ರಿಕಾ. a. ಸಂವಿಧಾನದ ತಿದ್ದುಪಡಿಗಳು. ತತ್ವಗಳು. 🐧5. ಜರ್ಮನಿ. a. ತುರ್ತು ಪರಿಸ್ಥಿತಿಗಳು. 🐧6. ಕೆನಡಾ. a. ಒಕ್ಕೂಟ ಸರ್ಕಾರ. b. ಸಂಯುಕ್ತ ಸರ್ಕಾರ. 🐧7. ಆಸ್ಟ್ರೇಲಿಯಾ. a. ಸಮವರ್ತಿ ಪಟ್ಟಿಗಳು. 🐧8. ದಕ್ಷಿಣ ಆಫ್ರಿಕಾ. a. ಸಂವಿಧಾನದ ತಿದ್ದುಪಡಿಗಳು.

★ಸಾಮಾನ್ಯ ಅಧ್ಯಯನ -ಪತ್ರಿಕೆ II (General Studies Paper II)

★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ. (IAS/KAS Exams - Mains Preparation) ★ಸಾಮಾನ್ಯ ಅಧ್ಯಯನ -ಪತ್ರಿಕೆ II (General Studies Paper II) ●. 'ಸಂವಿಧಾನದ ಹೃದಯ' ವೆಂದು ಕರೆಯಲ್ಪಡುವ ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ. ☀️ ರಿಟ್ (Writs) ಎಂದರೇನು? ━━━━━━━━━━━━━━━━━━━━━━━ — ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) . ●. ಸಂವಿಧಾನದ ಅನುಚ್ಛೇದ 32(2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ. ➡️ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು. ➡️ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು. ☀ ರಿಟ್ ಗಳು (ತಡೆಯಾಜ್ಞೆಗಳು)(Writs) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• 1⃣ಹೇಬಿಯಸ್ ಕಾರ್ಪಸ್ (Habeas Corpus) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು. - ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು; 1) ಸ್ವತಃ ಬಾಧಿತ ವ್ಯಕ್ತಿ. 2) ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ 2⃣ಮ್ಯಾಂಡಮಾಸ್ (ಆಜ್ಞೆ) (Mandamus) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ. ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. 3⃣ಪ್ರೊಹಿಬಿಷನ್ (Prohibition) : •┈┈┈┈┈┈┈┈┈┈┈┈┈┈┈┈┈┈┈┈• — ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ. 4⃣ಸರ್ಶಿಯೋರರಿ (Certiorari) : •┈┈┈┈┈┈┈┈┈┈┈┈┈┈┈┈┈┈┈• — ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ. 5⃣ಕೊ ವಾರಂಟೋ (Quowarranto) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• —ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ. —ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ. ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. — ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ. ☀️ ಪರಿಸರ ಸೂಕ್ಷ್ಮ ವಲಯ (ಟಿಪ್ಪಣಿ ಬರಹ) (Eco Sensitive Zone) ━━━━━━━━━━━━━━━━━━━━━━━━━━━━━━━━━━━━━━━━ ★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ. (IAS/KAS Exams - Mains Preparation) ★ಸಾಮಾನ್ಯ ಅಧ್ಯಯನ -ಪತ್ರಿಕೆ III (General Studies Paper III) ➡️ಅತ್ಯಂತ ಮಹತ್ವದ ಜೀವ ಸಂಕುಲಗಳ ಸಂರಕ್ಷಣಾ ತಾಣಗಳಾಗಿರುವ ವಿವಿಧ ರಾಷ್ಟ್ರೀಯ ಉದ್ಯಾನವನಗಳ, ಅಭಯಾರಣ್ಯಗಳ ಸುತ್ತಲಿನ ಪ್ರದೇಶವನ್ನು ' ಪರಿಸರ ಸೂಕ್ಷ್ಮ ವಲಯ' ಎಂದು ಕರೆಯಲಾಗುತ್ತದೆ. ➡️ಜೀವ ವೈವಿಧ್ಯತೆ, ವನ್ಯ ಜೀವಿಗಳ ಆವಾಸಸ್ಥಾನಕ್ಕೆ ಇರುವ ದೂರ, ನಿಯಂತ್ರಿತ ಮಟ್ಟಕ್ಕಿಂತ ಅಧಿಕ ಪ್ರಮಾಣದಲ್ಲಿ ಕೈಗಾರಿಕೆಗಳನ್ನು, ಇತರೇ ಚಟುವಟಿಕೆಗಳನ್ನು ನಿಷೇಧಿಸುವ ಹಾಗೂ ನಿಯಂತ್ರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ 1986 ರ Environment Protection Act ನ ನೀತಿ ನಿಯಮಾವಳಿಗಳ ಸೆಕ್ಷನ್ -5(1) ನೀಡುತ್ತದೆ. ➡️ಇಲ್ಲಿ ಎಲ್ಲಾ ರೀತಿಯ ವಾಣಿಜ್ಯ ಉದ್ದೇಶದ ಕಾರ್ಯಗಳಿಗೆ ನಿಷೇಧ ವಿರುತ್ತದೆ.

'ಪರಿಸರ ಸೂಕ್ಷ್ಮವಲಯ' (ecological Hotspots) ಎಂದರೇನು?

☀️ 'ಪರಿಸರ ಸೂಕ್ಷ್ಮವಲಯ' (ecological Hotspots) ಎಂದರೇನು? *. ರಾಷ್ಟ್ರೀಯ ಉದ್ಯಾನ, ಪಕ್ಷಿಧಾಮ ಸೇರಿದಂತೆ ಸಂರಕ್ಷಿತ ಅರಣ್ಯ ಪ್ರದೇಶವನ್ನು “ಪರಿಸರ ಸೂಕ್ಷ್ಮವಲಯ’ ಎಂದು ಘೋಷಿಸಿದರೆ ಆ ಭಾಗದ ಅರಣ್ಯ ಸಂರಕ್ಷಣೆಗೆ ಹೆಚ್ಚು ಸಹಾಯಕವಾ ಗುತ್ತದೆ. ಅಂದರೆ, ಈ ಅರಣ್ಯಕ್ಕೆ ನಿಗದಿಪಡಿಸುವ “ಬಫ‌ರ್‌ ವಲಯ’ದಲ್ಲಿ ಪರಿಸರಕ್ಕೆಹಾನಿಯಾಗುವ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಇದರಿಂದ ಅರಣ್ಯದ ಮೇಲೆ ಆಗುತ್ತಿರುವ ನೇರ ಹಾನಿಯನ್ನು ತಡೆಗಟ್ಟಲು ಸಹಾಯಕವಾಗುತ್ತದೆ. *. ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಿರುವ ಅರಣ್ಯದ ಗಡಿಯಿಂದ 100 ಮೀಟರ್‌ನಿಂದ 1 ಕಿ.ಮೀ.ವರೆಗೆ ಬಫ‌ರ್‌ ವಲಯ ಇರುತ್ತದೆ. ಈ ಭಾಗದಲ್ಲಿ ಮನೆ ನಿರ್ಮಾಣ, ಬೋರ್‌ವೆಲ್‌ ಕೊರೆಯಲು ಯಾವುದೇ ಅಡ್ಡಿ ಇಲ್ಲವಾದರೂ ಪರಿಸರಕ್ಕೆ ಹಾನಿಯಾಗುವ ಚಟುವಟಿಕೆಗಳು ನಿಷಿದ್ಧ. ಹೀಗಾಗಿ ಅರಣ್ಯ ಸಂರಕ್ಷಣೆಗೆ ಹೆಚ್ಚು ಅನುಕೂಲವಾಗುತ್ತದೆ. *. ದೇಶದಲ್ಲೇ ಮೊಟ್ಟ ಮೊದಲು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾಗಿದ್ದು ಬಂಡೀಪುರ ಅರಣ್ಯ. ಇಲ್ಲಿ 100 ಮೀಟರ್‌ನಿಂದ 7 ಕಿ.ಮೀ.ವರೆಗಿನ ಪ್ರದೇಶವನ್ನು ಬಫ‌ರ್‌ ವಲಯ ಎಂದು ಗುರುತಿಸಲಾಗಿದೆ. ಆದರೆ, ಇದೀಗ ರಾಜ್ಯ ಸರ್ಕಾರ 30 ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದ್ದರೂ ಬಫ‌ರ್‌ ವಲಯವನ್ನು 100 ಮೀಟರ್‌ನಿಂದ 1 ಕಿ.ಮೀ. ಎಂದು ನಿಗದಿಪಡಿಸಿದೆ

ಭಾನುವಾರ, ನವೆಂಬರ್ 14, 2021

ವಿಜ್ಞಾನದ ಹಲವು ಶಾಖೆಗಳು

🌺ವಿಜ್ಞಾನದ ಹಲವು ಶಾಖೆಗಳು🌺
Most imp. KPSC. KSP 👇✍✍
➤ ಏರೋಲಜಿ : ವಾತಾವರಣದ ಅಧ್ಯಯನ👈

➤ ಏರೋನಾಟಿಕ್ಸ್ : ಹಾರುವಿಕೆಯ ಬಗೆಗಿನ ಅಧ್ಯಯನ👈

➤ ಆಗ್ರೋಬಯಾಲಜಿ : ಸಸ್ಯ ಜೀವನ ಮತ್ತು ಸಸ್ಯ ಪೋಷಣೆಯ ಬಗೆಗಿನ ಅಧ್ಯಯನ.

