somaling m uppar kawalga

somaling m uppar kawalga
Somaling Sulubai uppar

ಶನಿವಾರ, ಏಪ್ರಿಲ್ 03, 2021

Chinegalu argi

🌷ನಿಮಗಿದು ತಿಳಿದಿರಲಿ 🌷

★ "AGMARK" 
for agricultural products
(ಕೃಷಿ ಉತ್ಪನ್ನಗಳಿಗಾಗಿ).

★ ISI mark 
for electric products
(ವಿದ್ಯುತ್ ಉತ್ಪನ್ನಗಳಿಗೆ).

★ BIS Hallmark 
for gold & Silver ornaments
(ಚಿನ್ನ ಮತ್ತು ಬೆಳ್ಳಿ ಉತ್ಪನ್ನಗಳಿಗೆ).

★ “FPO mark" 
for all the "processed fruit products"
("ಸಂಸ್ಕರಿಸಿದ ಹಣ್ಣಿನ ಉತ್ಪನ್ನಗಳಿಗೆ" )

V kr gokak


🔆ವಿನಾಯಕ ಕೃಷ್ಣ ಗೋಕಾಕ್🔆

          ☀️ವಿ ಕೃ ಗೋಕಾಕ್☀️

💠 ಸ್ಥಳ : ಹಾವೇರಿ ಜಿಲ್ಲೆಯ ಸವಣೂರ.
 
💠 ಜನನ: 9-ಆಗಸ್ಟ್ -1909

💠 ತಂದೆ-ಕೃಷ್ಣರಾಯ,
💠ತಾಯಿ- ಸುಂದರಾಬಾಯಿ

💠 ಕಾವ್ಯನಾಮ:  "ವಿನಾಯಕ" (ನವ್ಯತೆಗೆ ಬುನಾದಿ ಹಾಕಿದವರು)

💠ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.

💠ನಿಧನ : 28 ಏಪ್ರಿಲ್ 1992 (ವಯಸ್ಸು 82)

          📝 ಸಾಹಿತಿಕ ಜೀವನ📝

📌 ಕವನಸಂಕಲನಗಳು:  ಲೋಕೋಪಾಸಕ,  ಪಯಣ( ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ), 
 ತ್ರಿವಿಕ್ರಮ ಆಕಾಶಗಂಗೆ (ಚಂಪೂ ಕೃತಿ), 
ಸಮುದ್ರ ಗೀತೆಗಳು, ಅಭ್ಯುದಯ,  ವಿನಾಯಕರ ಸುನೀತಗಳು,  ನವ್ಯ ಕವಿತೆಗಳು,  ಉಗಮ,  ಚಿಂತನ, ಬಾಳದೇಗುಲದಲ್ಲಿ, ದ್ವಾವಾಪೃಥಿವೀ, ಉರ್ಣನಭ, ಇಂದಲ್ಲ ನಾಳೆ (ಚಂಪು),  ಭಾರತಸಿಂಧುರಶ್ಮಿ,  ಹಿಗ್ಗು, 
ನವ್ಯ ಗೀತೆಗಳು (ಹೊಸ ಛಂದೋ ಮಾರ್ಗಗಳು)

🔹 ಕಾದಂಬರಿಗಳು : ಇಜ್ಜೋಡು, ಸಮರಸವೇ ಜೀವನ,  ದಲಿತ ಸಮುದ್ರಯಾನ,  ಚೆಲುವಿನ- ನಿಲುವು,  ಜೀವನ ಪಾಠಗಳು. 

🔶 ಅನುವಾದ : ನೂತನ ಯುಗದ ಪ್ರವಾದಿ

▪️ ನಾಟಕಗಳು:  ಜನನಾಯಕ,ಯುಗಾಂತರ,  ವಿಮರ್ಶಕ ವೈದ್ಯ,  ಮುನಿದ ಮಾರಿ, ಶ್ರೀಮಂತ. 

◾️ ವಿಮರ್ಶಾ ಗ್ರಂಥಗಳು : ಸಾಹಿತ್ಯದಲ್ಲಿ ಪ್ರಗತಿ,  ನವ್ಯತೆ ಹಾಗು ಕಾವ್ಯಜೀವನ,  ವಿಶ್ವಮಾನವ ದೃಷ್ಟಿ ಕವನಗಳಲ್ಲಿ ಸಂಕೀರ್ಣತೆ,  ಕವಿ-ಕಾವ್ಯ,  ಸೌಂದರ್ಯಮೀಮಾಂಸೆ, ಬೇಂದ್ರೆಯವರ ಕಾವ್ಯ ಗುಣ ಹಾಗೂ ಪ್ರಯೋಗಶೀಲತೆ, ಇಂದಿನ ಕನ್ನಡ ಕಾವ್ಯದ ಗೊತ್ತು - ಗುರಿಗಳು. 

◼️ ಪ್ರವಾಸ ಕಥನಗಳು:  ಸಮುದ್ರದೀಚೆಯಿಂದ,  ಸಮುದ್ರದಾಚೆಯಿಂದ. 

⬛️ ಸಂಪಾದನೆ : ವಿಮರ್ಶಾ ತತ್ವಗಳು ಮತ್ತು ಪ್ರಾಯೋಗಿಕ ವಿಮರ್ಶೆ. 

🔳 ಇತರೆ ಕವಿತೆಗಳು: ಅರ್ಪಣಾ ದೃಷ್ಟಿ, ಇಂದಿನ ಕರ್ನಾಟಕ, ಸಪ್ತಸಿಂಧು ದರ್ಶನ, ಸಪ್ತ ರಶ್ಮಿ,  ಋಗ್ವೇದದಲ್ಲಿ ಕ್ರಾಂತದೃಷ್ಟಿ. 

🔷 ಇಂಗ್ಲಿಷ್ ಕಾವ್ಯಗಳು: ನರಹರಿ, ಪ್ರಾಫೆಟ್ ಆಫ್ ನ್ಯೂ ಇಂಡಿಯಾ, ಇನ್ ಲೈಫ್ ಟೆಂಪಲ್ ಕವನಸಂಕಲನಗಳು,  ದಿ ಸಾಂಗ್ ಆಫ್ ಲೈಫ್. 

      🎖🎖   ಪ್ರಶಸ್ತಿಗಳು  🎖🎖

🏵 ಜ್ಞಾನಪೀಠ ಪ್ರಶಸ್ತಿ --1990 
(ಭಾರತಸಿಂಧುರಶ್ಮಿ )

🏵 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1960 (ದ್ವಾವಾಪೃಥಿವಿ)

🏵 ಪದ್ಮಶ್ರೀ ಪ್ರಶಸ್ತಿ --1961


         🌺 ವಿಶೇಷ ಅಂಶ 🌺

❇️ 1958 ರಲ್ಲಿ ಬಳ್ಳಾರಿಯಲ್ಲಿ ನಡೆದ 40 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Geo

🍀 ಭೂಗೋಳ-ಸಾಮಾನ್ಯಜ್ಞಾನ 🌸

🍀 ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು? 
ಆರ್ಯಭಟ

🌸 ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ? 
ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

🍀 ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು? 
 ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ

🌸 ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು? 
ಕರ್ನಾಟಕ

🍀ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ? 
ಬಳ್ಳಾರಿ

🌸  ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು? 
 ಮಧ್ಯ ಪ್ರದೇಶ

🍀 ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು? 
ಅಂಡಮಾನ್ ಮತ್ತು ನಿಕೋಬಾರ್

🌸 ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು? 
 ಹರಿಯಾಣ

🍀 ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ? 
1,91,791 ಚ.ಕಿ.ಮೀ.ಗಳು*-

🍀 ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು? 
" ಗಗನ ಚುಕ್ಕಿ " ಮತ್ತು " ಭರಚುಕ್ಕಿ"

🌸 ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
 ಕನ್ನಂಬಾಡಿ ಅಣೆಕಟ್ಟು

🍀1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

🌸 ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು? 
 ಬೀದರ್

🍀ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು? 
 ಚಳ್ಳಕೆರೆ (456 ಮಿ.ಮೀ)

🌸 ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು? 
ಕರ್ನಾಟಕ

🍀 ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು? 
 ಕೊಡಗು ಜಿಲ್ಲೆಯ ನಾಗರಹೊಳೆ

🌸 ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
 ಚಾಮರಾಜನಗರ

🍀 ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ? 
ತಮಿಳುನಾಡು

Samiti

🌀ಪ್ರಮುಖ ಸಮಿತಿಯ ಅಧ್ಯಕ್ಷರುಗಳು🌀
🌲🏅🌲🏅🌲🏅🌲🏅🌲🏅

1) ಕೇಂದ್ರ ಸಂವಿಧಾನ ಸಮಿತಿಯ ಅಧ್ಯಕ್ಷರು? 
🔸 ಜವಾಹರಲಾಲ್ ನೆಹರು

2) ಕೇಂದ್ರ ಅಧಿಕಾರಿಗಳ ಸಮಿತಿ ಅಧ್ಯಕ್ಷರು? 
🔹 ಜವಾಹರಲಾಲ್ ನೆಹರು

3) ಸಂವಿಧಾನ ರಚನಾ ಸಮಿತಿಯ ತಾತ್ಕಾಲಿಕ ಅಧ್ಯಕ್ಷರು? 
🔸 ಸಚ್ಚಿದಾನಂದ ಸಿನ್ಹ

4) ಸಂವಿಧಾನ ರಚನಾ ಸಮಿತಿಯ ಶಾಶ್ವತ ಅಧ್ಯಕ್ಷರು? 
🔹 ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

5) ಹಣಕಾಸು ಮತ್ತು ಸಿಬ್ಬಂದಿ ಸಮಿತಿ ಅಧ್ಯಕ್ಷರು? 
🔸 ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

6) ರಾಜ್ಯಗಳ ಸಮಿತಿ ಅಧ್ಯಕ್ಷರು? 
🔹 ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

7) ನಿಯಮಾವಳಿಗಳ ಸಮಿತಿ ಅಧ್ಯಕ್ಷರು? 
ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

