somaling m uppar kawalga

somaling m uppar kawalga
Somaling Sulubai uppar

ಶನಿವಾರ, ಏಪ್ರಿಲ್ 03, 2021

ಮರಾಠ ಸಾಮ್ರಾಜ್ಯ

🌀ಛತ್ರಪತಿ ಶಿವಾಜಿಯವರ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು🌀
🍁☘🍁🍁☘🍁☘🍁☘🍁☘

1. ಶಿವಾಜಿ ಯಾವಾಗ ಜನಿಸಿದರು ? -೧೯ ಫೆಬ್ರವರಿ ೧೬೩೦  

2. ಶಿವಾಜಿ ಹುಟ್ಟಿದ ಊರು ಯಾವುದು?-
ಶಿವನೇರಿ ದುರ್ಗ.(ಪುಣೆ ಹತ್ತಿರ)

3. ಶಿವಾಜಿ ತಂದೆ ತಾಯಿ ಯಾರು? – ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ

4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು? – ಭಗವಾನ್ ರಾಮದಾಸ್

5. ಶಿವಾಜಿಯ ಜೀವನದ ಗುರು ಯಾರು? – ದಾದಾಜಿ ಕೊಂಡ ದೇವ

6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು?
ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ

7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು? – ಅಫ್ಜಲ್ ಖಾನ್

8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು? – ಗೆರಲ್ಲಾ

9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು? – ಷಾಹಿಸ್ತಾ ಖಾನ್

10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು? – ಜೈಸಿಂಗ್

11. ಔರಂಗಜೇಬ್ ಮತ್ತು ಶಿವಾಜಿ ಯು 1665 ರಲ್ಲಿ ಯಾವ ಒಪ್ಪಂದ ಮಾಡಿಕೊಂಡರು? – ಪುರಂದರ ಒಪ್ಪಂದ

12. ಔರಂಗಜೇಬ್ ನು ಶಿವಾಜಿಯನ್ನು ಯಾವ ಬಂಧಿಖಾನೆಯಲ್ಲಿ ಬಂಧಿಸಿ ಇಟ್ಟಿದನು? – ಅಗ್ತಾ

13. ಶಿವಾಜಿ ಪಟ್ಟಾಭಿಷೇಕ ಎಲ್ಲಿ ನಡೆಯಿತು? – ರಾಯಗಡ

14. ಶಿವಾಜಿ ಪಟ್ಟಾಭಿಷೇಕ ವಾದ ವರ್ಷ? – 1674 ಜೂನ್ 16

15. ಶಿವಾಜಿ ಯು ಮೈಸೂರು ಸಂಸ್ಥಾನದ ಮೇಲೆ ದಾಳಿ ಮಾಡಿದ ವರ್ಷ? – 1677 ರಲ್ಲಿ ಚಿಕ್ಕದೇವರಾಯರಿಂದ ಸೋತನು