➤ ಆಗ್ರೋಲಜಿ : ಮಣ್ಣಿನ ವಿಜ್ಞಾನದ ಶಾಖೆಯಾಗಿದ್ದು ಸಸ್ಯೋತ್ಪನ್ನದ ಬಗೆಗೆ ಅಧಯಯನ ನಡೆಸುತ್ತದೆ.

➤ ಆಗ್ರೋಸ್ಪಾಲಜಿ : ಹುಲ್ಲುಗಳ ಬಗೆಗೆ ಅಧ್ಯಯಿಸುವ ವಿಜ್ಞಾನ👈🌺

➤ ಅನಸ್ತೇಸಿಯಾಲಜಿ : ಅರವಳಿಕೆ ಶಾಸ್ತ್ರ

➤ ಆರ್ಕಿಯಾಲಜಿ : ಪ್ರಾಚ್ಯ ವಸ್ತುಗಳ ಅಧ್ಯಯನ🌱👈

➤ ಅಸ್ಟ್ರೋನಾಟಿಕ್ಸ್ : ಸೌರಯಾನ ಮತ್ತು ಸೌರ ವಾಹನಗಳ ಬಗೆಗಿನ ಅಧ್ಯಯನ.
➤ ಅಸ್ಟ್ರೋನಮಿ : ಸೌರವ್ಯೂಹದಲ್ಲಿನ ವಸ್ತುಗಳ ಬಗೆಗಿನ ಅಧ್ಯಯನ ನಡೆಸುವ ವಿಜ್ಞಾನ

➤ ಆಸ್ಟ್ರೋಜಿಯಾಲಜಿ : ಸೌರವ್ಯೂಹದಲ್ಲಿನ ಕಲ್ಲು ಮತ್ತು ಖನಿಜಗಳ ರಚನೆಯ ಬಗೆಗಿನ ಅಧ್ಯಯನ.👈✌️

➤ ಬಯೋಕೆಮಿಸ್ಟ್ರಿ : ಜೈವಿಕ ಜೀವಿಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಬಗೆಗಿನ ಅಧ್ಯಯನ.

➤ ಬಯೋ ಜಿಯಾಗ್ರಫಿ : ಭೂಮಿಯ ಮೇಲೆ ಜೀವಿಗಳ ಹಂಚಿಕೆಯ ಬಗೆಗೆ ಅಧ್ಯಯನ

➤ ಬಯಾಲಜಿ : ಜೈವಿಕ ವಸ್ತುಗಳ ಬಗೆಗಿನ ಸಂಪೂರ್ಣ ಅಧ್ಯಯನ.👈📚

➤ ಬಯೊಮೆಟ್ರಿ : ಗಣಿತಶಾಸ್ತ್ರವನ್ನು ಉಪಯೋಗಿಸಿ ಸಜೀವ ವಸ್ತುಗಳ ಬಗೆಗಿನ ಅಧ್ಯಯನ.

➤ ಬಾಟನಿ : ಸಸ್ಯ ಮತ್ತು ಸಸ್ಯ ಜೀವನದ ಬಗೆಗೆ ಅಧ್ಯಯನ ನಡೆಸುವ ಶಾಸ್ತ್ರ

➤ ಕಾರ್ಡಿಯಾಲಜಿ : ಹೃದಯ ವಿಜ್ಞಾನ👈📚

➤ ಕಾರ್ಪೋಲಜಿ : ಹಣ್ಣು ಮತ್ತು ಬೀಜಗಳ ಬಗೆಗಿನ ಅಧ್ಯಯನ

➤ ಕಾಸ್ಮೆಟೋಲಜಿ : ಸೌಂದರ್ಯವರ್ದಕಗಳ ಮತ್ತು ಅವುಗಳ ಉಪಯೋಗದ ಬಗೆಗಿನ ಅಧ್ಯಯನ.

➤ ಕ್ರೈಯೋಜೆನಿಕ್ಸ್ : ಶೈತ್ಯಶಾಸ್ತ್ರ

➤ ಕ್ರಿಪ್ಟೋಲಜಿ : ರಹಸ್ಯ ಭಾಷೆ ಮತ್ತು ಬರಹಗಳ ಬಗೆಗಿನ ಅಧ್ಯಯನ👈📚

➤ ಸೈಟೋಲಜಿ : ಜೀವಕೋಶಗಳ ರಚನೆ ಮತ್ತು ಕಾರ್ಯಗಳ ಬಗೆಗಿನ ಅಧ್ಯಯನ.

➤ ಡೆಮೊಗ್ರಫಿ : ಸಾಮಾಜಿಕ ಅಂಕಿ- ಅಂಶಗಳ ಬಗೆಗಿನ ಅಧ್ಯಯನ📚👈

➤ ಡರ್ಮಿಟಾಲಜಿ : ಚರ್ಮದ ಬಗೆಗಿನ ಅಧ್ಯಯನ ನಡೆಸುವ ಔಷಧ ವಿಜ್ಞಾನ

➤ ಇಕಾಲಜಿ : ಜೀವಿಗಳ ಮತ್ತು ಪರಿಸರದ ನಡುವಿನ ಸಂಬಂಧಗಳ ಬಗೆಗಿನ ಅಧ್ಯಯನ👈

➤ ಎಡಪೋಲಜಿ : ಮಣ್ಣಿನ ವೈಜ್ಞಾನಿಕ ಅಧ್ಯಯನ

➤ ಎಂಟೊಮಾಲಜಿ : ಕೀಟಶಾಸ್ತ್ರ – ಕೀಟಗಳ ಬಗೆಗಿನ ಅಧ್ಯಯನ👈✌️

➤ ಎಟಿಮಾಲಜಿ : ಶಬ್ಧಗಳ ಮೂಲ ಮತ್ತು ಇತಿಹಾಸದ ಅಧ್ಯಯನ👈📚

➤ ಜೆನೆಟಿಕ್ಸ್ : ತಳಿಶಾಸ್ತ್ರ- ಅನುವಂಶೀಯತೆ ಮತ್ತು ಅದರ ನಿಯಮಗಳ ಅಧ್ಯಯನ.👈📚

➤ ಜಿಯೋಡೆಸಿ : ಭೂಮಿಯ ಮೇಲ್ಮೈಯ ಸರ್ವೇಕ್ಷಣ ಮತ್ತು ನಕ್ಷೆಯ ರಚನೆ

➤ ಹೆಲ್ಮಿಂತಾಲಜಿ : ಹುಳುಗಳ ಬಗೆಗಿನ ಅಧ್ಯಯನ👈

➤ ಹೆಪಟಾಲಜಿ : ಕರುಳಿನ ಕುರಿತ ಅಧ್ಯಯನ

➤ ಹಿಸ್ಟಾಲಜಿ : ಅಂಗವ್ಯೂಹಗಳ ಬಗೆಗಿನ ಅಧ್ಯಯನ

➤ ಹೈಡ್ರೋಗ್ರಫಿ : ಸಮುದ್ರಗಳ ವೈಜ್ಞಾನಿಕ ಅಧ್ಯಯನ👈🌱

➤ ಐಕನೋಗ್ರಫಿ : ಚಿತ್ರಗಳ ಮತ್ತು ಮಾದರಿಗಳ ಮೂಲಕ ವಿಷಯಗಳ ಕಲಿಕೆ

➤ ಲಿತಾಲಜಿ : ಶಿಲೆಗಳ ಗುಣಲಕ್ಷಣಗಳ ಅಧ್ಯಯನ👈🌺📝

➤ ಮೆಕಾನಿಕ್ಸ್ : ವಸ್ತುಗಳ ಚಲನೆಯ ಬಗೆಗಿನ ಅಧ್ಯಯನ

➤ ಮೆಟಲರ್ಜಿ : ಲೋಹಗಳ ಕುರಿತ ಅಧ್ಯಯನ👈✔️🌺simply 

➤ ಮೈಕ್ರೋಬಯಾಲಜಿ : ಸೂಕ್ಷ್ಮ ಜೀವಿಗಳ ಅಧ್ಯಯನ

➤ ನೆಫಾಲಜಿ : ಮೋಡಗಳ ಅಧ್ಯಯನ

➤ ನೆಫ್ರಾಲಜಿ : ಕಿಡ್ನಿ ರೋಗಗಳ ಅಧ್ಯಯನ👈📚imp

➤ ನ್ಯೂರೋಲಜಿ : ನರವ್ಯೂಹ, ಕಾರ್ಯ ಮತ್ತು ಅವ್ಯವಸ್ಥೆಯ ಕುರಿತ ಅಧ್ಯಯನ
✔️imp
➤ ಮೆಟಿಯೊರೋಲಜಿ : ವಾತಾವರಣ ಮತ್ತು ಅದರ ಪ್ರಕ್ರಿಯೆಗಳ ಕುರಿತ ಅಧ್ಯಯನ