8) ಪ್ರಾಂತೀಯ ಸಂವಿಧಾನ ಸಮಿತಿಯ ಅಧ್ಯಕ್ಷರು? 
🔹 ಸರದಾರ್ ವಲ್ಲಬಾಯಿ ಪಟೇಲ್

9) ಸಲಹಾ ಸಮಿತಿ ಅಧ್ಯಕ್ಷರು? 
ಸರದಾರ್ ವಲ್ಲಬಾಯಿ ಪಟೇಲ್

10) ಸಂವಿಧಾನ ಸಭೆಗಳ ಕಾರ್ಯಕಲಗಳ ಸಮಿತಿ ಅಧ್ಯಕ್ಷರು? 
🔸ಜೆ,ವಿ, ಮಾಳವಂಕರ್

11) ತಾತ್ಕಾಲಿಕ ನಾಗರಿಕ ಸಮಿತಿ ಅಧ್ಯಕ್ಷರು? 
🔹 S,K,ದಾರ

12) ಸಾಧನ ಸಮಿತಿ ಅಧ್ಯಕ್ಷರು? 
🔸 ಪಟ್ಟಾಭಿ ಸೀತರಾಮಯ್ಯ

13) ಕರಡು ಸಮಿತಿ ಅಧ್ಯಕ್ಷರು? 
🔹 ಡಾಕ್ಟರ್ ಬಿ,ಆರ್ ಅಂಬೇಡ್ಕರ್

14) ಮೂಲಭೂತ ಹಕ್ಕುಗಳ ಸಲಹ ಸಮಿತಿ ಅಧ್ಯಕ್ಷರು? 
🔸ಸರದಾರ್ ವಲ್ಲಬಾಯಿ ಪಟೇಲ್

World information

ಪ್ರಪಂಚದ ಕುರಿತು ಒಂದು ಮಾಹಿತಿ

 🌹☘🌹☘🌹☘🌹☘🌹☘🌹

1) ಅತಿದೊಡ್ಡ ಸಮುದ್ರ -.ಚೀನಾ ಸಮುದ್ರ

2) ಅತಿದೊಡ್ಡ ಸರೋವರ - ಕ್ಯಾಸ್ಪೀಯನ್

3) ಅತಿದೊಡ್ಡ ನದಿ - ಅಮೇಜಾನ್

4) ಅತಿದೊಡ್ಡ ಖಂಡ - ಏಷ್ಯಾ

5) ಅತಿದೊಡ್ಡ ದ್ವೀಪ - ಗ್ರೀನ್ ಲ್ಯಾಂಡ್

6) ಅತಿದೊಡ್ಡ ಮರಭೂಮಿ - ಸಹರಾ

7) ಅತಿದೊಡ್ಡ ದೇಶ - ರಷಿಯಾ

8) ಅತಿದೊಡ್ಡ ಸಸ್ತನಿ - ಬ್ಲೂ ವೇಲ್

9) ಅತಿದೊಡ್ಡ ವೈರಸ್ - TMV (ಟೊಬ್ಯಾಕೊ
ಮೋಜಾಯೀಕ್ ವೈರಸ್

10) ಅತಿದೊಡ್ಡ ಹೂ ಬಿಡದ ಸಸ್ಸ್ಯ-- ದೈತ್ಯ ಸೀಕೋಯಿ

11) ಅತಿದೊಡ್ಡ ಜೀವಿ ಸಾಮ್ರಾಜ್ಯ - ಪ್ರಾಣಿ ಸಾಮ್ರಾಜ್ಯ

12) ಅತಿದೊಡ್ಡ ಹೂ - ರೇಫ್ಲೇಶೀಯ ಗಿಯಾಂಟ್

13) ಅತಿದೊಡ್ಡ ಬೀಜ - ಕೋಕೋ ಡಿ ಮೇರ್

14) ಅತಿದೊಡ್ಡ ಅಕ್ಷ ಒ ಶ - 0 - ಅಕ್ಶಾಂಶ

15) ಅತಿದೊಡ್ಡ ಪಕ್ಷಿ - ಆಷ್ಟ್ರಚ್

16) ಅತಿದೊಡ್ಡ ಮುಖಜ ಭೂಮಿ - ಸು ಒ ದರಬನ್ಸ್

17) ಅತಿದೊಡ್ಡ ಗೃಹ - ಗುರು

18) ಅತಿದೊಡ್ಡ ಉಪಗೃಹ - ಗ್ಯಾನಿಮಿಡ್

19) ಅತಿದೊಡ್ಡ ಕ್ಷುದ್ರಗೃಹ ಸೀರೀಸ್

20) ಅತಿದೊಡ್ಡ ಜ್ವಾಲಾಮುಖಿ - ಮೌ ಒ ಟ್ ವೇಸುವೀಯಸ್

21) ಅತಿದೊಡ್ಡ ಸಂವಿಧಾನ - ಭಾರತ ಸಂ.

22) ಅತಿದೊಡ್ಡ ಕರಾವಳಿ ರಾಷ್ಟ್ರ - ಕೆನಡಾ

23) ಅತಿದೊಡ್ಡ ವಿಮಾನ ನಿಲ್ದಾಣ - ಕಿಂಗ್ ಖಾಲಿದ್

24) ಅತಿದೊಡ್ಡ ರೈಲ್ವೆ ಫ್ಲ್ಯಾಟ್ಫಾರ್ಮ್--
ಗೋರಖ್ಪುರ್

25) ಅತಿದೊಡ್ಡ ಕಾಲುವೆ - ಇಂದಿರಾ ಗಾಂಧಿ ಕಾಲುವೆ

26) ಅತಿ ದೊಡ್ಡ ಡ್ಯಾಮ್ - ಹೂವರ್

27) ಅತಿ ದೊಡ್ಡ ಸರಿಸೃಪ - ಕ್ರೊಕೊಡೈಲ್

28) ಅತಿ ದೊಡ್ಡ ಕೊಲ್ಲಿ - ಹಡ್ಸನ್ ಕೊಲ್ಲಿ

29) ಅತಿ ದೊಡ್ಡ ಖಾರಿ - ಮೆಕ್ಸಿಕೋ

30) ಅತಿ ದೊಡ್ಡ ಸುನಾಮಿ ಸಂಶೋಧನಾ ಕೇಂದ್ರ -
ಹವಾಯಿ ದ್ವೀಪದ ಹೋನಲುಲೂ

31) ಅತಿ ದೊಡ್ಡ ಕಂದರ - ಮರಿಯಾನೋ ಕಂದರ

32) ಅತಿ ದೊಡ್ಡ ನದಿ ದ್ವೀಪ - ಮಜೂಲಿ

33) ಅತಿ ದೊಡ್ಡ ಪರ್ವತ ಶ್ರೇಣಿ - ಹಿಮಾಲಯ ಪ. ಶ್ರೇಣಿ

34) ಅತಿ ದೊಡ್ಡ ನಾಗರೀಕತೆ - ಸಿಂಧು

35)  ಅತಿ ದೊಡ್ಡ ಧರ್ಮ - ಕ್ರಿಷ್ಚಿಯನ್

36) ಅತಿದೊಡ್ಡ ಭಾಷೆ - ಮ್ಯಾಡ್ರಿನ

G k

🌺 ಪ್ರಸಿದ್ಧ ವ್ಯಕ್ತಿಗಳ ಪ್ರಮುಖ ಗ್ರಂಥಗಳು/ ಪತ್ರಿಕೆಗಳು 🌺
💧🔹💧🔹💧🔹💧🔹💧🔹💧


1) ಸರ್ ಎಂ ವಿಶ್ವೇಶ್ವರಯ್ಯ=
🔹 ಪ್ಲಾನಡ  ಎಕನಾಮಿಕ್ ಆಫ್ ಇಂಡಿಯಾ

🔹 ಮೆಮೊರಿಸ್ ಅಪ್ ಮೈ  ವರ್ಕಿಂಗ್ ಲೈಫ್

2) ಅರವಿಂದ್ ಘೋಷ್=
🔹 ದಿ ಲೈಫ್ ಡಿವೈನ್
🔹 ಸಾವಿತ್ರಿ( ಇದು ಗದ್ಯ ಗ್ರಂಥ)

3) ಬಾಲಗಂಗಾಧರ ತಿಲಕ್=
🔹 ಮರಾಠಿ ( ಇಂಗ್ಲಿಷ್ ಭಾಷೆ)
🔹 ಕೇಸರಿ ( ಮರಾಠಿ ಭಾಷೆ,)
🔹  ಕಾಲ ( ಇಂಗ್ಲಿಷ್)

3) ಲಾಲ್ ಲಜಪತ್ ರಾಯ್=
🔹 ಅನ್ ಹ್ಯಾಪಿ ಇಂಡಿಯಾ

4) ಮಹಾತ್ಮ ಗಾಂಧೀಜಿ=
 ಹಿಂದೂ ಸರಾಜ್
🔹 ಮೈ ಎಕ್ಸಪೆರಿಮೆಂಟ್ ವಿತ್ ಟ್ರೂತ ( ಆತ್ಮಚರಿತ್ರೆ,)
🔹 ಇಂಡಿಯಾ ಆಫ್ ಮೈ ಡ್ರೀಮ್ಸ್
🔹 ಮೈ ಅರ್ಲಿ ಲೈಫ್

6) ಜವಾಹರ್ ಲಾಲ್ ನೆಹರು=
🔹 ಡಿಸ್ಕವರಿ ಆಫ್ ಇಂಡಿಯಾ
🔹 ಗ್ಲಿಂಪ್ಸಸ್ ಅಪ್ ವರ್ಲ್ಡ್ ಹಿಸ್ಟರಿ

7) ರವೀಂದ್ರನಾಥ್ ಟ್ಯಾಗೋರ್=
🔹 ದಿ ಹೋಂ ಅಂಡ್ ದಿ ವರ್ಲ್ಡ್ { ಇದು ಇವರ ಆತ್ಮಚರಿತ್ರೆ ಇದನ್ನು ಬಂಗಾಳಿ ಭಾಷೆಯಲ್ಲಿ  ಗೋರೆಬೈರೆ ಎನ್ನುವರು}
🔹 ಗೀತಾಂಜಲಿ

8) ಸ್ವಾಮಿ ದಯಾನಂದ ಸರಸ್ವತಿ=
🔹 ಸತ್ಯಾರ್ಥ ಪ್ರಕಾಶ

9) ಲಾರ್ಡ್ ಕರ್ಜನ್=
🔹 ಪ್ರಾಬ್ಲಮ್ ಆಫ್ ದಿ ಈಸ್ಟ್

10) ಜೆ, ಪಿ,  ನಾರಾಯಣ=
🔹 ಟು ಆಲ್ ಫೈಟರ್ ಆಫ್ ಫ್ರೀಡಂ
🔹  ವೈ ಸೋಶಿಯಲಿಸಂ

11) ಸುಭಾಷ್ ಚಂದ್ರ ಬೋಸ್=
🔹 ದಿ ಇಂಡಿಯನ್ ಸ್ಟ್ರಗಲ್

12) ದಾದಾಬಾಯಿ ನವರೋಜಿ=
🔹 ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ

13) ಸುರೇಂದ್ರನಾಥ್ ಬ್ಯಾನರ್ಜಿ=
🔹 ಏ ನೇಷನ್ ಇನ್ ದಿ ಮೇಕಿಂಗ್

 14)ಡಾಕ್ಟರ್ ರಾಜೇಂದ್ರ ಪ್ರಸಾದ್=
🔹 ಇಂಡಿಯಾ ಡಿವೈಡೆಡ್

15} ವಿ, ಡಿ,  ಸಾರ್ವಕರ್=
🔹 ದಿ ಇಂಡಿಯನ್ ವಾರ್ ಆಪ್ ಇಂಡಿಪೆಂಡೆನ್ಸ್ { ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ}

16} ಬಂಕಿಂ ಚಂದ್ರ ಚಟರ್ಜಿ=
🔹 ಆನಂದ ಮಠ { ವಂದೇ ಮಾತರಂ ಗೀತೆಯನ್ನು ಇದರಿಂದ ಆಯ್ದುಕೊಳ್ಳಲಾಗಿದೆ}
🔹 ಸೀತಾರಾಮ್ ದೇವಿ ಚೌದರಾಣಿ

17) ರಾಜಾರಾಮ್ ಮೋಹನ್ ರಾಯ್=
🔹 ಗಿಫ್ಟ್ ಆಫ್ ಮನೋಥಿಸಿಸ್ಟ
🔹 ಪರ್ ಸ್ಪೆಸ್ ಆಪ್ ಜೀಸಸ್

 18)ಲಾರ್ಡ ಹಾಡಿಂಗ್ಸ್=
 🔹 ಮೈ ಇಂಡಿಯನ್ ಈಯರ್ಸ್

19) ಡಾ// ಬಿಆರ್ ಅಂಬೇಡ್ಕರ್
🔸 ಮುಕನಾಯಕ
🔹 ಬಹಿಷ್ಕೃತ ಭಾರತ
🔸 ಸಮತಾ
🔹 ಜನತಾ
🔸 ಪ್ರಭುದ್ದ ಭಾರತ

💐🔥💐🔥💐🔥💐🔥💐🔥

♻️ ಪತ್ರಿಕೆಗಳು ♻️

 🔸ಭಾರತದಲ್ಲಿ ಮೊಟ್ಟಮೊದಲು ಮುದ್ರಣಯಂತ್ರ ಪ್ರವೇಶಿಸಿದ್ದು 1556 ರಲ್ಲಿ ಗೋವಾದಲ್ಲಿ ಆದರೆ ಪ್ರಸಿದ್ಧಿಗೆ ಬಂದಿದ್ದು 18ನೇ ಶತಮಾನದಲ್ಲಿ.

