somaling m uppar kawalga

somaling m uppar kawalga
Somaling Sulubai uppar

ಭಾನುವಾರ, ಏಪ್ರಿಲ್ 04, 2021

Karnataka

🟡ಕರ್ನಾಟಕದ ಬಗ್ಗೆ ವಿಶೇಷ ಮಾಹಿತಿ🔴

🔴 ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
-  ಮಲ್ಲಬೈರೆಗೌಡ.

🟡 ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
-  ಟಿಪ್ಪು ಸುಲ್ತಾನ್.

🔴ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
-  ಚಿತ್ರದುರ್ಗ.

🟡"ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
-  ಕೃಷ್ಣದೇವರಾಯ.

🔴 ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
-  ಪಂಪಾನದಿ.

🟡 "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.

🔴ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
-  ಹೈದರಾಲಿ.

🟡ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.

🔴ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
-  ಕಲಾಸಿಪಾಳ್ಯ.

🟡ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
-  ಕೆಂಗಲ್ ಹನುಮಂತಯ್ಯ.

🔴ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
-  8

🟡ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
-  "ಸರ್. ಮಿರ್ಜಾ ಇಸ್ಮಾಯಿಲ್"

🔴ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
-  ರಾಮಕೃಷ್ಣ ಹೆಗ್ಗಡೆ.

🟡 "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
-  ದೇವನಹಳ್ಳಿ (ದೇವನದೊಡ್ಡಿ)

🔴ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
-  ವಿಜಯನಗರ ಸಾಮ್ರಾಜ್ಯ.

🔴ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
 ತಿರುಮಲಯ್ಯ.

🟡"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
-  ಶ್ರೀರಂಗ ಪಟ್ಟಣದ ಕೋಟೆ.

🔴 ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
-  ಶಿವಮೊಗ್ಗ ಜಿಲ್ಲೆಯ ಮತ್ತೂರ್.

🟡 ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
-  ಶಿರಸಿಯ ಮಾರಿಕಾಂಬ ಜಾತ್ರೆ.

🔴 ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)

🟡ರಾಯಚೂರಿನ ಮೊದಲ ಹೆಸರೇನು?
-  ಮಾನ್ಯಖೇಟ.

🔴ಕನ್ನಡದ ಮೊದಲ ಕೃತಿ ಯಾವುದು?
-  ಕವಿರಾಜ ಮಾರ್ಗ

🟡ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.

🔴 ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.

🟡ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
-  ಕರ್ನಲ್ ವಸಂತ್.

🔴 ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
-  ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.

🟡 ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
-  ಮುಳ್ಳಯ್ಯನ ಗಿರಿ.

🔴 ಮೈಸೂರು ಅರಮನೆಯ ಹೆಸರೇನು?
-  ಅಂಬಾವಿಲಾಸ ಅರಮನೆ.

🟡 ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
-  ಬಾಬಾ ಬುಡನ್ ಸಾಹೇಬ.

🔴"ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
-  ದಾವಣಗೆರೆ.

🟡 ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
-  ಆಗುಂಬೆ.

🔴ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.

🟡ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
-  ಹಲ್ಮಿಡಿ ಶಾಸನ.

🔴ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
-  ನೀಲಕಂಠ ಪಕ್ಷಿ.

🟡ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
-  ಕೆ.ಸಿ.ರೆಡ್ಡಿ.

🔴ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.

🟡 ಕರ್ನಾಟಕದ ಮೊದಲ ಕವಯತ್ರಿ ಯಾರು?
-  ಅಕ್ಕಮಹಾದೇವಿ.

🔴ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
-  ವಡ್ಡರಾದನೆ.

🟡 ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
-  ಮೈಸೂರು ವಿಶ್ವವಿಧ್ಯಾನಿಲಯ.

🔴 ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
-  "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"

🟡"ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
-  ಪುರಂದರ ದಾಸರು.

🔴 ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
-  ರಾಯಚೂರು ಜಿಲ್ಲೆ.

🟡ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.

🔴ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
-  ಮಂಡ್ಯ ಜಿಲ್ಲೆ.

🟡ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
-  ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.

🔴ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
 ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ

🟡 ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
-  ಗರಗ,

🔴ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
-  ಕೊಡಗು.

🟡 ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
-  ಲಿಂಗನಮಕ್ಕಿ ಅಣೆಕಟ್ಟು.

🔴ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?
-  ಕುವೆಂಪು

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...