➤ ಆಂಕಾಲಜಿ : ಕ್ಯಾನ್ಸರ್ನ ಅಧ್ಯಯನ👈📚✔️

➤ ಆಪ್ತಾಲ್ಮೋಲಜಿ : ಕಣ್ಣು ಮತ್ತು ಕಣ್ಣಿನ ರೋಗಗಳ ಅಧ್ಯಯನ

➤ ಆರೋಲಜಿ : ಪರ್ವತಗಳ ಅಧ್ಯಯನ👈✔️

➤ ಆರ್ನಿತೋಲಜಿ : ಪಕ್ಷಿಗಳ ಕುರಿತ ಅಧ್ಯಯನ

➤ ಆರ್ತೋಪೆಡಿಕ್ಸ್ : ಎಲಬು ಮತ್ತು ಮೂಳೆಗಳ ಅಧ್ಯಯನ

➤ ಪಿಡಿಯಾಟ್ರಿಕ್ಸ್ : ಶಿಶು ರೋಗಗಳ ಅಧ್ಯಯನ

➤ ಪೆಥಾಲಜಿ : ರೋಗಶಾಸ್ತ್ರ👈imp 

➤ ಪೋಮಾಲಜಿ : ಹಣ್ಣು ಮತ್ತು ಹಣ್ಣಿನ ಬೆಳೆಗಳ ಅಧ್ಯಯನ✔️👈imp 

➤ ರೇಡಿಯೋಲಜಿ : ರೋಗ ಪತ್ತೆ ಮತ್ತು ಚಿಕಿತ್ಸೆಗೆ ಎಕ್ಸರೇ ಬಳಕೆ.

➤ ಸಿಸ್ಮೋಲಜಿ : ಭೂಕಂಪ ಮತ್ತು ಸಂಬಂಧಿಸಿದ ವಿಚಾರಗಳ ಅಧ್ಯಯನ👈imp ✔️

➤ ಸಿರಿಕಲ್ಚರ್ : ರೇಷ್ಮೇ ಸಾಕಾಣಿಕೆ, ರೇಷ್ಮೇ ಉತ್ಪಾದನೆ ಮತ್ತು ರೇಷ್ಮೇಗೆ ಸಂಬಂಧಿಸಿದ ವಿಷಯಗಳ ಅಧ್ಯಯನ.

➤ ವಿರೋಲಜಿ : ವೈರಸ್ಗಳ ಅಧ್ಯಯನ👈imp 

➤ ಜುವಾಲಜಿ : ಪ್ರಾಣಿ ಜೀವನದ ಅಧ್ಯಯನ

➤ ಟ್ರೈಕಾಲಜಿ : ಕೂದಲಿನ ವೈಜ್ಞಾನಿಕ ಅಧ್ಯಯನ

➤ ಯುರೋಲಜಿ : ಮೂತ್ರನಾಳದ ರೋಗಶಾಸ್ತ್ರ👈imp 

➤ ಫಿಲಾಲಜಿ : ಬೋಧನಾ ವಿಜ್ಞಾನ

ಶುಕ್ರವಾರ, ನವೆಂಬರ್ 12, 2021

ಪ್ರಶಸ್ತಿಗಳು

🍁 2020ನೇ ಸಾಲಿನ "ಶಿವರಾಮ ಕಾರಂತ ಪ್ರಶಸ್ತಿ"
- ಎಸ್.ಎಲ್ ಭೈರಪ್ಪ

🍁 2021ನೇ ಸಾಲಿನ "ಶಿವರಾಮ ಕಾರಂತ ಪ್ರಶಸ್ತಿ"
- ಪ್ರೊ.ಸಿ.ಎನ್.ರಾಮಚಂದ್ರನ್ 
- ಪ್ರೊ. ಪ್ರೇಮಶೇಖರ್

ಟೋಕಿಯೋ ಪ್ಯಾರಾಲಿಂಪಿಕ್ -2020**

💐ಆವೃತಿ - 16

💐ದೇಶ - ಜಪಾನ್

💐ಘೋಷವಾಕ್ಯ- ನಮಗೆ ರಕ್ಕೆಗಳಿವೆ 

💐ಚಾಲನೆ - ನರುಹಿಟೋ (ಜಪಾನ್ ದೊರೆ)

💐ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ - ಆ್ಯಂಡ್ರೊ ಪರ್ಸಾನ್ಸ್ 

💐ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ - ಥಾಮಸ್ ಬಾಕ್ 

💐ಭಾರತದ ಧ್ವಜಧಾರಿ - ಟೆಕ್ ಚಾಂದ್ 

💐ದೇಶಕ್ಕೆ ಪ್ರಥಮ ಬಾರಿ  ಲಂಡನ್ ನಲ್ಲಿ ಪ್ಯಾರಾಲಿಂಪಿಕ್ ನಲ್ಲಿ ರಜತ ಪದಕ ತಂದುಕೊಟ್ಟವರು - ಹೆಚ್ ಎಸ್ ಗಿರೀಶ**...

current affairs

🍁 2020ನೇ ಸಾಲಿನ "ಶಿವರಾಮ ಕಾರಂತ ಪ್ರಶಸ್ತಿ"
- ಎಸ್.ಎಲ್ ಭೈರಪ್ಪ

🍁 2021ನೇ ಸಾಲಿನ "ಶಿವರಾಮ ಕಾರಂತ ಪ್ರಶಸ್ತಿ"
- ಪ್ರೊ.ಸಿ.ಎನ್.ರಾಮಚಂದ್ರನ್ 
- ಪ್ರೊ. ಪ್ರೇಮಶೇಖರ್

ಟೋಕಿಯೋ ಪ್ಯಾರಾಲಿಂಪಿಕ್ -2020**

💐ಆವೃತಿ - 16

💐ದೇಶ - ಜಪಾನ್

💐ಘೋಷವಾಕ್ಯ- ನಮಗೆ ರಕ್ಕೆಗಳಿವೆ 

💐ಚಾಲನೆ - ನರುಹಿಟೋ (ಜಪಾನ್ ದೊರೆ)

💐ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ - ಆ್ಯಂಡ್ರೊ ಪರ್ಸಾನ್ಸ್ 

💐ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ - ಥಾಮಸ್ ಬಾಕ್ 

💐ಭಾರತದ ಧ್ವಜಧಾರಿ - ಟೆಕ್ ಚಾಂದ್ 

💐ದೇಶಕ್ಕೆ ಪ್ರಥಮ ಬಾರಿ  ಲಂಡನ್ ನಲ್ಲಿ ಪ್ಯಾರಾಲಿಂಪಿಕ್ ನಲ್ಲಿ ರಜತ ಪದಕ ತಂದುಕೊಟ್ಟವರು - ಹೆಚ್ ಎಸ್ ಗಿರೀಶ**...

ಕನ್ನಡದ ಬಿರುದಾಂಕಿತರು

🌹✍️ಕನ್ನಡದ ಬಿರುದಾಂಕಿತರು🌹

✍️📚ಇಂಪಾರ್ಟೆಂಟ್ ✍️ನೋಟ್ಸ್ 🌹

🌹🌹ಬಿರುದು - ಬಿರುದಾಂಕಿತರು🌹🎯🌹ಮೈ ಆಟೋಗ್ರಾಫ್ 🌹✍️

1. ದಾನ ಚಿಂತಾಮಣಿ - ಅತ್ತಿಮಬ್ಬೆ

2. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯ

3. ಕನ್ನಡದ ಶೇಕ್ಸ್ಪಿಯರ್ - ಕಂದಗಲ್ ಹನುಮಂತರಾಯ

4. ಕನ್ನಡದ ಕೋಗಿಲೆ - ಪಿ.ಕಾಳಿಂಗರಾವ್

5. ಕನ್ನಡದ ವರ್ಡ್ಸ್ವರ್ತ್ - ಕುವೆಂಪು

6. ಕಾದಂಬರಿ ಸಾರ್ವಭೌಮ - ಅ.ನ.ಕೃಷ್ನರಾಯ

7. ಕರ್ನಾಟಕ ಪ್ರಹಸನ ಪಿತಾಮಹ - ಟಿ.ಪಿ.ಕೈಲಾಸಂ

8. ಕರ್ನಾಟಕದ ಕೇಸರಿ - ಗಂಗಾಧರರಾವ್ ದೇಶಪಾಂಡೆ

9. ಸಂಗೀತ ಗಂಗಾದೇವಿ - ಗಂಗೂಬಾಯಿ ಹಾನಗಲ್

10. ನಾಟಕರತ್ನ - ಗುಬ್ಬಿ ವೀರಣ್ಣ

11. ಚುಟುಕು ಬ್ರಹ್ಮ - ದಿನಕರ ದೇಸಾಯಿ

12. ಅಭಿನವ ಪಂಪ - ನಾಗಚಂದ್ರ

13. ಕರ್ನಾಟಕ ಸಂಗೀತ ಪಿತಾಮಹ - ಪುರಂದರ ದಾಸ

14. ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ

15. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ

16. ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್

17. ಕನ್ನಡದ ದಾಸಯ್ಯ - ಶಾಂತಕವಿ

18. ಕಾದಂಬರಿ ಪಿತಾಮಹ - ಗಳಗನಾಥ

19. ತ್ರಿಪದಿ ಚಕ್ರವರ್ತಿ - ಸರ್ವಜ್ಞ

20. ಸಂತಕವಿ - ಪು.ತಿ.ನ.