🔸 ಭಾರತದ ಮೊದಲ ವರ್ತಮಾನ ಪತ್ರಿಕೆ= ದಿ ಬೆಂಗಾಲ್ ಗೆಜೆಟ್ ಇದನ್ನು 1780 ರಲ್ಲಿ ಜೇಮ್ಸ್ ಅಗಸ್ಟಸ್ ಹಿಕೆ  ಆರಂಭಿಸಿದರು. 

🔹 ರಾಜಾರಾಮ್ ಮೋಹನ್ ರಾಯರ ಪತ್ರಿಕೆಗಳು

1)  ಸಂವಾದ ಕೌಮುದಿ( ಬಂಗಾಳಿ)
2) ಬ್ರಹ್ಮ ನಿಖಿಲ( ಇಂಗ್ಲಿಷ್)
3) ಮಿರತ್-ಉಲ್-ಅಕ್ಬರ್( ಪರ್ಷಿಯನ್)

🔹 ಮಹಾತ್ಮ ಗಾಂಧೀಜಿ

1) ನವ ಜವಾನ್ ( ಗುಜರಾತಿ)
2) ಹರಿಜನ( ಗುಜರಾತಿ)
3) ಯಂಗ್ ಇಂಡಿಯಾ( English)

🔹 ದಾದಾಬಾಯಿ ನವರೋಜಿ

1) ರಾಸ್ತ ಗೋಪ್ತಾರ್( ಪರ್ಷಿಯನ್)
2) ವಾಯ್ಸ್ ಆಫ್ ಇಂಡಿಯಾ ( ಇಂಗ್ಲಿಷ್)

🔹 ದೇವೇಂದ್ರನ ಟ್ಯಾಗೋರ್

1) ಇಂಡಿಯನ್ ಮಿರರ್(  ಇಂಗ್ಲಿಷ್)

🔸 ಬಂಕಿಂಚಂದ್ರ ಚಟರ್ಜಿ

1) ಬಂಗಾ ದರ್ಶನ( ಬಂಗಾಲಿ)

🔸 ಬಾಲಗಂಗಾಧರ ತಿಲಕ್

1) ಮರಾಠಿ( ಇಂಗ್ಲಿಷ್)
2) ಕೇಸರಿ( ಮರಾಠಿ)
3) ಕಾಲ( ಇಂಗ್ಲಿಷ್)

🔹 ಅನಿಬೆಸೆಂಟ್

1) ನ್ಯೂ ಇಂಡಿಯಾ( ಇಂಗ್ಲೀಷ್)
2) ಕಾಮನ್ ವಿಲ್( ಇಂಗ್ಲಿಷ್)

 🔹 ಶಶಿರ್ ಕುಮಾರ್ ಘೋಷ್

1) ಅಮೃತ ಬಜಾರ್

🔸 G.S.ಅಯ್ಯರ್& ವೀರ ರಾಘವಾಚಾರಿ

1) ದಿ ಹಿಂದೂ( ಇಂಗ್ಲಿಷ್)

🔹 ಗಿರಿಷ್ ಚಂದ್ರ ಘೋಷ್

1) ಹಿಂದೂ ಪೆಟ್ರಿಯಟ್ ( ಇಂಗ್ಲಿಷ್)
2) ದಿ ಬೆಂಗಾಲ್( ಇಂಗ್ಲಿಷ್)

🔸 G,S, ಅಯ್ಯರ್
1) ಸ್ವದೇಶಿ ಮಿತ್ರನ್( ತಮಿಳ)

Taj mahal

🌸 ತಾಜ್ ಮಹಲ್ 🌸

💥ಭಾರತದ ಉತ್ತರ ಪ್ರದೇಶ ರಾಜ್ಯದ   ಆಗ್ರಾ ದಲ್ಲಿರುವ ಭವ್ಯ ಸಮಾಧಿಯಾಗಿದೆ.

💥 ಇದನ್ನು ಮೊಘಲ್‌‌ ಚಕ್ರವರ್ತಿ  ಷಹ ಜಹಾನ್‌‌ ತನ್ನ ಮೆಚ್ಚಿನ ಪತ್ನಿ ಮಮ್ತಾಜ್‌ ಮಹಲ್‌ ಳ ನೆನಪಿಗಾಗಿ ಕಟ್ಟಿಸಿದನು.

💥  ಪರ್ಷಿಯನ್‌, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿ  ಗಳ ಸಮ್ಮಿಶ್ರಣವಾದ ಮೊಘಲ್‌‌ ವಾಸ್ತುಶೈಲಿಗೆ ತಾಜ್‌ ಮಹಲ್‌ ("ತಾಜ್‌" ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ.

💥 ಇದು ಯಮುನಾ ನದಿ ದಡದಲ್ಲಿ ಕಂಡುಬರುತ್ತದೆ

💥 1983 ರಲ್ಲಿ ತಾಜ್‌ ಮಹಲ್‌  UNESCOದ ವಿಶ್ವ ಪರಂಪರೆ ತಾಣ  ವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು "ಭಾರತದಲ್ಲಿರುವ ಮೊಘಲರ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು" ಎಂದು ಉಲ್ಲೇಖಿಸಲಾಗಿದೆ.

💥ಈ ಕಟ್ಟಡದ ನಿರ್ಮಾಣ ಕಾರ್ಯವು  1632ರಲ್ಲಿ ಪ್ರಾರಂಭವಾಗಿ, ಸರಿಸುಮಾರು 1653 ರ ಹೊತ್ತಿಗೆ ಪೂರ್ಣಗೊಂಡಿತು.

💥ಈ ಸಮಾಧಿಯು 17-ಹೆಕ್ಟೇರ್ (42-ಎಕರೆ) ಸಂಕೀರ್ಣದ ಕೇಂದ್ರವಾಗಿದೆ, ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು.

💥ತಾಜ್‌ ಮಹಲ್‌‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ  ಅಬ್ದ್‌ ಉಲ್‌-ಕರೀಮ್‌ ಮಾಮುರ್‌ ಖಾನ್‌, ಮಖ್ರಾಮತ್‌ ಖಾನ್‌ ಮತ್ತು ಉಸ್ತಾದ್‌ ಅಹ್ಮದ್‌ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು. 

💥ಅವರಲ್ಲಿ ಲಾಹೋರಿ ರವರನ್ನು  ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ.

💥ತಾಜಮಹಲ್ ಬಗ್ಗೆ ಕವಿ ರವೀಂದ್ರನಾಥ ಟ್ಯಾಗೋರ ರು   ‘ಕಾಲಘಟ್ಟದ ಕೆನ್ನೆಯ ಮೇಲೆ ಸರಿದ ಸಮಯದ ಅಶ್ರುಬಿಂದು’ (The Tear Drop on the Cheek of Time) ಎಂದು ವರ್ಣಿಸಿದ್ದಾರೆ.

Karyacharane

🍀 ಭಾರತೀಯ ಭೂಸೇನೆಯ ಪ್ರಮುಖ ಕಾರ್ಯಚರಣೆಗಳು 🍀

💥ಆಪರೇಷನ್ ವಿಜಯ್ [1961]
      > ಪೋರ್ಚಿಗಿಸ ರಿಂದ ಗೋವಾ  ವಿಮೋಚನೆ
 
💥 ಆಪರೇಷನ್ ಮೇಘಧೂತ [1984]
    >  ಪಾಕ್ ವಿರುದ್ದ ಸಿಯಾಚಿನ್  ಗ್ಲೈಸೀರ್ ನಲ್ಲಿ  ಕಾರ್ಯಾಚರಣೆ

💥 ಆಪರೇಷನ್ ಕಾಕ್ಟಸ್ 
     >  ಮಾಲ್ಡಿವ್ಸ್ ನಲ್ಲಿ ಪ್ರಕೃತಿ ವಿಕೋಪದ ಪರಿಹಾರ ಕಾರ್ಯಾಚರಣೆ

💥 ಆಪರೇಷನ್ ಸೂರ್ಯ ಹೋಪ್ ಜೂನ್ [2013] 
    > ಉತ್ತರಾಖಂಡದ ಮಂದಾಕಿನಿ ನದಿ ಪ್ರವಾಹದ ನೆರೆ ಪರಿಹಾರ

💥 ಆಪರೇಷನ್ ವಿಜಯ್ [ 1999]
     > ಪಾಕ್ ವಿರುದ್ಧ ಕಾರ್ಗಿಲ್ ಯುದ್ದ  ಕಾರ್ಯಾಚರಣೆ
     
🌸 ಜುಲೈ  26,1999 ರಂದು ಕಾರ್ಗಿಲ್ ವಿಜಯ ದಿವಸ

💥 ಆಪರೇಷನ್  ಶಕ್ತಿ [1998 ಮೇ 11]
      >  ಪೋಕ್ರಾನ್ 2

History

🌷ಇತಿಹಾಸ 🌷

🌀ಭಾರತ ದೇಶದ ಜೊತೆ ಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ ಪೋರ್ಚುಗಲ್


 🌀ಹಲ್ಮಿಡಿ ಶಾಸನ ಗೊತ್ತಿರುವ ಅತ್ಯಂತ ಪುರಾತನ ಕನ್ನಡ ಸಾಧನ ಪತ್ತೆಯಾದ ಸ್ಥಳ ಹಾಸನ ಜಿಲ್ಲೆಯ ಬೇಲೂರು ತಾಲೂಕು

 🌀ಆಯುರ್ವೇದ ಮೂಲತಃ ಹುಟ್ಟಿಕೊಂಡಿದ್ದು ಅಥರ್ವವೇದ ದಿಂದ

 🌀 ಮಹಾತ್ಮ ಗಾಂಧಿಯವರು ತಮ್ಮ ಜೀವಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ ಬೆಳಗಾವಿ

