somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಏಪ್ರಿಲ್ 02, 2021

G s shivrudrappa

🌺 ಈ ದಿನದ ವಿಶೇಷ
===========
🌷 ಜಿ ಎಸ್ ಶಿವರುದ್ರಪ್ಪ 
(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ರವರ 'ಜನ್ಮದಿನ'
> ಜನನ :- 7 February 1926
> ನಿಧನ :- 23 December 2013
===================
ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಜೊತೆಗೆ ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತ ಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯ. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ 1,2006ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು
==============
ಡಾ.ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹತ್ತಿರವಿರುವ ಈಸೂರು ಗ್ರಾಮದಲ್ಲಿ ಫೆಬ್ರುವರಿ 7,1926 ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾಯಿ ವೀರಮ್ಮ.
=============
🌷ಪ್ರಶಸ್ತಿ/ಪುರಸ್ಕಾರ
=============
☘ 1974 -  ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ("ಮಾಸ್ಕೋದಲ್ಲಿ ೨೨ ದಿನ" ಪ್ರವಾಸ ಕಥನಕ್ಕೆ)
☘ 1982 - ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ 
☘ 1984- ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
☘ 1992 ರಲ್ಲಿ ದಾವಣಗೆರೆಯಲ್ಲಿ ನಡೆದ 61ನೇ  ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
☘ 1997- ಪ್ರೋ.ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ
☘1998 - ಪಂಪ ಪ್ರಶಸ್ತಿ
☘ 2000 ಮಾಸ್ತಿ ಪ್ರಶಸ್ತಿ
☘ 2001 - ಹಂಪಿ ಕನ್ನಡ ವಿ.ವಿಯಿಂದ ನಾಡೋಜ ಗೌರವ ಡಾಕ್ಟರೇಟ್
☘ 2006 ರಾಷ್ಟ್ರಕವಿ ಪುರಸ್ಕಾರ, ಅ.ನ.ಕೃ ನಿರ್ಮಾಣ್ ಪ್ರಶಸ್ತಿ
☘ 2007 ಕುವೆತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ 
☘ 2010  ನೃಪತುಂಗ ಪ್ರಶಸ್ತಿ
===================
🌷ಕೃತಿಗಳು
=========
☘ ಸಾಮಗಾನ
☘ ಚೆಲುವು-ಒಲವು
☘ ದೇವಶಿಲ್ಪ
☘ ದೀಪದ ಹೆಜ್ಜೆ
☘ ಅನಾವರಣ
☘ ತೆರೆದ ದಾರಿ
☘ ಗೋಡೆ
☘ ವ್ಯಕ್ತಮಧ್ಯ ಓರೆ ಅಕ್ಷರಗಳು
☘ ತೀರ್ಥವಾಣಿ
☘ ಕಾರ್ತಿಕ
☘ ಕಾಡಿನ ಕತ್ತಲಲ್ಲಿ
☘ ಚಕ್ರಗತಿ
☘ ಎದೆ ತುಂಬಿ ಹಾಡುವೆನು
=============
🌷ವಿಮರ್ಶೆ/ಗದ್ಯ
============
☘ ಪರಿಶೀಲನ
☘ ವಿಮರ್ಶೆಯ ಪೂರ್ವ ಪಶ್ಚಿಮ
☘ ಸೌಂದರ್ಯ ಸಮೀಕ್ಷೆ. (ಇದು ಅವರ ಪಿಹೆಚ್‌ಡಿ ಮಹಾ ಪ್ರಬಂಧ)
☘ ಕಾವ್ಯಾರ್ಥ ಚಿಂತನ
☘ ಗತಿಬಿಂಬ
☘ ಅನುರಣನ
☘ ಪ್ರತಿಕ್ರಿಯೆ
☘ ಕನ್ನಡ ಸಾಹಿತ್ಯ ಸಮೀಕ್ಷೆ
☘ ಮಹಾಕಾವ್ಯ ಸ್ವರೂಪ
☘ ಕನ್ನಡ ಕವಿಗಳ ಕಾವ್ಯ ಕಲ್ಪನೆ
☘ ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ
☘ ಕುವೆಂಪು : ಪುನರವಲೋಕನ
☘ ಸಮಗ್ರ ಗದ್ಯ ಭಾಗ ೧, ೨ ಮತ್ತು ೩
☘ ಬೆಡಗು
☘ ನವೋದಯ -
☘ ಕುವೆಂಪು-ಒಂದು ಪುನರ್ವಿಮರ್ಶೆ - ಕರ್ನಾಟಕ ಸರ್ಕಾರಕ್ಕೆ ಕುವೆಂಪು ಮೇಲೆ ಜೀವನಚರಿತ್ರೆಯ ಕೆಲಸ
=================
🌷ಪ್ರವಾಸ ಕಥನ
===============
☘ ಮಾಸ್ಕೋದಲ್ಲಿ ೨೨ ದಿನ -(ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
☘ ಇಂಗ್ಲೆಂಡಿನಲ್ಲಿ ಚತುರ್ಮಾಸ
☘ ಅಮೆರಿಕದಲ್ಲಿ ಕನ್ನಡಿಗ
☘ ಗಂಗೆಯ ಶಿಖರಗಳಲ್ಲಿ
=============
🌺 ಜೀವನ ಚರಿತ್ರೆ
☘ ಕರ್ಮಯೋಗಿ
 (ಸಿದ್ದರಾಮನ ಜೀವನ ಚರಿತ್ರೆ)

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...