21. ಷಟ್ಪದಿ ಬ್ರಹ್ಮ - ರಾಘವಾಂಕ

22. ಸಾವಿರ ಹಾಡುಗಳ ಸರದಾರ - ಬಾಳಪ್ಪ ಹುಕ್ಕೇರಿ

23. ಕನ್ನಡದ ನಾಡೋಜ - ಮುಳಿಯ ತಿಮ್ಮಪ್ಪಯ್ಯ

24. ಸಣ್ಣ ಕತೆಗಳ ಜನಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್

25. ಕರ್ನಾಟಕ ಶಾಸನಗಳ ಪಿತಾಮಹ - ಬಿ.ಎಲ್.ರೈಸ್

26. ಹರಿದಾಸ ಪಿತಾಮಹ - ಶ್ರೀಪಾದರಾಯ

27. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ

28. ವಚನಶಾಸ್ತ್ರ ಪಿತಾಮಹ - ಫ.ಗು.ಹಳಕಟ್ಟಿ

29. ಕವಿಚಕ್ರವರ್ತಿ - ರನ್ನ

30. ಆದಿಕವಿ - ಪಂಪ

31. ಉಭಯ ಚಕ್ರವರ್ತಿ - ಪೊನ್ನ

32. ರಗಳೆಯ ಕವಿ - ಹರಿಹರ

33. ಕನ್ನಡದ ಕಣ್ವ - ಬಿ.ಎಂ.ಶ್ರೀ

34. ಕನ್ನಡದ ಸೇನಾನಿ - ಎ.ಆರ್.ಕೃಷ್ಣಾಶಾಸ್ತ್ರಿ

35. ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲೆಪ್ಪ

36. ಯಲಹಂಕ ನಾಡಪ್ರಭು - ಕೆಂಪೇಗೌಡ

37. ವರಕವಿ - ಬೇಂದ್ರೆ

38. ಕುಂದರ ನಾಡಿನ ಕಂದ - ಬಸವರಾಜ ಕಟ್ಟೀಮನಿ

39. ಪ್ರೇಮಕವಿ - ಕೆ.ಎಸ್.ನರಸಿಂಹಸ್ವಾಮಿ

40. ಚಲಿಸುವ ವಿಶ್ವಕೋಶ - ಕೆ.ಶಿವರಾಮಕಾರಂತ

41. ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್

42. ದಲಿತಕವಿ - ಸಿದ್ದಲಿಂಗಯ್ಯ

43. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು

44. ಪ್ರಾಕ್ತನ ವಿಮರ್ಶಕ ವಿಚಕ್ಷಣ - ಆರ್.ನರಸಿಂಹಾಚಾರ್

45. ಕನ್ನಡದ ಕಬೀರ - ಶಿಶುನಾಳ ಷರೀಪ

46. ಕನ್ನಡದ ಭಾರ್ಗವ - ಕೆ.ಶಿವರಾಮಕಾರಂತ

47. ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ
🙏✍️✍️✍️🌹ಸಿಂಪಲ್ 🌹

📚ಕರ್ನಾಟಕದ ಕೆಲವು ಊರುಗಳು 📚 ಅಲ್ಲಿನ ವಿಶೇಷತೆಗಳು:-📚📚🔰🔰✍✍✍Simple💲🔰

🔷ಬೆಳಗಾವಿ - ಕುಂದಾನಗರಿ

🔶ಮೈಸೂರು - ಶ್ರೀಗಂಧದ ಕೆತ್ತನೆಗಳು

🔷ಬೀದರ್ - ಬಿದರಿ ಕಲೆ

🔶ಹಾವೇರಿ - ಏಲಕ್ಕಿ ಹಾರ

🔷ಹೊನ್ನಾವರ - ಅಪ್ಸರಕೊಂಡ✍️

🔶ನಂಜನಗೂಡು - ಬಾಳೆಹಣ್ಣು

🔷ಕಲಘಟಗಿ - ಮರದ ತೊಟ್ಟಿಲು

🔶ಹೊನ್ನಾವರ - ಕಾಸರಗೋಡು ಬೀಚ್

🔷ಬನ್ನೂರು - ಕುರಿಗಳು
🖌
🔶ತಿಪಟೂರು - ಕುದುರೆಗಳು

🔷ಮುಧೋಳ - ನಾಯಿಗಳು

🔶ಚೆನ್ನಪಟ್ಟಣ - ಮರದ ಗೊಂಬೆಗಳು

🔷ಕುಮಟಾ - ಮಿರ್ಜಾನ್ ಕೋಟೆ

🔷ಮಂಗಳೂರು - ಹಂಚುಗಳು

🔶ಹಡಗಲಿ/ಮೈಸೂರು - ಮಲ್ಲಿಗೆ ಹೂ

🔷ಸಿದ್ದಾಪುರ - ಹೂಸುರು ಡ್ಯಾಮ್

🔶ಇಳಕಲ್ - ಸೀರೆ

🔷ಗೋಕಾಕ್ - ಖರದಂಟು

🔶ಧಾರವಾಡ - ಪೇಡಾ

🔷ಕುಂದಾಪುರ - ಮಲ್ಪೆ ಬೀಚ್

🔶ಗೋಕರ್ಣ - ಓಂ ಬೀಚ್

🔷ಗುಳೇದಗುಡ್ಡ - ಖಣ

🔶ಶಹಾಬಾದ - ಕಲ್ಲುಗಳು

🔷 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔶ಮಾವಿನಕುರ್ವೆ - ಬೀಗಗಳು
🖌
🔷ಬೆಳಗಾವಿ - ಕುಂದಾ