 🌀ಮೈಸೂರು ಅರಮನೆಯ ಮುಖ್ಯ ವಿನ್ಯಾಸಕಾರ ಹೆನ್ರಿ ಇರ್ವಿನ್

 🌀ಕೃಷ್ಣದೇವರಾಯರು ಬರೆದಿರುವ ಪುಸ್ತಕಗಳು ಅಮುಕ್ತ ಮಾಲ್ಯದ,  ಜಾಂಬವತಿ ಕಲ್ಯಾಣ, ರಸಮಂಜರಿ

 🌀ಡಾಕ್ಟರ್ ಎಂ ಎಸ್ ಸ್ವಾಮಿನಾಥನ್ ಅವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲಾಗಿದೆ

 🌀ಮಾರ್ಚ್ 18,  1792 ರಂದು ಸಹಿ ಮಾಡಿದ "ಶ್ರೀರಂಗಪಟ್ಟಣ  ಒಪ್ಪಂದ" ಕೊನೆಗೊಳಿಸಿದ್ದು ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ

 🌀ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತ್ಯಂತ ಪ್ರಶಂಸಾರ್ಹವಾಗಿ ಇಟಾಲಿಯನ್ ಯಾತ್ರಿಕ ನಿಕೋಲೋ ಡಿ ಕಾಂಟಿ 

 🌀ವೈದಿಕ ಜನರು ಪ್ರಪ್ರಥಮವಾಗಿ ಬಳಸಿದ ಲೋಹ ತಾಮ್ರ

 🌀ಭಾರತದಲ್ಲಿ "ಅಪ್ಪಿಕೋ ಚಳುವಳಿ"ಯ ನೇತೃತ್ವವನ್ನು ವಹಿಸಿದವರು ಪಾಂಡುರಂಗ ಹೆಗಡೆ

🌀 "ಹೋ ರೂಲ್ ಲೀಗ್ "ಸ್ಥಾಪಿಸಿದವರು ಅನಿ ಬೆಸೆಂಟ್

 🌀ಭಾರತದ ಮೊಟ್ಟ ಮೊದಲ ಅಂಚೆ ಕಚೇರಿ ಈಸ್ಟ್ ಇಂಡಿಯಾ ಕಂಪನಿಯು ಕೊಲ್ಕತ್ತಾದಲ್ಲಿ 1727ರಲ್ಲಿ ಪ್ರಾರಂಭಿಸಿತು

 🌀 ಮೈಸೂರಿನಲ್ಲಿ 1935 ರಲ್ಲಿ ಮೊದಲನೆಯದಾಗಿ ರೇಡಿಯೋ ಟೇಷನ್ ಸ್ಥಾಪಿಸಿದವರು ಡಾ. ಎಂ. ವಿ  ಗೋಪಾಲಸ್ವಾಮಿ

 🌀ಲಾಹೋರ್ ಅಧಿವೇಶನ(1929) ದಲ್ಲಿ ಕಾಂಗ್ರೆಸ್ ತನ್ನ ಧ್ಯೇಯವನ್ನು "ಸಂಪೂರ್ಣ ಸ್ವಾತಂತ್ರ್ಯ"ವೆಂದು ಘೋಷಿಸಿತು

🌀1930  ರಲ್ಲಿ ಮಹಾತ್ಮ ಗಾಂಧೀಜಿಯವರು ನಾಗರಿಕ ಅಸಹಕಾರ  ಆಂದೋಲವನ್ನು ಆರಂಭಿಸಿದ್ದು ಸರಬ್ ಮತಿಯಿಂದ 

 🌀ಪ್ಲಾಸಿ ಕದನ ಸಂಭವಿಸಿದ ವರ್ಷ 1757

 🌀ಲಾರ್ಡ್ ವಿಲಿಯಂ ಬೆಂಟಿಕ್ ಅವರು "ಸತಿ ಪದ್ಧತಿ "ನಿಷೇಧಕ್ಕೆ ನಿಮಿತ್ತ ವಾದವರು

 🌀ಬಹುಮನಿ ಸಾಮ್ರಾಜ್ಯದ ಪ್ರಥಮ ರಾಜಧಾನಿ  ಕಲಬುರ್ಗಿ

 🌀ಕಳಿಂಗ ಯುದ್ಧ ನಡೆದ ಅವಧಿ 262 -261 ಕ್ರಿ. ಪೂ 

🌀 "ಮಾಡು ಇಲ್ಲವೇ ಮಡಿ" ಘೋಷಣೆ ಭಾರತ ಬಿಟ್ಟು ತೊಲಗಿ ಚಳುವಳಿಗೆ ಸಂಬಂಧಿಸಿದೆ 

Constitution


📚ಸಂವಿಧಾನ 📚

🟢 ಸಾರ್ವಜನಿಕ ಹಣದ ರಕ್ಷಕನೆಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರಿಗೆ  ಕರೆಯಲಾಗುತ್ತದೆ

 🟢 ಭಾರತ ಸರ್ಕಾರದ ಕಾಯ್ದೆ 1935 ಒಳಗೊಂಡಿರುವ "ಸೂಚನೆಗಳ ಉಪಕರಣ"ಗಳನ್ನು ಭಾರತದ ಸಂವಿಧಾನದಲ್ಲಿ ರಾಜ್ಯ ನೀತಿಯ ನಿರ್ದೇಶನ ತತ್ವಗಳು ಎಂದು ಅಳವಡಿಸಿಕೊಳ್ಳಲಾಗಿದೆ

 🟢 ಭಾರತೀಯ ಸಂವಿಧಾನದ ಅನುಚ್ಛೇದ 17 ಅಸ್ಪ್ಯಶ್ಯತೆಯ ನಿರ್ಮೂಲನೆ ಬಗ್ಗೆ ವ್ಯವಹರಿಸುತ್ತದೆ

 🟢 ಅನುಚ್ಛೇದ 32 ಸಂವಿಧಾನಾತ್ಮಕ ಪರಿಹಾರೋಪಾಯಗಳ ಹಕ್ಕುಗಳನ್ನು ಡಾಕ್ಟರ್. ಬಿ.ಆರ್. ಅಂಬೇಡ್ಕರ್ ರವರು ಭಾರತ ಸಂವಿಧಾನದ "ಹೃದಯ ಹಾಗೂ ಆತ್ಮ "ಎಂದು ವಿವರಿಸುತ್ತಾರೆ

🟢 ಭಾರತದ ಸರ್ಕಾರ ಕಾಯ್ದೆ 1919ನ್ನು ಮೊಂಟೆಗ್ಯೂ -ಚೆಲ್ಮ್ಸ್ ಫೋರ್ಡ್ ಸುಧಾರಣೆಗಳು ಎಂದು ಕರೆಯಲಾಗುತ್ತದೆ 

🟢 ಮನಸ್ಮೃತಿ ವಿವರಿಸುವುದು ಕಾನೂನನ್ನು 

🟢 ತೆರಿಗೆ ಹಾಗೂ ಇತರ ರಸೀದಿಗಳ ಮೂಲಕ ಭಾರತ ಸರ್ಕಾರಕ್ಕೆ ಬರುವ ಎಲ್ಲಾ ಆದಾಯಗಳನ್ನು ಭಾರತದ ಸಂಚಿತ ನಿಧಿಗೆ  ಜಮಾ ಮಾಡಲಾಗುತ್ತದೆ 

 🟢ಭಾರತೀಯ ಸಂವಿಧಾನದ ಎಳನೇ  ಅನುಸೂಚಿಯಲ್ಲಿನ, ವಿಷಯಗಳಾದ ಪೊಲೀಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆ ರಾಜ್ಯ  ಪಟ್ಟಿಯಲ್ಲಿವೆ.

 🟢 ಭಾರತ ಸಂವಿಧಾನದ ಅನುಚ್ಛೇದ 371 ( ಜೆ )ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ಬಗ್ಗೆ ವಿವರಿಸುತ್ತದೆ

Science


 ♻️ ವಿಜ್ಞಾನ ♻️

⚜ ಒಂದು ಸರಳ ಲೋಲಕದ ಉದ್ದ 44% ಹೆಚ್ಚಿಸಿದರೆ  ಅದರ ಕಾಲ 20% ಬಾರಿ ಹೆಚ್ಚಾಗುವುದು 

⚜ ಹುಚ್ಚು ಹಸು ಕಾಯಿಲೆಯನ್ನು ಅನಿನೋಫಿಲಿ  ಎಂದು  ಕರೆಯುತ್ತಾರೆ

 ⚜ ಗಿಡಗಳಲ್ಲಿ ನೀರು ಮತ್ತು ಲವಣಾಂಶ ಸಾಗಿಸುವ ಟ್ಯೂಶನ್ ಗಳ ಹೆಸರು ಜೈಲೆಮ್

⚜ ಅಸ್ಪಿಯೊಪೊರೋಸಿಸ್ ಕಾಯಿಲೆಯು ಕ್ಯಾಲ್ಸಿಯಂ ಲವಣಾಂಶದ ಕೊರತೆ ಇಂದ ಬರುತ್ತದೆ

⚜ ಮಾನವನಲ್ಲಿರುವ ಅತಿ ದೊಡ್ಡ ಮಾಂಸ ಖಂಡ ಗ್ಲೂಟಿಯಸ್ ಮ್ಯಾಕ್ಸಿಮಸ್ 

⚜ ಡಯಾಲಿಸಿಸ್ ಕಿಡ್ನಿ ಕೆಲಸ ಮಾಡದೆ ಇದ್ದಲ್ಲಿ  ಅವಶ್ಯಕ

 ⚜ವಿಟಮಿನ್ ಎ ಕೊರತೆಯಿಂದ ರಾತ್ರಿ ಅಂಧತನ  ಕಾಯಿಲೆ ಬರುತ್ತದೆ

⚜ FM  ರೇಡಿಯೋದ ಕಂಪನದ ಬ್ಯಾಂಡ್ 88 to 108 MHz

⚜ ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯುವ ಮಾಪಕ ಘಟಕ ಬೆಳಕಿನ ವರ್ಷ

 ⚜ ನಾವಿಕರ ಕಾಯಿಲೆ ವಿಟಮಿನ್ C ಕೊರತೆಯಿಂದ ಬರುತ್ತದೆ

 ⚜ಹೆರಿಡಿಟಿ ಮತ್ತು ಬ್ರೀಡಿಂಗ್ಸ್ ನ  ಅಧ್ಯಯನವನ್ನು ಜಿನಿಟಿಕ್ಸ್ ಎಂದು  ಕರೆಯುತ್ತಾರೆ

 ⚜ ಒಂದು ವಸ್ತುವಿನ ತೂಕ ಧ್ರುವಗಳಲ್ಲಿ ಹೆಚ್ಚಾಗಿರುತ್ತದೆ 

 ⚜ ರಸಗೊಬ್ಬರಗಳನ್ನು ಇರುವ ಮೂಲವಸ್ತು  ನೈಟ್ರೋಜನ್

 ⚜ ಓಜೋನ್ ಆಮ್ಲಜನಕದ ಒಂದು ವಸ್ತುವಿನ ತೂಕ

  ⚜ಡ್ರೈ ಐಸ್  ಎಂದರೆ  ಘನ ಕಾರ್ಬನ್ ಡಯಾಕ್ಸೈಡ್

⚜ಸ್ಪಾರ್ಕ್ ಪ್ಲೇಗ್ ಗಳನ್ನು ಪೆಟ್ರೋಲ್ ಎಂಜಿನ್ ನಲ್ಲಿ  ಬಳಸುವರ

GST

💰 GST  ➖  good and service tax 💰
   
  💰🏆🏆🏆🏆🏆🏆🏆🏆💰

💰 ಜಿ ಎಸ್ ಟಿ ಗೆ ಸಂಬಂಧಿಸಿದ ಮೊದಲ ಸಮಿತಿ ➖=  ಅಸೀಮ್ ದಾಸ್ ಗುಪ್ತಾ ಸಮಿತಿ 

💰 ಜಿ ಎಸ್ ಟಿ ಗೆ ಸಂಬಂಧಿಸಿದ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ             ➖=122ನೇ ಮಸೂದೆ 2014 

