somaling m uppar kawalga

somaling m uppar kawalga
Somaling Sulubai uppar

ಶನಿವಾರ, ಏಪ್ರಿಲ್ 03, 2021

Taj mahal

🌸 ತಾಜ್ ಮಹಲ್ 🌸

💥ಭಾರತದ ಉತ್ತರ ಪ್ರದೇಶ ರಾಜ್ಯದ   ಆಗ್ರಾ ದಲ್ಲಿರುವ ಭವ್ಯ ಸಮಾಧಿಯಾಗಿದೆ.

💥 ಇದನ್ನು ಮೊಘಲ್‌‌ ಚಕ್ರವರ್ತಿ  ಷಹ ಜಹಾನ್‌‌ ತನ್ನ ಮೆಚ್ಚಿನ ಪತ್ನಿ ಮಮ್ತಾಜ್‌ ಮಹಲ್‌ ಳ ನೆನಪಿಗಾಗಿ ಕಟ್ಟಿಸಿದನು.

💥  ಪರ್ಷಿಯನ್‌, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿ  ಗಳ ಸಮ್ಮಿಶ್ರಣವಾದ ಮೊಘಲ್‌‌ ವಾಸ್ತುಶೈಲಿಗೆ ತಾಜ್‌ ಮಹಲ್‌ ("ತಾಜ್‌" ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ.

💥 ಇದು ಯಮುನಾ ನದಿ ದಡದಲ್ಲಿ ಕಂಡುಬರುತ್ತದೆ

💥 1983 ರಲ್ಲಿ ತಾಜ್‌ ಮಹಲ್‌  UNESCOದ ವಿಶ್ವ ಪರಂಪರೆ ತಾಣ  ವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು "ಭಾರತದಲ್ಲಿರುವ ಮೊಘಲರ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು" ಎಂದು ಉಲ್ಲೇಖಿಸಲಾಗಿದೆ.

💥ಈ ಕಟ್ಟಡದ ನಿರ್ಮಾಣ ಕಾರ್ಯವು  1632ರಲ್ಲಿ ಪ್ರಾರಂಭವಾಗಿ, ಸರಿಸುಮಾರು 1653 ರ ಹೊತ್ತಿಗೆ ಪೂರ್ಣಗೊಂಡಿತು.

💥ಈ ಸಮಾಧಿಯು 17-ಹೆಕ್ಟೇರ್ (42-ಎಕರೆ) ಸಂಕೀರ್ಣದ ಕೇಂದ್ರವಾಗಿದೆ, ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು.

💥ತಾಜ್‌ ಮಹಲ್‌‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ  ಅಬ್ದ್‌ ಉಲ್‌-ಕರೀಮ್‌ ಮಾಮುರ್‌ ಖಾನ್‌, ಮಖ್ರಾಮತ್‌ ಖಾನ್‌ ಮತ್ತು ಉಸ್ತಾದ್‌ ಅಹ್ಮದ್‌ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು. 

💥ಅವರಲ್ಲಿ ಲಾಹೋರಿ ರವರನ್ನು  ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ.

💥ತಾಜಮಹಲ್ ಬಗ್ಗೆ ಕವಿ ರವೀಂದ್ರನಾಥ ಟ್ಯಾಗೋರ ರು   ‘ಕಾಲಘಟ್ಟದ ಕೆನ್ನೆಯ ಮೇಲೆ ಸರಿದ ಸಮಯದ ಅಶ್ರುಬಿಂದು’ (The Tear Drop on the Cheek of Time) ಎಂದು ವರ್ಣಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar