💥 ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಮಾಹಿತಿ 💥
🏔🏝🏔🏝🏔🏝🏔🏝🏔🏝
➤ ನಂದಿ ಬೆಟ್ಟ : ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನ್ನಿಂಗ್‍ಹಾಂನಿಂದ ನಿರ್ಮಿತವಾದ ‘ ಓಕ್‍ಲ್ಯಾಂಡ್’ ಕಟ್ಟಡ ಇಲ್ಲಿದೆ. ಮಹಾತ್ಮಾಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ ‘ ಗಾಂಧಿ ನಿಲಯ’ ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ.
➤ ಬಾಬಾಬುಡನ್‍ಗಿರಿ : ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಈ ಗಿರಿಯಲ್ಲಿ ‘ದಾದ ಹಯಾತ್ ಖಲಂದರ್’ ಎಂಬ ಸಂತನ ‘ ದರ್ಗಾ’ ಮತ್ತು ‘ ದತ್ತಪೀಠ’ ಗಳು ಇವೆ. ತೀರಾ ಇತ್ತೀಚಿನವರೆಗೂ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಈ ಗಿರಿ ಈಗ ವಿವಾದದಲ್ಲಿದೆ.
➤ ಬಿಳಿಗಿರಿರಂಗನಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲ್ಲೂಕಿನಲ್ಲಿದೆ. ಇದನ್ನು ಬಿ.ಆರ್. ಹಿಲ್ಸ್ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಹೆಚ್ಚು ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಸ್ವಾಮಿ ನಿರ್ಮಲಾನಂದರು ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ ಹಾಗೂ ಹೆಸರಾಂತ ಸಮಾಜ ಸೇವಕ ಡಾ. ಸುದರ್ಶನರವರು ಸ್ಥಾಪಿಸಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಗಳು ಇಲ್ಲಿವೆ.
➤ ಮಲೈ ಮಹದೇಶ್ವರ ಬೆಟ್ಟ : ‘ಏಳು ಮಲೆ’ ಎಂದು ಕರೆಯಲ್ಪಡುವ ಮಲೈ ಮಹದೇಶ್ವರ ಬೆಟ್ಟವು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ. ಸಂಪದ್ಭರಿತ ಅರಣ್ಯ ಆವರಿಸಿರುವ ಈ ಬೆಟ್ಟದ ಮೇಲೆ ‘ಮಲೈ ಮಹದೇಶ್ವರ ಸ್ವಾಮಿ’ ದೇವಸ್ಥಾನವಿದೆ.
➤ ಗೋಪಾಲಸ್ವಾಮಿ ಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿರುವ ಈ ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಸ್ಥಾನವಿದೆ.
➤ ಮುಳ್ಳಯ್ಯನಗಿರಿ : ಕರ್ನಾಟಕದ ಅತ್ಯಂತ ಎತ್ತರವಾದ ಶಿಖರವಾದ ಮುಳ್ಳಯ್ಯನಗಿರಿಯು ಚಿಕ್ಕಮಗಳೂರು ಜಿಲ್ಲಿಯಲ್ಲಿದ್ದು, ಸಮುದ್ರ ಮಟ್ಟದಿಂದ 1925 ಮೀ ಎತ್ತರದಲ್ಲಿದೆ. ಚಾರಣಿಗರ ನೆಚ್ಚಿನ ತಾಣವಾಗಿರುವ ಮುಳ್ಳಯ್ಯನಗಿರಿಗೆ ಹಲವು ಪ್ರವಾಸಿಗರು ಆಗಮಿಸುತ್ತಾರೆ.
➤ ಚಾಮುಂಡಿಬೆಟ್ಟ : ಮೈಸೂರು ನಗರಕ್ಕೆ ತೀರಾ ಹತ್ತಿರದಲ್ಲಿರುವ ಇದು, ಈ ಹಿಂದೆ ಮಬ್ರ್ಬಳ ತೀರ್ಥವೆಂದು ಕರೆಯಲ್ಪಡುತ್ತಿದ್ದ ಈ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ ಮತ್ತು ಮಹಿಷಾಸುರನ ಮೂರ್ತಿಗಳು ಇವೆ. ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟದ ಮೆಟ್ಟಿಲ ಬಳಿ ಕರ್ನಾಟಕದ ಬೃಹತ್ ನಂದಿ ವಿಗ್ರಹವಿದೆ
➤ ಕೊಡಚಾದ್ರಿ ಬೆಟ್ಟಗಳು: ಈ ಬೆಟ್ಟವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ನಿಸರ್ಗ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿದೆ. ಈ ಬೆಟ್ಟ ಪ್ರಮುಖವಾದ ಹಾಗೂ ಪ್ರಸಿದ್ಧವಾದ ಯಾತ್ರ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನಲೆಯಲ್ಲಿದೆ.
➤ ಶಿವಗಂಗೆ : ಮಾಗಡಿ ಕೆಂಪೇಗೌಡನಿಂದ ಸ್ಥಾಪಿತವಾದ ಪವಿತ್ರ ಕ್ಷೇತ್ರವಾದ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿದೆ.
➤ ಆದಿಚುಂಚನಗಿರಿ : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.
➤ ಕುಮಾರಸ್ವಾಮಿ ಬೆಟ್ಟ : ಇದು ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನಲ್ಲಿದೆ. ಈ ಬೆಟ್ಟದ ಮೇಲೆ ಶ್ರೀಕುಮಾರಸ್ವಾಮಿ ದೇವಾಲಯವಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