💰 ಜಿ ಎಸ್ ಟಿ    101ನೇ ಸಂವಿಧಾನಾತ್ಮಕ ತಿದ್ದುಪಡಿಯಾಗಿದೆ 

💰 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ   ➖ =  ಅಸ್ಸಾಂ.2016 

💰 ಪ್ರಪಂಚದಲ್ಲಿ ಜಿ ಎಸ್ ಟಿ ಯನ್ನು ಜಾರಿಗೂಳಿಸಿದ ಮೊದಲ ದೇಶ
     ➖=   ಪ್ರಾನ್ಸ್  ದೇಶ 1954 

💰 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ಒಟ್ಟು ರಾಜ್ಯಗಳು  ➖=  24 ರಾಜ್ಯಗಳು 

💰 ಜಿ ಎಸ್ ಟಿ ಯು ನವದೆಹಲಿಯಲ್ಲಿನ ಪಾರ್ಲಿಮೆಂಟಿನ  ಸೆಂಟ್ರಲ್ ಹಾಲಿನಲ್ಲಿ ➖=   2017  ಜುಲೈ 1 ರಂದು ಜಾರಿಗೊಳಿಸಲಾಗಿದೆ 

💰 ಜುಲೈ 1 ➖=  ಜಿ ಎಸ್ ಟಿ ದಿನ ಎಂದು ಆಚರಿಸಲಾಗುತ್ತದೆ 

💰 ಜಿ ಎಸ್ ಟಿ ಒಂದು  ಪರೋಕ್ಷ ತೆರಿಗೆಯಾಗಿದೆ ಮತ್ತು ಒಂದು ಮಾರಾಟ ತೆರಿಗೆಯಾಗಿದೆ 

💰 ಜಿ ಎಸ್ ಟಿ ಯ  4  ಪ್ರಕಾರದ ತೆರಿಗೆಗಳು
  1) C-GST
  2) S-GST
  3) I-GST
  4) UT-GST 

💰 ಜಿ  ಎಸ್ ಟಿ ಯ  4  ಹಂತದ ತೆರಿಗೆಗಳು
     1)ಶೇ.5
    2)ಶೇ.12
    3)ಶೇ.18
     4)ಶೇ.28 

💰 ಜಿ ಎಸ್ ಟಿ ಯನ್ನು ಜಾರಿಗೊಳಿಸಲು ಜಿ ಎಸ್ ಟಿ ➖=  ಮಂಡಳಿಯನ್ನು ರಚಿಸಲಾಗಿದೆ 

💰 ಮಂಡಳಿಯ ಅಧ್ಯಕ್ಷರು➖=  ಕೇಂದ್ರ ಹಣಕಾಸು ಮಂತ್ರಿಗಳು ಆಗಿರುತ್ತಾರೆ 

💰 ಸಂವಿಧಾನದ 279 A➖=  ವಿಧಿಯಾನುಸಾರ  ಜಿ ಎಸ್ ಟಿ ಪರಿಷತ್ತು ರಚಿಸಲಾಗಿದೆ 

  ♻️💎💎💎💎💎💎💎 ♻️

Geography


🐅 ಭೂಗೋಳ 🐅

🔆 "ಪಾಲ್ಕ್ ಜಲಸಂಧಿ" ಭಾರತ ಮತ್ತು ಶ್ರೀಲಂಕಾ ದೇಶಗಳನ್ನು ಸೇರಿಸುತ್ತದೆ 

🔆 ಏಷ್ಯಾದ ಪ್ರಥಮ ಜಲವಿದ್ಯುತ್ ಘಟಕ ಯೋಜನೆ ಪ್ರಾರಂಭವಾದ ಸ್ಥಳ ಶಿವನ ಸಮುದ್ರ 
 
🔆 ಕೃಷ್ಣ ನದಿಯ ಉಪ ನದಿಗಳು ಭೀಮಾ, ಮಲಪ್ರಭಾ, ಘಟಪ್ರಭಾ 

🔆 ಭಾರತದ ವಿಮಾ ನಿಯಂತ್ರಣ ಸಂಸ್ಥೆ ಇರುವ ಊರು ಹೈದರಾಬಾದ್ 

🔆 ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಹುಲಿಗಳಿಗೆ ಪ್ರಸಿದ್ಧವಾಗಿದೆ 

🔆 ವಿಶ್ವದ ಅತಿ ದೊಡ್ಡ ಉಪ್ಪಿನ ಮರುಭೂಮಿ ಎಂದು ಹೆಸರುವಾಸಿಯಾಗಿರುವ "ರಾನ್ ಆಫ್ ಕಚ್ "ಗುಜರಾತ್ ನಲ್ಲಿದೆ. 

🔆 ಜರವಾ ಬುಡಕಟ್ಟು ಸಮುದಾಯದವರು ಕರ್ನಾಟಕಕ್ಕೆ ಸೇರಿದವರಲ್ಲ 

🔆 ನಾರು ಅಥವಾ ನೂಲು  ಹತ್ತಿ ಬೆಳೆಗೆ ಸಂಬಂಧಿಸಿದೆ 

🔆 "ಟಿಪ್ಪು ಡ್ರಾಪ್ "ಎಂದು ಪ್ರಸಿದ್ದವಾಗಿರುವ ನಂದಿ ಬೆಟ್ಟ ಇರುವುದು ಚಿಕ್ಕಬಳ್ಳಾಪುರದಲ್ಲಿ 

🔆ವಿಸ್ತೀರ್ಣದಲ್ಲಿ ಕರ್ನಾಟಕದಲ್ಲಿರುವ ಅತೀ  ದೊಡ್ಡ ಜಿಲ್ಲೆ ಬೆಳಗಾವಿ 

🔆 ಕೂಡಂಕುಳಂ ಪ್ರದೇಶವು ಪ್ರಸಿದ್ಧವಾಗಿರುವುದು ಪರಮಾಣು ವಿದ್ಯುತ್ ಸ್ಥಾವರ ಕ್ಕೆ 
 
🔆 "ಮಲಗಿರುವ ಬುದ್ಧನ ಪರ್ವತ "ಇರುವ ಜಿಲ್ಲೆ ಯಾದಗಿರಿ 

G k

🌍ಸಾಮಾನ್ಯ ಜ್ಞಾನ 🌍

💥🌕💥🌕💥🌕💥🌕💥🌕

☘ ಈ ಕೆಳಗಿನ ಯಾವ ವರ್ಷದಲ್ಲಿ "Archaeological survey of India" ವನ್ನು 
( ಭಾರತದ ಪುರಾತತ್ವ ಸಮೀಕ್ಷಣಾ) ಸ್ಥಾಪಿಸಲಾಯಿತು.?
- 1861

☘ ಈ ಕೆಳಗಿನ ಯಾವ ವರ್ಷದಲ್ಲಿ "Geological survey of India" ( GSI) ವನ್ನು ( ಭಾರತದ ಭೂವೈಜ್ಞಾನಿಕ ಸಮೀಕ್ಷಣಾ ) ಸ್ಥಾಪಿಸಲಾಯಿತು.?
- 1851ರ ಮಾರ್ಚ್ 4

☘ "Geological survey of India" ( GSI) ದ ಕೇಂದ್ರ ಕಚೇರಿ ಇರುವುದು
- ಕಲ್ಕತ್ತಾ 

☘ ಈ ಕೆಳಗಿನ ಯಾವ ವರ್ಷದಲ್ಲಿ "Botanical Survey of India ( BSI)"ವನ್ನು ( ಭಾರತೀಯ ಸಸ್ಯಶಾಸ್ತ್ರೀಯ ಸಮೀಕ್ಷೆ ) ಸ್ಥಾಪಿಸಲಾಯಿತು.?
- 1890 ರ ಫೆಬ್ರವರಿ 13

☘ ಕನ್ನಡದ ಹಾಸ್ಯ ಲೇಖಕಿ ಎಂದು ಪ್ರಸಿದ್ಧರಾದವರು.
- ಟಿ. ಸುನಂದಮ್ಮ

☘ ತೆಲುಗಿನ ವೇಮನ, ತಮಿಳಿನ ತಿರುವಳ್ಳುವರ್ ಸಮಾನನಾದ ಕನ್ನಡದ ಕವಿ
- ಸರ್ವಜ್ಞ

☘ ಭಾರತದಲ್ಲಿ IPS ಹುದ್ದೆಯನ್ನು ಅಲಂಕರಿಸಿದ ಪ್ರಥಮ ಮಹಿಳೆ 
- ಕಿರಣ್ ಬೇಡಿ

☘ ಭಾರತೀಯ ನೌಕಾಪಡೆಯ ಇತಿಹಾಸದಲ್ಲೇ ಮೊದಲ ಬಾರಿ ಯುದ್ಧನೌಕೆಗೆ ಮಹಿಳಾ ಪೈಲಟ್ ಗಳಾಗಿ ನೇಮಕಗೊಂಡವರು 
- ಕುಮುದಿನಿ ತ್ಯಾಗಿ ಮತ್ತು ರಿತಿ ಸಿಂಗ್

☘ ಭಾರತೀಯ ಸಶಸ್ತ್ರ ದಳದಲ್ಲಿ ಲೆಫ್ಟಿನೆಂಟ್ ಜನರಲ್ ಪದವಿ ( Rank) ಪಡೆದ ಭಾರತದ ಮೊದಲ ದಂಪತಿ
- ಮಾಧುರಿ ಕಾನಿಟ್ಕರ್ ಮತ್ತು ರಾಜೀವ್ ಕಾನಿಟ್ಕರ್

☘ ಇತ್ತೀಚೆಗೆ ರಷ್ಯಾ ಪರೀಕ್ಷಿಸಿದ ಹೈಪರ್ ಸಾನಿಕ್ ಕ್ಷಿಪಣಿಯ ಹೆಸರು
- TSIRKON(Zircon) 

☘ ಇಥಿಯೋಪಿಯಾ ದೇಶವು ಇತ್ತೀಚೆಗೆ ಉಡಾವಣೆ ಮಾಡಿದ ಪ್ರಥಮ ಉಪಗ್ರಹ
- ETRSS-1

☘ "ಕುಸುಮಬಾಲೆ" ಕಾದಂಬರಿಯ ಕತೃ ಯಾರು
- ದೇವನೂರು ಮಹಾದೇವ 

☘ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥರು ಇತ್ತೀಚಿಗೆ ಯಾವ ಜಿಲ್ಲೆಯನ್ನು 'ಅಯೋಧ್ಯಾ' ಎಂದು ಮರು ಹೆಸರಿಸಿದರು 
- ಫೈಜಾಬಾದ್

