somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಏಪ್ರಿಲ್ 02, 2021

ತುರ್ತು ಪರಿಸ್ಥಿತಿ

💠*ತುರ್ತು ಪರಿಸ್ಥಿತಿ*👇

👉ಭಾರತ ಸಂವಿಧಾನಕ್ಕೆ ತುರ್ತು ಪರಿಸ್ಥಿತಿಯನ್ನು ಜರ್ಮನಿಯ ಸಂವಿಧಾನದಿಂದ ಎರವಲು ಪಡಯಲಾಗಿದೆ. ರಾಷ್ಟ್ರದ ಆರ್ಥಿಕ ಸ್ಥಿರತೆಗೆ ಧಕ್ಕೆಯಾದಾಗ ರಾಷ್ಟ್ರಾಧ್ಯಕ್ಷರು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ಸಂಧಿಗ್ದ ಪರಸ್ಥಿತಿಗಳಲ್ಲಿ ಮೂರು ಬಗೆಯ ತುರ್ತು ಪರಿಸ್ಥಿತಿಗಳನ್ನು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ.

💠ಮೂರು ವಿಧಗಳೆಂದರೆ:

1)ರಾಷ್ಟ್ರೀಯ ತುರ್ತು ಪರಿಸ್ಥಿತಿ-352ನೇ ವಿಧಿ:

🔸ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಇವುಗಳಿಂಧಾಗಿ ಭಾರತದ ಅಥವಾ ಭಾರತದ ಯಾವುದೇ ಭಾಗದ ಭದ್ರತೆಗೆ ತೊಂದರೆಯಾದಾಗ ರಾಷ್ಟ್ರಾಧ್ಯಕ್ಷರು 352ನೇ ವಿಧಿಯನ್ವಯ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.

🔸ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗಬಹುದೆಂದು ಭಾವಿಸಿದ್ದಲ್ಲಿ ರಾಷ್ಟ್ರಾಧ್ಯಕ್ಷರು ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಸಂಭವಿಸುವುದಕ್ಕಿಂತ ಮುಂಚಿತವಾಗಿಯೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.

2)ರಾಜ್ಯ ತುರ್ತು ಪರಿಸ್ಥಿತಿ-356ನೇ ವಿಧಿ:(KSRP-2020)

🔹ಎರಡು ಆಧಾರಗಳ ಮೇಲೆ ಯಾವುದೇ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸಬಹುದು.

1. ರಾಜ್ಯ ಸರ್ಕಾರವು ಸಂವಿಧಾನದ ನಿಯಮಗಳಿಗನುಗುಣವಾಗಿ ಆಡಳಿತ ನಡೆಸಲು ವಿಫಲವಾದರೆ 356ನೇ ವಿಧೀಯಡಿಯಲ್ಲಿ ಅಂತಹ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರು ತಮ್ಮ ಆಡಳಿತ ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ರಾಜ್ಯಪಾಲರ ವರದಿಯನ್ನು ಆಧರಿಸಿ ಘೋಷಿಸಬಹುದು ಅಥವಾ ರಾಜ್ಯಪಾಲರ ವರದಿಯಿಲ್ಲದೇ ತಾವೇ ಘೋಷಿಸಬಹುದು.

2. 356ನೇ ವಿಧಿಯನ್ವಯ ರಾಜ್ಯ ಸರ್ಕಾರವು ಕೇಂದ್ರದಿಂದ ನೀಡಲ್ಪಟ್ಟ ನಿರ್ದೇಶನಗಳನ್ನು ಪಾಲಿಸಲು ಅಥವಾ ಅನುಷ್ಟಾನಗೊಳಿಸಲು ವಿಫಲವಾದರೆ ರಾಷ್ಟ್ರಾಧ್ಯಕ್ಷರು ಅಂತಹ ರಾಜ್ಯದ ಮೇಲೆ ತಮ್ಮ ಆಡಳಿತ ಘೋಷಿಸಬಹುದು.

3)ಆರ್ಥಿಕ ತುರ್ತು ಪರಿಸ್ಥಿತಿ-360ನೇ ವಿಧಿ:

🔸ಭಾರತದ ಅಥವಾ ಭಾರತದ ಯಾವುದೇ ಭಾಗದಲ್ಲಿ ಆರ್ಥಿಕ ಭದ್ರತೆಗೆ ಧಕ್ಕೆಯೊದಗಿದೆ ಎಂದು ರಾಷ್ಟ್ರಾಧ್ಯಕ್ಷರು ಭಾವಿಸಿದ್ದಲ್ಲಿ 360ನೇ ವಿಧಿಯನ್ವಯ ಅವರು ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಬಹುದು.

🔹1975ರ 38ನೇತಿದ್ದುಪಡಿ ಕಾಯ್ದೆಯ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿರಲಿಲ್ಲ.

🔸ಆದರೆ 1978ರ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸುತ್ತದೆ.

🔹 ಈ ರೀತಿ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿಯ ಘೋಷಣೆಯನ್ನು ನ್ಯಾಯಿಕ ವಿಮರ್ಶೆಯ ಪರಿಶೀಲನೆಯ ವ್ಯಾಪ್ತಿಗೆ ಒಳಪಡಿಸುತ್ತದೆ.
✍💐✍💐✍💐✍✍💐✍

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...