🔶ಮಂಡ್ಯ - ಕಬ್ಬು

🔷ಕುಮಟಾ - ಅಪ್ಸರಕೊಂಡ

🔶ಬ್ಯಾಡಗೀ - ಮೆಣಸಿನಕಾಯಿ

🔷ಉಡುಪಿ - ಕಾಪು ಬೀಚ್

🔶ಮುರ್ಡೇಶ್ವರ - ಅತಿ ಎತ್ತರದ ರಾಜಗೋಪುರ

🔷ದಾವಣಗೇರೆ - ಬೆಣ್ಣೆ ದೋಸೆ

🔶ಚಿಕ್ಕಮಂಗಳೂರು - ಕಾಫಿ

🔷ಚಿತ್ರದುರ್ಗ - ಕಲ್ಲಿನ ಕೋಟೆ

🔶ಶಿವಮೊಗ್ಗ - ಮಲೆನಾಡು

🔷ಯಲ್ಲಾಪುರ - ಮಾಗೋಡು ಪಾಲ್ಸ್

🔶ಹಾಸನ - ಶಿಲ್ಪ ಕಲೆ

🔷ತುಮಕೂರು - ಶಿಕ್ಷಣ ಕಾಶಿ

🔶ಕಂಚಿಕೊಪ್ಪ - ಕೊಸಂಬರಿ/ ಕ್ಯಾಕೇಕರೆಹಣ್ಣ

🔷ಹೊಸಹಳ್ಳಿ - ಮಡಿಕೆ

🔶ಹೊಸದುರ್ಗ - ಬಂಡೆ/ ದಾಳಿಂಬೆ

🔷ಶಿರಸಿ - ಯಾಣ

🔶ಅರಸೀಕೆರೆ - ಗಣಪತಿ

🔷ಬಾಣಾವರ - ಬಟ್ಟೆ
 
🔶 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔷ಕುದುರೆಮುಖ - ಕಬ್ಬಿಣ

🔶ಸಿದ್ದಾಪುರ -ಭೀಮನ ಗುಡ್ಡ

🔷ಮಾಡಾಳು - ಗೌರಮ್ಮ

🔶ಮಡೀಕೆರಿ - ಟೀ

🔷ರಾಣೇಬೇನ್ನೊರು - ರೊಟ್ಟಿ

🔶ಕಾರವಾರ - ಮೀನು

🔷ಗದಗ - ಪ್ರಿಂಟಿಂಗ್

🔶ಬಳ್ಳಾರಿ - ಗಣಿ

🔷ಹೊನ್ನಾವರ - ಕರ್ಕಿ ಬೀಚ್

🔶ಕೋಲಾರ - ಚಿನ್ನದ ಗಣ

🔷ಮಂಗಳೂರು - ಬಂದರು

🔶ಶಿವಮೊಗ್ಗ - ಕೊಡಚಾದ್ರಿ ಬೆಟ್ಟ

🔷ಸಿದ್ದಾಪುರ - ಉಂಚಳ್ಳಿ ಪಾಲ್ಸ್

🔶ಚಿಕ್ಕಮಂಗಳೂರು - ಹೆಬ್ಬೆ ಪಾಲ್ಸ್

🔷ಶಿರಸಿ - ಸಹಸ್ರ ಲಿಂಗ

🔶ಬೆಳಗಾವಿ - ಗೋಕಾಕ್ ಪಾಲ್ಸ್

🔷ಕಾರವಾರ - ಸಮುದ್ರ ಕೀನಾರೆ
🖌
🔶ಖಾನಾಪೂರ-ಭಿಮಗಡ ಹುಲಿಗಳ ಕಾಡು

🔶ಚಿಕ್ಕಬಳ್ಳಾಪುರ - ನಂದಿ ಬೆಟ್ಟ

🔷ಮುಡಗೋಡು - ಟಿಬೇಟಿಯನ್ ಕಾಲೋನಿ

🔶ಚಿಕ್ಕಮಂಗಳೂರು - ಮುಳ್ಳಯ್ಯನಗಿರಿ

🔷ದಾಡೇಲಿ - ವಂಶಿ ಅಭಯಾರಣ್ಯ

🔶ವಿಜಾಪುರ - ಕೋಟೆ

🔷ಸಿದ್ದಾಪುರ - ಬುರುಡೆ ಪಾಲ್ಸ್
 
🔶ಶಿವಮೋಗ್ಗ /ಸಾಗರ -ಪಾಲ್ಸ್

🔷ಶಿವಮೊಗ್ಗ - ಆಗುಂಬೆ

ಪ್ರಚಲಿತ ಘಟನೆಗಳು 27/08/2021

ಪ್ರಚಲಿತ ಘಟನೆಗಳು 27/08/2021

1. 2021 ರ ರಾಷ್ಟ್ರಪತಿ ಪ್ರಶಸ್ತಿಗೆ ಹರಿಸ್ವಾಮಿ ದಾಸ್ ಅವರನ್ನು ಆಯ್ಕೆಮಾಡಲಾಗಿದೆ.

2. ಆಗಸ್ಟ್ 2021ರಲ್ಲಿ. 100 ಬಿಲಿಯನ್ ಯು.ಎಸ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ತಲುಪಿದ ಭಾರತದ ನಾಲ್ಕನೇ ಕಂಪನಿ ಇನ್ಫೋಸಿಸ್.

3. ಸುದ್ದಿಯಲ್ಲಿ ಕಂಡುಬರುವ ಪಂಜ್ ಶೀರ್ ಕಣಿವೆ ಆಫ್ಘಾನಿಸ್ತಾನ ದೇಶಕ್ಕೆ ಸಂಬಂಧಿಸಿದೆ.

4. ಅಡುಗೆ ತೈಲ ಕಂಪನಿ sunpure ನಟ ಸೋನು ಸೂದ್ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.

5. "12% ಕ್ಲಬ್" app ಅನ್ನು Bharatpe ಫಿಂಟೆಕ್ ಸಂಸ್ಥೆಯು ಆರಂಭಿಸಿದೆ.

6. 2021ರ ಸುರಕ್ಷಿತ ನಗರಗಳ ಸೂಚ್ಯಂಕದಲ್ಲಿ ಕೋಪನ್ ಹೇಗನ್ ನಗರ ಅಗ್ರಸ್ಥಾನದಲ್ಲಿದೆ.(ಡೆನ್ಮಾರ್ಕ್ ನ ರಾಜಧಾನಿ).

7. ಮಿಷನ್ ವಾತ್ಸಲ್ಯ ಮಹಾರಾಷ್ಟ್ರ ರಾಜ್ಯದ ಯೋಜನೆಯಾಗಿದೆ.(ಕೋವಿಡ್ 19 ನಿಂದಾಗಿ ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ಸಹಾಯ ಮಾಡಲು)

8. ಕಲೈನಾರ್ ನಗರಾಭಿವೃದ್ಧಿ ಯೋಜನೆಯನ್ನು ತಮಿಳುನಾಡು ರಾಜ್ಯ ಆರಂಭಿಸಿದೆ.
(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ರೀತಿಯಲ್ಲಿ . ನಗರ ಬಡವರ ಜೀವನೋಪಾಯವನ್ನು ಸುಧಾರಿಸಲು).

9. ಜಲಶಕ್ತಿ ಸಚಿವಾಲಯು "ಸುಜಲಂ ಅಭಿಯಾನವನ್ನು" ಪ್ರಾರಂಭಿಸಿದೆ.

10. 2021ರ "ವಾಂಚುವಾ" ಉತ್ಸವವನ್ನು ಅಸ್ಸಾಂ ರಾಜ್ಯವು ಆಚರಿಸಿದೆ.(ತಿವಾ ಬುಡಕಟ್ಟು ಜನಾಂಗದ ಹಬ್ಬವಾಗಿದೆ).

11.  ಆನಂದ ಮೊಬೈಲ್ ಅಪ್ಲಿಕೇಶನ್ LIC (LIC ಏಜೆಂಟ್ ಗಳಿಗಾಗಿ)ಸಂಸ್ಥೆಗೆ ಸಂಬಂಧಿಸಿದೆ 

12. ಭಾರತದ ಮೊದಲ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಘಟಕ ಬೆಂಗಳೂರು ನಗರದಲ್ಲಿ ಸ್ಥಾಪಣೆಯಾಗಿದೆ.

13. ಭಾರತದಲ್ಲಿ ಸ್ಯಾಮ್ ಸಂಗ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ಆಲಿಯಾ ಭಟ್ ಅವರು ಆಯ್ಕೆಯಾಗಿದ್ದಾರೆ.

14. ಕರ್ನಾಟಕದ ಮೊದಲ ಸ್ಟೀಲ್ ಸೇತುವೆ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದೆ.

ಕರ್ನಾಟಕದ ಬಗ್ಗೆ

🏝 ಕರ್ನಾಟಕದಲ್ಲಿ ಮೊಟ್ಟಮೊದಲಿಗೆ ಬ್ರಿಟಿಷ್ ಅಧಿಕಾರಶಾಹಿಯ ವಿರುದ್ಧ ತೀವ್ರತರ ಪ್ರಮಾಣದ ದಂಗೆಯೆದ್ದವರು
- ಧೋಂಡಿಯವಾಗ್

🏖 ಕರ್ನಾಟಕ ಕಂಡ ಅಭೂತಪೂರ್ವ ಸಾಮೂಹಿಕ ಜಾಗೃತಿ 
- ಭಾರತ ಬಿಟ್ಟು ತೊಲಗಿ ಆಂದೋಲನ

👉  ಪಾರ್ಸಿಗಳ ಪವಿತ್ರ ಪುಸ್ತಕ
- ಝೆಂಡಾ ಆವಸ್ತಾ

👉 ಇಸ್ಲಾಂ ಧರ್ಮದ ಪವಿತ್ರ ಗ್ರಂಥ  
- ಕುರ್ - ಆನ್

👉 ರಾಜ್ಯ ಸರ್ಕಾರ ನೀಡುವ 2019-20 ನೇ ಸಾಲಿನ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಆಯ್ಕೆಯಾಗಿರುವವರು...
ಡಾ. ಚೂಡಾಮಣಿ ನಂದಗೋಪಾಲ್

👉 ಸ್ವಲ್ಪ ಆಟ, ಸ್ವಲ್ಪ ಅಧ್ಯಯನ
 ( A little game, a little study) ಎಂಬ ಯೋಜನೆಯನ್ನು 'ತ್ರಿಪುರ' ರಾಜ್ಯವು ಜಾರಿಗೆ ತಂದಿದೆ