☘ 2020 ರ ಸೆಪ್ಟೆಂಬರ್ 30ರಂದು ಯಾವ ವಿಶೇಷ ಸಿಬಿಐ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸದ ಕುರಿತು ತೀರ್ಪು ನೀಡಿತು.?
- ಲಕ್ನೋ
- ತೀರ್ಪು ನೀಡಿದ ನ್ಯಾಯಾಧೀಶ 
'ವಿಮಲ್ ಕುಮಾರ್ ಯಾದವ್'

☘ "ಮೇಲೆ ನೋಡೆ ಕಣ್ಣತಣಿಪ ನೀಲಪಟದಿ ವಿವಿಧರೂಪ" ಎಂದು ಹಾಡಿದ ಕವಿ.?
- ದ.ರಾ .ಬೇಂದ್ರೆ

☘ "ಗೌರ್ಮೆಂಟ್ ಬ್ರಾಹ್ಮಣ" ಕೃತಿ ಕರ್ತೃ
- ಅರವಿಂದ ಮಾಲಗತ್ತಿ

☘ "ಮುದ್ರಾಮಂಜೂಷ" ಕೃತಿಗೆ ಆಕರ ಯಾವುದು.? 
- ಮುದ್ರಾರಾಕ್ಷಸ

Lights

🔮 ವಿದ್ಯುಚ್ಛಕ್ತಿ 🔮
            
  🏵🎍🏵🎍🏵🎍🏵🎍🏵

💡" ಶಕ್ತಿಯನ್ನು ಸೃಷ್ಠಿಸಲು ಸಾಧ್ಯವಿಲ್ಲ, ಲಯಗೊಳಿಸಲು ಸಾಧ್ಯವಿಲ್ಲ, ಆದರೆ ಇದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಲು ಸಾಧ್ಯ" ಯಾವ ನಿಯಮ ::--  ಶಕ್ತಿ ಸಂರಕ್ಷಣೆಯ ನಿಯಮ

💡1 ಕಿಲೋ ಜೋಲ್. ::-- 1000
ಜೋಲ್ ಗಳು

💡ಘರ್ಷಣೆಯಿಂದ ಶಾಖೋತ್ಪತ್ತಿ ಮತ್ತು ಶಾಖವು ಶಕ್ತಿಯ ರೂಪವೆಂದು ಮೊದಲಿಗೆ ತಿಳಿಸಿದವರು ::--  ಜೂಲ್ 

💡ಮನೆಗಳಲ್ಲಿ ವಿದ್ಯುಚ್ಛಕ್ತಿಯ ಬಳಕೆಯನ್ನು ಅಳೆಯಲು ಬಳಸುವ ಮೀಟರ್  ::-- ವ್ಯಾಟ್ ಅವರ್ ಮೀಟರ್

💡 ಕೆಲವು ರಾಸಾಯನಿಕ ವಸ್ತುಗಳ ಮೂಲಕ ವಿದ್ಯುತ್ ಹಾಯಿಸಿದಾಗ ಉಂಟಾಗುವ ಪರಿಣಾಮ ::--  ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ

💡ತಂತಿಯ ಮೂಲಕ ವಿದ್ಯುತ್ ಹರಿಯುವಾಗ ಸ್ವಲ್ಪ ವಿದ್ಯುತ್ ಶಕ್ತಿ ಉಷ್ಣ ಶಕ್ತಿಯಾಗಿ ಪರಿವರ್ತನೆಯಾಗುವ ಪರಿಣಾಮ ::--  ವಿದ್ಯುತ್ ಪ್ರವಾಹದ ಉಷ್ಣೋತ್ಪನ್ನ ಪರಿಣಾಮ

💡ಪ್ಯೂಸ ತಯಾರಿಕೆಗೆ ಬಳಸುವ ಮಿಶ್ರಲೋಹ ::--  ಸೀಸ ಮತ್ತು ತವರ 

💡ಪ್ಯೂಸ ತಂತಿಗಿರುವ ವಿಶೇಷಗುಣ  ::--  ಹೆಚ್ಚು ರೋಧ ಮತ್ತು ಕಡಿಮೆ ದ್ರವನಬಿಂದು 

💡ಪ್ಯೂಸ ಕೆಲಸ ಮಾಡೋವುದು ಈ ಪರಿಣಾಮದಿಂದ ::--  ವಿದ್ಯುತ್ತಿನ ಉಷ್ಣೋತ್ಪನ್ನ ಪರಿಣಾಮ 

💡 ವಿದ್ಯುದ್ದೀಪದ ಒಳಗೆ ನೈಟ್ರೋಜನ್ ಅನಿಲವನ್ನು  ತುಂಬಲು ಕಾರಣ::--    ದೀಪದ ಆಯಸ್ಸನ್ನು ಹೆಚ್ಚಿಸಲು  

💡ವಿದ್ಯುತ್ ದೀಪವನ್ನು ಕಂಡುಹಿಡಿದವರು ::--   ಥಾಮಸ್  ಅಲ್ವಾ ಎಡಿಸನ್  ಮತ್ತು ಸ್ಟಾನ್

💡ಶುಷ್ಕಕೋಶದಲ್ಲಿ ಧನಾಗ್ರವಾಗಿ ವರ್ತಿಸುವುದು ::--  ಗ್ರಾಫೈಟ್  ದಂಡ 

💡ಶುಷ್ಕ ಕೋಶದಲ್ಲಿ ಋಣಾಗ್ರವಾಗಿ  ವರ್ತಿಸುವುದು ::--  ಸತುವಿನ ಡಬ್ಬ 

💡 ಶುಷ್ಕಕೋಶ ದಲ್ಲಿ ಬಳಸುವ ವಿದ್ಯುತ್ ವಿಭಾಜ್ಯ ::--  ಅಮೋನಿಯಂ ಕ್ಲೋರೈಡ್ 

💡 ದೀರ್ಘ ಬಾಳಿಕೆಯ ವಿದ್ಯುತ್ ಕೋಶಗಳಿಗೆ ಉದಾಹರಣೆ ::--   ನಿಕ್ಕಲ್, ಕ್ಯಾಡ್ಮಿಯಂ, ವಿದ್ಯುತ್ ಕೋಶಗಳು

💡ವಿದ್ಯುದಾವೇಶ ವಿರುವ ಕಣಗಳ ಹರಿವೇ ::--  ವಿದ್ಯುತ್ ಪ್ರವಾಹ

💡ಸಾಪೇಕ್ಷ ಚಲನೆಯಲ್ಲಿರುವ ವಿದ್ಯುದಾವೇಶಗಳ ನಡುವಿನ ಆಕರ್ಷಣಾ ಹಾಗೂ ವಿಕರ್ಷಣಾ ಬಲ ::-- ವಿದ್ಯುತ್ ಕಾಂತಿಯ ಬಲ 

 💡ಪರಮಾಣುವಿನ ಬೀಜದ ಸ್ಥಿರತೆ ಕಾಪಾಡುವ  ಬಲ  ::-- ಪ್ರಬಲ ಬೈಜಿಕ ಬಲ 

💡ಕೆಲವು ಪರಮಾಣುಗಳ ಬೀಜಗಳು ಅಸ್ಥಿರವಾಗಲು  ಕಾರಣವಾದ ಬಲ ::-- ದುರ್ಬಲ ಬೈಜಿಕ ಬಲ

 💡ತಂತಿಯ ತುದಿಗಳ ನಡುವೆ ಒಂದೇ ವಿಭವಾಂತರವನ್ನು ಕಾಪಾಡಿಕೊಳ್ಳಲು ಉಪಯೋಗಿಸುವ ಶಕ್ತಿ ::-- ವಿದ್ಯುತ್ ಚಾಲಕ ಬಲ

 💡ಸೊನ್ನೆ ರೋಧಕ ವಿರುವ  ವಸ್ತುಗಳು ::--  ಅಧಿಕ ವಾಹಕಗಳು 

💡 ವಿದ್ಯುದಾವಿಷ್ಟಗಳ ಚಲನೆಗೆ ವಾಹಕ ಒಡ್ಡಿದ ಅಡಚಣೆಯನ್ನು ಹೀಗೆನ್ನುವರು ::--  ವಿದ್ಯುತ್ ರೋಧ

 💡ತಂತಿಯ ಉದ್ದ ಹೆಚ್ಚಾದಂತೆ ವಿದ್ಯುತ್ ರೋಧ ::--  ಹೆಚ್ಚುತ್ತದೆ 

 💡ವಿದ್ಯುತ್ತ್ ನ ಉಷ್ಣ ಉತ್ಪಾದನಾ  ಪರಿಣಾಮಕ್ಕೆ ಕಾರಣ ::-- ವಿದ್ಯುತ್ ರೋಧ  

💡ವಿದ್ಯುತ್ ಶಕ್ತಿಯನ್ನು ಉಪಯೋಗಿಸಿದ ದರವೇ ::--  ವಿದ್ಯುತ್ ಸಾಮರ್ಥ್ಯ 

💡ವಿದ್ಯುತ್ ಮಂಡಲದಲ್ಲಿನ ಉಪಕರಣಗಳಲ್ಲಿ ವಿದ್ಯುತ್ ಸೋರಿಕೆ ಉಂಟಾದಾಗ ಅದು ಈ ರೀತಿಯ ಮೂಲ ಭೂಮಿಯನ್ನು ಸೇರುತ್ತದೆ ::--  ಭೂ ಸಂಪರ್ಕ ತಂತಿ

 🔮🧪🔮🧪🔮🧪🔮🧪🔮🧪

Nagarhole national park

🐯ನಾಗರಹೊಳೆ ರಾಷ್ಟ್ರೀಯ ಉದ್ಯಾನವನ🦁
🐆🐘🐅🐘🐅🐘🐅🐅🐘🐅

ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಹರಡಿರುವ 643 ಚದರ ಕಿ.ಮೀ ವಿಸ್ತಾರವಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಪ್ರಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವಾಗಿದೆ. 

