somaling m uppar kawalga

somaling m uppar kawalga
Somaling Sulubai uppar

ಶನಿವಾರ, ಏಪ್ರಿಲ್ 03, 2021

Ganga river

🌹ಗಂಗಾ ನದಿ 🌹
🌸🔹🌸🔹🌸🔹🌸🔹🌸🔹🌸🔹

ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ವಾರಾಣಸಿಯಲ್ಲಿ ಗಂಗೆ

💧ದೇಶಗಳು💧
ಭಾರತ, ನೇಪಾಳ, ಬಾಂಗ್ಲಾದೇಶ

🌀ಉಪನದಿಗಳು 🌀

🟢 ಎಡಬದಿಯಲ್ಲಿ= ಮಹಾಕಾಳಿ, ಕರ್ನಾಲಿ, ಕೋಸಿ, ಗಂಡಕಿ, ಘಾಘ್ರಾ -

🟢 ಬಲಬದಿಯಲ್ಲಿ ಯಮುನಾ, ಸೋನ್, ಮಹಾನಂದಾ

🟣ನಗರಗಳು🟣 ಹರಿದ್ವಾರ, ಸೊರೊನ್, ಕನ್ನೋಜ್, ಕಾನ್ಪುರ, ಅಲಹಾಬಾದ್, ವಾರಾಣಸಿ, ಪಾಟ್ನಾ, ರಾಜ್‌ಶಾಹಿ

ಗಂಗೋತ್ರಿ  ಹಿಮನದಿ 

☘ ಸಮುದ್ರ ಮಟ್ಟದಿಂದ ಎತ್ತರ ೭,೭೫೬ m (೨೫,೪೪೬ )

 ☘ ಉದ್ದ ೨,೫೧೦ 

☘ ನೀರಿನ ಬಿಡುಗಡೆ  ಸಾಗರಕ್ಕೆ - ಸರಾಸರಿ
೧೨,೦೧೫ m³/s 
(೪,೨೪,೩೦೬ cu ft/s)

☘ ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ಗಂಗೋತ್ರಿ.   ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸಿದ್ಧವಾದ ಹಲವಾರು ತೀರ್ಥಕ್ಷೇತ್ರಗಳಿವೆ. 

☘ ಉತ್ತರ ಭಾರತದಲ್ಲಿ 'ದೇವಭೂಮಿ' ಎಂದೇ ಪ್ರಸಿದ್ಧವಾದ ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದು ಪಾವನ ಜಲವೆಂದು ಪೂಜಿಸುವ ಗಂಗೆಯ ಉಗಮ ಸ್ಥಳ ಗಂಗೋತ್ರಿ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದಿಂದ ಹೊರಡಬೇಕಾಗುತ್ತದೆ. ಹರಿದ್ವಾರ ಅಂದರೆ ಬದರಿನಾರಾಯಣ(ಹರಿ)ಕ್ಕೆ ಇಲ್ಲಿಂದ ಯಾತ್ರೆ ಆರಂಭಿಸು ವುದರಿಂದ ಇದಕ್ಕೆ 'ಹರಿದ್ವಾರ'ವೆಂತಲೂ ಕರೆಯುತ್ತಾರೆ.

ಹರಿದ್ವಾರದಿಂದ ೨೩ ಕಿ.ಮೀ. ದೂರದಲ್ಲಿ ಋಷಿಕೇಶ ಮಹಾ ಉತ್ತಮ ತೀರ್ಥ ಮತ್ತು ತಪೋಭೂಮಿಯಿದೆ. ಉತ್ತುಂಗ ಪರ್ವತಗಳ ಶಿಖರಗಳ ನಡುವೆ ಹರಿವ ಗಂಗೆಯ ಝಳು ಝಳು ನಿನಾದವೊಂದಿಗೆ ಜಲಧಾರೆ ಹರಿವು, ತಪ್ಪಲ ಪ್ರದೇಶಗಳನ್ನು ಸೇರುತ್ತದೆ.

ಹರಿದ್ವಾರದಿಂದ ಗಂಗೋತ್ರಿಗೆ ೨೨೮.ಕಿ.ಮೀ.

🌸 ಉತ್ತರ ಕಾಶಿ 🌸

☘ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ.

☘ ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. 

💐ಹಿಮಾಲಯದ ನಾಲ್ಕು ಧಾಮಗಳು💐

೧. ಕೇದಾರನಾಥ

೨. ಬದರಿನಾಥ

೩. ಗಂಗೋತ್ರಿ ಮತ್ತು

೪. ಯಮುನೋತ್ರಿ

🌺ಗಂಗಾನದಿಯ ಮಾಲಿನ್ಯತೆ 🌺

ಗಂಗಾ ನದಿ ಉದ್ದಕ್ಕೂ ಹೋಗುವ 39 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ನದಿಯ ನೀರು ಶುದ್ಧವಾಗಿದೆ. ಉಳಿದ ಕಡೆಗಳಲ್ಲಿ ನೀರು ಮಲಿನಗೊಂಡಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಮಂಡಳಿಯು ಮುಂಗಾರಿಗೂ ಮುನ್ನ ಮತ್ತು ಮುಂಗಾರಿನ ನಂತರ 39 ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿತು; ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಈ ಅಧ್ಯಯನ ಅವುಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈಗ ಅಧ್ಯಯನದ ವರದಿಯನ್ನು ಮಂಡಳಿಯು ಬಿಡುಗಡೆ ಮಾಡಿದೆ.‘ಮುಂಗಾರಿಗೂ ಮೊದಲು 41 ಸ್ಥಳಗಳಲ್ಲಿ ಮಂಡಳಿ ಅಧ್ಯಯನ ಮಾಡಿತ್ತು. ಅವುಗಳಲ್ಲಿ 37 ಸ್ಥಳಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಮಲಿನಗೊಂಡಿರುವುದು ಕಂಡುಬಂದಿತ್ತು.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar