📚ಸಂವಿಧಾನ 📚
🟢 ಸಾರ್ವಜನಿಕ ಹಣದ ರಕ್ಷಕನೆಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರಿಗೆ ಕರೆಯಲಾಗುತ್ತದೆ
🟢 ಭಾರತ ಸರ್ಕಾರದ ಕಾಯ್ದೆ 1935 ಒಳಗೊಂಡಿರುವ "ಸೂಚನೆಗಳ ಉಪಕರಣ"ಗಳನ್ನು ಭಾರತದ ಸಂವಿಧಾನದಲ್ಲಿ ರಾಜ್ಯ ನೀತಿಯ ನಿರ್ದೇಶನ ತತ್ವಗಳು ಎಂದು ಅಳವಡಿಸಿಕೊಳ್ಳಲಾಗಿದೆ
🟢 ಭಾರತೀಯ ಸಂವಿಧಾನದ ಅನುಚ್ಛೇದ 17 ಅಸ್ಪ್ಯಶ್ಯತೆಯ ನಿರ್ಮೂಲನೆ ಬಗ್ಗೆ ವ್ಯವಹರಿಸುತ್ತದೆ
🟢 ಅನುಚ್ಛೇದ 32 ಸಂವಿಧಾನಾತ್ಮಕ ಪರಿಹಾರೋಪಾಯಗಳ ಹಕ್ಕುಗಳನ್ನು ಡಾಕ್ಟರ್. ಬಿ.ಆರ್. ಅಂಬೇಡ್ಕರ್ ರವರು ಭಾರತ ಸಂವಿಧಾನದ "ಹೃದಯ ಹಾಗೂ ಆತ್ಮ "ಎಂದು ವಿವರಿಸುತ್ತಾರೆ
🟢 ಭಾರತದ ಸರ್ಕಾರ ಕಾಯ್ದೆ 1919ನ್ನು ಮೊಂಟೆಗ್ಯೂ -ಚೆಲ್ಮ್ಸ್ ಫೋರ್ಡ್ ಸುಧಾರಣೆಗಳು ಎಂದು ಕರೆಯಲಾಗುತ್ತದೆ
🟢 ಮನಸ್ಮೃತಿ ವಿವರಿಸುವುದು ಕಾನೂನನ್ನು
🟢 ತೆರಿಗೆ ಹಾಗೂ ಇತರ ರಸೀದಿಗಳ ಮೂಲಕ ಭಾರತ ಸರ್ಕಾರಕ್ಕೆ ಬರುವ ಎಲ್ಲಾ ಆದಾಯಗಳನ್ನು ಭಾರತದ ಸಂಚಿತ ನಿಧಿಗೆ ಜಮಾ ಮಾಡಲಾಗುತ್ತದೆ
🟢ಭಾರತೀಯ ಸಂವಿಧಾನದ ಎಳನೇ ಅನುಸೂಚಿಯಲ್ಲಿನ, ವಿಷಯಗಳಾದ ಪೊಲೀಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆ ರಾಜ್ಯ ಪಟ್ಟಿಯಲ್ಲಿವೆ.
🟢 ಭಾರತ ಸಂವಿಧಾನದ ಅನುಚ್ಛೇದ 371 ( ಜೆ )ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ಬಗ್ಗೆ ವಿವರಿಸುತ್ತದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