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ (ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಎಂದು ಕರೆಯಲಾಗುತ್ತದೆ), ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಕೊಡಗು ಜಿಲ್ಲೆಯ ಮತ್ತು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯಾನ ಸ್ಥಾಪಿತವಾಗಿದೆ.ಈ ಉದ್ಯಾನವನವನ್ನು1999 ರಲ್ಲಿ ಇದು ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಭಾಗವಾಗಿ ಮೂವತ್ತು ಏಳನೇ ಪ್ರಾಜೆಕ್ಟ್ ಟೈಗರ್ ಹುಲಿ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲಾಯಿತು. 6,000 ಕಿಮಿ 2 ಪಶ್ಚಿಮ ಘಟ್ಟಗಳ ನೀಲಗಿರಿ ಉಪ ಕ್ಲಸ್ಟರ್ (2,300 ಚ ಮೈಲಿ), ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ, ವಿಶ್ವ ಪರಂಪರೆ ತಾಣದ ಆಯ್ಕೆಗೆ ಸಂಬಂಧಿಸಿದಂತೆ UNESCO ವಿಶ್ವ ಪರಂಪರೆ ಸಮಿತಿಯ ಪರಿಗಣನೆಯ ಅಡಿಯಲ್ಲಿದೆ. ಪಾರ್ಕ್ ಶ್ರೀಮಂತ ಕಾಡುಪ್ರದೇಶ, ಸಣ್ಣ ಹೊಳೆಗಳು, ಬೆಟ್ಟಗಳು, ಕಣಿವೆಗಳು ಮತ್ತು ಜಲಪಾತಗಳನ್ನು ಹೊಂದಿದೆ. ಪಾರ್ಕ್ ಅನೇಕ ಹುಲಿಗಳು, ಭಾರತೀಯ ಕಾಡೆಮ್ಮೆ ಮತ್ತು ಆನೆಗಳು ಆರೋಗ್ಯಕರ ಮಾಂಸಾಹಾರಿ ಪ್ರಾಣಿಗಳ ಬೇಟೆಯ ಅನುಪಾತ ಹೊಂದಿದೆ.

ವನ್ಯಜೀವಿಗಳು:

ಅರಣ್ಯ ಸಫಾರಿ ವೇಳೆ ಬಂಗಾಳ ಹುಲಿಗಳು ಮತ್ತು ಏಷ್ಯಾಟಿಕ್ ಆನೆಗಳನ್ನು ತಮ್ಮ ನೈಸರ್ಗಿಕ ವಾಸಸ್ಥಾನಗಳಲ್ಲಿ ಗುರುತಿಸಬಹುದಾದ ಸಾಧ್ಯತೆಯಿಂದಾಗಿ ವನ್ಯಜೀವಿ ಉತ್ಸಾಹಿಗಳು ಮತ್ತು ಛಾಯಾಗ್ರಾಹಕರಿಗೆ ನಾಗರಹೊಳೆ ಪ್ರಿಯವಾದ ರಾಷ್ಟ್ರೀಯ ಉದ್ಯಾನವನವಾಗಿದ

ಉದ್ಯಾನವನ ಬ್ರಹ್ಮಗಿರಿ ಬೆಟ್ಟಗಳ ಮತ್ತು ದಕ್ಷಿಣ ಕೇರಳ ರಾಜ್ಯದ ಕೆಳಭಾಗಕ್ಕೆ ಹರಡುವ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಇರುತ್ತದೆ. ಉದ್ಯಾನವನ ಬಂಡೀಪುರ ನ್ಯಾಷನಲ್ ಪಾರ್ಕ್ ನ ವಾಯುವ್ಯ ದಿಕ್ಕಿನಲ್ಲಿ ಇದೆ 643 ಕಿಮಿ 2 (248 ಚದರ ಮೈಲಿ) ಒಳಗೊಳ್ಳುತ್ತದೆ. ಕಬಿನಿ ಜಲಾಶಯ ಎರಡು ಉದ್ಯಾನಗಳನ್ನು ಪ್ರತ್ಯೇಕಿಸುತ್ತದೆ. 687 960 ಮೀಟರ್ (2,254 3.150 ಅಡಿ) ಉದ್ದ ಪಾರ್ಕ್ ಶ್ರೇಣಿಯ ಎತ್ತರದ. ಇದು 50 ಕಿಮೀ (31 ಮೈಲಿ) ಮೈಸೂರು ಪ್ರಮುಖ ನಗರದಿಂದ ದೂರವಿದ್ದು.  ಪಕ್ಕದ ಬಂಡೀಪುರ ರಾಷ್ಟ್ರೀಯ ಉದ್ಯಾನ (870 ಕಿಮಿ 2 (340 ಚದರ ಮೈಲಿ) ಮುದುಮಲೈ ರಾಷ್ಟ್ರೀಯ ಉದ್ಯಾನ (320 ಕಿಮಿ 2 (120 ಚದರ ಮೈಲಿ) ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯ (344 ಕಿಮಿ 2 (133 ಚದರ ಮೈಲಿ)), ಇದು ಒಟ್ಟಿಗೆ ದಕ್ಷಿಣ ಭಾರತದ , 2,183 ಕಿಮಿ 2 (843 ಚದರ ಮೈಲಿ) ಮೊತ್ತದ ರಕ್ಷಿತ ಪ್ರದೇಶವಾಗಿ ರೂಪಿಸುತ್ತದೆ.

🐯 ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಹೆಚ್ಚಿನ ಸಂಖ್ಯೆಯ ಕಾಡು ನಾಯಿಗಳು, ಚಿರತೆಗಳು ಮತ್ತು ಕರಡಿಗಳಿಗೆ ನೆಲೆಯಾಗಿದೆ. ಸಸ್ಯಹಾರಿ ಪ್ರಾಣಿಗಳಲ್ಲಿ  ಜಿಂಕೆ,ಕಾಡೆಮ್ಮೆ, ಕಾಡುಹಂದಿ, ಸಾಂಬಾರ್, ಮತ್ತು ಹಲವಾರು ಜಾತಿಯ ಪಕ್ಷಿಗಳು ಕಾಣಸಿಗುತ್ತವೆ. ನಾಗರಹೋಲ್ ರಾಷ್ಟ್ರೀಯ ಉದ್ಯಾನವು ತೇಗ ಮತ್ತು ಬೀಟೆ  ಮರಗಳಿಂದ ಸಮೃದ್ಧವಾಗಿದೆ.

🐯 ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಉತ್ತಮ ಸಮಯ: ವರ್ಷದುದ್ದಕ್ಕೂ ನಾಗರಹೊಳೆಗೆ ಭೇಟಿನೀಡಬಹುದಾಗಿದೆ. ಆದಾಗ್ಯೂ, ಮುಂಗಾರು ನಂತರದ ಅಕ್ಟೋಬರ್-ಫೆಬ್ರವರಿ ತಿಂಗಳುಗಳು ನಾಗರಹೊಳೆಗೆ  ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ. 

ನಾಗರಹೊಳೆ  ತಲುಪುವುದು ಹೇಗೆ:

🐯 ರಸ್ತೆಯ ಮೂಲಕ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಮೈಸೂರಿನಿಂದ ನಾಗರಹೊಳೆ ತಲುಪಲು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.

Ganga river

🌹ಗಂಗಾ ನದಿ 🌹
🌸🔹🌸🔹🌸🔹🌸🔹🌸🔹🌸🔹

ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ವಾರಾಣಸಿಯಲ್ಲಿ ಗಂಗೆ

💧ದೇಶಗಳು💧
ಭಾರತ, ನೇಪಾಳ, ಬಾಂಗ್ಲಾದೇಶ

🌀ಉಪನದಿಗಳು 🌀

🟢 ಎಡಬದಿಯಲ್ಲಿ= ಮಹಾಕಾಳಿ, ಕರ್ನಾಲಿ, ಕೋಸಿ, ಗಂಡಕಿ, ಘಾಘ್ರಾ -

🟢 ಬಲಬದಿಯಲ್ಲಿ ಯಮುನಾ, ಸೋನ್, ಮಹಾನಂದಾ

🟣ನಗರಗಳು🟣 ಹರಿದ್ವಾರ, ಸೊರೊನ್, ಕನ್ನೋಜ್, ಕಾನ್ಪುರ, ಅಲಹಾಬಾದ್, ವಾರಾಣಸಿ, ಪಾಟ್ನಾ, ರಾಜ್‌ಶಾಹಿ

ಗಂಗೋತ್ರಿ  ಹಿಮನದಿ 

☘ ಸಮುದ್ರ ಮಟ್ಟದಿಂದ ಎತ್ತರ ೭,೭೫೬ m (೨೫,೪೪೬ )

 ☘ ಉದ್ದ ೨,೫೧೦ 

☘ ನೀರಿನ ಬಿಡುಗಡೆ  ಸಾಗರಕ್ಕೆ - ಸರಾಸರಿ
೧೨,೦೧೫ m³/s 
(೪,೨೪,೩೦೬ cu ft/s)

☘ ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ಗಂಗೋತ್ರಿ.   ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸಿದ್ಧವಾದ ಹಲವಾರು ತೀರ್ಥಕ್ಷೇತ್ರಗಳಿವೆ. 

☘ ಉತ್ತರ ಭಾರತದಲ್ಲಿ 'ದೇವಭೂಮಿ' ಎಂದೇ ಪ್ರಸಿದ್ಧವಾದ ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದು ಪಾವನ ಜಲವೆಂದು ಪೂಜಿಸುವ ಗಂಗೆಯ ಉಗಮ ಸ್ಥಳ ಗಂಗೋತ್ರಿ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದಿಂದ ಹೊರಡಬೇಕಾಗುತ್ತದೆ. ಹರಿದ್ವಾರ ಅಂದರೆ ಬದರಿನಾರಾಯಣ(ಹರಿ)ಕ್ಕೆ ಇಲ್ಲಿಂದ ಯಾತ್ರೆ ಆರಂಭಿಸು ವುದರಿಂದ ಇದಕ್ಕೆ 'ಹರಿದ್ವಾರ'ವೆಂತಲೂ ಕರೆಯುತ್ತಾರೆ.

ಹರಿದ್ವಾರದಿಂದ ೨೩ ಕಿ.ಮೀ. ದೂರದಲ್ಲಿ ಋಷಿಕೇಶ ಮಹಾ ಉತ್ತಮ ತೀರ್ಥ ಮತ್ತು ತಪೋಭೂಮಿಯಿದೆ. ಉತ್ತುಂಗ ಪರ್ವತಗಳ ಶಿಖರಗಳ ನಡುವೆ ಹರಿವ ಗಂಗೆಯ ಝಳು ಝಳು ನಿನಾದವೊಂದಿಗೆ ಜಲಧಾರೆ ಹರಿವು, ತಪ್ಪಲ ಪ್ರದೇಶಗಳನ್ನು ಸೇರುತ್ತದೆ.

ಹರಿದ್ವಾರದಿಂದ ಗಂಗೋತ್ರಿಗೆ ೨೨೮.ಕಿ.ಮೀ.

🌸 ಉತ್ತರ ಕಾಶಿ 🌸

☘ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ.

☘ ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. 

💐ಹಿಮಾಲಯದ ನಾಲ್ಕು ಧಾಮಗಳು💐

೧. ಕೇದಾರನಾಥ

೨. ಬದರಿನಾಥ

೩. ಗಂಗೋತ್ರಿ ಮತ್ತು

೪. ಯಮುನೋತ್ರಿ

🌺ಗಂಗಾನದಿಯ ಮಾಲಿನ್ಯತೆ 🌺

ಗಂಗಾ ನದಿ ಉದ್ದಕ್ಕೂ ಹೋಗುವ 39 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ನದಿಯ ನೀರು ಶುದ್ಧವಾಗಿದೆ. ಉಳಿದ ಕಡೆಗಳಲ್ಲಿ ನೀರು ಮಲಿನಗೊಂಡಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಮಂಡಳಿಯು ಮುಂಗಾರಿಗೂ ಮುನ್ನ ಮತ್ತು ಮುಂಗಾರಿನ ನಂತರ 39 ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿತು; ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಈ ಅಧ್ಯಯನ ಅವುಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈಗ ಅಧ್ಯಯನದ ವರದಿಯನ್ನು ಮಂಡಳಿಯು ಬಿಡುಗಡೆ ಮಾಡಿದೆ.‘ಮುಂಗಾರಿಗೂ ಮೊದಲು 41 ಸ್ಥಳಗಳಲ್ಲಿ ಮಂಡಳಿ ಅಧ್ಯಯನ ಮಾಡಿತ್ತು. ಅವುಗಳಲ್ಲಿ 37 ಸ್ಥಳಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಮಲಿನಗೊಂಡಿರುವುದು ಕಂಡುಬಂದಿತ್ತು.