👉 ವೈರಲೆಸ್ ತರಬೇತಿ ಸಂಸ್ಥೆ
- ಬೆಂಗಳೂರು
👉 ಟ್ರಾಫಿಕ್ ತರಬೇತಿ ಕೇಂದ್ರ
- ಬೆಂಗಳೂರು

👉 ಪೋಲಿಸರ ಧ್ವಜ ದಿನ 
- ಎಪ್ರಿಲ್ 2
👉 ಪೋಲಿಸರ ಹುತಾತ್ಮರ ದಿನ 
- ಅಕ್ಟೋಬರ್ 21

👉 ರೈಲ್ವೆ ಅಧ್ಯಕ್ಷರು 
- ಸುನಿತ್ ಶರ್ಮಾ

👉 ಕೇಂದ್ರ ರೈಲ್ವೆ ಸಚಿವರು
- ಅಶ್ವಿನಿ ವೈಷ್ಣವ್

👉 ರಾಜ್ಯ ರೈಲ್ವೆ ಸಚಿವರು
- ದರ್ಶನ ಜರ್ದೋಷ್

👉 ರಾಷ್ಟ್ರೀಯ ಪ್ರಸಾರ ದಿನವನ್ನು ಜುಲೈ 23ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ.
-  1922ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿ ರೇಡಿಯೋ ಪ್ರಸಾರ ಪ್ರಾರಂಭವಾಯಿತು.
-  ಭಾರತದ ಮೊದಲ ರೇಡಿಯೊ ಪ್ರಸಾರವು 1927ರಲ್ಲಿ ಬಾಂಬೆ ಪ್ರಸಾರ ಕೇಂದ್ರದಿಂದ ಪ್ರಸಾರವಾಯಿತು.
👉 Radio ಧ್ಯೇಯ ವಾಕ್ಯ
ಬಹುಜನ ಹಿತಾಯ 
ಬಹುಜನ ಸುಖಾಯ!.

🌷 ರಾಜ್ಯದ ಅಧಿಕೃತ ಚಿಟ್ಟೆ
ಸದರ್ನ್ ಬರ್ಡ್'ವಿಂಗ್
(Troides minos)
- ಇದು ದೇಶದ ಅತಿದೊಡ್ಡ ಚಿಟ್ಟೆಯಾಗಿದೆ.

🌷Note

- 1949: RBI ರಾಷ್ಟ್ರೀಕರಣ
- 1955: SBI ರಾಷ್ಟ್ರೀಕರಣ
- 1956: LIC ರಾಷ್ಟ್ರೀಕರಣ
- 1969: 14 ಬ್ಯಾಂಕುಗಳ ರಾಷ್ಟ್ರೀಕರಣ
- 1980: 6 ಬ್ಯಾಂಕುಗಳ ರಾಷ್ಟ್ರೀಕರಣ

Imp👆

🌷 ಅಣುಬಾಂಬು ಹಾಕಿದ್ದು

🌿 HIROSHIMA
Little Boy - August 6,1945

🌿 NAGASAKI
Fat Man - August 9,1945

▪️Article 93—ಲೋಕಸಭೆ
▪️Article 178—ವಿಧಾನಸಭೆ

🍁 ಕೊವಿಡ್'ನಿಂದ ಅನಾಥರಾದ ಮಕ್ಕಳಿಗೆ

👉 ರಾಜ್ಯದಿಂದ ಮುಖ್ಯಮಂತ್ರಿಗಳ "ಬಾಲಸೇವಾ ಯೋಜನೆ" 
(3500/month)

👉 ಕೇಂದ್ರ ಸರ್ಕಾರದಿಂದ "ಮಕ್ಕಳಿಗಾಗಿ PM CARES" ಯೋಜನೆ(10ಲಕ್ಷ)

👉 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ 
"Black Fungus (Mucormycosis)"ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

👉 ವಿಧಿ 168
- ವಿಧಾನ ಪರಿಷತ್ ಇರಬೇಕು

👉 ವಿಧಿ 169
- ವಿಧಾನ ಪರಿಷತ್ ರದ್ದು ಅಥವಾ ಸೃಜಿಸುವುದು

👉 ವಿಧಿ 171
- ವಿಧಾನ ಸಭೆಯ 1/3ರಷ್ಟು ವಿಧಾನ ಪರಿಷತ್ ಸದಸ್ಯರು

🍁 2020ನೇ ಸಾಲಿನ ಮದರ್ ಥೆರೇಸಾ ರಾಷ್ಟ್ರೀಯ ಪ್ರಶಸ್ತಿ 
- ಕೊಪ್ಪಳದ ಶಿವಾನಂದ ತಗಡೂರು.

🍁2020ನೇ ಸಾಲಿನ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’
- ವಿಮರ್ಶಕ ಡಾ.ಜಿ.ಎಸ್.ಅಮೂರ್

🍁 2021ನೇ ಸಾಲಿನ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’
- ಹಿರಿಯ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್

🍁 2021 : ಹಣ್ಣು ತರಕಾರಿ ವರ್ಷ
🍁 2023 : ಸಿರಿಧಾನ್ಯಗಳ ವರ್ಷ

🍁 ಕನ್ನಡ ಶಾಸನಗಳನ್ನು ಸಂಪಾದಿಸಿ ಪ್ರಕಟಿಸಿದವರು 
— B.L ರೈಸ್

🍁 ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು 
— E.P ರೈಸ್

ಮಂಗಳವಾರ, ನವೆಂಬರ್ 09, 2021

ಭಾರತ ಸಂವಿಧಾನದ ಕುರಿತು

❇️ಭಾರತದ ಸಂವಿಧಾನದ ವಿಧಿಗಳು

ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ) 

1ಒಕ್ಕೂಟದ ಹೆಸರು 
2ನೂತನ  ರಾಜ್ಯಗಳ ರಚನೆ 
3ಸರಹದ್ದುಗಳು 

ಭಾಗ -2 

5ಪೌರತ್ವ 
6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು .
7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು 
8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು

ಭಾಗ -3 ( ಮೂಲಭೂತ ಹಕ್ಕುಗಳು ) 

14ಸಮಾನೆತೆಯ ಹಕ್ಕು
15ತಾರತಮ್ಯ ನಿಷೇಧ
16 ಉದ್ಯೋಗದಲ್ಲಿ ಸಮಾನತೆ 
17ಅಸ್ಪ್ರಶ್ಯತೆ ನಿರ್ಮೊಲನೆ
18ಬಿರುಡುಗಳ ರದ್ದತಿ
19 6 ಸ್ವಾತಂತ್ರ್ಯಗಳು 
20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ
21ಜೀವಿಸುವ ಹಕ್ಕು
21("ಎ) ವಿದ್ಯಾಭ್ಯಾಸದ ಹಕ್ಕು 
23ಮಾನವ ಮಾರಾಟ , ಬಲವಂತ ದುಡಿಮೆ 
24ಬಾಲಕಾ... ಕ ನಿಷೇಧ
25ಧಾರ್ಮಿಕ ಆಚರಣೆ 
26ಧಾರ್ಮಿಕ ಸ್ವಾತಂತ್ರ್ಯ
27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ 
29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ 
30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ  :

 ಭಾಗ-4(ಎ) ಮೂಲಭೂತ ಕರ್ತವ್ಯಗಳು✍️ಸಿಂಪಲ್ 

51(ಎ)11ಮೂಲಭೂತ ಕರ್ತವ್ಯಗಳು 
💐ಭಾಗ -5(ಕೇಂದ್ರ ಸರ್ಕಾರ )
52 ರಾಷ್ಪಪತಿ 
54ರಾಷ್ಪಪತಿ ಚುನಾವಣೆ
58ರಾಷ್ಪಪತಿಯ ಅರ್ಹತೆಗಳು 
60ರಾಷ್ಪಪತಿಯ ಪ್ರಮಾಣ ವಚನ 
61 ಮಹಾಭಿಯೋಗ 
63ಉಪರಾಷ್ಪಪತಿ 
67ಉಪರಾಷ್ಪಪತಿ ಪದವಧಿ 
72ರಾಷ್ಪಪತಿ ಕ್ಷಮಾಧಾನ 
74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು
75ಪ್ರಧಾನಿ  ಮಂತ್ರಿಮಂಡಲದ ನೇಮಕ 
76ಅ ....ಜನರಲ್ 
79 ಸಂಸತ್ತಿನ ರಚನೆ 
80 ರಾಜ್ಯಸಭೆ ರಚನೆ 
81ಲೋಕಸಭೆ ರಚನೆ
87ರಾಷ್ಪಪತಿಯ ವಿಶೇಷ ಭಾಷಣ 
88ಅ... ಜನರಲ್ ಹಕ್ಕುಗಳು 
89ರಾಜ್ಯಸಭೆಯ ಸಭಾಪತಿ & ಉಪಸಭಾಪತಿ 
93ಲೋಕಸಭೆಯ ಸಭಾಪತಿ &ಉಪಸಭಾಪತಿ 
99ಸಂಸತ್ ಸದಸ್ಯರಿಂದ ಪ್ರಮಾಣವಚನ 
100ಸದನದಲ್ಲಿ ಮತದಾನ ಮತ್ತು ಕೊರಂ
102 ಸದಸ್ಯರ ಅನರ್ಹತೆ ಗಳು
108 ಸಂಸತ್ತಿನ ಜಿಂಟಿ ಅಧಿವೇಶನ 
112ಕೇಂದ್ರ ಬಜೆಟ್ 
120ಸಂಸತ್ತಿನ ಬಳಸಬೇಕಾದ ಭಾಷೆಗಳು 
122 ಸಂಸತ್ತಿನಲ್ಲಿ ನ್ಯಾ.. ಹಸ್ತಕ್ಷಪ ಇಲ್ಲ 
123 ರಾಷ್ಪಪತಿ ಸುಗ್ರಿವಾನೇ 
124ಸವೋಚ್ಚ್ ನ್ಯಾಯಾಲಯ 
129 ದಾಖಲೆಯ ನ್ಯಾಯಲಯವಾಗಿ (ಸ) 
131ಸವೋಚ್ಚ್ ನ್ಯಾ  .. ಮೂಲಾಧಿಕಾರ 
133 ಸವೋಚ್ಚ್  ನ್ಯಾ. ಸಿವಿಲ್ ಅಪೀಲು 
134ಸವೋಚ್ಚ್ ನ್ಯಾ . ಕ್ರಿಮಿನಲ್ ಅಪೀಲು 
143 ಸಲಹಾ ನ್ಯಾಯಾಧಿಕರಣ 
148 ಸಿ ಎ ಜಿ