16. ಶಿವಾಜಿ ಯಾವಾಗ ಮರಣ ಹೊಂದಿದನು? – 1680 ಏಪ್ರಿಲ್ 14

17. ಶಿವಾಜಿ ಸಮಾಧಿ ಎಲ್ಲಿದೆ? – ರಾಯಗಡ

18. ಶಿವಾಜಿ ಮಂತ್ರಿ‌ಮಂಡಲವನ್ನು ಎನೇಂದು ಕರೆಯುತ್ತಾರೆ? – ಅಪ್ಟಪ್ರಧಾನ 

19. ಪೇಶ್ವೆ ಎಂದರೇ ಯಾರು? – ಪ್ರಧಾನಮಂತ್ರಿ

20. ಮರಾಠ ಮನೆತನದಲ್ಲಿ ಹಣಕಾಸು ‌ಮಂತ್ರಿಯನ್ನು ಎನೇಂದು ಕರೆಯುತ್ತಾರೆ? – ಅಮಾತ್ಯ

21. ಶಿವಾಜಿ ಕಾಲದಲ್ಲಿ ಜಾರಿಯಲ್ಲಿದ ಎರಡು ತೆರಿಗೆಗಳು ಯಾವುವು? – ಚೌತ್ ಮತ್ತು ಸರ್ ದೇಶ ಮುಖ್

22. ಶಿವಾಜಿ ಕಾಲದಲ್ಲಿ ಜಾರಿಗೆ ತಂದ ಭೂಮಿ ಅಳತೆ ಮಾಡುವ ಮಾಪನ ಯಾವುದು? – ಕಾಥಿ

23. ಶಿವಾಜಿ ಕಾಲದಲ್ಲಿ ಇದ್ದ ನೌಕ ತರಬೇತಿ ಕೇಂದ್ರ ಯಾವುದು? – ಮಹಾರಾಷ್ಟ್ರ ದ ಕೊಲಾಬಾ

24. ಶಿವಾಜಿಯ ದಕ್ಷಿಣ ರಾಜಧಾನಿ ಯಾವುದು? – ಜಿಂಜಿ ತಮಿಳುನಾಡು

25. ಶಿವಾಜಿಯ ಎರಡು ಅಶ್ವಪಡೆಯ ವಿಧಗಳು ಯಾವುವು? – ಭಾಗಿರ್ ಮತ್ತು ಶಿಲಾಧಾರನ್

26. ಶಿವಾಜಿಯ ಸಹೋದರಿ ಎಂದು ಪ್ರಸಿದ್ಧಿ ಪಡೆದ ದಕ್ಷಿಣ ಭಾರತದ ರಾಣಿ ಯಾರು? – ಕೆಳದಿ ಚೆನ್ನಮ್ಮ

27. ಶಿವಾಜಿ ಜೀವನ ಚರಿತ್ರೆ ಯನ್ನು ಹಿಂದೂಗಳ ವೀರ ಚರಿತ್ರೆ ಎಂದು ಕರೆದವರು ಯಾರು? – ಗ್ರಾಂಡ್ ಡಫ್ ಇತಿಹಾಸ ಕಾರ

28. ಶಿವಾಜಿ‌ ನಂತರ ಮರಾಠ ಮನೆತನ ಆಳಿದವರು ಯಾರು? – ಶಿವಾಜಿ ಮೊದಲ ಮಗ ಸಾಂಭಾಜಿ

29. ಸಾಂಭಾಜಿ ನಂತರ ಮರಾಠ ಮನೆತನ ಆಳಿದವರು? – ರಾಜಾರಾಮ್

30. ಯಾರ ಕಾಲದಲ್ಲಿ ಮರಾಠ ಮನೆತನ ಎರಡು ಭಾಗವಾಯಿತು? – ಸಾಹು ಮತ್ತು ಎರಡನೇ ಶಿವಾಜಿ

31. ಮರಾಠರ ಪೇಶ್ವೇಗಳ ಆಡಳಿತ ಯಾವಾಗ ಪ್ರಾರಂಭವಾಯಿತು? – 1713

32. ಮರಾಠರ ಮೊದಲ ಪೇಶ್ವೆ ಯಾರು? – ಬಾಲಾಜಿ ವಿಶ್ವನಾಥ

33. ಬಾಲಾಜಿ ವಿಶ್ವನಾಥನಿಗೆ ಸಾಹು ನೀಡಿದ ಬಿರುದು ಯಾವುದು? – ಸೇನೆಯ ಕಾರ್ಯಭಾರದ ನಿಯೋಗಿ

34. ಮರಾಠರ ಪ್ರಸಿದ್ಧ ಪೇಶ್ವೆ ಯಾರು? – ಒಂದನೇ ಬಾಜಿರಾವ್

35. ಎರಡನೇ ಶಿವಾಜಿ ಎಂದು ಯಾರನ್ನು ಕರೆಯುತ್ತಾರೆ? – ಒಂದನೇ ಬಾಜಿರಾವ್

36. ಒಂದನೇ ಬಾಜಿರಾವ್ ಪೇಶ್ವೆ ಸ್ಥಾಪಿಸಿದ ಹಿಂದೂ ಸಂಘಟನೆ ಯಾವುದು? – ಹಿಂದೂ ಪಾದ್ ಬಾದ್ ಷಾಹಿ

37. ಮರಾಠ ಸಾಮ್ರಾಜ್ಯ ದ ಪುನರ್ ಸ್ಥಾಪಕ ಯಾರು? – ಒಂದನೇ ಬಾಜಿರಾವ್

38. ಹಿಂದೂ ಪಾದ್ ಬಾದ್ ಷಾಹಿ ಸಂಘಟನೆ ಯನ್ನು ಕೈ ಬಿಟ್ಟವರು ಯಾರು? – ಬಾಲಾಜಿ ಬಾಜಿರಾವ್

39. ಪೇಶ್ವೆ ಗಳ ರಾಜಧಾನಿ ಯಾವುದು? – ಪುಣೆ

40. ಗೆರಿಲ್ಲಾ ಯುದ್ದದ ಬದಲಿಗೆ ಯುರೋಪಿನ ಯುದ್ಧ ತಂತ್ರ ಬಳಸಿದವರು? – ಬಾಲಾಜಿ ಬಾಜೀರಾವ್

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...