Hills

💥 ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಮಾಹಿತಿ 💥
🏔🏝🏔🏝🏔🏝🏔🏝🏔🏝

➤ ನಂದಿ ಬೆಟ್ಟ : ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನ್ನಿಂಗ್‍ಹಾಂನಿಂದ ನಿರ್ಮಿತವಾದ ‘ ಓಕ್‍ಲ್ಯಾಂಡ್’ ಕಟ್ಟಡ ಇಲ್ಲಿದೆ. ಮಹಾತ್ಮಾಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ ‘ ಗಾಂಧಿ ನಿಲಯ’ ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ.

➤ ಬಾಬಾಬುಡನ್‍ಗಿರಿ : ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಈ ಗಿರಿಯಲ್ಲಿ ‘ದಾದ ಹಯಾತ್ ಖಲಂದರ್’ ಎಂಬ ಸಂತನ ‘ ದರ್ಗಾ’ ಮತ್ತು ‘ ದತ್ತಪೀಠ’ ಗಳು ಇವೆ. ತೀರಾ ಇತ್ತೀಚಿನವರೆಗೂ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಈ ಗಿರಿ ಈಗ ವಿವಾದದಲ್ಲಿದೆ.

➤  ಬಿಳಿಗಿರಿರಂಗನಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲ್ಲೂಕಿನಲ್ಲಿದೆ. ಇದನ್ನು ಬಿ.ಆರ್. ಹಿಲ್ಸ್ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಹೆಚ್ಚು ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಸ್ವಾಮಿ ನಿರ್ಮಲಾನಂದರು ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ ಹಾಗೂ ಹೆಸರಾಂತ ಸಮಾಜ ಸೇವಕ ಡಾ. ಸುದರ್ಶನರವರು ಸ್ಥಾಪಿಸಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಗಳು ಇಲ್ಲಿವೆ.

➤  ಮಲೈ ಮಹದೇಶ್ವರ ಬೆಟ್ಟ : ‘ಏಳು ಮಲೆ’ ಎಂದು ಕರೆಯಲ್ಪಡುವ ಮಲೈ ಮಹದೇಶ್ವರ ಬೆಟ್ಟವು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ. ಸಂಪದ್ಭರಿತ ಅರಣ್ಯ ಆವರಿಸಿರುವ ಈ ಬೆಟ್ಟದ ಮೇಲೆ ‘ಮಲೈ ಮಹದೇಶ್ವರ ಸ್ವಾಮಿ’ ದೇವಸ್ಥಾನವಿದೆ.

➤  ಗೋಪಾಲಸ್ವಾಮಿ ಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿರುವ ಈ ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಸ್ಥಾನವಿದೆ.

➤  ಮುಳ್ಳಯ್ಯನಗಿರಿ : ಕರ್ನಾಟಕದ ಅತ್ಯಂತ ಎತ್ತರವಾದ ಶಿಖರವಾದ ಮುಳ್ಳಯ್ಯನಗಿರಿಯು ಚಿಕ್ಕಮಗಳೂರು ಜಿಲ್ಲಿಯಲ್ಲಿದ್ದು, ಸಮುದ್ರ ಮಟ್ಟದಿಂದ 1925 ಮೀ ಎತ್ತರದಲ್ಲಿದೆ. ಚಾರಣಿಗರ ನೆಚ್ಚಿನ ತಾಣವಾಗಿರುವ ಮುಳ್ಳಯ್ಯನಗಿರಿಗೆ ಹಲವು ಪ್ರವಾಸಿಗರು ಆಗಮಿಸುತ್ತಾರೆ.

➤  ಚಾಮುಂಡಿಬೆಟ್ಟ : ಮೈಸೂರು ನಗರಕ್ಕೆ ತೀರಾ ಹತ್ತಿರದಲ್ಲಿರುವ ಇದು, ಈ ಹಿಂದೆ ಮಬ್ರ್ಬಳ ತೀರ್ಥವೆಂದು ಕರೆಯಲ್ಪಡುತ್ತಿದ್ದ ಈ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ ಮತ್ತು ಮಹಿಷಾಸುರನ ಮೂರ್ತಿಗಳು ಇವೆ. ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟದ ಮೆಟ್ಟಿಲ ಬಳಿ ಕರ್ನಾಟಕದ ಬೃಹತ್ ನಂದಿ ವಿಗ್ರಹವಿದೆ

➤  ಕೊಡಚಾದ್ರಿ ಬೆಟ್ಟಗಳು: ಈ ಬೆಟ್ಟವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ನಿಸರ್ಗ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿದೆ. ಈ ಬೆಟ್ಟ ಪ್ರಮುಖವಾದ ಹಾಗೂ ಪ್ರಸಿದ್ಧವಾದ ಯಾತ್ರ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನಲೆಯಲ್ಲಿದೆ.

➤  ಶಿವಗಂಗೆ : ಮಾಗಡಿ ಕೆಂಪೇಗೌಡನಿಂದ ಸ್ಥಾಪಿತವಾದ ಪವಿತ್ರ ಕ್ಷೇತ್ರವಾದ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿದೆ.

➤ ಆದಿಚುಂಚನಗಿರಿ : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.

➤ ಕುಮಾರಸ್ವಾಮಿ ಬೆಟ್ಟ : ಇದು ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನಲ್ಲಿದೆ. ಈ ಬೆಟ್ಟದ ಮೇಲೆ ಶ್ರೀಕುಮಾರಸ್ವಾಮಿ ದೇವಾಲಯವಿದೆ.

Sports

🏆 ಗ್ರ್ಯಾಂಡ್  ಸ್ಯ್ಲಾo  ಟೂರ್ನಿಗಳು ಮತ್ತು ವಿಶೇಷತೆಗಳು 🏆

🎍☘🎍☘🎍☘🎍☘🎍🍀🎍

 🏆 ಆಸ್ಟ್ರೇಲಿಯಾ ಓಪನ್ 🏆
*ಅವಧಿ     :=  ಜನವರಿ -ಫೆಬ್ರುವರಿ 
*ಪ್ರಾರಂಭ :=  1905 
*ಸ್ಥಳ        :=  ಆಸ್ಟ್ರೇಲಿಯಾದ                        ಮೆಲ್ಬೋರ್ನ್ 
* ವಿಶೇಷತೆ :=  ಹಾರ್ಡ್ ಕೋರ್ಟ್ 

🏆  ಫ್ರೆಂಚ್ ಓಪನ್  🏆
*ಅವಧಿ     :=  ಮೇ- ಜೂನ್ 
*ಪ್ರಾರಂಭ  :=  1891 
*ಸ್ಥಳ     :=  ಫ್ರಾನ್ಸಿನ ಪ್ಯಾರಿಸ್ 
*ವಿಶೇಷತೆ  :=  ಕ್ಲೇ ಕೋರ್ಟ್ 

🏆  ವಿoಬಲ್ಡನ್ ಓಪನ್  🏆
 *ಅವಧಿ    :=  ಜೂನ್-ಜುಲೈ  
 *ಪ್ರಾರಂಭ :=  1877 
* ಸ್ಥಳ        :=  ಲಂಡನ್ನಿನ ವಿoಬಲ್ಡನ್ 
* ವಿಶೇಷತೆ :=  ಹುಲ್ಲಿನ ಕೋರ್ಟ್ 
* ಇದು "  ಅತ್ಯಂತ ಹಳೆಯ  " ಟೂರ್ನಿ ಯಾಗಿದೆ

 🏆  ಯುಎಸ್ಎ ಓಪನ್  🏆
* ಅವಧಿ    :=  ಆಗಸ್ಟ್-ಸೆಪ್ಟೆಂಬರ್ 
*ಪ್ರಾರಂಭ :=  1881 
* ಸ್ಥಳ       :=  ಅಮೆರಿಕದ ನ್ಯೂಯಾರ್ಕ್ 
*ವಿಶೇಷತೆ :=  ಹಾರ್ಡ್ ಕೋರ

Van

🟢 ಬಂದವ್‌ಗಢ  ರಾಷ್ಟ್ರೀಯ ಉದ್ಯಾನ 🟢

 🟣 ಸ್ಥಳ: ಮಧ್ಯಪ್ರದೇಶ- ಸತ್ಪುರ ಪರ್ವತ ಶ್ರೇಣಿಗಳ ಉತ್ತರ ಅಂಚುಗಳು.

🟣 ಹುಲಿ ಜನಗಣತಿ -2019 ರ ಪ್ರಕಾರ ಸಂಸದರಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳು.

🟣  ಚಿಂಕರ ಮತ್ತು ಗೌರ್‌ಗೂ ಹೆಸರುವಾಸಿಯಾಗಿದೆ.

 🟣 ಸಂಸದರಲ್ಲಿ ಯಾವುದೇ ಆನೆಗಳು ಇಲ್ಲ ಮತ್ತು ಎಂಪಿ ಸೇರಿದಂತೆ ಭಾರತದ ಕೇಂದ್ರ ಪ್ರದೇಶದಿಂದ ಈ ಕಣ್ಮರೆಗೆ ಯಾವುದೇ ಕಾರಣಗಳಿಲ್ಲ - ಆದರೆ ಕೆಲವು ವರ್ಷಗಳ ಹಿಂದೆ- ಈ ಕಾಡಿನಲ್ಲಿ ಆನೆ ವಸಾಹತು ಕಂಡಿತು (ಹೆಚ್ಚಾಗಿ ಪಕ್ಕದ ಚತ್ತೀಸ್‌ಗಢ  ಕಾಡುಗಳಿಂದ)

 🧿 ಐತಿಹಾಸಿಕ ಮಹತ್ವ: 

ಈ ಸ್ಥಳವನ್ನು ರಾಮಾಯಣದೊಂದಿಗೆ ಸಂಯೋಜಿಸಲಾಗುತ್ತಿದೆ ಎಂದು ‘ನಾರದ್ ಪಂಚರಾತ್ರ’ ಮತ್ತು ‘ಶಿವ ಪುರಾಣ’ ದಲ್ಲಿ ಉಲ್ಲೇಖಿಸಲಾಗಿದೆ. ಬಾಂಧವ್‌ಗಢ  ಕೋಟೆಯನ್ನು “ತ್ರೇತ ಯುಗ” ದ ಅತ್ಯುತ್ತಮ ಕಲಾಕೃತಿಯೆಂದು ಪರಿಗಣಿಸಲಾಗಿದೆ.

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...