💐ಭಾಗ -6(ರಾಜ್ಯಗಳು)

153 ರಾಜ್ಯಪಾಲರು
155 ರಾಜ್ಯಪಾಲರ ನೇಮಕ 
157 ರಾಜ್ಯಪಾಲರ ಅರ್ಹತೆ ಗಳು
161 ರಾಜ್ಯಪಾಲರ ಕ್ಷಮಾಧಾನ 
163 ರಾಜ್ಯಪಾಲರಿಗೆ ಮಂತ್ರಿಮಂಡಲದ ನೆರವು 
165 ರಾಜ್ಯ ಅಡ್ವಾಕೆಟ್ ಜನರಲ್ 
170 ವಿಧಾನಸಭೆಗಳ ರಚನೆ
171ವಿಧಾನಪರಿಷತ್ತಿನ ರಚನೆ 
175 ರಾಜ್ಯಪಾಲರ ಜಿಂಟಿ ಅಧಿವೇಶನ 
178 ವಿಧಾನಸಭೆಯ ಅಧ್ಯಕ್ಷರು & ಉಪಾಧ್ಯಕ್ಷರು 
189 ಸದನದಲ್ಲಿ ಮತದಾನ &ಕೋರಂ
202 ರಾಜ್ಯ ಬಜೆಟ್
213 ರಾಜ್ಯಪಾಲರ ಸುಗ್ರೀವಾಜೆ 
214 ಉಚ್ಚನ್ಯಾಯಾಲಯ 
226 ರಿಟ್ಗಳನ್ನು ಹೊರಡಿಸುವ ಅಧಿಕಾರ 
233 ಜಿಲ್ಲಾ ನ್ಯಾಯಾಧೀಶರ ನೇಮಕಾತಿ 

ಭಾಗ -7 (ನಿರಸನಗೊಳಿಸಿದೆ )

💐ಭಾಗ - 8 (ಕೇಂದ್ರಾಡಳಿತ ಪ್ರದೇಶಗಳು) 

239(ಎ ಎ) ದೆಹಲಿಗೆ ವಿಶೇಷ ಉಪಬಂಧಗಳು 
240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ 

💐ಭಾಗ -9(ಪಂಚಾಯಿತಿಗಳು )

243- ಸ್ಥಳೀಯ ಸರ್ಕಾರಗಳು 

💐ಭಾಗ -10 (ಅನುಸೂಚಿತ ಬುಡಕಟ್ಟು ಪ್ರದೇಶಗಳು)
244 -ಅನುಸೂಚಿತ ಬುಡಕಟ್ಟು ಪ್ರದೇಶ ಆಡಳಿತ 

💐ಭಾಗ - 11 (ಕೇಂದ್ರ & ರಾಜ್ಯಗಳ ಸಂಬಂಧಗಳು) 

262- ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥ 

💐ಭಾಗ -12(ಹಣಕಾಸು , ಕರಾರು & ದಾವೆ ) 

266- ಸಂಚಿತ ವಿಧಿ 
280- ಹಣಕಾಸು ಆಯೋಗ 
300(ಎ) ಆಸ್ತಿಯ ಹಕ್ಕಿಗೆ ಕಾನೂನಿನ ನೆರವು 

💐 ಭಾಗ - 13 (ವ್ಯಾಪಾರ ,ವಾಣಿಜ್ಯ & ಸಂಪರ್ಕ ) 
302 ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ 

💐ಭಾಗ - 14 (ಲೋಕಸೇವಾ ಆಯೋಗಗಳು ) 

312 ಅಖಿಲ ಭಾರತ ಸೇವೆಗಳು 
315 upsc & kpsc

💐💐💐💐💐💐💐💐

ಭಾಗ - 15 (ಚುನಾವಣೆಗಳು) 
324- ಚುನಾವಣಾಆಯೋಗ 
326 ವಯಸ್ಕರ ಮತದಾನ ಪದ್ಧತಿ 

💐💐💐💐💐💐💐💐💐
ಭಾಗ -16 ಕೆಲವು ವರ್ಗಗಳ ವಿಶೇಷ   ಉಪಬಂಧ 
330 - sc& st ಲೋಕಸಭೆಯಲ್ಲಿ ಮೀಸಲಾತಿ 
331- ಲೋಕಸಭೆಯಲ್ಲಿ ಆಂಗ್ಲೋ  ಇಂಡಿಯನ್ 
332- sc&st  ವಿಧಾನಸಭೆಯಲ್ಲಿ ಮೀಸಲಾತಿ 
333-ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್ 

💐💐💐💐💐💐💐💐💐
ಭಾಗ - 17 (ರಾಜ್ಯ ಭಾಷೆ ) 
335- ರಾಜ್ಯ ಆಡಳಿತ ಭಾಷೆಗಳು 
350- ಎ ಪ್ರಾ .. ಹಂತದಲ್ಲಿ ಮಾ....ಭಾಷಾ ಶಿಕ್ಷಣ

💐💐💐💐💐💐💐💐💐
ಭಾಗ - 18 (ತುರ್ತುಪರಿಸ್ಥಿತಿಗಳು)
352- ರಾಷ್ಟ್ರೀಯ ತುರ್ತುಪರಿಸ್ಥಿತಿ 
356- ರಾಜ್ಯ ತುರ್ತು ಪರಿಸ್ಥಿತಿ 
360- ಹಣಕಾಸು ತುರ್ತುಪರಿಸ್ಥಿತಿ 

💐💐💐💐💐💐💐💐💐
ಭಾಗ- 19 (ಇತರೆ ) 
364 - ವಿಮಾನ ನಿಲ್ದಾಣ , ಬಂದರುಗಳು 
ಭಾಗ - 20 ( ಸಂವಿಧಾನದ ತಿದ್ದುಪಡಿಗಳು) 
368- ತಿದ್ದುಪಡಿಗಳು 

💐💐💐💐💐💐💐💐💐
ಭಾಗ -21(ವಿಶೇಷ ಉಪಬಂಧಗಳು ) 
370-ಜಮ್ಮು ಕಾಶ್ಮೀರಕ್ಕೆ ಸಂಬಂಧ 
371- ಮಹಾರಾಷ್ಟ್ರ & ಗುಜರಾತ್ 
371ಜೆ ಹೈದರಾಬಾದ್ ಕರ್ನಾಟಕ
ಭಾಗ -22(ಹಿಂದಿ & ನಿರಸನಗಳು) 
394 - ಎ ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ
395- ನಿರಸನಗಳು

ಶುಕ್ರವಾರ, ನವೆಂಬರ್ 05, 2021

ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಚಳುವಳಿಗಳು ಮತ್ತು ವರ್ಷ🌳

ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಚಳುವಳಿಗಳು ಮತ್ತು ವರ್ಷ🌳

🌷 ಕಾನೂನು-ಭoಗ್ ಚಳುವಳಿ (ಸ್ವದೇಶಿ ಚಳುವಳಿ )
 ➜ 1930

🌷 ಮುಸ್ಲಿಂ ಲೀಗ್ ಸ್ಥಾಪನೆ
 ➜ 1906 

 🌷 ಕಾಂಗ್ರೆಸ್ ವಿಭಜನೆ
 ➜ 1907 

 🌷 ಹೋಮ್ ರೂಲ್ ಲೀಗ್ ಸ್ಥಾಪನೆ 
 ➜ 1916

🌷 ಲಕ್ನೋ ಒಪ್ಪಂದ
 ➜ ಡಿಸೆಂಬರ್ 1916 

 🌷ರೌಲೆಟ್ ಆಕ್ಟ್
➜ 19 ಮಾರ್ಚ್ 1919 

🌷 ಜಲಿಯನ್ವಾಲಾ ಬಾಗ್ ಹತ್ಯಾಕಾಂಡ
➜ 13 ಏಪ್ರಿಲ್ 1919

🌷 ಖಿಲಾಫತ್ ಚಳುವಳಿ
➜ 1919

🌷 ಹಂಟರ್ ಸಮಿತಿ ವರದಿ ಪ್ರಕಟಣೆ 
 ➜ 18 ಮೇ 1920

🌷 ಕಾಂಗ್ರೆಸ್ ನಾಗ್ಪುರ ಅಧಿವೇಶನ
 ➜ ಡಿಸೆಂಬರ್ 1920 

🌷 ಅಸಹಕಾರ ಚಳವಳಿಯ ಆರಂಭ
 ➜  1 ಆಗಸ್ಟ್ 1920 

🌷 ಚೌರಾ ಚೌರಿ  ಘಟನೆ
 ➜ 5 ಫೆಬ್ರವರಿ 1922 

🌷 ಸ್ವರಾಜ್ಯ ಪಕ್ಷ ಸ್ಥಾಪನೆ
 ➜ 1 ಜನವರಿ 1923 

🌷 ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್
 ➜ ಅಕ್ಟೋಬರ್ 1924

🌷 ಸೈಮನ್ ಆಯೋಗದ ನೇಮಕಾತಿ
 ➜  8 ನವೆಂಬರ್ 1927

 🌷 ಸೈಮನ್ ಆಯೋಗ ಭಾರತಕ್ಕೆ  ಭೇಟಿ
➜  3 ಫೆಬ್ರವರಿ 1928 

 🌷ನೆಹರೂ ವರದಿ
 ➜ ಆಗಸ್ಟ್ 1928 

🌷  ಬಾರಡೌಲಿ ಸತ್ಯಾಗ್ರಹ
 ➜ ಅಕ್ಟೋಬರ್ 1928 

 🌷 ಕಾಂಗ್ರೆಸ್ ನ ಲಾಹೋರ್ ಅಧಿವೇಶನ
 ➜ ಡಿಸೆಂಬರ್ 1929

 🌷 ಸ್ವಾತಂತ್ರ್ಯ ದಿನದ ಘೋಷಣೆ
 ➜ 2 ಜನವರಿ 1930

🌷 ಉಪ್ಪಿನ  ಸತ್ಯಾಗ್ರಹ
 ➜ 12 ಮಾರ್ಚ್ 1930 ➖ 5 ರಿಂದ ಏಪ್ರಿಲ್ 1930

 🌷 ಕಾನೂನು ಅಸಹಕಾರ ಚಳುವಳಿ
 ➜ 6 ಏಪ್ರಿಲ್ 1930

 🌷 ಮೊದಲ ದುಂಡುಮೇಜಿನ ಸಮ್ಮೇಳನ
 ➜   12 ನವೆಂಬರ್ 1930 

 🌷ಗಾಂಧಿ-ಇರ್ವಿನ್ ಒಪ್ಪಂದ
 ➜ 8 ಮಾರ್ಚ್ 1931 

🌷ಎರಡನೇ ದುಂಡುಮೇಜಿನ ಸಮ್ಮೇಳನ
  ➜ 7 ಸೆಪ್ಟೆಂಬರ್ 1931 

🌷ಕೋಮು ಮಧ್ಯಸ್ಥಿಕೆ
 ➜ 16 ಆಗಸ್ಟ್ 1932 

🌷 ಪೂನಾ ಒಪ್ಪಂದ
 ➜ ಸೆಪ್ಟೆಂಬರ್ 1932

 🌷 ಮೂರನೇ ದುಂಡುಮೇಜಿನ ಸಮ್ಮೇಳನ
  ➜ 17 ನವೆಂಬರ್ 1932 

 🌷 ಕಾಂಗ್ರೆಸ್ ಸಮಾಜವಾದಿ ಪಕ್ಷ ರಚನೆ
 ➜ ಮೇ 1934 

🌷 ಫಾರ್ವರ್ಡ್ ಬ್ಲಾಕ್ನ ರಚನೆ
 ➜ 1 ಮೇ 1939

 🌷ಪಾಕಿಸ್ತಾನದ ಬೇಡಿಕೆ
 ➜ 24 ಮಾರ್ಚ್ 1940
 
🌷  ಆಗಸ್ಟ್ ಕೊಡುಗೆ 
 ➜  8 ಆಗಸ್ಟ್ 1940

🌷 ಕ್ರಿಪ್ಸ್ ಮಿಷನ್ ಪ್ರಸ್ತಾಪ
 ➜ ಮಾರ್ಚ್ 1942

🌷 ಕ್ವಿಟ್ ಇಂಡಿಯಾ ಪ್ರಸ್ತಾಪ
 ➜  8 ಆಗಸ್ಟ್ 1942

🌷 ಶಿಮ್ಲಾ ಸಮ್ಮೇಳನ
 ➜ 25 ಜೂನ್ 1945 

🌷ನೌಕಾ ದಂಗೆ
 ➜ 19 ಫೆಬ್ರವರಿ 1946 

 🌷 ಪ್ರಧಾನ ಮಂತ್ರಿ ಅಟ್ಲೀ ಅವರ ಪ್ರಕಟಣೆ
 ➜ 15 ಮಾರ್ಚ್ 1946

🌷 ಕ್ಯಾಬಿನೆಟ್ ಮಿಷನ್ ಆಗಮನ
 ➜ 24 ಮಾರ್ಚ್ 1946

🌷ಮಧ್ಯಂತರ ಸರ್ಕಾರದ ಸ್ಥಾಪನೆ
 ➜  2 ಸೆಪ್ಟೆಂಬರ್ 1946 

🌷 ಮೌಂಟ್ ಬ್ಯಾಟನ್ ಯೋಜನೆ
 ➜ 3 ಜೂನ್ 1947 

🌷 ಸ್ವಾತಂತ್ರ್ಯ ಸಿಕ್ಕಿದ್ದು 
  ➜  15 ಆಗಸ್ಟ್ 1947.

            🇮🇳ಜೈ ಹಿಂದ....🇮🇳
🔰🔰🔰🔰🔰🔰🔰🔰🔰🔰

ಇತ್ತೀಚಿನ ಚಂಡಮಾರುತ ಹಾಗೂ ಅವುಗಳಿಗೆ ಹೆಸರು ನೀಡಿರುವ ದೇಶಗಳು

❇️Note 

ಇತ್ತೀಚಿನ ಚಂಡಮಾರುತ ಹಾಗೂ ಅವುಗಳಿಗೆ ಹೆಸರು ನೀಡಿರುವ ದೇಶಗಳು

💐 ತೌಕ್ತೆ ಚಂಡಮಾರುತ - ಮಯನ್ಮಾರ್ ( ದೊಡ್ಡ ಹಲ್ಲಿ ಎಂದರ್ಥ) (ಅರಬ್ಬೀ ಸಮದ್ರ)

💐 ಯಾಸ್ ಚಂಡಮಾರುತ - ಒಮೆನ್ (ಮಲ್ಲೆಗೆ ಎಂದರ್ಥ) (ಬಂಗಾಳ ಕೊಲ್ಲಿ)

💐 ಗುಲಾಬ್ ಚಂಡಮಾರುತ - ಪಾಕಿಸ್ತಾನ

💐 ಶಾಹಿನಗ ಚಂಡಮಾರುತ - ಕತ್ತಾರ್ ದೇಶ 

💐 ಅಂಫಾನ್ ಚಂಡಮಾರುತ - ಥೈಲ್ಯಾಂಡ್

💐 ನಿಸರ್ಗ ಚಂಡಮಾರುತ - ಬಾಂಗ್ಲಾದೇಶ

💐 ಗತಿ ಚಂಡಮಾರುತ - ಭಾರತ

💐ಅತ್ಯಂತ ಭಯಾನಕ ಚಂಡಮಾರುತದ ಹೆಸರು - ಬೋಲಾ ಚಂಡಮಾರುತ ( 5 ಲಕ್ಷ ಜನ ಸಾವು ) (ಇಂದಿನ‌ ಬಾಂಗ್ಲಾದೇಶ)

💐ಅತ್ಯಂತ ಚಿಕ್ಕ ಚಂಡಮಾರುತ - ಒಗ್ನಿ

ಎತ್ತಿತೋರಿಸಲಾದ ಪೋಸ್ಟ್

Horticulture Bidar